ಶಾರದಾ ಎಯುಪಿ ಶಾಲೆಯಲ್ಲಿ ನಿವೃತ್ತರಿಗೆ ವಿದಾಯಕೂಟ

ಮೀಯಪದವು: ಮಂಜೇಶ್ವರ ಉಪಜಿಲ್ಲಾ ಮಟ್ಟದ ಎಲ್.ಪಿ, ಯು.ಪಿ, ಹೈಸ್ಕೂಲು ಹಾಗೂ ಹೈಯರ್ ಸೆಕೆಂಡರಿ ವಿಭಾಗಗಳಲ್ಲಿ ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಅಧ್ಯಾಪಕರು, ಮುಖ್ಯೋಪಾಧ್ಯಾಯರು, ಅಧ್ಯಾಪ ಕೇತರರು, ಸಿಬ್ಬಂದಿ ವರ್ಗ ಮೊದಲಾ ದವರಿಗೆ ಬೀಳ್ಕೊಡುಗೆ ಸಮಾರಂಭ ಐಲಶ್ರೀ ಶಾರದಾ ಎ.ಯು.ಪಿ ಶಾಲೆ ಯಲ್ಲಿ ಜರಗಿತು. ಮುಖ್ಯೋ ಪಾಧ್ಯಾ ಯರ ಬಳಗ ಹಾಗೂ ಕ್ಯೂ.ಐ.ಪಿ ನೇತೃತ್ವದಲ್ಲಿ ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿದಾಯಕೂಟ ಜರಗಿತು. ಉಪಜಿಲ್ಲಾ ಶಿಕ್ಷಣಾಧಿಕಾರಿ ರಾಜ ಗೋಪಾಲ ಕೆ. ಅಧ್ಯಕ್ಷತೆ ವಹಿಸಿದರು. ಜಿಲ್ಲಾ ವಿದ್ಯಾಭ್ಯಾಸ ಉಪನಿರ್ದೇಶಕ ಮಧುಸೂದನನ್ ಟಿ.ವಿ ಉದ್ಘಾಟಿಸಿ …

ಔಷಧಿಗೆಂದು ಬಂದು ಆಯುರ್ವೇದ ಮದ್ದಿನಂಗಡಿ ಮಾಲಕಿಯ ಸರ ಅಪಹರಣ : ಮೂರೂವರೆ ಪವನ್ ಚಿನ್ನದ ಸರ ಎಗರಿಸಿದ ಆರೋಪಿಗಳ ಬಂಧನ

ಬದಿಯಡ್ಕ: ನೀರ್ಚಾಲಿನಲ್ಲಿರುವ ಆಯುರ್ವೇದ ಮದ್ದಿನ ಅಂಗಡಿಗೆ ತಲುಪಿ ಮಾಲಕಿಯ ಕುತ್ತಿಗೆಯಿಂದ ಮೂರೂವರೆ ಪವನ್ ಚಿನ್ನದ ಸರ ಎಗರಿಸಿ ಪರಾರಿಯಾದ ಕುಖ್ಯಾತ ಆರೋಪಿಗಳನ್ನು ಬಂಧಿಸಲಾಗಿದೆ. ಕರ್ನಾಟಕದ ಪುತ್ತೂರು ಕುಂಜೂರು ಪಂಜ ನಿವಾಸಿ ಶಂಸುದ್ದೀನ್ ಅಸ್ಕರ್ ಅಲಿ (28), ಪುತ್ತೂರು ಬನ್ನೂರಿನ ಬಿ.ಎ ನೌಶಾದ್ (37) ಎಂಬಿವರನ್ನು ಬದಿಯಡ್ಕ ಪೊಲೀಸ್ ಇನ್‌ಸ್ಪೆಕ್ಟರ್ ಕೆ. ಸುಧೀರ್, ಎಸ್‌ಐ ಕೆ.ಕೆ.ನಿಖಿಲ್ ಎಂಬಿವರ ನೇತೃತ್ವದಲ್ಲಿ ಬಂಧಿಸಲಾಗಿದೆ. ಆರೋಪಿಗಳು ಮಂಗಳೂರಿನ ಜ್ಯುವೆಲ್ಲರಿಯಲ್ಲಿ ಮಾರಾಟಗೈದ ಸರವನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿ ದ್ದಾರೆ. ಫೆಬ್ರವರಿ ೧೧ರಂದು ನೀರ್ಚಾಲು ಮೇಲಿನ …

