ನಿಧನ

ಬಂಬ್ರಾಣ: ಬೀರಂಟಿಕೆರೆ ನಿವಾಸಿ ಬಾಬು ಕೆ.ಕೆ. (77) ಅಸೌಖ್ಯ ನಿಮಿತ್ತ ನಿಧನ ಹೊಂದಿದರು. ಮೊಗೇರ ದೈವಗಳ ಪಾತ್ರಿಯೂ, ಶ್ರೀರಾಮಾಂ ಜನೇಯ ಭಜನಾ ಮಂದಿರದ ಮಾಜಿ ಅಧ್ಯಕ್ಷರು ಹಾಗೂ ಕೃಷಿಕರೂ ಆಗಿದ್ದರು. ಮೃತರು ಪತ್ನಿ ಸುಂದರಿ, ಮಕ್ಕಳಾದ ಪ್ರಭಾಕರ, ಯಮುನ, ಉಮಾವತಿ, ಸೊಸೆ ವನಿತ, ಸಹೋದರಿಯರಾದ ಲಕ್ಷ್ಮಿ, ದೇವಕಿ, ಕಮಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಇನ್ನೋರ್ವೆ ಸಹೋದರಿ ಭಾಗಿ ಈ ಹಿಂದೆ ನಿಧನರಾಗಿದ್ದಾರೆ.

ತಿರುವಲ್ಲಿರುವ ವಿದ್ಯುತ್ ಕಂಬದ ಆಧಾರತಂತಿಯಿಂದ ಅಪಾಯ ಭೀತಿ

ಮಂಜೇಶ್ವರ: ಬಂಗ್ರಮಂಜೇಶ್ವರ ರಸ್ತೆಯ ತಿರುವಿನಲ್ಲಿ ವಿದ್ಯುತ್ ಕಂಬಕ್ಕೆ ಅಳವಡಿಸಿದ ಆಧಾರತಂತಿ ವಾಹನ ಸವಾರರಿಗೆ ಸಮಸ್ಯೆ ಉಂಟುಮಾಡುತ್ತಿದೆ. ಈ ತಂತಿ ಹೊಸಂಗಡಿ ಭಾಗಕ್ಕೆ ಬರುವ ವಾಹನ ಸವಾರರ ಗಮನಕ್ಕೆ ಬಾರದೆ ಎದುರಿನಿಂದ ಆಗಮಿಸುತ್ತಿರುವ ವಾಹನಗಳಿಗೆ ಸಾಗಲು ಸೈಡ್ ನೀಡುವ ವೇಳೆ ತಂತಿಗೆ ಬಡಿದು ಅಪಘಾತ ಉಂಟಾಗುವ ಭೀತಿ ಇದೆ. ಬಂಗ್ರಮಂಜೇಶ್ವರದ ಈ ದಾರಿಯಾಗಿ ಕಟ್ಟೆಬಜಾರ್, ಹೊಸಬೆಟ್ಟು, ತಲಪಾಡಿ ಮೊದಲಾದ ಭಾಗಗಳಿಂದ ಹೊಸಂಗಡಿ ಪೇಟೆಗೆ ದಿನನಿತ್ಯ ನೂರಾರು ವಾಹನಗಳು ಸಂಚಾರ ನಡೆಸುತ್ತಿವೆ.  ಈ ತಂತಿಯನ್ನು ತೆರವುಗೊಳಿಸಲು ಸಂಬಂಧಪಟ್ಟ ವಿದ್ಯುತ್ ಇಲಾಖೆ …

ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಸಂಸ್ಮರಣೆ

ಕುಂಬಳೆ: ಬಿಜೆಪಿಯ ಸ್ಥಾಪಕ ಅಧ್ಯಕ್ಷ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರ ಪುಣ್ಯಸ್ಮರಣೆ ಕುಂಬಳೆ ಮಂಡಲ ಸಮಿತಿ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು. ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಮುರಳೀಧರ ಯಾದವ್ ಉದ್ಘಾಟಿಸಿ ಮಾತನಾಡಿದರು. ನೂತನ ಮಂಡಲ ಸಮಿತಿಗೆ ಆಯ್ಕೆಯಾದ ಪದಾಧಿಕಾ ರಿಗಳನ್ನು ಗೌರವಿಸಲಾಯಿತು. ಪ್ರಧಾನ ಕಾರ್ಯದರ್ಶಿ ವಸಂತಕುಮಾರ ಮಯ್ಯ ಸ್ವಾಗತಿಸಿ, ಕಾರ್ಯದರ್ಶಿ ಸುಮಿತ್‌ರಾಜ್ ಪೆರ್ಲ ವಂದಿಸಿದರು. ಮಂಜೇಶ್ವರ: ಮಂಜೇಶ್ವರ ಮಂಡಲ ಸಮಿತಿ ವತಿಯಿಂದ ಮೀಂಜದಲ್ಲಿ ಜರಗಿದ …

