ಎ.ಕೆ.ಪಿ.ಎಯಿಂದ ಮಹಿಳಾ ದಿನಾಚರಣೆ

ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿ ಯೇಷನ್ ವೆಸ್ಟ್ ಯೂನಿಟ್ ಇದರ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ತಚ್ಚಂಗಾಡ್ ನಿವಾಸಿ ವಿಲಾಸಿನಿ ರಾಜನ್‌ರ ನಿವಾಸಕ್ಕೆ ತೆರಳಿ ಯೂನಿಟ್ ಅಧ್ಯಕ್ಷ ವಸಂತ್ ಕೆರೆಮನೆ, ಎಕೆಪಿಎ ಕಾಸರಗೋಡು ವಲಯ ಕೋಶಾಧಿ ಕಾರಿ ಮನು ಸ್ಮರಣಿಕೆ ನೀಡಿ ಗೌರವಿಸಿ ದರು. ಈ ಸಂದರ್ಭದಲ್ಲಿ ಯೂನಿಟ್ ಸಾಂತ್ವನ ಕೋರ್ಡಿನೇಟರ್ ಶಾಲಿನಿ ರಾಜೇಂದ್ರನ್, ಸಮಿತಿ ಸದಸ್ಯರಾದ ಚಂದ್ರಶೇಖರ, ಸುಬ್ರಹ್ಮಣ್ಯ, ಯೂನಿಟ್ ಕೋಶಾಧಿಕಾರಿ ಗಣೇಶ್ ರೈ ಉಪಸ್ಥಿತರಿದ್ದರು.

15ರ ಹರೆಯದ ಬಾಲಕಿ ನಾಪತ್ತೆ ಪ್ರಕರಣ: ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆ

ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ 15ರ ಹರೆಯದ ಬಾಲಕಿ ನಾಪತ್ತೆಯಾಗಿ ಒಂದು ತಿಂಗಳಾಗುತ್ತಾ ಬಂದರೂ ಆಕೆಯ ಕುರಿತಾಗಿ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಬಾಲಕಿಯ ತಾಯಿ ನ್ಯಾಯವಾದಿ ಮುಖಾಂತರ  ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಫೆಬ್ರವರಿ 12ರಂದು ಮುಂಜಾನೆಯಿಂದ ಬಾಲಕಿ ನಾಪತ್ತೆಯಾಗಿ ದ್ದಾಳೆ. ಈ ಬಗ್ಗೆ ಲಭಿಸಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ವಿವಿಧೆಡೆ ಶೋಧ ನಡೆಸಿದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಬಾಲಕಿಯನ್ನು ಪತ್ತೆಹಚ್ಚಲು ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ …

ಕಾಡು ಹಂದಿಗಿರಿಸಿದ ಸ್ಫೋಟಕ ವಸ್ತು ಸಿಡಿದು ನಾಯಿ ಸಾವು: ಫಾರೆನ್ಸಿಕ್ ತಜ್ಞರು, ಶ್ವಾನದಳದಿಂದ ಪರಿಶೀಲನೆ ; ಪರಾರಿಯಾದ ಬೇಟೆಗಾರರಿಗಾಗಿ ಶೋಧ

ಕುಂಬಳೆ: ಕಾಡು ಹಂದಿಯನ್ನು ಕೊಲ್ಲಲು ಇರಿಸಿದ ಸ್ಫೋಟಕ ವಸ್ತು ಸಿಡಿದು ಸಾಕುನಾಯಿ ಸಾವಿಗೀಡಾದ ಹೇರೂರು ಮೀಪಿರಿಗೆ  ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್, ಎಸ್‌ಐ ಗಣೇಶ್ ನೇತೃತ್ವದಲ್ಲಿ  ಫಾರೆನ್ಸಿಕ್ ತಜ್ಞರು ಹಾಗೂ ಶ್ವಾನದಳ ತಲುಪಿ ಪರಿಶೀಲನೆ ನಡೆಸಿದ್ದಾರೆ. ಸ್ಫೋಟಕ ವಸ್ತು  ಸಿಡಿದ ಸ್ಥಳವನ್ನು ಪರಿಶೀಲಿಸಿ ಸ್ಫೋಟದ ತೀವ್ರತೆ ಬಗ್ಗೆ ಅವಲೋಕನ ನಡೆಸಲಾಯಿತು. ಬಳಿಕ ಕುಂಬಳೆ ಮೃಗಾಸ್ಪತ್ರೆಯಲ್ಲಿ ನಾಯಿಯ ಮರಣೋತ್ತರ ಪರೀಕ್ಷೆ ನಡೆಸಿ ಕಳೇಬರ ದಫನಗೈಯ್ಯಲಾಯಿತು. ಮೀಪಿರಿ ಬಳಿಯ ಕಾಡು ಪ್ರದೇಶದಲ್ಲಿ ಮೊನ್ನೆ ರಾತ್ರಿ ಸ್ಫೋಟಕ ವಸ್ತು …

