ಗೋವಾದಲ್ಲಿ ಕೆಲಸಕ್ಕೆ ತೆರಳಿದ ಅಡೂರು ನಿವಾಸಿ ನಾಪತ್ತೆ

ಮುಳ್ಳೇರಿಯ: ಗೋವಾದ ರಬ್ಬರ್ ತೋಟದಲ್ಲಿ ಕೆಲಸಕ್ಕೆಂದು ತೆರಳಿದ ಅಡೂರು ನಿವಾಸಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಅಡೂರು ನಾಗತ್ತುಮೂಲೆ ನಿವಾಸಿ ಕಣ್ಣನ್ ಎಂಬವರ ಪುತ್ರ ಮರುವನ್ (45) ನಾಪತ್ತೆಯಾದ ವ್ಯಕ್ತಿ.  ಈ ತಿಂಗಳ 17ರಂದು ಇತರ ಏಳು ಮಂದಿಯೊಂದಿಗೆ ಮರುವನ್ ಗೋವಾಕ್ಕೆ ಕೆಲಸಕ್ಕೆಂದು ತೆರಳಿದ್ದರು. ಈ ಮಧ್ಯೆ ಓರ್ವನಿಗೆ ಇತ್ತೀಚೆಗೆ ಅಸೌಖ್ಯ ಕಾಣಿಸಿಕೊಂಡಿತ್ತೆನ್ನಲಾಗಿದೆ. ಆತನನ್ನು ಕರೆದುಕೊಂಡು ಮರುವನ್  ಗೋವಾದಿಂದ ಊರಿಗೆ  ಹೊರಟಿದ್ದರು. ಈ ವೇಳೆ ಮಡ್ಗೋವಾಕ್ಕೆ ತಲುಪಿದಾಗ ಮರುವನ್ ನಾಪತ್ತೆಯಾಗಿರುವುದಾಗಿ ಹೇಳಲಾಗುತ್ತಿದೆ.  ಅವರ ಜತೆಗಿದ್ದ ವ್ಯಕ್ತಿ  ಊರಿಗೆ ತಲುಪಿದ …

ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ಲಾಟರಿ ಏಜೆಂಟ್ ನಿಧನ

ನೀರ್ಚಾಲು: ಕೊಲ್ಲಂಗಾನದ ಕ್ವಾರ್ಟರ್ಸ್‌ನಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದ ಲಾಟರಿ ಏಜೆಂಟ್ ಮೃತಪಟ್ಟರು. ಪಾಲಕ್ಕಾಡ್ ಪತ್ತಿಪಾಲಂ ನಿವಾಸಿ ಎನ್.ಟಿ. ಪ್ರಕಾಶನ್ (67) ಮೃತ ವ್ಯಕ್ತಿ. 12 ವರ್ಷಗಳಿಂದ ಕೊಲ್ಲಂಗಾನದ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಇವರು ಲಾಟರಿ ಮಾರಾಟ ನಡೆಸುತ್ತ್ತಿದ್ದರು.  ಕೆಲವು ತಿಂಗಳಿಂದ ಮಧುಮೇಹ ಸಂಬಂಧ ಚಿಕಿತ್ಸೆಯಲ್ಲಿದ್ದರು. ನಿನ್ನೆ ಬೆಳಿಗ್ಗೆ ಇವರು ಕ್ವಾರ್ಟರ್ಸ್‌ನಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದಿದ್ದು, ಕೂಡಲೇ ಸ್ನೇಹಿತರು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದರು. ರಾತ್ರಿ ವೇಳೆ ಪ್ರಕಾಶನ್ ನಿಧನಹೊಂದಿದರು.  ಮೃತರು ಪತ್ನಿ ವತ್ಸಲ, ಪುತ್ರ ಪ್ರಸಾದ್, ಸಹೋದರ ರಾದ …

ಮತಾಂತರ, ಮಾನವ ಕಳ್ಳ ಸಾಗಾಟದ ಆರೋಪದಂತೆ ಫತ್ತೀಸ್‌ಘಡ್‌ನಲ್ಲಿ ಕೇರಳದ ಇಬ್ಬರು ಕ್ರೈಸ್ತ ಭಗಿನಿಯರ ಸೆರೆ; ಕೇರಳದ ಸಂಸದರಿಂದ ಸಂಸತ್‌ನಲ್ಲಿ ಪ್ರತಿಭಟನೆ

