ಬಡಗಿ ನಿಧನ

ಪೈವಳಿಕೆ: ಬಾಯಾರು ವಿಲ್ಲೇಜ್ ಕಚೇರಿ ಸಮೀಪದ ನಿವಾಸಿ ಬಡಗಿ ಲಕ್ಷ್ಮಣ ಆಚಾರ್ಯ (69) ನಿಧನ ಹೊಂದಿದರು. ಆರ್‌ಎಸ್‌ಎಸ್‌ನ ಹಿರಿಯ ಕಾರ್ಯಕರ್ತರಾಗಿದ್ದರು. ಶ್ರೀ ವಿಶ್ವಕರ್ಮ ಸಮಾಜಸೇವಾ ಸಂಘ ಬಾಯಾರ್‌ಪದವು ಇದರ ಮಾಜಿ ಗೌರವಾಧ್ಯಕ್ಷರಾಗಿದ್ದರು. ಮೃತರು ಪತ್ನಿ ಕಮಲಾಕ್ಷಿ, ಮಕ್ಕಳಾದ ಶಿಲ್ಪ, ಗಿರೀಶ, ಅಳಿಯ ಸುರೇಶ್ ಪುತ್ತೂರು, ಸೊಸೆ ಮೈತ್ರಿ, ಸಹೋದರ ಯೋಗೇಂದ್ರ ಆಚಾರ್ಯ, ಸಹೋದರಿಯರಾದ ಸುಮತಿ, ಪುಷ್ಪ, ವೇದಾವತಿ, ಪಾರ್ವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಗೋಪಾಲಕೃಷ್ಣ ಆಚಾರ್ಯ ಈ ಹಿಂದೆ ನಿಧನ ಹೊಂದಿದ್ದಾರೆ. ನಿಧನಕ್ಕೆ …

ಕುಂಬಳೆ ಪೇಟೆಗೆ ದಾರಿ ಮೊಟಕು: ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಮುಖಂಡರು ಭೇಟಿ

ಕುಂಬಳೆ:  ರಾಷ್ಟ್ರೀಯ ಹೆದ್ದಾರಿ  ಅಭಿವೃದ್ಧಿಯಾದಾಗ ಜಿಲ್ಲೆಯ ಎಲ್ಲಾ ಪೇಟೆಗಳೂ ಅಭಿವೃದ್ಧಿಯಾಗಿದ್ದರೆ ಕುಂಬಳೆ ಪೇಟೆಯಲ್ಲಿ ಮಾತ್ರ ದಾರಿ ಮುಚ್ಚಿದ ಕ್ರಮವನ್ನು ಪುನರ್ ಪರಿಶೀಲಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆಗ್ರಹಿಸಿದರು. ನಿರ್ಮಾಣ ಪ್ರಗತಿಯಲ್ಲಿರುವಾಗ ಸೂಕ್ತ ರೀತಿಯಲ್ಲಿ ಜವಾಬ್ದಾರಿ ಹೊಂದಿದವರು ಹಸ್ತಕ್ಷೇಪ ನಡೆಸದಿರುವುದೇ ಕುಂಬಳೆ ಪೇಟೆಗೆ ಈ ರೀತಿಯ ಸಂಕಷ್ಟ ಉಂಟಾ ಗಲು ಕಾರಣವೆಂದು ಅಶ್ವಿನಿ ಆರೋಪಿ ಸಿದರು. ಪೇಟೆಯ ಸಂಚಾರ ಸಂಕಷ್ಟವನ್ನು ಸ್ವತಃ ಕಾಣಲು ಕುಂಬಳೆಗೆ ತಲುಪಿದ ಎಂ.ಎಲ್. ಅಶ್ವಿನಿ ಸ್ಥಳೀಯರು, ವ್ಯಾಪಾರಿಗಳು, ರಾಜಕೀಯ ಪಕ್ಷದ ಪ್ರತಿನಿಧಿಗಳು, ಸಂಘಸಂಸ್ಥೆಗಳ …

