ಕುಂಬಳೆ ಬಿಜೆಪಿಯ ಸುಳ್ಳು ಆರೋಪಗಳು ಕಸದ ಬುಟ್ಟಿಗೆ- ಐಕ್ಯರಂಗ ಮುಖಂಡರು

ಕುಂಬಳೆ: ಸ್ಥಳೀಯಾಡಳಿತ ಸಂಸ್ಥೆ ಗಳಿಗಿರುವ ಚುನಾವಣೆ ಸನ್ನಿಹಿತವಾಗು ತ್ತಿದ್ದಂತೆ ಕುಂಬಳೆ ಪಂಚಾಯತ್‌ನ ಆಡಳಿತ  ಸಮಿತಿ ವಿರುದ್ಧ ಬಿಜೆಪಿ ಹುರುಳಿಲ್ಲದ ಆರೋಪಗಳನ್ನು ಮುಂದಿಟ್ಟಿರುವುದಾಗಿ ಐಕ್ಯರಂಗದ ಕುಂಬಳೆ ಪಂಚಾಯತ್ ಮುಖಂಡರಾದ ಬಿ.ಎನ್. ಮೊಹಮ್ಮದಾಲಿ, ರವಿ ಪೂಜಾರಿ, ಯೂಸಫ್ ಉಳುವಾರ್ ಎಂಬಿವರು ಹೇಳಿಕೆಯಲ್ಲಿ ಆರೋಪಿಸಿ ದ್ದಾರೆ. ಪಂಚಾಯತ್ ಕಾರ್ಯದರ್ಶಿ ಬಾಹೂ ಬಿಜೆಪಿ ಜಂಟಿಯಾಗಿ ನಡೆಸಿದ ಗೂಢಾಲೋಚನೆ ಯಂಗವಾಗಿ ಅವಿಶ್ವಾಸ ಗೊತ್ತುವಳಿಯಾಗಿದ್ದು, ಸರ ಕಾರಿ ಅಧಿಕಾರಿಯಾಗಿರುವ ಕಾರ್ಯ ದರ್ಶಿ ರಾಜಕೀಯ ಪಕ್ಷಕ್ಕೆ ಬೇಕಾಗಿ ಕಾರ್ಯಾಚರಿಸುತ್ತಿರುವುದಾ ಗಿಯೂ, ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳ …

ಕೂಲಿ ಕಾರ್ಮಿಕ ನಿಧನ

ಉಪ್ಪಳ: ಬಂದ್ಯೋಡು ಪಂಜತ್ತೊಟ್ಟಿ ನಿವಾಸಿ ದಿ| ಬಟ್ಟು ಎಂಬವರ ಪುತ್ರ ಕೂಲಿ ಕಾರ್ಮಿಕ ಕೃಷ್ಣ ಪಿ. (43) ಮನೆಯಲ್ಲಿ ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಮೃತರು ತಾಯಿ ಲಲಿತಾ, ಪತ್ನಿ ಮಂಜುಳ, ಮಕ್ಕಳಾದ ಅನೀಶ್, ಅದೀಶ್, ಸಹೋದರರಾದ ಯೋಗೇಂದ್ರ, ರತ್ನಾಕರ, ವಿನೋದ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಸದಾಶಿವ ಈ ಹಿಂದೆ ನಿಧನ ಹೊಂದಿದ್ದಾರೆ. ನಿಧನಕ್ಕೆ ಫೇವರಿಟ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಪಂಜತ್ತೊಟ್ಟಿ ಸಂತಾಪ ಸೂಚಿಸಿದೆ.

