ಕಚೇರಿಗೆ ನುಗ್ಗಿ ಯುವತಿಗೆ ಅವಮಾನ: ಆರೋಪಿ ಸೆರೆ

ಕಣ್ಣೂರು: ಕಚೇರಿಗೆ ನುಗ್ಗಿ ಯುವತಿಗೆ ಅವಮಾನ ಗೈಯ್ಯಲು ಯತ್ನಿಸಿದ ಆರೋಪದಂತೆ ಯುವಕನನ್ನು ತಳಿಪರಂಬ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದ ಕೊಪ್ಪಟ್ ಗುಂಗೇರ ತೆಂಗುಂಟಿ ಎಂಬಲ್ಲಿನ ಮಲ್ಲಪ್ಪ ಯಾನೆ ಮಲ್ಲು (24) ಎಂಬಾತ ಬಂಧಿತ ವ್ಯಕ್ತಿ. ಈತ ಕಣ್ಣೂರು ಕುರುಮಾತೂರು ಚೊರ್ಕಳ ಎಂಬಲ್ಲಿ ಕಲ್ಲಿನ ಕೆಲಸ ನಿರ್ವಹಿಸುತ್ತಿದ್ದಾನೆ. ಈತ ಹಾಗೂ ಇತರ ಕೆಲಸಗಾರರು ಅಲ್ಲಿನ ಎರಡು ಮಹಡಿಯ ಕಟ್ಟಡದ ಮೇಲೆ ವಾಸಿಸುತ್ತಿದ್ದಾರೆ. ಇದೇ ಕಟ್ಟಡದ ಕೆಳ ಅಂತಸ್ತಿನಲ್ಲಿರುವ ಕಚೇರಿಗೆ ಈತ ನಿನ್ನೆ ನುಗ್ಗಿ ಅಲ್ಲಿನ ನೌಕರೆಯಾದ ಯುವತಿಯನ್ನು ಅವಮಾನಗೈಯ್ಯಲೆತ್ನಿಸಿರುವುದಾಗಿ ದೂರಲಾಗಿದೆ.

ಮಹಿಳೆ ಬಾವಿಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ನೀರ್ಚಾಲು: ಮದ್ಯ ವಯಸ್ಕ ಮಹಿಳೆಯೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾ ಗಿದ್ದಾರೆ. ಕನ್ಯಪ್ಪಾಡಿಯಲ್ಲಿ ವಾಸಿಸುವ ಸಫಿಯ (50) ಎಂಬವರು ಶನಿವಾರ ಸಂಜೆ ಮನೆ ಸಮೀಪದ ಬಾವಿಯಲ್ಲಿ ಬಿದ್ದಿರುವುದನ್ನು ಮನೆಯವರು ಕಂಡಿದ್ದಾರೆ. ಕೂಡಲೇ ಅರನ್ನು ಮೇಲೆತ್ತಿ ಕಾಸರಗೋಡು ಜನರಲ್ ಆಸ್ಪತ್ರೆಗೆ  ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಘಟನೆ ಬಗ್ಗೆ ಬದಿಯಡ್ಕ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂ ಡಿದ್ದಾರೆ.

ಬಡ ಕುಟುಂಬದ ಸುಜಾತರ ಚಿಕಿತ್ಸೆಗೆ ಸಹಾಯ ಯಾಚನೆ

ಮುಳ್ಳೇರಿಯ: ಲ್ಯುಕೀಮಿಯ ರೋಗ ತಗಲಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆಯಲ್ಲಿರುವ ಬಡ ಯುವತಿಯ ಚಿಕಿತ್ಸೆಗಾಗಿ ಉದಾರ ದಾನಿಗಳ ಸಹಾಯ ವಿನಂತಿಸಲಾಗಿದೆ. ಕಾರಡ್ಕ ಮುಂಡೋಳುಮೂಲೆಯ ನಿವಾಸಿ ನಳಿನಿ ಎಂಬವರ ಪುತ್ರಿ ಸುಜಾತರ ಚಿಕಿತ್ಸೆಗಾಗಿ ಸಹಾಯ ಯಾಚನೆ ನಡೆಸಲಾಗಿದೆ. ರೋಗ ತಗಲಿದ ಸುಜಾತ ಮೂರು ವರ್ಷಗಳಿಂದ ಚಿಕಿತ್ಸೆಯಲ್ಲಿದ್ದು, ಈಗ ತಲಶ್ಶೇರಿ ಮಲಬಾರ್ ಕ್ಯಾನ್ಸರ್ ಸೆಂಟರ್ನಲ್ಲಿ ನಡೆಸಿದ ತಪಾಸಣೆಯಲ್ಲಿ ಮಜ್ಜಕ್ಕೆ ಕ್ಯಾನ್ಸರ್ ತಗಲಿದೆಯೆಂದು ಪತ್ತೆಹಚ್ಚಲಾಗಿದೆ. ಮಜ್ಜ ಬದಲಿಸಿಡುವುದೇ ಇದಕ್ಕೆ ಪರಿಹಾರ ಮಾರ್ಗವಾಗಿದ್ದು, ಇದಕ್ಕೆ ಭಾರೀ ಮೊತ್ತವ್ಯಯವಾಗಲಿದೆ. ಕೂಲಿ ಕಾರ್ಮಿಕನಾದ ಪತಿ ಇದುವರೆಗೆ ತನ್ನಿಂದಾಗುವಷ್ಟು …

