ಭಾರೀ ಪ್ರಮಾಣದ ತಂಬಾಕು ಉತ್ಪನ್ನ ವಶ; ತಂದೆ, ಮಗ ಸಹಿತ ಮೂವರ ಸೆರೆ

ಕಾಸರಗೋಡು: ಕಾಸರಗೋಡು ಹಾಗೂ ಕಾಲಿಕ್ಕಡವಿನಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದಲ್ಲಿ ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಲಾಗಿದೆ. ಕೂಡ್ಲು ಕಾಳ್ಯಂಗಾಡಿನ ಮನೆಯೊಂದರಲ್ಲಿ ಬಚ್ಚಿಡಲಾಗಿದ್ದ 7810 ಪ್ಯಾಕೆಟ್ ತಂಬಾಕು ಉತ್ಪನ್ನಗಳನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ. ಈ ಮಾಲುಗಳನ್ನು 570 ಚೀಲಗಳಲ್ಲಾಗಿ ತುಂಬಿಸಿಡಲಾಗಿತ್ತು. ಇದಕ್ಕೆ ಸಂಬAಧಿಸಿ ಆ ಮನೆ ಮಾಲಕ ಕಾಳ್ಯಂಗಾಡ್ ಫೌಸಿಯಾ ಮಂಜಿಲ್ ಇರ್ಫಾನ್ ಅಬ್ದುಲ್ ಖಾದರ್ (33) ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಕೇಸು ದಾಖಲಿಸಲಾಗಿದೆ. ಇದು ಆರೋಪಿ ಮತ್ತು ಆತನ ಕುಟುಂಬದವರು ವಾಸಿಸುತ್ತಿರುವ ಮನೆಯಾಗಿದೆ. ಅಲ್ಲಿ ಅಕ್ರಮವಾಗಿ …

ಬಾಲಕಿಗೆ ಕಿರುಕುಳ ಯತ್ನ : ವೃದ್ದನ ವಿರುದ್ಧ ಪೋಕ್ಸೋ ಕೇಸು

ಬದಿಯಡ್ಕ: 16ರ ಹರೆಯದ ಬಾಲಕಿಗೆ ಕಿರುಕುಳ ನೀಡಲೆತ್ನಿಸಿದ ದೂರಿನಂತೆ 60ರ ಹರೆಯದ ವೃದ್ದನ ವಿರುದ್ಧ ಬದಿಯಡ್ಕ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ. ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ ಬಾಲಕಿ ಸಂಜೆ ಶಾಲೆ ಬಿಟ್ಟು ಮನೆಗೆ ಮರಳಿದ್ದಳು. ಅನಂತರ ಕೆಲಸಕ್ಕೆ ತೆರಳಿದ್ದ ತಾಯಿಗೆ ಫೋನ್ ಕರೆ ಮಾಡಲೆಂದು ಬಾಲಕಿ  ನೆರೆಮನೆಗೆ ತೆರಳಿದ್ದಳು. ಈ ವೇಳೆ ಅಲ್ಲಿ ಏಕಾಂಗಿಯಾಗಿದ್ದ ಆರೋಪಿಯು ಬಾಲಕಿಯ ಮೇಲೆ ತಿರುಕುಳಕ್ಕೆ ಯತ್ನಿಸಿದ್ದಾನೆಂದು ದೂರಲಾಗಿದೆ.

ಕರ್ನಾಟಕ ಮದ್ಯ ಮಾರಾಟಕ್ಕೆತ್ನ: ಓರ್ವ ಸೆರೆ

ಕುಂಬಳೆ: ಅನಧಿಕೃತವಾಗಿ ಕರ್ನಾಟಕ ಮದ್ಯ ತಂದು ಮಾರಾಟಕ್ಕೆ ಯತ್ನಿಸುತ್ತಿದ್ದ ಓರ್ವನನ್ನು ಅಬಕಾರಿ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಕುಬಣೂರು ಪಾಂಡಿ ಬಯಲು ನಿವಾಸಿ ರಮೇಶ್ ಪೂಜಾರಿ (48) ಬಂಧಿತ ವ್ಯಕ್ತಿ. ಈತನನ್ನು ಕುಂಬಳೆ ರೇಂಜ್ ಅಬಕಾರಿ ಅಧಿಕಾರಿಗಳು ಬಂಧಿಸಿ 17.64 ಲೀಟರ್ ಕರ್ನಾಟಕ ಮದ್ಯ ವಶಪಡಿಸಿಕೊಂಡಿ ದ್ದಾರೆ. ಎಕ್ಸೈಸ್ ಇನ್ಸ್‌ಪೆಕ್ಟರ್ ಕೆ.ಡಿ. ಮ್ಯಾಥ್ಯುರ ನೇತೃತ್ವದಲ್ಲಿ ಅಧಿಕಾರಿಗಳಾದ ಕೆ.ಪಿ. ಮನೋಜ್, ಎಂ.ಎಂ. ಅಖಿಲೇಶ್, ಚಾಲಕ ಪ್ರವೀಣ್ ಎಂಬಿವರನ್ನೊಳಗೊಂಡ ತಂಡ ನಿನ್ನೆ ಸಂಜೆ ನಡೆಸಿದ ಕಾರ್ಯಾಚರಣೆ ವೇಳೆ ಮದ್ಯ ವಶಪಡಿಸಲಾಗಿದೆ.

