ಹೃದಯಾಘಾತ: ಗೃಹಿಣಿ ನಿಧನ

ಉಪ್ಪಳ: ಹೃದಯಘಾ ತದಿಂದ ಗೃಹಿಣಿ ಯೋರ್ವೆ ನಿಧನ ಹೊಂದಿದ್ದಾರೆ. ಮುಳಿಂಜ ಕುಂಟುಪುಣಿ ನಿವಾಸಿ ದಿ| ನಾರಾಯಣ ಶೆಟ್ಟಿಯವರ ಪತ್ನಿ ಕುಸುಮ ಶೆಟ್ಟಿ (70) ನಿನ್ನೆ ಮಧ್ಯಾಹ್ನ ಕುಸಿದು ಬಿದ್ದು ನಿಧನರಾದರು. ಇವರು ಹಿರಿಯ ಕೃಷಿಕರಾಗಿದ್ದರು. ಮೃತರು ಮಕ್ಕಳಾದ ಸದಾನಂದ ಶೆಟ್ಟಿ, ರಾಜೇಶ್ ಶೆಟ್ಟಿ, ಸೊಸೆಯಂದಿರಾದ ಶಾರದಾ, ಅಂಬಿಕಾ, ಸಹೋದರ ಸಹೋದರಿಯರಾದ ಕೊರಗಪ್ಪ ಶೆಟ್ಟಿ, ವಿಶ್ವನಾಥ ಶೆಟ್ಟಿ, ಲಕ್ಷಿ÷್ಮÃ, ಚಂದ್ರಾವತಿ, ಸಾವಿತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ವರ್ಚುವಲ್ ತರಗತಿ ಸೌಕರ್ಯ ಸಿದ್ಧ: ಚುಕ್ಕಿನಡ್ಕದ ಭರತ್‌ಗೆ ಇನ್ನು ಮನೆಯಲ್ಲಿಯೇ ಕಲಿಕೆ ಮುಂದುವರಿಸಲು ವ್ಯವಸ್ಥೆ

ಮಾನ್ಯ: ಮಾನ್ಯ ಜ್ಞಾನೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ೭ನೇ ತರಗತಿ ವಿದ್ಯಾರ್ಥಿಯಾದ ಚುಕ್ಕಿನಡ್ಕದ ಭರತ್ ಕುಮಾರ್‌ಗೆ ಇನ್ನು ಮನೆಯಲ್ಲಿ ಕುಳಿತು ಶಿಕ್ಷಣ ಕೈಗೊಳ್ಳಬಹುದಾಗಿದೆ. ಮನೆಯಾ ಧಾರಿತ ಶಿಕ್ಷಣ ಪಡೆಯುವುದಕ್ಕೆ ಶಾಲೆಗೆ ತೆರಳಲು ಸಾಧ್ಯವಾಗದ ಮಕ್ಕಳಿಗೆ ಸಮಗ್ರ ಶಿಕ್ಷಾ ಕೇರಳ ಕಾಸರಗೋಡು ಸ್ಟಾರ್ಸ್ ಯೋಜನೆಯಲ್ಲಿ ಸೇರಿಸಿ ಕುಂಬಳೆ ಬಿಆರ್‌ಸಿ ವ್ಯಾಪ್ತಿಯ ಎರಡು ವಿದ್ಯಾರ್ಥಿಗಳಿಗೆ ೨೫ ಲಕ್ಷ ರೂ. ವೆಚ್ಚದಲ್ಲಿ ತರಗತಿ ಕೊಠಡಿ ಉಪಕರಣಗಳನ್ನು ವಿತರಿಸಲಾ ಯಿತು. ತರಗತಿ ಚಟುವಟಿಕೆಗಳನ್ನು ಮನೆಯಲ್ಲಿ ಕುಳಿತು ಕಾಣುವುದಕ್ಕೂ ಅದರಲ್ಲಿ ಭಾಗವಹಿಸುವುದಕ್ಕೂ ಇನ್ನು …