ಮುಂದುವರಿಯುತ್ತಿರುವ ಆಪರೇಶನ್ ಕ್ಲೀನ್ ಸ್ಲೇಟ್: ಮತ್ತೆ ಗಾಂಜಾ ವಶ: ಮೂವರ ಸೆರೆ

ಕಾಸರಗೋಡು: ಮಾದಕದ್ರವ್ಯ ಮಾರಾಟ ಹಾಗೂ ಉಪಯೋಗದ ವಿರುದ್ಧ ಅಬಕಾರಿ ಇಲಾಖೆ ಆರಂಭಿಸಿರುವ ಆಪರೇಶನ್ ಕ್ಲೀನ್ ಸ್ಲೇಟ್ ಕಾರ್ಯಾಚರಣೆ ಜಿಲ್ಲೆಯಲ್ಲಿ ಮುಂದುವರಿಯುತ್ತಿದೆ. ಇದರಂತೆ ನಿನ್ನೆ ನಡೆಸಲಾದ ಕಾರ್ಯಾಚರಣೆಯಲ್ಲಿ ಜಿಲ್ಲೆಯ ವಿವಿಧೆಡೆಗಳಿಂದಾಗಿ ಮೂವರನ್ನು ಅಬಕಾರಿ ತಂಡ ಬಂಧಿಸಿ ಅವರ ಕೈವಶವಿದ್ದ ಗಾಂಜಾ ವಶಪಡಿಸಿ ಕೊಂಡಿದೆ. ನೆಕ್ರಾಜೆ ಬಾಲಡ್ಕದಲ್ಲಿ ಕಾಸರU ಡು ಎಕ್ಸೈಸ್ ಸರ್ಕಲ್ ಇನ್ ಸ್ಪೆಕ್ಟರ್ ಅರುಣ್ ಡಿಯವರ ನೇತೃತ್ವದಲ್ಲಿ ನಡೆಸಿದ ಕಾರ್ಯಾ ಚರಣೆಯಲ್ಲಿ ರಂಜನ್ ಹೈದರ್ (32) ಎಂಬಾತನನ್ನು  ಸೆರೆಹಿಡಿದು ಆತನಿಂದ ಐದು ಗ್ರಾಂ ಗಾಂಜಾ ವಶಪಡಿಸಿ ಕೇಸು …

ಪೊಲೀಸರಿಗೆ ಹೆದರಿ ಎಂಡಿಎಂಎ ಪ್ಯಾಕೆಟ್ ನುಂಗಿದ ಯುವಕ ಮೃತ್ಯು

ಕಲ್ಲಿಕೋಟೆ: ಪೊಲೀಸರನ್ನು ಕಂಡು ಹೆದರಿ ಕೈಯಲ್ಲಿದ್ದ ಎಂಡಿಎಂಎ ಮಾದಕದ್ರವ್ಯ ಪ್ಯಾಕೆಟ್‌ನ್ನು  ನುಂಗಿದ ಯುವಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ  ಕಲ್ಲಿಕೋಟೆಯಲ್ಲಿ ನಡೆದಿದೆ. ಕಲ್ಲಿಕೋಟೆ ಮೈಕಾವು ನಿವಾಸಿ  ಈಯಾಡನ್ ಶಾನಿದ್ (28) ಸಾವನ್ನಪ್ಪಿದ ಯುವಕ. ಕಲ್ಲಿಕೋಟೆ ತಾಮರಶ್ಶೇರಿಯಲ್ಲಿ ನಿನ್ನೆ ಈ ಘಟನೆ ನಡೆದಿದೆ. ತಾಮರಶ್ಶೇರಿಯಲ್ಲಿ ಪೊಲೀಸರು  ವಾಹನ ತಪಾಸಣೆಯಲ್ಲಿ ನಿರತರಾಗಿದ್ದ ವೇಳೆ  ಆ ದಾರಿಯಾಗಿ ಸಾಗುತ್ತಿದ್ದ ಶಾನಿದ್‌ನನ್ನು ಕಂಡು ಆತನ ದೇಹ ತಪಾಸಣೆ ನಡೆಸಿದಾಗ ಕೈಯಲ್ಲಿ ಎಂಡಿಎಂಎ ಪ್ಯಾಕೆಟ್ ಪತ್ತೆಹಚ್ಚಿದ್ದಾರೆ. ಆ ಕೂಡಲೇ ಆತ ಪ್ಯಾಕೆಟ್‌ನ್ನು ಪೊಲೀಸರ ಸಮ್ಮುಖದಲ್ಲೇ ನುಂಗಿದ್ದಾನೆ. …

