ಎಸ್‌ವೈಎಸ್‌ನಿಂದ ಕುಂಬಳೆಯಲ್ಲಿ ಪ್ರಯಾಣಿಕರಿಗೆ ಇಫ್ತಾರ್ ಖೈಮ

ಕುಂಬಳೆ: ದೀರ್ಘದೂರ ಪ್ರಯಾಣಿಕರಿಗೆ ಉಪಕಾರವಾಗುವ ರೀತಿಯಲ್ಲಿ ಕುಂಬಳೆಯಲ್ಲಿ ಎಸ್‌ವೈಎಸ್ ಇಫ್ತಾಕ್ ಖೈಮ ಆರಂಭಿಸಿದೆ. ಕುಂಬಳೆ ವಲಯ ಸಮಿತಿಯ ಆಶ್ರಯದಲ್ಲಿ ಕುಂಬಳೆ ಪೇಟೆಯಲ್ಲಿ ಈ ಕೇಂದ್ರ ಕಾರ್ಯಾಚರಿಸುತ್ತಿದೆ. ರಂಜಾನ್ ವ್ರತಾಚರಣೆಯ ದಿನಗಳಲ್ಲಿ ಉಪವಾಸ ಕೊನೆಗೊಳಿಸಲು ಅಗತ್ಯವಾದ ಸಾಮಗ್ರಿಗಳು ಅಡಕವಾಗಿರುವ ಇಫ್ತಾರ್ ಕಿಟ್‌ಗಳನ್ನು ಇಲ್ಲಿಂದ ವಿತರಿಸಲಾಗುವುದು. ಕುಂಬಳೆ ಪಂಚಾಯತ್ ಉಪಾಧ್ಯಕ್ಷ ನಾಸಿರ್ ಮೊಗ್ರಾಲ್ ಉದ್ಘಾಟಿಸಿದರು. ವಲಯ ಪ್ರಧಾನ ಕಾರ್ಯದರ್ಶಿ  ಮುಹಮ್ಮದ್ ಕುಂಞಿ ಉಳುವಾರು ಮಾತನಾಡಿದರು. ಕುಂಬಳೆ ಸರ್ಕಲ್ ಪ್ರಧಾನ ಕಾರ್ಯದರ್ಶಿ ರಿಫಾಯಿ ಸಖಾಫಿ ವಂದಿಸಿದರು. ಕುಂಬಳೆ ಸರ್ಕಲ್‌ನ ಹತ್ತು ಘಟಕ …

ನಿರಂತರ ವಿದ್ಯುತ್ ಮೊಟಕು: ನಾಗರಿಕರಿಂದ ಕುಂಬಳೆ ಕೆಎಸ್‌ಇಬಿ ಕಚೇರಿಯಲ್ಲಿ ಪ್ರತಿಭಟನೆ

ಕುಂಬಳೆ: ಸಂಜೆ ಬಳಿಕ ನಿರಂತರ ವಿದ್ಯುತ್ ಮೊಟಕುಗೊಳ್ಳುವುದರಿಂದ ಸಮಸ್ಯೆಗೀಡಾದ ನಾಗರಿಕರು ನಿನ್ನೆ ರಾತ್ರಿ ಕುಂಬಳೆ ಕೆಎಸ್‌ಇಬಿ ಕಚೇರಿಯಲ್ಲಿ ಮಿಂಚಿನ ಪ್ರತಿಭಟನೆ ನಡೆಸಿದರು.  ರಾತ್ರಿ ೧೦ ಗಂಟೆ ವೇಳೆ ಕೆಎಸ್‌ಇಬಿ ಕಚೇರಿಗೆ ತಲುಪಿದ ನಾಗರಿಕರು ಮೇಣದ ಬತ್ತಿ ಉರಿಸಿ ಪ್ರತಿಭಟನೆ ನಡೆಸಿದ್ದು, ಬಳಿಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಎರಡು ದಿನಗಳೊಳಗೆ ಸಮಸ್ಯೆಗೆ ಪರಿಹಾರ ಕಾಣಬೇಕೆಂದೂ ಇಲ್ಲದಿದ್ದಲ್ಲಿ ತೀವ್ರ ಚಳವಳಿ ನಡೆಸುವುದಾಗಿ ನಾಗರಿಕರು ಮುನ್ನೆಚ್ಚರಿಕೆ ನೀಡಿದರು. ಕಳೆದ ಕೆಲವು ದಿನಗಳಿಂದ ಕುಂಬಳೆ ಭಾಗದಲ್ಲಿ ಸಂಜೆ ೫ ಗಂಟೆ ವರೆಗೆ ಪದೇ …