ತಮಿಳುನಾಡಿನಲ್ಲಿ ಮರ್ಯಾದೆ ಹತ್ಯೆ: ಐಟಿ ನೌಕರನನ್ನು ಕಡಿದು ಕೊಲೆ

ಚೆನ್ನೈ: ಅನ್ಯಜಾತಿಯ ಯುವತಿ ಯನ್ನು ಪ್ರೀತಿಸಿದ ಹೆಸರಲ್ಲಿ ೨೭ರ ಹರೆಯದ ದಲಿತ ಯುವಕನನ್ನು ಹಾಡ ಹಗಲೇ ಕಡಿದು ಕೊಲ್ಲಲಾಗಿದೆ. ತಮಿಳು ನಾಡು ತಿರುನಲ್ವೇಲಿ ಕೆಟಿಸಿ ನಗರದಲ್ಲಿ ಘಟನೆ ನಡೆದಿದೆ. ತೂತುಕುಡಿ ಜಿಲ್ಲೆಯ ಅರುಮುಗಮಂಗಳಂ ನಿವಾಸಿಯಾದ ಐಟಿ ನೌಕರ ಕೆವಿನ್ ಸೆಲ್ವಾ ಗಣೇಶ್‌ನನ್ನು ಕೊಲೆಗೈಯ್ಯಲಾಗಿದೆ. ಎಸ್. ಸುರ್ಜಿತ್ (23) ಎಂದು ಪರಿಚಯ ಗೊಂಡ ಯುವಕ ಆಯುಧದಿಂದ ಇರಿದಿದ್ದಾನೆನ್ನ ಲಾಗಿದೆ. ಆರೋಪಿಯ ಸಹೋದರಿಯನ್ನು ಕೆವಿನ್ ಹಲವು ಕಾಲದಿಂದ ಪ್ರೀತಿಸುತ್ತಿದ್ದಾ ನೆಂದು ಮಾಹಿತಿಯಿದೆ. ಕೆವಿನ್‌ನೊಂದಿಗಿ ರುವ ಸಂಬಂಧಕ್ಕೆ ಯುವತಿಯ ಕುಟುಂಬ ತೀವ್ರ …

ಮಂಗಲ್ಪಾಡಿಯಲ್ಲಿ ತಾಲೂಕು ಆಸ್ಪತ್ರೆಗೆ ಹೊಸ ಕಟ್ಟಡ: ಆರೋಗ್ಯ ಸಚಿವೆಯಿಂದ ಕಾಮಗಾರಿ ಉದ್ಘಾಟನೆ

ಉಪ್ಪಳ: ಮಂಗಲ್ಪಾಡಿಯಲ್ಲಿರುವ ಮಂಜೇಶ್ವರ ತಾಲೂಕು ಆಸ್ಪತ್ರೆಯಲ್ಲಿ ಕಿಫ್‌ಬಿ ಫಂಡ್ ಉಪಯೋಗಿಸಿ ನಿರ್ಮಿಸುವ ಆಧುನಿಕ ರೀತಿಯ ಕಟ್ಟಡದ ನಿರ್ಮಾಣ ಉದ್ಘಾಟನೆಯನ್ನು ಆರೋಗ್ಯ ಇಲಾಖೆ ಸಚಿವೆ ವೀಣಾ ಜೋರ್ಜ್ ವೀಡಿಯೋ ಕಾನ್ಫರೆನ್ಸ್ ಮೂಲಕ ನಿರ್ವಹಿಸಿದರು. ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸಿ ದರು. 17.47 ಕೋಟಿ ರೂ. ವೆಚ್ಚದಲ್ಲಿ ೨೬೦೦೦ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸುವ ಎರಡು ಮಹಡಿ ಕಟ್ಟಡದಲ್ಲಿ ಒಪಿ, ಕ್ಯಾಶ್ವಾಲಿಟಿ, ಮೈನರ್ ಒಟಿ, ಫಾರ್ಮಸಿ, ಎರಡು ಹೊರ ರೋಗಿ ತಪಾಸಣೆ ಕೊಠಡಿಗಳು, ಸ್ಟಾಫ್ ರೂಂ, ವಿಚಾರಣೆ, ಸ್ವಾಗತ …

ಮೊಬೈಲ್ ನೀಡಿಲ್ಲ: 8ನೇ ತರಗತಿ ವಿದ್ಯಾರ್ಥಿ ಶಾಲೆ ಬಳಿ ಆತ್ಮಹತ್ಯೆ

ಆಲಪ್ಪುಳ: ಹೆತ್ತವರು ಮೊಬೈಲ್ ನೀಡದ ಹಿನ್ನೆಲೆಯಲ್ಲಿ ೮ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೈದಿದ್ದಾನೆ. ಎಡತ್ವ ತಲವಡಿ ಪಂ. ೮ನೇ ವಾರ್ಡ್ ಮಾಣಾಂ ತರ ನಿವಾಸಿ ಮೋಹನ್ ಲಾಲ್- ಅನಿತಾ ದಂಪತಿ ಪುತ್ರ ಆದಿತ್ಯನ್ (13) ನೇಣು ಬಿಗಿದು ಆತ್ಮಹತ್ಯೆಗೈದ ವಿದ್ಯಾರ್ಥಿ. ವೇದವ್ಯಾಸ ಶಾಲೆ ಬಳಿ  ನೇಣು ಬಿಗಿದ ಸ್ಥಿತಿಯಲ್ಲಿ ಈತನ ಮೃತದೇಹ ಪತ್ತೆಯಾಗಿದೆ. ನಿನ್ನೆ ಬೆಳಿಗ್ಗೆ ಮೊಬೈಲ್ ಗೇಮ್ ಆಡುವುದಕ್ಕಾಗಿ ತಾಯಿಯಲ್ಲಿ ಮೊಬೈಲ್ ಆಗ್ರಹಿಸಿದ್ದನಾ ದರೂ ಲಭಿಸದ ಹಿನ್ನೆಲೆಯಲ್ಲಿ ಮನೆಯಿಂದ ಹೊರ ತೆರಳಿದ್ದಾನೆ. ಆ ಬಳಿಕ ಹುಡುಕಾಟದ ಮಧ್ಯೆ …