ಉರ್ಮಿ ವಿಸಿಬಿ ಕಂ ಬ್ರಿಡ್ಜ್ ಪುನರ್ ನಿರ್ಮಾಣಕ್ಕೆ 1.23 ಕೋಟಿ ರೂ.ಗೆ ಆಡಳಿತಾನುಮತಿ; ಕಾಮಗಾರಿ ಶೀಘ್ರ- ಶಾಸಕ

ಪೈವಳಿಕೆ: ಜೀರ್ಣಾವಸ್ಥೆಯಲ್ಲಿದ್ದ  ಉರ್ಮಿ ವಿಸಿಬಿ ಕಂ ಬ್ರಿಡ್ಜ್‌ನ   ನಿರ್ಮಾಣಕ್ಕಾಗಿ 1.23 ಕೋಟಿ ರೂ.ಗಳ ಯೋಜನೆಗೆ ಆಡಳಿತಾನುಮತಿ ಲಭಿಸಿದೆ ಎಂದು ಶಾಸಕ ಎಕೆಎಂ ಅಶ್ರಫ್ ತಿಳಿಸಿದ್ದಾರೆ. ಪೈವಳಿಕೆ ಪಂಚಾಯತ್‌ನ ಕಡೆಂಕೋಡಿ ವಾರ್ಡ್‌ನ ಉರ್ಮಿ ತೋಡಿಗೆ ೪೦ ವರ್ಷಗಳ ಹಿಂದೆ ವಿಸಿಬಿ ಕಂ ಬ್ರಿಡ್ಜ್ ನಿರ್ಮಿಸಲಾಗಿತ್ತು. ಇದು ಶೋಚನೀಯಗೊಂಡ ಹಿನ್ನೆಲೆಯಲ್ಲಿ ಈ ದಾರಿಯಾಗಿ ಸಾರಿಗೆ ಸಂಚಾರ ನಿಷೇಧಿಸಲಾಗಿತ್ತು. ಇದರಿಂದಾಗಿ ಉರ್ಮಿ, ಪಲ್ಲಕೂಡೇಲು, ಕೊಮ್ಮಂಗಳ, ಕುರುಡಪದವು ಎಂಬೀ ಪ್ರದೇಶಗಳ ಕೃಷಿಕರು, ವಿದ್ಯಾರ್ಥಿಗಳು, ವ್ಯಾಪಾರಿಗಳು ಸಹಿತವಿರುವ ಸಾರ್ವಜನಿಕರು ಸಂಕಷ್ಟಕ್ಕೀ ಡಾಗಿದ್ದಾರೆ. ಈ ಪ್ರದೇಶದ …

ಕಾರ್ಮಾರು ದೇವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ ನಾಳೆ

ಮಾನ್ಯ: ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಾಳೆ  1008  ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಕಾರ್ಯಕ್ರಮದಲ್ಲಿ ಮೈಸೂರು ಯಧುವೀರ್ ಕೃಷ್ಣದತ್ತ ಒಡೆಯರ್ ಆಗಮಿಸುವರು. ಇಂದು ಬೆಳಿಗ್ಗೆ ಗಣಪತಿ ಹೋಮ, ಶಾಂತಿ ಹೋಮ ಮೊದಲಾದ ವೈದಿಕ ಕಾರ್ಯಕ್ರಮಗಳು ಜರಗಿದ್ದು, ರಾತ್ರಿ ಪರಿಕಲಶ ಪೂಜೆ ಸಹಿತ ವಿವಿಧ ಕಾರ್ಯಕ್ರಮಗಳು ಜರಗಲಿದೆ. ಅಪರಾಹ್ನ 3.30ಕ್ಕೆ ವಿದುಷಿ ಸರಸ್ವತಿಕೃಷ್ಣನ್ ಬೇಳ ಇವರಿಂದ ಶಾಸ್ತ್ರೀಯ ಸಂಗೀತ, ಸಂಜೆ 5 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಉಡುಪಿ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡುವರು. ಉದ್ಯಮಿ …

