ಚಾಲಕ್ಕುಡಿ ಬ್ಯಾಂಕ್ ದರೋಡೆ: ಆರೋಪಿಗಾಗಿ ಶೋಧ ತೀವ್ರ

ತೃಶೂರು: ಚಾಲಕ್ಕುಡಿ ಪೋಟ್ಟ ಎಂಬಲ್ಲಿನ ಫೆಡರಲ್ ಬ್ಯಾಂಕ್ ಶಾಖೆಯಿಂದ ನಿನ್ನೆ ಹಾಡಹಗಲೇ  ನಡೆದ ದರೋಡೆ ಪ್ರಕರಣದ ಆರೋಪಿಗಾಗಿ ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ. ಆರೋಪಿ ಅಂಗಮಾಲಿಯತ್ತ ಪರಾರಿಯಾ ಗಿದ್ದಾನೆಂಬ ಬಗ್ಗೆ ಮಾಹಿತಿ ಲಭಿಸಿದ್ದು, ಈ ಹಿನ್ನೆಲೆಯಲ್ಲಿ ತನಿಖೆಯನ್ನು ಅತ್ತ ವಿಸ್ತರಿಸಲಾಗಿದೆ. ನಿನ್ನೆ  ಮಧ್ಯಾಹ್ನ ೨.೧೫ರ ವೇಳೆ ಈ ದರೋಡೆ ಕೃತ್ಯ ನಡೆದಿದೆ. ಹೆಲ್ಮೆಟ್, ಜಾಕೆಟ್ ಧರಿಸಿ ಬ್ಯಾಂಕ್‌ಗೆ ನುಗ್ಗಿದ ದರೋಡೆಕೋರ ಅಲ್ಲಿನ ನೌಕರರಿಗೆ  ಚಾಕು ತೋರಿಸಿ ಬೆದರಿಕೆ ಯೊಡ್ಡಿ ೧೫.೨೦ ಲಕ್ಷ ರೂಪಾಯಿ ದೋಚಿದ್ದಾನೆ. ಕ್ಯಾಶ್ ಕೌಂಟರ್‌ನಲ್ಲಿ ೪೫ …

ಹೇಳಿಕೆಗಷ್ಟೇ ಸೀಮಿತವಾದ ಪೈವಳಿಕೆ ಪೊಲೀಸ್ ಠಾಣೆ

ಪೈವಳಿಕೆ: ಅಪರಾಧ ಕೃತ್ಯಗಳು ಹೆಚ್ಚಾಗಿರುವ ಜಿಲ್ಲೆಯ ಉತ್ತರವಲಯದಲ್ಲಿ ಪೈವಳಿಕೆಯನ್ನು ಕೇಂದ್ರವನ್ನಾಗಿ ಮಾಡಿ ಆರಂಭಿಸಲಾಗುವುದೆಂದು ಘೋಷಿಸಿದ ಪೊಲೀಸ್ ಠಾಣೆ ಘೋಷಣೆಗೆ ಮಾತ್ರ ಸೀಮಿತವಾಗಿದೆ. ಕೊಲೆ ಸಹಿತವಿರುವ  ಅಪರಾಧಗಳು ಹೆಚ್ಚುತ್ತಿರುವಾಗಲೂ ಕೆಲಸದ ಒತ್ತಡದಿಂದ ಉಸಿರುಗಟ್ಟುವ ಸ್ಥಿತಿ ಪೊಲೀಸ್ ಅಧಿಕಾರಿಗಳಲ್ಲಿದೆ.  ಕೆಲಸದ ಒತ್ತಡ ಹೆಚ್ಚಿರುವ ಮಂಜೇಶ್ವರ, ಕುಂಬಳೆ ಪೊಲೀಸ್ ಠಾಣೆಗಳನ್ನು ವಿಭಜಿಸಿ ಪೈವಳಿಕೆಯಲ್ಲಿ ಪೊಲೀಸ್ ಠಾಣೆ ಆರಂಭಿಸಬೇಕೆಂಬ ಘೋಷಣೆ ನಡೆದು ದಿನಗಳು  ಹಲವು ಕಳೆದರೂ ಮುಂದಿನ ಕ್ರಮ ಕಡತಕ್ಕೆ ಮಾತ್ರ ಸೀಮಿತವಾಗಿದೆ. ಸ್ಥಳ ಪತ್ತೆಹಚ್ಚಿ ಮೂರು ವರ್ಷ ಕಳೆದರೂ ಮುಂದಿನ ಕ್ರಮ …