ನವದೆಹಲಿ: ಮತಾಂತರಗೊಳಿಸ ಲೆತ್ನ ಹಾಗೂ ಮಾನವ ಕಳ್ಳ ಸಾಗಾಟದ ಆರೋಪದಂತೆ ಕೇರಳದ ಇಬ್ಬರು ಕ್ರೈಸ್ತ ಭಗಿನಿಯರನ್ನು ಛತ್ತೀಸ್‌ಘಡ್‌ನಲ್ಲಿ ಅಲ್ಲಿನ ಪೊಲೀಸರು ಬಂಧಿಸಿ  ನ್ಯಾಯಾಂಗ ಬಂಧನದಲ್ಲಿರಿಸಿರುವುದನ್ನು ಪ್ರತಿಭಟಿಸಿ ಕೇರಳದ ಸಂಸದರು ಇಂದು ಬೆಳಿಗ್ಗೆ ಸಂಸತ್‌ನ ಹೊರಗೆ ತೀವ್ರ ಪ್ರತಿಭಟನೆ ನಡೆಸಿದರು. ಮಾತ್ರವಲ್ಲ ಸದನದ ಇಂದಿನ ಎಲ್ಲಾ ಕಲಾಪಗಳನ್ನು ಬದಿಗಿರಿಸಿ ಕ್ರೈಸ್ತ ಭಗಿನಿಯರ ಬಂಧನದ ಬಗ್ಗೆ ಸಮಗ್ರ ಚರ್ಚೆ ನಡೆಸಬೇಕೆಂದು ಆಗ್ರಹಿಸಿ ಇಂಡಿಯಾ ಒಕ್ಕೂಟದ ಕೇ ರಳದ ಸಂಸದರು ಮತ್ತು ಸಿಪಿಎಂ ಸಂಸದರು ಸಂಸತ್‌ನಲ್ಲಿ ಇಂದು ತುರ್ತು ಗೊತ್ತುವಳಿ ಮಂಡಿಸಿದ್ದಾರೆ. …

ರೌದ್ರಾವತಾರ ತಾಳಿದ ಕಡಲ್ಕೊರೆತ: ಮಣಿಮುಂಡ, ಶಾರದಾ ನಗರ ಸಹಿತ ವಿವಿಧ ತೀರ ಪ್ರದೇಶದ ಜನರು ಆತಂಕದಲ್ಲಿ; ಮನೆ, ರಸ್ತೆ ನೀರು ಪಾಲಾಗಿ ಬದುಕು ಸಂಕಷ್ಟ

ಉಪ್ಪಳ: ಶಾರದಾನಗರದಿಂದ ಹನುಮಾನ್ ನಗರ, ಐಲ ಕಡಪ್ಪುರ, ಪೆರಿಂಗಾಡಿ ವರೆಗಿನ ಸುಮಾರು ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ತೀವ್ರ ಕಡಲ್ಕೊರೆತ ಉಂಟಾಗಿದ್ದು, ಇಲ್ಲಿ ಮೂರು ವರ್ಷದ ಹಿಂದೆ ನಿರ್ಮಿಸಿದ ತಡೆಗೋಡೆ ಸಮುದ್ರ ಪಾಲಾಗಿದೆ. 2018ರಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಿಂದ 4.99 ಕೋಟಿ ರೂ. ವ್ಯಯಿಸಿ ನಿರ್ಮಿಸಲಾದ ಕುರ್ಚಿಪಳ್ಳ-ಮಣಿಮುಂಡ ರಸ್ತೆಯೂ ಸಂಪೂರ್ಣ ಸಮುದ್ರ ಪಾಲಾಗಿದೆ. ಇದರ ಜೊತೆಯಲ್ಲಿ ನಬಾರ್ಡ್‌ನ ಸಹಾಯದಿಂದ ನಿರ್ಮಿಸಿದ ಹನುಮಾನ್ ನಗರ ರಸ್ತೆಯೂ ನೀರು ಪಾಲಾಗಿದೆ. ಸುಮಾರು ೪೦೦ಕ್ಕೂ ಮೀನು ಕಾರ್ಮಿಕರ ಕುಟುಂಬಗಳು ಈ ಪರಿಸರದಲ್ಲಿದ್ದು, …

