ಏತಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಆರಂಭ : ಬಹುವಿಧ ಕಾರ್ಯಕ್ರಮಗಳಿಂದ ಗಮನ ಸೆಳೆಯುತ್ತಿರುವ ಗ್ರಾಮೀಣ ದೇಗುಲ

ಬದಿಯಡ್ಕ: ಏತಡ್ಕ ಶ್ರೀಸದಾಶಿವ ದೇವಸ್ಥಾನದಲ್ಲಿ ಬ್ರಹ್ಮಕಲಶದ ವಿದಿs ವಿಧಾನಗಳು ವಿವಿಧ ಕಾರ್ಯಕ್ರಮ ಗಳೊಂದಿಗೆ ನಡೆಯುತ್ತಿದ್ದು, ನಿನ್ನೆ ಗಣ ಪತಿಹೋಮ, ಶಾಂತಿಹೋಮ ಗಳು, ದಹನಪ್ರಾಯಶ್ಚಿತ್ತ, ತ್ರಿಕಾಲಪೂಜೆ, ಅಂ ಕುರಪೂಜೆ, ಮಹಾಪೂಜೆ ನಡೆಯಿತು.ಭಜನಾರ್ಪಣಮ್-ಸಾಮಗಾನ ಪ್ರಿಯ ವೇದಿಕೆಯಲ್ಲಿ ಶಾಸ್ತಾರ ಭಜನಾ ಸಂಘ ಗಿರಿಪುರ, ಚೀರುಂಬಾ ಭಗವತಿ ಭಜನಾ ಸಂಘ ಪೊಡಿಪ್ಪಳ್ಳ, ರಾಮ ಚಂದ್ರ ಭಟ್ ವೃಂದಾವನ ಪೆರ್ಲ, ಬನಾರಿ ಶ್ರೀಗೋಪಾಲಕೃಷ್ಣ ಭಜನಾ ಸಂಘ ದೇಲಂಪಾಡಿ, ಶ್ರೀರಾಮಾಂ ಜನೇಯ ಭಜನಾ ಸಂಘ ಕುದಿಂಗಿಲ, ಶ್ರೀಧರ್ಮಶಾಸ್ತಾ ಭಜನಾ ಸಂಘ ಎ.ಸಿ.ಸರ್ಕಲ್ ಕುರುಮುಜ್ಜಿಕಟ್ಟೆ ತಂಡಗಳಿAದ ಭಜನಾ …

ಮಂಜೇಶ್ವರ ಮಂಡಲದ ತೀರ ಪಂಚಾಯತ್‌ಗಳಿಗೆ ಕಾನೂನಿನಲ್ಲಿ ರಿಯಾಯಿತಿ ಲಭಿಸಲಿಲ್ಲ: ಶಿರಿಯ ಗ್ರಾಮ ಅಭಿವೃದ್ಧಿ ಸಮಿತಿ ಆರೋಪ