ಕಬ್ಬಿಣದ ಗೇಟು ಬಿದ್ದು 7ರ ಬಾಲಕಿ ಮೃತ್ಯು

ಚೆನ್ನೈ: ಮನೆಯ ಗೇಟು ತಲೆಗೆ ಬಿದ್ದು 7ರ ಬಾಲಕಿಗೆ ದಾರುಣ ಅಂತ್ಯ ಸಂಭವಿಸಿದೆ. ಚೆನ್ನೈ ನಂಗನಲ್ಲೂರಿನಲ್ಲಿ ಘಟನೆ ನಡೆದಿದೆ. ೨ನೇ ತರಗತಿ ವಿದ್ಯಾರ್ಥಿನಿ ಐಶ್ವರ್ಯ ಮೃತಪಟ್ಟ ಬಾಲಕಿ. ತಂದೆ ಪುತ್ರಿಯನ್ನು ಶಾಲೆಯಿಂದ ಸ್ಕೂಟರ್‌ನಲ್ಲಿ ಕರೆತಂದು ಗೇಟು ಬಳಿಯಲ್ಲಿ ಬಿಟ್ಟು ತೆರಳಿದ್ದರು. ಬಾಲಕಿ ಗೇಟನ್ನು ತೆರೆದು ಒಳಗೆ ಪ್ರವೇಶಿಸಿದಳು. ಆ ಬಳಿಕ ತಂದೆ ಕಬ್ಬಿಣದ ಗೇಟನ್ನು ಮುಚ್ಚಿದರು. ಆ ವೇಳೆಗೆ ಗೇಟ್ ಮುರಿದು ಬಾಲಕಿಯ ಮೈಮೇಲೆ ಬಿದ್ದಿದೆ. ಇದರಿಂದ ತಲೆಗೆ ಗಂಭೀರ ಗಾಯವುಂಟಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಜೀವ …

ಏತಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ ನಾಳೆ

ಬೆಳಿಂಜ: ಏತಡ್ಕ ಶ್ರೀ ಸದಾಶಿವ ದೇವರ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನಾಳೆ ಬೆಳಿಗ್ಗೆ  8.48 ರ ಶುಭ ಮುಹೂರ್ತದಲ್ಲಿ ನಡೆಯಲಿದೆ. ಇತರಂಗವಾಗಿ ಬೆಳಿಗ್ಗೆ 5 ಗಂಟೆಯಿಂದ 108 ತೆಂಗಿನಕಾಯಿ ಗಣಪತಿ ಹೋಮ, ಪ್ರತಿಷ್ಠಾಪಾಣಿ, ದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ. ಮಧ್ಯಾಹ್ನ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆಗಮನ, ಪೂರ್ಣಕುಂಭ ಸ್ವಾಗತ, ಶೋಭಾಯಾತ್ರೆ, ಬಳಿಕ ಧಾರ್ಮಿಕ ಸಭೆಯಲ್ಲಿ ಶ್ರೀಗಳಿಂದ ಆಶೀರ್ವಚನ ನಡೆಯಲಿದೆ. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಉಪಸ್ಥಿತರಿರುವರು. …

ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ತುಂಬಿಕೊಂಡ ತ್ಯಾಜ್ಯ : ಕಿಡಿಗೇಡಿಗಳ ಉಪಟಳದಿಂದ ಕಾಲ್ನಡೆ ಪ್ರಯಾಣಿಕರಿಗೆ ಸಮಸ್ಯೆ

ಮಂಜೇಶ್ವರ: ತಲಪಾಡಿಯಿಂದ ಚೆಂಗಳ ತನಕ ಹೆದ್ದಾರಿಯನ್ನು ಸುಂದರವಾಗಿ ಅಭಿವೃದ್ಧಿಗೊಳಿಸುತ್ತಿರುವ ಮಧ್ಯೆ ಕಿಡಿಗೇಡಿಗಳು ತ್ಯಾಜ್ಯಗಳನ್ನು ರಸ್ತೆ ಬದಿ ಉಪೇಕ್ಷಿಸಿ ದುರ್ವಾಸನೆಗೆ ಕಾರ ಣವಾಗುತ್ತಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ  ತಲಪಾಡಿಯಿಂದ ಕಾಸರಗೋಡು ಭಾಗಕ್ಕೆ ತೆರಳುವ ಸರ್ವೀಸ್ ರಸ್ತೆಯ ಕಿರು ಸಂಕದ ಸಮೀಪದಲ್ಲಿ ಭಾರೀ ಪ್ರಮಾಣದ ವಿವಿಧ ರೀತಿಯ ತ್ಯಾಜ್ಯಗಳು ರಾಶಿ ಬಿದ್ದಿರುವುದು ಕಂಡು ಬರುತ್ತಿದೆ. ತ್ಯಾಜ್ಯವನ್ನು ಕಾಲುದಾರಿ ಯಲ್ಲಿ ಉಪೇಕ್ಷಿಸಲಾಗುತ್ತಿದ್ದು, ಇದು ಜನರ ಸಂಚಾರಕ್ಕೆ ಸಂಕಷ್ಟ ಉಂಟುಮಾಡುತ್ತಿದೆ. ಸಮಾರಂಭಗಳಲ್ಲಿ ಬಾಕಿ ಉಳಿದ ಪ್ಲೇಟ್‌ಗಳು, ಪ್ಲಾಸ್ಟಿಕ್ ಸಹಿತ …

ಯುವಕ ಶೆಡ್‌ನಲ್ಲಿ ನೇಣು ಬಿಗಿದು ಮೃತ್ಯು

ಹೊಸದುರ್ಗ: ಯುವಕನನ್ನು ಮನೆ ಬಳಿಯ ಶೆಡ್‌ನಲ್ಲಿ ನೇಣು ಬಿಗಿದು ಮೃತ ಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ತೈಕಡ ಪ್ಪುರಂ ಸೀರೋಡ್ ನಿವಾಸಿ ಮಹೇಂ ದ್ರನ್ (39) ಮೃತಪಟ್ಟ ಯುವಕ. ಕಾಂಕ್ರೀಟ್ ಕಾರ್ಮಿಕನಾಗಿದ್ದರು.  ನೀಲೇಶ್ವರ ಪೊಲೀಸರು ತಲುಪಿ ಮೃತದೇಹವನ್ನು ಕಾಞಂಗಾಡ್ ಜಿಲ್ಲಾಸ್ಪತ್ರೆಗೆ ಕೊಂಡೊ ಯ್ದಿದ್ದಾರೆ. ಮುನಂಬತ್ ಅಂಬು ಹಾಗೂ ಮಾಧವಿ ದಂಪತಿ ಪುತ್ರನಾದ ಮೃತರು ಸಹೋದ ರರಾದ ಸುರೇಂದ್ರನ್, ರವೀಂದ್ರನ್, ಸಹೋದರಿಯರಾದ ಅನಿತಾ, ಪ್ರೇಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕಿಡ್ನಿ ಅಸೌಖ್ಯ: ಬಾಲಕನ ಚಿಕಿತ್ಸೆಗಾಗಿ  ‘ಮಾಧವಂ’  ಬಸ್ ಕಾರುಣ್ಯ ಯಾತ್ರೆ ಮೂಲಕ ಸಂಗ್ರಹಿಸಿದ ಮೊತ್ತ ಹಸ್ತಾಂತರ

