ಯುವಜನ ವಿನಿಮಯ ಕಾರ್ಯಕ್ರಮಕ್ಕೆ ತೆರಳುವ ಜಿಲ್ಲಾ ತಂಡಕ್ಕೆ ಬೀಳ್ಕೊಡುಗೆ

ಕಾಸರಗೋಡು: ಜಿಲ್ಲೆಯಿಂದ ಅಂತಾರಾಜ್ಯ ಯುವಜನ ವಿನಿಮಯ ಕಾರ್ಯಕ್ರಮಕ್ಕೆ ಆಂಧ್ರಪ್ರದೇಶಕ್ಕೆ ತೆರಳುವ ತಂಡಕ್ಕೆ ಬೀಳ್ಕೊಡುಗೆ ನೀಡಲಾಯಿತು. ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಾಳೆಯಿಂದ 9ರವರೆಗೆ ನಡೆಯುವ ಅಂತಾರಾಜ್ಯ  ಯುವಜನ ವಿನಿಮಯ ಕಾರ್ಯಕ್ರ ಮದಲ್ಲಿ ಭಾಗವಹಿಸುವುದಕ್ಕಾಗಿ ಜಿಲ್ಲೆಯನ್ನು ಪ್ರತಿನಿಧೀಕರಿಸಿ 7 ಮಂದಿ ಪ್ರಯಾಣ ಹೊರಟಿದ್ದಾರೆ. ಪೂರ ಕ್ಕಳಿಯನ್ನು ಇವರು ಪ್ರಸ್ತುತಪಡಿಸುವರು. ರಾಜ್ಯದ ವಿವಿಧ ಜಿಲ್ಲೆಗಳಿಂದಾಗಿ ಒಟ್ಟು 27 ಯುವಜನ ಪ್ರತಿನಿಧಿಗಳು ಈ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ. ನೆಹರು ಯುವಕೇಂದ್ರದ ನೇತೃತ್ವದಲ್ಲಿ ಶಿಬಿರ ನಡೆಸಲಾಗುತ್ತಿದೆ.

ಐಲ ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನದಲ್ಲಿ ವಾರ್ಷಿಕ ನೇಮ ಎ.3ರಿಂದ

ಮಂಗಲ್ಪಾಡಿ: ಐಲ ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನ ಪುಳಿಕುತ್ತಿ ಇಲ್ಲಿ ಶ್ರೀ ದೈವಗಳ ವಾರ್ಷಿಕ ನೇಮೋತ್ಸವ ಎಪ್ರಿಲ್ 3ರಿಂದ 5ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. 3ರಂದು ಬೆಳಿಗ್ಗೆ 5.30ರಿಂದ ಗಣಹೋಮ, ಮಧ್ಯಾಹ್ನ 1.30ರಿಂದ ಭಂಡಾರ ಮನೆಯಲ್ಲಿ ಶ್ರೀ ಗುಳಿಗ ದೈವದ ಕೋಲ, ಸಂಜೆ 4ರಿಂದ ಶ್ರೀ ಕೊರತಿ ದೈವದ ಕೋಲ, ಸಂಜೆ 6ರಿಂದ ನವದುರ್ಗಾ ಕುಣಿತ ಭಜನಾ ಸಂಘ ಪುಳಿಕುತ್ತಿ ಇವರಿಂದ ಕುಣಿತ ಭಜನೆ, 6.45ರಿಂದ ಸ್ಥಳೀಯ ಪ್ರತಿಭೆಗಳಿಂದ ನೃತ್ಯ, ರಾತ್ರಿ 7ಕ್ಕೆ ಶ್ರೀ ದೈವಗಳ …

‘ನಿಮ್ಮ ಮಗಳು ನನಗೆ ಬೇಡ, ನಾನು ಮೂರು ಬಾರಿ ತಲಾಕ್ ನೀಡಿದ್ದೇನೆ’ ಪತ್ನಿಯ ತಂದೆಯ ವಾಟ್ಸಪ್‌ಗೆ ಸಂದೇಶ ಕಳುಹಿಸಿದ ಯುವಕನನ್ನು ಕೊಲ್ಲಿಯಿಂದ ಊರಿಗೆ ತರಲು ಪೊಲೀಸ್ ಯತ್ನ

