ಕಾಳಧನ ಬಿಳುಪಿಸುವಿಕೆ ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಬಂಧನ

ಮುಂಬಯಿ: ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಸಿಯನ್ನು ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ ಬಂಧಿಸಿದೆ. ನಿಷೇಧಿತ ಸಂಘಟನೆಯಾದ ಪೋಪ್ಯುಲರ್ ಫ್ರಂಟ್ ಆಫ್ ಇಂಡಿಯ (ಪಿಎಫ್‌ಐ)ದೊಂದಿಗೆ ನಂಟು ಹೊಂದಿ ಕಾಳಧನ ವ್ಯವಹಾರ ನಡೆಸಿದ ಸಂಬಂಧ ತನಿಖೆಯ ಅಂಗವಾಗಿ ನಿನ್ನೆ ರಾತ್ರಿ ಬೆಂಗಳೂರಿನಿಂದ ಫೈಸಿಯನ್ನು ಬಂಧಿಸಲಾಗಿದೆ. ಕಾಳಧನ ಬಿಳುಪಿಸುವಿಕೆ ವಿರುದ್ಧ ನಿಯಮವನ್ನು ಉಲ್ಲಂಘಿಸಿ ಆರ್ಥಿಕ ವ್ಯವಹಾರ ನಡೆಸಿರುವುದಾಗಿ ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಬಂಧಿಸಿರುವುದಾಗಿ ಇ.ಡಿ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಮುಖಂಡನ ಜೊತೆ ಸೆಲ್ಫಿ ಎಣ್ಮಕಜೆ ಪಂ. ಸದಸ್ಯನ ಅಮಾನತುಗೈದ ಬಿಜೆಪಿ

ಪೆರ್ಲ: ಎಣ್ಮಕಜೆ ಪಂಚಾಯತ್ ಸಾಯ ವಾರ್ಡ್ ಪ್ರತಿನಿಧಿ ಮಹೇಶ್ ಭಟ್‌ರನ್ನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿರು ವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. ಬಿಜೆಪಿ ವಿರುದ್ಧ ಕ್ರಮಗಳು ಗಮನಕ್ಕೆ ಬಂದ  ಹಿನ್ನೆಲೆಯಲ್ಲಿ ರಾಜ್ಯ ಅಧ್ಯಕ್ಷರ ಅನುಮತಿಯೊಂದಿಗೆ ಜಿಲ್ಲಾ ಸಮಿತಿ ಇವರನ್ನು ಅಮಾನತು ಮಾಡಿದೆ. ಕಾಂಗ್ರೆಸ್ ಬ್ಲೋಕ್ ಸಮಿತಿ ಕಾರ್ಯದರ್ಶಿ ಜೆ.ಎಸ್. ರಾಧಾಕೃಷ್ಣ ನಾಯಕ್‌ರೊಂದಿಗಿನ ಸಾಮಾಜಿಕ ಜಾಲತಾಣದ ಪೋಸ್ಟ್ ಮಹೇಶ್ ಭಟ್‌ರ ವಿರುದ್ಧ ಕ್ರಮ ಕೈಗೊಳ್ಳಲು ಕಾರಣವೆಂದು ತಿಳಿದು ಬಂದಿದೆ. ೧ ತಿಂಗಳ ಹಿಂದೆ ಇವರಿಬ್ಬರೂ ಪಂಚಾಯತ್ …

ವಿವಾಹ ನಡೆದ ಎರಡನೇ ದಿನ ಹೆರಿಗೆ: ಮಗು ತನ್ನದಲ್ಲವೆಂದು ವರ

ಲಕ್ನೋ:  ವಿವಾಹ ಕಳೆದು 1 ವರ್ಷ ಅಥವಾ ಆ ಬಳಿಕ ಮಕ್ಕಳು, ಕುಟುಂಬವೆಲ್ಲ ಮುಂದುವರಿಯುವು ದಾದರೆ ವಿವಾಹ ಕಳೆದ ಎರಡೇ ದಿನದಲ್ಲಿ ವಧು ಹೆತ್ತ ಘಟನೆ ಉತ್ತರ ಪ್ರದೇಶದಲ್ಲಿ ಸಂಭವಿಸಿದ್ದು, ಇದು ಆ ಕುಟುಂಬವನ್ನು ಆಶ್ಚರ್ಯಚಕಿತ ಗೊಳಿಸಿದೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಜಿಲ್ಲೆಯ ಒಂದು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳೆದ 24ರಂದು ಜೆಸ್ರಾ ಗ್ರಾಮದಲ್ಲಿ ವಿವಾಹ ನಡೆದಿತ್ತು. ಬಹಳ ಆಡಂಭರದಿಂದ ವಿವಾಹ ನಡೆಸಲಾಗಿತ್ತು. ದಂಪತಿಯರು ಎರಡು ದಿನ ಒಂದಾಗಿಯೇ ಕಳೆದಿದ್ದರು. ೨೬ರಂದು ವಧು ಬೆಳಿಗ್ಗೆ ಎದ್ದು …