ಜ್ಯೂಸ್ ಎಂದು ತಿಳಿದು ಸೀಮೆಎಣ್ಣೆ ಕುಡಿದ ಮಗು ಮೃತ್ಯು

ತಿರುವನಂತಪುರ: ಹಣ್ಣಿನ ರಸವೆಂದು ತಿಳಿದು ಸೀಮೆ ಎಣ್ಣೆಯನ್ನು ಕುಡಿದ ಎರಡು ವರ್ಷದ ಮಗು ಚಿಕಿತ್ಸೆ ಮಧ್ಯೆ ಮೃತಪಟ್ಟಿದೆ. ಕನ್ಯಾಕುಮಾರಿ ಜಿಲ್ಲೆಯ ಪನಚ್ಚಮೂಡಿನ್ ಸಮೀಪ ದೇವಿಕೂಡ್ ನಿವಾಸಿಗಳಾದ ಅನಿಲ್- ಅರುಣ ದಂಪತಿಯ ಪುತ್ರನಾದ ಆರೋನ್ ಮೃತಪಟ್ಟ ಮಗು. ಗುರುವಾರ ಸಂಜೆ ಸಹೋದರಿಯ ಜೊತೆ ಆಟವಾಡುತ್ತಿದ್ದ ಮಧ್ಯೆ ಜ್ಯೂಸ್ ಬಾಟಲಿಯಲ್ಲಿ ತೆಗೆದಿರಿಸಿದ್ದ ಸೀಮೆ ಎಣ್ಣೆಯನ್ನು ಮಗು ಕುಡಿದಿತ್ತು.

ಆಶಾ ಕಾರ್ಯಕರ್ತೆಯರಿಗೆ ಬೆಂಬಲ ಸೂಚಿಸಿ ಪೈವಳಿಕೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ಪೈವಳಿಕೆ: ಮಾಸಿಕ ಗೌರವಧನ ಏರಿಕೆ ಸಹಿತ ವಿವಿಧ ಬೇಡಿಕೆ ಮುಂದಿರಿಸಿಕೊಂಡು ಮುಷ್ಕರ ನಿರತರಾಗಿರುವ ಆಶಾಕಾರ್ಯಕರ್ತೆ ಯರು ಮುಷ್ಕರ ನಿಲ್ಲಿಸಿ ಕೂಡಲೇ ಸೇವೆಗೆ ಹಾಜರಾಗಬೇಕೆಂಬ ರಾಜ್ಯ ಸರಕಾರದ ಆದೇಶದ ವಿರುದ್ಧ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಪೈವಳಿಕೆ ಪಂಚಾಯತ್ ಕಚೇರಿ ಮುಂಭಾಗ ಆದೇಶದ ಪ್ರತಿ ಉರಿಸಿ ಪ್ರತಿಭಟನೆ ನಡೆಸಲಾಯಿತು. ಮಂಡಲ ಅಧ್ಯಕ್ಷ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದರು. ಬ್ಲೋಕ್ ಕಾಂಗ್ರೆಸ್ ಕಾರ್ಯದರ್ಶಿ ರಾಘವೇಂದ್ರ ಭಟ್ ಉದ್ಘಾಟಿಸಿದರು. ಅಸೀಸ್ ಕಳಾಯಿ ಶುಭ ಹಾರೈಸಿದರು. ಶಾಜಿ ಎನ್.ಸಿ. ಸ್ವಾಗತಿಸಿ, ಚನಿಯಪ್ಪ …

