ಅಪಾರ್ಟ್‌ಮೆಂಟ್‌ನಿಂದ 3 ಲಕ್ಷರೂ., ಐದು ಪವನ್ ಚಿನ್ನ ಕಳವು: ಕೇಸು ದಾಖಲು

ಕಾಸರಗೋಡು: ಅಪಾರ್ಟ್ ಮೆಂಟ್‌ನಿಂದ ನಗ-ನಗದು ಕಳವುಗೈಯ್ಯಲಾಗಿದೆ ಯೆಂದು ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ. ಕಾಸರಗೋಡು ಕೋಟೆ ರಸ್ತೆ ರೋಯಲ್ ಪೋರ್ಟ್ ಅಪಾ ರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ  ರೆಹ್ಮತ್ ನಿಶಾಫ್ (34) ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. 2024 ಡಿಸೆಂಬರ್ 24ರ ಮೊದಲ ಯಾವುದೋ ದಿನ ತಮ್ಮ ಅಪಾರ್ಟ್‌ಮೆಂಟ್‌ನಿಂದ 3 ಲಕ್ಷ ರೂ. ನಗದು ಹಾಗೂ ಐದು ಪವನ್ ಚಿನ್ನದೊಡವೆ ಕಳವುಗೈದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ರಹ್ಮತ್ ನಿಶಾಫ್ ಆರೋಪಿಸಿದ್ದಾರೆ. …

ಗೂಡಿಗೆ ಬಿದ್ದ ಹೆಣ್ಣು ಚಿರತೆ: ಸಂಗಾತಿಯನ್ನು ಕಳೆದುಕೊಂಡ ಗಂಡು ಚಿರತೆಯಿಂದ ಭೀತಿ ಸೃಷ್ಟಿ

ಕಾಸರಗೋಡು: ಬೇಡಡ್ಕ, ಪುಲ್ಲೂರು ಪೆರಿಯ ಪಂಚಾಯತ್‌ಗಳಲ್ಲಿ ಇತ್ತೀಚೆಗೆ ಕಂಡು ಬಂದ ಚಿರತೆಯನ್ನು ಬಲೆಗೆ ಬೀಳಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಸ್ಥಾಪಿಸಿ ದರು. ಕೆಲವೇ ದಿನಗಳ ಹಿಂದೆ ೫ ವರ್ಷದ ಹೆಣ್ಣು ಚಿರತೆ ಸೆರೆಯಾದ ಕೊಳತ್ತೂರು, ನಿಡುವೋಟು, ಆಲವುಂಗಾಲ್‌ನಲ್ಲಿ ಇತ್ತೀಚೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಸ್ಥಾಪಿಸಿದ್ದಾರೆ. ಇಲ್ಲಿ ಸ್ಥಾಪಿಸಿರುವ ಕ್ಯಾಮರಾದಲ್ಲಿ ಸಾಮಾನ್ಯ ೮ ವರ್ಷ ಪ್ರಾಯದ ಗಂಡು ಚಿರತೆಯ ಸ್ಪಷ್ಟವಾದ ಚಿತ್ರಗಳು ದಾಖಲಾಗಿತ್ತು. ಇದರ ಆಧಾರದಲ್ಲಿ ಗೂಡು ಇಲ್ಲಿ ಸ್ಥಾಪಿಸಲಾಗಿದೆ. ಈ ಸ್ಥಳದಲ್ಲಿ ಎರಡು ಚಿರತೆಗಳಿರುವುದಾಗಿ …

ಕರ್ನಾಟಕದಲ್ಲಿ ವಿದ್ಯುತ್ ನಿಯಂತ್ರಣ : ಕಾಸರಗೋಡು- ಮಂಜೇಶ್ವರ ತಾಲೂಕುಗಳಲ್ಲಿ ಲೋಡ್ ಶೆಡ್ಡಿಂಗ್ ; ಕಂಗಾಲಾದ ಎಸ್‌ಎಸ್‌ಎಲ್‌ಸಿ- ಹೈಯರ್ ಸೆಕೆಂಡರಿ ಪರೀಕ್ಷಾ ವಿದ್ಯಾರ್ಥಿಗಳು

