ಜೈಲಿನಿಂದ ಬಿಡುಗಡೆಗೊಂಡ ಬಳಿಕ ಮತ್ತೆ ಮಾದಕವಸ್ತು ಮಾರಾಟ: ಕಾರಿನಲ್ಲಿ ಸಾಗಿಸುತ್ತಿದ್ದ 41.250 ಗ್ರಾಂ ಎಂಡಿಎಂಎ ಸಹಿತ ಇಬ್ಬರ ಸೆರೆ

ಹೊಸದುರ್ಗ: ಮಾದಕ ವಸ್ತು ಪ್ರಕರಣದಲ್ಲಿ ಸೆರೆಗೀಡಾಗಿ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡ ಯುವಕರು 41.250 ಗ್ರಾಂ ಎಂಡಿಎಂಎ ಸಹಿತ ಸೆರೆಗೀಡಾಗಿದ್ದಾರೆ. ಪರಿಯಾರಂ ಚೂಡಲ ಕಾನತ್ತ ಎಂಬಲ್ಲಿನ ಮುಹಮ್ಮದ್ ಅಫ್ರೀದ್ (24), ತಳಿಪರಂಬ ಸಯ್ಯೀದ್ ನಗರದ ಮುಹಮ್ಮದ್ ದಿಲ್ಶಾದ್ (30) ಎಂಬಿವರನ್ನು ಪಯ್ಯನ್ನೂರು ಪೊಲೀಸರು ಹಾಗೂ ಕಣ್ಣೂರು ರೂರಲ್ ಜಿಲ್ಲಾ ಮಾದಕ ವಿರುದ್ಧ ಸ್ಕ್ವಾಡ್ ನಡೆಸಿದ ಕಾರ್ಯಾಚರಣೆಯಲ್ಲಿ ಸೆರೆ ಹಿಡಿಯಲಾಗಿದೆ. ಆರೋಪಿಗಳು ಕಾರಿನಲ್ಲಿ ಮಾದಕವಸ್ತು ಸಹಿತ ಸಂಚರಿಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಈ ಇಬ್ಬರು ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ …

ಶೆಡ್ ಬೆಂಕಿಗಾಹುತಿ : ಭಾರೀ ನಾಶನಷ್ಟ

ಪೆರ್ಲ: ಮನೆ ಸಮೀಪದ ಶೆಡ್ ಬೆಂಕಿಗಾಹುತಿಯಾಗಿ ಭಾರೀ ನಾಶನಷ್ಟ ಸಂಭವಿಸಿದೆ.  ವಾಣಿನಗರ ಬಳಿಯ ಪಡ್ರೆ ಇಳಂತೋಡಿಯಲ್ಲಿ ಸುರೇಶ್ ಎಂಬವರ ಮನೆ ಬಳಿಯಿರುವ ಶೆಡ್ ನಿನ್ನೆ ಮುಂಜಾನೆ ಉರಿದು ನಾಶಗೊಂಡಿದೆ. ಶೆಡ್‌ನಲ್ಲಿದ್ದ 2000 ತೆಂಗಿನಕಾಯಿ, ಮೂರು ಗೋಣಿ ಅಡಿಕೆ ಮತ್ತಿತರ ಪೀಠೋಪಕರಣಗಳು ಪೂರ್ಣವಾಗಿ ಉರಿದು ನಾಶಗೊಂಡಿದೆ. ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಲಾಯಿತು. ಘಟನೆ ಬಗ್ಗೆ ಸುರೇಶ್ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಐದು ಮಂದಿಯ ಕೊಲೆ ಆರೋಪಿಯ ಸಮಗ್ರ ತನಿಖೆ

ತಿರುವನಂತಪುರ: ವೆಂಞಾರ ಮೂಡ್‌ನಲ್ಲಿ  ೫ ಮಂದಿಯನ್ನು ಕೊಲೆ ಗೈದ ಪ್ರಕರಣದ  ಆರೋಪಿ ಅಫಾನ್ (23) ಎಂಬಾತನನ್ನು ಪೊಲೀಸರು   ಸಮಗ್ರ ತನಿಖೆಗೊಳ ಪಡಿಸಲು ನಿರ್ಧರಿಸಿದ್ದಾರೆ. ಪ್ರಸ್ತುತ ಆಸ್ಪತ್ರೆಯಲ್ಲಿ  ದಾಖಲಾಗಿರುವ ಅಫಾನ್‌ನ ಆರೋಗ್ಯ ಸ್ಥಿತಿ  ಸುಧಾರಿಸಿದೆಯೆಂದು   ಆಸ್ಪತ್ರೆ ಯಿಂದ ಬಿಡುಗಡೆಗೊಂಡ ತಕ್ಷಣ ತನಿಖೆ ಗೊಳಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಸಮಗ್ರವಾಗಿ ತನಿಖೆಗೊಳ ಪಡಿಸಿದರೆ ಮಾತ್ರವೇ ಕೊಲೆಕೃತ್ಯಕ್ಕೆ ಕಾರಣವೇನೆಂದು ತಿಳಿಯಬಹುದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಣೀನಗರ, ದೇಶಮೂಲೆ, ಈಳಂತೋಡಿ ಮತ್ತು ಪಳ್ಳತ್ತಮೂಲೆ ವಿದ್ಯುತ್ ವೋಲ್ಟೇಜ್ ಸಮಸ್ಯೆ ಬಗೆಹರಿಸಬೇಕು-ಸಿಪಿಐ