ಎಲ್‌ಐಸಿ ಏಜೆಂಟ್ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಎಲ್‌ಐಸಿ ಏಜೆಂ ಟ್ ಓರ್ವರು ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹೊಸದುರ್ಗ ಅಳರಾಯಿ ನಿವಾಸಿ ಕೆ.ಕೆ. ವೀಟಿಲ್ ಪ್ರಸಾದ್ (43) ಸಾವನ್ನಪ್ಪಿದ ವ್ಯಕ್ತಿ. ಇವರು ಕಲ್ಲಂಚಿರಕ್ಕೆ ಸಮೀಪ ನಿನ್ನೆ ರೈಲುಗಾಡಿ ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಕಮಲಾಕ್ಷನ್- ಕಮಲಾಕ್ಷಿ ದಂಪತಿ ಪುತ್ರನಾಗಿರುವ ಮೃತರು ಪತ್ನಿ ಅನಿತ, ಮಗಳು ತೇಜಶ್ರೀ, ಸಹೋದರ ಕೃಷ್ಣಪ್ರಸಾದ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮನೆಗೆ ಬರಬೇಡವೆಂದ ದ್ವೇಷ: ಪೆಟ್ರೋಲ್ ಎರಚಿ ಯುವತಿಯ ಕೊಲೆಗೈಯ್ಯಲೆತ್ನ; ಆರೋಪಿ ಸೆರೆ

ಕೊಚ್ಚಿ: ಆಲುವಾದಲ್ಲಿ ಯುವತಿ ಯನ್ನು ಬೆಂಕಿಹಚ್ಚಿ ಕೊಲೆಗೈಯ್ಯ ಲೆತ್ನಿಸಿದ ಘಟನೆಯಲ್ಲಿ ಆರೋಪಿ ಸೆರೆಯಾಗಿದ್ದಾನೆ. ಮೂಪತ್ತಡ ನಿವಾಸಿ ಅಲಿಯನ್ನು ಆಲುವಾ ಪೊಲೀಸರು ಸೆರೆ ಹಿಡಿದಿದ್ದಾರೆ. ಚೂಂಡಿ ನಿವಾಸಿಯಾದ ಯುವತಿ ಯನ್ನು ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಕೊಲೆಗೈಯ್ಯಲು ಈತ ಯತ್ನಿಸಿದ್ದನು. ತನ್ನನ್ನು ಮೊಬೈಲಲ್ಲಿ ಬ್ಲೋಕ್ ಮಾಡಿದ  ದ್ವೇಷ ಹಾಗೂ ಮನೆಗೆ ಬರಬಾರದೆಂದು ಆಗ್ರಹಿಸಿರುವುದೇ ಯುವತಿಯನ್ನು  ಆಕ್ರಮಿಸಲು ಕಾರಣವೆಂದು ಅಲಿ ಪೊಲೀಸರಲ್ಲಿ ತಿಳಿಸಿದ್ದಾನೆ. ಆಲುವಾ ದಲ್ಲಿ ಸ್ಕೂಟರ್‌ನಲ್ಲಿ ತಲುಪಿದ ಯುವತಿಯನ್ನು  ಆರೋಪಿ ಬೈಕ್ ಉಪಯೋಗಿಸಿ ತಡೆದು ನಿಲ್ಲಿಸಿದ ಬಳಿಕ ದೇಹಕ್ಕೆ …

