ಬಿಜೆಪಿ ಮುಖಂಡ ನಿಧನ

ಮೊಗ್ರಾಲ್ ಪುತ್ತೂರು: ಬಿಜೆಪಿ ಮೊಗ್ರಾಲ್ ಪುತ್ತೂರು ಪಂಚಾ ಯತ್ ಸಮಿತಿ ಮಾಜಿ ಅಧ್ಯಕ್ಷ ಸದಾಶಿವ ಉಜಿರೆಕೆರೆ (69) ನಿಧನ ಹೊಂದಿದರು. ಬಿಜೆಪಿ ಮಂಡಲ ಸಮಿತಿ ಸದಸ್ಯನಾಗಿದ್ದರು. ಮೃತರು ಪತ್ನಿ ಸುಲೋಚನ, ಮಕ್ಕಳಾದ ರವಿಚಂದ್ರನ್, ರತೀಶ್, ರಾಧಿಕ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಐಎಂಎ ಸದಸ್ಯತನ ಅಭಿಯಾನ ಪ್ರಯಾಣ ಆರಂಭ

ಕಾಸರಗೋಡು: ಸಂಘಟನೆಯನ್ನು ಬಲಪಡಿಸುವುದು, ಸದಸ್ಯತನ ಹೆಚ್ಚಿಸು ವುದು ಎಂಬ ಉದ್ದೇಶದೊಂದಿಗೆ ಐಎಂಎ ರಾಜ್ಯ ಅಧ್ಯಕ್ಷ ಡಾ| ಕೆ. ಶ್ರೀವಿಲಾಸ್‌ರ ನೇತೃತ್ವದಲ್ಲಿ ಐಎಂಎ ಕೇರಳ ಯಾತ್ರೆ ಕಾಸರಗೋಡಿನಿಂದ ಆರಂಭಗೊಂಡಿತು. ಮಾಜಿ ರಾಷ್ಟ್ರಾಧ್ಯಕ್ಷ ಡಾ| ಬಾಬು ರವೀಂದ್ರನ್, ಪ್ರಯಾಣ ವನ್ನು ನಗರದ ಹೊಸ ಬಸ್ ನಿಲ್ದಾಣ ಸಮೀಪ ಫ್ಲಾಗ್‌ಆಫ್ ನಡೆಸಿದ ಉದ್ಘಾಟಿಸಿದರು. ಕಾಸರಗೋಡು ಬ್ರಾಂಚ್ ಅಧ್ಯಕ್ಷ ಡಾ| ಹರಿಕಿರಣ್ ಬಂಗೇರ ಅಧ್ಯಕ್ಷತೆ ವಹಿಸಿದರು. ಮಾಜಿ ರಾಜ್ಯಾಧ್ಯಕ್ಷ ಡಾ| ಜೋಸೆಫ್ ಬೆನವನ್, ರಾಜ್ಯ ಕಾರ್ಯದರ್ಶಿ ಡಾ| ಶಶಿಧರನ್ ಕೆ, ಉತ್ತರ ವಲಯ …

ಮಧೂರು ಕ್ಷೇತ್ರದ ಬ್ರಹ್ಮಕಲಶ- ಮೂಡಪ್ಪ ಸೇವೆ ತಾಂತ್ರಿಕ ವಿಧಿಗಳಿಗೆ ಇಬ್ಬರು ತಂತ್ರಿವರ್ಯರ ಪೌರೋಹಿತ್ಯ

ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ನ್ಯಾಯಾಲಯದ ನಿರ್ದೇಶದಂತೆ ಇಬ್ಬರು ತಂತ್ರಿವರ್ಯರ ಪೌರೋಹಿತ್ಯದಲ್ಲಿ ನಡೆಸಲು ಸಂಬಂಧಪಟ್ಟವರ ಸಭೆಯಲ್ಲಿ ತೀರ್ಮಾನಿಸಲಾಯಿತು. ಬ್ರಹ್ಮಕಲಶ ಹಾಗೂ ಮೂಡಪ್ಪ ಸೇವೆ ಮಾರ್ಚ್ 27ರಿಂದ ಎಪ್ರಿಲ್ 7ರವರೆಗೆ ನಡೆಯಲಿದೆ. ಇದರಲ್ಲಿ ಮಾರ್ಚ್ 27ರಿಂದ ಎಪ್ರಿಲ್ 2ರವರೆಗೆ ನಡೆಯುವ ಬ್ರಹ್ಮಕಲಶೋತ್ಸವ ದೇರೇಬೈಲು ಶಿವಪ್ರಸಾದ್ ತಂತ್ರಿಯವರ ಪೌರೋಹಿತ್ಯದಲ್ಲೂ ಬಳಿಕ ಎಪ್ರಿಲ್ 2ರಿಂದ 7xರವರೆಗೆ ನಡೆಯುವ ಶ್ರೀ ಮಹಾಗಣಪತಿ ಮೂಡಪ್ಪ ಸೇವೆ ಉಳಿಯತ್ತಾಯ ವಿಷ್ಣು ಆಸ್ರರ ಪೌರೋಹಿತ್ಯದಲ್ಲೂ ನಡೆಸಲು ತೀರ್ಮಾನಿಸಲಾಯಿತು. ಹೈಕೋರ್ಟ್ …

ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ವಾರ್ಷಿಕೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಈ ತಿಂಗಳ 19ರಿಂದ ನಡೆಯಲಿರುವ ವಾರ್ಷಿಕ ಜಾತ್ರೆಯ ಆಮಂತ್ರಣ ಪತ್ರಿಕೆಯನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಮಲಬಾರ್ ದೇವಸ್ವಂ ಬೋರ್ಡ್ ಅಸಿಸ್ಟೆಂಟ್ ಕಮಿಷನರ್ ಕೆ.ಪಿ. ಪ್ರದೀಪ್ ಕುಮಾರ್ ಬಿಡುಗಡೆಗೊಳಿಸಿ ದರು. ಆಡಳಿತ ಸಮಿತಿ ಟ್ರಸ್ಟಿ ಅಧ್ಯಕ್ಷ ಎ. ಗೋವಿಂದನ್ ನಾಯರ್, ವಾರ್ಡ್ ಪ್ರತಿನಿಧಿ ಎ. ಶ್ರೀಲತಾ ಟೀಚರ್, ಧಾರ್ಮಿಕ ಮುಂದಾಳು ಡಾ. ಅನಂತ ಕಾಮತ್, ಕೆ.ಎನ್. ವೆಂಕಟ್ರಮಣ ಹೊಳ್ಳ, ಎಂ. ಮಹೇಶ್, ಶೋಭಾ, ಅಭಿಲಾಷ್, ಅಜಿತೇಶ್, …

ಆಶಾ ಕಾರ್ಯಕರ್ತೆಯರನ್ನು ಬೆಂಬಲಿಸಿ ಬಿಜೆಪಿ ರ‍್ಯಾಲಿ ನಾಳೆ

ಕಾಸರಗೋಡು: ವೇತನ ಸೌಲಭ್ಯ ಹೆಚ್ಚಿಸಬೇಕೆಂಬ ಬೇಡಿಕೆ ಯೊಂದಿಗೆ ಕಳೆದ ನಾಲ್ಕು ವಾರಗ ಳಿಂದ ಸೆಕ್ರೆಟರಿಯೇಟ್ ಮುಂದೆ ಚಳ ವಳಿ ನಡೆಸುತ್ತಿರುವ ಆಶಾ ಕಾರ್ಯ ಕರ್ತರಿಗೆ ಬೆಂಬಲ ವ್ಯಕ್ತಪಡಿಸಿ ಬಿಜೆಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಾಳೆ ಸಂಜೆ 3 ಗಂಟೆಗೆ ಕಾಸರಗೋಡು ನಗರ ದಲ್ಲಿ ರ‍್ಯಾಲಿ ಹಾಗೂ  ಸಾರ್ವಜನಿಕ ಸಭೆ ನಡೆಯಲಿದೆ. ಕರಂದಕ್ಕಾಡ್ ಬಿಜೆಪಿ ಟೌನ್ ಕಚೇರಿ ಪರಿಸರದಿಂದ ಆರಂಭ ಗೊಳ್ಳುವ ರ‍್ಯಾಲಿ ಏರ್‌ಲೈನ್ಸ್  ರಸ್ತೆ, ಹಳೆ ಬಸ್ ನಿಲ್ದಾಣ ಮೂಲಕ ಸಾಗಿ ಹೊಸ ಬಸ್ ನಿಲ್ದಾಣಕ್ಕೆ ತಲುಪಲಿದೆ. …

ಅನಂತಪುರ ಕೈಗಾರಿಕಾ ಕೇಂದ್ರದಲ್ಲಿ ನೀರಿನ ಕ್ಷಾಮ ಚೆಕ್‌ಡ್ಯಾಂ ನಿರ್ಮಾಣ ಪರಿಗಣನೆಯಲ್ಲಿ- ಜಿಲ್ಲಾಧಿಕಾರಿ

