ರಾಷ್ಟ್ರದ ಧ್ವಜ ಹಾರಾಡಲು ಹುತಾತ್ಮ ಯೋಧರ ಉಸಿರೇ ಕಾರಣ- ಕೊಂಡೆವೂರು, ಕಾರ್ಗಿಲ್ ವಿಜಯ ದಿವಸ್‌ನಲ್ಲಿ ಅಜಿತ್ ಹನುಮಕ್ಕನವರ್

ಉಪ್ಪಳ: ಭಾರತದ ಸಾರ್ವ ಭೌಮತೆ, ಶಾಂತಿ, ಸಮಾಧಾನಗಳು ನೆಲೆಗೊಳ್ಳಲು, ಭಾರತೀಯ ತ್ರಿವರ್ಣ ಧ್ವಜ ಸ್ವಚ್ಛಂದವಾಗಿ ಹಾರಾಡಲು ವೀರ ಹುತಾತ್ಮ ಸೈನಿಕರ ಉಸಿರು ಕಾರಣ ಎಂದು ರಾಷ್ಟಿçÃಯ ಚಿಂತಕ ಅಜಿತ್ ಹನುಮಕ್ಕನವರ್ ಅಭಿಪ್ರಾಯ ಪಟ್ಟರು. ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಶನಿವಾರ ನಡೆದ ‘ಕಾರ್ಗಿಲ್ ವಿಜಯ್ ದಿವಸ್’ ಆಚ ರಣೆ ಸಮಾರಂಭದಲ್ಲಿ ದಿಕ್ಸೂಚಿ ಭಾಷಣಗೈದು ಅವರು ಮಾತನಾಡಿ ದರು. ಕಾರ್ಗಿಲ್ ಯುದ್ದದ ಮೊದಲ ಹುತಾತ್ಮ ಕ್ಯಾಪ್ಟನ್ ಸೌರಬ್ ಕಾಲಿಯಾ ರನ್ನು ಚಿತ್ರಹಿಂಸೆಗೊಳಪಡಿಸಿದ ಮೃತದೇಹವನ್ನು ಪಾಕಿಸ್ತಾನೀಯರು ಭಾರತಕ್ಕೆ ಹಿಂತಿರುಗಿಸಿದ್ದರು. ಆದರೆ …

ಕೂಲಿ ಕಾರ್ಮಿಕ ನಿಧನ

ಬಾಯಾರು: ಪೆರುವಾಯಿ ಅಡ್ವಾಯಿ ನಿವಾಸಿ ಪ್ರಸ್ತುತ ಬಳ್ಳೂರು ಓಟೆಪಡ್ಪುನಲ್ಲಿ ವಾಸಿಸುತ್ತಿರುವ ಕೂಲಿ ಕಾರ್ಮಿಕ ವೆಂಕಪ್ಪ ನಾಯ್ಕ (54) ನಿಧನ ಹೊಂದಿದರು. ಈ ಹಿಂದೆ ಹಲವು ವರ್ಷಗಳ ಕಾಲ ಕೊಲ್ಲಿಯಲ್ಲಿ ಉದ್ಯೋಗಿಯಾಗಿದ್ದರು. ಮೃತರು ಪತ್ನಿ ರೇವತಿ, ಸಹೋದರರಾದ ಮಾಲಿಂಗ, ಸದಾಶಿವ, ಬಾಲಕೃಷ್ಣ, ಗೋಪಾಲಕೃಷ್ಣ, ಸಹೋದರಿಯರಾದ ಶಶಿಕಲಾ, ರುಕ್ಮಿಣಿ, ಲಕ್ಷ್ಮಿ, ಕಮಲ, ಸೀತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಹೋದ ರರಾದ ವಾಮನ, ನಾರಾಯಣ ಈ ಹಿಂದೆ ನಿಧನರಾಗಿದ್ದಾರೆ.

