ಮಂಜೇಶ್ವರ ಪಂಚಾಯತ್ ಬಜೆಟ್‌ನಲ್ಲಿ ಕೃಷಿ, ತ್ಯಾಜ್ಯ ನಿರ್ಮೂಲನೆ, ವಸತಿ ಯೋಜನೆಗಳಿಗೆ ಆದ್ಯತೆ

ಮಂಜೇಶ್ವರ : ತ್ಯಾಜ್ಯ ನಿರ್ಮೂ ಲನ, ಕೃಷಿ ಹಾಗೂ ವಸತಿ ಯೋಜನೆ ಗಳಿಗೆ ಪ್ರಾಧಾನ್ಯತೆ ನೀಡಿ ಮಂಜೇಶ್ವರ ಗ್ರಾಮ ಪಂಚಾಯತ್‌ನ ಬಜೆಟ್‌ನ್ನು ಪಂಚಾಯತ್ ಉಪಾಧ್ಯಕ್ಷ ಮೊಹ ಮ್ಮದ್ ಸಿದ್ದೀಖ್ ಮಂಡಿಸಿದರು.ಪಂಚಾಯತ್ ಎದುರಿಸುತ್ತಿರುವ ದೊಡ್ಡ ಸಮಸ್ಯೆ ತ್ಯಾಜ್ಯ ವಸ್ತುಗಳ ನಿರ್ವಹಣೆ. ಹಸಿರು ಕ್ರಿಯಾಸೇನೆಯ ನೆರವಿನಿಂದ ಪ್ರಸ್ತುತ ಮನೆ, ಅಂಗಡಿ ಗಳಿಂದ ಬಳಕೆದಾರರ ಶುಲ್ಕ ಸಂಗ್ರ ಹಿಸಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದ್ದು, ಅದನ್ನು ವಿಲೇವಾರಿ ಮಾಡಲು ತೀವ್ರ ತೊಂದರೆ ಎದುರಿಸಲಾಗುತ್ತಿದೆ. ಅದಕ್ಕೆ ಪರಿಹಾರವಾಗಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಎಫ್‌ಎಸ್‌ಟಿಪಿ ಸ್ಥಾಪಿಸಲಾಗುವುದು. …

ಕಾರ್ಮಾರು ಕ್ಷೇತ್ರ ಬ್ರಹ್ಮಕಲಶೋತ್ಸವ: ಪಾವಂಜೆ ಮೇಳದವರಿಂದ ಯಕ್ಷಗಾನ ಬಯಲಾಟ, ಸನ್ಮಾನ

ಮಾನ್ಯ: ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರ ಮಗಳೊಂದಿಗೆ ಜರಗುತ್ತಿದೆ.  ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ನಿನ್ನೆ ಮಧ್ಯಾಹ್ನ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ‘ಕರ್ಣಾರ್ಜುನ ಕಾಳಗ’ ನಡೆಯಿತು.  ಸಂಜೆ ಯಕ್ಷಮಿತ್ರರು ಮಾನ್ಯದ ಸೇವಾ ರೂಪವಾಗಿ ಪಾವಂಜೆ ಮೇಳದವರಿಂದ ‘ಭಸ್ಮಾಸುರ ನರಕಾಸುರ ಕುಚೇಲ-ಕೌಂಡ್ಲಿಕ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಇದೇ ವೇದಿಕೆಯಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಪಾವಂಜೆ ಮೇಳದ ವ್ಯವಸ್ಥಾಪಕ, ಭಾಗವತ , ಪಟ್ಲ ಫೌಂಡೇಶನ್ ಮಂಗಳೂರು …