ಉಪ್ಪಳ-ತೃಕರಿಪುರ ಸೇರಿದಂತೆ 16 ರೈಲ್ವೇ ಮೇಲ್ಸೇತುವೆಗಳ  ನಿರ್ಮಾಣ ವೆಚ್ಚ ಭರಿಸಲು ಮುಂದಾದ ಕೇಂದ್ರ ಸರಕಾರ

ಕಾಸರಗೋಡು: ಕೆ ರೈಲಿಗೆ ವಹಿಸಿಕೊಡ ಲಾಗಿರುವ ಉಪ್ಪಳ ಸೇರದಂತೆ ರಾಜ್ಯದ 16 ರೈಲ್ವೇ ಮೇಲ್ಸೇತುವೆಗಳ ನಿರ್ಮಾಣ ವೆಚ್ಚವನ್ನು ಪೂರ್ಣವಾಗಿ ವಹಿಸಲು ಕೇಂದ್ರ ಸರಕಾರ ಒಪ್ಪಿಕೊಂಡಿದೆ. ರಾಜ್ಯದಲ್ಲಿ 27 ರೈಲ್ವೇ ಮೇಲ್ಸೇತುವೆ ಗಳನ್ನು ನಿರ್ಮಿಸಲು 2019ರಲ್ಲಿ ಕೆ ರೈಲು ವಿಭಾಗ ತೀರ್ಮಾನಿಸಿತ್ತು. ಆದರೆ ಅದಕ್ಕೆ ಅಗತ್ಯದ ಭೂ ಸ್ವಾಧೀನಕ್ರಮ, ಪರಿಸರ ಆಘಾತ ಕುರಿತಾದ ಅಧ್ಯಯನ ಇತ್ಯಾದಿಗಳಿಗೆ ಭಾರೀ ವೆಚ್ಚ ವ್ಯಯಿಸಬೇಕಾಗಿ ರುವ ಹಿನ್ನೆಲೆಯಲ್ಲಿ ಆ ಯೋಜನೆಯನ್ನು  ಜ್ಯಾರಿಗೊಳಿಸಲು ಈತನಕ ಸಾಧ್ಯವಾಗಿಲ್ಲ. ಆದ್ದರಿಂದಾಗಿ ಈ ಯೋಜನೆಗಳ ನಿರ್ಮಾಣ ವೆಚ್ಚವನ್ನು ವಹಿಸುವಂತೆ  …

ಒಂದೂವರೆ ಕಿಲೋ ಹೈಬ್ರೀಡ್ ಗಾಂಜಾ ಸಹಿತ ಮುಂಬಯಿ ನಿವಾಸಿಗಳು ಕೊಚ್ಚಿಯಲ್ಲಿ ಸೆರೆ

ಕೊಚ್ಚಿ: ಗಾಂಜಾ ಸಹಿತ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಇಬ್ಬರು ಮಹಿಳೆಯರನ್ನು ಸೆರೆ ಹಿಡಿಯ ಲಾಗಿದೆ. ಬ್ಯಾಂಕಾಕ್‌ನಿಂದ ತಲುಪಿದ ಮುಂಬಯಿ ನಿವಾಸಿಗಳಾದ ಸಬ ರಾಶಿದ್, ಶಾಜಿಯ ಅಮರ್‌ಹಂಸ ಎಂಬಿವರನ್ನು ಬಂಧಿಸಲಾಗಿದೆ. ಇವರಿಂದ ಒಂದೂವರೆ ಕಿಲೋ ಹೈಬ್ರೀಡ್ ಗಾಂಜಾ ವಶಪಡಿಸಲಾಗಿದೆ. ಸಬ ರಾಶಿದ್‌ಳ  ಕೈಯಿಂದ 754 ಗ್ರಾಂ ಗಾಂಜಾ, ಅಮರ್ ಹಂಸಳಿಂದ 750 ಗ್ರಾಂ ಗಾಂಜಾವನ್ನು ವಶಪಡಿಸಲಾಗಿದೆ. ನೆಡುಂಬಾಶೇರಿ ವಿಮಾನ ನಿಲ್ದಾಣಕ್ಕೆ ತಲುಪಿದ ಇವರ ವರ್ತನೆಯಲ್ಲಿ ಅಸ್ವಾಭಾವಿಕತೆ ಪ್ರಕಟವಾದ ಹಿನ್ನೆಲೆಯಲ್ಲಿ ನಡೆಸಿದ ತಪಾಸಣೆಯಲ್ಲಿ ಗಾಂಜಾ ಪತ್ತೆಯಾಗಿದೆ. ದೊಡ್ಡ ಪ್ಯಾಕೆಟ್‌ಗಳಲ್ಲಿ ಅಡಗಿಸಿಟ್ಟ …