ಹೊಸ ಕಾರಿನಲ್ಲಿ ಸಾಗಿಸುತ್ತಿದ್ದ 21. 5 ಗ್ರಾಂ ಎಂಡಿಎಂಎ ವಶ: ಉಪ್ಪಳ, ಕಾಸರಗೋಡು ನಿವಾಸಿಗಳಾದ 5 ಮಂದಿ ಸೆರೆ

ಕುಂಬಳೆ: ಹೊಸ ಕಾರಿನಲ್ಲಿ ಕುಂಬಳೆ ಭಾಗಕ್ಕೆ ಸಾಗಿಸುತ್ತಿದ್ದ ಮಾರಕ ಮಾದಕ ವಸ್ತುವಾದ ಎಂಡಿಎಂಎಯನ್ನು ಕುಂಬಳೆ ಪೊಲೀಸರು ಹಾಗೂ ಟಾನ್ಸಾಫ್ ತಂಡ ನಡೆಸಿದ ಸಂಯುಕ್ತ ಕಾರ್ಯಾಚರಣೆ ಯಲ್ಲಿ ವಶಪಡಿಸಲಾಗಿದೆ. ಈ ಸಂಬಂಧ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಕಾರನ್ನು ವಶಕ್ಕೆ ತೆಗೆಯಲಾಗಿದೆ. ಉಪ್ಪಳ ಕೋಡಿಬೈಲು ನಿವಾಸಿ ಇಬ್ರಾಹಿಂ ಸಿದ್ದಿಕ್ (33), ಉಪ್ಪಳ ಪ್ರತಾಪ್‌ನಗರ ನಿವಾಸಿ ಮೂಸಾ ಶರೀಫ್ (30), ಕಾಸರ ಗೋಡು ಅಡ್ಕತ್ತಬೈಲು ನಿವಾಸಿಗಳಾದ ಮೊಹಮ್ಮದ್ ಸಾಲಿ (46), ಮೊಹ ಮ್ಮದ್ ಸವಾದ್ (28) ಎಂಬಿವರು ಬಂಧಿತರಾದ ಆರೋಪಿಗಳಾಗಿದ್ದಾರೆ. ಇವರ …

ಬಾಲಕಿಗೆ ಲೈಂಗಿಕ ಕಿರುಕುಳ : ಆರೋಪಿಗೆ 137 ವರ್ಷ ಕಠಿಣ ಸಜೆ; 7.5 ಲಕ್ಷ ರೂ. ದಂಡ

ಕಾಸರಗೋಡು: ಪ್ರಾಯಪೂರ್ತಿ ಯಾಗದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಗೆ ಜೀವಾವಧಿ ಕಠಿಣ ಸಜೆ, ಅದರ ಜತೆಗೆ 137 ವರ್ಷ ಕಠಿಣ ಸಜೆ ಹಾಗೂ 7.5 ಲಕ್ಷ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಮೀಯಪದವು ಮೂಡಂಬೈಲು ಕುಳವಯಲ್ ನಿವಾಸಿ  ವಲ್ಲಿ ಡಿ’ಸೋಜಾ (47) ಎಂಬಾತನಿಗೆ ಕಾಸರಗೋಡು  ಫಾಸ್ಟ್ ಟ್ರಾಕ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮುರಮೇಶ್ ಚಂದ್ರಬಾನು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.  ದಂಡ ಪಾವತಿಸದಿದ್ದಲ್ಲಿ  ಆರೋಪಿ 28 ತಿಂಗಳು ಹೆಚ್ಚುವರಿ ಕಠಿಣ ಸಜೆ …