ಕೊಂಡೆವೂರಿನಲ್ಲಿ ಅತಿಥಿ ಗೃಹ ವಿಶ್ವಂ ಉದ್ಘಾಟನೆ

ಉಪ್ಪಳ: ಕಷ್ಟಗಳಿಗೆ ಸ್ಪಂದಿಸುವ ಹೃದಯ ಗುರುತಿಸಲ್ಪಡುತ್ತದೆ. ಎಲ್ಲರೂ ಒಂದಾದರೆ ಮಾತ್ರ ಧರ್ಮಕೇಂದ್ರ ಬೆಳೆಯಲು ಸಾಧ್ಯ. ಉಳ್ಳವರು ಇಲ್ಲದವರಿಗೆ ನೀಡಿದಾಗ ಸಮಾಜ ಸಮತೋಲನದಿಂದಿರಲು ಸಾಧ್ಯ ಎಂದು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮ ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅಭಿಪ್ರಾಯಪಟ್ಟರು.ಕೊಂಡೆವೂರು ಶ್ರೀಮಠದಲ್ಲಿ ನೂತನವಾಗಿ ನಿರ್ಮಿಸಿದ “ವಿಶ್ವಂ” ಅತಿಥಿಗೃಹವನ್ನು ಉದ್ಘಾಟಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.ಕೇಂದ್ರ ಸಚಿವ ಶ್ರೀಪಾದ ಯಸ್ಸೋ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬದುಕಿನ ಜಂಜಡಗಳ ಮಧ್ಯೆ ಆಧ್ಯಾತ್ಮಿಕ ಅನುಭೂತಿ ಸಾಧ್ಯವಾಗಬೇಕು. ಈ ನಿಟ್ಟಿನಲ್ಲಿ …

ಗಣೇಶ್ ಕಾಸರಗೋಡು ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ

ಬೆಂಗಳೂರು: ಇತ್ತೀಚೆಗೆ ವಿಶ್ವದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಪ್ರತಿಷ್ಠಿತ ವಾರ್ಷಿಕ ಅಪ್ಪಾಜಿಗೌಡ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಕೊಪ್ಪಳದಲ್ಲಿ ಮಾರ್ಚ್ ೯ರಂದು ನಡೆಯುವ ಕಾರ್ಯಕ್ರಮದಲ್ಲಿ   ಗಣೇಶ್ ಕಾಸರಗೋಡು ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದೆಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ. ವೃತ್ತಿ ಸೇವೆ, ಸಾಮಾಜಿಕ ಬದ್ಧತೆ ಹಾಗೂ ಸಾಧನೆಗಳಿಗಾಗಿ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಕಳೆದ ೪೫ ವರ್ಷಗಳಿಂದ ಸಿನಿಮಾ ಪತ್ರಕರ್ತರಾಗಿ ಸೇವೆ …

ಜನನೇಂದ್ರಿಯ ಕೊಯ್ದ ಸ್ಥಿತಿಯಲ್ಲಿ ವೃದ್ಧ ಆಸ್ಪತ್ರೆಗೆ ದಾಖಲು

ಇಡುಕ್ಕಿ:  ಜನನೇಂದ್ರಿಯ ತುಂಡಾದ ಸ್ಥಿತಿಯಲ್ಲಿ  ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಚ್ಚುಕರುಂದರುವಿ ನಿವಾಸಿಯಾದ ತಂಗಪ್ಪ (70)ನನ್ನು ಪೀರುಮೇಡ್ ತಾಲೂಕು ಆಸ್ಪತ್ರೆಗೆ ದಾಖಲಿಸ ಲಾಗಿದೆ. ನಾಯಿ ಕಚ್ಚಿ ಜನನೇಂದ್ರಿ ಯ ಗಾಯಗೊಂಡಿರುವುದಾಗಿ ತಿಳಿಸಿ ಸ್ಥಳೀಯರು ತಂಗಪ್ಪನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಯುಧದಿಂದ ಕೊಯ್ದ ಗಾಯವಿದೆಯೆಂದು ಪ್ರಾಥಮಿಕ ತಪಾಸಣೆಯಿಂದ ಸ್ಪಷ್ಟವಾಗಿದೆ. ಗಾಯ ಗಂಭೀರ ಸ್ಥಿತಿಯಲ್ಲಿದ್ದ ಕಾರಣ ತಂಗಪ್ಪನನ್ನು ಕೋಟ್ಟಯಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದೆ. ತಂಗಪ್ಪನ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಅವರಿಂದ ಹೇಳಿಕೆ ದಾಖಲಿಸಲು ಸಾಧ್ಯವಿಲ್ಲವೆಂದು ವಾಗಮಣ್ ಪೊಲೀಸರು ತಿಳಿಸಿದ್ದಾರೆ.