ಪೆರ್ಲ: ಎಣ್ಮಕಜೆ ಪಂಚಾಯ ತ್‌ನ ಏಳನೇ ವಾರ್ಡ್‌ಗೊಳಪಟ್ಟ ವಾಣಿನಗರ, ದೇಶಮೂಲೆ, ಈಳಂತೋಡಿ, ಪಳ್ಳತ್ತಮೂಲೆ ಭಾಗದ ರೈತರು ಸಹಿತ ಸಾರ್ವಜನಿಕರು ಹಲವು ತಿಂಗಳುಗಳಿಂದ ವಿದ್ಯುತ್ ವೋಲ್ಟೇಜ್ ಸಮಸ್ಯೆ ಎದುರಿಸುತ್ತಿ ದ್ದಾರೆ.  ಈ ಸಮಸ್ಯೆ ಪರಿಹಾರಕ್ಕೆ ಈ ಭಾಗದಲ್ಲಿ ನೂತನ ಟ್ರಾನ್ಸ್‌ಫಾರ್ಮರ್ ಸ್ಥಾಪಿಸಬೇಕು ಮತ್ತು ಸಿಂಗಲ್ ಲೈನ್ ವ್ಯವಸ್ಥೆಯನ್ನು ತ್ರೀಫೇಸ್ ಲೈನ್‌ಗಳಾಗಿ ಪರಿವರ್ತಿ ಸಬೇಕು ಎಂದು ವಾಣಿನಗರದಲ್ಲಿ ನಡೆದ ಸಿಪಿಐ ವಾಣಿನಗರ ಬ್ರಾಂಚ್ ಸಮ್ಮೇಳನ ಸಂಬಂಧಪಟ್ಟವರನ್ನು  ಒತ್ತಾಯಿಸಲು ತೀರ್ಮಾನಿಸಿದೆ. ವಾಣಿನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಾಶ್ವತ ವೈದ್ಯಾಧಿಕಾರಿಯನ್ನು ನೇಮಿಸಬೇಕು, ಲ್ಯಾಬ್ …

ಬಂಗ್ರಮಂಜೇಶ್ವರ ಶಿವರಾತ್ರಿ ಮಹೋತ್ಸವ, ಏಕಾಹ ಭಜನೋತ್ಸವಕ್ಕೆ ಚಾಲನೆ

ಮಂಜೇಶ್ವರ : ಬಂಗ್ರಮAಜೇಶ್ವರ ಶ್ರೀ ಕಾಳಿಕಾಪರಮೇಶ್ವರಿ  ದೇವಸ್ಥಾನ ದಲ್ಲಿ  ಓಜ ಸಾಹಿತ್ಯ ಕೂಟ  ಇದರ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ 65ನೇ ವರ್ಷದ ಏಕಾಹ ಭಜನೋ ತ್ಸವ  ಇಂದು ಬೆಳಿಗ್ಗೆ ಆರಂಭಗೊAಡಿತು. ಪ್ರಾರ್ಥನೆ, ಶ್ರೀ ದೇವರಿಗೆ ಸೀಯಾಳ ಅಭಿಷೇಕ, ಪಂಚಾಮೃತ ಅಭಿಷೇಕ, ಅಲಂಕಾರ, ಬಳಿಕ ಬ್ರಹ್ಮಶ್ರೀ ವೇದ ಮೂರ್ತಿ ಪುರೋಹಿತ್.ಕೆ ಉಮೇಶ ತಂತ್ರಿ ಹಾಗೂ ಕ್ಷೇತ್ರದ ಪ್ರಧಾನ ಅರ್ಚಕÀ ಬ್ರಹ್ಮಶ್ರೀ ಪ್ರಕಾಶ್ಚಂದ್ರ ಶ್ರೌತಿ, ಓಜ ಸಾಹಿತ್ಯ ಕೂಟದ ಪದಾಧಿಕಾರಿಗಳು, ಕ್ಷೇತ್ರದ ಪದಾಧಿಕಾರಿಗಳು, ಮಹಿಳಾ ಸಂಘದ ಪದಾಧಿಕಾರಿಗಳು ದೀಪ ಪ್ರಜ್ವಲನೆ …

