ಕೊಡಗಿನ ಗೌರಮ್ಮ ದತ್ತಿನಿಧಿ ಕಥಾ ಸ್ಪರ್ಧೆ: ಧನ್ಯಶ್ರೀ ಸರಳಿ ಪ್ರಥಮ

ಬದಿಯಡ್ಕ: 2025ನೇ ಸಾಲಿನ ಕೊಡಗಿನ ಗೌರಮ್ಮ ದತ್ತಿನಿಧಿ ಕಥಾ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿ ಸಲಾಯಿತು. ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಇತ್ತೀಚೆಗೆ ಕಿಳಿಂಗಾರು ಸಾಯಿ ನಿಲಯಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಜರಗಿದ ಸಮಾರಂಭದಲ್ಲಿ ಪ್ರಥಮ ಬಹುಮಾನ ಪಡೆದ ಧನ್ಯಶ್ರೀ ಸರಳಿ, ದ್ವಿತೀಯ ಹಾಗೂ ತೃತೀಯ ಬಹುಮಾನ ವಿಜೇತರಾದ ಚೈತನ್ಯ ನಿಡುಬೆ ಮತ್ತು ಸರಸ್ವತಿ ಆರ್.ಜಿ. ಭಟ್ ಕುಂಡಡ್ಕ ವೇಣೂರುರಿಗೆ ಶ್ರೀಗಳು ನಗದು, ಪ್ರಶಸ್ತಿ ಪತ್ರ, ಶಾಶ್ವತ ಫಲಕವನ್ನು ನೀಡಿ ಆಶೀರ್ವ ದಿಸಿದರು. ಈ …

ಕಣಜ ಹುಳು ದಾಳಿಯಿಂದ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆಯಲ್ಲಿದ್ದ ಹೋಟೆಲ್ ಕಾರ್ಮಿಕ ನಿಧನ

ಉಪ್ಪಳ: ಕಣಜದ ಹುಳು ದಾಳಿಯಿಂದ ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಹೋಟೆಲ್ ಕಾರ್ಮಿಕ ನಿಧನ ಹೊಂದಿದರು. ಬಾಯಾರು ಪೆರ್ವೋಡಿ ಬಳಿಯ ಪಟ್ಲ ನಿವಾಸಿ, ಸುರೇಶ್ ಯು. ಭಟ್ (79) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇವರಿಗೆ ಕಳೆದ ಗುರುವಾರ ಪಟ್ಲದಲ್ಲಿ ಕಣಜದ ಹುಳುಗಳು ಕಚ್ಚಿದ್ದವು. ಸಂಬಂಧಿಕರ ಮನೆಯಿಂದ ತನ್ನ ಮನೆಗೆ ನಡೆದು ಹೋಗುತ್ತಿರುವ ವೇಳೆ ಹುಳುಗಳ ಗುಂಪು ಇವರ ಮೇಲೆರಗಿದೆ. ಸ್ಥಳದಲ್ಲೇ ಬಿದ್ದಿದ್ದ ಇವರನ್ನು ಸ್ಥಳೀಯರು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿದ್ದರು. ಹುಳುಗಳ ದಾಳಿಯಿಂದ ತಲೆ ದೇಹವಿಡೀ ಗಾಯಗೊಂಡಿದ್ದ …

ಯುವಕನ ಕೊಲೆಗೆ ಯತ್ನ : ಐದು ಮಂದಿ ಆರೋಪಿಗಳ ಸೆರೆ

ಬದಿಯಡ್ಕ: ಬೇಳ ಮೇಲಿನ ನೀರ್ಚಾಲ್‌ನ ಜಯಶ್ರೀ ನಿಲಯದ ಬಿ. ಸೂರಜ್ (27) ಎಂಬವರಿಗೆ ಹಲ್ಲೆಗೈದು ಕೊಲೆಗೈಯ್ಯಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿ ಆರೋಪಿಗಳನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ನೀರ್ಚಾಲು ಮಾಡತ್ತಡ್ಕದ ಕೆ. ಧೀರಜ್ (28), ನೆಕ್ರಾಜೆ ಚೂರಿಪಳ್ಳದ ಕೆ. ಸುಧೀಶ್ (25), ಮಧೂರಿನ ಶೈಲೇಶ್ (20), ನೆಕ್ರಾಜೆ ನೆಲ್ಲಿಕಟ್ಟೆಯ ಸುಧೀಶ್ (24), ಮಧೂರಿನ ವಿಷ್ಣು ಪ್ರಸಾದ್ (28) ಎಂಬಿವರನ್ನು ಬದಿಯಡ್ಕ ಎಸ್.ಐ ನಿಖಿಲ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಫೆ. 16ರಂದು ಸಂಜೆ ನೀರ್ಚಾಲ್‌ನಲ್ಲಿ ಮಾರಕಾ ಯುಧಗಳೊಂದಿಗೆ ಕಾರಿನಲ್ಲಿ …