ಜಾತಿ ಜನಗಣತಿಯಲ್ಲಿ ತೀಯಾರನ್ನು ಪ್ರತ್ಯೇಕ ಸಮುದಾಯವಾಗಿ ದಾಖಲಿಸಬೇಕು- ತೀಯಾ ಮಹಾಸಭಾ

ಕಾಸರಗೋಡು: ಮುಂದಿನ ವರ್ಷ ನಡೆಯಲಿರುವ ಜಾತಿ ಜನಗಣತಿಯಲ್ಲಿ ಮಲಬಾರಿನಲ್ಲಿರುವ ಸುಮಾರು 60 ಲಕ್ಷ ಜನಸಂಖ್ಯೆಯುಳ್ಳ ತೀಯÁರನ್ನು ಪ್ರತ್ಯೇಕ ಸಮುದಾಯ ವಾಗಿ ಸರ್ಕಾರದ ದಾಖಲೆಗಳಲ್ಲಿ ಸೇರಿಸಬೇಕೆಂದು ತೀಯಾ ಮಹಾ ಸಭಾದ ಜಿಲ್ಲಾ ಸಮ್ಮೇಳನ ಆಗ್ರಹಿಸಿದೆ. ಈ ಸಮುದಾಯಕ್ಕೆ ಕೇವಲ ಉಪ ಜಾತಿಯೆಂಬ ಪರಿಗಣನೆಯ ಮೂಲಕ ಅವಕಾಶ ನಿರಾಕರಿಸುವುದು ಅನ್ಯಾ ಯವಾಗಿದೆ. 2026ರ ಜನದಯಗಣತಿ ಯಲ್ಲಿ ತೀಯಾ ಸಮುದಾಯದ ಬೇಡಿಕೆಯನ್ನು ಪರಿಗಣಿಸಲು ಸರಕಾರ ಮತ್ತು ಸಂಬAಧಪಟ್ಟ ಅಧಿಕಾರಿಗಳು ಸಿದ್ಧರಾಗಬೇಕು ಎಂದು ಉದಯಗಿರಿ ಶ್ರೀ ಹರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಸಮ್ಮೇಳನದಲ್ಲಿ …

ಶ್ರೀ ವಿಶ್ವ ಬ್ರಾಹ್ಮಣ ಸೇವಾ ಸಂಘ ವಾರ್ಷಿಕ ಮಹಾಸಭೆ, ವಿನಂತಿ ಪತ್ರ ಬಿಡುಗಡೆ

ಕಾಸರಗೋಡು: ವಿಶ್ವಬ್ರಾಹ್ಮಣ ಸೇವಾ ಸಂಘದ ಮಹಾಸಭೆ ಸಂಘದ ಅಧ್ಯಕ್ಷ ಭುವನೇಶ ಆಚಾರ್ಯ ತಾಳಿಪಡ್ಪು ಇವರ ಅಧ್ಯಕ್ಷತೆಯಲ್ಲಿ ಶ್ರೀ ವಿಶ್ವಕರ್ಮ ಭಜನಾ ಮಂದಿರದಲ್ಲಿ ಜರಗಿತು. ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಕೆ.ಜಿ. ಗಣೇಶ ಆಚಾರ್ಯ ಮಂಡಿಸಿದರು. ನಲ್ಕ ಪ್ರವೀಣ್ ಕುಮಾರ್ ಆಚಾರ್ಯ ಲೆಕ್ಕಪತ್ರ ಮಂಡಿಸಿದರು. ಇದೇ ವೇಳೆ ಶ್ರೀ ವಿಶ್ವಕರ್ಮ ಮಹಿಳಾ ಸಂಘ, ಯುವಕ ಸಂಘ ವಾರ್ಷಿಕ ಮಹಾಸಭೆ ಜರಗಿತು. ಹೇಮಲತಾ ಗಣೇಶ ಆಚಾರ್ಯ ವಾರ್ಷಿಕ ವರದಿ, ಗಾಯತ್ರಿ ಭವಾನಿ ಶಂಕರ ಆಚಾರ್ಯ ಲೆಕ್ಕಪತ್ರ, ಯುವಕ ಸಂಘದ ಕಾರ್ಯದರ್ಶಿ ಕೆರೆಮನೆ …

ಎಡನೀರು ಮಠಕ್ಕೆ ಹೊರೆಕಾಣಿಕೆ ಸಮರ್ಪಣೆ

ಎಡನೀರು: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಯವರ ಪಂಚಮ ಚಾತುರ್ಮಾಸ್ಯ ವ್ರತಾಚಾರಣೆ ಅಂಗವಾಗಿ ಕಾಸರಗೋಡು ವಲಯ ಸಮಿತಿ ವತಿಯಿಂದ ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಿಂದ ಹಸಿರುವಾಣಿ ಹೊರೆಕಾಣಿಕೆ ಆರಂಭಗೊಂಡು ಮಠಕ್ಕೆ ಸಮರ್ಪಿಸಲಾಯಿತು. ಈ ವೇಳೆ ವಲಯ ಸಮಿತಿ ಗೌರವಾಧ್ಯಕ್ಷ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ, ಅಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ, ಉಪಾಧ್ಯಕ್ಷ ಕೆ.ಎನ್. ರಾಮಕೃಷ್ಣ ಹೊಳ್ಳ, ಪ್ರದಾನ ಕಾರ್ಯದರ್ಶಿ ಕೆ. ಜಗದೀಶ್ ಕೂಡ್ಲು, ಕಾರ್ಯದರ್ಶಿಗಳಾದ ಕಿಶೋರ್ ಕುಮಾರ್, ಕೆ.ವಿ. ತಿರುಮಲೇಶ ಹೊಳ್ಳ, ಕೆ.ವಿ. ಶೇಷಾದ್ರಿ …

ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಜಿಲ್ಲಾ ಸಮಿತಿಯಿಂದ ಚಿತ್ರರಚನೆ ಸ್ಪರ್ಧೆ

ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇ ಶನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಮಟ್ಟದ ಚಿತ್ರರಚನೆ ಸ್ಪರ್ಧೆ ನಡೆಸಲಾಯಿತು. ಎ.ಕೆ.ಪಿ.ಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್.ಪಿ., ಯು.ಪಿ. ವಿಭಾಗದ ಹಲವು ವಿದ್ಯಾರ್ಥಿಗಳು ಭಾಗವಹಿಸಿದರು. ಜಿಲ್ಲಾ ಅಧ್ಯಕ್ಷ ಸುಗುಣನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದು, ರಾಜ್ಯ ಕಾರ್ಯದರ್ಶಿ ಹರೀಶ್ ಉದ್ಘಾಟಿಸಿದರು. ರಾಜೇಂದ್ರನ್ ಸ್ವಾಗತಿಸಿ, ಪ್ರಜೀತ್ ಎನ್.ಕೆ. ವಂದಿಸಿದರು. ಸುಧೀರ್ ಕೆ., ಶರೀಫ್, ರಮೇಶನ್, ಪ್ರಜೀಶ್, ಸುರೇಶ್ ಬಿ.ಜೆ, ಸನ್ನಿ ಜೇಕಬ್, ಮನು, ಮನೀಶ್, ಶ್ರೀಕಾಂತ್ ಶುಭ ಹಾರೈಸಿದರು. ಎಲ್.ಪಿ. ವಿಭಾಗ …

ರಸ್ತೆ ಬದಿ ಗಂಭೀರ ಗಾಯಗೊಂಡ ವ್ಯಕ್ತಿ ಸಾವು: ಅಂತ್ಯಕ್ರಿಯೆ ಬಳಿಕ ಪರಿಶೀಲನೆಯಲ್ಲಿ ಬೈಕ್ ಢಿಕ್ಕಿ ಹೊಡೆದಿರುವುದು ಸಾವಿಗೆ ಕಾರಣವೆಂದು ಪತ್ತೆ

ಕಾಸರಗೋಡು: ರಸ್ತೆ ಬದಿ ಗಂಭೀರ ಗಾಯಗೊಂಡು ಬಳಿಕ ಚಿಕಿತ್ಸೆ ಫಲಕಾರಿ ಯಾಗದೆ ಸಾವನ್ನಪ್ಪಿದ ವ್ಯಕ್ತಿಯ ಅಂತ್ಯಕ್ರಿಯೆ ಬಳಿಕ ನಡೆಸಿದ ಪರಿಶೀಲನೆ ಯಲ್ಲಿ ಆ ವ್ಯಕ್ತಿಯ ಸಾವು ವಾಹನ ಅಪ ಘಾತದಿಂದ ಉಂಟಾಗಿ ರುವುದಾಗಿ  ಪತ್ತೆ ಯಾಗಿದ್ದು,  ಆಬಗ್ಗೆ ನೀಡಲಾದ ದೂರಿ ನಂತೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿ ಸಿದ್ದಾರೆ. ಮಧೂರು ಕೋಡಿಮಜಲು ನಿವಾಸಿ ಚನಿಯ-ಲೀಲಾ ದಂಪತಿ ಪುತ್ರ, ಕೂಲಿ ಕಾರ್ಮಿಕ ಚಂದ್ರಹಾಸ ಎಂ (49) ಸಾವನ್ನಪ್ಪಿದ ವ್ಯಕ್ತಿ. ಜುಲೈ ೧೮ರಂದು ಸಂಜೆ ಮಧೂರಿಗೆ ಸಮೀಪದ …