ನಾರಾಯಣಮಂಗಲ ಶ್ರೀ ಚೀರುಂಬಾ ಭಗವತೀ ಕ್ಷೇತ್ರದಲ್ಲಿ ನಡಾವಳಿ ಮಹೋತ್ಸವ ನಾಳೆಯಿಂದ

ಕುಂಬಳೆ: ನಾರಾಯಣಮಂಗಲ ಶ್ರೀ ಚೀರುಂಬಾ ಭಗವತಿ ಕ್ಷೇತ್ರದಲ್ಲಿ ಐದು ವರ್ಷಗಳಿಗೊಮ್ಮೆ ನಡೆಯುವ ನಡಾವಳಿ ಮಹೋತ್ಸವ ನಾಳೆಯಿಂದ ಮಾರ್ಚ್ 2ರವರೆಗೆ ಜರಗಲಿದೆ.  ನಾಳೆ ಬೆಳಿಗ್ಗೆ 7.30ಕ್ಕೆ ತಂತ್ರಿವರ್ಯ ಬ್ರಹ್ಮಶ್ರೀ ಉಳಾಲುಬೂಡು ಪ್ರಕಾಶ ಕಡಮಣ್ಣಾ ಯರಿಗೆ ಪೂರ್ಣಕುಂಭ ಸ್ವಾಗತ, ೮ಕ್ಕೆ ಸಾಮೂಹಿಕ ಪ್ರಾರ್ಥನೆ, 12 ತೆಂಗಿನಕಾಯಿ ಗಣಪತಿ ಹೋಮ, ನವಕಾಭಿಷೇಕ, ದೈವಗಳಿಗೆ ತಂಬಿಲ, 10ಕ್ಕೆ ಉಗ್ರಾಣ ಮುಹೂರ್ತ, ಭಜನೆ, ಅಪರಾಹ್ನ ಗಂಟೆ 2ರಿಂದ ಹರಿಕಥಾ ಸತ್ಸಂಗ ನಡೆಯಲಿದೆ. ಸಂಜೆ ೫ಕ್ಕೆ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ …

ಚೇವಾರು ಶಾಲೆಯಲ್ಲಿ ಕಲಿಕೋತ್ಸವ

ಉಪ್ಪಳ: ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಕಲಿಕೋತ್ಸವವನ್ನು ಪೈವಳಿಕೆ ಪಂಚಾಯತ್‌ನ ಸದಸೆ್ಯ ರಾಜೀವಿ ಶೆಟ್ಟಿಗಾರ್ ಉದ್ಘಾಟಿಸಿದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಆಸೀಸ್ ಚೇವಾರ್ ಅಧ್ಯಕ್ಷತೆ ವಹಿಸಿದರು. ಮುಖ್ಯ ಶಿಕ್ಷಕ ಶ್ಯಾಮ್ ಭಟ್ ಪ್ರಾಸ್ತಾವಿಕ ನುಡಿದರು. ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಸ್ಮಿತಾ ಶುಭ ಹಾರೈಸಿದರು.ಶಾಲಾ ವ್ಯವಸ್ಥಾಪಕ ಪ್ರತಿನಿಧಿ,ಹೇರೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಶ್ರೀಧರ ಭಟ್,ಕಲಿಕೋತ್ಸವದ ಮಹತ್ವವನ್ನು ವಿವರಿಸಿದರು.ಹಿರಿಯ ಶಿಕ್ಷಕಿ ರಾಜೇಶ್ವರಿ.ಬಿ ಶುಭಾಶಂಸನೆಗೈದರು. ಶಿಕ್ಷಕರಾದ ರವಿಕುಮಾರ್ ಸ್ವಾಗತಿಸಿ, …

ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ಕೋಟಿ ಪಂಚಾಕ್ಷರಿ ಜಪ ಯಜ್ಞ ಲೆಕ್ಕಪತ್ರ ಮಂಡನೆ