ಕಾಸರಗೋಡು: ಕರ್ನಾಟಕದಲ್ಲಿ ವಿದ್ಯುತ್ ಲೈನ್‌ಗಳ ದುರಸ್ತಿ ಕೆಲಸದ ಹೆಸರಲ್ಲಿ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಏರ್ಪಡಿಸಲಾಗಿದೆ. ಇದರಂತೆ ವಿದ್ಯಾನಗರ, ಮುಳ್ಳೇರಿಯ, ಮಂಜೇಶ್ವರ ಮತ್ತು ಕುಬಣೂರು 110 ಕೆ.ವಿ ಸೇರಿದಂತೆ ಒಟ್ಟು ಎಂಟು ವಿದ್ಯುತ್ ಸಬ್ ಸ್ಟೇಷನ್‌ಗಳ ವ್ಯಾಪ್ತಿಗೊಳಪಟ್ಟ ಪ್ರದೇಶಗಳಲ್ಲಿ ನಿನ್ನೆ ಸಂಜೆಯಿಂದ ದೈನಂದಿನ ಅರ್ಧ ತಾಸು ಲೋಡ್‌ಶೆಡ್ಡಿಂಗ್ ಏರ್ಪಡಿಸಲಾಗಿದೆ. ಇದು ಮುಂದಿನ ಐದು ದಿನಗಳ ತನಕ ಮುಂದುವರಿಯಲಿದೆ ಎಂದು ಟ್ರಾನ್ಸ್ ವಿದ್ಯುತ್ ಟ್ರಾನ್ಸ್‌ಮಿಷನ್ ಡಿವಿಷನ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಸಮಯ ವ್ಯಾಪ್ತಿ …

ಜಿಲ್ಲಾ ಎನ್‌ಫೋರ್ಸ್‌ಮೆಂಟ್ ತಂಡದಿಂದ ವಿವಿಧ ಭಾಗಗಳಲ್ಲಿ ತ್ಯಾಜ್ಯ ತಪಾಸಣೆ: ಪುತ್ತಿಗೆಯಲ್ಲಿ ವ್ಯಾಪಾರ ಸಂಸ್ಥೆಗಳಿಗೆ ದಂಡ

ಕಾಸರಗೋಡು: ನಾಡು ಹಾಗೂ ನಗರವನ್ನು ತ್ಯಾಜ್ಯಮುಕ್ತ ಗೊಳಿಸುವ ಉದ್ದೇಶದಿಂದ ತ್ಯಾಜ್ಯ ಸಂಸ್ಕರಣೆ ವಲಯದ ಉಲ್ಲಂಘನೆ ವಿರುದ್ಧ ಕಠಿಣ ಕ್ರಮಗಳೊಂದಿಗೆ ಸ್ಥಳೀ ಯಾಡಳಿತ ಇಲಾಖೆಯ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ಜಿಲ್ಲೆಯ ವಿವಿಧ ಭಾಗಗಳಲ್ಲಿ ತಪಾಸಣೆ ನಡೆಸುತ್ತಿದೆ. ಪುತ್ತಿಗೆ ಪಂಚಾಯತ್‌ನ ಬಾಡೂರು ಪೇಟೆಯಲ್ಲಿ ನಡೆಸಿದ ತಪಾಸಣೆ ಯಲ್ಲಿ ವಾಣಿಜ್ಯ ವ್ಯಾಪಾರ ಸಂಸ್ಥೆಗಳ ಪರಿಸರಗಳಲ್ಲಿ ತ್ಯಾಜ್ಯಗಳನ್ನು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಸ್ಟೋರ್‌ಗಳು, ಕಾಂಪ್ಲೆಕ್ಸ್ ಎಂಬಿವುಗಳ ಮಾಲಕರಿಗೆ 15,000 ರೂ.ನಂತೆ ದಂಡ ಹೇರಲಾಗಿದೆ. ಬಾಡೂರಿನಲ್ಲಿ ಬಸ್‌ಗಳನ್ನು ನಿಲುಗಡೆಗೊಳಿಸುವ ಸ್ಥಳದಲ್ಲಿ ಬಸ್ ತೊಳೆದ ಬಳಿಕ ತ್ಯಾಜ್ಯಗಳನ್ನು …

ನಿಧನ

ಪೆರ್ಲ: ಶೇಣಿ ಕಾವುತ ಮೂಲೆ  ನಿವಾಸಿ  ಮಾಂಕು    (85) ಎಂಬ ವರು  ನಿಧನ ಹೊಂದಿದರು.  ಇವರ ಪತ್ನಿ ಕಮಲ ಈ ಹಿಂದೆ ನಿಧನರಾಗಿದ್ದಾರೆ. ಮೃತರು ಮಕ್ಕಳಾದ ಆನಂದ, ವಸಂತ, ಲೀಲ,ಉಷಾ, ವಸಂತಿ, ರಘು, ಅಳಿಯ-ಸೊಸೆಯಂದಿರಾದ ಕೃಷ್ಣ, ಸದಾನಂದ, ಲಕ್ಷ್ಮಿ, ವನಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.  ಇನ್ನೋರ್ವ ಅಳಿಯ ಸಂಜೀವ ಎಂಬವರು ಈ ಹಿಂದೆ ನಿಧನರಾಗಿದ್ದಾರೆ.

