ಮಂಜೇಶ್ವರ ಠಾಣೆ ಪರಿಸರದಲ್ಲಿ ತುಕ್ಕು ಹಿಡಿದು ನಾಶವಾಗುವ ವಾಹನಗಳು: ವಾರೀಸುದಾರರಿಗೆ ನೀಡಲು ಕಾನೂನು ಕ್ರಮ ತೊಡಕು

ಉಪ್ಪಳ: ಮಂಜೇಶ್ವರ ಪೊಲೀಸ್ ಠಾಣೆ ಪರಿಸರದಲ್ಲಿ ತಂದು ನಿಲ್ಲಿಸಿರುವ ನೂರಾರು ವಾಹನಗಳು ತುಕ್ಕು ಹಿಡಿದು ನಾಶಗೊಳ್ಳುತ್ತಿದ್ದು, ಇದರಲ್ಲಿ ಸುಮಾರು 10 ವರ್ಷದ ಹಿಂದಿನ ವಾಹನಗಳು ಒಳಗೊಂಡಿದೆ. ಠಾಣೆಯ ಸುತ್ತಮುತ್ತ ವಾಹನಗಳನ್ನು ನಿಲ್ಲಿಸಲಾಗಿದೆ. ಅನಧಿಕೃತ ಮದ ಸಾಗಾಟ, ಮರಳು ಸಾಗಾಟ, ಅಪಘಾತವಾದ ವಾಹನಗಳು, ದಾಖಲೆಪತ್ರಗಳಿಲ್ಲದೆ ಸಂಚರಿಸಿದ ವಾಹನಗಳು ಇದರಲ್ಲಿ ಒಳಗೊಂಡಿವೆ. ಕಾರು, ಆಟೋರಿಕ್ಷಾ, ಟೆಂಪೋ, ಲಾರಿ, ಬೈಕ್ ಸಹಿತ ಹಲವು ವಾಹನಗಳು ಇಲ್ಲಿ ಕಂಡು ಬರುತ್ತಿದೆ. ಇದರಲ್ಲಿ ಕೆಲವೊಂದು ಬಿಸಿಲು ಮಳೆಗೆ ತುಕ್ಕು ಹಿಡಿದು ನಾಶವಾಗುತ್ತಿದೆ. ಸುತ್ತುಮುತ್ತು ಕಾಡುಪೊದೆಗಳಾವರಿಸಿದ್ದು, …

ಇಬ್ಬರು ಆಟೋ ಚಾಲಕರು ನೇಣು ಬಿಗಿದು ಮೃತಪಟ್ಟ ಸ್ಥ್ತಿತಿಯಲ್ಲಿ ಪತ್ತೆ

ಕಾಸರಗೋಡು: ಪೆರಿಯದ ಇಬ್ಬರು ಆಟೋ ಚಾಲಕರು ವಿಭಿನ್ನ ಸ್ಥಳಗಳಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಐಎನ್‌ಟಿಯುಸಿ ಕಾರ್ಯಕರ್ತ, ಪೆರಿಯ ಆಟೋ ಸ್ಟ್ಯಾಂಡ್‌ನ ಆಟೋ ಚಾಲಕನಾದ ಪ್ರೇiನ್ (42)ರನ್ನು ಮನೆ ಸಮೀಪದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಿನ್ನೆ ಬೆಳಿಗ್ಗೆ ಪತ್ತೆಹಚ್ಚಲಾಗಿದೆ. ಅಸೌಖ್ಯನಿಮಿತ್ತ  ಮನೋವೇದನೆಯಲ್ಲಿದ್ದರೆನ್ನ ಲಾಗಿದೆ.  ಇವರು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ. ಇನ್ನೋರ್ವ ಆಟೋ ಚಾಲಕ ಪೆರಿಯ ಕೂಡಾನಂ ನಾರಾಯಣ ಎಂಬವರ ಪುತ್ರ ಸುಧೀಶ್ (40) ಬುಧವಾರ ರಾತ್ರಿ ನೇಣುಬಿಗಿದು ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ಕಾರಣ ಸ್ಪಷ್ಟಗೊಂಡಿಲ್ಲ. ಈ …

