ಮಾದಕವಸ್ತು: ಡಿಜಿಪಿಯೊಂದಿಗೆ ವರದಿ ಕೇಳಿದ ರಾಜ್ಯಪಾಲ

ತಿರುವನಂತಪುರ: ರಾಜ್ಯದಲ್ಲಿ ತೀವ್ರಗೊಂಡಿರುವ ಮಾದಕವಸ್ತು ವ್ಯವಹಾರ ತಡೆಗೆ  ಕೈಗೊಂಡ ಕ್ರಮಗಳ ಕುರಿತು ಡಿಜಿಪಿ ಶೇಕ್ ದರ್ವೇಶ್ ಸಾಹೀಬ್ ಅವರೊಂದಿಗೆ ರಾಜ್ಯಪಾಲ  ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ವರದಿ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಇದೀಗಿರುವ ಮಾದಕವಸ್ತುವಿನ ಪರಿಸ್ಥಿತಿ ಅದರ ವಿರುದ್ಧ ಕೈಗೊಂಡ ಕ್ರಮಗಳನ್ನು ತಿಳಿಸುವಂತೆ ನಿರ್ದೇಶಿಸಲಾಗಿದೆ.  ರಾಜ್ಯದಾದ್ಯಂತ ಆಕ್ಷನ್ ಪ್ಲಾನ್ ಸಿದ್ಧಪಡಿಸಿ ಡಿಜಿಪಿ ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸಿದ ಬಳಿಕ ವರದಿಯನ್ನು  ರಾಜ್ಯಪಾಲರಿಗೆ ಸಲ್ಲಿಸಲಾಗುವುದು.  ಮಾದಕವಸ್ತು ಸಂಬಂಧಿಸಿ ಕೈಗೊಂಡ ಕ್ರಮಗಳ ಕುರಿತು ಮುಖ್ಯಮಂತ್ರಿಯೊಂದಿಗೆ ರಾಜ್ಯಪಾಲರು ಮಾತುಕತೆ ನಡೆಸಲಿದ್ದಾರೆಂದು ತಿಳಿದುಬಂದಿದೆ.

ಮಾದಕದ್ರವ್ಯ ವ್ಯವಹಾರದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ದ್ವೇಷದಿಂದ ಮನೆಗೆ ದಾಳಿ: ತಾಯಿ, ಮಗ ಗಾಯ

ಚೆರ್ಕಳ: ಮಾದಕದ್ರವ್ಯ ವ್ಯವಹಾರದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಆರೋಪಿಸಿ ಸಹೋದರರಾದ ಯುವಕರಿಬ್ಬರು ಮನೆಯೊಂದಕ್ಕೆ  ಅಕ್ರಮವಾಗಿ ನುಗ್ಗಿ ತಾಯಿ ಮತ್ತು ಮಗನ ಮೇಲೆ ಹಲ್ಲೆ ನಡೆಸಿ, ಮನೆಯ ಕಿಟಿಕಿ ಗಾಜುಗಳನ್ನು ಹೊಡೆದು ಪುಡಿಗೈದ ಘಟನೆ ನಡೆದಿದೆ. ಮಾಸ್ತಿಕುಂಡು ಕಾಚಿಕಟ್ಟೆಯ ಸಲ್ಮಾ (64) ಮತ್ತು ಅವರ ಮಗ ಸಿನಾನ್ (32) ಎಂಬವರ ಮೇಲೆ ಹಲ್ಲೆ ನಡೆಸ ಲಾಗಿದೆ. ಅವರನ್ನು ಚೆಂಗಳ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇವರು ನೀಡಿದ ದೂರಿನಂತೆ ಸಹೋದರರಾದ ಚೆಂಗಳ ಬಂಬ್ರಾಣಿನಗರದ ನಿವಾಸಿಗಳಾದ ಇಬ್ಬರ ವಿರುದ್ಧ ವಿದ್ಯಾನಗರ …