ಪತಿಯ ನಿಧನದ ಬೆನ್ನಲ್ಲೇ ಪತ್ನಿಯೂ ನಿಧನ

ಕಾಸರಗೋಡು: ಆಲಂಪಾಡಿಯಲ್ಲಿ ಪತಿ ನಿಧನ ಹೊಂದಿದ ಬೆನ್ನಲ್ಲೇ ಪತ್ನಿಯೂ ನಿಧನರಾದರು. ಸಣ್ಣ ಆಲಂಪಾಡಿಯ ನಿವಾಸಿ ಸಿ. ಅಬ್ದುಲ್ ಖಾದರ್ ಹಾಜಿ (98), ಪತ್ನಿ ಆಯಿಷಾ (92) ಎಂಬಿವರು ನಿಧನರಾಗಿದ್ದಾರೆ. ಗುರುವಾರ ರಾತ್ರಿ ಅಬ್ದುಲ್ ಖಾದರ್ ಹಾಜಿ ನಿಧನ ಹೊಂದಿದರೆ, ನಿನ್ನೆ ಬೆಳಿಗ್ಗೆ ಅವರ ಪತ್ನಿ ಆಯಿಷಾ ನಿಧನರಾಗಿದ್ದಾರೆ. ಬಳಿಕ ಇವರಿಬ್ಬರ ಮೃತದೇಹಗಳನ್ನು ಆಲಂಪಾಡಿ ಜುಮಾ ಮಸೀದಿ ಬಳಿ ಅಂತ್ಯ ಕ್ರಿಯೆ ನಡೆಸಲಾಯಿತು. ಮೃತರು ಮಕ್ಕಳಾದ ಸಿ.ಎಂ. ಮೊಹಮ್ಮದ್ ಹಾಜಿ, ಅಬ್ದುಲ್ ರಹಿಮಾನ್ ಹಾಜಿ, ಉಮ್ಮರ್ ಹಾಜಿ, ರುಖಿಯಾ …

ರಾಜ್ಯ ಮಟ್ಟದ ಚುಟುಕು ಕೃತಿ ಸ್ಪರ್ಧೆ: ಶ್ರೀಕೃಷ್ಣಯ್ಯ ಅನಂತಪುರ ಅವರ ಕೃತಿ ಪ್ರಥಮ

ಕಾಸರಗೋಡು: ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಬೆಳ್ಳಿಹಬ್ಬ ಹಾಗೂ ಜಿಲ್ಲಾ ಸಮ್ಮೇಳನದ ಅಂಗವಾಗಿ ನಡೆದ ರಾಜ್ಯಮಟ್ಟದ ಚುಟುಕು ಕೃತಿಗಳ ಸ್ಪರ್ಧೆಯಲ್ಲಿ ಶ್ರೀ ಕೃಷ್ಣಯ್ಯ ಅನಂತಪುರ ಅವರ “ಎದೆ ಬಿಗಿದ ಕ್ಷಣಗಳು” ಕೃತಿ ಪ್ರಥಮ ಸ್ಥಾನ ಗಳಿಸಿದೆ. ವಿಠ್ಠಲ ಗಾಂವಕರ ಶೆಟಗೇರಿ ಅವರ “ಅವ್ವಳ ನುಡಿದಂಡೆ” ಎರಡನೆಯ ಬಹುಮಾನ, ಡಾ. ಪ್ರಭಾಕರ ನಾಯಕ ಅಂಕೋಲಾ ಅವರ “ಮಂಗಳಾರತಿ” ಮೂರನೆಯ ಬಹುಮಾನ ಪಡೆದಿದೆ. ಡಾ. ಮಲ್ಲಿಕಾರ್ಜುನ ಛಬ್ಬಿ ಅವರ “ಹನಿ ಹಣತೆ” ಮೆಚ್ಚುಗೆ ಪಡೆದ ಕೃತಿಯಾಗಿದೆ. ನಾಳೆ ಬೆಳಗಾವಿಯ …

