ಯೂತ್ ಕಾಂಗ್ರೆಸ್ ನೇತಾರ ಬಾಲಕೃಷ್ಣನ್ ಕೊಲೆ ಪ್ರಕರಣ: ಜೀವಾವಧಿ ಸಜೆಗೊಳಗಾದ ಇಬ್ಬರು ಆರೋಪಿಗಳನ್ನು ಖುಲಾಸೆಗೊಳಿಸಿ ಹೈಕೋರ್ಟ್ ತೀರ್ಪು
ಕಾಸರಗೋಡು: ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವತಿಯನ್ನು ಮದುವೆಯಾದ ಯೂತ್ ಕಾಂಗ್ರೆಸ್‌ನ ಕಾಸರಗೋಡು ಮಂಡಲ ಅಧ್ಯಕ್ಷರಾಗಿದ್ದ ಕಾಸರಗೋಡು ಸೂರ್ಲು ಉಮಾ ನರ್ಸಿಂಗ್ ಬಳಿ ನಿವಾಸಿ ಹಾಗೂ ಬಳಿಕ ವಿದ್ಯಾನಗರ ಪಡುವಡ್ಕಕ್ಕೆ ವಾಸ ಬದಲಾಯಿಸಿದ್ದ ಬಾಲಕೃಷ್ಣನ್ (28)ರನ್ನು ಕೊಲೆಗೈದ ಪ್ರಕರಣದ ಇಬ್ಬರು ಆರೋಪಿಗಳಿಗೆ ಎರ್ನಾಕುಳಂನ ವಿಶೇಷ ಸಿಬಿಐ ನ್ಯಾಯಾಲಯ ಈ ಹಿಂದೆ ವಿಧಿಸಿದ್ದ ಜೀವಾವಧಿ ಸಜೆಯನ್ನು ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠ ರದ್ದುಪಡಿಸಿ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ. ಕಾಸರಗೋಡು ಚಟ್ಟಂಚಾಲ್ ಕುನಿಕುನ್ನು ಪಾದೂರು ರಸ್ತೆ ಬಳಿಯ ಮುಹಮ್ಮದ್ ಇಕ್ಬಾಲ್ …