ಮಂಜೇಶ್ವರ: ಮಂಜೇಶ್ವರ ಮಂಡಲದ ಮೂರು ಪಂಚಾಯತ್‌ಗಳಲ್ಲಿ ತೀರದೇಶ ಕಾನೂನಿನಲ್ಲಿ ರಿಯಾಯಿತಿ ಪಡೆಯಲು ಸಾಧ್ಯವಾಗದಿರುವುದು ಅಧಿಕಾರಿಗಳ ತೀವ್ರ ಅನಾಸ್ಥೆಯಿಂದಾಗಿ ಎಂದು ಶಿರಿಯ ಗ್ರಾಮಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಸುದ್ಧಿಗೋಷ್ಠಿಯಲ್ಲಿ ಆರೋಪಿಸಿ ದ್ದಾರೆ. ತೀರ ಪರಿಪಾಲನೆ ಕಾನೂನಿನಲ್ಲಿ ಕೇಂದ್ರ ರಿಯಾಯಿತಿ ಮಂಜೂರು ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಸಿದ್ಧಪಡಿಸಿದ ಕರಡು ಯಾದಿಯಲ್ಲಿ ಕೇರಳದ ೬೬ ಪಂಚಾಯತ್‌ಗಳಿಗೆ ರಿಯಾಯಿತಿ ಲಭಿಸಿದಾಗ ಮಂಜೇಶ್ವರ ತೀರವಲಯದ ಮಂಜೇಶ್ವರ, ಮಂಗಲ್ಪಾಡಿ, ಕುಂಬಳೆ ಪಂಚಾಯತ್‌ಗಳು ಒಳಗೊಳ್ಳದಿರುವುದನ್ನು ಪುನರ್ ಪರಿಶೀಲಿಸಬೇಕೆಂದು ಅವರು ಆಗ್ರಹಿಸಿದರು. ಸಮೀಪದ ಮೊಗ್ರಾಲ್ ಪುತ್ತೂರು ಪಂಚಾಯತ್‌ಗೆ ರಿಯಾಯಿತಿ ಲಭಿಸಿದಾಗ …

ಬಿ.ವಿ. ರಾಜನ್ ಪ್ರಥಮ ಸಂಸ್ಮರಣೆ

ಮಂಜೇಶ್ವರ: ಬಿ.ವಿ ರಾಜನ್‌ರ ಪ್ರಥಮ ಸಂಸ್ಮರಣೆ ವಾರ್ಷಿಕ ಮತ್ತು ಸಮ್ಮೇಳನ ಇಂದು ಬೆಳಗ್ಗೆ ಅವರ ನಿವಾಸ ಬಳಿಯ ಸ್ಮೃತಿ ಮಂಟಪದಲ್ಲಿ ನಡೆಯಿತು. ಸಿಪಿಐ ಮಂಜೇಶ್ವರ ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲ್ ಪುಷ್ಪಾರ್ಚನೆಗೈಯುವ ಮೂಲಕ ಉದ್ಘಾಟಿಸಿದರು. ಹಿರಿಯ ಸದಸ್ಯ ಮೋನು ಕುಚ್ಚಿಕ್ಕಾಡ್ ಧ್ವಜಾರೋಹಣಗೈದರು. ಲೋಕಲ್ ಕಾರ್ಯದರ್ಶಿ ಶ್ರೀಧರ ಮಾಡ ಅಧ್ಯಕ್ಷತೆ ವಹಿಸಿದರು. ರಾಜ್ಯ ಕೌನ್ಸಿಲ್ ಸದಸ್ಯ ಗೋವಿಂದನ್ ಪಳ್ಳಿಕಾಪ್ಪಿಲ್, ಜಿಲ್ಲಾ ಕೌನ್ಸಿಲ್ ಸದಸ್ಯರಾದ  ರಾಮಕೃಷ್ಣ ಕಡಂಬಾರ್, ಅಜಿತ್ ಎಂ.ಸಿ ಲಾಲ್ ಬಾಗ್, ಎಸ್ ರಾಮಚಂದ್ರ ಬಡಾಜೆ, ಕಿಶನ್ ಕುಮಾರ್ ಹೆಗ್ಡೆ, …

ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆ ವಾರ್ಷಿಕೋತ್ಸವ ನಾಳೆ

ಕುಂಬಳೆ: ಕಳತ್ತೂರು ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯ ವಾರ್ಷಿ ಕೋತ್ಸವ ಹಾಗೂ ಈ ವರ್ಷ ಸೇವೆ ಯಿಂದ ನಿವೃತ್ತರಾಗಲಿರುವ ಮುಖ್ಯೋ ಪಾಧ್ಯಾಯ ರಾಧಾಕೃಷ್ಣ ತುಂಗ ಕೆ.ಎಸ್. ಅವರಿಗೆ ಸನ್ಮಾನ ಸಮಾರಂಭ ನಾಳೆ ಶಾಲೆಯ ಅಮೃತಶ್ರೀ ಸಭಾಂಗಣದಲ್ಲಿ ನಡೆಯಲಿದೆ. ಬೆಳಿಗ್ಗೆ 9.30ಕ್ಕೆ ಶಾಲಾ ವ್ಯವಸ್ಥಾಪಕ ಎಂ. ಗಣೇಶ್ ರಾವ್ ಧ್ವಜಾರೋಹಣ ನಡೆಸುವರು. 10ರಿಂದ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 11.30ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು,  ಕುಂಬಳೆ ಪಂ. ಸದಸ್ಯೆ ಪುಷ್ಪಲತಾ ಶೆಟ್ಟಿ ಕಾಜೂರು ಅಧ್ಯಕ್ಷತೆ ವಹಿಸುವರು. ಪಂ. ಅಧ್ಯಕ್ಷೆ …

ಶಿರಿಯ ರೈಲು ಹಳಿ ಸಮೀಪ ಪತ್ತೆಯಾದ ಮಾನವ ತಲೆಬುರುಡೆ, ಅಸ್ಥಿಪಂಜರ ಪರಿಯಾರಂಗೆ: ಮೃತ ವ್ಯಕ್ತಿಯ ಗುರುತು ಪತ್ತೆಗಾಗಿ ತನಿಖೆ ಆರಂಭ; ಸಾವಿನಲ್ಲಿ ನಿಗೂಢತೆ

ಕುಂಬಳೆ: ಶಿರಿಯಾದಲ್ಲಿ ರೈಲು ಹಳಿ ಸಮೀಪ ಪೊದೆಗಳೆಡೆ ಪತ್ತೆಯಾದ ಮನುಷ್ಯನ ತಲೆಬುರುಡೆ ಸಹಿತ ಅಸ್ಥಿಪಂಜರವನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅಸ್ಥಿಪಂಜರವನ್ನು ಫಾರೆನ್ಸಿಕ್ ಪರಿಶೀಲನೆ ನಡೆಸಿ ಸಾವಿಗೆ ಕಾರಣ ಹಾಗೂ ಮತ್ತಿತರ ಮಾಹಿತಿಗಳನ್ನು ಸಂಗ್ರಹಿಸಲು ಸಾಧ್ಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಅಪರಾಹ್ನ 3 ಗಂಟೆ ವೇಳೆ ರೈಲು ಹಳಿ ಸಮೀಪದಲ್ಲಾಗಿ ನಡೆದು ಹೋದ ವರಿಗೆ ಅಸ್ಥಿಪಂಜರ ಕಂಡುಬಂದಿ ರುವುದಾಗಿ ಹೇಳಲಾಗುತ್ತದೆ. ಅವರು ನೀಡಿದ ಮಾಹಿತಿಯಂತೆ ಕುಂಬಳೆ ಠಾಣೆ ಎಸ್‌ಐ ವಿ.ಕೆ.ವಿಜಯನ್ ನೇತೃತ್ವದ ಪೊಲೀಸರು ತಲುಪಿ …

ಉಪ್ಪಳದಲ್ಲಿ ಕಾವಲುಗಾರನನ್ನು ಇರಿದು ಕೊಲೆಗೈದ ಪ್ರಕರಣದ ಆರೋಪಿ ಬಂಧನ: ಅಸಭ್ಯ ನುಡಿದ ದ್ವೇಷವೇ ಕೊಲೆಗೆ ಕಾರಣ- ಆರೋಪಿ ಹೇಳಿಕೆ

