ವಾಟ್ಸಪ್ ಮೂಲಕ ಮುತ್ತಲಾಕ್: ವಿಚ್ಛೇಧನ ನೀಡಿದ ಪತಿಯ ವಿರುದ್ಧ ಯುವತಿಯ ಕುಟುಂಬ ದೂರು

ಕಾಸರಗೋಡು: ವಾಟ್ಸಪ್ ಮೂಲಕ ೨೧ ವರ್ಷದ ಯುವತಿಗೆ ಮುತ್ತಲಾಕ್ ನೀಡಿದ ಪತಿ ವಿರುದ್ಧ ಕೇಸು ದಾಖಲಿಸಲಾಗಿದೆ. ನೆಲ್ಲಿಕಟ್ಟೆ ನಿವಾಸಿ ಅಬ್ದುಲ್ ರಝಾಕ್ ವಿರುದ್ಧ ಕಲ್ಲುರಾವಿ  ನಿವಾಸಿ ದೂರು ನೀಡಿ ದ್ದರು. ಯುವತಿಯ ತಂದೆಯ ಫೋ ನಿಗೆ ಕೊಲ್ಲಿಯಲ್ಲಿ ಉದ್ಯೋಗದಲ್ಲಿರುವ ಅಬ್ದುಲ್ ರಝಾಕ್ ಮುತ್ತಲಾಕ್ ಹೇಳುವ ಸಂದೇಶ ಕಳುಹಿಸಿಕೊಟ್ಟಿ ದ್ದನು. ಫೆ. 21ರಂದು ಘಟನೆ ನಡೆದಿತ್ತು. ಪತಿಯ ಸಂಬಂಧಿಕರು ನಿರಂತರ ಉಪದ್ರವ ನೀಡುತ್ತಿರುವುದಾಗಿ ಯುವತಿ ದೂರಿದ್ದಾಳೆ. ಪತಿಯ ತಾಯಿ, ಇಬ್ಬರು ಸಹೋದರಿಯರು ಸೇರಿ ಆಹಾರ ಕೂಡಾ ನೀಡದೆ ಕೊಠಡಿಯಲ್ಲಿ …

ವಿದ್ಯಾರ್ಥಿಗಳ ನಡುವೆ ಘರ್ಷಣೆ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವು

ಕಲ್ಲಿಕೋಟೆ: ಕಲ್ಲಿಕೋಟೆ ತಾಮರಶ್ಶೇರಿಯಲ್ಲಿ  ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮಧ್ಯೆ ಪರಸ್ಪರ ಮಾರಾ ಮಾರಿ ನಡೆದು  ಅದರಲ್ಲಿ ಎಸ್‌ಎಸ್ ಎಲ್‌ಸಿ ವಿದ್ಯಾರ್ಥಿಯ ತಲೆಗೆ ಗಂಭೀರ ಏಟು ಬಿದ್ದು  ಬಳಿಕ ಚಿಕಿತ್ಸೆ ಮಧ್ಯೆ ಆತ ಸಾವನ್ನಪ್ಪಿದ  ಘಟನೆ ನಡೆದಿದೆ. ಎಳಚ್ಚಿಲ್ ಎಂ.ಜೆ. ಹೈಯರ್ ಸೆಕೆಂಡರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಮುಹಮ್ಮದ್ ಶಹಬಾಸ್ (15) ಸಾವನ್ನಪ್ಪಿದ ವಿದ್ಯಾರ್ಥಿ. ತಲೆಗೆ ಗಂಭೀರ ಏಟು ಬಿದ್ದ ಆತನನ್ನು ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿ ತ್ತಾದರೂ ಅದು ಫಲಕಾರಿಯಾಗದೆ ಇಂದು ಮುಂಜಾನೆ ಆತ ಸಾವನ್ನಪ್ಪಿದ್ದಾನೆ. …