ಪತಿ, ಪತ್ನಿ ವಿವಿಧೆಡೆ ಗುಂಡೇಟು ತಗಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಪಾಲಕ್ಕಾಡ್: ಪತಿ ಹಾಗೂ ಪತ್ನಿ ವಿವಿಧೆಡೆಗಳಲ್ಲಿ ಗುಂಡು ತಗಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಾಲಕ್ಕಾಡ್ ವಂಡಳಿಏರಾಟು ಕುಳಂಬ್‌ನ ಸುಂದರನ್ ಎಂಬವರ ಪುತ್ರ ಕೃಷ್ಣ ಕುಮಾರ್ (50) ಹಾಗೂ ಪತ್ನಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೃಷ್ಣ ಕುಮಾರ್ ವಂಡಳಿಯ ಮನೆ ಅಂಗಳದಲ್ಲಿ, ಅವರ ಪತ್ನಿ ಕೊಯಂಬತ್ತೂರಿನಲ್ಲಿರುವ ಮನೆಯಲ್ಲಿ ಗುಂಡೇಟು ತಗಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ ಯಾಗಿದ್ದಾರೆ.  ಕೊಯಂಬತ್ತೂ ರಿನಲ್ಲಿರುವ ಪತ್ನಿಯನ್ನು ಗುಂಡಿಕ್ಕಿ ಕೊಲೆಗೈದ ಬಳಿಕ ಪಾಲಕ್ಕಾಡ್ ವಂಡುಳಿಯ ಮನೆಗೆ ತಲುಪಿ  ಕೃಷ್ಣ ಕುಮಾರ್ ಸ್ವಯಂ ಗುಂಡು ಹಾರಿಸಿಕೊಂಡಿರಬಹುದೆಂದು ಅಂದಾಜಿಸಲಾಗಿದೆ.

75 ದಶಲಕ್ಷ ಯೂನಿಟ್‌ಗೇರಿದ ವಿದ್ಯುತ್ ಉಪಯೋಗ

ಕಾಸರಗೋಡು: ರಾಜ್ಯದಲ್ಲಿ ಪ್ರತಿದಿನ ವಿದ್ಯುತ್ ಉಪಯೋಗ ಈಗ 95 ದಶಲಕ್ಷ ಯೂನಿಟ್‌ಗೇರಿದೆ. ಸಾಧಾರಣವಾಗಿ ಫೆಬ್ರವರಿ ತಿಂಗಳಲ್ಲಿ ವಿದ್ಯುತ್ ಬಳಕೆ ಇಷ್ಟರ ಮಟ್ಟಿಗೇರಿ ರುವುದು ಇದೇ ಪ್ರಥಮವಾಗಿದೆ. ಈ ಮಧ್ಯೆ ಬೇಸಿಗೆ ಮಳೆ ಸುರಿದಲ್ಲಿ ವಿದ್ಯುತ್ ಬಳಕೆ ಇಳಿಯಬಹುದೆಂದು ವಿದ್ಯುನ್ಮಂಡಳಿ ಅಧಿಕಾರಿಗಳು ಹೇಳುತ್ತಿದ್ದಾರೆ. ಇನ್ನು ಮಾರ್ಚ್ ತಿಂಗಳಿಂದ ಬೇಸಿಗೆಕಾಲ ಆರಂಭಗೊಳ್ಳತೊ ಡಗಿದ್ದು, ಆ ವೇಳೆ ದೈನಂದಿನ ವಿದ್ಯುತ್ ಉಪಯೋಗ ಇನ್ನಷ್ಟು ತಾರಕಕ್ಕೇರಲಿದೆ.  ಕಳೆದ ವರ್ಷ ಮೇ 3ರಂದು ರಾಜ್ಯದಲ್ಲಿ 115.995 ದಶಲಕ್ಷ ಯೂನಿಟ್ ವಿದ್ಯುತ್ ಉಪಯೋಗಿಸಲಾಗಿದ್ದು, ಇದು ಇಡೀ …

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರ ಹೇಳಿಕೆ ಪಕ್ಷ ಕ್ಷೀಣಿಸುತ್ತಿರುವ ಭಯದಿಂದ-ಸಿಪಿಎಂ

