ಪ್ಲಸ್‌ಟು ವಿದ್ಯಾರ್ಥಿ ಕುಸಿದು ಬಿದ್ದು ಮೃತ್ಯು

ಕಾಸರಗೋಡು: ಪ್ಲಸ್ ಟು ವಿದ್ಯಾ ರ್ಥಿ ಹೃದಯಾ ಘಾತದಿಂದ ನಿಧನ ಹೊಂದಿ ದನು. ವೆಳ್ಳೂರು ಆಲಿಂಗಿಯಿಲ್‌ನಲ್ಲಿ ವಾಸಿಸುವ ತೃಕರಿಪುರ ಉದಿನೂರು ನಿವಾಸಿ, ಟಿ.ಪಿ. ಸುಹೈಲ್- ಸುಮಯ್ಯ ದಂಪತಿ ಪುತ್ರ ಹಾಶಿರ್ (18) ಮೃತಪಟ್ಟ ವಿದ್ಯಾರ್ಥಿ. ವೆಳ್ಳೂರ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಯಾಗಿದ್ದಾನೆ. ಶುಕ್ರವಾರ ಮಧ್ಯಾಹ್ನ ಶಾಲೆ ಯಿಂದ ಮನೆ ಸಮೀಪದ ಮಸೀದಿ ಗೆಂದು ತೆರಳುತ್ತಿದ್ದ ಮಧ್ಯೆ ಕುಸಿದು ಬಿದ್ದಿದ್ದನು. ಇದನ್ನು ಕಂಡ ಆಟೋ ಚಾಲಕ ಹಾಶಿರ್‌ನನ್ನು ಕೂಡಲೇ ಪರಿಯಾರಂ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಿದರೂ …

ಕಾಡು ಪೊದೆ ಆವರಿಸಿದ್ದ ವಿದ್ಯುತ್ ಕಂಬ ಸ್ವಚ್ಛ ಕಾರವಲ್ ಮೀಡಿಯಾ ವರದಿಗೆ ಶೀಘ್ರ ಸ್ಪಂದನೆ

ಕುಂಬಳೆ: ಕಾರವಲ್ ಮೀಡಿಯಾದಲ್ಲಿ ಪ್ರಕಟಗೊಂಡ ಸುದ್ಧಿಗೆ ಸ್ಪಂದಿಸಿ ವಿದ್ಯುತ್ ಕಂಬಕ್ಕೆ ಆವರಿಸಿದ್ದ ಪೊದೆಯನ್ನು ತೆರವುಗೊಳಿಸಲಾಗಿದೆ. ಕುಂಬಳೆ ಪಂಚಾಯತ್‌ನ ೮ನೇ ವಾರ್ಡ್‌ನ ಚಿಪ್ಪಿನಡ್ಕ ಅಂಗನವಾಡಿ ಬಳಿ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಕ್ಕೆ ಕಾಡುಪೊದೆ ಆವರಿಸಿ ಅಪಾಯ ಆಹ್ವಾನಿಸುವ ಸ್ಥಿತಿಯಲ್ಲಿತ್ತು. ಈ ವರದಿಯನ್ನು ನಿನ್ನೆ ಕಾರವಲ್ ಮೀಡಿಯಾದಲ್ಲಿ ಚಿತ್ರ ಸಹಿತ ಪ್ರಕಟಿಸಲಾಗಿತ್ತು. ಈ ವರದಿ ಗಮನಕ್ಕೆ ಬಂದ ವಿದ್ಯುತ್ ಇಲಾಖೆ ಅಧಿಕಾರಿಗಳು ಆವಾಗಲೇ ಸ್ಥಳಕ್ಕೆ ತಲುಪಿ ಕಂಬಕ್ಕೆ ಆವರಿಸಿಕೊಂಡಿದ್ದ ಪೊದೆ ಬಳ್ಳಿಗಳನ್ನು ತೆರವುಗೊಳಿಸಿದ್ದಾರೆ. ಪ್ರಸ್ತುತ ಈ ಅಪಾಯಕ್ಕೆ ಪರಿಹಾರವಾ ಯಿತಾದರೂ …