ವೃದ್ದೆಯ ಕುತ್ತಿಗೆಯಿಂದ ಚಿನ್ನದ ಸರ ಅಪಹರಣ ಆರೋಪಿ ಸೆರೆ

ಕಣ್ಣೂರು: ನಡೆದುಕೊಂಡು ಹೋಗುತ್ತಿದ್ದ ವೃದ್ದೆಯ ಕುತ್ತಿಗೆಯಿಂದ 2 ಪವನ್ ತೂಕದ ಚಿನ್ನದ ಸರವನ್ನು ಹಿಡಿದೆಳೆದು ಪರಾರಿಯಾದ ಕಳ್ಳನನ್ನು ಗಂಟೆಗಳ ಮಧ್ಯೆ ಸೆರೆ ಹಿಡಿಯಲಾಗಿದೆ. ಚೀಲೇರಿ ಕನ್ನಾಟಿಪರಂಬ್ ನಿವಾಸಿ ಎಂ.ಎ. ಮುಸ್ತಫ (52)ನನ್ನು ವಳಪಟ್ಟಣಂ ಎಸ್‌ಐ ತಂಡ ಸೆರೆ ಹಿಡಿದಿದೆ. ನಿನ್ನೆ ಮಧ್ಯಾಹ್ನ 12.30ಕ್ಕೆ ಓಣಪರಂಬ್‌ನಲ್ಲಿ ಘಟನೆ ನಡೆದಿದೆ. ಸಿಸಿ ಟಿವಿ ದೃಶ್ಯದ ಆಧಾರದಲ್ಲಿ ಕಳ್ಳನ ಬಗ್ಗೆ ಮಾಹಿತಿ ಲಭಿಸಿತ್ತು.

ಹಿತ್ತಿಲಿಗೆ ಬೆಂಕಿ: ತಪ್ಪಿದ ಭಾರೀ ದುರಂತ

ಬದಿಯಡ್ಕ: ಬದಿಯಡ್ಕ ಸಮೀಪದ ನಾರಂಪಾಡಿ ಕಾರಮೂಲೆಯಲ್ಲಿ ಕೆ.ಎಂ. ಇಬ್ರಾಹಿಂ ಮತ್ತು ಬೀಫಾತುಮ್ಮ ಎಂಬವರ ಮಾಲಕತ್ವದಲ್ಲಿರುವ ಸುಮಾರು ನಾಲ್ಕು ಎಕ್ರೆ ಹಿತ್ತಿಲಿಗೆ ನಿನ್ನೆ ಬೆಂಕಿ ತಗಲಿ ಸಂಭಾವ್ಯ ಭಾರೀ ದೊಡ್ಡ ದುರಂತ ಅದೃಷ್ಟವಶಾತ್ ತಪ್ಪಿಹೋಗಿದೆ.  ಕಾಸರಗೋಡು ಅಗ್ನಿಶಾಮಕದಳ ಸ್ಥಳಕ್ಕಾಗಮಿಸಿ  ತಾಸುಗಳ ತನಕ ನಡೆಸಿದ ಸತತ ಪ್ರಯತ್ನದಿಂದಾಗಿ ಬೆಂಕಿಯನ್ನು ನಂದಿಸುವಲ್ಲಿ ಸಫಲರಾದರು. ಈ ಹಿತ್ತಿಲಲ್ಲಿದ್ದ ಮರಗಳಲ್ಲಿ ಹೆಚ್ಚಿನವು ಬೆಂಕಿಗಾಹುತಿಯಾಗಿದ್ದು, ಎರಡು ವರ್ಷದ ಹಿಂದೆ ಈ ಹಿತ್ತಿಲಲ್ಲಿ ನೆಟ್ಟು ಬೆಳೆಸಿದ್ದ ನೂರಾರು ಮಹಾಗಣಿ, ಗೇರು ಸಸಿಗಳು ಬೆಂಕಿಗಾಹುತಿಯಾಗಿವೆ. ಇದರಿಂದ ಭಾರೀ ನಷ್ಟ …

ಸೋಮವಾರದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ

ಕಾಸರಗೋಡು: ಎಸ್ಎಸ್ ಎಲ್ಸಿ ಪರೀಕ್ಷೆ ಸೋಮವಾರದಿಂದ ಆರಂಭಗೊಳ್ಳಲಿದೆ. ಜಿಲ್ಲೆಯಲ್ಲಿ ಈಬಾರಿ ಒಟ್ಟು 20,581 ವಿದ್ಯಾರ್ಥಿ ಗಳು ಪರೀಕ್ಷೆಗೆ ಬರೆಯಲಿದ್ದಾರೆ.ಜಿಲ್ಲೆಯ ಅತೀ ಹೆಚ್ಚುಎಂಬಂತೆ ಟಿಐಎಚ್ಎಸ್ಎಸ್ ನಾಯಮಾ ರಮೂಲೆ ಶಾಲೆಯಲ್ಲಿ 861 ವಿದ್ಯಾರ್ಥಿಗಳು ಪರೀಕ್ಷೆಗೆ ಬರೆಯಲಿದ್ದಾರೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ಕುಂಬಳೆ ಜಿಎಚ್ಎಸ್ ಎಸ್ನಲ್ಲಿ 643, ಹೊಸದುರ್ಗ ಎಚ್ಎಸ್ಎಸ್ನಲ್ಲಿ 522 ವಿದ್ಯಾ ರ್ಥಿಗಳು ಪರೀಕ್ಷೆಗೆ ಹಾಜರಾಗ ಲಿದ್ದಾರೆ. ಸರಕಾರಿ ಶಾಲೆಗಳ ಪೈಕಿ ಅತಿ ಕಡಿಮೆ ಎಂಬಂತೆ ಮೂಡಂಬೈಲು ಜಿಎಚ್ಎಸ್ನಲ್ಲಿ 12 ವಿದ್ಯಾರ್ಥಿಗಳು ಮಾತ್ರವೇ ಪರೀಕ್ಷೆಗೆ ಬರೆಯಲಿದ್ದಾರೆ.ಈ ಪರೀಕ್ಷೆ ಬರೆಯುವವರಲ್ಲಿ ಅತೀ …

ಆನ್‌ಲೈನ್ ಟ್ರೇಡಿಂಗ್ ಮೂಲಕ ವಂಚನೆ: ಇಬ್ಬರು ಸೆರೆ

ಕಾಸರಗೋಡು: ಆನ್‌ಲೈನ್ ಟ್ರೇಡಿಂಗ್ ವಂಚನೆಯ ಮೂಲಕ ವೈದಿಕನಿಂದ 1.41 ಕೋಟಿಗೂ ಹೆಚ್ಚು ರೂ. ವಂಚಿಸಿದ ಪ್ರಕರಣದಲ್ಲಿ ಪ್ರಧಾನ ಆರೋಪಿಗಳಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಧಾನ ಆರೋಪಿಯಾದ ಮಹಾರಾಷ್ಟ್ರ ನಿವಾಸಿ ಮುಹಮ್ಮದ್ ಜಾವಿದ್ ಅನ್ಸಾರಿ (35), ಕಲ್ಲಿಕೋಟೆ ತಾಮರಶ್ಶೇರಿ ಪೆರುಂಬಳ್ಳಿ ನಿವಾಸಿ ಅಜ್ಮಲ್ ಕೆ. (25) ಎಂಬಿವರನ್ನು ಬಂಧಿಸಲಾಗಿದೆ. ಇದರಲ್ಲಿ ಪ್ರಧಾನ ಆರೋಪಿಯಾದ ಮಹಾರಾಷ್ಟ್ರ ನಿವಾಸಿ ಮುಹಮ್ಮದ್ ಜಾವಿದ್ ಅನ್ಸಾರಿಯನ್ನು ಪ್ರತ್ಯೇಕ ತನಿಖಾ ತಂಡ ಮಹಾರಾಷ್ಟ್ರದಿಂದ ಸಾಹಸಿಕವಾಗಿ ಬಂಧಿಸಿದೆ. 2024 ನವೆಂಬರ್‌ನಿಂದ 2025 ಜನವರಿ 15ರ ವರೆಗೆ ವಂಚನೆ …

