ನಿವೃತ್ತ ಪ್ರಾಂಶುಪಾಲ ನಿಧನ

ಮುಳಿಯಾರು: ಇರಿಯಣ್ಣಿ ನಿವಾಸಿ ನಿವೃತ್ತ ಪ್ರಾಂಶುಪಾಲ ಜಂಬೆ ಎಂ. ಮಹಾಲಿಂಗ ಭಟ್ (88) ನಿಧನ ಹೊಂದಿದರು. ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಬಳಿಕ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದರು. ಇವರ ಪತ್ನಿ ರುಕ್ಮಿಣಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಸಹೋದರ, ಸಹೋದರಿಯರು ಹಾಗೂ ಅಪಾರ ಶಿಷ್ಯ ವರ್ಗವನ್ನು ಅಗಲಿದ್ದಾರೆ.

ಅಂಡರ್‌ಪಾಸ್ ಬಳಿ ಸರ್ವೀಸ್ ರಸ್ತೆಯಲ್ಲಿ ವೇಗ ನಿಯಂತ್ರಣಕ್ಕೆ ಆಗ್ರಹ

ಉಪ್ಪಳ: ತಲಪಾಡಿಯಿಂದ ಕಾಸರಗೋಡು ತನಕ ರಾಷ್ಟಿçÃಯ ಹೆದ್ದಾರಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ಮುಕ್ಕಾಲುಭಾಗ ಕೆಲಸಗಳು ಪೂರ್ಣಗೊಂಡಿದೆ.ಅಲ್ಲಲ್ಲಿ ಸರ್ವೀಸ್ ರಸ್ತೆಗೆ ತಾಗಿಕೊಂಡು ಅಂಡರ್‌ಪಾಸ್ ನಿರ್ಮಿಸಲಾಗಿದೆ. ಆದರೆ ಅಂಡರ್ ಪಾಸ್ ಮೂಲಕ ಸರ್ವೀಸ್ ರಸ್ತೆಗೆ ಪ್ರವೇಶಿಸುವ ವೇಳೆ ಅಪಘಾತಕ್ಕೂ ಕಾರಣವಾಗುತ್ತಿರುವುದಾಗಿ ದೂರಲಾಗುತ್ತಿದೆ. ಅಂಡರ್‌ಪಾಸ್‌ನಿAದ ಬರುವ ವಾಹನಗಳಿಗೆ ಸರ್ವೀಸ್ ರಸ್ತೆಯಲ್ಲಿ ಅಪರಿಮಿತ ವೇಗದಲ್ಲಿ ಸಂಚರಿಸುವ ಬಸ್ ಸಹಿತ ಇತರ ವಾಹನಗಳು ಗಮನಕ್ಕೆ ಬಾರದೆ ಅಪಘಾತಕ್ಕೆ ಕಾರಣ ವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅಂಡರ್‌ಪಾಸ್ ಹೊಂದಿರುವ ಸರ್ವೀಸ್ ರಸ್ತೆಯಲ್ಲಿ ವೇಗ ನಿಯಂತ್ರಕವನ್ನು ಸ್ಥಾಪಿಸಬೇಕೆಂದು ಸಾರ್ವಜನಿಕರು …

ಅಡಿಕೆ ಕೃಷಿಗೆ ಡ್ರೋನ್ ಉಪಯೋಗಿಸಿ ಔಷಧಿ ಸಿಂಪಡಣೆಗೆ ಅವಕಾಶ ನೀಡಲು ಕಿಸಾನ್ ಸೇನೆ ಆಗ್ರಹ

ಕುಂಬಳೆ: ಜಿಲ್ಲೆಯ ಪ್ರಧಾನ ವಾಣಿಜ್ಯ ಬೆಳೆಯಾದ ಅಡಿಕೆ ಕೃಷಿ ವ್ಯಾಪಕ ಸಮಸ್ಯೆಗಳಲ್ಲಿ ಸಿಲುಕಿದ್ದು, ಈ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕೆಂದು ಕಿಸಾನ್ ಸೇನೆ ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದೆ. ಜಿಲ್ಲೆಯಲ್ಲಿ ಮಾತ್ರವಾಗಿ ೧೯,೫೦೦ ಹೆಕ್ಟೇರ್ ಭೂಮಿಯಲ್ಲಿ ಅಡಿಕೆ ಕೃಷಿ ನಡೆಸಲಾಗುತ್ತಿದ್ದು, ೨ ಲಕ್ಷ ಕ್ವಿಂಟಾಲ್‌ಗಿಂತ ಅಧಿಕ ಅಡಿಕೆ ಉತ್ಪಾದಿಲಾಗುತ್ತಿದೆ. ಆದರೆ ಇತ್ತೀಚೆಗಿನ ವರ್ಷಗಳಿಂದ ಹಲವು ರೋಗಗಳಿಂದಾಗಿ ಅಡಿಕೆ ಉತ್ಪಾದನೆ ಪಾತಾಳಕ್ಕೆ ಕುಸಿದಿದೆ. ಹಳದಿ ರೋಗ, ಎಲೆ ಚುಕ್ಕಿ ರೋಗ, ಹಿಂಗಾರ ಕಪ್ಪಾಗುವ ರೋಗ, ಮಹಾಳಿ ರೋಗ ಮುಂತಾದ ರೋಗಗಳಿಂದ …