ನಿಧನ

ಪೆರ್ಲ: ಬಜಕೂಡ್ಲು ನಿವಾಸಿ ಕೊರಗಪ್ಪ ಪೂಜಾರಿ ಯವರ ಪತ್ನಿ ಲೀಲಾವತಿ (60) ಸ್ವಗೃಹದಲ್ಲಿ ನಿಧನ ಹೊಂದಿದರು. ಉದ್ಯೋಗ ಖಾತರಿ ಯೋಜನೆ ಕಾರ್ಮಿ ಕೆಯಾಗಿದ್ದರು. ಮೃತರು ಪತಿ, ಮಕ್ಕಳಾದ ಪ್ರದೀಪ, ಅಶ್ವತ್ಥ್, ಯಶೋಧ, ಸೊಸೆಯಂದಿರಾದ ಸೌಮ್ಯ, ರೇಶ್ಮಾ, ಅಳಿಯ ಕಿಶೋರ್ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಧರ್ಮದ ಚೌಕಟ್ಟು ಮಾನವನನ್ನು ಮಾಧವನ್ನಾಗಿಸುತ್ತದೆ- ಸುಬ್ರಹ್ಮಣ್ಯಶ್ರೀ

ಮಾನ್ಯ: ಜಗತ್ತಿನ ಜೀವ ಜಾಲಗಳಲ್ಲಿ ಎಲ್ಲವೂ ಸಮಾನವಾಗಿದ್ದರು ಧರ್ಮಾಧರಿತ ಜೀವನ ನಡೆಸುವ ಒಂದಂಶದ ಹೆಚ್ಚುಗಾರಿಕೆಯಿಂದ ಮನುಷ್ಯ ಇತರವುಗಳಿಗಿಂತ ಶ್ರೇಷ್ಟನಾಗಿ ಗುರುತಿಸಲ್ಪಡುತ್ತಿದ್ದಾನೆ. ಧರ್ಮದ ಚೌಕಟ್ಟು ಮಾನವನನ್ನು ಮಾಧವನ್ನಾಗಿ ಮಾಡುತ್ತದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು. ಮಾನ್ಯ ಕಾರ್ಮಾರು ಶ್ರೀ ಮಹಾವಿಷ್ಣು ದೇವಾಲಯದಲ್ಲಿ ನಡೆಯುತ್ತಿರುವ ಪುನರ್‌ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಯುವ ಸಂಗಮದಲ್ಲಿ ಅವರು ಆಶೀರ್ವಚನ ನೀಡಿದರು. ಶ್ರೀ ಮಹಾವಿಷ್ಣು ಯುವಕ ವೃಂದದ ಅಧ್ಯಕ್ಷ ವಿಜಯ ಕುಮಾರ್ ಮಾನ್ಯ ಅಧ್ಯಕ್ಷತೆ ವಹಿಸಿದರು. ಕೊಲ್ಲೂರು …

ವರ್ಕಾಡಿ: ಸಂಸ್ಮರಣೆ, ಇಫ್ತಾರ್ ಕೂಟ

ಮಂಜೇಶ್ವರ: ದಿ| ಶರೀಫ್ ಅರಿಬೈಲು ತೃತೀಯ ಸಂಸ್ಮರಣಾ ಕಾರ್ಯಕ್ರಮ ಹಾಗೂ ಇಫ್ತಾರ್ ಕೂಟ ವರ್ಕಾಡಿ ಬೇಕರಿ ಜಂಕ್ಷನ್ ಬಳಿಯ ಮುಹಿಯುದ್ದೀನ್ ಜುಮಾ ಮಸೀದಿ ಪರಿಸರದಲ್ಲಿ ನಡೆಯಿತು. ಯೂತ್ ಕಾಂಗ್ರೆಸ್ ಮಂಜೇಶ್ವರ ಅಸೆಂಬ್ಲಿ ಸಮಿತಿ ಅಧ್ಯಕ್ಷ ಜುನೈದ್ ಉರ್ಮಿ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಅಬೂಸಾಲಿ ಅಧ್ಯಕ್ಷತೆ ವಹಿಸಿದರು. ಯೂತ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಆರಿಫ್ ಮಚ್ಚಂಪಾಡಿ ಪ್ರಧಾನ ಭಾಷಣ ಮಾಡಿದರು. ಹರ್ಷಾದ್ ವರ್ಕಾಡಿ, ಎಸ್. ಅಬ್ದುಲ್ ಖಾದರ್ ಹಾಜಿ, ಮೊಹಮ್ಮದ್ ಬಿ.ಕೆ., ಸದಾಶಿವ ಪೊಯ್ಯತ್ತಬೈಲು, ಖಲೀಲ್ ಬಜಾವಲ್, ಮೊಹಮ್ಮದ್ …