ಮುಳ್ಳೇರಿಯ: ಎರಡೂ ಕಿಡ್ನಿಗಳು ವೈಫಲ್ಯಗೊಂಡ ಪರಿಣಾಮ ಚಿಕಿತ್ಸೆಯ ಲ್ಲಿರುವ ಬಾಲಕನ ಜೀವ ರಕ್ಷಿಸಲು ಕಾಸರಗೋಡು-ಮಂಞಂ ಪಾರೆ ರೂಟ್‌ನಲ್ಲಿ ಸಂಚರಿಸುವ ‘ಮಾಧವಂ’ ಬಸ್ ಇತ್ತೀಚೆಗೆ ನಡೆಸಿದ ಕಾರುಣ್ಯ ಯಾತ್ರೆ ಮೂಲಕ ಸಂಗ್ರಹವಾದ ಮೊತ್ತವನ್ನು ಚಿಕಿತ್ಸಾ ಸಹಾಯ ಸಮಿತಿಗೆ ಹಸ್ತಾಂತರಿಸಲಾಯಿತು. ಮುಳ್ಳೇರಿಯ ಪಾರ್ಥಕೊಚ್ಚಿಯ ಕೂಲಿ ಕಾರ್ಮಿಕ ಶರತ್-ಅನುಪಮ ದಂಪತಿಯ ಪುತ್ರ ಶ್ರೇಯಸ್(11)ನ ಚಿಕಿತ್ಸೆಗೆ ಹಣ ಸಂಗ್ರಹಿಸುವ ಅಂಗವಾಗಿ ಕುಂಟಾರಿನ ಕುಶಲರ ಮಾಧವಂ ಬಸ್  ಕಾರುಣ್ಯ ಯಾತ್ರೆ ನಡೆಸಿತ್ತು. ಈ ಮೂಲಕ ಸಂಗ್ರಹವಾದ 33680  ರೂಪಾಯಿಗಳನ್ನು ಬಸ್‌ನ ಮಾಲಕರು ಬಾಲಕನ ತಂದೆ …

ಶ್ರೀ ಮಲ್ಲಿಕಾರ್ಜುನ ಕ್ಷೇತ್ರದ ಕಲ್ಯಾಣ ಮಂಟಪ ‘ಕೈಲಾಸ್’ 24ರಂದು ಉದ್ಘಾಟನೆ

ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿದ  ಕಲ್ಯಾಣ ಮಂಟಪ ಕೈಲಾಸ’ದ ಉದ್ಘಾಟನೆ ಈ ತಿಂಗಳ 24ರಂದು ನಡೆಯಲಿದೆ. ಅಂದು ಬೆಳಿಗ್ಗೆ 9 ಗಂಟೆಗೆ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸು ವರು.  ಕ್ಷೇತ್ರ ಟ್ರಸ್ಟ್ ಚೆಯರ್‌ಮೆನ್ ಎ. ಗೋವಿಂದನ್ ನಾಯರ್ ಅಧ್ಯ ಕ್ಷತೆ ವಹಿಸುವರು. ಬ್ರಹ್ಮಶ್ರೀ ಉಚ್ಚಿಲ ಪದ್ಮನಾಭ ತಂತ್ರಿ, ಮಲಬಾರ್ ದೇವಸ್ವಂ ಮಂಡಳಿ ಅಸಿಸ್ಟೆಂಟ್ ಕಮಿಶನರ್ ಕೆ.ಪಿ. ಪ್ರದೀಪ್ ಕುಮಾರ್, ವಾರ್ಡ್ ಕೌನ್ಸಿಲರ್ ಶ್ರೀಲತ, ಬಿಂದು ಜ್ಯುವೆಲ್ಲರಿ ಅಭಿ ಲಾಷ್, …

