ಹಂದಿಗೆ ಇರಿಸಿದ ಸ್ಫೋಟಕ ವಸ್ತು ಸಿಡಿದು ನಾಯಿ ಸಾವು: . ಬೇಟೆಗಾರ ತಂಡದ ಓರ್ವ ಸೆರೆ; ಮದ್ದು ಗುಂಡುಗಳು, ಜೀಪು ವಶ . ಆಟೋ ರಿಕ್ಷಾ ಸಹಿತ ಹಲವರು ಪರಾರಿ
ಕುಂಬಳೆ: ಕಾಡು ಹಂದಿಯನ್ನು ಕೊಲ್ಲಲು ಇರಿಸಿದ ಸ್ಫೋಟಕ ವಸ್ತು ಸಿಡಿದು ಸಾಕುನಾಯಿ ಸಾವಿಗೀಡಾದ ಘಟನೆ ನಡೆದಿದೆ. ಈ ವಿಷಯ ತಿಳಿದು ನಾಗರಿಕರು ಸ್ಥಳಕ್ಕೆ ತಲುಪುತ್ತಿದ್ದಂತೆ ಬೇಟೆಗಾರರು ಓಡಿ ಪರಾರಿಯಾ ಗಿದ್ದಾರೆ. ಇದೇ ವೇಳೆ ಬೇಟೆಗಾರರು ತಲುಪಿದ ಜೀಪನ್ನು ನಾಗರಿಕರು ತಡೆದು ನಿಲ್ಲಿಸಿ ಅದರ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕುಂಡಂಕುಳಿ ನಿವಾಸಿ ಉಣ್ಣಿಕೃಷ್ಣನ್ (48) ಎಂಬಾತ ಬಂಧಿತ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ. ಈತನನ್ನು ಪೊಲೀಸರು ತನಿಖೆಗೊಳ ಪಡಿ ಸುತ್ತಿದ್ದಾರೆ. ಹೇರೂರು ಮೀಪಿರಿ ಎಂಬಲ್ಲಿ ನಿನ್ನೆ ರಾತ್ರಿ ಈ …