ಕುತ್ತಿಕ್ಕೋಲ್ ನಿವಾಸಿಯ ನಿಗೂಢ ಸಾವು : ಮೃತದೇಹ ಪರಿಯಾರಂಗೆ; ಆರೋಪಿತ ಪಾಂಡಿ ನಿವಾಸಿ ಪೋಕ್ಸೋ ಪ್ರಕರಣದಲ್ಲಿ ಸೆರೆ

ಕಾಸರಗೋಡು:  ಕುತ್ತಿಕ್ಕೋಲ್ ವೆಳ್ಳಾಲದ ನಾರಾಯಣ್‌ರ ಪುತ್ರ ರಾಜೇಶ್ (25)ರ ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡುಹೋಗಲಾಗಿದೆ. ಸಾವಿನಲ್ಲಿ ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮೃತದೇಹದಲ್ಲಿ ಗಾಯಗಳು ಕಂಡು ಬಂದಿರುವುದು ಶಂಕೆಗೆ ಕಾರಣವಾಗಿತ್ತು. ಪೋಸ್ಟ್ ಮಾರ್ಟಂ ನಡೆಸಿದರೆ ಮಾತ್ರವೇ ಸಾವಿನಲ್ಲಿನ ನಿಗೂಢತೆ ನೀಗಲಿದೆ ಎಂದು ಆದೂರು ಪೊಲೀಸರು ತಿಳಿಸಿದ್ದಾರೆ. ಆದಿತ್ಯವಾರ ಸಂಜೆ ಪಯಸ್ವಿನಿ ಹೊಳೆಯ ಅತ್ತನಾಡಿಯಲ್ಲಿ ರಾಜೇಶ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಶನಿವಾರ ಬೆಳಿಗ್ಗೆ ಫೋನ್ ಕಾಲ್ ಬಂದ ಹಿನ್ನೆಲೆಯಲ್ಲಿ ಹೊರ ಹೋಗಿದ್ದ …

ಮಹಿಳೆ ಮನೆಯಲ್ಲಿ ಸುಟ್ಟು ಗಾಯಗೊಂಡು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಮಹಿಳೆ ಮನೆಯೊಳಗೆ ಸುಟ್ಟು ಗಾಯಗೊಂಡು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.   ಅಣಂಗೂರು ಎಂ.ಜಿ. ಕಾಲನಿ ಸಮೀಪದ ನಿವಾಸಿ ಅಪ್ಪು ಎಂಬವರ ಪತ್ನಿ ಲಕ್ಷ್ಮಿ (85) ಎಂಬವರು ಸಾವನ್ನಪ್ಪಿದ ಮಹಿಳೆ. ಇಂದು ಮುಂಜಾನೆ ಇವರ ಪುತ್ರ ಹಾಗೂ ಸೊಸೆ  ಪಿಲಿಕುಂಜೆ ದೈವಸ್ಥಾನಕ್ಕೆ ತೆರಳಿದ್ದರೆನ್ನಲಾಗಿದೆ. ಬೆಳಿಗ್ಗೆ 7 ಗಂಟೆ ವೇಳೆ ಮನೆಯೊಳಗಿಂದ ಹೊಗೆ ಏಳುತ್ತಿರುವುದನ್ನು ಕಂಡ ನೆರೆಮನೆ ನಿವಾಸಿಗಳು ಸ್ಥಳಕ್ಕೆ ತಲುಪಿ ನೋಡಿದಾಗ ಕೊಠಡಿಯಿಂದ ಬೆಂಕಿ ಕಾಣಿಸಿದೆ. ಅವರು ನೀಡಿದ ಮಾಹಿತಿಯಂತೆ ಅಗ್ನಿಶಾಮಕದಳ ತಲುಪಿ ಬೆಂಕಿ ನಂದಿಸಿದ್ದು, ಆದರೆ ಅಷ್ಟರೊಳಗೆ …