ಕುಂಬಳೆ ಮಖಾಂ ಉರೂಸ್ ಅಕ್ಟೋಬರ್ 24ರಿಂದ

ಕುಂಬಳೆ: ಕುಂಬಳೆ ಮಖಾಂ ಉರೂಸ್ ಅಕ್ಟೋಬರ್ 24ರಿಂದ ನವೆಂಬರ್ 2ರವರೆಗೆ ವಿವಿಧ ಕಾರ್ಯ ಕ್ರಮಗಳೊಂದಿಗೆ ನಡೆಯಲಿದೆ ಎಂದು ಕುಂಬಳೆ ಬದರ್ ಜುಮಾ ಮಸೀದಿ ಯಲ್ಲಿ ನಡೆದ ಮಹಲ್ ಜಮಾಯತ್, ನೆರೆಯ ಜಮಾಯತ್‌ಗಳ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಕೆ.ಎಸ್. ಅಲಿ ತಂಙಳ್ ಕುಂಬೋಳ್, ಮುನಿರುಲ್ ಅಹ್ದಲ್ ತಂಙಳ್, ಯಾಹ್ಯಾ ತಂಙಳ್ ಆರಿಕ್ಕಾಡಿ, ಕುಂಬಳೆ ಖತೀಬ್ ಉಮರ್ ಹುದವಿ, ಜಮಾಯತ್ ಅಧ್ಯಕ್ಷ ಹಮೀದ್ ಹಾಜಿ, ಪ್ರಧಾನ ಕಾರ್ಯದರ್ಶಿ ಮಮ್ಮು ಹಾಜಿ, ಕೋಶಾಧಿಕಾರಿ ಅಬ್ದುಲ್ಲ ತಾಜ್, ಕೆ.ಎಂ. ಅಬ್ಬಾಸ್, ಹನೀಫ್ ಕುಂಟಂಗೇರಡ್ಕ, …

ಕಾಸರಗೋಡು ನಗರದಲ್ಲಿ ವಿದ್ಯುತ್ ಮೊಟಕು ಪರಿಹರಿಸಲು ಮರ್ಚೆಂಟ್ಸ್ ಅಸೋಸಿಯೇಶನ್ ಆಗ್ರಹ

ಕಾಸರಗೋಡು: ನಗರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಹೆಸರಲ್ಲಿ ಹಲವು ತಿಂಗಳುಗಳಿಂದ ಹಗಲು ಹೊತ್ತಿನಲ್ಲಿ ವಿದ್ಯುತ್ ವಿಚ್ಛೇದನ ನಡೆಸಲಾಗುತ್ತಿದ್ದು, ಇದು ಜನರ ಜೀವನ ದುಸ್ಸಾಹಗೊಳಿಸಿದೆ ಎಂದು ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಘಟಕ ದೂರಿದೆ. ಕೆಎಸ್‌ಇಬಿಯ ಈ ಕ್ರಮ ಸಾರ್ವಜನಿಕರಿಗೆ, ವ್ಯಾಪಾರಿಗಳಿಗೆ ಸಂದಿಗ್ಧತೆ ಸೃಷ್ಟಿಸುತ್ತಿದೆ. ಐಸ್‌ಕ್ರೀಂ, ಚಾಕಲೇಟ್ ಸಹಿತ ವಿವಿಧ ಆಹಾರ ಪದಾರ್ಥಗಳು ವಿದ್ಯುತ್ ಇಲ್ಲದ ಕಾರಣ ನಾಶವಾಗುತ್ತಿದ್ದು, ವ್ಯಾಪಾರಿಗಳಿಗೆ ಭಾರೀ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತಿದೆ. ಬಿಸಿ ಹೆಚ್ಚಾಗುತ್ತಿದ್ದು, ಉತ್ಸವ ಸೀಸನ್ ಆರಂಭಿಸಿರುವ ಸನ್ನಿವೇಶದಲ್ಲಿ ಅತ್ಯಂತ ತುರ್ತು ಪ್ರಾಮುಖ್ಯದೊಂದಿಗೆ …