ಪೈವಳಿಕೆ: ಸಿಪಿಎಂನಿಂದ ಶ್ರೀಮಂತ ವರ್ಗದ ಓಲೈಕೆ ಎಂಬ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಪಿ.ಕೆ. ಫೈಸಲ್‌ರ ಹೇಳಿಕೆ ಕೇರಳದಲ್ಲಿ ಕಾಂಗ್ರೆಸ್ ದಿನ ದಿನಕ್ಕೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಭಯದಿಂದ ನೀಡಿದ ಹೇಳಿಕೆ ಆಗಿದೆಯೆಂದು ಸಿಪಿಎಂ ಮುಖಂಡ ಎಂ.ಸಿ. ನಾಯ್ಕ್ ತಿಳಿಸಿದ್ದಾರೆ. ಕಾಂಗ್ರೆಸ್‌ನ ಪ್ರಮುಖರು ಸಿಪಿಎಂಗೆ ಸೇರಿದ್ದಾರೆ. ತಿರುವನಂತ ಪುರದಲ್ಲಿ ಸಂಸದ ಶಶಿ ತರೂರ್ ಕೂಡ ತೂಗುಯ್ಯಾಲೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಕೆ. ಫೈಸಲ್ ಈ ಹೇಳಿಕೆ ನೀಡಿರಬೇಕೆಂದು ಸಿಪಿಎಂ ಅಭಿಪ್ರಾಯಪಟ್ಟಿದ್ದು, ಪಕ್ಷಕ್ಕೆ ಶ್ರೀಮಂತರು, ಬಡವರೆಂಬ ಬೇಧ ಭಾವವಿಲ್ಲವೆಂದು …

ಕೀರ್ತೇಶ್ವರ ಶ್ರೀ ಸದಾಶಿವ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಚಾಲನೆ

ಮಂಜೇಶ್ವರ: ಕೀರ್ತೇಶ್ವರ ಶ್ರೀ ಸದಾಶಿವ ದೇವಸ್ಥಾನದಲ್ಲಿ ಪುನರ್‌ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ನಿನ್ನೆ ವಿವಿಧ ಕಾರ್ಯಕ್ರಮಗಳೊಂದಿಗೆ ಚಾಲನೆ ನೀಡಲಾಯಿತು. ಗಣಪತಿ ಹೋಮ ಸಹಿತ ವಿವಿಧ ಹೋಮಗಳು ಋತ್ವಿಜರ ಆಗಮನ, ಪೂರ್ಣಕುಂಭ ಸ್ವಾಗತ, ಮಹಾಪೂಜೆ, ಅಂಕುರ ಪೂಜೆ, ಅನ್ನಸಂತರ್ಪಣೆ ಜರಗಿತು. ವಾಸ್ತುಪೂಜೆ, ವಾಸ್ತುಬಲಿ, ರಾತ್ರಿ ಅನ್ನ ಸಂತರ್ಪಣೆ ಜರಗಿತು.

ಭಯೋತ್ಪಾದಕ ನಿಗ್ರಹ ಪಡೆಯ ಮಿಂಚಿನ ಕಾರ್ಯಾಚರಣೆ: ಹೊಸದುರ್ಗದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆ ಬಂಧನ

ಕಾಸರಗೋಡು: ಕಣ್ಣೂರು ಭಯೋ ತ್ಪಾದಕ ನಿಗ್ರಹದಳ (ಎಟಿಎಸ್) ಹೊಸದುರ್ಗ ಪೊಲೀಸರ ಸಹಾಯ ದೊಂದಿಗೆ ನಡೆಸಿದ ಮಿಂಚಿನ ಕಾರ್ಯಾ ಚರಣೆಯಲ್ಲಿ ನಕಲಿ ದಾಖಲು ಪತ್ರ ಗಳೊಂದಿಗೆ ನೆಲೆಸಿದ್ದ  ಬಾಂಗ್ಲಾ ಪ್ರಜೆ ಯಾದ ಯುವಕನನ್ನು ಬಂಧಿಸಿದ್ದಾರೆ. ಹೊಸದುರ್ಗ ಪೊಲೀಸ್ ಠಾಣೆ ಗೊಳಪಟ್ಟ ಬಲ್ಲಾ ಆಲಯಿಲ್ ಪೂಡಂಕಲ್ ಕ್ವಾರ್ಟರ್ಸ್‌ನಲ್ಲಿ ಈತ ಅನಧಿಕೃತವಾಗಿ ವಾಸಿಸುತ್ತಿದ್ದ. ಆ ಬಗ್ಗೆ ಲಭಿಸುತ್ತಿದ್ದ ಗುಪ್ತ ಮಾಹಿತಿಯಂತೆ ಎಟಿಎಸ್ ಮತ್ತು ಪೊಲೀಸರ ತಂಡ  ಅಲ್ಲಿಗೆ ಮಿಂಚಿನ ದಾಳಿ ನಡೆಸಿ  ಆತ ನನ್ನು ಬಂಧಿಸುವಲ್ಲಿ ಸಫಲವಾಗಿದೆ. ಬಂಧಿತನ ಕೈಯಲ್ಲಿದ್ದ ಗುರುತುಚೀಟಿ …