ವಯಸ್ಸು 24, ಕಳವು ಪ್ರಕರಣ 24 : ಕಾಞಂಗಾಡ್ ನಿವಾಸಿ ಪರಿಯಾರಂನಲ್ಲಿ ಸೆರೆ

ಹೊಸದುರ್ಗ: ಪರಿಯಾರಂನ ಎರಡು ಮನೆಗಳಲ್ಲಿ ಕಳವು ನಡೆಸಿದ ಕುಖ್ಯಾತ ಕಳ್ಳನನ್ನು ನಾಲ್ಕನೇ ದಿನ ಬಂಧಿಸಲಾಗಿದೆ. ಈತನಿಗೆ 24 ವರ್ಷವಾದರೂ 24 ಕಳವು ಪ್ರಕರಣಗಳಲ್ಲಿ ಈತ ಆರೋಪಿ ಯಾಗಿದ್ದಾನೆ. ಕಾಞಂಗಾಡ್ ಗಾರ್ಡನ್‌ವಳಪ್‌ನ ಪಿ.ಎಚ್. ಅಸೀಫ್ (24)ನನ್ನು ಪಯ್ಯನ್ನೂರು ಡಿವೈಎಸ್‌ಪಿ ವಿನೋದ್‌ರ ಮೇಲ್ನೋಟದಲ್ಲಿ ಪರಿಯಾರಂ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಪಿ. ವಿನೀಶ್ ಕುಮಾರ್ ಮತ್ತು ತಂಡ ಬಂಧಿಸಿದೆ. ಹೊಸದುರ್ಗ ಪೊಲೀಸರು  ಕಾಪಾ ಹೊರಿಸಿ ಬಂಧಿಸಿ ಜೈಲಿನಲ್ಲಿರಿಸಿದ ಆಸಿಫ್ ಇತ್ತೀಚೆಗೆ ಬಿಡುಗಡೆಗೊಂಡಿದ್ದನು. ಚೆರುತಾಳಂ ಕಕ್ಕೋಣಿಯ ಕುಟ್ಟಿ ತರವಾಡ್‌ನ ಕೆ. ರಾಜನ್, ಕುನ್ನುಮಲ್ ಸಾವಿತ್ರಿ …

ನ್ಯಾಯಾಲಯದ ಆವರಣದಲ್ಲಿ ಪೊಲೀಸ್ ಅಧಿಕಾರಿಗೆ ಬೆದರಿಕೆ: ಯುವಕನ ವಿರುದ್ಧ ಕೇಸು

ಕಾಸರಗೋಡು: ಹೇಳಿಕೆ ಓದಿ ಕೇಳಿದ ಬಳಿಕ ಸಹಿ ಹಾಕುವುದಕ್ಕಾಗಿ ನ್ಯಾಯಾಲಯದ ವರಾಂಡದಲ್ಲಿ ಕುಳಿತುಕೊಂಡಿದ್ದ ಮಧ್ಯೆ ಪೊಲೀಸ್  ಅಧಿಕಾರಿಯನ್ನು ಬೆದರಿಸಿರುವುದಾಗಿ ದೂರಲಾಗಿದೆ. ಚೀಮೇನಿ ಪೊಲೀಸ್ ಠಾಣೆಯ ಸೀನಿಯರ್ ಪೊಲೀಸ್ ಆಫೀಸರ್ ಪಿ.ವಿ. ಸುದೀಶ್‌ರ ದೂರಿ ನಂತೆ ರಾಜೀವನ್ ಎಂಬಾತನ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ. ನೀಲೇಶ್ವರ ಪೊಲೀಸ್ ನೋಂದಾಯಿಸಿದ ಪ್ರಕರಣದಲ್ಲಿ ರಾಜೀವನ್ ಆರೋಪಿಯಾಗಿದ್ದಾನೆ. ಪ್ರಸ್ತುತ ಪ್ರಕರಣದಲ್ಲಿ ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (2)ದಲ್ಲಿ ಹೇಳಿಕೆ ನೀಡಲು ರಾಜೀವನ್ ತಲುಪಿದ್ದನು. ಹೇಳಿಕೆಯನ್ನು ಓದಿ ಕೇಳಿದ ಬಳಿಕ ಸಹಿ …