ಎಕೆಪಿಎ ಪ್ರಜಾಪ್ರಭುತ್ವ ದಿನಾಚರಣೆ : ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇ ಶನ್ ವೆಸ್ಟ್ ಯೂನಿಟ್ ಇದರ ವತಿಯಿಂದ ಪ್ರಜಾಪ್ರಭುತ್ವ ದಿನಾಚರಣೆ ಯಂಗವಾಗಿ ಎಕೆಪಿಎ ಕಾಸರಗೋಡು ವಲಯ ಸದಸ್ಯರಿಗೆ ನಡೆಸಿದ ಆನ್‌ಲೈನ್ ಭಾಷಣ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು. ಸ್ಪರ್ಧೆಯಲ್ಲಿ ನಂದಲಕ್ಷ್ಮಿ ರಾಜೇಂದ್ರನ್ ಪ್ರಥಮ, ಅನ್ವಿತ್ ದೀಪ್ತಿಕುಮಾರ್ ದ್ವಿತೀಯ, ಆಶೃತ್ ಗಣೇಶ್ ರೈ ತೃತೀಯ ಸ್ಥಾನ ಗಳಿಸಿದರು. ಕಾಸರಗೋಡು ವಲಯ ಅಧ್ಯಕ್ಷ ಸನ್ನಿ ಜೇಕಬ್ ಬಹುಮಾನ ವಿತರಿಸಿದರು. ಯೂನಿಟ್ ಅಧ್ಯಕ್ಷ ವಸಂತ ಕೆರೆಮನೆ ಅಧ್ಯಕ್ಷತೆ ವಹಿಸಿದರು. ರತೀಶ್, ಮನು, ವಾಸು …

ಪಿಲಿಕುಂಜೆಯಲ್ಲಿ ಇಂದು ನಡುಕಳಿಯಾಟ

ಕಾಸರಗೋಡು: ಪಿಲಿಕುಂಜೆ ಶ್ರೀ ಐವರ್ ಭಗವತಿ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವದಂಗವಾಗಿ ಇಂದು ಬೆಳಿಗ್ಗೆ ಕಾಳಪುಲಿಯನ್, ಪುಲಿಕಂಡನ್, ಪುಲ್ಲೂರ್ಣನ್, ಪುಲ್ಲೂರಾಳಿ ಹಾಗೂ ವಿಷ್ಣುಮೂರ್ತಿ ದೈವಗಳ ದರ್ಶನ ನಡೆಯಿತು. ಮಧ್ಯಾಹ್ನ 12 ಗಂಟೆಗೆ ನಡುಕಳಿಯಾಟ ಆರಂಭಗೊಳ್ಳಲಿದೆ. ಸಂಜೆ 5ರಿಂದ ಪುಲ್ಲೂರ್ಣನ್, ವೇಟ್ಟಕೊರು ಮಗನ್, ಕಾಳಪುಲಿಯನ್ ದೈವಗಳ ವೆಳ್ಳಾಟ, ರಾತ್ರಿ 8ಕ್ಕೆ ಮಡಪ್ಪುರ ಶ್ರೀ ಮುತ್ತಪ್ಪನ್ ತಿರುಮುಲ್ ಕಾಯ್ಚ ಸಮಿತಿ ಹಾಗೂ ಶ್ರೀ ಭಗವತಿ ಮಹಿಳಾ ಸಂಘದ ವತಿಯಿಂದ ಹುಲ್ಪೆ ಸಮರ್ಪಣೆ, 8.30ಕ್ಕೆ ಪುಷ್ಪಾರ್ಚನೆ ಪೂಜೆ, 9.30ಕ್ಕೆ ಪುಲಿಕಂಡನ್ ದೈವದ ವೆಳ್ಳಾಟ, …