ರೋಡ್ ರೋಲರ್ ಹಿಂಭಾಗಕ್ಕೆ ಢಿಕ್ಕಿ ಹೊಡೆದ ಕಾರು: ಓರ್ವ ಮೃತ್ಯು, ಇನ್ನೋರ್ವ ಗಂಭೀರ

ಕಾಸರಗೋಡು: ರೋಡ್‌ರೋಲರ್‌ನ ಹಿಂಭಾಗಕ್ಕೆ ಕಾರು ಢಿಕ್ಕಿಹೊಡೆದು ಓರ್ವ ಮೃತಪಟ್ಟ ಘಟನೆ ನಡೆದಿದ್ದು, ಸಹ ಪ್ರಯಾಣಿಕ ಗಾಯಗೊಂಡಿದ್ದಾರೆ. ಢಿಕ್ಕಿಯ ಆಘಾತಕ್ಕೆ ಕಾರಿನ ಮುಂಭಾಗ ಹಾನಿಗೊಂಡು 50 ಮೀಟರ್‌ನಷ್ಟು ಹಿಂದಕ್ಕೆ ಚಲಿಸಿ ಕಾರು ನಿಂತಿದೆ. ಮಲಪ್ಪುರಂ ತಿರುರಂಗಾಡಿ ಮಂಬರದ ಕುಂಞಾಲಿ ಹಾಜಿಯವರ ಪುತ್ರ ಮೆಹಬೂಬ್ (32) ಮೃತಪಟ್ಟವರು. ಗಂಭೀರ ಗಾಯಗೊಂಡ ಸಹ ಪ್ರಯಾಣಿಕನನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಿಗ್ಗೆ ಮೊಗ್ರಾಲ್ ಪುತ್ತೂರು ರಾಷ್ಟ್ರೀಯ ಹೆದ್ದಾರಿ ಕಲ್ಲಂಗೈಯಲ್ಲಿ ಧಾರುಣ ಅಪಘಾತ ಸಂಭವಿಸಿದೆ. ಮಂಗಳೂರು ಭಾಗದಿಂದ ಆಗಮಿಸುತ್ತಿದ್ದ ಕಾರು …

ಗಾಂಜಾ ಪ್ರಕರಣದಲ್ಲಿ ಸೆರೆ ಹಿಡಿಯಲು ಹೋದಾಗ ಪೊಲೀಸರಿಗೆ ಆಕ್ರಮಣ: ಆರೋಪಿ ಸೆರೆ

ಕಾಸರಗೋಡು:  ಗಾಂಜಾ ಪ್ರಕರಣದಲ್ಲಿ ಆರೋಪಿಯಾದ ವ್ಯಕ್ತಿಯನ್ನು ಸೆರೆಹಿಡಿಯಲು ಹೋದಾಗ ಪೊಲೀಸರಿಗೆ ಆಕ್ರಮಿಸಿ  ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು  ಸೆರೆಹಿಡಿದು ಕೇಸು ದಾಖಲಿಸಲಾಗಿದೆ.  ಟೌನ್ ಸ್ಟೇಶನ್ ಸಿಪಿಒ ನೀರ್ಚಾಲು ನಿವಾಸಿ ಭಕ್ತಶೈವಲ್ ನೀಡಿದ ದೂರಿನಂತೆ ಈತನ ವಿರುದ್ಧ ಪೊಲೀಸರಿಗೆ ಆಕ್ರಮಣ ನಡೆಸಿದ ಬಗ್ಗೆಯೂ ಕೇಸು ದಾಖಲಿಸಲಾಗಿದೆ. ನಿನ್ನೆ ಹೈಯರ್ ಸೆಕೆಂಡರಿ ಶಾಲೆಯೊಂದರ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಜರಗಿದ್ದು, ಇದರಲ್ಲಿ ಗಾಂಜಾ ಮಾರಾಟ ನಡೆಸಲು ಸಾಧ್ಯತೆ ಇದೆಯೆಂಬ ಸೂಚನೆ ಮೇರೆಗೆ ಪೊಲೀಸರು ತಲುಪಿ ತನಿಖೆ ನಡೆಸುತ್ತಿದ್ದರು. ಆ ವೇಳೆ …