ಅಯೋಧ್ಯೆ ಶ್ರೀರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರದಾಸ್ ನಿಧನ

ಲಕ್ನೋ: ಅಯೋಧ್ಯೆ ಶ್ರೀರಾಮ ಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರದಾಸ್ (87) ಇಂದು ಬೆಳಿಗ್ಗೆ ಲಕ್ನೋ ಪಿಜಿಐ ಆಸ್ಪತ್ರೆಯಲ್ಲಿ ನಿಧನರಾದರು.  1992 ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಶ್ರೀರಾಮ ಮಂದಿರದ ಅರ್ಚಕರಾಗಿದ್ದರು.  ಅಯೋಧ್ಯೆಯಲ್ಲಿ ಹೊಸ ರಾಮಮಂದಿರದ ಪವಿತ್ರೀಕರಣ ಸಮಾರಂಭದ ನಂತರ ಸತ್ಯೇಂದ್ರದಾಸ್ ಅದರ ಮುಖ್ಯ ಅರ್ಚಕರಾಗಿ ಮುಂದುವರಿಯುತ್ತಿದ್ದರು. ಇವರ ನಿಧನಕ್ಕೆ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ದೇವಾಲಯದ ಆಡಳಿತ ಸಮಿತಿ ಸಂತಾಪ ವ್ಯಕ್ತಪಡಿಸಿದೆ. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ …

ಬಾಟ್ಲಿ ಮುಚ್ಚಳ ಗಂಟಲಲ್ಲಿ ಸಿಲುಕಿ ಮಗು ಮೃತ್ಯು

ಕಲ್ಲಿಕೋಟೆ: ಗಂಟಲಲ್ಲಿ ಬಾಟ್ಲಿಯ ಮುಚ್ಚಳ ಸಿಲುಕಿ ೮ ತಿಂಗಳ ಪ್ರಾಯದ ಗಂಡುಮಗು ಮೃತಪಟ್ಟಿದೆ. ಪೊನ್‌ಕುನ್ ಅಬೀನಾ ಹೌಸ್ ನಿಸಾರ್‌ರ ಪುತ್ರ ಮುಹಮ್ಮದ್ ಇಬಾದ್ ಮೃತಪಟ್ಟ ಮಗು. ಸೋಮವಾರ ರಾತ್ರಿ ಮುಚ್ಚಳ ಗಂಟಲಲ್ಲಿ ಸಿಲುಕಿಕೊಂಡ ಮಗುವನ್ನು ಕೋಟಪರಂಬ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ವೇಳೆಗೆ ಮಗು ಮೃತಪಟ್ಟಿತ್ತು. ಇದೇ ವೇಳೆ ಸಾವಿನಲ್ಲಿ ನಿಗೂಢತೆಯಿದೆ ಎಂದು ಆರೋಪಿಸಿ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

ಕುಸಿದು ಬಿದ್ದು ಗಲ್ಫ್ ಉದ್ಯೋಗಿ ನಿಧನ

ಕಾಸರಗೋಡು: ಪೈಕ ಅರ್ಲಡ್ಕದ ಒ.ಪಿ. ಹೌಸ್‌ನ ಗಲ್ಫ್ ಉದ್ಯೋಗಿ ಒ.ಪಿ. ಇಬ್ರಾಹಿಂ (44) ಎಂಬವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಇವರು ನಿನ್ನೆ ಮಧ್ಯಾಹ್ನ ಮನೆಯೊಳಗೆ ಕುಸಿದು ಬಿದ್ದಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರೂ, ಜೀವ ರಕ್ಷಿಸಲಾಗಲಿಲ್ಲ. ಒ.ಪಿ. ಅಬೂಬಕ್ಕರ್ ಹಲೀಮಾ ದಂಪತಿ ಪುತ್ರನಾಗಿರುವ ಇಬ್ರಾಹಿಂ ಯು.ಎ.ಇಯಲ್ಲಿ ದುಡಿಯುತ್ತಿದ್ದರು. ನಾಲ್ಕು ತಿಂಗಳ ಹಿಂದೆ ಅವರು ಊರಿಗೆ ಹಿಂತಿರು ಗಿದ್ದರು. ಮೃತರು ಪತ್ನಿ ರಹಮ್ಮತ್ತು ನಿಸಾ, ಮಕ್ಕ ಳಾದ ಶರೋಸ್, ಫಾತಿಮತ್ ಶಾಸಿಲ್, ಸಹೋದರ-ಸಹೋದರಿಯರಾದ ರಿಯಾಸ್,  ಅನ್ವರ್, ಫೌಸಿಯಾ, …