ಎಂಡಿಎಂಎ ಉಪಯೋಗಿಸುತ್ತಿದ್ದ ಮೂರು ಮಂದಿ ಸೆರೆ

ಮಂಜೇಶ್ವರ: ಎಂಡಿಎಂಎ ಉಪಯೋಗಿಸುತ್ತಿದ್ದ ಮೂರು ಮಂದಿಯನ್ನು ಶನಿವಾರ ಮಂಜೇಶ್ವರ ಪೊಲೀಸರು ವಿವಿಧೆಡೆಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಶನಿವಾರ ಬೆಳಿಗ್ಗೆ ಹೊಸಂಗಡಿ ಬಸ್ ತಂಗುದಾಣದ ಬಳಿಯಿಂದ ಗುಡ್ಡೆ ಮಠ ನಿವಾಸಿ ಶರತ್ (32), ಮಧ್ಯಾಹ್ನ ಕುಂಜತ್ತೂರು ಬಸ್ ತಂಗುದಾಣ ಬಳಿಯಿಂದ ಕಾಡಿಯಾರ್ ನಿವಾಸಿ ಹನೀಫ್ ಎ. (42), ತಲಪಾಡಿ ಬಸ್ ತಂಗುದಾಣ ಬಳಿಯಿಂದ ಮಂಜೇಶ್ವರ ವಲಿಯವಳಪ್ ಬದರಿಯ ಮಸೀದಿ ಬಳಿಯ ಮೊಹಮ್ಮದ್ ಅಲಿಯಾಸ್ ಪಲ್ಲಕಳಂ (40)ನನ್ನು ಸೆರೆ ಹಿಡಿದಿರುವು ದಾಗಿ ಪೊಲೀಸರು ತಿಳಿಸಿದ್ದಾರೆ. ಇವ ರಿಂದ ಎಂಡಿಎಂಎ ಉಪಯೋಗಿಸುತ್ತಿದ್ದ …

ಕಡಿದು ಬಿದ್ದ ವಿದ್ಯುತ್ ತಂತಿಯಿಂದ ಶಾಕ್ ತಗಲಿ ರಾಜ್ಯದ ಮೂರೆಡೆಗಳಲ್ಲಾಗಿ ವಿದ್ಯಾರ್ಥಿ ಸೇರಿ ಮೂವರು ಮೃತ್ಯು

ಕಾಸರಗೋಡು: ಕಡಿದು ಬಿದ್ದ ವಿದ್ಯುತ್ ತಂತಿಯಿಂದ ಶಾಕ್ ತಗಲಿ ವಿವಿಧೆಡೆಗಳಲ್ಲಿ ಮೂರು ಮಂದಿ ಧಾರುಣವಾಗಿ ಸಾವನ್ನಪ್ಪಿದ ಘಟನೆ ನಿನ್ನೆ ನಡೆದಿದೆ. ಮಲಪ್ಪುರಂ ವಂಙಾರ ಎಂಬಲ್ಲಿ ಸ್ನೇಹಿತರ ಜೊತೆ ನಿನ್ನೆ ಸಂಜೆ ಸ್ನಾನಕ್ಕೆಂದು ತೋಡಿನ ನೀರಿಗಿಳಿದ ಅಲ್ಲಿನ ನಿವಾಸಿ ವಿದ್ಯಾರ್ಥಿ ಅಬ್ದುಲ್ ವದೂದ್ (17) ಅಲ್ಲೇ ಕಡಿದು ಬಿದ್ದಿದ್ದ ವಿದ್ಯುತ್ ತಂತಿಯಿಂದ ಶಾಕ್ ತಗಲಿ ದಾರುಣವಾಗಿ ಸಾವನ್ನಪ್ಪಿದನು. ಮೃತನು ವಂಙಾರ ಇಹ್‌ಸಾನ್ ಇಂಗ್ಲಿಷ್ ಮಾಧ್ಯಮ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ. ಇದೇ ರೀತಿ ತಿರುವನಂತಪುರ ಆಟಿಂಗಾಲ್‌ನ ಅಲಂಕೋಡ್ ಕುರುವಿಳ …