ನೆರೆಮನೆ ನಿವಾಸಿಗಳಾದ ನಗರಸಭೆ ಮಾಜಿ  ನೌಕರ, ವ್ಯಾಪಾರಿ ಗಂಟೆಗಳೊಳಗೆ ನಿಧನ

ಕಾಸರಗೋಡು: ನೆರೆಮನೆ ನಿವಾಸಿಗಳಾದ ಇಬ್ಬರು ಗಂಟೆಗಳ ವ್ಯತ್ಯಾಸದಲ್ಲಿ ನಿಧನಹೊಂದಿದರು. ಕಾಸರಗೋಡು ನಗರದ ಅಶೋಕನಗರ ಗಣೇಶ ನಿಲಯದ ವರದರಾಜ (60)ಎಂಬವರು ನಿನ್ನೆ ಅಪರಾಹ್ನ 3 ಗಂಟೆ ವೇಳೆ ನಗರದ ಆಸ್ಪತ್ರೆಯಲ್ಲಿ ನಿಧನಹೊಂದಿದರು. ಕಾಸರಗೋಡು ನಗರಸಭೆಯ ನಿವೃತ್ತ ನೌಕರನಾದ ಇವರು ಅಶೋಕನಗರ ಅಶೋಕ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷರೂ, ಸಾಮಾಜಿಕ ಕಾರ್ಯ ಕರ್ತ ಹಾಗೂ ಕ್ರಿಕೆಟ್ ಆಟಗಾರನೂ ಆಗಿದ್ದರು. ಮೃತರು ಪತ್ನಿ ಕೆ.ವಿ.ಉಷಾ  ಕುಮಾರಿ ಮಕ್ಕಳಾದ ಶ್ರೇಯ, ವರ್ಷ, ಅಳಿಯ ರಕ್ಷಿತ್, ಸಹೋದರರಾದ ಮೋಹನ್‌ರಾವ್, ಯಾದವೇಂದ್ರ ಯಾನೆ ಶ್ಯಾಮ್, …

ಯುವತಿ ನಾಪತ್ತೆ

ಬದಿಯಡ್ಕ: ಬದಿಯಡ್ಕ ಕಾಡ ಮನೆಯ ೨೫ರ ಹರೆಯದ ವಿವಾಹಿತ ಯುವತಿ ನಾಪತ್ತೆಯಾಗಿರುವುದಾಗಿ ಆಕೆಯ ಪತಿ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ಮಾರ್ಚ್ 3ರಂದು ಸಂಜೆ ಯಿಂದ ಆಕೆ ನಾಪತ್ತೆಯಾಗಿರು ವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಅದರಂತೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

20ರ ಯುವತಿ ನಾಪತ್ತೆ: ಪೊಲೀಸ್ ತನಿಖೆ ಆರಂಭ

ಮಂಜೇಶ್ವರ: ಚಿಕ್ಕಮ್ಮನ ಮನೆಗೆ ತೆರಳುವುದಾಗಿ ತಿಳಿಸಿ ಮನೆಯಿಂದ ಹೋದ ಯುವತಿ ನಾಪತ್ತೆಯಾಗಿರುವು ದಾಗಿ ದೂರಲಾಗಿದೆ. ಮಜಿಬೈಲು ಶ್ರೀಲಕ್ಷ್ಮಿ ನಿಲಯದ ನಿವ್ಯಶ್ರೀ (20) ನಾಪತ್ತೆಯಾದ ಯುವತಿ. ತಂದೆ ರವಿ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮಾರ್ಚ್ 2ರಂದು ಸಂಜೆ ಕರ್ನಾಟಕ ಗುರುಪುರದಲ್ಲಿರುವ ಚಿಕ್ಕಮ್ಮನ ಮನೆಗೆ ತೆರಳುತ್ತಿರುವುದಾಗಿ ಮನೆಯಲ್ಲಿ ತಿಳಿಸಿ ಹೋದ ಬಳಿಕ ವಾಪ ಸಾಗಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.