ಕಾಸರಗೋಡು: ಪತ್ನಿಯ ತಂದೆಯ ವಾಟ್ಸಪ್ಗೆ ಸಂದೇಶ ಕಳುಹಿಸಿ ಮುತ್ತಲಾಖ್ ಹೇಳಿದ ಪ್ರಕರಣದಲ್ಲಿ ಆರೋಪಿಯಾದ ಬದಿಯಡ್ಕ ನೆಕ್ರಾಜೆ ನೆಲ್ಲಿಕಟ್ಟೆ ನಿವಾಸಿಯನ್ನು ಕೊಲ್ಲಿಯಿಂದ ಊರಿಗೆ ಕರೆತರಲು ಪೊಲೀಸರು ಯತ್ನ ಆರಂಭಿಸಿದ್ದಾರೆ. ಪೊಲೀಸರ ಆಗ್ರಹದಂತೆ ಊರಿಗೆ ಬರದಿದ್ದರೆ ಇಂಟರ್ಪೋಲ್ನ ಸಹಾಯದೊಂದಿಗೆ ಆರೋಪಿಯನ್ನು ಬಂಧಿಸಲಿರುವ ಕ್ರಮವನ್ನು ಆರಂಭಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ನೆಲ್ಲಿಕಟ್ಟೆ ನಿವಾಸಿ ಹಾಗೂ ಕೊಲ್ಲಿ ಉದ್ಯೋಗಿ ಅಬ್ದುಲ್ ರಜಾಕ್ ಹಾಗೂ ಕಾಞಂಗಾಡ್ ಕಲ್ಲೂ ರಾವಿ ನಿವಾಸಿಯಾದ ಯುವತಿಯ ಮಧ್ಯೆಗಿನ ವಿವಾಹ 2022 ಅಗೋಸ್ತ್ 11ರಂದು ಧಾರ್ಮಿಕ ವಿಧಿಯಂತೆ ನಡೆದಿತ್ತು. 2023 …

ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ಮದ್ಯ ವಶ: ವ್ಯಕ್ತಿ ಪರಾರಿ

ಉಪ್ಪಳ: ಸ್ಕೂಟರ್‌ನಲ್ಲಿ ಸಾಗಿ ಸುತ್ತಿದ್ದ 0.8 ಲೀಟರ್ ಕರ್ನಾಟಕ ಮದ್ಯವನ್ನು ಮಂಜೇಶ್ವರ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂ ಡಿದ್ದಾರೆ.  ಇದೇ ವೇಳೆ ಅಧಿಕಾರಿಗಳ ಕಾ ರ್ಯಾಚರಣೆ ವೇಳೆ ಸ್ಕೂಟರ್ ನಲ್ಲಿದ್ದ ವ್ಯಕ್ತಿ  ಸ್ಕೂಟರ್ ಹಾಗೂ ಮದ್ಯ ಉಪೇಕ್ಷಿಸಿ ಪರಾರಿಯಾಗಿದ್ದಾನೆ. ನಿನ್ನೆ ರಾತ್ರಿ ೧೦.೧೫ ಮಂಜೇಶ್ವರ ಅಬಕಾರಿ ಕಚೇರಿ ಸಮೀಪ ಅಧಿಕಾ ರಿಗಳು ವಾಹನ ತಪಾಸಣೆ ನಡೆಸು ತ್ತಿದ್ದಾಗ ಆಗಮಿಸಿದ ಸ್ಕೂಟರ್ ನಿಲ್ಲಿಸದೆ ಪರಾರಿಯಾಗಿತ್ತು. ಅದನ್ನು ಅಧಾರಿಗಳು ಬೆನ್ನಟ್ಟಿ ಹಿಡಿಯ ಲೆತ್ನಿಸಿದಾಗ ವ್ಯಕ್ತಿ ಸ್ಕೂಟರ್ ನಿಲ್ಲಿಸಿ ಓಡಿ ಪರಾರಿಯಾಗಿದ್ದಾನೆ. ಸ್ಕೂಟರ್ …

ರಾಜ್ಯದಲ್ಲಿ ಹೆಚ್ಚುತ್ತಿರುವ ಕ್ರೂರ ಹಿಂಸಾಚಾರ, ಮಾದಕದ್ರವ್ಯ ವ್ಯಸನ: ವಿಪಕ್ಷ ಸಲ್ಲಿಸಿದ ತುರ್ತು ಗೊತ್ತುವಳಿ ಬಗ್ಗೆ ಚರ್ಚೆಗೆ ವಿಧಾನಸಭೆ ಅನುಮತಿ