ಸಮುದ್ರದಲ್ಲಿ ನಾಪತ್ತೆಯಾದ ಯುವಕನ ಮೃತದೇಹ ಪತ್ತೆ

ಕಾಸರಗೋಡು: ಸ್ನೇಹಿತರೊಂದಿಗೆ ಸಮುದ್ರಕ್ಕಿಳಿದ ವೇಳೆ ಅಲೆಗೆ ಸಿಲುಕಿ ನಾಪತ್ತೆಯಾದ ವಲಸೆ ಕಾರ್ಮಿಕನ ಮೃತದೇಹ ಕಣ್ಣೂರು ಬಳಿಯ ಪಳಯಂಗಾಡಿ ಮಾಟೂಲ್ ಬೀಚ್‌ನಲ್ಲಿ ನಿನ್ನೆ ಪತ್ತೆಯಾಗಿದೆ. ಉತ್ತರ ಪ್ರದೇಶದ ಬೂಲ್ ಬುಳಿಯಾವೂರ್ ಕಾನೋಜ್‌ನ ರಾಣಾ ಅಲಿಯಾಸ್ ಜೈವೀರ್ ಸಿಂಗ್ (23) ಸಾವನ್ನಪ್ಪಿದ ಯುವಕ. ಈತ ಜುಲೈ ೨೩ರಂದು ತನ್ನ ನಾಲ್ವರು ಸ್ನೇಹಿತರೊಂದಿಗೆ ಕಾಸರಗೋಡು ನೆಲ್ಲಿಕುಂಜೆ ಬೀಟ್‌ನಲ್ಲಿ ಸಮುದ್ರಕ್ಕಿಳಿದಿದ್ದನು. ಆ ವೇಳೆ ಬಂದ ಆಳೆತ್ತರದ ಅಲೆಯಲ್ಲಿ ಸಿಲುಕಿ ಆತ ನಾಪತ್ತೆಯಾಗಿದ್ದನು. ವಿಷಯ ತಿಳಿದ ಕಾಸರಗೋಡು ಕರಾವಳಿ ಪೊಲೀಸರು ಮತ್ತು ಅಗ್ನಿಶಾಮಕ ದಳ …

ಅನಧಿಕೃತ ಮರಳು ಸಾಗಾಟ: 2ವಾಹನ ವಶ; ಕೇಸು ದಾಖಲು

ಮಂಜೇಶ್ವರ: ದಾಖಲುಪತ್ರಗಳಿಲ್ಲದೆ ಅನಧಿಕೃತವಾಗಿ ಹೊಳೆಯಿಂದ ಮರಳು ಸಾಗಿಸುತ್ತಿದ್ದ ಓಮ್ನಿ, ಟಿಪ್ಪರ್ ಲಾರಿಯನ್ನು ಮಂಜೇಶ್ವರ ಪೊಲೀಸರು ವಶಕ್ಕೆ ತೆಗೆದು ಚಾಲಕರನ್ನು ಸೆರೆ ಹಿಡಿದಿದ್ದಾರೆ. ಉಪ್ಪಳ ಪೇಟೆಯಲ್ಲಿ ವಾಹನ ತಪಾಸಣೆ ವೇಳೆ ಪತ್ವಾಡಿ ಭಾಗದಿಂದ ಆಗಮಿಸಿದ ಟಿಪ್ಪರ್ ಲಾರಿಯನ್ನು ತಪಾಸಣೆ ನಡೆಸಿದಾಗ ಅನಧಿಕೃತವಾಗಿ ಮರಳು ಸಾಗಿಸುತ್ತಿರುವುದು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಲಾರಿಯನ್ನು ವಶಕ್ಕೆ ತೆಗೆದು ಚಾಲಕ ಕುಂಜತ್ತೂರು ಬಾಚಳಿಕೆ ನಿವಾಸಿ ಮುಹಮ್ಮದ್ ಅಶ್ರಫ್ ಎಂ. (38) ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಉಪ್ಪಳ ಗೇಟ್ ಬಳಿ ಪತ್ವಾಡಿ ಭಾಗದಿಂದ ಆಗಮಿಸಿದ …