ಕಾಸರಗೋಡು: ಶ್ರೀ ಮಲ್ಲಿ ಕಾರ್ಜುನ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಕೋಟಿ ಪಂಚಾಕ್ಷರಿ ಜಪಯಜ್ಞ , ಶ್ರೀಚಕ್ರ ಪೂಜೆ, ರುದ್ರ ಹೋಮ  ಲೆಕ್ಕ ಪತ್ರ ಮಂಡನೆ ಶ್ರೀ ಕ್ಷೇತ್ರದಲ್ಲಿ ಜರಗಿತು. ಕ್ಷೇತ್ರ ಟ್ರಸ್ಟ್ ಬೋರ್ಡ್ ಚೆಯರ್‌ಮೆನ್ ಗಂಗಾ ಧರನ್ ನಾಯರ್ ಅಧ್ಯಕ್ಷತೆ ವಹಿ ಸಿದರು. ಯಜ್ಞ ಸಮಿತಿ ಅಧ್ಯಕ್ಷ ಡಾ| ಅನಂತ ಕಾಮತ್, ಕಾರ್ಯಧ್ಯಕ್ಷ ಕೆ.ಎನ್. ವೆಂ ಕಟ್ರಮಣ ಹೊಳ್ಳ, ಉಪಾ ಧ್ಯಕ್ಷೆ ಮೀರಾ ಕಾಮತ್ ಮಾತನಾಡಿ ದರು. ಟ್ರಸ್ಟ್ ಬೋರ್ಡ್ ಸದಸ್ಯ ಉಮೇಶ್ ಯಜ್ಞ ಸಮಿತಿ ಪದಾಧಿಕಾರಿ ಗಳು …

ಬಲೆ ತುಳು ಓದುಗ ಅಭಿಯಾನ ನಾಳೆ

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಯುವಜನರಲ್ಲಿ ತುಳು ಸಾಹಿತ್ಯ ಓದಿನ ಅಭಿರುಚಿ ಮೂಡಿಸಲು ಹಮ್ಮಿಕೊಂಡಿರುವ ‘ಅಕಾಡೆಮಿಡ್ ಒಂಜಿ ದಿನ; ಬಲೆ ತುಳು ಓದುಗ’ ಅಭಿಯಾನದ 3ನೇ ಕಾರ್ಯಕ್ರಮ ನಾಳೆ ನಡೆಯಲಿದೆ.ಮಂಗಳೂರು ರಥಬೀದಿಯ ಡಾ.ಪಿ.ದಯಾನಂದ ಪೈ- ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 40 ವಿದ್ಯಾರ್ಥಿಗಳು ಉರ್ವಾಸ್ಟೋರ್ ನಲ್ಲಿರುವ ತುಳು ಭವನದ ಗ್ರಂಥಾಲಯಕ್ಕೆ ಭೇಟಿ ನೀಡಿ ಅಧ್ಯಯನ ಹಾಗೂ ಸಂವಾದ ನಡೆಸುವರು. ಕಾರ್ಯಕ್ರಮವನ್ನು ಬೆಳಿಗ್ಗೆ 10 ಗಂಟೆಗೆ ಸೆಂಟ್ರಲ್ ಬ್ಯೂರೋ ಆಫ್ ಕಮ್ಯೂನಿ ಕೇಶನ್ ಇಲಾಖೆಯ …

ಪಿಲಿಗೊಬ್ಬು, ಪಿಲಿನಲಿಕೆ ತರಬೇತಿ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಉಪ್ಪಳ: ಬಿರುವೆರ್ ಕುಡ್ಲ ಮಂಜೇಶ್ವರ ತಾಲೂಕು ಘಟಕದ ವತಿಯಿಂದ ಪಿಲಿಗೊಬ್ಬು ಮತ್ತು ಪಿಲಿನಲಿಕೆಯ ಉಚಿತ ತರಬೇತಿ ಹಾಗೂ 7ನೇ ಸೇವಾ ಯೋಜನೆ ಮತ್ತು ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ಮಾ.1ರಂದು ಪ್ರತಾಪನಗರ ಶ್ರೀ ಗೌರೀ ಗಣೇಶ ಮಂದಿರದಲ್ಲಿ ಜರಗಲಿದೆ. ಅಂದು ಬೆಳಿಗ್ಗೆ 9ರಿಂದ ಗೌರೀಗಣೇಶ ಮಹಿಳಾ ಭಜನಾ ಮಂಡಳಿ ಪ್ರತಾಪನಗರ ಇವರಿಂದ ಭಜನೆ, ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಘಟಕದ ಗೌರವಾಧ್ಯಕ್ಷ ಶೀನಪ್ಪ ಪೂಜಾರಿ ಅಲಾರು ಅಧ್ಯಕ್ಷತೆ ವಹಿಸುವರು. ಘಟಕದ ಅಧ್ಯಕ್ಷ ಉದಯ ಕುಮಾರ್ ಅಮ್ಮೇರಿ ಪ್ರಾಸ್ತಾವಿಕ ಮಾತನಾಡುವರು. …