ಬೇಕೂರು ಕುಟುಂಬ ಕ್ಷೇಮ ಕೇಂದ್ರ ಕಟ್ಟಡ ಪೂರ್ತಿಯಾದರೂ ಉದ್ಘಾಟನೆ ವಿಳಂಬ
ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ಬೇಕೂರು ಕುಟುಂಬ ಕ್ಷೇಮಕೇಂದ್ರದ ನೂತನ ಕಟ್ಟಡದ ಕಾಮಗಾರಿ ಪೂರ್ತಿ ಗೊಂಡಿದ್ದರೂ ಉದ್ಘಾಟನೆಗೆ ವಿಳಂಬವಾಗುತ್ತಿರುವುದಾಗಿ ದೂರಲಾಗಿದೆ. ಶಾಸಕರ ನಿಧಿಯಿಂದ 25 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿ ಗುತ್ತಿಗೆದಾರ ಬಿಟ್ಟುಕೊಟ್ಟಿದ್ದರೂ ವಯರಿಂಗ್ ಹಾಗೂ ಆವರಣಗೋಡೆ ಕೆಲಸಗಳು ಬಾಕಿ ಉಳಿದಿವೆ. ಇದಕ್ಕಾಗಿ ಪಂಚಾಯತ್ ಹಣ ಬಿಡುಗಡೆಗೊಳಿಸಿದೆ ಎಂದು ಹೇಳಲಾಗುತ್ತಿದೆ. ಹಳೆಯದಾದ ಹೆಂಚು ಹಾಕಿದ ಕಟ್ಟಡದಲ್ಲೇ ಸುಮಾರು 60 ವರ್ಷಗಳ ಕಾಲ ಈ ಕೇಂದ್ರ ಕಾರ್ಯಾಚರಿಸುತ್ತಿತ್ತು. ಕ್ರಮೇಣ ಕಟ್ಟಡ ಶೋಚನೀಯ ಸ್ಥಿತಿಗೆ ತಲುಪಿದಾಗ ಸ್ಥಳೀಯರ ಹಾಗೂ …
Read more “ಬೇಕೂರು ಕುಟುಂಬ ಕ್ಷೇಮ ಕೇಂದ್ರ ಕಟ್ಟಡ ಪೂರ್ತಿಯಾದರೂ ಉದ್ಘಾಟನೆ ವಿಳಂಬ”