ಕಾಸರಗೋಡಿನ ಪ್ರಸಿದ್ಧ ಡಾಕ್ಟರ್ ಬಿ.ಎಸ್. ರಾವ್ ನಿಧನ

ಕಾಸರಗೋಡು: ಕಾಸರಗೋಡಿನ  ಖ್ಯಾತ ವೈದ್ಯರೂ, ಕಾಸರಗೋಡು ನರ್ಸಿಂಗ್ ಹೋಂನ ಸ್ಥಾಪಕರಲ್ಲೋರ್ವ ರಾದ ಡಾ|  ಬಿ.ಎಸ್. ರಾವ್ ಯಾನೆ ಬಾಯಾರು ಶಂಕರ ನಾರಾಯಣ ರಾವ್ (84) ನಿಧನಹೊಂದಿದರು.  ಅಸೌಖ್ಯ ಬಾಧಿಸಿದ್ದ ಇವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಇಂದು ಬೆಳಿಗ್ಗೆ ನಿಧನ ಸಂಭವಿಸಿದೆ.  ಕಲ್ಲ್ಲಿಕೋಟೆ ಮೆಡಿಕಲ್ ಕಾಲೇಜಿನಿಂದ ಎಂ.ಬಿ.ಬಿ.ಎಸ್ ಹಾಗೂ ತಿರುವನಂತಪುರ ಮೆಡಿಕಲ್ ಕಾಲೇಜಿನಿಂದ ಎಂ.ಡಿ ಗಳಿಸಿದ ಇವರು ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ಟಿ.ಬಿ ಸ್ಪೆಷಾಲಿಸ್ಟ್ ಆಗಿ ಸೇವೆಗೆ ಪ್ರವೇ ಶಿಸಿದ್ದರು. ಬಳಿಕ ಮಾಲಿಕ್ ದೀನಾರ್ ಆಸ್ಪತ್ರೆಯಲ್ಲಿ ಜನರಲ್ ಫಿಸೀಶಿಯನ್ …

ಚಪ್ಪಲಿ ರಿಪೇರಿ ಅಂಗಡಿಯೊಳಗೆ ವ್ಯಕ್ತಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಮಂಜೇಶ್ವರ: ಸಂಬಂಧಿಕನ ಚಪ್ಪಲಿ ರಿಪೇರಿ ಅಂಗಡಿಯೊಳಗೆ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಂಜೇಶ್ವರ ಗುಡ್ಡೆ ರೋಡ್ ಮಲ್ಲುಗುರಿ ನಿವಾಸ್‌ನ ಬಾಬು ಬಿ.ಎಂ (71) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಕರ್ನಾಟಕದಲ್ಲಿ ಸರಕಾರಿ ಉದ್ಯೋಗಿಯಾಗಿದ್ದ ಇವರು ನಿವೃತ್ತಿಯ ಬಳಿಕ ಮಂಜೇಶ್ವರ ಭಾಗದಲ್ಲಿರುವ ಸಂಬಂಧಿಕರ ಮನೆಗಳಲ್ಲಿ ವಾಸಿಸುತ್ತಿದ್ದರು. ನಿನ್ನೆ ಸಂಜೆ ಹೊಸಂಗಡಿ ಗೇಟ್ ಸಮೀಪ ಚಪ್ಪಲಿ ದುರಸ್ತಿ ನಡೆಸುವ ಸಂಬಂಧಿಕರಾದ ಬಾಬು  ಎಂಬವರು ಅಂಗಡಿ ಮುಚ್ಚಲು ಸಿದ್ಧತೆ ನಡೆಸುತ್ತಿದ್ದಾಗ ಅಲ್ಲಿಗೆ ತಲುಪಿದ ಬಾಬು ಬಿ.ಎಂ ಈ  ಅಂಗಡಿಯೊಳಗೆ ನಿದ್ರಿಸುವುದಾಗಿ ತಿಳಿಸಿದ್ದರೆನ್ನಲಾಗಿದೆ.  ಇಂದು …