ರೋಟರಿ ಬದಿಯಡ್ಕ ಕನಸಿನ ಮನೆ ಯೋಜನೆಗೆ ಚಾಲನೆ

ಬದಿಯಡ್ಕ: ರೋಟರಿ ಕನಸಿನ ಮನೆ ಯೋಜನೆಯ ಅಂಗವಾಗಿ ನಾರಂಪಾಡಿ ಪಿಲಿಕೂಡ್ಲು ಉಷಾ ಕುಮಾರಿ ಎಂಬವರಿಗೆ ಮಂಜೂರಾದ ಮನೆ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ನಡೆಸಲಾಯಿತು. ರೋಟರಿ ಬದಿಯಡ್ಕ ನೇತೃತ್ವದಲ್ಲಿ ಕಾಮಗಾರಿಗಳು ನಡೆಯಲಿದ್ದು ಘಟಕ ಅಧ್ಯಕ್ಷ ಕೇಶವ ಪಾಟಾಳಿ ಬದಿಯಡ್ಕ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಚೆಂಗಳ ಪಂಚಾಯತ್ ಸದಸ್ಯ ಲತೀಫ್ ನಾರಂಪಾಡಿ, ರೋಟರಿ ಕಾರ್ಯದರ್ಶಿ ರಮೇಶ ಆಳ್ವ ಕಡಾರು, ಕೋಶಾಧಿಕಾರಿ ಗೋಪಾಲಕೃಷ್ಣ ಕಾಮತ್, ಸದಸ್ಯ ಕೃಷ್ಣ ಪ್ರತೀಕ ಬೆಳ್ಳಿಗೆ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.

ಕಾಕನಾಡ್ ಕಮಿಷನರ್ ಸಹಿತ ತಾಯಿ, ಸಹೋದರಿ ಆತ್ಮಹತ್ಯೆ ಪೊಲೀಸ್ ತನಿಖೆ ಆರಂಭ

ಕೊಚ್ಚಿ: ಕಾಕನಾಡ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಕಸ್ಟಮ್ಸ್ ಅಡೀಶನಲ್ ಕಮಿಷನರ್ ಹಾಗೂ ಕುಟುಂಬ ಆತ್ಮಹತ್ಯೆಗೈದಿರುವುದಾಗಿ ಪ್ರಾಥಮಿಕವಾಗಿ ತಿಳಿದು ಬಂದಿದೆ. ಇದನ್ನು ಸ್ಪಷ್ಟಪಡಿಸುವ ಬರಹವೊಂದು ಕ್ವಾರ್ಟರ್ಸ್‌ನಿಂದ ಲಭಿಸಿದೆ. ಹಿಂದಿಯಲ್ಲಿ ಬರೆದ ಪತ್ರವಾಗಿದೆ ಇದು. ಇದರ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಕಸ್ಟಮ್ಸ್ ಅಡೀಶನಲ್ ಕಮಿಷನರ್ ಝಾರ್ಖಂಡ್ ನಿವಾಸಿಯಾದ ಮನೀಶ್ ವಿಜಯ್ (42), ಸಹೋದರಿ ಶಾಲಿನಿ (35), ತಾಯಿ ಶಕುಂತಳ (82) ಎಂಬಿವರನ್ನು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಕಳೆದ ಕೆಲವು ದಿನಗಳಿಂದ ರಜೆಯಲ್ಲಿದ್ದ ಮನೀಶ್ ವಿಜಯ್ ರಜೆ ಮುಗಿದರೂ …