ತೃಶೂರಿನಲ್ಲಿ ಮೂವರು ಬಾಂಗ್ಲಾದೇಶ ಪ್ರಜೆಗಳ ಬಂಧನ

ತೃಶೂರು: ತೃಶೂರಿನಲ್ಲಿ  ಅನಧಿ ಕೃತವಾಗಿ ವಾಸಿಸುತ್ತಿದ್ದ ಮೂವರು ಬಾಂಗ್ಲಾದೇಶ ಪ್ರಜೆಗಳನ್ನು ಪೊಲೀ ಸರು ಬಂಧಿಸಿದ್ದಾರೆ.  ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಅಂದಿಕ್ಕಾಡ್ ಪೊಲೀಸರು  ಚೆಮ್ಮಾಪಿಳ್ಳಿ ಎಂಬಲ್ಲಿ  ಇಂದು ಮುಂಜಾನೆ ನಡೆಸಿದ ತಪಾ ಸಣೆ ವೇಳೆ ಇವರನ್ನು ಪತ್ತೆಹಚ್ಚಲಾಗಿದೆ. ಇವರ ಜೊತೆಗಿದ್ದ ಮತ್ತಿಬ್ಬರು ಓಡಿ ಪರಾರಿಯಾಗಿದ್ದಾರೆ.  ಬಂಧಿತರು ಚೆಮ್ಮಾಪಿಳ್ಳಿಯ ಗುಜರಿ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿ ದ್ದರು.  ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಯೆಂದು ಪೊಲೀಸರು ತಿಳಿಸಿದ್ದಾರೆ.

ಗೆಡ್ಡೆ ತೆರವಿಗೆ ಶಸ್ತ್ರಚಿಕಿತ್ಸೆ: ಅಂಡಾಶಯವನ್ನೇ ತೆರವುಗೊಳಿಸಿದ ಬಗ್ಗೆ ದೂರು; ಡಾಕ್ಟರ್ ವಿರುದ್ಧ ಕೇಸು 

ಕಾಸರಗೋಡು: ಗೆಡ್ಡೆ ತೆರವುಗೊಳಿಸಲಿರುವ ಶಸ್ತ್ರ ಚಿಕಿತ್ಸೆ ಮಧ್ಯೆ ಅಂಡಾಶಯವನ್ನೇ ಪೂರ್ಣವಾಗಿ  ಕೊಯ್ದು ತೆಗೆದಿರುವುದಾಗಿ ದೂರಲಾಗಿದೆ. ಯುವತಿ ನೀಡಿದ ದೂರಿನಂತೆ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಕೊಳವಯಲಿನ ಕಾಟಾಡಿ ನಿವಾಸಿ   ನೀಡಿದ ದೂರಿನಂತೆ  ನೋರ್ತಾ ಕೋಟಚ್ಚೇರಿ   ಪದ್ಮ ಪೋಲಿಕ್ಲೀನಿಕ್‌ನ  ಡಾ. ರೇಷ್ಮಾ ಸುವರ್ಣರ   ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ. ಹೊಟ್ಟೆ ನೋವಿನ ಹಿನ್ನೆಲೆಯಲ್ಲಿ ಯುವತಿ ಕ್ಲಿನಿಕ್‌ಗೆ ತೆರಳಿದ್ದಳು. ತಪಾಸಣೆಯಲ್ಲಿ ಬಲಭಾಗದ ಅಂಡಾಶಯದಲ್ಲಿ ಗೆಡ್ಡೆ ಇರುವುದಾಗಿಯೂ ಶಸ್ತ್ರಚಿಕಿತ್ಸೆ ಮೂಲಕ ತೆರವುಗೊಳಿಸಬೇಕೆಂದು  ಡಾಕ್ಟರ್ ತಿಳಿಸಿದ್ದರು. …

ಹೊಯ್ಗೆ ಕಡವಿನಲ್ಲಿ ಸಹ ಕಾರ್ಮಿಕನಿಂದ ಹಲ್ಲೆ : ತಲೆಗೆ ಗಾಯಗೊಂಡ ವ್ಯಕ್ತಿ ಆಸ್ಪತ್ರೆಗೆ

ಕುಂಬಳೆ: ಮೊಗ್ರಾಲ್ ಪುತ್ತೂರು ಪೋರ್ಟ್ ಕಡವಿನಲ್ಲಿ ಸಹಕಾರ್ಮಿಕ ನೋರ್ವ ನಡೆಸಿದ ಹಲ್ಲೆಯಿಂದ ಗಾಯಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮೊಗ್ರಾಲ್ ಕುಟ್ಯಾನವಳಪ್‌ನ ಅಲಿ ಕೆ (35)  ತಲೆಗೆ ಗಾಯಗೊಂಡು  ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಿನ್ನೆ ಮಧ್ಯಾಹ್ನ ಸಹಕಾರ್ಮಿಕನಾದ ಮೊಗ್ರಾಲ್ ಪುತ್ತೂರು ನಿವಾಸಿ ಶರೀಫ ಹಾರೆಯಿಂದ ತಲೆಗೆ ಹೊಡೆದಿರುವುದಾಗಿ  ಗಾಯಾಳು ದೂರಿದ್ದಾರೆ.

ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಯುವಕ ಮೃತ್ಯು

ಕುಂಬಳೆ: ಅಸೌಖ್ಯ ಬಾಧಿಸಿ  ಹಲವು ತಿಂಗಳುಗಳ ಕಾಲ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟನು. ಕುಂಬಳೆ ಮಾವಿನಕಟ್ಟೆ ರಹ್ಮಾನ್ ಮಸೀದಿ ಸಮೀಪ ವಾಸಿಸುವ ಆದಂ ಅನಸ್ (18) ಮೃತಪಟ್ಟ ವ್ಯಕ್ತಿ. ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವೇಳೆ  ನಿನ್ನೆ ಮಧ್ಯಾಹ್ನ ನಿಧನ ಸಂಭವಿಸಿದೆ.  ಅಬ್ದುಲ್ಲ ಸಕಲೇಶಪುರ-ಮಿಸ್ರಿಯಾ ದಂಪತಿಯ ಪುತ್ರನಾದ ಮೃತರು ಸಹೋದರರಾದ ಅರ್ಶಾದ್, ಅಫ್ಸಲ್, ಅಶ್ಫಾನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಪ್ರಿಯತಮೆಯ ಕೊಲೆಯ ಬಳಿಕ ನೇಣು ಬಿಗಿದು ಯುವಕ ಆತ್ಮಹತ್ಯೆ

ಚಿಕ್ಕಮಗಳೂರು: ಪ್ರಿಯತಮೆ ಯನ್ನು ಕಾರಿನೊಳಗೆ ಕತ್ತುಹಿಸುಕಿ ಕೊಲೆಗೈದ ಬಳಿಕ ಪ್ರಿಯತಮ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಇಲ್ಲಿಗೆ ಸಮೀಪದ ದಾಸರಹಳ್ಳಿಯಲ್ಲಿ ನಡೆದಿದೆ. ಶಿವಮೊಗ್ಗ ಭದ್ರಾವತಿ ನಿವಾಸಿ ಕಾರು ಚಾಲಕ ಮಧು (30) ಹಾಗೂ ಗೆಳತಿ ಮಾಗಡಿಯ ಪೂರ್ಣಿಮ (28) ಎಂಬಿವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದವರು. ನಿನ್ನೆ ಬೆಳಿಗ್ಗೆ ದಾಸರಹಳ್ಳಿಯ ಒಂದು ಕಾಪಿ ತೋಟದ ಬಳಿ ಇವರ ಮೃತದೇಹ ಗಳನ್ನು ಸ್ಥಳೀಯರು ಪತ್ತೆಹಚ್ಚಿದ್ದರು.

ನಾಪತ್ತೆಯಾಗಿದ್ದ ಕೃಷಿಕ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೃಷಿಕ  ಕೆರೆಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ ಯಾಗಿದ್ದಾರೆ. ವರ್ಕಾಡಿ ನಾವಡ್ರ ಬೈಲ್ ನಿವಾಸಿ ಕ್ಸೇವಿಯರ್ ಡಿ’ಸೋಜಾ (71) ಮೃತಪಟ್ಟ ವ್ಯಕ್ತಿ.  ಇವರ ಮೃತದೇಹ ನಿನ್ನೆ ಮಧ್ಯಾಹ್ನ ಮನೆಯಿಂದ ೨೦೦ ಮೀಟರ್ ದೂರ ದಲ್ಲಿರುವ ಸಂಬಂಧಿಕರೊಬ್ಬರ ತೋಟದ ಕೆರೆಯಲ್ಲಿ ಪತ್ತೆಯಾಗಿದೆ.  ಕಳೆದ ಮಂಗಳವಾರ ರಾತ್ರಿ  ಆಹಾರ ಸೇವಿಸಿದ ಬಳಿಕ  ಇವರು ಹೊರಗೆ ತೆರಳಿದ್ದರು. ದೀರ್ಘ ಹೊತ್ತಾದರೂ ಮರಳಿ ಬಾರದ ಹಿನ್ನೆಲೆಯಲ್ಲಿ ಮನೆಯವರು ಪರಿಸರ ಪ್ರದೇಶಗಳಲ್ಲಿ ಹಾಗೂ ಸಂಬಂಧಿಕರ ಮನೆಗಳಲ್ಲಿ ಶೋಧ …