ಕಾಲದ ಓಘಕ್ಕೆ ಅನುಗುಣವಾಗಿ ಬರವಣಿಗೆಗಳು ಬದಲಾಗಬೇಕು- ಡಾ. ಬಿಳಿಮಲೆ

ಮಂಜೇಶ್ವರ: ಭಾವನೆಗಳಿಗೆ ಅನುಗುಣವಾಗಿ ಭಾಷೆಯನ್ನು ಹೊಸತುಗೊಳಿಸಬೇಕು. ಕಾಲದ ಓಘಕ್ಕೆ ಅನುಗುಣವಾಗಿ ಬರವಣಿಗೆ ಗಳು ಬದಲಾಗಬೇಕು. ಕವನಗಳು ಓದುವಾಗ ಪ್ರಶ್ನೆಗಳು ಮೂಡಬೇಕು. ಕಾವ್ಯದ ಮಾತು ಧ್ವನಿಯಾಗಬೇಕು ಎಂದು ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಚಿಂತಕ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯ ವ್ಯಕ್ತಪಡಿಸಿದರು. ಬೆಂ ಗಳೂರಿನ ರಂಗಮAಡಲ ಹಾಗೂ ರಾಷ್ಟçಕವಿ ಮಂಜೇಶ್ವರ ಗೋವಿಂದ ಪೈಗಳ ಸ್ಮಾರಕ ಗಿಳಿವಿಂಡು ಆಶ್ರಯದಲ್ಲಿ ನಡೆದ ಕಾವ್ಯ ಸಂಸ್ಕೃತಿ ಯಾನ 11ನೇ ಕವಿಗೋಷ್ಠಿ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ತಮ್ಮದೇ ಆದ …

ಕಾರು ಚರಂಡಿಯ ಗೋಡೆಗೆ ಢಿಕ್ಕಿ: ಭಾಸ್ಕರನಗರದಲ್ಲಿ ಪದೇ ಪದೇ ಅಪಘಾತದಿಂದ ಆತಂಕ ಸೃಷ್ಚಿ

ಕುಂಬಳೆ: ಇಲ್ಲಿನ ಭಾಸ್ಕರನಗರದಲ್ಲಿ ನಿಯಂತ್ರಣ ತಪ್ಪಿದ ಕಾರು ಚರಂಡಿಯ ಗೋಡೆಗೆ ಢಿಕ್ಕಿ ಹೊಡೆದಿದ್ದು, ಚಾಲಕ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಮೊನ್ನೆ ಸಂಜೆ5 ಗಂಟೆಗೆ ಬದಿಯಡ್ಕದಿಂದ ಕುಂಬಳೆ ಭಾಗಕ್ಕೆ ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಮುಂದೆ ಸಂಚರಿಸುತ್ತಿದ್ದ ಬೈಕ್ ದಿಢೀರ್ ಅಡ್ಡ ಬಂದಾಗ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬ್ರೇಕ್ ಹಾಕಿದಾಗ ಕಾರು ನಿಯಂತ್ರಣ ತಪ್ಪಿ ಗೋಡೆಗೆ ಬಡಿದಿದೆ. ಬದಿಯಡ್ಕ ಮಾವಿನಕಟ್ಟೆ ನಿವಾಸಿಯ ಕಾರು ಇದಾಗಿದ್ದು, ಅಪಘಾತದಿಂದ ಪೂರ್ಣವಾಗಿ ಹಾನಿಗೊಂಡಿದೆ. ಕಳೆದ ಆರು ತಿಂಗಳಿಂದ ಭಾಸ್ಕರನಗರದಲ್ಲಿ ಹಲವು ವಾಹನಗಳು ಅಪಘಾತಕ್ಕೀಡಾಗಿದ್ದು, ಇದರಿಂದ …