ಬಾಲಕಿಗೆ ದೌರ್ಜನ್ಯ: ಕರ್ನಾಟಕ ನಿವಾಸಿ ವಿರುದ್ಧ ಪೋಕ್ಸೋ ಕೇಸು

ಕಾಸರಗೋಡು: 17ರ ಹರೆಯದ ಬಾಲಕಿಯನ್ನು ದೌರ್ಜನ್ಯಗೈದಿರುವುದಾಗಿ ನೀಡಿದ ದೂರಿನಂತೆ ಕರ್ನಾಟಕ ನಿವಾಸಿಯಾದ ವಿದ್ಯಾರ್ಥಿ ಕಾರ್ತಿಕ್ ಎಂಬಾತನ ವಿರುದ್ಧ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. ಕಾಸರಗೋಡು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿರುವ ಬಾಲಕಿ ಹಾಗೂ ಕಾರ್ತಿಕ್  2 ವರ್ಷಗಳಿಂದ ಪ್ರೀತಿಸುತ್ತಿದ್ದರೆನ್ನಲಾಗಿದೆ. ಈ ಮಧ್ಯೆ ಬಾಲಕಿಯ ಆಭರಣಗಳನ್ನು ಈತ ವಸೂಲು ಮಾಡಿದ್ದು, ಬಳಿಕ ಅದನ್ನು ಹಿಂತಿರುಗಿಸಲಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.

ವಿದ್ಯಾರ್ಥಿಯ ಕಾಲು ಮುರಿದ ಪ್ರಕರಣ: ಇಬ್ಬರು ವಿದ್ಯಾರ್ಥಿಗಳ ವಿರುದ್ಧ ಕೇಸು

ಹೊಸದುರ್ಗ: ಟರ್ಫ್‌ನಲ್ಲಿ ಫುಟ್ಬಾಲ್ ಆಟ ನೋಡಲು ಬಂದ 9ನೇ ತರಗತಿ ವಿದ್ಯಾರ್ಥಿ ಪಳ್ಳಿಕೆರೆ ತೆಕ್ಕೇಕುನ್ನು ನಿವಾಸಿ ವಿಶಾಖ್ ಕೃಷ್ಣನ್‌ನ ಮೇಲೆ ಹಲ್ಲೆ ನಡೆಸಿ ಅದರಿಂದ ಆತ ಕಾಲಿನ ಮೂಳೆ ಮುರಿತ ಕ್ಕೊಳಗಾದ ಪ್ರಕರಣಕ್ಕೆ ಸಂಬಂಧಿಸಿ ೧೦ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳ ವಿರುದ್ಧ ಹೊಸದುರ್ಗ ಪೊಲೀಸರು ಪ್ರಕ ರಣ ದಾಖಳಿಸಿಕೊಂಡಿದ್ದಾರೆ. ಆರೋಪಿಗಳಾದ ವಿದ್ಯಾ ರ್ಥಿ ಗಳನ್ನು ಈತನಕ  ಬಂಧಿಸಲಾಗಿಲ್ಲ. ಅವರ ಹೆತ್ತವರಿಗೆ ನೋಟೀಸ್ ಜ್ಯಾರಿಗೊಳಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

ಟಿಪ್ಪರ್ ಲಾರಿ- ಆಟೋರಿಕ್ಷಾ ಢಿಕ್ಕಿ ಮೂವರಿಗೆ ಗಾಯ

ಕಾಸರಗೋಡು: ಟಿಪ್ಪರ್ ಲಾರಿ ಆಟೋ ರಿಕ್ಷಾ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಮಹಿಳೆಯರ ಸಹಿತ ಮೂರು ಮಂದಿ ಗಾಯಗೊಂಡಿದ್ದಾರೆ. ಎರಿಕ್ಕುಳಂ ನಿವಾಸಿಗಳಾದ ಎನ್. ಜಾನಕಿ (60), ಸೊಸೆ ಮೃದುಲ (30), ಆಟೋ ಚಾಲಕ ಶ್ರೀನಿವಾಸನ್ (40) ಎಂಬಿವರು ಗಾಯಗೊಂಡಿದ್ದಾರೆ. ಇವರನ್ನು ನೀಲೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಗಾಯ ತೀವ್ರಗೊಂಡ ಹಿನ್ನೆಲೆಯಲ್ಲಿ ಜಾನಕಿ ಹಾಗೂ ಮೃದುಲರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ನಿನ್ನೆ ಚಾಯೋತ್ ಶಾಲೆ ಬಳಿ ಅಪಘಾತ ಸಂಭವಿಸಿದೆ.