ತಾಯಿ, ಮಗು ಕೆರೆಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ : ಏಳ್ಕಾನ ಸಮೀಪ ದಾರುಣ ಘಟನೆ; ಶೋಕಸಾಗರ

ಪೆರ್ಲ: ತಾಯಿ ಮತ್ತು ಅವರ ಎರಡು ವರ್ಷದ ಮಗು ಕೆರೆಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆಯಿಂದ ಏಳ್ಕಾನದಲ್ಲಿ ಶೋಕಸಾಗರ ಸೃಷ್ಟಿಸಿದೆ. ಏಳ್ಕಾನ ದಡಿಗಮೂಲೆ ನಿವಾಸಿ ಪರಮೇಶ್ವರಿ (42) ಮತ್ತು ಅವರ ಪುತ್ರಿ ಎರಡೂವರೆ ವರ್ಷದ ಪದ್ಮಿನಿ ಸಾವನ್ನಪ್ಪಿದ ದುರ್ದೈವಿಗಳು. ಇವರು  ಮನೆ ಪಕ್ಕದ ಕಟ್ಟೆಯಿಲ್ಲದ ಕೆರೆಯಲ್ಲಿ ನಿನ್ನೆ ಸಂಜೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪರಮೇಶ್ವರಿಯವರ ಪತಿ ಈಶ್ವರ ನಾಯ್ಕ ಮತ್ತು ಹಿರಿಯ ಪುತ್ರ ಹರಿಪ್ರಸಾದ್ ನಿನ್ನೆ ಸಂಜೆ ಮನೆಯಿಂದ ಅಲ್ಪ ದೂರದಲ್ಲಿರುವ ದೇವಸ್ಥಾನದ ಉತ್ಸವಕ್ಕೆ ಹೋಗಿದ್ದರು. ಅಲ್ಲಿಂದ …

ಕೊಲೆ ಸಹಿತ ಹಲವು ಅಪರಾಧ ಕೃತ್ಯಗಳಲ್ಲಿ ಆರೋಪಿಯಾದಾತ ಕಾಪಾ ಪ್ರಕಾರ ಬಂಧನ

ಕುಂಬಳೆ: ಕೊಲೆ, ಕೊಲೆಯತ್ನ ಸಹಿತ ಹಲವು ಅಪರಾಧ ಕೃತ್ಯಗಳಲ್ಲಿ ಆರೋಪಿಯಾದಾತನ ಮೇಲೆ ಕಾಪಾ ಕಾಯ್ದೆ ಪ್ರಕಾರ ಕೇಸು ದಾಖ ಲಿಸಿ ಆತನನ್ನು ಬಂಧಿಸಲಾಗಿದೆ. ಚೌಕಿ ಕಲ್ಲಂಗೈ ನಿವಾಸಿಯೂ ಪ್ರಸ್ತುತ ಕುಂಬಳೆ ಮಾವಿನಕಟ್ಟೆಯ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಅಭಿಲಾಷ್ ಯಾನೆ  ಹಬೀಬ್ (30) ಎಂಬಾತನನ್ನು ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ಬಂಧಿಸಿ ದ್ದಾರೆ. ಬಳಿಕ ಆರೋಪಿಯನ್ನು ಕಣ್ಣೂರು ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ. ಕುಂಬಳೆ ಶಾಂತಿಪಳ್ಳ ಐಎಚ್‌ಆರ್‌ಡಿ ಕಾಲೇಜಿನ ಸಮೀಪ ಮೂಸ ರಶೀದ್ ಯಾನೆ ಅಬ್ದುಲ್ ರಶೀದ್ ಎಂಬವರನ್ನು …

ಹೊಸಂಗಡಿಯ ಸ್ಟುಡಿಯೋ ಮಾಲಕ ನಿಧನ

ಮಂಜೇಶ್ವರ: ಹೊಸಂಗಡಿಯ ಲ್ಲಿರುವ ಹೈಟೆಕ್ ಸ್ಟುಡಿಯೋ ಮಾಲಕ ಮಂಜೇಶ್ವರ ಅರಿಬೈಲು ನಿವಾಸಿ ಚಿದಾನಂದ (57) ನಿಧನಹೊಂದಿದರು. ಕಳೆದ ಎರಡು ವರ್ಷಗಳಿಂದ ಇವರಿಗೆ ಅಸೌಖ್ಯ ಬಾಧಿಸಿತ್ತೆನ್ನಲಾಗಿದೆ. ಇದರಿಂದ ಚಿಕಿತ್ಸೆಯಲ್ಲಿದ್ದ ಇವರಿಗೆ ಇತ್ತೀಚೆಗೆ ಅಸೌಖ್ಯ ಉಲ್ಭಣಗೊಂಡಿತ್ತು. ಇದರಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ನಿಧನ ಸಂಭವಿಸಿದೆ. ಸಂಜೀವ ಮಡಿವಾಳ-ಪದ್ಮಾಪತಿ ದಂಪತಿಯ ಪುತ್ರನಾದ ಮೃತರು ಪತ್ನಿ ರೋಹಿಣಿ, ಮಕ್ಕಳಾದ ಸಾಗರ್, ಸಾತ್ವಿಕ್, ಸಹೋದರಿ ಪ್ರಫುಲ್ಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಶಿವಾನಂದ ಈ ಹಿಂದೆ ನಿಧನರಾಗಿದ್ದಾರೆ.