ಹುಟ್ಟು ಹಬ್ಬದ ಮರುದಿನ ಯುವಕ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ

ಮಂಜೇಶ್ವರ: ಹುಟ್ಟುಹಬ್ಬದ ಮರುದಿನ ಯುವಕನೋರ್ವ ಮನೆ ಯೊಳಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಉದ್ಯಾವರ ಅಂಬಿ ತ್ತಾಡಿ ನಿವಾಸಿ ದಿ| ಭೋಜರ ಪುತ್ರ ಟೈಲ್ಸ್ ಕಾರ್ಮಿಕ ಚಂದ್ರಶೇಖರ ಅಲಿಯಾಸ್ ಚರಣ್ (42) ಆತ್ಮಹತ್ಯೆ ಗೈದವರು. ಇವರು ಬಿಜೆಪಿ ಕಾರ್ಯಕರ್ತರಾಗಿದ್ದಾರೆ. ಮೊನ್ನೆ ಇವರ ಹುಟ್ಟುಹಬ್ಬದ ದಿನವಾ ಗಿತ್ತು. ರಾತ್ರಿ ಊಟ ಮಾಡಿ  ಮಲಗಿದ್ದು, ನಿನ್ನೆ ಮುಂಜಾನೆ ಮನೆಯೊಳಗೆ ಫ್ಯಾನ್‌ಗೆ ಶಾಲ್‌ನಿಂದ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ. ಕೂಡಲೇ ಆಸ್ಪತ್ರೆಗೆ ತಲುಪಿಸಲಾಗಿದ್ದರೂ ಆಗಲೇ ನಿಧನ ಸಂಭವಿಸಿದೆ. ಆತ್ಮಹತ್ಯೆಗೆ …

ಅರ್ಧ ಬೆಲೆಗೆ ಸಾಮಗ್ರಿಗಳ ಮಾರಾಟ ವಂಚನೆ: ರಾಜ್ಯದ ಹನ್ನೆರಡು ಕೇಂದ್ರಗಳಲ್ಲಿ ಇ.ಡಿ ದಾಳಿ

ಕೊಚ್ಚಿ: ಅರ್ಧ ಬೆಲೆಗೆ ಸ್ಕೂಟಿ, ಲ್ಯಾಪ್‌ಟಾಪ್ ಇತ್ಯಾದಿ ಸಾಮಗ್ರಿಗಳ ಮಾರಾಟದ ಹೆಸರಲ್ಲಿ ರಾಜ್ಯದ ಸಹಸ್ರಾರು ಮಂದಿಯಿಂದಾಗಿ ಕೋಟಿಗಟ್ಟಲೆ ರೂ. ಪಡೆದು ಬಳಿಕ ವಂಚನೆಗೈದ ಪ್ರಕರಣಕ್ಕೆ ಸಂಬಂಧಿಸಿ ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ಇಡಿ- ಜಾರಿ ನಿರ್ದೇಶನಾಲಯ) ಇಂದು ರಾಜ್ಯದ ೧೨ ಕೇಂದ್ರಗಳಿಗೆ  ಏಕಕಾಲದಲ್ಲಿ ಅನಿರೀಕ್ಷಿತವಾಗಿ ದಾಳಿ  ಹಾಗೂ ತಪಾಸಣೆ ಆರಂಭಿಸಿದೆ. ಅರ್ಧ ಬೆಲೆಗೆ ಸಾಮಗ್ರಿಗಳನ್ನು ವಿತರಿಸಿ ವಂಚಿಸುತ್ತಿದ್ದ ಮರೆಯಲ್ಲಿ ಕಾಳಧನ  ವ್ಯವಹಾರ  ನಡೆದಿದೆಯೇ ಎಂಬುದನ್ನು ಪ್ರಧಾನವಾಗಿ ಪತ್ತೆಹಚ್ಚಲು ಇ.ಡಿ ಈ ದಾಳಿ ನಡೆಸುತ್ತಿದೆ.  ಈ ವಂಚನೆಗೆ ಸಂಬಂಧಿಸಿ ಕಾಳಧನ ವ್ಯವಹಾರ  …