ಹೇಮ ಕಮಿಟಿ ವರದಿ: ಹೇಳಿಕೆ ನೀಡಲು ಹಿಂಜರಿತ; ಕೇಸು ಹಿಂತೆಗೆತ ಸಾಧ್ಯತೆ

ತಿರುವನಂತಪುರ: ಹೇಮ ಕಮಿಟಿ ವರದಿಯ ಆಧಾರದಲ್ಲಿ ದಾಖಲಿಸಿ ಕೊಂಡ ಪ್ರಕರಣಗಳನ್ನು ಹಿಂತೆಗೆದು ಕೊಳ್ಳುವ ಬಗ್ಗೆ ಪರಿಗಣನೆಯಲ್ಲಿ ದೆಯೆಂದು ಹೇಳಲಾಗುತ್ತಿದೆ. ಕಮಿಟಿ ಮುಂದೆ ಹೇಳಿಕೆ ನೀಡಿದವರು ಪೊಲೀಸರ ಮುಂದೆ ಹೇಳಿಕೆ ನೀಡಲು ನಿರಾಕರಿಸುತ್ತಿರು ವುದೇ ಇದಕ್ಕೆ ಕಾರಣವೆನ್ನಲಾಗಿದೆ. ಆರು ವರ್ಷಗಳ ಹಿಂದೆ ಹೇಮ ಕಮಿಟಿ ಮುಂದೆ ಹೇಳಿಕೆ ನೀಡಲಾ ಗಿತ್ತು. ಆದರೆ ಇದೀಗ ಅಂದಿನ ಪರಿಸ್ಥಿತಿಯಿಲ್ಲವೆಂದು ಕೆಲವರು ಹೇಳುತ್ತಿದ್ದಾರೆ. ದೂರುಗಾರರು ಸಹಕರಿಸದಿರುವುದರಿಂದ ತನಿಖೆ ನಡೆಸಲು ಸಾಧ್ಯವಿಲ್ಲವೆಂದು ಪ್ರತ್ಯೇಕ ತನಿಖಾ ತಂಡ ಅಭಿಪ್ರಾಯಪಡುತ್ತಿದೆ ಯೆನ್ನಲಾಗಿದೆ. ಪ್ರಸ್ತುತ ೮೦ ಕೇಸುಗಳನ್ನು ದಾಖಲಿಸಲಾಗಿದೆ. …

ಕನ್ನಡ- ಮಲೆಯಾಳ ಅನುವಾದ ಕಾರ್ಯಾಗಾರ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ಗೌರವಾರ್ಪಣೆ

ಕಾಸರಗೋಡು: ದ್ರಾವಿಡ ಭಾಷಾ ಅನುವಾದಕರ ಸಂಘ ಬೆಂಗಳೂರು ಹಾಗೂ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ನುಳ್ಳಿಪ್ಪಾಡಿ ಇದರ ಜಂಟಿ ಆಶ್ರಯದಲ್ಲಿ ನಿನ್ನೆ ಕನ್ನಡ- ಮಲೆಯಾಳ ಅನುವಾದ ಕಾರ್ಯಾಗಾರ ಕನ್ನಡ ಭವನ ಗ್ರಂಥಾಲಯದಲ್ಲಿ ಜರಗಿತು. ಹಿರಿಯ ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಉದ್ಘಾಟಿಸಿದರು. ದ್ರಾವಿಡ ಭಾಷಾ ಅನುವಾದಕರ ಸಂಘದ ಅಧ್ಯಕ್ಷೆ ಡಾ. ಸುಷ್ಮಾ ಶಂಕರ್ ಅಧ್ಯಕ್ಷತೆ ವಹಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೆ.ವಿ. ಕುಮಾರನ್,  ದ್ರಾವಿಡ ಭಾಷಾ ಅನುವಾದಕರ ಸಂಘದ ಉಪಾಧ್ಯಕ್ಷ …

ಸಿಪಿಎಂ ರಾಜ್ಯ ಕಾರ್ಯದರ್ಶಿಯಾಗಿ ಎಂ.ವಿ. ಗೋವಿಂದನ್ ಪುನರಾಯ್ಕೆ

ಕೊಲ್ಲಂ: ಸಿಪಿಎಂ ರಾಜ್ಯ ಕಾರ್ಯದರ್ಶಿಯಾಗಿ ಎಂ.ವಿ. ಗೋವಿಂದನ್ ಪುನರಾಯ್ಕೆಗೊಂಡಿದ್ದಾರೆ. ಕೊಲ್ಲಂನಲ್ಲಿ ನಡೆದ ಸಿಪಿಎಂ ರಾಜ್ಯ ಸಮ್ಮೇಳನದಲ್ಲಿ ಎಂ.ವಿ. ಗೋವಿಂದನ್‌ರನ್ನೇ ಮತ್ತೆ ರಾಜ್ಯ ಕಾರ್ಯದರ್ಶಿಯನ್ನಾಗಿ ಮರು ಆರಿಸಲಾಗಿದೆ. ಅನಾರೋಗ್ಯದ ನಿಮಿತ್ತ ಕೊಡಿಯೇರಿ ಬಾಲಕೃಷ್ಣನ್ ಪಕ್ಷದ ರಾಜ್ಯ ಕಾರ್ಯದರ್ಶಿ ಸ್ಥಾನವನ್ನು ಬಳಿಕ 2022ರಲ್ಲಿ ತೊರೆದಾಗ, ತೆರವುಗೊಂಡ ಆ ಸ್ಥಾನಕ್ಕೆ ಅಂದು ಸಚಿವರಾಗಿದ್ದ ಎಂ.ವಿ. ಗೋವಿಂದನ್‌ರನ್ನು ಆರಿಸಲಾಗಿತ್ತು. ಅದರಿಂದಾಗಿ 2022ರ ಆಗಸ್ಟ್ 28ರಂದು ಗೋವಿಂದನ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕೊಲ್ಲಂನಲ್ಲಿ ನಿನ್ನೆ ಸಮಾಪ್ತಿಗೊಂಡ ಸಿಪಿಎಂ ರಾಜ್ಯ ಸಮ್ಮೇಳನದಲ್ಲಿ ಗೋವಿಂದನ್‌ರನ್ನೇ …