ಪತ್ನಿಯೊಂದಿಗೆ ಸಿಟ್ಟುಗೊಂಡು ಬಾಲಕಿಯೊಂದಿಗೆ ಸ್ನೇಹ; ಲೈಂಗಿಕ ಕಿರುಕುಳ; ವ್ಲೋಗರ್ ಸೆರೆ

ಕಾಸರಗೋಡು: ಮದುವೆ ಯಾಗುವುದಾಗಿ ಭರವಸೆಯೊಡ್ಡಿ ೧೫ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ವ್ಲೋಗರ್‌ನ್ನು ಸೆರೆಹಿಡಿಯಲಾಗಿದೆ. ಕುಂಬಳೆ ಬಳಿಯ ಕೊಡ್ಯಮ್ಮೆ ಚೇಪಿನಡ್ಕ ನಿವಾಸಿ ಮುಹಮ್ಮದ್ ಸಾಲಿ (35) ಎಂಬಾತನನ್ನು ಬಂಧಿಸಲಾಗಿದೆ. ವಿದೇಶದಿಂದ ಊರಿಗೆ ಬರುತ್ತಿದ್ದಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೊಯಿಲಾಂಡಿ ಪೊಲೀಸರು ಈತನನ್ನು ಸೆರೆಹಿಡಿದಿದ್ದಾರೆ. ಶಾಲು ಕಿಂಗ್ ಮೀಡಿಯಾ, ಶಾಲು ಕಿಂಗ್ ವ್ಲೋಗ್ಸ್, ಶಾಲು ಕಿಂಗ್ ಫ್ಯಾಮಿಲಿ ಎಂಬೀ ಹೆಸರುಗಳಲ್ಲಿ ಕಳೆದ ಏಳು ವರ್ಷಗಳಿಂದ ಈತ ಸಾಮಾಜಿಕ ತಾಣಗಳಲ್ಲಿ ಸಕ್ರಿಯನಾಗಿದ್ದನು. ಪತ್ನಿಯೊಂದಿಗೆ ಸಿಟ್ಟುಗೊಂಡಿದ್ದ ಸಂದರ್ಭದಲ್ಲಿ ಹದಿನೈದರ ಹರೆಯದ …

ವಿದ್ಯುತ್ ತಂತಿಗೆ ಆವರಿಸಿಕೊಂಡ ಕಾಡು ಬಳ್ಳಿಗಳು: ಚೂರಿತ್ತಡ್ಕದಲ್ಲಿ ಅಪಾಯಭೀತಿ

ಕುಂಬಳೆ: ಕುಂಬಳೆ ಪಂಚಾಯ ತ್‌ನ ಎಂಟನೇ ವಾರ್ಡ್‌ನಲ್ಲಿ ವಿದ್ಯುತ್ ಇಲಾಖೆ ಅಧಿಕಾರಿಗಳು ತೋರಿಸಿದ ಜಾಗ್ರತೆಯನ್ನು ಐದನೇ ವಾರ್ಡಾದ ಚೂರಿತ್ತಡ್ಕ ಸಂತೋಷ್‌ನಗರದಲ್ಲೂ ತೋರಿಸಬೇಕೆಂದು ನಾಗರಿಕರು ಆಗ್ರಹಪಡುತ್ತಿದ್ದಾರೆ. ಚೂರಿತ್ತಡ್ಕ ಸಂತೋಷ್‌ನಗರದಲ್ಲಿ ಕಾಡುಬಳ್ಳಿಗಳು ವಿದ್ಯುತ್ ಕಂಬಕ್ಕೆ  ಆವರಿಸಿಕೊಂಡಿದೆ. ಕಾಡುಬಳ್ಳಿಗಳು ವಿದ್ಯುತ್ ಕಂಬದಿಂದ ತಂತಿಗೆ ತಲುಪಿದೆ. ಮಳೆ ಸುರಿಯುವ ವೇಳೆ ಈ ಬಳ್ಳಿಗಳ ಮೂಲಕ ವಿದ್ಯುತ್ ಹರಿಯಲು ಸಾಧ್ಯತೆಯಿದ್ದು, ಇದು ಆತಂಕ ಮೂಡಿಸುತ್ತಿದೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ. ಇದೇ ರೀತಿ ಎಂಟನೇ ವಾರ್ಡ್‌ನಲ್ಲಿ ವಿದ್ಯುತ್ ಕಂಬದಲ್ಲಿ ಕಾಡು ಬಳ್ಳಿಗಳು ಆವರಿಸಿಕೊಂಡಿರುವ ಬಗ್ಗೆ ‘ಕಾರವಲ್’ ಮೀಡಿಯ …