ಪತಿ ಮನೆಯಲ್ಲಿ ಯುವತಿ ನೇಣು ಬಿಗಿದು ಮೃತ್ಯು: ಸಾವಿನಲ್ಲಿ ಶಂಕೆ

ಹೊಸದುರ್ಗ: 10 ತಿಂಗಳ ಹಿಂದೆ ವಿವಾಹಿತೆಯಾದ ಯುವತಿ ಪತಿಗೃಹದ ಮಲಗುವ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ವಲಿಯಪರಂಬ ಪಡನ್ನಕಡಪ್ಪುರದ ಬೀಚಾರಕಡವ್ ಕಳತ್ತಿಲ್ ನಿವಾಸಿ ಸುನಿಲ್- ಗೀತಾ ದಂಪತಿ ಪುತ್ರಿ ನಿಖಿತ (20) ಮೃತ ಪಟ್ಟವರು. ತಳಿಪರಂಬ್ ಸಮೀಪದ ಆಂದೂರು ನಗರಸಭೆಯ ನಣಿಚ್ಚೇರಿ ನಿವಾಸಿ ವೈಶಾಖ್‌ರ ಪತ್ನಿಯಾಗಿದ್ದಾರೆ. ತಳಿಪ್ಪರಂಬ್ ಲೂರ್ದ್ ನರ್ಸಿಂಗ್ ಕಾಲೇಜಿನಲ್ಲಿ ಡಯಾಲಿಸಿಸ್ ಟೆಕ್ನೀಶಿ ಯನ್ ಕೋರ್ಸ್ ಕಲಿಯುತ್ತಿದ್ದರು. ನಿನ್ನೆ ಪಡನ್ನ ಕಡಪ್ಪುರದ ಮನೆಗೆ ತಲುಪಿದ ನಿಖಿತ ಸಂತೋಷದಿಂದ ಹಿಂತಿರುಗಿದ್ದು, ಸಾವಿನಲ್ಲಿ ಶಂಕೆಯಿದೆ ಎಂದು …

ಹಣ್ಣು ಹಂಪಲಿನ ಮರೆಯಲ್ಲಿ ಎಂ.ಡಿ.ಎಂ.ಎ ಮಾರಾಟ: ಓರ್ವ ಸೆರೆ

ಕಾಸರಗೋಡು: ಹಣ್ಣು ಹಂಪಲಿನ ಮರೆಯಲ್ಲಿ ಮಾರಕ ಮಾದಕವಸ್ತುವಾದ ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪದಂತೆ ಕಾಸರಗೋಡು ಪೊಲೀ ಸರು ಮತ್ತು ಡಾನ್ ಸಾಫ್ ನೇತೃತ್ವದ ತಂಡ ನಡೆಸಿದ ಜಂಟಿ ಕಾರ್ಯಾ ಚರಣೆಯಲ್ಲಿ ಓರ್ವನನ್ನು ಬಂಧಿಸಿದೆ. ಉಪ್ಪಳ ರೈಲು ನಿಲ್ದಾಣ ರಸ್ತೆ ಬಳಿಯ ಬಿಸ್ಮಿಲ್ಲಾ ಮಂಜಿಲ್ ನಿವಾಸಿ ಹಾಗೂ ಕಾಸರಗೋಡು ಹಳೇ ಬಸ್ ನಿಲ್ದಾಣ ಪರಿಸರದಲ್ಲಿ ರಸ್ತೆ ಬದಿ ಹಣ್ಣು ಹಂಪಲು ಮಾರಾಟ ಮಾಡುತ್ತಿರುವ ಮೊಹಮ್ಮದ್ ಶಮೀರ್ ಬಿ.ಎ. (28) ಬಂಧಿತ ಆರೋಪಿ. ಈತನ ಕೈವಶ ದಿಂದ 25.9  ಗ್ರಾಂ …

