ಬಂದೂಕು ತೋರಿಸಿ ಬೆದರಿಸಿ ಕ್ರಷರ್ ಮೆನೇಜರ್ರ 12.30 ಲಕ್ಷ ರೂ. ಲಪಟಾವಣೆ ; ಘಟನೆ ನಡೆದ ತಾಸುಗಳೊಳಗಾಗಿ ಆರೋಪಿಗಳನ್ನು ಸೆರೆಹಿಡಿದ ಪೊಲೀಸರು
ಕಾಸರಗೋಡು: ಕ್ರಷರ್ ಮೆನೇ ಜರ್ಗೆ ಬಂದೂಕು ತೋರಿಸಿ ಬೆದರಿಸಿ ಅವರ ಕೈಯಲ್ಲಿದ್ದ 12.30 ಲಕ್ಷ ರೂ. ಒಳಗೊಂಡ ಬ್ಯಾಗ್ನ್ನು ಎಗರಿಸಿ ಪರಾರಿಯಾದ ಆರೋಪಿಗ ಳಾದ ನಾಲ್ವರನ್ನು ಪೊಲೀಸರು ನಡೆಸಿದ ಸಕಾಲಿಕ ಕಾರ್ಯಾಚರಣೆಯಲ್ಲಿ ಘಟನೆ ನಡೆದ ತಾಸುಗಳೊಳಗಾಗಿ ಬಂಧಿಸ ಲಾಗಿದೆ.ಬಿಹಾರ ಕತ್ಯಾರ್ ಜಿಲ್ಲೆಯ ಸಿಮರ್ಪುರ್ ಗ್ರಾಮದ ಬಂಕ್ ನಿವಾಸಿ ಇಬ್ರಾನ್ ಅಸ್ಲಾಂ (21), ಇದೇ ಗ್ರಾಮದ ಮೊಹಮ್ಮದ್ ಫಾರೂಕ್ (30), ಸಿಮರ್ಪುರ್ ಬರಾರಿ ಪೊಲೀಸ್ ಠಾಣೆಗೊಳಪಟ್ಟ ಹಕೀಂ ಟೋಲ್ ನಿವಾಸಿ ಮೊಹಮ್ಮದ್ ಮಾಲೀಕ್ ಅಲಿಯಾಸ್ ಎಂ.ಡಿ. ಮಾಲೀಕ್ (21) …