ಹೊಯ್ಗೆ ಸಾಗಾಟದ 2 ವಾಹನ ವಶಪಡಿಸಿದ ಕುಂಬಳೆ ಪೊಲೀಸರು: ಚಾಲಕರ ಬಂಧನ

ಕುಂಬಳೆ: ಹೊಯ್ಗೆ ಸಾಗಾಟ ನಡೆಸುತ್ತಿದ್ದ ಎರಡು ವಾಹನಗಳನ್ನು ಕುಂಬಳೆ ಪೊಲೀಸರು ವಶಪಡಿಸಿ ಚಾಲಕರನ್ನು ಸೆರೆ ಹಿಡಿದಿದ್ದಾರೆ. ಕರ್ನಾಟಕ ಭಾಗದಿಂದ ಬರುತ್ತಿದ್ದ ಟೋರಸ್ ಲಾರಿಯನ್ನು ಕುಂಬಳೆ ಹೆದ್ದಾರಿಯಿಂದ ವಶಪಡಿಸಿ ಚಾಲಕ ಅಬ್ದುಲ್ ರಜಾಕ್ ಎಣ್ಮಕಜೆ (39)ನನ್ನು ಸೆರೆ ಹಿಡಿದಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಏಸ್ ವಾಹನದಲ್ಲಿ ಹೊಯ್ಗೆ ಸಾಗಿಸುತ್ತಿದ್ದಾಗ ಮೊಗ್ರಾಲ್ ಮಸೀದಿ ಪರಿಸರದಿಂದ ವಾಹನವನ್ನು ಸೆರೆ ಹಿಡಿದು ಮೊಹಮ್ಮದ್ ಸಿದ್ದಿಕ್ (36)ನನ್ನು ಸೆರೆ ಹಿಡಿದಿದ್ದಾರೆ. ಎರಡೂ ವಾನಹನಗಳನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ.

ಗಲ್ಫ್ ಉದ್ಯಮಿ ಅಬ್ದುಲ್ ಗಫೂರ್ ಹಾಜಿ ಕೊಲೆ ಪ್ರಕರಣ: ಮಂತ್ರವಾದಿನಿ ಸೇರಿದಂತೆ ಐವರು ಆರೋಪಿಗಳ ಮೇಲಿನ ಚಾರ್ಜ್ ಶೀಟ್ ಇಂದು ಸಲ್ಲಿಕೆ

ಕಾಸರಗೋಡು: ಗಲ್ಫ್ ಉದ್ಯಮಿ ಪಳ್ಳಿಕ್ಕೆರೆ ಪೂಚಕ್ಕಾಡ್ ಫಾರೂಕ್ ಮಸೀದಿ ಬಳಿಯ ಬೈತುಲ್ ಮಂಜಿಲ್ನ ಸಿ.ಎಂ. ಅಬ್ದುಲ್ ಗಫೂರ್ ಹಾಜಿ (55)ರನ್ನು ಕೊಲೆಗೈದ ಪ್ರಕರಣಕ್ಕೆ ಸಂಬAಧಿಸಿ ಬಂಧಿತರಾದ ಆರೋಪಿಗಳ ಪೈಕಿ ಮಂತ್ರವಾದಿನಿ ಸೇರಿದಂತೆ ಐವರು ಆರೋಪಿಗಳ ಮೇಲಿನ ದೋಷಾರೋಪ ಪಟ್ಟಿಯನ್ನು ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿರುವ ಕಾಸರಗೋಡು ಡಿಸಿಆರ್ಬಿ ಡಿವೈಎಸ್ಪಿ ಕೆ.ಜೆ. ಜೋನ್ಸನ್ ಅವರು ಇಂದು ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (1)ಕ್ಕೆ ಇಂದು ಸಲ್ಲಿಸುವರು.ಮೂಲತಃ ಮಧೂರು ಉಳಿಯತ್ತಡ್ಕ ನೇಶನಲ್ ನಗರ ತುರ್ತಿ ನಿವಾಸಿ ಹಾಗೂ ಈಗ …