ಕೊಂಡೆವೂರಿನಲ್ಲಿ ಪ್ರತಿಷ್ಠಾ ವರ್ಧಂತಿ, ಅಖಂಡ ಭಜನಾ ಸಪ್ತಾಹ ನಾಳೆಯಿಂದ

ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಶ್ರೀ ಗಾಯತ್ರಿ ದೇವಿ ಹಾಗೂ ಶ್ರೀ ನಿತ್ಯಾನಂದ ಗುರುದೇವರ ಪ್ರತಿಷ್ಠಾ ವರ್ಧಂತಿ ನಾಳೆ ವಿವಿಧ ಕಾರ್ಯ ಕ್ರಮಗಳೊಂದಿಗೆ ನಡೆಯಲಿದೆ. ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಕಟೀಲಿನ ಬ್ರಹ್ಮಶ್ರೀ ಕಮಲಾದೇವಿ ಪ್ರಸಾದ ಅಸ್ರಣ್ಣ ಭಾಗವಹಿಸುವರು. ನಾಳೆ ಸಂಜೆ ೬.೩೦ಕ್ಕೆ ಭಜನಾ ಸಪ್ತಾಹಕ್ಕೆ ಶ್ರೀಗಳು ಚಾಲನೆ ನೀಡುವರು. ಮಾರ್ಚ್ 1ರಂದು ಬೆಳಿಗ್ಗೆ ಮಂಗಲಾಚರಣೆ ನಡೆಯಲಿದೆ. ಚಂಡಿಕಾಹೋಮ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.

ಸುಡುಮದ್ದು ಪ್ರದರ್ಶನ ಮಧ್ಯೆ ಪಟಾಕಿ ಸಿಡಿದು ೫ ಮಂದಿಗೆ ಗಾಯ

ಕಣ್ಣೂರು: ಅಳಿಕ್ಕೋಡ್‌ನಲ್ಲಿ ಸುಡುಮದ್ದು ಪ್ರದರ್ಶನ ಮಧ್ಯೆ ಇಂದು ಮುಂಜಾನೆ 4.30 ರ ವೇಳೆ ಅಪಾಯ ಸಂಭವಿಸಿದೆ. 5 ಮಂದಿ ಗಾಯಗೊಂ ಡಿದ್ದಾರೆ. ಇಲ್ಲಿನ ನೀರ್ಕಡವು ಮೀನ್ ಕುನ್ನ್ ಮುಚ್ಚಿರಿಯನ್ ಕಾವ್‌ನಲ್ಲಿ  ಭೂತಕೋಲದ ಮಧ್ಯೆ ಸುಡುಮದ್ದು  ಅಪಾಯ ಸಂಭವಿಸಿದ್ದು, ಓರ್ವ ಗಂಭೀರ ಗಾಯಗೊಂಡಿದ್ದಾರೆ. ಸ್ಥಳೀಯ ಪಟಾಕಿಗಳನ್ನು ಸಿಡಿಸುತ್ತಿದ್ದ ಮಧ್ಯೆ ಸಿಡಿಯದ ಒಂದು ಪಟಾಕಿ ತುಂಬಾ ಸಮಯದ ಬಳಿಕ ಜನರ ಮಧ್ಯೆ ಸಿಡಿದು ದುರಂತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮುಂಜಾನೆ ಹೊತ್ತಾದ ಕಾರಣ ಇಲ್ಲಿ ಜನಸಂದಣಿ ಕಡಿಮೆಯಿದ್ದು, ಭಾರೀ …