ಎರಡನೇ ಪತ್ನಿ ನಾಲ್ಕನೇ ಪತ್ನಿಯ  ಫೇಸ್‌ಬುಕ್ ಫ್ರೆಂಡ್ ಆದಾಗ ಹೊರಬಂತು ಪತಿಯ ಬಹುಪತ್ನಿತ್ವ ನಾಟಕ: ಆರೋಪಿ ಬಂಧನ 

ಕಾಸರಗೋಡು: ಫೇಸ್ ಬುಕ್ ಫ್ರೆಂಡ್ಸ್ ಆದ ಯುವತಿಯರಿಬ್ಬರು ತಮ್ಮ ಕಷ್ಟಸುಖಗಳ ವಿಚಾರಗಳನ್ನು ಪರಸ್ಪರ ರವಾನಿಸುತ್ತಿದ್ದ ವೇಳೆ ಅವರಿಬ್ಬರ ಪತಿ ಓರ್ವನೇ ಆಗಿರುವುದಾಗಿ ತಿಳಿದುಬಂದಿದೆ.  ಮಾತ್ರವಲ್ಲದೆ ಪತಿ ಗುಪ್ತವಾಗಿ ಇನ್ನೂ ಇಬ್ಬರು ಯುವತಿಯರನ್ನು ಮದುವೆಯಾಗಿ  ವಂಚಿಸಿದ  ನಿಗೂಢ ಕತೆಗಳು ಬಹಿರಂಗಗೊಂಡಿದೆ.  ಬಳಿಕ ಆ ಬಗ್ಗೆ ನಾಲ್ಕನೇ ಪತ್ನಿ  ನೀಡಿದ ದೂರಿನಂತೆ ಆ ಬಹುಪತ್ನಿ ವಲ್ಲಭನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ ಸ್ವಾರಸ್ಯಕರ ಘಟನೆ ನಡೆದಿದೆ. ಮೂಲತಃ ವೆಳ್ಳರಿಕುಂಡು ನಿವಾಸಿ ಹಾಗೂ ಈಗ ಪತ್ತನಂತಿಟ್ಟ ಕೊನ್ನಿ ಪ್ರಮಾಡಂ ಪುಳಿಮುಖ್ …

543 ಲೋಕಸಭಾ ಸಂಸದರಲ್ಲಿ 251 ಮಂದಿ ವಿರುದ್ಧ ಕ್ರಿಮಿನಲ್ ಕೇಸು: ಸುಪ್ರೀಂಕೋರ್ಟ್ ದತ್ತಾಂಶದಲ್ಲಿ ಬಹಿರಂಗ

ನವದೆಹಲಿ: ಒಟ್ಟು 543 ಲೋಕ ಸಭಾ ಸಂಸದರಲ್ಲಿ 251 ಸದಸ್ಯರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿ ವೆಯೆಂದು ಸುಪ್ರೀಂಕೋರ್ಟ್ಗೆ ಸಲ್ಲಿಸಲಾದ ದತ್ತಾಂಶ ಬಹಿರಂಗಪಡಿಸಿದೆ.ಹೀಗೆ ಕ್ರಿಮಿನಲ್ ಪ್ರಕರಣಗಳು ದಾಖಲುಗೊಂಡಿರುವ ಸಂಸದರ ಪೈಕಿ 170 ಮಂದಿ ವಿರುದ್ಧ ದಾಖಲಾಗಿರುವ ಪ್ರಕರಣಗಳು ಕನಿಷ್ಠ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆಗೆ ಗುರಿಯಾಗಬಹುದಾದ ಅಪರಾಧ ಪ್ರಕರಣಗಳಾಗಿವೆ.ಅಮಿಕಸ್ ಕ್ಯೂರಿ ಮತ್ತು ಹಿರಿಯ ವಕೀಲ ವಿಜಯ್ ಹನ್ಸಾರಿಯ ಅವರು ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಮನ್ಮೋಹನ್ರನ್ನೊಳಗೊಂಡ ಸುಪ್ರೀಂಕೋರ್ಟ್ನ ದ್ವಿಸದಸ್ಯ ಪೀಠಕ್ಕೆ ಸಲ್ಲಿಸಿದ ವರದಿಯಲ್ಲಿ …