ಆಯಂಪಾರದಲ್ಲಿ ಸತತ ಎರಡನೇ ದಿನವೂ ಚಿರತೆ ಪ್ರತ್ಯಕ್ಷ : ಬಾರ, ತಾಮರಕ್ಕುಳಿಯಲ್ಲೂ ಸ್ಥಳೀಯರು ಭೀತಿಯಲ್ಲಿ

ಕಾಸರಗೋಡು: ಪುಲ್ಲೂರು ಪೆರಿಯ ಪಂಚಾಯತ್‌ನ ಆಯಂಪಾರದಲ್ಲಿ ಸತತ ಎರಡನೇ ದಿನವೂ ಚಿರತೆ ಪ್ರತ್ಯಕ್ಷಗೊಂಡಿದೆ. ಗುರುವಾರ ಸಾಕಿದ ನಾಯಿಯನ್ನು ಕಚ್ಚಿ ಕೊಂದ ಸ್ಥಿತಿಯಲ್ಲಿ ಕಂಡು ಬಂದ ಆಯಂಪಾರ, ಮಾರಿಂಗಾವ್‌ನಲ್ಲಿ ನಿನ್ನೆ ರಾತ್ರಿಯೂ ಚಿರತೆ ಕಂಡು ಬಂದಿದೆ. ಬಂಡೆಯ ಮೇಲಿರುವ ಹೊಂಡದಿಂದ ನೀರು ಕುಡಿಯುವ ಚಿರತೆಯನ್ನು ಸ್ಥಳೀಯ ನಿವಾಸಿಯಾದ ಕಣ್ಣನ್ ಎಂಬವರು ನೋಡಿದ್ದಾರೆನ್ನಲಾಗಿದೆ. ಈ ಭಾಗಕ್ಕೆ ನೋಡಿ ನಾಯಿ ನಿರಂತರ ಬೊಗಳುತ್ತಿದ್ದ ಹಿನ್ನೆಲೆಯಲ್ಲಿ ಲೈಟ್ ಹಾಕಿ ನೋಡಿದಾಗ ಚಿರತೆ ಕಂಡು ಬಂದಿದ್ದು,  ಇದೇ ವೇಳೆ ಬೊಬ್ಬೆ ಹೊಡೆದಾಗ ಪರಾರಿಯಾಗಿದೆ ಎನ್ನಲಾಗಿದೆ. …

ಕೋವಿಡ್‌ನ ಹೊಸ ರೂಪಾಂತರಿ ಚೀನಾದಲ್ಲಿ ಪತ್ತೆ

ಬೀಜಿಂಗ್: ಬಾವಲಿಗಳಿಂದ ಹರಡಲು ಸಾಧ್ಯತೆಯುಳ್ಳ ಕೋವಿಡ್‌ನ ಹೊಸ ರೂಪಾಂತರಿ ಚೀನಾದಲ್ಲಿ ಪತ್ತೆಹಚ್ಚಲಾಗಿದೆ. HKU5-Cov-2 ಎಂದು ಇದನ್ನು ಹೆಸರಿಸಲಾಗಿದೆ. ಕೋವಿಡ್‌ಗೆ ಕಾರಣವಾದ  SARS-Cov-2  ರ ಅದೇ ಸಾಮರ್ಥ್ಯ ಈ ವೈರಸ್‌ಗಿದೆಯೆಂದು ಹೇಳಲಾಗುತ್ತಿದೆ. ಹೊಸ ವೈರಸ್‌ಗೆ ಮನುಷ್ಯರಿಗೆ ರೋಗ ಹರಡಿಸಬಹುದಾದ ಶಕ್ತಿಯಿದ್ದರೂ ಪ್ರಾಣಿಗಳಿಂದ ಮನುಷ್ಯರಿಗೆ ರೋಗ ಹರಡಬಹುದೇ ಎಂದು  ಸಂಶಧನೆ  ನಡೆಯುತ್ತಿದೆ. ಈಗಾಗಲೇ ಕೋವಿಡ್‌ನ ಹಲವು ರೂಪಾಂತರಿಗಳು ಪತ್ತೆಯಾಗಿದ್ದರೂ ಅವುಗಳಲ್ಲಿ ಕೆಲವು ಮಾತ್ರವೇ ಮನುಷ್ಯರಿಗೆ ಹರಡಿರುತ್ತದೆ.