ಬಸ್‌ನಲ್ಲಿ ಯುವತಿಗೆ ಲೈಂಗಿಕ ದೌರ್ಜನ್ಯ: ಯುವಕ ಸೆರೆ

ಪಾಲಕ್ಕಾಡ್: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಯುವತಿ ವಿರುದ್ಧ ಲೈಂಗಿಕ ಆಕ್ರಮಣ ನಡೆದ ಬಗ್ಗೆ ದೂರಲಾಗಿದೆ. ಆರೋಪಿಯಾದ ಬ್ಯಾಂಕ್ ನೌಕರನನ್ನು ಕಲ್ಲಡಿಕೋಡ್ ಪೊಲೀಸರು ಬಂಧಿಸಿದ್ದಾರೆ. ಪರಪ್ಪನಂಙಾಡಿ ಎಚ್‌ಡಿಎಫ್‌ಸಿ ಬ್ಯಾಂಕ್ ನೌಕರ ಕಲ್ಲಿಕೋಟೆ ಕಡಲುಂಡಿ ನಿವಾಸಿ ಮೊಹಮ್ಮದ್ ಅಶ್ರಫ್ (39) ಸೆರೆಯಾದ ವ್ಯಕ್ತಿ. ಪಾಲಕ್ಕಾಡ್‌ನಿಂದ ಕಲ್ಲಿಕೋಟೆಗೆ ತೆರಳಿದ ಬಸ್‌ನಲ್ಲಿ ಘಟನೆ ನಡೆದಿದೆ. ಒಪ್ಪಿಗೆ ಕೇಳಿ ಸಮೀಪದಲ್ಲಿ ಕುಳಿತ ಬಳಿಕ ಅಶ್ರಫ್ ದೌರ್ಜನ್ಯ ನಡೆಸಿದ್ದಾನೆನ್ನಲಾಗಿದೆ.  ಕಲ್ಲಡಿಕೋಡ್ ಠಾಣೆಗೆ ಬಸ್ ಕೊಂಡುಹೋಗಿ ದೂರು ನೀಡಲಾಗಿತ್ತು.

ಹಣಕಾಸು ಆಯೋಗದ ಜಿಲ್ಲಾ ಸಂದರ್ಶನ 10ರಂದು

ಕಾಸರಗೋಡು: ಹಣಕಾಸು ಆಯೋಗ ಈ ತಿಂಗಳ 10ರಂದು ಜಿಲ್ಲೆಗೆ ಭೇಟಿ ನೀಡಲಿದೆ. ಅಂದು ಅಪರಾಹ್ನ 2 ಗಂಟೆಗೆ ಸ್ಥಳೀಯಾಡಳಿತ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳೊಂದಿಗೆ ಆಯೋಗ ಮಾತುಕತೆ ನಡೆಸಲಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ತಿಳಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ಯೋಜನೆಯಲ್ಲಿ ಅತ್ಯುತ್ತಮ ಸೇವೆಗಾಗಿ ರಾಜ್ಯ ಮಟ್ಟದ ಪ್ರಶಸ್ತಿಗೆ ಅರ್ಹರಾದ ಜಿಲ್ಲಾಧಿಕಾರಿ ಹಾಗೂ ಅವರ ಜೊತೆಗೆ ಕಾರ್ಯನಿರ್ವಹಿಸಿ ದವರನ್ನು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ  ಅಭಿನಂದಿಸಿದರು. ಜಿಲ್ಲೆಯ 47 ಅಂಗನವಾಡಿಗಳಿಗೆ ಸ್ಥಳ ಕಂಡುಕೊಳ್ಳಲು ಇದುವರೆಗೆ …