ತಿರುವನಂತಪುರ: ರಾಜ್ಯದಲ್ಲಿ ಹೆಚ್ಚುತ್ತಿರುವ ಕ್ರೂರ ಕೊಲೆ ಇತ್ಯಾದಿ ಹಿಂಸಾಚಾರಗಳು ಹಾಗೂ  ಯಾವುದೇ ರೀತಿಯ ನಿಯಂತ್ರ ಣವೂ ಇಲ್ಲದೆ  ರಾಜ್ಯ ಮಾದಕದ್ರವ್ಯ ವ್ಯಸನದಲ್ಲಿ  ಸಿಲುಕಿಕೊಂಡಿರುವ  ಬಗ್ಗೆ ಸಮಗ್ರ ಚರ್ಚೆ ನಡೆಸಬೇಕೆಂದು  ಆಗ್ರಹಿಸಿ ವಿರೋಧಪಕ್ಷ ಇಂದು ಬೆಳಿಗ್ಗೆ ವಿಧಾನಸಭೆಯಲ್ಲಿ ಮಂಡಿಸಿದ ತುರ್ತು ಗೊತ್ತುವಳಿಯನ್ನು ವಿಧಾನಸಭಾ  ಅಧ್ಯಕ್ಷರು ಅಂಗೀಕರಿಸಿದ್ದು, ಆ ಮೂಲಕ ಈ ವಿಷಯದ ಬಗ್ಗೆ ಸದನದಲ್ಲಿ ಚರ್ಚೆಗೆ ಅವರು   ಅನುಮತಿ ನೀಡಿದರು. ರಾಜ್ಯದಲ್ಲಿ   ಕ್ರೂರ ಕೊಲೆ ಕೃತ್ಯಗಳು ಇತ್ತೀಚೆಗಿನಿಂದ ಹೆಚ್ಚಾಗತೊಡಗಿದೆ.  ಮಾತ್ರವಲ್ಲ ಇನ್ನೊಂದೆಡೆ ಮಾದಕದ್ರವ್ಯ ವ್ಯಸನ, ಅವುಗಳ ಮಾರಾಟ ಯಾವುದೇ …

ಪೆರಿಯದಲ್ಲಿ ಸ್ಥಳೀಯರ ನಿದ್ದೆಗೆಡಿಸುತ್ತಿರುವ ಚಿರತೆ: ನಿನ್ನೆ ರಾತ್ರಿ ಪುಲಿಕ್ಕಾಲ್, ಏಚಿಲಡ್ಕದಲ್ಲೂ  ಪ್ರತ್ಯಕ್ಷ

ಕಾಸರಗೋಡು: ಪೆರಿಯ, ಪುಳಿ ಕ್ಕಾಲ್‌ನಲ್ಲಿ ಚಿರತೆಯ ಭೀತಿ ಕೊನೆಗೊ ಳ್ಳುವುದಿಲ್ಲ. ನಿನ್ನೆ ರಾತ್ರಿ ಎರಡು ಕಡೆಗಳಲ್ಲಿ ಚಿರತೆ ಪ್ರತ್ಯಕ್ಷಗೊಂಡ ಮಾಹಿತಿ ತಿಳಿದು ಅರಣ್ಯ ಇಲಾಖೆ ಅಧಿಕಾರಗಳು ಸ್ಥಳಕ್ಕೆ ತಲುಪಿ ತಪಾಸಣೆ ನಡೆಸಿದರು.  ಪುಳಿಕ್ಕಾಲ್‌ನಲ್ಲಿ ರಾತ್ರಿ ೯.೩೦ರ ವೇಳೆ ಚಿರತೆ ಕಂಡುಬಂದಿದೆ. ಸ್ಥಳೀ ಯರು ಬೊಬ್ಬೆ ಹೊಡೆದಾಗ ಚಿರತೆ ಅರಙ್ಙನಡ್ಕಂ ಭಾಗಕ್ಕೆ ಪರಾರಿಯಾಗಿರುವು ದಾಗಿ ಶಂಕಿಸಲಾಗಿದೆ. ಈ ಬಗ್ಗೆ ತಿಳಿದು ಹಲವಾರು ಮಂದಿ  ಸ್ಥಳಕ್ಕೆ ತಲುಪಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ. ಪುಳಿಕ್ಕಾಲ್‌ನಲ್ಲಿ ಚಿರತೆಯನ್ನು ಕಂಡ …