ಉಪ್ಪಳದಲ್ಲಿ ಕಾವಲುಗಾರನ ಕೊಲೆ: ಇರಿಯಲು ಆರೋಪಿ ಬಳಸಿದ ಚಾಕು ಪತ್ತೆ; ತನಿಖೆ ಮುಂದುವರಿಕೆ

ಉಪ್ಪಳ: ಉಪ್ಪಳ ಮೀನು ಮಾರುಕಟ್ಟೆ ಬಳಿಯ ಕಟ್ಟಡದ ಕಾವಲುಗಾರನಾದ  ಸುರೇಶ್ (48) ಎಂಬವರನ್ನು ಇರಿದು ಕೊಲೆಗೈ ಯ್ಯಲು ಆರೋಪಿ ಬಳಸಿದ ಚಾಕುವನ್ನು ಮೀನು ಮಾರುಕಟ್ಟೆ ಬಳಿಯಿಂದ  ಪತ್ತೆಹಚ್ಚಲಾಗಿದೆ. ಪ್ರಕರಣದ ಆರೋಪಿಯಾದ ಉಪ್ಪಳ ಪತ್ವಾಡಿಯ ಸವಾದ್ (24)ನನ್ನು ಪೊಲೀಸರು ಮಾಹಿತಿ ಸಂಗ್ರಹಕ್ಕಾಗಿ  ಕೊಂಡೊಯ್ದ ವೇಳೆ ಚಾಕುವನ್ನು ಪತ್ತೆಹಚ್ಚಲಾಯಿತು. ಮಂಜೇಶ್ವರ ಪೊಲೀಸ್ ಇನ್ ಸ್ಪೆಕ್ಟರ್ ಇ. ಅನೂಪ್ ಕುಮಾರ್, ಎಎಸ್‌ಐ ಮಧುಸೂದ ನನ್ ನೇತೃತ್ವದ ಪೊಲೀಸರು ಆರೋಪಿಯನ್ನು ಕೊಲೆ ನಡೆದ ಸ್ಥಳಕ್ಕೆ ತಲುಪಿಸಿ ಮಾಹಿತಿ ಸಂಗ್ರಹಿಸಿದರು. ಸೆರೆಗೀಡಾಗಿದ್ದ ಆರೋಪಿ ಯನ್ನು  …

ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ನೇಮಕ

ನವದೆಹಲಿ: ಭಾರತೀಯ ಚುನಾವಣಾ ಆಯೋಗದ ನೂತನ ಮುಖ್ಯ ಆಯುಕ್ತರಾಗಿ ಹಿರಿಯ ಐಎಎಸ್ ಅಧಿಕಾರಿ ಜ್ಞಾನೇಶ್ ಕುಮಾರ್ (61)ರನ್ನು ನೇಮಿಸ ಲಾಗಿದೆ. ಪ್ರಧಾನಿ ನರೇಂದ್ರಮೋದಿ ನೇತೃತ್ವದ ತ್ರಿಸದಸ್ಯ ಸಮಿತಿ ಈ ಆಯ್ಕೆ ನಡೆಸಿದೆ. ಹಾಲಿ ಮುಖ್ಯ ಚುನಾವಣಾ ಆಯುಕ್ತರಾಗಿರುವ ರಾಜೀವ್ ಕುಮಾರ್ ನಾಳೆ ಸೇವೆಯಿಂದ ನಿವೃತ್ತರಾಗಲಿರುವ ಹಿನ್ನೆಲೆಯಲ್ಲಿ ತೆರವುಗೊಳ್ಳುವ ಆ ಸ್ಥಾನಕ್ಕೆ ಜ್ಞಾನೇಶ್ ಕುಮಾರ್‌ರನ್ನು ನೇಮಿಸಲಾಗುವುದು.

ಸೆಕ್ರೆಟರಿಯೇಟ್ ಮುಂದೆ ಸತ್ಯಾಗ್ರಹ ಆಶಾ ಕಾರ್ಯಕರ್ತೆಯರ ವಿರುದ್ಧ ಕೇಸು

ತಿರುವನಂತಪುರ: ರಾಜ್ಯದ ಆಶಾ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಸೆಕ್ರೆಟರಿಯೇಟ್ ಮುಂದೆ ಅನಿರ್ಧಿ ಷ್ಟಾವಧಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇದೇ ವೇಳೆ ಸತ್ಯಾಗ್ರಹ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ವಿರುದ್ಧ ಗಲಭೆಗೆ ಆಹ್ವಾನ ಸಹಿತ ಆರೋಪ ಹೊರಿಸಿ  ಪೊಲೀಸರು ಕೇಸು ದಾಖಲಿಸಿಕೊಂಡಿರುವುದಾಗಿ  ಹೇಳಲಾಗುತ್ತಿದೆ. ಕೇರಳ ಆಶಾ ಹೆಲ್ತ್ ವರ್ಕರ್ಸ್ ಅಸೋಸಿಯೇಶನ್ ರಾಜ್ಯ ಅಧ್ಯಕ್ಷ ವಿ.ಕೆ. ಸದಾನಂದನ್, ಪ್ರಧಾನ ಕಾರ್ಯದರ್ಶಿ ಎಂ.ಎ ಬಿಂದು ಸಹಿತ ೧೫೦ರಷ್ಟು ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.