ಪ್ರೇಯಸಿಯನ್ನು ಕೊಂದು ಪ್ರೇಮಿ ಆತ್ಮಹತ್ಯೆ

ಬೆಳಗಾವಿ: ಪ್ರೇಯಸಿಯನ್ನು ಹತ್ಯೆಗೈದು ಪ್ರೇಮಿಯೂ ಸಾವಿಗೆ ಶರಣಾದ ಘಟನೆ ಜಿಲ್ಲೆಯ ಶಹಾಪುರ ನಾಥಪೈ ಸರ್ಕಲ್‌ನಲ್ಲಿ ನಡೆದಿದೆ. ಬೆಳಗಾವಿ ಯಲ್ಲೂರ ಗ್ರಾಮದ ಪ್ರಶಾಂತ ಕುಂಡೇಕರ್ (29), ಐಶ್ವರ್ಯ ಲೋಹರ ಮೃತಪಟ್ಟವರು. ಯುವತಿಯ ಚಿಕ್ಕಮ್ಮನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಘಟನೆ ನಡೆದಿದೆ. ಐಶ್ವರ್ಯಳನ್ನು ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆಗೈದ ಬಳಿಕ ತನ್ನ ಕುತ್ತಿಗೆಗೆ ಇರಿದುಕೊಂಡು ಯುವಕ ಸಾವಿಗೆ ಶರಣಾಗಿದ್ದಾನೆ. ಕಳೆದೊಂದು ವರ್ಷದಿಂದ ಇವರಿಬ್ಬರೂ ಪ್ರೀತಿಸುತ್ತಿದ್ದರೆನ್ನಲಾಗಿದೆ. ಪ್ರಶಾಂತ್ ಪೈಂಟರ್ ಆಗಿದ್ದಾನೆ. ನಗರ ಪೊಲೀಸ್ ಆಯುಕ್ತ ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ …

ಮುಳ್ಳುಹಂದಿ ಆಕ್ರಮಣ : ಪ್ಲಸ್‌ಟು ವಿದ್ಯಾರ್ಥಿಗೆ ಗಾಯ

ಕಣ್ಣೂರು: ವಟ್ಟಿಪುರಂ ವೆಳ್ಳಾನಪೊಯಿಲ್‌ನಲ್ಲಿ ಮುಳ್ಳುಹಂದಿಯ ಆಕ್ರಮಣದಿಂದ ವಿದ್ಯಾರ್ಥಿ ಗಾಯಗೊಂಡನು. ಪ್ಲಸ್‌ಟು ವಿದ್ಯಾರ್ಥಿಯಾದ ವಟ್ಟಿಪುರ ಬಳಿಯ ಮಾಣಿಕ್ಕೋತ್ ವಯಲ್ ನಿವಾಸಿ ಮುಹಮ್ಮದ್ ಶಾದಿಲ್ ಗಾಯಗೊಂಡಿರುವುದು. ನಿನ್ನೆ ಮುಂಜಾನೆ ಮಸೀದಿಯಿಂದ ತಂದೆಯ ಜೊತೆ ಹಿಂತಿರುಗುವಾಗ ಮುಳ್ಳುಹಂದಿ ಆಕ್ರಮಣ ನಡೆಸಿದೆ. ಇದರಿಂದ ಇವರು ಸಂಚರಿಸಿದ ಸ್ಕೂಟರ್ ಮಗುಚಿತ್ತು. ಶಾಲಿದ್‌ನ ಶರೀರದಲ್ಲಿ 12ರಷ್ಟು ಮುಳ್ಳುಗಳು  ಚುಚ್ಚಿಕೊಂಡಿವೆ. ಅಂಗೈಯಲ್ಲಿ ಚುಚ್ಚಿದ ಮುಳ್ಳು ಇನ್ನೊಂದು ಬದಿಯಿಂದ ಹೊರಬಂದಿದೆ. ವಿದ್ಯಾರ್ಥಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.