ಉದ್ಯಮಿ ಸುಲೈಮಾನ್ ಬಳ್ಳೂರುರಿಗೆ ಜನ್ಮನಾಡಿನ ಗೌರವಾರ್ಪಣೆ

ಬಾಯಾರು: ಯು.ಆರ್.ಎಫ್ ಗ್ಲೋಬಲ್ ಅವಾರ್ಡ್ ಗಳಿಸಿದ ಜಿಲ್ಲೆ ಯ ಉದ್ಯಮಿ ಸುಲೈಮಾನ್ ಬಳ್ಳೂರು ರಿಗೆ ಜನ್ಮನಾಡಿನ ಗೌರವ ಸಲ್ಲಿಸಲಾ ಯಿತು. ಇದೇ ವೇಳೆ ಪೈವಳಿಕೆ ಪಂಚಾ ಯತ್ ವ್ಯಾಪ್ತಿಯ ಖ್ಯಾತ ವೈದ್ಯರಿಗೂ, ಆಶಾ ಕಾರ್ಯಕರ್ತೆಯರು ಹಸಿರು ಕ್ರಿಯಾಸೇನಾ ಸದಸ್ಯೆಯರಿಗೆ ಅಭಿನಂ ದನ ಕಾರ್ಯಕ್ರಮ ಬಾಯಾರುಪದವಿ ನಲ್ಲಿ ಜರಗಿತು. ಸಚಿವ ರಾಮಚಂದ್ರನ್ ಕಡನ್ನಪ್ಪಳ್ಳಿ ಉದ್ಘಾಟಿಸಿದರು. ಶಾಸಕ ಎಕೆಎಂ  ಅಶ್ರಫ್ ಅಧ್ಯಕ್ಷತೆ ವಹಿಸಿ ದರು. ಜಿ.ಪಂ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಉಪಾಧ್ಯಕ್ಷ ಶಾನವಾಸ್ ಪಾದೂರು, ಪೈವಳಿಕೆ ಪಂ. ಅಧ್ಯಕ್ಷೆ ಜಯಂತಿ …

ಯುವಕನನ್ನು ಆಟೋರಿಕ್ಷಾದಲ್ಲಿ ಅಪಹರಿಸಿ ಚಿನ್ನದ ಸರ, ಹಣ, ಮೊಬೈಲ್ ದರೋಡೆ: 15 ಮಂದಿ ತಂಡದ ಕೃತ್ಯ

ಕುಂಬಳೆ: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವಕನನ್ನು ತಂಡವೊಂದು ಅಪಹರಿಸಿ ಹಲ್ಲೆಗೈದು ಗಂಭೀರ ಗಾಯಗೊಳಿಸಿ ಚಿನ್ನದ ಸರ,  ಹಣ ಹಾಗೂ ಮೊಬೈಲ್ ಫೋನ್ ದರೋಡೆಗೈದು ಪರಾರಿಯಾದ ಘಟನೆ ನಡೆದಿದೆ. ಗಾಯಗೊಂಡ ಯುವಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ೧೫ ಮಂದಿ ತಂಡ ಈ ಕೃತ್ಯ ನಡೆಸಿರುವುದಾಗಿ ದೂರಲಾಗಿದೆ. ಹಲ್ಲೆಯಿಂದ ಗಂಭೀರ ಗಾಯ ಗೊಂಡಿರುವ ಕಡಂಬಾರ್ ಅರಿ ಮಲೆಯ ಪ್ರವೀಣ್ ಎ. (32) ಎಂ ಬವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ ಇವರು ಕಡಂ ಬಾರ್‌ನಲ್ಲಿ ನಡೆದು ಹೋಗುತ್ತಿದ್ದಾಗ …