ಮಾನವ ಅಸ್ಥಿಪಂಜರ ಪತ್ತೆ ತನಿಖೆ ಮುಂದುವರಿಕೆ

ಕುಂಬಳೆ: ಶಿರಿಯದಲ್ಲಿ ರೈಲು ಹಳಿ ಸಮೀಪ ಪೊದೆಗಳೆಡೆ ಇತ್ತೀಚೆಗೆ ಮಾನವ ತಲೆಬುರುಡೆ ಸಹಿತ ಅಸ್ತಿಪಂಜರ ಪತ್ತೆಯಾದ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆಯೆಂದು ಕುಂಬಳೆ ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಮಂಜೇಶ್ವರ ಜುಮಾ ಮಸೀದಿ ಬಳಿಯ ನಿವಾಸಿಯಾದ ರೋಶನ್ ಮೊಂತೇರೋ (45) ಎಂಬವರು 2023 ನವಂಬನಿAðದ ನಾಪತ್ತೆ ಯಾಗಿದ್ದಾರೆಂದು ದೂರಲಾಗಿದೆ.ಈ ಹಿನ್ನೆಲೆಯಲ್ಲಿ ತಲೆಬುರುಡೆ ಪತ್ತೆಯಾದ ಸ್ಥಳದಲ್ಲಿ ಕಂಡುಬAದ ಬಟ್ಟೆಬರೆಗಳನ್ನು ರೋಶನ್ ಮೊಂತೇರೋರ ಸಂಬAಧಿಕರು ಪರಿಶೀಲಿಸಿದ್ದಾರೆ. ಆದರೆ ಅದು ರೋಶನ್ ಮೊಂತೇರೋರದ್ದೆAದು ಖಚಿತಪಡಿಸಿಲ್ಲ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅಸೌಖ್ಯ: ಯುವತಿ ಮೃತ್ಯು

ಬದಿಯಡ್ಕ: ಮೂತ್ರಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿ ಮೃತಪಟ್ಟಳು. ಗೋಳಿಯಡ್ಕ ಶಾಂತಿಪಳ್ಳ ನಿವಾಸಿ ವೀಣಾ ಕ್ರಾಸ್ತಾ (18) ಮೃತ ಪಟ್ಟ ಯುವತಿ. ವೆಲೇರಿಯನ್ ಕ್ರಾಸ್ತಾ- ವಿನ್ನಿ ಕ್ರಾಸ್ತಾ ದಂಪತಿ ಪುತ್ರಿಯಾಗಿದ್ದಾಳೆ. ಮೃತಳು ತಂದೆ, ತಾಯಿ, ಸಹೋದರರಾದ ಸುನಿಲ್ ಕ್ರಾಸ್ತಾ, ವಿನ್ಸನ್ ಕ್ರಾಸ್ತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಅನಧಿಕೃತ ಹೊಯ್ಗೆ ಸಾಗಾಟ: ಲಾರಿ ಚಾಲಕನ ಸೆರೆ

ಕುಂಬಳೆ: ವಳಯಂ ಹೊಳೆಯಿಂದ ಅನಧಿಕೃತವಾಗಿ ಸಂಗ್ರಹಿಸಿ ಸಾಗಿಸುತ್ತಿದ್ದ ಒಂದು ಲೋಡ್ ಹೊಯ್ಗೆಯನ್ನು ಕುಂಬಳೆ ಎಸ್‌ಐ ಕೆ. ಶ್ರೀಜೇಶ್ ನೇತೃತ್ವದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಂದು ಮುಂಜಾನೆ ನಡೆಸಿದ ಕಾರ್ಯಾಚರಣೆ ವೇಳೆ ಹೊಯ್ಗೆ ಸಾಗಾಟ ಪತ್ತೆಯಾಗಿದೆ. ಈ ಸಂಬಂಧ ಲಾರಿ ಚಾಲಕನಾದ ಉಪ್ಪಳ ನಯಾಬಜಾರ್‌ನ ಚಾವೇಝ್ (18) ಎಂಬಾತನನ್ನು ಬಂಧಿಸಿದ್ದಾರೆ. ಕಳೆದ 10 ದಿನಗಳಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದ ಮೂರು ಹೊಯ್ಗೆ ಕಡವುಗಳ  ಮಾಲಕರ ವಿರುದ್ಧ ಕೇಸು ದಾಖಲಿಸಲಾಗಿದೆ. ಅದೇ ರೀತಿ ಹೊಯ್ಗೆ ಸಾಗಿಸುತ್ತಿದ್ದ ೬ ಟಿಪ್ಪರ್‌ಲಾರಿಗಳನ್ನು …