ಕಾರ್ಮಾರು ದೇಗುಲದಲ್ಲಿ ದೇವತಾ ಪ್ರತಿಷ್ಠೆ, ಜೀವ ಕಲಶಾಭಿಷೇಕ

ಮಾನ್ಯ: ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ದೇವತಾಪ್ರತಿಷ್ಠೆ, ಜೀವ ಕಲಶಾಭಿಷೇಕ, ನಿದ್ರಾಕಲಶಾಭಿಷೇಕ, ಪ್ರತಿಷ್ಠಾ ಬಲಿ ನಡೆಯಿತು. 108 ತೆಂಗಿನಕಾಯಿ ಮಹಾಗಣಪತಿ ಹೋಮ, ಪ್ರತಿಷ್ಠಾಪಾಣಿ ಮೊದಲಾದ ವೈದಿಕ ಕಾರ್ಯಕ್ರಮಗಳು ಜರಗಿದೆ. ಸಂಜೆ ಕವಾಟಬಂಧನ, ಅಂಕುರಪೂಜೆ, ಮಂಟಪ ಸಂಸ್ಕಾರ, ಸೋಪಾನಪೂಜೆ ಮೊದಲಾದ ಕಾರ್ಯಕ್ರಮಗಳು ಜರಗಲಿದೆ. ನಿನ್ನೆ ಬೆಳಿಗ್ಗೆ ಗಣಪತಿ ಹೋಮ, ತ್ರಿಕಾಲಪೂಜೆ, ಸಂಹಾರತತ್ವ ಹೋಮ ಸಹಿತ ವಿವಿಧ ವೈದಿಕ ಕಾರ್ಯಕ್ರಮಗಳು ಜರಗಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಹಮ್ಮಾಯಿ ಯಕ್ಷಗಾನ ಕಲಾಸಂಘ ಬಾಯಾರುಪದವು ಇವರಿಂದ ಯಕ್ಷಗಾನ ತಾಳಮದ್ದಳೆ, ಭಕ್ತಿಗೀತೆ, ಶಾಸ್ತ್ರೀಯ …

ಕುಡಿಯುವ ನೀರು ರೋಗುಣುಮುಕ್ತವೆಂದು ಖಚಿತಪಡಿಸಲು ಶಾಲೆಗಳಲ್ಲಿ ಕ್ರಮ

ಹೊಸದುರ್ಗ: ಮಕ್ಕಳಿಗೆ ನೀಡುವ ಕುಡಿಯುವ ನೀರು ರೋಗಾಣುಮುಕ್ತವಾಗಿರುವುದಾಗಿ ಖಚಿತಪಡಿಸಲು ಕಯ್ಯೂರು- ಚೀಮೇನಿ ಪಂಚಾಯತ್ ಹಾಗೂ ಕುಟುಂಬಾರೋಗ್ಯ ಕೇಂದ್ರದ ನೇತೃತ್ವದಲ್ಲಿ ಶಾಲೆಗಳಲ್ಲಿ ಕುಡಿಯುವ ನೀರು ಪರಿಶೀಲನೆ ಆರಂಭಿಸಲಾ ಯಿತು. ಜಲ ಸುರಕ್ಷೆಯ ಮೂಲಕ ಕಯ್ಯೂರು ಕುಟುಂಬಾರೋಗ್ಯ ಕೇಂದ್ರದ ನೇತೃತ್ವದಲ್ಲಿ ಮೊದಲ ಹಂತದ ಪರಿಶೀಲನೆ ನಡೆಸಲಾಗಿದೆ. ಪ್ರಸ್ತುತ ಪರಿಶೀಲನೆಯಲ್ಲಿ ಬ್ಯಾಕ್ಟೀರಿಯ ಕಂಡು ಬಂದ ಆರು ಶಾಲೆಗಳಲ್ಲಿ ಪಂಚಾಯತ್ ವಾಟರ್ ಫಿಲ್ಟರ್ ಸ್ಥಾಪಿಸಿದೆ. ಫಿಲ್ಟರ್‌ನ ಮುಂದಿನ ತಪಾಸಣೆಗಳಿಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಶಾಲೆಗಳಿಗೆ ತಲುಪಿ ಮತ್ತೆ ಸ್ಯಾಂಪಲ್ ಸಂಗ್ರಹ ನಡೆಸುವರು. ಜ್ಯೂನಿಯರ್ …

