ಪಾಲಕುನ್ನು ಭರಣಿ ಮಹೋತ್ಸವ: ಸುಡುಮದ್ದು ಸ್ಫೋಟ; ಕೇಸು ದಾಖಲು

ಕಾಸರಗೋಡು: ಪಾಲಕುನ್ನು ಶ್ರೀ ಭಗವತೀ ಕ್ಷೇತ್ರದಲ್ಲಿ ಭರಣಿ ಮಹೋತ್ಸವದ ಅಂಗವಾಗಿ ಸುಡುಮದ್ದು ಪ್ರದರ್ಶನ ನಡೆಸಿದ ಸಂಬಂಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕ್ಷೇತ್ರ ಆಡಳಿತ ಸಮಿತಿ ಪ್ರಧಾನ ಕಾರ್ಯ ದರ್ಶಿ ರಾಜೇಂದ್ರನಾಥ್, ಅಧ್ಯಕ್ಷ ನ್ಯಾಯವಾದಿ ಕೆ. ಬಾಲಕೃಷ್ಣನ್, ಸುಡುಮದ್ದು ಸ್ಫೋಟ ನಡೆಸಿದ ನೀಲೇಶ್ವರ ಚೆರಪ್ಪುರಂ ಪಾಲಕ್ಕಾಟ್ ಹೌಸ್‌ನ ಪಿ.ವಿ. ದಾಮೋದರನ್ (73) ಹಾಗೂ ಕಂಡರೆ ಪತ್ತೆಹಚ್ಚ ಬಹುದಾದ ಇತರ ಐದು ಮಂದಿ ವಿರುದ್ಧ ಬೇಕಲ ಪೊಲೀಸರು ಕೇಸು ದಾಖಲಿಸಿದ್ದಾರೆ. ಇನ್ಸ್‌ಪೆಕ್ಟರ್ ಕೆ.ಪಿ. ಶೈನ್‌ರ ದೂರಿನಂತೆ ಕೇಸು ದಾಖಲಿಸಲಾಗಿದೆ. ಉತ್ಸವ …

ಕಾಂಗ್ರೆಸ್ ಭಿನ್ನಮತ ಪರಿಹರಿಸಲು  ದಿಲ್ಲಿಯಲ್ಲಿ ಇಂದು ತುರ್ತು ಸಭೆ

ನವದೆಹಲಿ: ಕಾಂಗ್ರೆಸ್‌ನ ಕೇರಳ ಘಟಕದಲ್ಲಿ ನಾಯಕತ್ವ ಬದಲಾವಣೆಗಿ ರುವ ಬೇಡಿಕೆಯನ್ನು ಪಕ್ಷದ ಕೆಲವು ರಾಜ್ಯ ನೇತಾರರು ಮುಂದಿರಿಸಿ, ಆ ವಿಷಯದಲ್ಲಿ ಪಕ್ಷದ ರಾಜ್ಯ ಘಟಕದಲ್ಲಿ ತಲೆದೋರಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು  ಕಾಂಗ್ರೆಸ್ ಹೈಕಮಾಂಡ್ ದಿಲ್ಲಿಯಲ್ಲಿ ಇಂದು  ಪಕ್ಷದ ಕೇರಳ ಘಟಕದ ನಾಯಕರ ತುರ್ತು ಸಭೆ ಕರೆದಿದೆ. ಚರ್ಚೆಯಲ್ಲಿ ಭಾಗವಹಿಸಲು ಕಾಂಗ್ರೆಸ್‌ನ ಹೆಚ್ಚಿನ ಎಲ್ಲಾ ನೇತಾರರು ಈಗಾಗಲೇ ದಿಲ್ಲಿಗೆ ತಲುಪಿದ್ದಾರೆ. ಸಭೆಯಲ್ಲಿ ತಾನೂ ಭಾಗವಹಿಸುವುದಾಗಿ ಇನ್ನೊಂದೆಡೆ ಪಕ್ಷದ  ರಾಜ್ಯ ನೇತೃತ್ವ ದೊಂದಿಗೆ ಸೆಟೆದು  ನಿಂತಿರುವ ತಿರುವ ನಂತಪುರ ಸಂಸದ …