ಬಂಗಾಳಕೊಲ್ಲಿಯಲ್ಲಿ ಪ್ರಬಲ ಭೂಕಂಪ: ಕೊಲ್ಕತ್ತಾ ಸಹಿತ ಕಂಪಿಸಿದ ಪಶ್ಚಿಮಬಂಗಾಲ

ಕೋಲ್ಕತ್ತಾ: ಬಂಗಾಳಕೊಲ್ಲಿಯಲ್ಲಿ ಇಂದು ಬೆಳಿಗ್ಗೆ 6.50ರ ವೇಳೆ ಭೂಕಂಪ ಸಂಭವಿಸಿದೆ. ಇದರಿಂದಾಗಿ ಕೋಲ್ಕತ್ತಾ ನಗರ ಮಾತ್ರವಲ್ಲದೆ ಪಶ್ಚಿಮ ಬಂಗಾಲ ರಾಜ್ಯದ ಹಲವಾರು ಭಾಗಗಳ ಭೂಮಿ ನಡುಗಿದೆ. ರಿಕ್ಟರ್ ಸ್ಕೇಲ್ನಲ್ಲಿ ಭೂಕಂಪದ ತೀವ್ರತೆ 5.1 ಆಗಿರುವುದಾಗಿ ದಾಖಲುಗೊಂಡಿದೆಯೆAದು ರಾಷ್ಟ್ರೀಯ ಭೂಕಂಪ ಶಾಸ್ತ್ರಕೇಂದ್ರ (ಎನ್ಸಿಎಸ್) ತಿಳಿಸಿದೆ.ಬಂಗಾಳಕೊಲ್ಲಿಯಲ್ಲಿ 91 ಕಿ.ಮೀ. ಆಳದಲ್ಲಿ ಭೂಕಂಪವಾಗಿದೆ. ಅಕ್ಷಾಂಶ 9.52 ಮತ್ತು ರೇಖಾಂಶ 86.55 ಪೂರ್ವದಲ್ಲಿ ಭೂಕಂಪ ದಾಖಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪ ಕೋಲ್ಕತ್ತಾ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಭೀತಿ ಆವರಿಸುವಂತೆ ಮಾಡಿದೆ. ಆದರೆ …

ಸ್ಕೂಟರ್ ಬೆಂಕಿಗಾಹುತಿಯಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕ್ವಾರ್ಟರ್ಸ್ ಬಳಿ ನಿಲ್ಲಿಸಲಾಗಿದ್ದ ಸ್ಕೂಟರ್ ಬೆಂಕಿಗಾಹುತಿ ಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿದ್ಯಾನಗರಕ್ಕೆ ಸಮೀಪದ ಪನ್ನಿಪ್ಪಾರೆಯ ಕ್ವಾರ್ಟರ್ಸ್ ಒಂದರಲ್ಲಿ ವಾಸಿಸುತ್ತಿರುವ ಪಿ.ಎಂ. ಅಬ್ದುಲ್ ಮನಾಫ್ (39) ಎಂಬವರ ಸ್ಕೂಟರ್ ನಿನ್ನೆ ಮುಂಜಾನೆ ಅವರ ಕ್ವಾರ್ಟರ್ಸ್ ಬಳಿಯಲ್ಲೇ ಬೆಂಕಿ ಗಾಹುತಿಯಾದ ಸ್ಥಿತಿಯಲ್ಲಿ ಪತ್ತೆಯಾ ಗಿದೆ. ಇದರಿಂದ 50,000 ರೂ. ನಷ್ಟ ಲೆಕ್ಕಹಾಕಲಾಗಿದೆ ಎಂದು ಆ ಬಗ್ಗೆ ಮನಾಫ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸಾಲದ ಹಣ ನೀಡುವ ವಿಷಯದಲ್ಲಿ ಓರ್ವ ತನಗೆ ಬೆದರಿಕೆ ಒಡ್ಡಿದ್ದನೆಂದೂ ದೂರಿನಲ್ಲಿ ಮನಾಫ್ ಆರೋಪಿಸಿದ್ದಾರೆ. …

ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ

ಕುಂಬಳೆ: ಕರ್ನಾಟಕ ಮದ್ಯ ಕೈವಶವಿರಿಸಿಕೊಂಡ ಆರೋಪದಂತೆ ಓರ್ವನನ್ನು ಕುಂಬಳೆ ರೇಂಜ್ ಅಬ ಕಾರಿ ಅಧಿಕಾರಿಗಳು ಸೆರೆಹಿಡಿದಿದ್ದಾರೆ. ಮೀಂಜ-ಬೇರಿಕೆಯ ರಾಧಾಕೃಷ್ಣ(54) ಎಂಬಾತನನ್ನು ಬಂಧಿಸಿ 9.27 ಲೀಟರ್ ಕರ್ನಾಟಕ ಮದ್ಯ ವಶಪಡಿಸಲಾಗಿದೆ. ನಿನ್ನೆ ಸಂಜೆ  ಮೀಯಪದವಿನಲ್ಲಿ ಕುಂಬಳೆ ರೇಂಜ್ ಎಕ್ಸೈಸ್ ಇನ್‌ಸ್ಪೆಕ್ಟರ್  ಮಾಥ್ಯು ಕೆ.ಡಿ, ಪ್ರಿವೆಂಟೀವ್ ಆಫೀಸರ್ ಮನಾಸ್ ಕೆ.ವಿ, ಸಿಇಒಗಳಾದ ರಂಜಿತ್ ಟಿ.ಕೆ, ಅಖಿಲೇಶ್ ಎಂ.ಎಂ, ಚಾಲಕ ಪ್ರವೀಣ್ ಎಂಬಿವರು  ಕಾರ್ಯಾಚರಣೆ ನಡೆಸಿದ್ದಾರೆ.

ಕಾಡುಹಂದಿ ದಾಳಿ: ಟ್ಯಾಪಿಂಗ್ ಕಾರ್ಮಿಕ ಗಾಯ

ಕಾಸರಗೋಡು: ಕಾಡು ಹಂದಿಯ ದಾಳಿಗೆ ಟ್ಯಾಪಿಂಗ್ ಕಾರ್ಮಿಕ ಗಾಯಗೊಂಡ ಘಟನೆ ಬೇತೂರುಪಾರದಲ್ಲಿ ನಡೆದಿದೆ. ಕಣ್ಣೂರು ನಿವಾಸಿ ಡೆನ್ನಿಸ್ ಕೆ ಜೇಮ್ಸ್ ಕಾಡುಹಂದಿಯ ತಿವಿತಕ್ಕೊ ಳಗಾದ ಕಾರ್ಮಿಕ. ಇವರು ನಿನ್ನೆ ಬೆಳಿಗ್ಗೆ ಬೇತೂರುಪಾರ ಚೊಟ್ಟೆತ್ತೋಲ್‌ನಲ್ಲಿನ ಖಾಸಗಿ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸದಲ್ಲಿ ನಿರತರಾಗಿದ್ದ ವೇಳೆ ಕಾಡುಹಂದಿಯೊಂದು ಅವರಿಗೆ ತಿವಿದು ಓಡಿ ಹೋಗಿದೆ. ಕಾಲಿಗೆ ಗಾಯಗೊಂಡ ಡೆನ್ನಿಸ್‌ರನ್ನು ಬೇಡಡ್ಕ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.

ಅತೀ ಹೆಚ್ಚು ಉಷ್ಣತೆ ಕಣ್ಣೂರಿನಲ್ಲಿ

ಕಣ್ಣೂರು: ದೇಶದಲ್ಲೇ ಅತೀ ಹೆಚ್ಚು ಉಷ್ಣತೆ ರಾಜ್ಯದ ಕಣ್ಣೂರಿನಲ್ಲಿ ದಾಖಲಾಗಿದೆ. ಕಣ್ಣೂರು ವಿಮಾನ ನಿಲ್ದಾಣದಲ್ಲಿ ನಿನ್ನೆ ೪೦.೪ ಡಿಗ್ರಿ ಸೆಲ್ಶಿಯಸ್ ಉಷ್ಣತೆ ಅನುಭವಗೊಂ ಡಿದೆ. ಈ ವರ್ಷ ದೇಶದಲ್ಲಿ ಅತೀ ಹೆಚ್ಚು ಉಷ್ಣತೆ ಕೂಡಾ ಇದೇ ಆಗಿದೆ. ಕಣ್ಣೂರು ನಗರದಲ್ಲಿ 39 ಡಿಗ್ರಿ ಸೆಲ್ಶಿಯಸ್ ಉಷ್ಣತೆ ದಾಖಲಾಗಿದೆ.