ಸಿಪಿಎಂನ ಸಮ್ಮೇಳನ ವೇದಿಕೆಯಲ್ಲಿ ಇ.ಕೆ. ನಾಯನಾರ್‌ರ ವೇಷ ಧರಿಸಲು ಹೋದ ಕಲಾವಿದ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕೊಲ್ಲಂ: ಕೊಲ್ಲಂನಲ್ಲಿ ನಡೆಯುತ್ತಿರುವ ಸಿಪಿಎಂ ರಾಜ್ಯ ಸಮ್ಮೇಳನ ವೇದಿಕೆಯಲ್ಲಿ ಹಮ್ಮಿಕೊಂಡ ದೃಶ್ಯಾವಿಷ್ಕಾರದಲ್ಲಿ ಸಿಪಿಎಂನ ಜನಪ್ರಿಯ ನೇತಾರ ಇ.ಕೆ. ನಾಯನಾರ್‌ರ ವೇಷ ಧರಿಸಲೆಂದು ಕಣ್ಣೂರಿನಿಂದ ತೆರಳಿದ ಕಲಾವಿದ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಯ್ಯನ್ನೂರು ನಿವಾಸಿ ಎಂ. ಮಧುಸೂದನನ್ ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ.  ಕೊಲ್ಲಂ ನಗರದ ಹೋಟೆಲ್ ಕೊಠಡಿಯಲ್ಲಿ ಇವರು ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರಮೋದ್ ಪಯ್ಯನ್ನೂರು ಎಂಬವರು ದೃಶ್ಯಾವಿಷ್ಕಾರದ ಸಂಘಟಕನಾಗಿದ್ದಾರೆ.   ದೃಶ್ಯಾವಿಷ್ಕಾರ ನಿನ್ನೆ ನಡೆಯಲಿರುವಂತೆಯೇ ಮಧುಸೂದನನ್ ನಾಪತ್ತೆಯಾಗಿದ್ದರು. ಇದರಿಂದ ಕಾರ್ಯಕ್ರಮದ ಇತರ ಕಲಾವಿದರು ಅವರಿಗೆ …