ಹೊಸದುರ್ಗದಿಂದ ಬಂಧಿತನಾದ  ಬಾಂಗ್ಲಾದೇಶ ಪ್ರಜೆಯ ಆರ್ಥಿಕ ಮೂಲ, ವಿದೇಶ ನಂಟಿನ ಬಗ್ಗೆ ಸಮಗ್ರ ತನಿಖೆ

ಕಾಸರಗೋಡು: ಹೊಸದುರ್ಗ ಬಲ್ಲಾ ಆವಿ ಪೂಡಂಕಲ್ಲಿನ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ಅಕ್ರಮವಾಗಿ ನೆಲೆಸಿ ಅಲ್ಲಿಂದ ಎರಡು ದಿನಗಳ ಹಿಂದೆ ಹೊಸದುರ್ಗ ಪೊಲೀಸರ ಸಹಾಯ ದೊಂದಿಗೆ ಕಣ್ಣೂರು ಭಯೋತ್ಪಾದಕ ನಿಗ್ರಹದಳ (ಎಟಿಎಸ್) ಬಂಧಿಸಿದ ಬಾಂಗ್ಲಾದೇಶದ ಪ್ರಜೆ ಶಾಬೀರ್ ಶೇಖ್ ನಾಬಿಯ  ಅಲಿಯಾಸ್ ಅತಿಯಾರ್ ರಹ್ಮಾನ್ (22) ವಿದೇಶ ನಂಟು ಹೊಂ ದಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದು, ಅದರಿಂದ ಆ ಬಗ್ಗೆ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ. ಈತ ಕಳೆದ ಐದು ವರ್ಷ ಗಳಿಂದ ಕೇರಳದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದನು. ಮಾತ್ರವಲ್ಲ ಈತ ಒಂದಕ್ಕಿಂತ …

ಕುಂಬಳೆ ಶಾಂತಿಪಳ್ಳದಲ್ಲಿ ಜನರ ನೆಮ್ಮದಿ ಕೆಡಿಸುತ್ತಿರುವ ತ್ಯಾಜ್ಯ: ನಾಗರಿಕರು ಸ್ಕ್ವಾಡ್ ರೂಪೀಕರಿಸಿ ಮತ್ತೆ ರಂಗಕ್ಕೆ

ಕುಂಬಳೆ: ಈ ಹಿಂದೆ ನಾಗರಿಕರು ಕಠಿಣ ಕ್ರಮಗಳೊಂದಿಗೆ ರಂಗಕ್ಕಿಳಿದ ಹಿನ್ನೆಲೆಯಲ್ಲಿ ಶಾಂತಿಪಳ್ಳ-ಭಾಸ್ಕರನಗರ ಮಧ್ಯೆ ತ್ಯಾಜ್ಯ ಸಮಸ್ಯೆ ದೂರವಾಗಿತ್ತು. ಆದರೆ ಇದೀಗ ಮತ್ತೆ ತ್ಯಾಜ್ಯ ಸಮಸ್ಯೆ ಎದುರಾಗಿದ್ದು, ಇದು ಸಾರ್ವಜನಿಕರ ನೆಮ್ಮದಿ ಕೆಡಿಸತೊಡಗಿದೆ. ರಾತ್ರಿ ಹೊತ್ತಿನಲ್ಲಿ ವಾಹನಗಳಲ್ಲಿ ತಲುಪಿ ಇಲ್ಲಿನ ರಸ್ತೆ ಬದಿ ತ್ಯಾಜ್ಯ ಎಸೆದು ಪರಾರಿಯಾಗುತ್ತಿರುವ ಕೃತ್ಯ ತೀವ್ರಗೊಂಡಿದೆಯೆಂದು ನಾಗರಿಕರು ಆರೋಪಿಸುತ್ತಿದ್ದಾರೆ. ನಿನ್ನೆ ಸಂಜೆ ವರೆಗೆ  ಶುಚಿಯಾಗಿದ್ದ ರಸ್ತೆ ಬದಿಯಲ್ಲಿ ಇಂದು ಬೆಳಿಗ್ಗೆ ತ್ಯಾಜ್ಯ ರಾಶಿಯೇ  ಕಂಡುಬರುತ್ತಿದೆ. ಔಷಧಿ, ಮಾತ್ರೆ ಮೊದಲಾದವುಗಳು ರಸ್ತೆ ಬದಿ ಕಂಡುಬಂದಿರುವ ತ್ಯಾಜ್ಯದಲ್ಲಿ …