ವರ್ಕಾಡಿ ಪಂ.ನ ವಿವಿಧೆಡೆ ತ್ಯಾಜ್ಯ ಉಪೇಕ್ಷೆ : ಸಂಸ್ಥೆಗಳಿಂದ ದಂಡ ವಸೂಲಿ

ವರ್ಕಾಡಿ: ಹೊಸಂಗಡಿ- ವಿಟ್ಲ ಅಂತಾರಾಜ್ಯ ರಸ್ತೆ ಬದಿಯ ಮಜೀರ್ಪಳ್ಳ ಪೇಟೆಯಲ್ಲಿ ಅಂಗಡಿಗಳ ತ್ಯಾಜ್ಯವನ್ನು ರಾಶಿ ಹಾಕಿ ಹಲವು ಕಾಲಗಳಿಂದ ಕಿಚ್ಚಿರಿಸುತ್ತಿದ್ದ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತ ಇಲಾಖೆಯ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ನಡೆಸಿದ ತನಿಖೆಯಲ್ಲಿ ಕಾನೂನು ಉಲ್ಲಂಘನೆ ಪತ್ತೆಹಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ದಂಡ ಹೇರಲಾಗಿದೆ. ಉರಿಯುತ್ತಿದ್ದ ತ್ಯಾಜ್ಯಗಳನ್ನು ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳು ಮಜೀರ್ಪಳ್ಳ ಸುಂಕದಕಟ್ಟೆಯ ಎಂಟರ್‌ಪ್ರೈಸಸ್, ಫ್ಯಾಶನ್ ಟೆಕ್ಸ್‌ಟೈಲ್ಸ್, ಕಾಂಪ್ಲೆಕ್ಸ್ ಎಂಬೀ ಸಂಸ್ಥೆಗಳಿಗೆ 15,೦೦೦ ರೂ.ನಂತೆ ದಂಡ ಹೇರಿದ್ದಾರೆ. ಬೀದಿ ಬದಿ ವ್ಯಾಪಾರಿಗಳು …

ಮಹೋತ್ಸವ ಪ್ರತೀತಿ ಬೀರಿದ ನಗರಸಭಾ ಕ್ರೀಡಾಂಗಣ ರಸ್ತೆ ನಾಮಕರಣ ಕಾರ್ಯಕ್ರಮ: ಕಾಸರಗೋಡಿನ ಪ್ರತಿಭೆಗಳೂ ಸೇರಿದಂತೆ ಕೇರಳದವರೂ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಬೇಕು-ಸುನಿಲ್ ಗವಾಸ್ಕರ್

ಕಾಸರಗೋಡು: ಕಾಸರಗೋಡಿನ ಪ್ರತಿಭೆಗಳೂ ಸೇರಿದಂತೆ ಕೇರಳದವರೂ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಬೇಕು. ರಣಜಿ ಟ್ರೋಫಿಯಲ್ಲ್ಲಿ ಇದೇ ಮೊದಲ ಬಾರಿ ಫೈನಲ್‌ಗೆ ಪ್ರವೇಶಿಸಿದ ಕೇರಳತಂಡ ಹಾಗೂ ಕೇರಳದ ಗೆಲುವಿನ  ಪ್ರಧಾನ ರೂವಾರಿ ಕಾಸರಗೋಡು ತಳಂಗರೆಯ ಪ್ರತಿಭೆ ಮಹಮ್ಮದ್ ಅಸರುದ್ದೀನ್ ಬಾರಿಸಿದ ಭರ್ಜರಿ ಶತಕವನ್ನು ನೋಡಿದರೆ ಕ್ರಿಕೆಟ್‌ನಲ್ಲಿ ಕೇರಳ ಮಿಂಚತೊಡಗಿದೆ ಎಂಬುವುದಕ್ಕಿರುವ ಸ್ಪಷ್ಟ ನಿದರ್ಶನವಾಗಿದೆ. ಇದು ದೊಡ್ಡ ಹೆಮ್ಮೆಯ ವಿಷಯವಾಗಿದೆಯೆಂದು ಭಾರತೀಯ ಕ್ರಿಕೆಟ್ ಜಗತ್ತಿನ ಇತಿಹಾಸ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಕಾಸರಗೋಡು ವಿದ್ಯಾನಗರದಲ್ಲಿರುವ ಕಾಸರಗೋಡು ನಗರಸಭೆಯ ಸುನಿಲ್ ಗವಾಸ್ಕರ್ …