ತೋಡಿಗೆ ಬಿದ್ದು ನರ್ಸ್ ಮೃತ್ಯು

ಕಾಸರಗೋಡು: ಬ್ಲೋಕ್ ಟ್ರೈಬಲ್ ಹೆಲ್ತ್ ನರ್ಸ್ ತೋಡಿಗೆ ಬಿದ್ದು ಮೃತ ಪಟ್ಟರು. ವೆಸ್ಟ್ ಎಳೇರಿ ಮುಡಂದೆನ್ ಪಾರ ನಿವಾಸಿ ಮಾಣಿಕ- ಲಕ್ಷ್ಮಿ ದಂಪತಿ ಪುತ್ರಿ ಬಿಂದು (49) ಮೃತಪಟ್ಟವರು. ನಿನ್ನೆ ಸಂಜೆ ಮನೆ ಸಮೀಪದ ತೋಡಿಗೆ ಇವರು ಬಿದ್ದಿದ್ದು, ಸ್ಥಳೀಯರು ಕೂಡಲೇ ಇವರನ್ನು ಮಾಲೋಮ್ ಆಸ್ಪತ್ರೆಗೆ ತಲುಪಿಸಿದರೂ ಆವಾಗಲೇ ಸಾವು ಸಂಭವಿಸಿದೆ. ನರ್ಕಿಲಕ್ಕಾಡ್ ಕುಟುಂಬ ಆರೋಗ್ಯ ಕೇಂದ್ರದ ನೌಕರೆಯಾಗಿದ್ದಾರೆ. ಮೃತರು ತಂದೆ, ತಾಯಿ, ಪತಿ ಸಾಜನ್, ಮಕ್ಕಳಾದ ತೀರ್ಥ,ತೃಷ್ಣ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಸೌಮ್ಯ ಹಂತಕ ಜೈಲು ಹಾರಿದ ಹಿನ್ನೆಲೆ: ಬಂಧೀಖಾನೆಗಳ ಭದ್ರತೆ ಅವಲೋಕನ ತುರ್ತು ಸಭೆ ಕರೆದ ಮುಖ್ಯಮಂತ್ರಿ

ತಿರುವನಂತಪುರ: ಸೌಮ್ಯ ಕೊಲೆ ಪ್ರಕರಣದಲ್ಲಿ ಜೀವಾವಧಿ ಸಜೆಗೊಳಗಾದ  ಆರೋಪಿ ತಮಿಳುನಾಡಿನ ಗೋವಿಂದಚ್ಚಾಮಿ ನಿನ್ನೆ ಬೆಳಿಗ್ಗೆ ಅತೀವ ಭದ್ರತೆ ಹೊಂದಿರುವ ಕಣ್ಣೂರು ಸೆಂಟ್ರಲ್  ಜೈಲಿನಿಂದ ಹಾರಿದ ಘಟನೆಯನ್ನು  ರಾಜ್ಯ ಸರಕಾರ  ಅತೀವ ಗಂಭೀರವಾಗಿ ಪರಿಗಣಿಸಿದೆ. ಆ ಹಿನ್ನೆಲೆಯಲ್ಲಿ  ರಾಜ್ಯದ ಬಂಧೀಖಾನೆಗಳ ಭದ್ರತೆ ಬಗ್ಗೆ ಅವಲೋಕನ ನಡೆಸಲು ಗೃಹಸಚಿವರೂ ಆಗಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ಇಂದು ಬೆಳಿಗ್ಗೆ ತುರ್ತು ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ರಾಜ್ಯದ ಬಂಧೀಖಾನೆ ಇಲಾಖೆಯ ಮುಖ್ಯಸ್ಥರು, ಗೃಹ ಕಾರ್ಯದರ್ಶಿ ಹಾಗೂ ಪೊಲೀಸ್ ಇಲಾಖೆಯ ವರಿಷ್ಠ …

ಪೆರ್ವತ್ತೋಡಿಯಲ್ಲಿ ಮನೆ ಛಾವಣಿ ಹಾರಿ ನಾಶನಷ್ಟ

ಬೆಳ್ಳೂರು: ನಿನ್ನೆ ಸಂಜೆ ಬೀಸಿದ ಬಲವಾದ ಗಾಳಿಗೆ ಪಂಚಾಯತ್ ವ್ಯಾಪ್ತಿಯ ಪೆರ್ವತ್ತೋಡಿಯಲ್ಲಿ ದಾಮೋದರ ಶೆಟ್ಟಿ ಎಂಬವರ ಹೆಂಚು ಹಾಸಿದ ಮನೆಯ ಛಾವಣಿ ಹಾರಿಹೋಗಿದೆ. ಇದರಿಂದ ಅಪಾರ ನಾಶನಷ್ಟ ಸಂಭವಿಸಿದೆ. ಈ ವೇಳೆ ಮನೆಮಂದಿ ಸ್ಲ್ಯಾಬ್ ಹಾಸಿದ ಹೊರ ವೆರಾಂಡದಲ್ಲಿ ಕುಳಿತಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಹೆಂಚುಗಳೆಲ್ಲಾ ಮನೆಯಂಗಳದಲ್ಲಿ ಬಿದ್ದು ಹುಡಿಯಾಗಿದೆ.