ಕಾಪ: ಹಲವು ಪ್ರಕರಣಗಳ ಆರೋಪಿ ಬಂಧನ: ಸೆಂಟ್ರಲ್ ಜೈಲಿಗೆ

ಕಾಸರಗೋಡು: ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಯುವಕನನ್ನು ವಿದ್ಯಾನಗರ ಪೊಲೀಸರು ಕಾಪಾ ಕಾನೂನು ಹೇರಿ ಬಂಧಿಸಿದ್ದಾರೆ. ಉಳಿಯತ್ತಡ್ಕ ಎಸ್.ಪಿ ನಗರ ಬಿಸ್ಮಿಲ್ಲಾ ಮಂಜಿಲ್‌ನ ಮೊದೀನ್ ಎಂ.ಎಚ್. ಅಲಿಯಾಸ್ ಚರುಮುರಿ ಮೊದೀನ್ (28) ಬಂಧಿತನಾದ ಆರೋಪಿ. ವಿದ್ಯಾನಗರ ಠಾಣೆಯ ಇನ್ಸ್‌ಪೆಕ್ಟರ್ ಯು.ಪಿ. ವಿಪಿನ್, ಎಸ್‌ಐ ಅಜೀಶ್, ಪೊಲೀಸರಾದ ನಿಜನ್, ರೆಜೀಶ್ ಎಂಬವರನ್ನೊಳಗೊಂಡ ಪೊಲೀಸರ ತಂಡ ಈತನನ್ನು ಬಂಧಿಸಿದೆ. ನಂತರ ಆತನನ್ನು ಕಣ್ಣೂರು ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ. ಈತ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಹೊಳೆಯಿಂದ ಹೊಯ್ಗೆ ಸಾಗಿಸಲು ರಸ್ತೆ ಸೌಕರ್ಯ : ಸ್ಥಳದ ಮಾಲಕನ ವಿರುದ್ಧ ಕೇಸು

ಕುಂಬಳೆ: ಅನಧಿಕೃತವಾಗಿ ಹೊಯ್ಗೆ ಸಾಗಿಸಲು ಹೊಳೆ ಬದಿಗೆ ರಸ್ತೆ ಸೌಕರ್ಯ ಒದಗಿಸಿಕೊಟ್ಟ ಸ್ಥಳದ ಮಾಲಕನ ವಿರುದ್ಧ ಕೇಸು ದಾಖಲಿಸಲಾಗಿದೆ. ಇಚ್ಚಿಲಂಗೋಡು ಕಕ್ಕಡ ಜಾರ ಬಳಿಯ ಸುಧೀಶ್ಚಂದ್ರ ಕಲ್ಪಾರ (55) ಎಂಬಾತನ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿ ಸಿದ್ದಾರೆ. ಇಚ್ಚಿಲಂಗೋಡು ಕಕ್ಕಡಜಾರ ಬಳಿಯ ಹೊಳೆಯಿಂದ ಹೊಯ್ಗೆ ಅನಧಿಕೃತವಾಗಿ ವ್ಯಾಪಕ ಸಾಗಾಟ ನಡೆಯುತ್ತಿದೆಯೆನ್ನಲಾಗಿದೆ. ಹೊಯ್ಗೆ ಸಾಗಿಸಲು ಹೊಳೆ ಬದಿಗೆ ರಸ್ತೆ ನಿರ್ಮಿ ಸಲು ಸ್ಥಳ ಒದಗಿಸಿಕೊಟ್ಟ ಆರೋಪ ದಂತೆ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬೈಕ್‌ಗಳಲ್ಲಿ ಬಂದ ಕಳ್ಳರು ಕ್ಷೇತ್ರ ಸಿಬ್ಬಂದಿಯ ಹಣ, ಫೋನ್ ಒಳಗೊಂಡ ಬ್ಯಾಗ್ ಕಳವು