ಎರಡೆಡೆಯ ಇಬ್ಬರು ಯುವತಿಯರು ನಾಪತ್ತೆ

ಕಾಸರಗೋಡು: ಎರಡು ವಿಭಿನ್ನ ಘಟನೆಗಳಲ್ಲಾಗಿ ನೀಲೇಶ್ವರ, ಚಿತ್ತಾರಿಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಇಬ್ಬರು ಯುವತಿಯರು ನಾಪತ್ತೆಯಾಗಿದ್ದಾರೆ. ಚಿತ್ತಾರಿಕಲ್ ಕುಳಿಯಿಲ್ ನಿವಾಸಿ ಅಪರ್ಣ ಸುನಿಲ್ (18) ನಿನ್ನೆ ಸಂಜೆ ನಾಪತ್ತೆಯಾಗಿದ್ದಾಳೆ. ತಾಯಿ ಚಂದ್ರಮತಿ ನೀಡಿದ ದೂರಿನಂತೆ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ. ನೀಲೇಶ್ವರ ಪೇರಾಲ್ ವಿಲ್ಲೇಜ್‌ನ ಚಾತಮತ್ ನಿವಾಸಿ ವಿಜೀಶ (27) ನಾಪತ್ತೆಯಾದ ಇನ್ನೋರ್ವೆ ಯುವತಿ. ಈಕೆ ಈ ತಿಂಗಳ 4 ರಂದು ಸಂಜೆ 3 ಗಂಟೆಗೆ ಮನೆಯಿಂದ ತೆರಳಿದ್ದು, ಬಳಿಕ ನಾಪತ್ತೆಯಾಗಿರುವುದಾಗಿ ಸಹೋದರ ವಿಜೇಶ್ ನೀಡಿದ ದೂರಿನಲ್ಲಿ …

ಮುಳಿಂಜ ಶಾಲೆಗೆ ಶಿಕ್ಷಕಿಯರಿಂದ ಊಟದ ಬಟ್ಟಲು ಕೊಡುಗೆ

ಉಪ್ಪಳ: ಮುಳಿಂಜ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾ ರ್ಥಿಗಳ ಮಧ್ಯಾಹ್ನದ ಭೋಜನಕ್ಕಾಗಿ ಸ್ಟೀಲ್ ಊಟದ ಬಟ್ಟಲುಗಳನ್ನು ಶಾಲೆಗೆ ನೂತನವಾಗಿ ಸೇರಿದ ಶಿಕ್ಷಕಿಯ ರಾದ ಐಶ್ವರ್ಯ, ಐಶಾತ್ ಸೈನಾಜ್ ಕೊಡುಗೆಯಾಗಿ ನೀಡಿದರು. ಮುಖ್ಯೋ ಪಾಧ್ಯಾಯಿನಿ ಚಿತ್ರಾವತಿ ಚಿಗುರುಪಾದೆ ಸ್ವೀಕರಿಸಿದರು. ಈ ವೇಳೆ ಜಿಲ್ಲಾ ಪಂಚಾ ಯತ್ ಸದಸ್ಯ ಗೋಲ್ಡನ್ ರಹ್ಮಾನ್, ಮಂಗಲ್ಪಾಡಿ ಪಂ. ಅಧ್ಯಕ್ಷೆ ರುಬೀನಾ  ನೌಫಲ್, ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನ ಇಕ್ಬಾಲ್, ಉಪ ಜಿಲ್ಲಾ ವಿದ್ಯಾ ಧಿಕಾರಿ ರಾಜಗೋಪಾಲ್, ಪಂ. ಸದಸ್ಯ ಅಬ್ದುಲ್ ಶರೀಫ್ …

17 ವರ್ಷದ ಬಾಲಕ ನಾಪತ್ತೆ

ಕಾಸರಗೋಡು: ನಾಯ ಮ್ಮಾರ ಮೂಲೆ ಇರ್ಫಾನಿಯ ಕಾಲೇಜಿನಲ್ಲಿ ಕಲಿಯುತ್ತಿರುವ ಪೊವ್ವಲ್‌ನ ನಿವಾಸಿ  17 ವರ್ಷದ ಬಾಲಕ ಮಾರ್ಚ್ 4ರಂದು  ಮಧ್ಯಾಹ್ನ ಬಳಿಕ ಕಾಲೇ ಜಿನಿಂದ ನಾಪತ್ತೆ ಯಾಗಿರುವುದಾಗಿ ಆತನ ತಂದೆ   ವಿದ್ಯಾ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.