ಕಾಸರಗೋಡು ನಿವಾಸಿಯ ವಿಳಾಸ ಬಳಸಿ ಪಾಸ್‌ಪೋರ್ಟ್ ಪಡೆದ ಬಗ್ಗೆ ದೂರು: ಕೊಲ್ಲಂ ನಿವಾಸಿ ವಿರುದ್ಧ ಕೇಸು

ಕಾಸರಗೋಡು: ಕಾಸರಗೋಡು ನಿವಾಸಿಯೋರ್ವರ ವಿಳಾಸ ಬಳಸಿ ಪಾಸ್‌ಪೋರ್ಟ್ ಸಂಪಾದಿಸಿರು ವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಕೊಲ್ಲಂ  ನಿವಾಸಿ ವಿರುದ್ಧ ಕಾಸರಗೋಡು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಾಸರಗೋಡು ಆನವಾದುಕಲ್ ತಲಕ್ಕಲ್ ವಳಪ್ಪಿನ ವಿನೋದ್ ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಕೊಲ್ಲಂ  ಶೀಲ ಭವನದ ಸನೋಜ್  ಕುರುಪ್ ಎಂಬಾತನ ವಿರುದ್ಧ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ. 2028 ಡಿಸೆಂಬರ್ ನಲ್ಲಿ ಸನೋಜ್ ಕುಮಾರ್ ತನ್ನ ವಿಳಾಸ ಉಪಯೋಗಿಸಿ ತಿರುವನಂ ತಪುರ ರೀಜನಲ್ ಪಾಸ್‌ಪೋರ್ಟ್ ಕಚೇರಿಯಿಂದ ಪಾಸ್‌ಪೋರ್ಟ್ ಸಂಪಾದಿಸಿ …

ಕಡವೆಯನ್ನು ಕೊಂದು ಮಾಂಸ ಮಾರಾಟಗೈದ ಇಬ್ಬರ ಬಂಧನ

ಕಾಸರಗೋಡು: ಕಡವೆ ಎಂಬ ವನ್ಯ ಜೀವಿಯನ್ನು ಗುಂಡಿಕ್ಕಿ ಕೊಂದು ಅದರ ಮಾಂಸ ಮಾರಾಟಗೈದ ಹಾಗೂ ಪದಾರ್ಥ ಮಾಡಿದ ಇಬ್ಬರು  ಸೆರೆಗೀಡಾಗಿದ್ದಾರೆ. ಕುಳಿಮಾಡ ಎಂಬಲ್ಲಿನ ಮುತ್ತ್ತಾನಿ ವೀಟಿಲ್ ಬಿಜು (43), ಕಣ್ಣಂವಯಲ್ ಬಿನು (36) ಎಂಬಿವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಕುಳಿಮಾಡ ಎಂಬಲ್ಲಿನ ವ್ಯಕ್ತಿಯೊ ಬ್ಬರ ಹಿತ್ತಿಲಿನಲ್ಲಿ ಪತ್ತೆಯಾದ ಪ್ರಾಣಿಯನ್ನು ಆರೋಪಿಗಳು ಗುಂಡಿಕ್ಕಿ ಕೊಲೆಗೈದಿದ್ದರು. ಬಳಿಕ ಅದರ ಮಾಂಸ ಪದಾರ್ಥ ಮಾಡಿ ಅವಶಿಷ್ಟಗಳನ್ನು ಹೂತು ಹಾಕಿದ್ದರು. ಈ ಬಗ್ಗೆ ಲಭಿಸಿದ ಗುಪ್ತ ಮಾಹಿತಿಯಂತೆ ಅರಣ್ಯ ಇಲಾಖ ಅಧಿಕಾರಿಗಳು …

ಚೆರ್ಕಳದಲ್ಲಿ ಪಾರ್ಕಿಂಗ್ ವಿಷಯದಲ್ಲಿ ಘರ್ಷಣೆ: ಎರಡು ಕೇಸು ದಾಖಲು: 25 ಮಂದಿ ಆರೋಪಿಗಳು; ನಾಲ್ಕು ಮಂದಿ ಸೆರೆ