ಕಾಸರಗೋಡು: ಎರಡು ಬೈಕ್ ಗಳಲ್ಲಾಗಿ ಬಂದ ಮೂವರು ಒಳಗೊಂಡ ಕಳ್ಳರ ತಂಡ ಕ್ಷೇತ್ರ ಸಿಬ್ಬಂದಿಯ ಸ್ಕೂಟರ್‌ನಿಂದ ನಗದು ಮತ್ತು ಎರಡು ಮೊಬೈಲ್ ಫೋನ್ ಒಳಗೊಂಡ ಬ್ಯಾಗ್ ಕದ್ದು ಪರಾರಿಯಾದ ಘಟನೆ ನಡೆದಿದೆ. ಉದುಮ ಉದಯಮಂಗಲ   ದೇವಸ್ಥಾನದ ಸೇವಾ ಕ್ಲರ್ಕ್ ಉದುಮ ಪಡಿಞ್ಞಾರ್ ತೆರುವಿನ ಸಿ. ಬಾಲಕೃಷ್ಣನ್ ಎಂಬವರ ಸ್ಕೂಟರ್‌ನಿಂದ ಕಳವು ನಡೆಸಲಾಗಿದೆ.  ಬಾಲಕೃಷ್ಣನ್‌ರ ಸ್ವಂತ 23,000 ರೂ. ಹಾಗೂ ದೇವ ಸ್ಥಾನದ ಖರ್ಚಿಗಾಗಿರುವ 20,000 ರೂ.  ಮತ್ತು ಎರಡು ಮೊಬೈಲ್‌ಗಳು ಒಳಗೊಂಡ ಬ್ಯಾಗ್ ಸ್ಕೂಟರ್‌ನಲ್ಲಿರಿಸ ಲಾಗಿತ್ತು.  ಸ್ಕೂಟರ್‌ನಲ್ಲಿ …

ಎಂಡೋಸಲ್ಫಾನ್ ಸಂತ್ರಸ್ತ ನಿಧನ

ಪೆರ್ಲ: ಪಡ್ರೆ ಮಲೆತ್ತಡ್ಕ ನಿವಾಸಿ ಎಂಡೋಸಲ್ಫಾನ್ ಸಂತ್ರಸ್ತರಾಗಿದ್ದ ಲಿಂಗಪ್ಪ ಗೌಡ (58) ನಿನ್ನೆ ನಿಧನಹೊಂದಿದರು.  ಜನ್ಮತಃ ವಿಕಲ ಚೇತನರಾಗಿದ್ದ ಇವರು ಶಯ್ಯಾವಲಂಬಿಯಾಗಿದ್ದರು.  ಎಣ್ಮಕಜೆ ಪಂಚಾಯತ್‌ನ ಎಂಡೋಸಲ್ಫಾನ್ ಸಂತ್ರಸ್ತರ ಯಾದಿಯಲ್ಲಿ ಸೇರಿದ್ದರು. ಇವರ ಬಗ್ಗೆ ದೃಶ್ಯ, ಮುದ್ರಣ ಮಾಧ್ಯಮಗಳಲ್ಲಿ ಈ ಮೊದಲು ವರದಿ ಪ್ರಕಟವಾಗಿತ್ತು. ಮೃತರು ತಂದೆ ಐತಪ್ಪ ಗೌಡ, ತಾಯಿ ಕಮಲ,  ಸಹೋದರಿ ಯರಾದ ಪುಷ್ಪಲತಾ, ಲೀಲಾವತಿ, ಲಲಿತ, ದೇವಕಿ, ಸಹೋದರರಾದ ರಾಮಣ್ಣ ಗೌಡ, ಪ್ರದೀಪ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಹೃದಯಾಘಾತದಿಂದ ವ್ಯಾಪಾರಿ ನಿಧನ