ವಿದ್ಯಾರ್ಥಿನಿ ನಾಪತ್ತೆ ಪ್ರಕರಣ: ತನಿಖೆತೀವ್ರಗೊಳಿಸಲು ಶಾಸಕ ಎಕೆಎಂ ಅಶ್ರಫ್ ಆಗ್ರಹ

ಪೈವಳಿಕೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ  ನಿವಾಸಿಯಾದ ವಿದ್ಯಾರ್ಥಿನಿ ನಾಪತ್ತೆಯಾಗಿ 25 ದಿವಸ ಕಳೆದರೂ ಈಕೆಯ ಬಗ್ಗೆ ಯಾವುದೇ ಸೂಚನೆ ಲಭಿಸದಿರುವುದು ಖೇದಕರವಾಗಿದೆ ಎಂದು ತನಿಖೆಯನ್ನು ತೀವ್ರಗೊಳಿಸಬೇಕೆಂದು ಆಗ್ರಹಿಸಿ  ಮುಖ್ಯಮಂತ್ರಿ, ಡಿಜಿಪಿಗೆ ಪತ್ರ ಬರೆಯುವುದಾಗಿ ಶಾಸಕ ಎಕೆಎಂ ಅಶ್ರಫ್ ತಿಳಿಸಿದ್ದಾರೆ. ನಾಪತ್ತೆಯಾದ ವಿದ್ಯಾರ್ಥಿನಿಯ  ಮನೆಗೆ ಭೇಟಿ ನೀಡಿದ ಶಾಸಕರು ಹೆತ್ತವರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದ್ದಾರೆ. ಕಳೆದ ಫೆಬ್ರವರಿ 11ರಂದು ವಿದ್ಯಾರ್ಥಿನಿ ನಾಪತ್ತೆಯಾಗಿದ್ದಾಳೆ. ಕೂಲಿ ಕೆಲಸ ಮಾಡಿ ಬದುಕು ಸವೆಸುವ ಕುಟುಂಬದ ನಿರೀಕ್ಷೆಯಾಗಿದ್ದ ಬಾಲಕಿಯ ನಾಪತ್ತೆ ಪ್ರಕರಣದಲ್ಲಿ …

ಅಂತಾರಾಷ್ಟ್ರೀಯ ಮಹಿಳಾ ದಿನದಂಗವಾಗಿ ಜಿ.ಪಂ. ಅಧ್ಯಕ್ಷೆಗೆ ಗೌರವ

ಕಾಸರಗೋಡು: ಅಂತಾರಾಷ್ಟ್ರೀಯ ಮಹಿಳಾ ದಿನದಂಗವಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ. ಬೇಬಿ ಬಾಲ ಕೃಷ್ಣನ್‌ರನ್ನು ಅಭಿನಂದಿಸಲಾಯಿತು. ಪಿ.ವಿ. ದಿವಾಕರನ್ ಸನ್ಮಾನಿಸಿದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರು ಅಧ್ಯಕ್ಷತೆ ವಹಿಸಿದರು. ಕೆ. ಶಕುಂತಳ, ಶೈಲಜಾ ಭಟ್, ಜಾಸ್ಮಿನ್ ಕಬೀರ್, ಫಾತಿಮತ್ ಶಮ್ನಾ, ಎಂ.ಎಸ್. ಶಬರೀಶ್, ವಿ.ಎಂ. ಅಖಿಲ, ಎನ್.ವಿ. ಸತ್ಯನ್, ಕೆ. ಬಾಲಕೃಷ್ಣನ್ ಮಾತನಾಡಿದರು.

ಮವ್ವಾರು ಶ್ರೀ ಕೃಷ್ಣ ಭಜನಾ ಮಂದಿರ ಪ್ರತಿಷ್ಠಾ ವಾರ್ಷಿಕೋತ್ಸವ 11ರಂದು

ಮವ್ವಾರು: ಇಲ್ಲಿನ ಶ್ರೀಕೃಷ್ಣ ಭಜನಾಮಂದಿರದ ಪ್ರತಿಷ್ಠಾ ವಾರ್ಷಿಕೋತ್ಸವ ಈ ತಿಂಗಳ 11ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ನಾಗದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಕೂಡಾ ಇದೇ ಸಂದರ್ಭದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 6.42ಕ್ಕೆ ದೀಪ ಪ್ರತಿಷ್ಠೆ, ಗಣಪತಿ ಹೋಮ, 8ಕ್ಕೆ ಮಂದಿರ ಮುಂಭಾಗದ ಶಾಶ್ವತ ಚಪ್ಪರ ಲೋಕಾರ್ಪಣೆ, 8.15ರಿಂದ ವಿವಿಧ ತಂಡಗಳಿAದ ಭಜನೆ, 10ಕ್ಕೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಆರಂಭ, 10.30ರಿಂದ ನಾಗ ಸನ್ನಿಧಿಯಲ್ಲಿ ಕ್ಷೀರಾಭಿಷೇಕ, ನಾಗತಂಬಿಲ, ಮಧ್ಯಾಹ್ನ ಮಹಾಪೂಜೆ, ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ.ಅಪರಾಹ್ನ 2 ಗಂಟೆಗೆ …