ಆಧಾರ್-ವೋಟರ್ ಬದಲು  ಇನ್ನು ನಾಗರಿಕ ಕಾರ್ಡ್

ನವದೆಹಲಿ: ಆಧಾರ್ ಕಾರ್ಡ್ ಮತ್ತು ಮತದಾರ ಗುರುತಿನ ಚೀಟಿ ಕ್ರಮೇಣ ಇಲ್ಲದಾಗಿ ಅದರ ಬದಲು ಎರಡು ಕಾರ್ಡ್‌ಗಳ ಪೂರ್ಣ ಮಾಹಿತಿಗಳು ಒಳಗೊಂಡ ನಾಗರಿಕ ಕಾರ್ಡ್ ಎಂಬ ಹೊಸ ಕಾರ್ಡನ್ನು ಅನುಷ್ಠಾನಕ್ಕೆ ತರಲು ಕೇಂದ್ರ ಸರಕಾರ ಮುಂದಾಗಿದೆ. ನಾಗರಿಕ ಕಾರ್ಡ್ ಏಕಕಾಲದಲ್ಲಿ ಆಧಾಕಾರ್ಡ್ ಹಾಗೂ ಮತದಾರ ಗುರುತಿನ ಚೀಟಿಗಾಗಿ  ಕಾರ್ಯವೆಸ ಗಲಿದೆ. ಇದನ್ನು ನಾಗರಿಕರ ಗುರುತು ಮತ್ತು ಪೌರತ್ವದ ಪುರಾವೆಯಾಗಿ ಬಳಸಲಾಗುವ  ಬಹು ದಾಖಲೆಗಳ ಅಗತ್ಯ ಕಡಿಮೆಗೊಳ್ಳಲಿದೆ. ನಾಗರಿಕ ಕಾರ್ಡ್ ಒಂದು ಆಧುನಿಕ  ಗುರುತಿನ ಚೀಟಿಯಾಗಿದೆ. ಇದನ್ನು ಭಾತದ …

ಮಂಜೇಶ್ವರದಲ್ಲಿ ಮನೆಯಿಂದ 10 ಲಕ್ಷ ರೂ.ಗಳ ವಜ್ರಾಭರಣ, ಬೆಂಡೋಲೆ ಕಳವು: ಮನೆ ಕೆಲಸದಾಳು ಯುವತಿ ಕಸ್ಟಡಿಗೆ

ಉಪ್ಪಳ: ಕೆಲಸಕ್ಕೆ ನಿಂತ ಮನೆಯಿಂದ 10 ಲಕ್ಷ ರೂಪಾಯಿ  ಮೌಲ್ಯವುಳ್ಳ ವಜ್ರಾಭರಣಗಳು ಹಾಗೂ ಎರಡು ಬೆಂಡೋಲೆಗಳನ್ನು ಕಳವು ನಡೆಸಿದ ಯುವತಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಉತ್ತರ ಪ್ರದೇಶ ನಿವಾಸಿಯೂ, ಉಪ್ಪಳದಲ್ಲಿ ವಾಸಿಸುವ ಆಸಿಯ ಎಂಬಾಕೆಯನ್ನು ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದು ತನಿಖೆ ನಡೆಸುತ್ತಿದ್ದಾರೆ. ಕಾಸರಗೋಡು ಮಹಿಳಾ ಪೊಲೀಸ್ ಠಾಣೆಗೆ ತಲುಪಿಸಿ ರುವ ಆರೋಪಿಯನ್ನು ಸಮಗ್ರವಾಗಿ ತನಿಖೆಗೊಳಪಡಿಸಿದ ಬಳಿಕವೇ ಬಂಧನ ದಾಖಲಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಂಜೇಶ್ವರ ರಾಷ್ಟ್ರೀಯ ಹೆದ್ದಾರಿ ಸಮೀಪ ಕಣಚ್ಚೂರ್ ವಿಲ್ಲಾದ ಫಾತಿಮತ್ ಸಫಾನ …