ಉಪ್ಪಳ: ಉಪ್ಪಳ ಪೇಟೆಯಲ್ಲಿ ಮೀನು ಮಾರುಕಟ್ಟೆ ಸಮೀಪದಲ್ಲಿರುವ ಕಟ್ಟಡದ ಕಾವಲುಗಾರನನ್ನು ಇರಿದು ಕೊಲೆಗೈದ ಪ್ರಕರಣದ ಆರೋಪಿಯನ್ನು ಪೊಲೀಸರು ೨೪ ಗಂಟೆಯೊಳಗೆ ಸೆರೆ ಹಿಡಿದಿದ್ದಾರೆ. ಉಪ್ಪಳ ಪತ್ವಾಡಿಯ ಸವಾದ್ (24) ಎಂಬಾತನನ್ನು ಮಂಜೇಶ್ವರ ಪೊಲೀಸ್ ಇನ್ಸ್‌ಪೆಕ್ಟರ್ ಇ. ಅನೂಬ್ ಕುಮಾರ್ ನೇತೃತ್ವದ ತಂಡ ಬಂಧಿಸಿದೆ. ಕೊಲ್ಲಂ ಏಳುಕೋನ್ ನಿವಾಸಿಯೂ ಹದಿನೈದು ವರ್ಷಗಳಿಂದ ಪಯ್ಯನ್ನೂರಿನಲ್ಲಿ ವಾಸಿಸುತ್ತಿದ್ದ ಸುರೇಶ್ (48) ಎಂಬವರನ್ನು ಇರಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಸವಾದ್‌ನನ್ನು ಬಂಧಿಸಲಾಗಿದೆ. ಸುರೇಶ್ ಎರಡು ವರ್ಷಗಳಿಂದ ಉಪ್ಪಳದಲ್ಲಿ ಕಟ್ಟಡವೊಂದರ ಕಾವಲುಗಾರನಾಗಿ ಕೆಲಸ ನಿರ್ವಹಿಸುತ್ತಿದ್ದರು. …

ಕಾನತ್ತೂರು ಸಮೀಪ ಮತ್ತೆ ಚಿರತೆ ಪ್ರತ್ಯಕ್ಷ

ಮುಳ್ಳೇರಿಯ: ಕಾನತ್ತೂರು ಸಮೀಪ ನಿನ್ನೆ ಹಾಡಹಗಲೇ ಚಿರತೆ ಕಂಡುಬಂದಿರುವುದಾಗಿ  ವರದಿ ಯಾಗಿದೆ. ತೈರ ಎಂಬಲ್ಲಿನ ಪುಷ್ಪಾರ ಮನೆ ಸಮೀಪ ನಿನ್ನೆ ಬೆಳಿಗ್ಗೆ  ನೆರೆಮನೆ ನಿವಾಸಿಯಾದ ಗಂಗಾಧರನ್ ಎಂಬವರು ಚಿರತೆ ಯನ್ನು ಕಂಡಿದ್ದಾರೆನ್ನಲಾಗಿದೆ. ವಿಷಯ ತಿಳಿದು ಅರಣ್ಯಾಧಿಕಾರಿಗಳು ತಲುಪಿ ಶೋಧ ಆರಂಭಿಸಿದ್ದಾರೆ. ಈ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಚಿರತೆ ಕಾಣಿಸಿಕೊಂಡಿದೆ. ಮೊನ್ನೆ ಕೂಡಾ ಈ ಭಾಗದಲ್ಲಿ ಚಿರತೆ ಇತ್ತೆನ್ನಲಾಗಿದೆ. ಒಂದು ದೊಡ್ಡ ಚಿರತೆ ಹಾಗೂ ಎರಡು ಮರಿಗಳನ್ನು ಕಂಡಿರುವುದಾಗಿ ನಾಗರಿಕರು ತಿಳಿಸಿದ್ದಾರೆ.

16ರ ಹರೆಯದ ಬಾಲಕಿ ನಾಪತ್ತೆ

ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ  16ರ ಹರೆಯದ ಬಾಲಕಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ನಿನ್ನೆ ಸಂಜೆಯಿಂದ ಬಾಲಕಿ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಾಯಿ ತಿಳಿಸಿದ್ದಾರೆ. ಇದೇ ವೇಳೆ  ಆಟೋ ರಿಕ್ಷಾ ಚಾಲಕನಾದ ಓರ್ವ ಯುವಕನೊಂದಿಗೆ ಬಾಲಕಿ ತೆರಳಿದ ಬಗ್ಗೆ ಸಂಶಯವನ್ನು ಕೂಡಾ ದೂರಿನಲ್ಲಿ ವ್ಯಕ್ತಪಡಿಸಲಾಗಿದೆ.