24 ಗ್ರಾಂ ಗಾಂಜಾ ಪತ್ತೆ: ಯುವಕ ಸೆರೆ

ಹೊಸದುರ್ಗ: 24 ಗ್ರಾಂ ಗಾಂಜಾ ಕೈವಶವಿರಿಸಿದ ಯುವಕನನ್ನು ಅಬಕಾರಿ ದಳ ಬಂಧಿಸಿದೆ. ಕುಶಾಲನಗರ ನಿವಾಸಿ ಮೊಹಮ್ಮದ್ ಮುಸ್ತಫ (30)ನನ್ನು ಹೊಸದುರ್ಗ ಅಬಕಾರಿ ಸರ್ಕಲ್ ಇನ್ಸ್‌ಪೆಕ್ಟರ್ ವಿ.ವಿ. ಪ್ರಸನ್ನ ಕುಮಾರ್ ತಂಡ ಸೆರೆ ಹಿಡಿದಿದೆ. ಆರೋಪಿ ವಿರುದ್ಧ ಎನ್‌ಡಿಪಿಎಸ್ ಕೇಸು ದಾಖಲಿಸಲಾ ಗಿದೆ. ಅರಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ಗ್ರೇಡ್ ಕೆ.ಕೆ. ಬಾಲಕೃಷ್ಣನ್, ವಿ. ಬಾಬು, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಮನೋಜ್ ಪಿ., ಸಿಜು ಕೆ, ಮುರಳೀಧರನ್ ತಂಡದಲ್ಲಿದ್ದರು.

ಕೊಲ್ಲಂ ನಿವಾಸಿ ಹೆಸರಲ್ಲಿ ದಾಖಲುಪತ್ರ ಹಾಜರುಪಡಿಸಿ ಪಾಸ್‌ಪೋರ್ಟ್ ಪಡೆದ ಬಗ್ಗೆ ದೂರು: ಕಾಸರಗೋಡು ನಿವಾಸಿ ವಿರುದ್ದ ಕೇಸು

ಕಾಸರಗೋಡು: ಕೊಲ್ಲಂ ನಿವಾಸಿಯ ಹೆಸರಿನ ದಾಖಲುಪತ್ರ ಹಾಜರುಪಡಿಸಿ ಪಾಸ್‌ಪೋರ್ಟ್ ಸಂಪಾದಿಸಿದ ಆರೋಪದಂತೆ ಕಾಸರಗೋಡು ನಿವಾಸಿ ವಿರುದ್ದ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಸರ ಗೋಡು ಆನೆಬಾಗಿಲು ಅಮೈತಲ ಕ್ಕಲ್ ವಳಪ್ಪಿಲ್ ವಿನೋದ್ ಎಂಬಾತನ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ಕೊಲ್ಲಂನ  ಕೊಲ್ಲಕ ಶೀಲಾ ಭವನದ ಸನೋಜ್ ಕುಮಾರ್ ಎಂಬ ವಿಳಾಸದ ದಾಖಲುಪತ್ರಗಳನ್ನು ಹಾಜರುಪಡಿಸಿ 2008 ಡಿಸೆಂಬರ್ ೫ರಂದು ತಿರುವನಂತಪುರ ವಲಯ ಪಾಸ್‌ಪೋರ್ಟ್ ಕಚೇರಿಯಿಂದ ಪಾಸ್ ಪೋರ್ಟ್ ಪಡೆದ ಆರೋಪದಂತೆ ವಿನೋದ್ ವಿರುದ್ಧ ಈ ಕೇಸು ದಾಖಲಿಸಲಾಗಿದೆ. ಇನ್ನು …