ಚೆರ್ಕಳ: ಕಾರು ಪಾರ್ಕಿಂಗ್ ವಿಷಯದಲ್ಲಿ ಮೊನ್ನೆ ಸಂಜೆ ಚೆರ್ಕಳ ಪೇಟೆಯಲ್ಲಿ ಉಂಟಾದ ಘರ್ಷಣೆಗೆ ಸಂಬಂಧಿಸಿ ವಿದ್ಯಾನಗರ ಪೊಲೀಸರು ಎರಡು ಕೇಸು ದಾಖಲಿಸಿಕೊಂ ಡಿದ್ದಾರೆ. ಇದರಲ್ಲಿ ಒಟ್ಟು ೨೫ ಮಂದಿ ವಿರುದ್ಧ ನರಹತ್ಯಾ ಯತ್ನ ಪ್ರಕರಣ ದಾಖಲಿಸಲಾಗಿದೆ. ಆ ಪೈಕಿ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಚೆರ್ಕಳದ ಎಬಿಸಿಡಿ ಮೊಬಿ ಸ್ಟ್ರೀಟ್ ಎಂಬ ಹೆಸರಿನ ಮೊಬೈಲ್ ಫೋನ್ ಅಂಗಡಿಗೆ ಹಾನಿಗೊಳಸಿ ಆ ಅಂಗಡಿ ನೌಕರ ಅಸೈನಾರ್ ಎಂಬವರ ಮೇಲೆ ಹಲ್ಲೆ ನಡೆಸಿದ ದೂರಿನಂತೆ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿ ನೆಲ್ಲಿಕಟ್ಟೆ …

16ರ ಬಾಲಕಿಯನ್ನು ಮದುವೆ ಮಾಡಿಕೊಡುವಂತೆ ಬೆದರಿಕೆ: ಆರೋಪಿಗೆ ರಿಮಾಂಡ್

ಉಪ್ಪಳ:  ಪ್ರಾಯಪೂರ್ತಿ ಯಾಗದ ಬಾಲಕಿಯನ್ನು ಮದುವೆ ಮಾಡಿಕೊಡಬೇಕೆಂದು ಒತ್ತಾಯಿಸಿ ಆಕೆಯ ಹೆತ್ತವರಿಗೆ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ ಸೆರೆಗೀಡಾದ ಆರೋಪಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಕರ್ನಾಟಕದ ಬಂಟ್ವಾಳ ನಿವಾಸಿ ವಿಕ್ರಮ (22) ಎಂಬಾತ ರಿಮಾಂಡ್ ಗೊಳಗಾದ ಆರೋಪಿಯಾಗಿದ್ದಾನೆ. ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ 16ರ ಹರೆಯದ ಬಾಲಕಿಯನ್ನು ವಿಕ್ರಮ ಪ್ರೀತಿಸಿದ್ದನೆನ್ನಲಾಗಿದೆ. ಇತ್ತೀಚೆಗೆ ಬಾಲಕಿಯ ಮನೆಗೆ ತಲುಪಿದ ವಿಕ್ರಮ ಬಾಲಕಿಯನ್ನು  ಮದುವೆ ಮಾಡಿಕೊ ಡುವಂತೆ ಆಕೆಯ ಹೆತ್ತವರನ್ನು ಒತ್ತಾಯಿಸಿದ್ದನು. ಆದರೆ ಬಾಲಕಿಗೆ ಪ್ರಾಯಪೂರ್ತಿ ಯಾಗಿಲ್ಲವೆಂದೂ ಆದ್ದರಿಂದ ಮದುವೆ ಸಾಧ್ಯವಿಲ್ಲ ವೆಂದು …

ನಿಧನ

ಬಂದಡ್ಕ: ಹೊಸನಗರ ರಾಮಚಂದ್ರಾಪುರ ಮಠದ ಸ್ವಾಮೀಜಿಯವರ ಶಿಷ್ಯರಾಗಿದ್ದ ಬೇಡಡ್ಕ ಪೇರ್ಯ ನಿವಾಸಿ ಪಿ. ಸುಬ್ರಹ್ಮಣ್ಯ ಭಟ್ (82) ನಿಧನ ಹೊಂದಿದರು. ಮೃತರು ಪತ್ನಿ ವೆಂಕಟೇಶ್ವರಿ ಅಮ್ಮ, ಮಕ್ಕಳಾದ ಶ್ರೀಕೃಷ್ಣ ಭಟ್, ಶಿವಕುಮಾರ್, ಉದಯ ಕುಮಾರ್, ಗಣೇಶ್ ಭಟ್, ಸೊಸೆಯಂದಿರಾದ ಶ್ರದ್ಧಾಲಕ್ಷ್ಮಿ, ಭಾರತಿ, ಸ್ವಾತಿ, ಸಹೋದರರಾದ ರಾಮ ಭಟ್ ಪಿ, ಶಂಕರ ಭಟ್, ಕೇಶವ ಭಟ್, ಗೋಪಾಲಕೃಷ್ಣ ಭಟ್, ಸಹೋದರಿಯ ರಾದ ಶಾರದಾ ಮುಂಡ್ಯತ್ತಡ್ಕ, ಶಂಕರಿ ಸುಳ್ಯ, ಈಶ್ವರಿ,  ಜಯಕುಮಾರಿ (ಜ್ಯೂನಿಯರ್ ಪಬ್ಲಿಕ್ ಹೆಲ್ತ್ ನರ್ಸ್ ಕುಂಬ್ಡಾಜೆ ಎಫ್‌ಎಚ್‌ಸಿ) …