ಕುಂಬಳೆ: ಅನಂತಪುರ ಕೈಗಾರಿಕಾ ಕೇಂದ್ರದಲ್ಲಿ ನೀರಿನ ಕ್ಷಾಮವನ್ನು ಪರಿಹರಿಸಲು ಸಮೀಪದ ಜಲಮೂಲಗಳಲ್ಲಿ ಚೆಕ್ ಡ್ಯಾಂ ನಿರ್ಮಿಸುವುದು ಪರಿಗಣನೆಯಲ್ಲಿದೆ ಎಂದು ಜಿಲ್ಲಾಧಿಕಾರಿ ಕೆ. ಇಂಭಶೇಖರ್ ತಿಳಿಸಿದರು. ನಮ್ಮ ಕಾಸರಗೋಡು ಮುಖಾಮುಖಿ ಕಾರ್ಯಕ್ರಮದಲ್ಲಿ  ಕೈಗಾರಿಕಾ ಪ್ರಾಂಗಣದ ಅಸೋಸಿಯೇಶನ್ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿ ಮಾತನಾಡುತ್ತಿದ್ದರು. ಎಸ್ಟೇಟ್‌ನ ಜಲ ದೌರ್ಲಭ್ಯವನ್ನು ಪರಿಹರಿಸುವುದಕ್ಕಾಗಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಸಂಬಂಧಿಸಿದ ವಿಷಯದಲ್ಲಿ ಇರಿಗೇಷನ್ ಇಲಾಖೆಯೊಂದಿಗೆ ಮಾತುಕತೆ ನಡೆಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು. ಈ ತಿಂಗಳ ೧೩ರಂದು ವಿವಿಧ ಕೈಗಾರಿಕಾ ಕೇಂದ್ರಗಳ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ನೀರಾವರಿ, ಕೆಎಸ್‌ಇಬಿ, ಜಿಲ್ಲಾ …

ನಯನ ಗಿರೀಶ್‌ರಿಗೆ ಬದಿಯಡ್ಕದಲ್ಲಿ ಅಭಿನಂದನೆ

ಬದಿಯಡ್ಕ: ಕನ್ನಡ ಹೋರಾಟಗಾರ್ತಿ ನಯನ ಗಿರೀಶ್ ಅಡೂರು ಅವರನ್ನು ಕ.ಸಾ.ಪ. ಗಡಿನಾಡ ಘಟಕ ಮತ್ತು ಸಮತಾ ಸಾಹಿತ್ಯ ವೇದಿಕೆ ಇದರ ವತಿಯಿಂದ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಅಭಿನಂದಿಸಲಾಯಿತು. ಅಡೂರು ಸರಕಾರಿ ಹೈಸ್ಕೂಲಿನ ಕನ್ನಡ ಮಾಧ್ಯಮ ಅಧ್ಯಾಪಕ ಹುದ್ದೆಗೆ ಕನ್ನಡವರಿಯದ ಮಲೆಯಾಳ ಶಿಕ್ಷಕಿಯನ್ನು ನೇಮಿಸಿದಾಗ ಮತ್ತು ಕೋರಿಕಂಡ ಅಂಗನವಾಡಿ ಮಕ್ಕಳಿಗೆ ಮಲೆಯಾಳಿ ಶಿಕ್ಷಕಿಯನ್ನು ನೇಮಿಸಿದ ವಿರುದ್ಧ ಹೋರಾಟ ನಡೆಸಿದ್ದರು. ಹೈಕೋರ್ಟ್‌ಗೆ ದಾವೆ ಹೂಡಿ ಕನ್ನಡ ಶಿಕ್ಷಕಿಯರನ್ನು ನೇಮಕಗೊಳಿಸುವಂತೆ ಆದೇಶ ಪಡೆಯುವಲ್ಲಿ ನಯನ ಗಿರೀಶ್ ಯಶಸ್ವಿಯಾಗಿದ್ದರು. ಈ ಬಗ್ಗೆ ಸಮಾರಂಭದಲ್ಲಿ …

ಕಾರ್ಮಾರು ಕ್ಷೇತ್ರದಲ್ಲಿ ದೇವತಾ ಪ್ರತಿಷ್ಠೆ: ಮಾತೃಸಂಗಮ ಇಂದು

ಮಾನ್ಯ: ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಿನ್ನೆ ಪ್ರತಿಷ್ಠೆ, ಜೀವ ಕಲಶಾಭಿಷೇಕ, ಪ್ರತಿಷ್ಠಾ ಬಲಿ ನಡೆಯಿತು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉಪಸ್ಥಿತರಿದ್ದರು.  ಕ್ಷೇತ್ರದಲ್ಲಿ ಇಂದು ಬೆಳಿಗ್ಗೆ ಗಣಪತಿಹೋಮ, ಅಂಕುರ ಪೂಜೆ, ಸೋಪಾನ ಪೂಜೆ ನಡೆಯಿತು. 10 ಗಂಟೆಗೆ ಯಕ್ಷಗಾನ ತಾಳಮದ್ದಳೆ ಜರಗಿತು. ಅಪರಾಹ್ನ ಸಾಹಿತ್ಯ ಗಾನ ನೃತ್ಯ ವೈಭವ, ಸಂಜೆ ಮಾತೃಸಂಗಮ ನಡೆಯಲಿದ್ದು, ಒಡಿಯೂರು ಶ್ರೀ ಸಾದ್ವಿ ಮಾತಾನಂದಮಯಿ ಆಶೀರ್ವಚನ ನೀಡುವರು. ಡಾ. ಮಹೇಶ್ವರಿ ಯು. ಅಧ್ಯಕ್ಷತೆ ವಹಿಸುವರು. ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ …

ತಾನೂರಿನಿಂದ ನಾಪತ್ತೆಯಾದ ಪ್ಲಸ್ ವನ್ ವಿದ್ಯಾರ್ಥಿನಿಯರು ಮುಂಬಯಿಯಲ್ಲಿ ಪತ್ತೆ

ಮುಂಬಯಿ: ತಾನೂರಿನಿಂದ ನಾಪತ್ತೆ ಯಾಗಿದ್ದ ಇಬ್ಬರು ಪ್ಲಸ್ ವನ್ ವಿದ್ಯಾರ್ಥಿ ನಿಯರನ್ನು ಮುಂಬಯಿಯಿಂದ ಪತ್ತೆಹಚ್ಚ ಲಾಗಿದೆ. ಮುಂಬಯಿ ಛತ್ರಪತಿ ಶಿವಾಜಿ ರೈಲ್ವೇ ನಿಲ್ದಾಣದಿಂದ ಇವರನ್ನು ಪತ್ತೆಹಚ್ಚಿ ರುವುದಾಗಿ ರೈಲ್ವೇ ಪೊಲೀಸರು ತಿಳಿಸಿದ್ದಾರೆ.  ಮುಂಬಯಿಯ ಕೇರಳೀಯರ ಸೆಲೂನ್‌ಗೆ ಇವರು ತಲುಪಿರುವುದಾಗಿ ಪೊಲೀಸರಿಗೆ ಈ ಮೊದಲೇ ಮಾಹಿತಿ ಲಭಿಸಿತ್ತು. ಈ ಮಾಹಿತಿಯ ಆಧಾರದಲ್ಲಿ ನಡೆಸಿದ ತನಿಖೆಯಲ್ಲಿ ಸೆಲೂನ್ ಮಾಲಕ ಈ ವಿಷಯವನ್ನು ಖಚಿತಪಡಿಸಿದ್ದನು. ಈ ಮಧ್ಯೆ ಪೊಲೀಸರು ಮುಂಬಯಿಯ ಮಲೆಯಾಳಿ ಅಸೋಸಿಯೇಷನ್ ಕಾರ್ಯಕರ್ತರಿಗೆ ಮಾಹಿತಿ ರವಾನಿಸಿ ದ್ದರು. ವಿದ್ಯಾರ್ಥಿನಿಯರ ಜೊತೆ …

ನಾರಂಪಾಡಿ ಕ್ಷೇತ್ರ ಅಭಿವೃದ್ಧಿಗೆ ಧರ್ಮಸ್ಥಳದಿಂದ 2 ಲಕ್ಷ ರೂ. ಕೊಡುಗೆ

ನಾರಂಪಾಡಿ: ಶ್ರೀ ಕ್ಷೇತ್ರ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬದಿ ಯಡ್ಕ ವಲಯದ ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಭಿ ವೃದ್ಧಿಗೆ ಧರ್ಮಸ್ಥಳದಿಂದ ಕೊಡುಗೆಯಾಗಿ ನೀಡಿದ ೨ ಲಕ್ಷ ರೂ. ಮೊತ್ತದ ಡಿಡಿಯನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಾಸರಗೋಡು ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ ಕ್ಷೇತ್ರ ಸಮಿತಿಯವರಿಗೆ ಹಸ್ತಾಂತರಿಸಿದರು. ಈ ವೇಳೆ ಜನಜಾಗೃತಿ ವೇದಿಕೆ ಕಾರಡ್ಕ ವಲಯ ಅಧ್ಯಕ್ಷ ಸಂಜೀವ ಶೆಟ್ಟಿ ಮೊಟ್ಟೆಕುಂಜ, ಬದಿಯಡ್ಕ ವಲಯ ಮೇಲ್ವಿಚಾರಕ ಗೋಪಾಲಕೃಷ್ಣ, ಸದಸ್ಯರಾದ ಹರೀಶ್ ಗೋಸಾಡ, ಜಯರಾಮ ಪಾಟಾಳಿ, …