ಇಚ್ಲಂಗೋಡು ಶ್ರೀ ಸದಾಶಿವ ದೇವಸ್ಥಾನದ ನೂತನ ಆಡಳಿತ ಮಂಡಳಿ

ಬಂದ್ಯೋಡು: ಇಚ್ಲಂಗೋಡು ಶ್ರೀ ಸದಾಶಿವ ಕ್ಷೇತ್ರದ ನೂತನ ಆಡಳಿತ ಸಮಿತಿ ಇತ್ತೀಚೆಗೆ ರಚಿಸಲಾಯಿತು. ದೇವಸ್ವಂ ಬೋರ್ಡ್‌ನ ಜಿಲ್ಲೆಯ ಇನ್ಸ್‌ಪೆಕ್ಟರ್ ಉಮೇಶ್ ಉಪಸ್ಥಿತರಿದ್ದರು. ಆಡಳಿತ ಮೊಕ್ತೇಸರರಾಗಿ ಸುಧೀಶ್ಚಂದ್ರ ಶೆಟ್ಟಿ ಮುಗೇರುಗುತ್ತು ಇಚ್ಲಂಗೋಡು, ಮೊಕ್ತೇಸರರಾಗಿ ಪುಷ್ಪರಾಜ ಶೆಟ್ಟಿ ಬಿ. ಇಚ್ಲಂಗೋಡು, ಭಾಸ್ಕರ ಉಪರ್ಲೆ, ಕೆ.ಎ. ಕೃಷ್ಣ ಶೆಟ್ಟಿ ಇಚ್ಲಂಗೋಡು ನೇಮಕಗೊಂಡರು.

ನದಿಗಳಿಂದ ಹೊಯ್ಗೆ ಸಂಗ್ರಹ: ಪ್ರಕೃತಿ ಸಮಸ್ಯೆಗೆ ಕಾರಣವಾಗಲಿದೆ- ಹವಾಮಾನ ಇಲಾಖೆ

ಕಾಸರಗೋಡು: ರಾಜ್ಯದ ಎಂಟು ಜಿಲ್ಲೆಗಳಲ್ಲಿರುವ ನದಿಗಳಿಂದ ಹೊಯ್ಗೆ ಗಣಿಗಾರಿಕೆ ಪುನರಾರಂಭಿಸಲಿರುವ ರಾಜ್ಯ ಸರಕಾರದ ಕಂದಾಯ ಇಲಾಖೆಯ ಘೋಷಣೆ ಗಂಭೀರ ಪ್ರಾಕೃತಿಕ ಸಮಸ್ಯೆಗಳಿಗೆ ಕಾರಣವಾಗಲಿದೆಯೆಂದು ಹವಾಮಾನ ನಿರೀಕ್ಷಣಾ ಕೇಂದ್ರ ಮೂಲಗಳು ತಿಳಿಸಿವೆ. ವೈಜ್ಞಾನಿಕ ರೀತಿಯ ಅಧ್ಯಯನ ನಡೆಸದೆ ಗಣಿಗಾರಿಕೆ ಆರಂಭಿಸಕೂಡದು. ಪ್ರಸ್ತುತ ಹಲವು ದಿನಗಳು ಸಮುದ್ರ ಮಟ್ಟಕ್ಕಿಂತಲೂ ತಗ್ಗಿರುವುದಾಗಿ ತಿಳಿಯಲಾಗಿದೆ. ತಿಂಗಳುಗಳ ಹಿಂದೆ ಕೇರಳದ 32 ನದಿಗಳಿಂದ ಹೊಯ್ಗೆ ಗಣಿಗಾರಿಕೆ ಆರಂಭಿಸಲು ನಿರ್ಧರಿಸಲಾಗಿದೆ. ಕಾಸರಗೋಡು, ಕಣ್ಣೂರು, ಪಾಲಕ್ಕಾಡ್, ಮಲಪ್ಪುರಂ, ತೃಶೂರು, ಕೊಲ್ಲಂ, ಪತ್ತನಂತಿಟ್ಟ, ಎರ್ನಾಕುಳಂ ಜಿಲ್ಲೆಗಳ ನದಿಗಳಿಂದ ಗಣಿಗಾರಿಕೆಗೆ …