ಗಲ್ಫ್ ಉದ್ಯಮಿ ಅಬ್ದುಲ್ ಗಫೂರ್ ಹಾಜಿ ಕೊಲೆ ಪ್ರಕರಣ: ಚಾರ್ಜ್ ಶೀಟ್‌ನಲ್ಲಿ 227 ಸಾಕ್ಷಿದಾರರು

ಕಾಸರಗೋಡು: ಪಳ್ಳಿಕ್ಕೆರೆ ಪೂಚಕ್ಕಾಡ್ ಫಾರೂಕ್ ಮಸೀದಿ ಬಳಿಯ ಬೈತುಲ್ ಮಂಜಿಲ್ನ ಗಲ್ಫ್ ಉದ್ಯಮಿ ಸಿ.ಎಂ. ಅಬ್ದುಲ್ ಗಫೂರ್ ಹಾಜಿ (55) ಕೊಲೆ ಪ್ರಕರಣದ ತನಿಖೆ ನಡೆಸಿ, ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (ಪ್ರಥಮ)ಕ್ಕೆ ಕಾಸರಗೋಡು ಡಿಸಿಆರ್ಬಿ ಡಿವೈಎಸ್ಪಿ ಕೆ.ಜೆ.ಜೋನ್ಸನ್ ಸಲ್ಲಿಸಿದ ಚಾರ್ಜ್ ಶೀಟ್ (ದೋಷಾರೋಪಪಟ್ಟಿ)ನಲ್ಲಿ ಒಟ್ಟು 227 ಸಾಕ್ಷಿದಾರರನ್ನು ಒಳಪಡಿಸಲಾಗಿದೆ.ಮಾತ್ರವಲ್ಲ 63 ದಾಖಲುಪತ್ರಗಳು, 150 ವಸ್ತು ಪುರಾವೆಗಳು, ಎಂಟು ಮಂದಿ ಸದಸ್ಯರು ಒಳಗೊಂಡಿರುವ ಆರೋಪಿಗಳ ಪಾತುಕುಟ್ಟಿ ಎಂಬ ಹೆಸರಿನ ವಾಟ್ಸಪ್ ಗ್ರೂಪ್ನಲ್ಲಿ ಪರಸ್ಪರ ನಡೆಸಿದ ಶಬ್ದಸಂದೇಶಗಳು, …

ಚಿಕಿತ್ಸೆ ಮಧ್ಯೆ ವೈದ್ಯ ಕಿರುಕುಳ ನೀಡಿರುವುದಾಗಿ ಯುವತಿ ದೂರು: ಕೇಸು ದಾಖಲು

ಕಾಸರಗೋಡು: ಚಿಕಿತ್ಸೆ ಮಧ್ಯೆ ವೈದ್ಯ ಕಿರುಕುಳ ನೀಡಿರುವುದಾಗಿ ಯುವತಿಯೋರ್ವೆ ಆರೋಪಿಸಿದ್ದಾಳೆ. ಕಾಸರಗೋಡು ಇರಿಯಾದಲ್ಲಿರುವ ಮೆಡಿಕಲ್ ಕ್ಲಿನಿಕ್‌ನ ವೈದ್ಯ ಜೋನ್ ವಿರುದ್ಧ ಯುವತಿ ದೂರು ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ  ವೈದ್ಯನ ವಿರುದ್ಧ ಅಂಬಲತ್ತರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಿಡ್ನಿ ಸಂಬಂಧ ಅಸೌಖ್ಯ  ಬಾಧಿಸಿದ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ ವೇಳೆ ವೈದ್ಯ ಜೋನ್ ಲೈಂಗಿಕ ಕಿರುಕುಳ ನೀಡಿರುವುದಾಗಿ ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.  ವೀಡಿ ಯೋ ಚಿತ್ರೀಕರಿಸಿ ಬೆದರಿಕೆಯೊಡ್ಡಿ ಕಿರುಕುಳ ಮುಂದುವರಿಸಿರು ವುದಾಗಿಯೂ  ದೂರಲಾಗಿದೆ. ಈ ಬಗ್ಗೆ ಪೊಲೀಸರು …