74.8 ಗ್ರಾಂ ಎಂಡಿಎಂಎ ಸಹಿತ ಇಬ್ಬರ ಸೆರೆ

ಉಪ್ಪಳ: ಮಾದಕವಸ್ತುವಾದ ಎಂಡಿಎಂಎ ಸಾಗಿಸುತ್ತಿದ್ದ ಇಬ್ಬರನ್ನು ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ. ಮೀಯಪದವು ಬೇರಿಕೆ ನಿವಾಸಿಗಳಾದ ಸಯ್ಯಿದ್ ಅಫ್ರೀಝ್ (25), ಮುಹಮ್ಮದ್ ಝಮೀರ್ ಎಸ್.ಕೆ (24) ಎಂಬಿವರನ್ನು ಮಂಜೇಶ್ವರ ಎಸ್.ಐ ರತೀಶ್ ನೇತೃತ್ವದ ಪೊಲೀಸರು  ಬಂಧಿಸಿ ಕೇಸು ದಾಖಲಿಸಿಕೊಂಡಿದ್ದಾರೆ. ಬಂಧಿತರ ಕೈಯಲ್ಲಿದ್ದ 74.8 ಗ್ರಾಂ ಎಂಡಿಎಂಎಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ನಿನ್ನೆ ರಾತ್ರಿ 7.10 ರ ವೇಳೆ ಮೀಂಜ ಪಂಚಾಯತ್‌ನ ಕೊಳಬೈಲಿನಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಆಗಮಿಸಿದ ಸ್ಕೂಟರ್ ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಎಂಡಿಎಂಎ ಪತ್ತೆಯಾಗಿದೆ. ಕಾರ್ಯಾಚರಣೆ …

ಕ್ರಶರ್ ಕಾರ್ಮಿಕ ಕುಸಿದುಬಿದ್ದು ಮೃತ್ಯು

ನೀರ್ಚಾಲು: ಕಗ್ಗಲ್ಲು ಕ್ರಶರ್‌ನ ಕಾರ್ಮಿಕ ಮನೆಗೆ ನಡೆದು ಹೋಗುತ್ತಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಬೇಳ ನಿವಾಸಿ ಶಂಕರ ಪ್ರಸಾದ್ ರೈ (60) ಎಂಬವರು ಮೃತಪಟ್ಟ ವ್ಯಕ್ತಿ. ಇವರು ನೀರ್ಚಾಲು ಬಳಿ ಪೂವಾಳೆಯಲ್ಲಿ ರುವ  ಸ್ಟಾರ್ ಮೆಟಲ್ ಕ್ರಶರ್‌ನ ಕಾರ್ಮಿಕನಾಗಿದ್ದಾರೆ. ನಿನ್ನೆ ಸಂಜೆ ಕೆಲಸ ಮುಗಿಸಿ ಮನೆಗೆ ನಡೆದು ಹೋಗುತ್ತಿದ್ದ  ವೇಳೆ ನೀರ್ಚಾಲು ಪೇಟೆ ಸಮೀಪ ರಸ್ತೆ ಬದಿ ಕುಸಿದು ಬಿದ್ದಿದ್ದರು. ಕೂಡಲೇ ನಾಗರಿಕರು ಅವರನ್ನು ಕಾಸ ರಗೋಡಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. …

ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ ಕರ್ನಾಟಕ ಮದ್ಯ ವಶ: ಇಬ್ಬರ ಸೆರೆ

ಕುಂಬಳೆ: ಆರಿಕ್ಕಾಡಿಯಲ್ಲಿ ಅಬಕಾರಿ ತಂಡ ನಡೆಸಿದ ವಾಹನ ತಪಾಸಣೆ ವೇಳೆ ಆಟೋರಿಕ್ಷಾದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 180 ಎಂ.ಎಲ್ನ 720 ಟೆಟ್ರಾ ಪ್ಯಾಕೆಟ್ ಹಾಗೂ 90 ಎಂಎಲ್ನ 480 ಪ್ಯಾಕೆಟ್ ಸೇರಿದಂತೆ ಒಟ್ಟು 172.8 ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ.ಇದಕ್ಕೆ ಸಂಬAಧಿಸಿ ಕೊಲ್ಲಂಗಾನ ನಿವಾಸಿ ಗಣೇಶ್ (39) ಮತ್ತು ಬೇಳ ವಿಷ್ಣುನಗರದ ರಾಜೇಶ್ (45) ಎಂಬಿಬ್ಬರನ್ನು ಅಬಕಾರಿ ತಂಡ ಬಂಧಿಸಿ ಪ್ರಕರಣ ದಾಖಲಿಸಿಕೊಂ ಡಿದೆ. ಮಾಲು ಸಾಗಿಸಲು ಬಳಸಲಾದ ಆಟೋರಿಕ್ಷಾವನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ.ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್ …

ಆರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ : ಆರೋಪಿಗೆ 133 ವರ್ಷ ಕಠಿಣ ಸಜೆ, 4.5 ಲಕ್ಷ ರೂ. ಜುಲ್ಮಾನೆ