ಉಪ್ಪಳ: ಹೊಸಂಗಡಿಯಲ್ಲಿ ವ್ಯಾಪಾರಿಯಾಗಿರುವ ಬೆಜ್ಜಕೊಡಿಂಚಿಲ್ ನಿವಾಸಿ ಅಶ್ವಿನ್ ಭಂಡಾರಿ (48) ಹೃದ ಯಾಘಾತದಿಂದ  ನಿಧನ ಹೊಂದಿದರು. ಇವರಿಗೆ ನಿನ್ನೆ ಬೆಳಿಗ್ಗೆ ಮನೆಯಲ್ಲಿ ಹೃದಯಾಘಾ ತವುಂ ಟಾಗಿದ್ದು, ಕೂಡಲೇ ನಿಧನ ಸಂಭವಿಸಿದೆ ಎಂದು ಮನೆಯವರು ತಿಳಿಸಿದ್ದಾರೆ. ಅಶ್ವಿನ್ ಭಂಡಾರಿ ಹೊಸಂಗಡಿ ಪೇಟೆಯಲ್ಲಿ ಮೊಬೈಲ್ ಫೋನ್ ವ್ಯಾಪಾರಿಯಾಗಿದ್ದರು. ರಾಜಾರಾಮ ಭಂಡಾರಿ- ವಿಜಯ ದಂಪತಿಯ ಪುತ್ರನಾದ ಮೃತರು ಪತ್ನಿ ಮನೀಶ, ಮಕ್ಕಳಾದ ಅಶ್ವಿತ, ಅರ್ಜುನ್, ಸಹೋದರಿ ಉಷಾ ಶೆಟ್ಟಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹದ ಅಂತ್ಯ ಸಂಸ್ಕಾರ ಕೌಡೂರುಬೀಡು ತರವಾಡು …

ಹಣ್ಣು ಹಂಪಲುಗಳ ಬೆಲೆ ಗಗನಕ್ಕೆ: ಗ್ರಾಹಕರು ತೀವ್ರ ಆತಂಕದಲ್ಲಿ

ಕಾಸರಗೋಡು: ಬೇಸಿಗೆಕಾಲ ತೀವ್ರಗೊಳ್ಳುತ್ತಿದ್ದಂತೆ ಜಿಲ್ಲೆಯಲ್ಲಿ ಹಣ್ಣು ಹಂಪಲುಗಳ ಬೆಲೆ ಗಗನಕ್ಕೇರುತ್ತಿದೆ. ಇದೇ ಊರಲ್ಲಿ ಬೆಳೆಸಬಹುದಾದ ಹಣ್ಣು ಹಂಪಲುಗಳ ಪೈಕಿ ನೇಂದ್ರ ಬಾಳೆ ಹಣ್ಣಿನ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಕಂಡು ಬರುತ್ತಿದೆ. ಇತ್ತೀಚೆಗೆವರೆಗೆ ಕಿಲೋಕ್ಕೆ 60ರಿಂದ 70 ರೂ.ವರೆಗೆ ಇದ್ದ ನೇಂದ್ರ ಬಾಳೆ ಹಣ್ಣಿಗೆ ಇದೀಗ 80 ರೂಪಾಯಿ ದಾಟಿದೆ. ಇದೇ ವೇಳೆ ಕದಳಿ ಬಾಳೆ ಹಣ್ಣಿಗೂ ಬೆಲೆ 60ರಿಂದ 70ರ ಮಧ್ಯೆ ಇದೆ. ಕಳೆದ ಓಣಂ ಹಬ್ಬದ ಕಾಲದಲ್ಲಿ ನೇಂದ್ರ ಬಾಳೆ ಹಣ್ಣಿಗೆ 60ರಿಂದ 65 …

ನಿಧನ

ಬದಿಯಡ್ಕ: ಮುನಿಯೂರು ಕಳದ ಐಂಗೂರಾನ್ ನಾರಾಯಣಿ ಅಮ್ಮ (84) ನಿಧನ ಹೊಂದಿದರು. ಇವರ ಪತಿ ಚೇಕರಂರಕೋಡಿ ಕೇಳು ನಾಯರ್ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಎ. ಪೀತಾಂಬರನ್, ಎ. ಚಂದ್ರಶೇಖರನ್ (ಬದಿಯಡ್ಕದಲ್ಲಿ  ಜೀಪು ಚಾಲಕ), ಎ. ನಿರ್ಮಲ ಕುಮಾರಿ (ಮಧೂರು ಕೃಷಿ ಭವನ), ಸೊಸೆಯಂದಿರಾದ ಸಿ. ಲಕ್ಷ್ಮಿ, ಟಿ. ಶಾಂತಿ, ಅಳಿಯ ಕೆ. ಗಂಗಾಧರನ್ ನಾಯರ್, ಸಹೋದರ ಎ. ಮೋಹನನ್, ಸಹೋದರಿ ಎ. ರೋಹಿಣಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.