ಎದೆನೋವು : ಯುವಕ ಮೃತ್ಯು

ಕಾಸರಗೋಡು: ಎದೆನೋವು ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದ ಕೈದಕ್ಕಾಡ್ ನಿವಾಸಿಯಾದ ಯುವಕ ಮೃತಪಟ್ಟರು. ಪೊನ್ನಿಚ್ಚಿಪರಂ ಬಿಲ್ ಗೋಪಾಲನ್‌ರ ಪುತ್ರ ಪಿ.ಪಿ. ಜಿನೇಶ್ (44) ಮೃತಪಟ್ಟವರು. ಆದಿತ್ಯ ವಾರ ಸಂಜೆ ಇವರಿಗೆ ಎದೆನೋವು ಕಂಡು ಬಂದಿತ್ತು. ಆ ಹಿನ್ನೆಲೆಯಲ್ಲಿ ಚೆರ್ವತ್ತೂರಿನ ಖಾಸಗಿ ಆಸ್ಪತ್ರೆಗೂ, ಬಳಿಕ ಮಂಗಳೂರಿಗೂ ಕೊಂಡೊಯ್ಯ ಲಾಗಿತ್ತು. ಆದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಇಂದು ಬೆಳಿಗ್ಗೆ ಕೈದಕ್ಕಾಡ್‌ನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಮೃತರು ತಂದೆ, ತಾಯಿ ಕೆ.ಪಿ. ರೋಹಿಣಿ, ಪತ್ನಿ ಮೇರಿ ಮೆಲ್ಡಾ, ಪುತ್ರ ಅಮನ್ ದೇಯಾನ್, …

ಯುವಕನಿಗೆ ಹಲ್ಲೆ ಇಬ್ಬರ ವಿರುದ್ಧ ಕೇಸು

ಬದಿಯಡ್ಕ: ಯುವಕನಿಗೆ ಹಲ್ಲೆ ನಡೆಸಿದ  ದೂರಿನಂತೆ ಇಬ್ಬರ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನೀರ್ಚಾಲು ಗೋಳಿಯಡ್ಕದ ಮೊಹಮ್ಮದ್ ರಫೀಕ್.ಬಿ (40) ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಅಲ್ತಾಫ್ ಮತ್ತು ಖಲೀಲ್ ಎಂಬಿಬ್ಬರ ವಿರುದ್ದ ಪೊಲೀಸರು ಕೇಸು ದಾಖಲಿಸಿದ್ದಾರೆ. ಮಾರ್ಚ್ ೧ರಂದು ಸಂಜೆ ನೀರ್ಚಾಲು ಗೋಳಿಯಡ್ಕದಲ್ಲಿ ಅಂಗಡಿಯೊಂದರ ಮುಂದೆ ಓರ್ವ ಆರೋಪಿ ನನ್ನನ್ನು ತಡೆದು ನಿಲ್ಲಿಸಿ ಚಾಕು ಬೀಸಿ ಗಾಯಗೊಳಿಸಿದ ನೆಂದೂ, ಇನ್ನೋರ್ವ ಆರೋಪಿ ತನಗೆ ಹೀನಾಯವಾಗಿ ಬೈದು ಬೆದರಿಕೆಯೊಡ್ಡಿದನೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ …

ನಿಧನ

ಉಪ್ಪಳ: ಜೋಡುಕಲ್ಲು ಮಡಂದೂರು ಗುತ್ತು ನಿವಾಸಿ ದಿ| ಕೊರಗಪ್ಪ ರೈ ಅವರ ಪತ್ನಿ ಸುಶೀಲಾ ರೈ (94) ನಿಧನ ಹೊಂದಿ ದರು. ಮೃತರು ಪುತ್ರ  ರಘುನಾಥ ರೈ, ಸೊಸೆಯಂದಿರಾದ ಮೀನಾಕ್ಷಿ ರೈ, ಜಲಜಾಕ್ಷಿ ರೈ, ದೇವಕಿ ರೈ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಮಕ್ಕ ಳಾದ ರಾಧಾಕೃಷ್ಣ ರೈ, ಚಂದ್ರಶೇಖರ ರೈ ಈ ಹಿಂದೆ ನಿಧನರಾಗಿದ್ದಾರೆ. ಮೃತರ ಮನೆಗೆ ಬಿಜೆಪಿ ಮುಖಂ ಡರಾದ ಕೆ.ಪಿ. ವಲ್ಸರಾಜ್, ಸದಾ ನಂದ ಶೆಟ್ಟಿ ಕೊಮ್ಮಂಡ, ಲೋಕೇಶ್ ನೋಂಡ, ಪ್ರಸಾದ್ …

ಸಿಪಿಎಂ ಆಡಳಿತದಲ್ಲಿ ಸ್ವಜನ ಪಕ್ಷಪಾತ-ಸುಂದರ ಆರಿಕ್ಕಾಡಿ ಆರೋಪ

ಬಾಯಾರು: ಕಳೆದ 9 ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿಪಿಎಂ ಸ್ವಜನ ಪಕ್ಷಪಾತ ನಡೆಸುತ್ತಿದ್ದು ಕೊಲೆಗೆಡುಕರಿಗೆ, ಅಮಲು ಪದಾರ್ಥ ಸರಬರಾಜುದಾರರಿಗೆ ಒತ್ತಾಸೆ ನೀಡುತ್ತಿದೆಯೆಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಂದರ ಆರಿಕ್ಕಾಡಿ ಆರೋಪಿಸಿದರು. ಸಿಪಿಎಂನ ಈ ಕಪಟ ಮುಖ ಜನಸಾಮಾನ್ಯರಿಗೆ ಬೇಸರ ತರಿಸಿದ್ದು, ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್  ಸೇರುತ್ತಿದ್ದಾರೆಂದು ಅವರು ಅಭಿಪ್ರಾಯಪಟ್ಟರು. ಪೈವಳಿಕೆ ಪಂಚಾಯತ್ ಸುದೆಂಬಳ ವಾರ್ಡ್ ಮಹಾತಾಮಾಗಾಂಧಿ ಕುಟುಂಬ ಸಂಗಮ ಉದ್ಘಾಟಿಸಿ ಅವರು ಮಾತನಾಡಿದರು. ಸುಂದರ ಸುದೆಂಬಳ ಅಧ್ಯಕ್ಷತೆ ವಹಿಸಿದರು. ಮಂಡಲ ಅಧ್ಯಕ್ಷ ವಸಂತ …

ಆಶಾ ಕಾರ್ಯಕರ್ತೆಯರಿಗೆ ಬೆಂಬಲ ಸೂಚಿಸಿ ಡಿಸಿಸಿಯಿಂದ ಕಲೆಕ್ಟ್ರೇಟ್ ಮಾರ್ಚ್

ಕಾಸರಗೋಡು: ತಿರುವನಂತಪುರ ಸೆಕ್ರೆಟರಿಯೇಟ್ ಮುಂಭಾಗದಲ್ಲಿ ಮುಷ್ಕರ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಬೆಂಬಲ ಸೂಚಿಸಿ ಕೆಪಿಸಿಸಿ ಆಹ್ವಾನ ಪ್ರಕಾರ ಡಿಸಿಸಿಯ ನೇತೃತ್ವದಲ್ಲಿ ಕಲೆಕ್ಟ್ರೇಟ್‌ನಲ್ಲಿ ಮಾರ್ಚ್ ನಡೆಸಲಾಯಿತು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷ ಕೆ.ಕೆ. ರಾಜೇಂದ್ರನ್, ಪ್ರಧಾನ ಕಾರ್ಯದರ್ಶಿಗಳಾದ ಎಂ.ಸಿ. ಪ್ರಭಾಕರನ್, ಕೆ.ಪಿ. ಪ್ರಕಾಶನ್, ಸೇವಾದಳ್ ರಾಜ್ಯ ಅಧ್ಯಕ್ಷ ರಮೇಶನ್ ಕುದ್ರೆಪ್ಪಾಡಿ, ಹಕೀಂ ಕುನ್ನಿಲ್, ಕೆ. ನೀಲಕಂಠನ್, ಎ. ಗೋವಿಂದನ್ ನಾಯರ್, ಧನ್ಯಾ ಸುರೇಶ್, ಸಿ.ವಿ. ಜೇಮ್ಸ್, ಪಿ. ಕುಂಞಿಕಣ್ಣನ್ …