ಕಾಸರಗೋಡು: ಆರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಕಾಸರ ಗೋಡು ಫಾಸ್ಟ್ ಟ್ರಾಕ್ ಸ್ಪೆಷಲ್ ನ್ಯಾಯಾಲಯದ ನ್ಯಾಯಾಧೀಶ ರಾಮುರಮೇಶ್‌ಚಂದ್ರಭಾನು ವಿವಿಧ ಸೆಕ್ಷನ್‌ಗಳಲ್ಲಾಗಿ ಒಟ್ಟು 133 ವರ್ಷ ಕಠಿಣ ಸಜೆ ಹಾಗೂ 4.5 ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ವರ್ಕಾಡಿ ಉದ್ದಂಬೆಟ್ಟು ನಿವಾಸಿ ವಿಕ್ಟರ್ ಮೊಂತೇರೋ (43) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ 18 ತಿಂಗಳ ಹೆಚ್ಚುವರಿ ಸಜೆ  ಅನುಭವಿಸಬೇಕಾಗಿದೆಯೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. 2021 ಸೆಪ್ಟಂಬರ್ 10ರ …

ಸೈಬರ್ ವಂಚನೆ : ನಷ್ಟಗೊಂಡ 9 ಲಕ್ಷ ರೂ. ವಾರಿಸುದಾರನಿಗೆ ಹಿಂತಿರುಗಿಸಿದ  ಪೊಲೀಸ್

ಕಾಸರಗೋಡು: ಸೈಬರ್ ವಂಚನೆ ಮೂಲಕ ನಷ್ಟಗೊಂಡ ಹಣವನ್ನು ಕಾಸರಗೋಡು ಸೈಬರ್ ಪೊಲೀಸರು ಹಿಂಪಡೆದು ಅದನ್ನು ವಾರೀಸುದಾರರಿಗೆ ಹಿಂತಿರುಗಿಸುವ ಮೂಲಕ ಸ್ತುತ್ಯರ್ಹ ಸೇವೆ ನಿರ್ವಹಿಸಿದ್ದಾರೆ. ಜೆ.ಎಂ. ಸ್ಟೋಕ್ ಮಾರ್ಕೆಟ್ ಕಂಪೆನಿಯ ಪ್ರತಿನಿಧಿಗಳೆಂ ದು ತಪ್ಪು ತಿಳುವಳಿಕೆ ನೀಡಿ ಎಚ್.ಸಿ.ಎನ್. ಟೆಕ್ ಎಂಬ ಹೆಸರಿನ ಕಂಪೆನಿಯ ಶೇರ್ ನೀಡಿರುವುದಾಗಿ ನಂಬಿಸಿದ ವಂಚನೆಗಾರರು 2024 ಮಾರ್ಚ್ ತಿಂಗಳಲ್ಲಿ ಪಡನ್ನ ನಿವಾಸಿಯೋ ರ್ವರ ಬ್ಯಾಂಕ್ ಖಾತೆಯಿಂದ ಆನ್‌ಲೈನ್ ಮೂಲಕ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಎರಡು ಹಂತಗಳಲ್ಲಾಗಿ ಲಕ್ಷಾಂತರ ರೂ. ಲಪಟಾಯಿಸಿ ವಂಚಿಸಿದ್ದರು. …

ರೈಲು ಹಳಿಯಲ್ಲಿ ತಾಯಿ, ಇಬ್ಬರು ಮಕ್ಕಳ ಮೃತದೇಹ ಪತ್ತೆ

ಕೋಟ್ಟಯಂ: ರೈಲು ಹಳಿಯಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ ಸ್ಥಿತಿಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದ್ದಾರೆ. ಏಟುಮಾನೂರು ರೈಲ್ವೇ ಹಳಿಯಲ್ಲಿ ಈ ಮೂರು ಮೃತದೇಹಗಳು ಪತ್ತೆಯಾಗಿವೆ. ಏಟ್ಟುಮಾನೂರು ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ. ಈ ಮೂವರು ಸಂಚರಿಸುತ್ತಿದ್ದ ರೈಲಿನಡಿಗೆ ಹಾರಿ ಆತ್ಮಹತ್ಯೆಗೈದಿರುವುದಾಗಿ ರೈಲಿನ ಲೋಕೋ ಪೈಲಟ್ ತಿಳಿಸಿದ್ದಾರೆ. ರೈಲು ಹಾದು ಹೋಗುತ್ತಿದ್ದ ವೇಳೆ ಈ ಮೂವರು ದಿಢೀರ್ ಆಗಿ ರೈಲು ಹಳಿಗೇರಿದರೆಂದೂ, ಆಗ ನಾನು ಜೋರಾಗಿ ಹಾರ್ನ್ ಮಾಡಿದರೂ ಅವರು ಅದನ್ನು ಲೆಕ್ಕಿಸದೆ ರೈಲಿನಡಿ  ಹಾರಿರುವುದಾಗಿ   ಹೇಳಿದ್ದಾರೆ. …