ರಾಜ್ಯ ಸರಕಾರದ ಬಜೆಟ್: ವಿವಿಧ ಗ್ರಾಮ ಕಚೇರಿಗಳಲ್ಲಿ ಕಾಂಗ್ರೆಸ್‌ನಿಂದ ಧರಣಿ

ಪೈವಳಿಕೆ: ಕೇರಳ ಸರಕಾರದ ಹಾಲಿ ವರ್ಷದ ಬಜೆಟï‌ನಲ್ಲಿ ಭೂತೆರಿಗೆ ಹಾಗೂ ಇನ್ನಿತರ ತೆರಿಗೆ ಗಳನ್ನು ಹೆಚ್ಚು ಮಾಡುವ ಮೂಲಕ ಸರಕಾರ ಬಡವರ್ಗದ ಜನರ ಜೀವನವನ್ನು ದುಸ್ತರಗೊಳಿಸುತ್ತಿದೆ ಎಂದು ಆರÉÆÃಪಿಸಿ ಕೆ.ಪಿ.ಸಿ.ಸಿ. ನಿರ್ದೇಶ ನದಂತೆ ಪೈವಳಿಕೆ ಗ್ರಾಮ ಕಚೇರಿಯ ಮುಂದೆ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಧರಣಿ ಮುಷ್ಕರ ನಡೆಸಲಾಯಿತು. ಮಂಡಲ ಅಧ್ಯಕ್ಷ ವಸಂತಕುಮಾರ್ ಅಧ್ಯಕ್ಷತೆ ವಹಿಸಿದರು. ಬ್ಲೋಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲಕ್ಷ್ಮಣ ಪ್ರಭು ಕುಂಬಳೆ ಉದ್ಘಾಟಿಸಿದರು. ಬ್ಲೋಕ್ ಕಾರ್ಯದರ್ಶಿ ರಾಘವೇಂದ್ರ ಭಟ್, ಮಂಡಲ ಪದಾಧಿಕಾರಿಗಳಾದ …

ಪಿಎಸ್‌ಸಿ ಸದಸ್ಯರ ವೇತನ ಹೆಚ್ಚಳ ಹಿಂತೆಗೆಯಬೇಕೆಂದು ಎಐಟಿಯುಸಿ ಆಗ್ರಹ

ಕಾಸರಗೋಡು: ರಾಜ್ಯ ಸರಕಾರ ಆರ್ಥಿಕ ಸಂದಿಗ್ಧತೆಯ ಹೆಸರಲ್ಲಿ ವಿವಿಧ ವಲಯಗಳ ಕಾರ್ಮಿಕರ ನ್ಯಾಯಯುತ ವೇತನ ಹೆಚ್ಚಳ ಎಂಬ ಬೇಡಿಕೆ, ಬಾಕಿ ಉಳಿಸಿರುವುದನ್ನು ಸರಿಯಾದ ಸಮಯಕ್ಕೆ ನೀಡದೆ ಇರುವ ಸಂದರ್ಭದಲ್ಲಿ  ಪಿಎಸ್‌ಸಿ ಸದಸ್ಯರಿಗೆ ಧಾರಾಳವಾಗಿ ಸೌಲಭ್ಯಗಳನ್ನು ಘೋಷಿಸಿರುವುದು ಅನುಚಿತ ಹಾಗೂ ಎಡರಂಗ ಸರಕಾರಕ್ಕೆ ಸೂಕ್ತವಾದುದಲ್ಲವೆಂದು ಎಐಟಿಯುಸಿ ಕಾಸರಗೋಡು ಜಿಲ್ಲಾ ಕೌನ್ಸಿಲ್ ಸಭೆ ಅಭಿಪ್ರಾಯಪಟ್ಟಿದೆ. ಈ ತೀರ್ಮಾನ ವನ್ನು ಕೂಡಲೇ ರದ್ದುಗೊಳಿಸಬೇಕೆಂದು ಸಭೆ ಸರಕಾರಕ್ಕೆ ಆಗ್ರಹಿಸಿದೆ. ಶಾಲಾ ಅಡುಗೆ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕ ವಿತರಣಾ ವಲಯದ …