ಪ್ಲಸ್‌ಟು ವಿದ್ಯಾರ್ಥಿಗಳು ಆತ್ಮಹತ್ಯೆ

ಕಲ್ಲಿಕೋಟೆ: ವಡಗರ ವಿಲ್ಯಪಳ್ಳಿ ಎಂಬಲ್ಲಿ ಪ್ಲಸ್ ಟು ವಿದ್ಯಾರ್ಥಿನಿ ಮನೆಯೊಳಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ವಡಗರ ಪುತ್ತೂರು ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ಅನನ್ಯ (17) ನೇಣು ಬಿಗಿದು ಮೃತಪಟ್ಟವಳು. ನಿನ್ನೆ ಸಂಜೆ 6.30ರ ವೇಳೆ ಘಟನೆ ನಡೆದಿದೆ. ನಿನ್ನೆ ಪ್ಲಸ್ ಟು ಪರೀಕ್ಷೆ ಆರಂಭಗೊಂಡ ದಿನವಾಗಿದೆ. ಪರೀಕ್ಷಾ ಭಯ ಆತ್ಮಹತ್ಯೆಗೆ ಕಾರಣವೋ ಎಂದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದೇ ವೇಳೆ ತಿರುವನಂತಪುರದಲ್ಲಿ ನಿನ್ನೆ ಬೆಳಿಗ್ಗೆ ಪ್ಲಸ್ ಟು ವಿದ್ಯಾರ್ಥಿ ನೇಣು ಬಿಗಿದ ಸ್ಥಿತಿಯಲ್ಲಿ …

ಚುನಾವಣೆ ಗ್ರಾಮಸಭೆ: ಮತದಾರರ ಪಟ್ಟಿಯಲ್ಲಿ 5563 ಮತದಾರರು ಮೃತಪಟ್ಟಿರುವುದಾಗಿ ಪತ್ತೆ

ಕಾಸರಗೋಡು: ಚುನಾವಣೆ ಗ್ರಾಮಸಭೆ ನಡೆಸಿರುವ ಕಾರಣ 5563 ಮಂದಿ ಮತದಾರರು ಮೃತಪಟ್ಟಿರುವುದಾಗಿ ಪತ್ತೆಹಚ್ಚಲಾಯಿತು. 2324 ಬೂತ್ ಲೆವೆಲ್ ಏಜೆಂಟರ್ಗಳು, 2724 ಮತದಾರರು ಸಭೆಯಲ್ಲಿ ಭಾಗವಹಿಸಿದರು. ಮಂಜೇಶ್ವರ ಮಂಡಲದಲ್ಲಿ ನಡೆದ ಗ್ರಾಮಸಭೆಯಲ್ಲಿ ರಾಜಕೀಯ ಪಕ್ಷದ 423 ಪ್ರತಿನಿಧಿಗಳು, 384 ಮತದಾರರು ಭಾಗವಹಿಸಿದರು. ಇಲ್ಲಿ ಒಟ್ಟು 991 ಮಂದಿ ಮೃತಪಟ್ಟಿರುವುದಾಗಿ ಪತ್ತೆಹಚ್ಚಲಾಯಿತು. ಕಾಸರಗೋಡು ಮಂಡಲದಲ್ಲಿ 1161 ಮಂದಿ ಸಾವಿಗೀಡಾಗಿರುವುದಾಗಿ ಪತ್ತೆಹಚ್ಚಲಾಗಿದೆ. ಉದುಮದಲ್ಲಿ 1291, ಕಾಞಂಗಾಡ್ ಮಂಡಲದಲ್ಲಿ 1135, ತೃಕ್ಕರಿಪುರ ಮಂಡಲದಲ್ಲಿ 985 ಮಂದಿ ಮೃತಪಟ್ಟಿರುವುದಾಗಿ ಪತ್ತೆಹಚ್ಚಲಾಗಿದೆ. ಮೃತಪಟ್ಟವರನ್ನು ಹಾಗೂ ಸ್ಥಳಾಂತರಗೊAಡವರನ್ನು …