ಪೆರಿಯಾದಲ್ಲಿ ಚಿರತೆ ಭೀತಿ: ಕೇಂದ್ರೀಯ ವಿ.ವಿ ಪರಿಸರದಲ್ಲಿ ರಾತ್ರಿ ಕರ್ಫ್ಯೂ ಜ್ಯಾರಿ

ಕಾಸರಗೋಡು: ಬೇಡಗಂ, ಅಂಬಲ ತರ, ಕಾರಡ್ಕ ಮೊದಲಾದೆಡೆಗಳಲ್ಲಿ ಇತ್ತೀಚೆಗಿನ ಕೆಲವು ದಿನಗಳಿಂದ ಚಿರತೆ ಭೀತಿ ಎದುರಾಗಿದ್ದು ಅದರಲ್ಲಿ ಒಂದು ಚಿರತೆಯನ್ನು ಬೇಡಡ್ಕ ಸಮೀಪದ ಕೊಳತ್ತೂರಿನಲ್ಲಿ ಅರಣ್ಯ ಇಲಾಖೆಯ ಬೋನಿನಲ್ಲಿ ಸಿಲುಕಿಕೊಂಡು ನಂತರ ಅರಣ್ಯಪಾಲಕರು ಅದನ್ನು ಜಿಲ್ಲೆಯ ಗಡಿ ಪ್ರದೇಶದ ಅರಣ್ಯಕ್ಕೆ ಬಿಟ್ಟ ಬೆನ್ನಲ್ಲೇ ಈಗ ಪೆರಿಯ ಮತ್ತು ಪರಿಸರ ಪ್ರದೇಶಗಳಲ್ಲಿ ಚಿರತೆಗಳು ಪ್ರತ್ಯಕ್ಷಗೊ ಳ್ಳತೊಡಗಿದೆ. ಅದು ಈ ಪ್ರದೇಶದ ಜನರನ್ನು ಭೀತಿಗೊಳಪಡಿಸಿದೆ. ಪೆರಿಯಾದಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯ ಪರಿಸರದಲ್ಲೂ ಚಿರತೆ  ಕಂಡಿರುವುದಾಗಿ  ಆ ಪ್ರದೇಶದವರು ಅರಣ್ಯ ಇಲಾಖೆಗೆ ಮಾಹಿತಿ …

ಬಂಟ್ವಾಳದಲ್ಲಿ ಖೋಟಾನೋಟು ಚಲಾವಣೆಗೆ ಯತ್ನಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಚೆಂಗಳ ನಿವಾಸಿ ಸೆರೆ

ಕಾಸರಗೋಡು: ಬಂಟ್ವಾಳ ಬಿ ಸಿ ರೋಡ್ನಲ್ಲಿ ಅಂಗಡಿಗಳಲ್ಲಿ ಖೋಟಾನೋಟು ಚಲಾವಣೆ ನಡೆಸಲು ಯತ್ನಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಚೆಂಗಳ ನಿವಾಸಿ ಸೆರೆಯಾಗಿದ್ದಾನೆ. ಶೆರೀಫ್ ಎಂಬಾತನನ್ನು ವಿದ್ಯಾನಗರದಿಂದ ಬಂಟ್ವಾಳ ಪೊಲೀಸರು ಸೆರೆಹಿಡಿದಿದ್ದಾರೆ. 2024 ಮೇ 10ರಂದು ಕಾಸರಗೋಡು ಸೂರ್ಲು ನಿವಾಸಿ ಸಿ.ಎ. ಮುಹಮ್ಮದ್, ಪತ್ನಿ ಖಮರುನ್ನಿಸ ಎಂಬಿವರನ್ನು ಖೋಟಾನೋಟು ಸಹಿತ ಬಂಟ್ವಾಳದಿAದ ಪೊಲೀಸರು ಸೆರೆ ಹಿಡಿದಿದ್ದರು. ಈ ಘಟನೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯಾಗಿ ದ್ದಾನೆ ಶೆರೀಫ್. ದಂಪತಿಗಳಿAದ ಅಂದು 500 ರೂ.ಗಳ 46 ಖೋಟಾ ನೋಟುಗಳನ್ನು ಪತ್ತೆಹಚ್ಚಲಾಗಿತ್ತು. ಬಳಿಕ ಕಸ್ಟಡಿಗೆ ಲಭಿಸಿದಾಗ …