ಚಿರತೆ ಭೀತಿ: ವಾಣಿನಗರ, ಕಿನ್ನಿಂಗಾರಿನಲ್ಲಿ ಜನಜಾಗೃತಿ ಸಭೆ, ಪ್ರತಿಭಟನೆ

ಪೆರ್ಲ: ಕೊಳತ್ತೂರಿನಲ್ಲಿ ಅರಣ್ಯ ಇಲಾಖೆ ಸ್ಥಾಪಿಸಿದ ಬೋನಿನೊಳಗೆ ಸಿಲುಕಿದ ಚಿರತೆಯನ್ನು ಕೇರಳ ಕರ್ನಾಟಕ ವ್ಯಾಪ್ತಿಯ ಬಂಟಾಜೆ ರಕ್ಷಿತಾರಣ್ಯ ಬಳಿ ಕಾಡಿಗೆ ಬಿಟ್ಟಿದ್ದಾರೆಂಬ ವದಂತಿ ಹಿನ್ನೆಲೆಯಲ್ಲಿ ಜನರು ಆತಂಕಗೊಂಡಿದ್ದು, ಈ ಹಿನ್ನೆಲೆಯಲ್ಲಿ ವಾಣೀನಗರ ಹಾಗೂ ಕಿನ್ನಿಂಗಾರಿನಲ್ಲಿ ನಿನ್ನೆ ಜನಜಾಗೃತಿ ಸಭೆ ನಡೆಯಿತು.  ವಾಣಿನಗರದಲ್ಲಿ ನಡೆದ ಸಭೆಯನ್ನು ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿ ಮಾತನಾಡಿ, ಚಿರತೆಯ ಬಗ್ಗೆ ಆತಂಕ ಬೇಡ, ಪ್ರಸ್ತುತ ಸಮಸ್ಯೆಗೆ ಸಂಬಂಧಿಸಿ ಅಗತ್ಯವಿದ್ದರೆ ಎರಡೂ ರಾಜ್ಯಗಳ ಅರಣ್ಯ ಇಲಾಖೆ ಸಚಿವರ ಗಮನಕ್ಕೆ ತರಲಾಗುವುದು. ಕಾಡು ಪ್ರಾಣಿ ಉಪಟಳದ …

ಸೆಂಟ್ರಿಂಗ್ ಕಾರ್ಮಿಕ ನಿಧನ

ಮಂಗಲ್ಪಾಡಿ: ಇಲ್ಲಿಗೆ ಸಮೀಪದ ಕೃಷ್ಣನಗರ ನಿವಾಸಿ ದಿ| ಸಿ. ತನಿಯರ ಪುತ್ರ ಸೆಂಟ್ರಿಂಗ್ ಕಾರ್ಮಿಕ ವಿಶ್ವನಾಥ (50) ನಿನ್ನೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಮಿನಿ, ಮಕ್ಕಳಾದ ನಿತಿನ್, ಶ್ವೇತ, ಅಳಿಯ ಪ್ರವೀಣ, ಸಹೋದರರಾದ ಲಕ್ಷ್ಮಣ, ಸುರೇಶ, ಸಹೋದರಿಯರಾದ ಲೀಲಾ, ಸುಮತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ತಾಯಿ ಕಮಲ, ಸಹೋದರ ಪರಮೇಶ್ವರ, ಸಹೋದರಿ ರಾಧ ಈ ಹಿಂದೆ ನಿಧನರಾಗಿದ್ದಾರೆ.