ಮುಳಿಂಜ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ 14ರಿಂದ

ಉಪ್ಪಳ: ಮುಳಿಂಜ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಮಹೋತ್ಸವ ಮಾ. 14ರಿಂದ 18ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. 14ರಂದು ಪೂರ್ವಾಹ್ನ 8.30ರಿಂದ ಗಣಪತಿ ಹವನ, ನವಕ ಕಲಶಾಭಿಷೇಕ, 11ಕ್ಕೆ ಬಲಿ ಉತ್ಸವ, ಧ್ವಜಾರೋಹಣ, ಮಧ್ಯಾಹ್ನ ಮಹಾಪೂಜೆ, ಬಲಿ ಉತ್ಸವ, ಅನ್ನಸಂತರ್ಪಣೆ, ಸಂಜೆ 6.30ರಿಂದ ಭಜನೆ, 7.30ರಿಂದ ಮಹಾಪೂಜೆ, ಬಲಿ ಉತ್ಸವ, ರಾತ್ರಿ ಅನ್ನಸಂತರ್ಪಣೆ, 8.30ರಿಂದ ‘ಒರಿಯಾಂಡಲ ಸರಿಬೋಡು’ ನಾಟಕ ಪ್ರದರ್ಶನ, 15ರಂದು ಪೂರ್ವಾಹ್ನ ಬಲಿ ಉತ್ಸವ, 8ರಿಂದ ಗಣಪತಿ ಹವನ, ನವಕ ಕಲಶಾಭಿಷೇಕ, 10.30ರಿಂದ ಭಜನೆ, …

ತಾಳಿಪಡ್ಪು ಅಭಯನಿಕೇತನದಲ್ಲಿ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ

ಕಾಸರಗೋಡು: ತಾಳಿಪಡ್ಪು ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೇತನ ಆಶ್ರಯಧಾಮದಲ್ಲಿ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ ಜರಗಿತು. ಬಾಯಾರು ನಿವಾಸಿ ಡಾ. ಬಿ. ಸತ್ಯನಾರಾಯಣ ದೀಪ ಬೆಳಗಿಸಿ ಉದ್ಘಾಟಿಸಿದರು.  ಪೆರ್ಲದ ಡಾ. ಬಿ.ಆರ್. ಕೃಷ್ಣಮೋಹನ, ಜಿಲ್ಲಾ ಸತ್ಯಸಾಯಿ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದರು.

ಯುವತಿಯ ಬೆರಳಲ್ಲಿ ಸಿಲುಕಿಕೊಂಡ ಉಂಗುರ: ಸುರಕ್ಷಿತವಾಗಿ ತೆಗೆದ ಅಗ್ನಿಶಾಮಕ ದಳ

ಕಾಸರಗೋಡು:  ಕೈಯ ಬೆರಳಿನಲ್ಲಿ ಸಿಲುಕಿಕೊಂಡ ಉಂಗುರವನ್ನು ಸುರಕ್ಷಿತವಾಗಿ ಅಗ್ನಿಶಾಮಕದಳದ ಅಧಿಕಾರಿಗಳು ತೆಗೆದಿದ್ದಾರೆ. ಮೊಗ್ರಾಲ್ ನಿವಾಸಿಯಾದ ೩೦ರ ಹರೆಯದ ಯುವತಿಯ ಬೆರಳಲ್ಲಿದ್ದ ಉಂಗುರವನ್ನು ಅಗ್ನಿಶಾಮಕ ದಳ ತೆಗೆದಿದೆ. ಹೊಸ ಉಂಗುರ ಖರೀದಿಸಿದಾಗ ಅದನ್ನು  ತಪ್ಪಿ ಇನ್ನೊಂದು ಬೆರಳಿಗೆ ಹಾಕಿದ್ದು ಬಳಿಕ ತೆಗೆಯಲು ಸಾಧ್ಯವಾಗದೆ ಸಮಸ್ಯೆಯಾಗಿದೆ. ಎರಡು ದಿನ ಕಳೆದಾಗ ಬೆರಳು ಊದಿಕೊಂಡಿದ್ದು, ಉಂಗುರ ತೆಗೆಯಲು ಸಾಧ್ಯವಾಗಿ ರಲಿಲ್ಲ. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದವರನ್ನು ಸಂಪರ್ಕಿಸಿದ್ದು, ಅವರು ತಲುಪಿ ಬೆರಳಿನಿಂದ ಉಂಗುರವನ್ನು ತೆಗೆದಿದ್ದಾರೆ.