ನಡೆದು ಹೋಗುತ್ತಿದ್ದ ಯುವತಿಯನ್ನು ಅಪ್ಪಿಹಿಡಿದು ಬಳಿಕ ಪರಾರಿಯಾದ ಯುವಕನ ಬಂಧನ

ಕುಂಬಳೆ: ನಡೆದುಹೋಗುತ್ತಿದ್ದ ಹದಿನೆಂಟರ ಹರೆಯದ  ಯುವತಿ ಯನ್ನು ಅಪ್ಪಿ ಹಿಡಿದು ಬಳಿಕ ಓಡಿ ಪರಾರಿಯಾದ ಯುವಕನನ್ನು ನಾಗರಿಕರು ಸೆರೆಹಿಡಿದು ಬುದ್ದಿ ಹೇಳಿ ಪೊಲೀಸರಿಗೆ ಹಸ್ತಾಂತರಿಸಿದ ಘಟನೆ ನಡೆದಿದೆ. ಕರ್ನಾಟಕದ ಸಕಲೇಶಪುರ ನಿವಾಸಿಯೂ ಕುಂಬಳೆ ಆರಿಕ್ಕಾಡಿ ಕಡವತ್ತ್‌ನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಶುಹೈಬ್ (25) ಎಂಬಾತನನ್ನು ಸೆರೆಹಿಡಿದು ನಾಗರಿಕರು ಕುಂಬಳೆ ಪೊಲೀಸರಿಗೆ  ಹಸ್ತಾಂತರಿಸಿದ್ದಾರೆ. ಈ ತಿಂಗಳ 24ರಂದು ಹಾಡಹಗಲೇ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಕುಂಬಳೆ ರೈಲ್ವೇ ನಿಲ್ದಾಣ ರಸ್ತೆಯಲ್ಲಿ ಯುವತಿ ನಡೆದು ಹೋಗುತ್ತಿದ್ದಳು. ಈ ವೇಳೆ ಅಲ್ಲಿಗೆ ತಲುಪಿದ …

ರಜಾ ದಿನದಂದು 13ರ ಬಾಲಕಿ, ಯುವಕ ಶಾಲಾ ಪರಿಸರದಲ್ಲಿ ಪತ್ತೆ: ನಾಗರಿಕರನ್ನು ಕಂಡು ಓಡಿಹೋದ ಯುವಕನ ವಿರುದ್ಧ ಪೋಕ್ಸೋ ಕೇಸು

ಮಂಜೇಶ್ವರ: ರಜಾ ದಿನದಂದು ಹದಿಮೂರರ ಹರೆಯದ ಶಾಲಾ ವಿದ್ಯಾರ್ಥಿನಿ ಯನ್ನು ಶಾಲಾ ಪರಿಸರಕ್ಕೆ ಬರಮಾಡಿಕೊಂಡು ಆಕೆಗೆ ಕಿರುಕುಳ ನೀಡಲು ಯತ್ನಿಸಿರು ವುದಾಗಿ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಪೋಕ್ಸೋ ಪ್ರಕಾರ ಕೇಸು ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗಾಗಿ ಶೋಧ ಆರಂಭಿಸಿದ್ದಾರೆ. ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯೊಂದರ ಪರಿಸರದಲ್ಲಿ ನಿನ್ನೆ ಈ ಘಟನೆ ನಡೆದಿದೆ.  ಎಂಟನೇ ತರಗತಿ ವಿದ್ಯಾರ್ಥಿನಿಯಾದ ಹದಿಮೂರರ ಹರೆಯದ ಬಾಲಕಿ ಹಾಗೂ ೨೦ರ ಹರೆಯದ ಯುವಕನನ್ನು ಸ್ಥಳೀಯರು ಶಾಲಾ ಪರಿಸರದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಕಂಡಿರುವುದಾಗಿ ಹೇಳಲಾಗುತ್ತಿದೆ. …

ದೇಲಂಪಾಡಿ ನಿವಾಸಿ ಪಯ್ಯನ್ನೂರಿನಲ್ಲಿ ನೇಣು ಬಿಗಿದು ಸಾವು

ಮುಳ್ಳೇರಿಯ: ದೇಲಂಪಾಡಿ ಬಳಿಯ ನಿವಾಸಿ ಯುವಕನೋರ್ವ ಪಯ್ಯನ್ನೂ ರಿನಲ್ಲಿ ನೇಣು ಬಿಗಿದು ಸಾವಿಗೀಡಾದ ಘಟನೆ ನಡೆದಿದೆ. ದೇಲಂಪಾಡಿ ಉರ್ದು ಚೇಡಿಮೂಲೆ ನಿವಾಸಿ ಆರ್. ಧನಂಜಯನ್ (20) ಮೃತಪಟ್ಟ ವ್ಯಕ್ತಿ. ಈತ ಪಯ್ಯನ್ನೂರು ಮಾಗ್ನಂಮಾಲ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದನು. ಪಯ್ಯನ್ನೂರು ಕೇಳೋತ್‌ನ ಕ್ವಾರ್ಟರ್ಸ್‌ನಲ್ಲಿ ಈ ತಿಂಗಳ 26ರಂದು ರಾತ್ರಿ  ಈತ ನೇಣು ಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ದಿ|ರವೀಂ ದ್ರನ್-ಶ್ರೀಮತಿ ದಂಪತಿಯ ಪುತ್ರನಾದ ಮೃತರು ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