ಕಣಜದ ಹುಳು ದಾಳಿ: ವೃದ್ದ ಮೃತ್ಯು

ಮಂಗಲ್ಪಾಡಿ: ನಡೆದು ಹೋಗುತ್ತಿದ್ದ ವೇಳೆ ಕಣಜದ ಹುಳು ಚುಚ್ಚಿ ಚಿಕಿತ್ಸೆಯಲ್ಲಿದ್ದ ವ್ಯಕ್ತಿ ನಿಧನ ಹೊಂದಿದ್ದಾರೆ. ಪುಳಿಕುತ್ತಿ ಸಮೀಪದ ಅಗರ್ತಿಮೂಲೆ ನಿವಾಸಿ ರಾಧಾಕೃಷ್ಣ (62) ನಿನ್ನೆ ಅಪರಾಹ್ನ ನಿಧನ ಹೊಂದಿದ್ದಾರೆ. ಸೋಮವಾರ ಬೆಳಿಗ್ಗೆ ಮನೆಯಿಂದ ನಡೆದು ಹೋಗುತ್ತಿದ್ದಾಗ ಸೋಂಕಾಲು ತಿರುವಿನಲ್ಲಿ ಕಣಜದ ಹುಳು ದಾಳಿ ಮಾಡಿದೆ. ಇವರನ್ನು ಪುತ್ರ ಹಾಗೂ ಸ್ಥಳೀಯರು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಿ ಮನೆಗೆ ಕರೆತರಲಾಗಿತ್ತು. ವಿಶ್ರಾಂತಿಯಲ್ಲಿದ್ದ ಇವರು ನಿನ್ನೆ ಅಪರಾಹ್ನ ಅಸ್ವಸ್ಥಗೊಂಡಿದ್ದು, ಅಲ್ಪ ಹೊತ್ತಿನಲ್ಲಿ ನಿಧನ ಸಂಭವಿಸಿದೆ. ಮೃತರು ಮಕ್ಕಳಾದ …

ಬಾಂಗ್ಲಾ ಪ್ರಜೆಯನ್ನು ಕಸ್ಟಡಿಗೆ ಬಿಟ್ಟುಕೊಡುವಂತೆ ಕೋರಿ ಪೊಲೀಸರಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ

ಕಾಸರಗೋಡು: ಹೊಸದುರ್ಗ ಬಲ್ಲಾ ಅವಿ ಪೂಡಂಕಲ್ಲಿನ ಬಾಡಿಗೆ ಕ್ವಾರ್ಟರ್ಸ್‌ವೊಂದರಲ್ಲಿ ಅಕ್ರಮವಾಗಿ ನೆಲೆಸಿ ಬಳಿಕ ಪೊಲೀಸರಿಂದ ಬಂಧಿತನಾಗಿ ನ್ಯಾಯಾಂಗ ಬಂಧನಕ್ಕೊಳಗಾದ ಬಾಂಗ್ಲಾದೇಶದ ಪ್ರಜೆ ಶಾಬೀರ್ ಶೇಕ್ ನಾಬಿಯಾ ಅಲಿಯಾಸ್ ಅತಿಯಾರ್ ರಹ್ಮಾನ್ (22)ನನ್ನು ಹೆಚ್ಚಿನ ತನಿಖೆಗಾಗಿ ತಮ್ಮ ಕಸ್ಟಡಿಗೆ ಬಿಟ್ಟುಕೊಡುವಂತೆ ಕೋರಿ ಹೊಸದುರ್ಗ ಪೊಲೀಸರು ಹೊಸ ದುರ್ಗ ಮೆಜಿಸ್ಟ್ರೇಟ್  ನ್ಯಾಯಾಲಯ (1) ಅರ್ಜಿ ಸಲ್ಲಿಸಿದ್ದಾರೆ. ಎರ್ನಾಕುಳಂ ಪೆರುಂಬಾವೂರು ನಿಂದ ಇತ್ತೀಚೆಗೆ ೫೦ಕ್ಕೂ ಹೆಚ್ಚು ಮಂದಿ ಬಾಂಗ್ಲಾ ದೇಶದ ಪ್ರಜೆಗಳನ್ನು   ಅಲ್ಲಿನ ಪೊಲೀಸರು ಬಂಧಿಸಿದ್ದರು. ಹೀಗೆ ಅಲ್ಲಿ ಬಂಧಿತರಾದ ಬಾಂಗ್ಲಾದೇಶಿಗರೊಂದಿಗೆ …