ಟಿಪ್ಪರ್ ಲಾರಿ ಢಿಕ್ಕಿ ಹೊಡೆಸಿ ಎಸ್‌ಐಯನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ಆರೋಪಿ ಸೆರೆ

ಹೊಸದುರ್ಗ:  ಹೊಯ್ಗೆ ಸಾಗಾಟ ತಡೆಯಲಿರುವ ಯತ್ನದ ಮಧ್ಯೆ ಎಸ್‌ಐಯನ್ನು  ಟಿಪ್ಪರ್ ಲಾರ್ ಢಿಕ್ಕಿಹೊಡೆಸಿ ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ಪ್ರಧಾನ ಆರೋಪಿ ಸೆರೆಯಾ ಗಿದ್ದಾನೆ. ಕಾಞಂಗಾಡ್  ಕಲ್ಲೂರಾವಿ ಯ ಇರ್ಫಾನ್ (28)ನನ್ನು ಹೊಸುದುರ್ಗ ಇನ್‌ಸ್ಪೆಕ್ಟರ್ ಟಿ. ಅಜಿತ್ ಕುಮಾರ್ ನೇತೃತ್ವದಲ್ಲಿ ಬಂಧಿಸಲಾಗಿದೆ.  ಪ್ರಕರಣದ ದ್ವಿತೀಯ ಆರೋಪಿ ಪಡನ್ನಕ್ಕಾಡ್  ಕುರುಂದೂರಿನ ಅಬ್ದುಲ್ ಸಫ್ವಾ (29) ನನ್ನು ಈ ಮೊದಲೇ ಬಂಧಿಸಲಾಗಿದೆ. 2025 ಜನವರಿ 30ರಂದು ರಾತ್ರಿ ಘಟನೆ ನಡೆದಿದೆ.  ಅನಧಿಕೃತವಾಗಿ ಹೊಯ್ಗೆ ಸಾಗಿಸುತ್ತಿದ್ದಾರೆಂಬ ಮಾಹಿತಿ ತಿಳಿದು ಕಿಳಕ್ಕುಂಕರೆಗೆ ತಲುಪಿದಾಗ  ಕೊಲೆಯತ್ನ ನಡೆಸಲಾಗಿದೆ.  …

ಬದಿಯಡ್ಕ ನಿವಾಸಿ ಪತ್ನಿ ಮನೆ ಬಳಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ಗೋವಾದಲ್ಲಿ ಗುತ್ತಿಗೆ ಕೆಲಸ ನಿರ್ವಹಿಸುತ್ತಿದ್ದ ಬದಿಯಡ್ಕ ನಿವಾಸಿ ಪತ್ನಿ ಮನೆ ಸಮೀಪ ಮರದಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಳ್ಳತ್ತಡ್ಕ ಚೊಟ್ಟೆತ್ತಡ್ಕದ ಚಂದ್ರನ್ (45) ಮೃತಪಟ್ಟ ವ್ಯಕ್ತಿ. ಇಂದು ಬೆಳಿಗ್ಗೆ ಚಟ್ಟಂಚಾಲ್ ಮಂಡಲಿಪ್ಪಾರ ಎಂಬಲ್ಲಿರುವ ಪತ್ನಿ ಮನೆ ಸಮೀಪ ಇವರ ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿದು ಮೇಲ್ಪರಂಬ ಎಸ್‌ಐ ವಿ.ಕೆ. ಅನೀಶ್ ನೇತೃತ್ವದ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹದ ಮಹಜರು ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆ ಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಚಂದ್ರನ್ ಹಾಗೂ ಮಂಡಲಿಪಾರದ …