ಕಣ್ವತೀರ್ಥ ಮೀನು ಕಾರ್ಖಾನೆ ದುರ್ಗಂಧ: ಬಿಜೆಪಿ ಜಿಲ್ಲಾಧ್ಯಕ್ಷೆ ಭೇಟಿ

ಮಂಜೇಶ್ವರ: ಕಣ್ವತೀರ್ಥ ಸಮೀಪ ಕಾರ್ಯನಿರ್ವಹಿಸುತ್ತಿರುವ  ಮೀನು ಸಂಸ್ಕರಣೆ ಕಾರ್ಖಾನೆಯಿಂದ ಅಸಹನೀಯ ದುರ್ಗಂಧ ಸ್ಥಳೀಯರ ಸಹನೆ ಪರೀಕ್ಷಿಸುತ್ತಿದ್ದು, ನಾಗರಿಕರ ದೂರಿನ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಭೇಟಿ ನೀಡಿ ಪರಿಶೀಲಿಸಿದರು. ಇವರ ಜತೆ ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಮುಖಂಡರಾದ ಯಾದವ್ ಬಡಾಜೆ, ಲಕ್ಷ್ಮಣ ಕುಚ್ಚಿಕ್ಕಾಡ್, ಯತಿರಾಜ ಶೆಟ್ಟಿ, ವಿನಯ ಭಾಸ್ಕರ್, ಸ್ಥಳೀಯರು ಉಪಸ್ಥಿತರಿದ್ದರು. ಕಾರ್ಖಾನೆ ದುರ್ವಾಸನೆ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಲು ತೀರ್ಮಾನಿಸಿದ್ದು, ಸೂಕ್ತ ಕ್ರಮ ಉಂಟಾಗದಿದ್ದಲ್ಲಿ ಬಿಜೆಪಿ ನೇತೃತ್ವದಲ್ಲಿ ಕಾರ್ಖಾನೆ ಮುಂಭಾಗ ಪ್ರತಿಭಟನೆ …

ನಡುವಂಗಡಿ ಸಾರ್ವಜನಿಕ ಸ್ಮಶಾನಕ್ಕೆ ಹಾನಿ: ಸರಿಪಡಿಸಲು ಬಿಜೆಪಿ ಮನವಿ

ಬದಿಯಡ್ಕ: ಕುಂಬ್ಡಾಜೆ ಪಂಚಾ ಯತ್‌ನ ಮವ್ವಾರು ಸಮೀಪದ ನಡು ವಂಗಡಿಯಲ್ಲಿ ಸಾರ್ವಜನಿಕ ಸ್ಮಶಾನದ ಸುತ್ತು ಕೆಎಸ್‌ಟಿಪಿ ರಸ್ತೆ ಕಾಮಗಾರಿ ಗೋಸ್ಕರ ತಂದಿರಿಸಿದ ಜಲ್ಲಿಕಲ್ಲುಗಳನ್ನು ತೆರವುಗೊಳಿಸದಿರುವುದು ಸಮಸ್ಯೆ ಸೃಷ್ಟಿಸಿದೆ ಎಂದು ಸ್ಥಳೀಯರು ದೂರಿ ದ್ದಾರೆ. ಸ್ಮಶಾನದ ಆವರಣಗೋಡೆಗೂ ಹಾನಿಯುಂಟಾಗಿದ್ದು, ಈ ಬಗ್ಗೆ ದೂರು ನೀಡಿದರೂ ಸಂಬಂಧ ಪಟ್ಟವರು ಕ್ರಮ ಕೈಗೊಂಡಿಲ್ಲವೆಂದು ಬಿಜೆಪಿ ಬದಿಯಡ್ಕ ಮಂಡಲ ಕಾರ್ಯದರ್ಶಿ ಹರೀಶ್ ಗೋಸಾಡ ಆರೋಪಿಸಿದ್ದಾರೆ. ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕುಂಬ್ಡಾಜೆ ಪಂಚಾಯತ್ ಕಾರ್ಯ ದರ್ಶಿ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ …

ವರ್ಕಾಡಿ ಚರ್ಚ್‌ನಲ್ಲಿ ವೇಲಂಕಣಿ ಮಾತೆಯ ವಾರ್ಷಿಕ ಮಹೋತ್ಸವ: ಹೊರೆಕಾಣಿಕೆ ಮೆರವಣಿಗೆ ನಾಳೆ

ವರ್ಕಾಡಿ: ಇಲ್ಲಿನ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಚರ್ಚ್‌ನ ವೇಲಂಕಣಿ ಮಾತೆಯ ವಾರ್ಷಿಕ ಮಹೋತ್ಸವ ಮಾರ್ಚ್ 2ರಂದು ನಡೆಯಲಿದೆ. ಇದರ ಪೂರ್ವಭಾವಿಯಾಗಿ ನಾಳೆ ಸಂಜೆ 5 ಗಂಟೆಗೆ ವರ್ಕಾಡಿ ಬೇಕರಿ ಜಂಕ್ಷನ್‌ನಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಮಾರ್ಚ್ 1ರಂದು ಸಂಜೆ 4ಕ್ಕೆ ನೊವೇನಾ ಪಾರ್ಥನೆ ಜರಗಲಿದೆ. 2ರಂದು ಮೊಂಬತ್ತಿ ವಿತರಣೆ, ದಿವ್ಯ ಬಲಿಪೂಜೆ ಜರಗಲಿದ್ದು, ಅತಿವಂದನೀಯ ಅಲೋಶಿ ಯಸ್ ಪಾವ್ಲ್ ಡಿಸೋಜ ನೆರವೇರಿಸುವರು. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮ ಜರಗಲಿದೆ ಎಂದು ಧರ್ಮಗುರು ಫಾ| …

ರಣಜಿ ಟ್ರೋಫಿ ಇತಿಹಾಸದಲ್ಲೇ ಮೊದಲಬಾರಿ ಫೈನಲ್‌ಗೇರಿದ ಕೇರಳ

ಅಹಮ್ಮದಾಬಾದ್: ರಣಜಿ ಟ್ರೋಫಿ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಕೇರಳ ಫೈನಲ್‌ಗೇರಿದೆ.  ಫೆ. 26ರಂದು ನಾಗ್ಪುರದಲ್ಲಿ ನಡೆಯಲಿರುವ ಫೈನಲ್‌ನಲ್ಲಿ  ವಿದರ್ಭ ತಂಡವನ್ನು ಕೇರಳ ತಂಡ ಎದುರಿಸಲಿದೆ.  ಸೆಮಿ ಫೈನಲ್‌ನಲ್‌ನಲ್ಲಿ ಮೊದಲು ಆಡಿದ ತನ್ನ ತಂಡದ ಅಗ್ರಗಣ್ಯ ಬ್ಯಾಟರ್ ಗಳಲ್ಲೋರ್ವ ನಾದ ಕಾಸರಗೋಡಿನ ಮೊಹಮ್ಮದ್ ಅಸರುದ್ದೀನ್‌ರ ಅಜೇಯ 177 ರನ್‌ಗಳೊಂದಿಗೆ 457 ರನ್ ಗಳಿಸಿದ ಕೇರಳ, ಎದುರಾಳಿ ತಂಡ ಗುಜರಾತ್‌ನ್ನು ೪೫೫ಕ್ಕೆ ಅಲೌಟ್ ಮಾಡಿ ಕೇವಲ 2 ರನ್‌ಗಳಿಂದ ಗೆದ್ದು ಫೈನಲ್‌ಗೇರಿತು. ಇನ್ನೊಂದೆಡೆ ಸೆಮಿ ಫೈನಲ್‌ನಲ್ಲಿ ಹಾಲಿ …