ಸೌಮ್ಯ ಕೊಲೆ ಪ್ರಕರಣ: ಜೈಲು ಹಾರಿದ ತಾಸುಗಳೊಳಗೆ ಆರೋಪಿ ಗೋವಿಂದಚ್ಚಾಮಿ ಸೆರೆ

ಕಣ್ಣೂರು: ಕೇರಳವನ್ನೇ ನಡುಗಿಸಿದ್ದ ಶೊರ್ನೂರು ಮಂಜಕ್ಕಾಟ್ ನಿವಾಸಿ ಹಾಗೂ ಸೇಲ್ಸ್ ಗರ್ಲ್ ಆಗಿದ್ದ ಸೌಮ್ಯ (23) ಕೊಲೆ ಪ್ರಕರಣದ ಆರೋಪಿ ತಮಿಳುನಾಡು ನಿವಾಸಿ ಗೋವಿಂದ ಚ್ಚಾಮಿಯನ್ನು ಜೈಲು ಹಾರಿದ ತಾಸುಗಳೊಳಗೆ ಆತನ್ನು ಸೆರೆಹಿಡಿ ಯುವಲ್ಲಿ ಪೊಲೀಸರು ಸಫಲರಾಗಿ ದ್ದಾರೆ. ಇದಕ್ಕಾಗಿ ಪೊಲೀಸರಿಗೆ ಎಲ್ಲೆಡೆಗಳಿಂದ ಪ್ರಶಂಸೆಯ ಸುರಿಮಳೆ ಹರಿದುಬರತೊಡಗಿದೆ. ಅತೀವ ಭದ್ರತೆ ಹೊಂದಿರುವ ಕಣ್ಣೂರು ಸೆಂಟ್ರಲ್ ಜೈಲಿನ  10ನೇ ಬ್ಲಾಕ್‌ನ ಆರನೇ ಸೆಲ್‌ನಿಂದ ಇಂದು ಮುಂಜಾನೆ ೧.೧೫ರ ನಸುಕಿನ ವೇಳೆ ಗೋವಿಂದಚ್ಚಾಮಿ ಜೈಲಿನ ಹಿಂಭಾಗದ 7.5 ಮೀಟರ್‌ನಷ್ಟು ಎತ್ತರದಲ್ಲಿರುವ …

ಸಲಿಂಗರತಿ ಕಿರುಕುಳ : ಮದ್ರಸಾ ಅಧ್ಯಾಪಕ ಸೆರೆ

 ಕುಂಬಳೆ:  ಹದಿನಾರರ ಹರೆಯದ ಬಾಲಕನಿಗೆ ಸಲಿಂಗರತಿ ಕಿರುಕುಳ ನೀಡಿದ ಆರೋಪದಂತೆ ಮದ್ರಸಾ ಅಧ್ಯಾಪಕನ ವಿರುದ್ಧ ಕುಂಬಳೆ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಸಿನಾನ್ ಎಂಬಾತ ಬಂಧಿತ ಆರೋಪಿ ಯೆಂದು ಪೊಲೀಸರು ತಿಳಿಸಿದ್ದಾರೆ. 2022ರಿಂದ 2023ರ ವರೆಗೆ ಬಾಲಕನನ್ನು ವಿವಿಧೆಡೆಗೆ ಕರೆ ದೊಯ್ದು  ಕಿರುಕುಳ ನೀಡಿರುವು ದಾಗಿ ದೂರಲಾಗಿದೆ. ಶಾಲೆಯಲ್ಲಿ ಇತ್ತೀಚೆಗೆ ನಡೆಸಿದ ಕೌನ್ಸಿಲಿಂಗ್ ವೇಳೆ ಬಾಲಕ ಘಟನೆ ಬಗ್ಗೆ ಬಹಿರಂಗಪಡಿಸಿದ್ದಾನೆ.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಗುತ್ತಿಗೆ ಸಂಸ್ಥೆಯ ಸುಪರ್‌ವೈಸರ್ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕೆಲಸದಲ್ಲಿ ಜಿಲ್ಲೆಯ ಹಲವೆಡೆಗಳಲ್ಲಿ ಲೋಪದೋಷಗಳು ಪತ್ತೆಯಾಗಿ ಆ ಬಗ್ಗೆ ತನಿಖೆ ನಡೆಸುತ್ತಿರುವ ವೇಳೆಯಲ್ಲೇ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಗುತ್ತಿಗೆ ಸಂಸ್ಥೆಯ ಸುಪರ್‌ವೈಸರ್ ತಮ್ಮ ವಾಸಸ್ಥಳದಲ್ಲಿ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೂಲತಃ ಆಂಧ್ರಪ್ರದೇಶದ ವಾಳಿಯಾನಗರ ಜಿಲ್ಲೆಯ ಕೋನಾ ಗ್ರಾಮದ ನಿವಾಸಿ  ಗೋವರ್ಧನ್ ರಾವ್ (30) ಸಾವನ್ನಪ್ಪಿದ ವ್ಯಕ್ತಿ. ಇವರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಎರಡು ಮತ್ತು ಮೂರನೇ ರೀಚ್‌ನ  ನಿರ್ಮಾಣ ಕೆಲಸದ ಗುತ್ತಿಗೆ ವಹಿಸಿಕೊಂಡಿರುವ ಮೆಗಾ ಇಂಜಿನಿಯರಿಂಗ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆಯ …

ಟ್ಯಾಂಕರ್ ಲಾರಿ ಅಪಘಾತ: ಸಂಚಾರಕ್ಕೆ ನಿಯಂತ್ರಣ

ಹೊಸದುರ್ಗ: ಕಾಞಂಗಾಡ್ ಸೌತ್‌ನಲ್ಲಿ ಟ್ಯಾಂಕರ್ ಲಾರಿ ಮಗುಚಿದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯಿಂದ ಈ ದಾರಿಯಲ್ಲಿ ಸಂಚಾರ ನಿಯಂತ್ರಣ ಏರ್ಪಡಿಸಲಾಗಿದೆ. 18ಟನ್ ಭಾರದ ಎಲ್‌ಪಿಜಿ ಗ್ಯಾಸ್ ಟ್ಯಾಂಕರ್ ಲಾರಿ ಮಗುಚಿ ಬಿದ್ದಿದ್ದು, ಇದನ್ನು ತೆರವುಗೊಳಿಸುವವರೆಗೆ ಈ ದಾರಿಯಾಗಿ ಸಂಚಾರ ನಿಯಂತ್ರಣ ಏರ್ಪಡಿಸಲಾಗಿದೆ. ಪಡನ್ನಕ್ಕಾಡ್ ರಾಷ್ಟ್ರೀಯ ಹೆದ್ದಾರಿಯ ಮೂಲಕ ವಾಹನಗಳಿಗೆ ಸಂಚರಿಸಲು ಅವಕಾಶವಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಅಪರಾಹ್ನ ಮಂಗಳೂರಿನಿಂದ ಆಗಮಿಸಿದ ಟ್ಯಾಂಕರ್ ಲಾರಿ ಅಪಘಾತಕ್ಕೀಡಾಗಿತ್ತು. ಲಾರಿಯಲ್ಲಿ ಎಲ್‌ಪಿಜಿ ತುಂಬಿಕೊಂಡಿದ್ದ ಕಾರಣ ಭದ್ರತೆಯ ದೃಷ್ಟಿಯಿಂದ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದರಂತೆ …

ಬ್ಯಾಂಕಾಕ್‌ನಿಂದ ತರಲಾದ 23.5 ಕಿಲೋ ಹೈಬ್ರಿಡ್ ಗಾಂಜಾ ಪತ್ತೆ : ಯುವತಿ ಸೆರೆ

ಕಾಸರಗೋಡು:  ಕಸ್ಟಮ್ಸ್ ತಂಡ ಕರಿಪ್ಪೂರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಸಿದ ಕಾರ್ಯಾಚರಣೆ ಯಲ್ಲಿ ಬ್ಯಾಂಕಾಕ್ ನಿಂದ ವಿಮಾನದ ಮೂಲಕ ತರಲಾದ 23.5 ಕಿಲೋ ಹೈಬ್ರಿಡ್ ಗಾಂಜಾ ವನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂ ಧಿಸಿ ಪಯ್ಯನ್ನೂರು ತಾಯ ನ್ನೂರು ನಿವಾಸಿ ಮಸೂದಾ ಸುಹೈಬ್ (30) ಎಂಬಾಕೆಯನ್ನು  ಬಂಧಿಸಲಾಗಿದೆ. 16 ಪ್ಯಾಕೆಟ್‌ಗಳ ಲ್ಲಾಗಿ ಬ್ಯಾಗೇಜ್‌ನಲ್ಲಿ ಈ ಮಾಲು ಬಚ್ಚಿಡಲಾಗಿತ್ತು.  ಬಂಧಿತಳಾದ ಯುವತಿ ಈ ಮಾಲನ್ನು ವಿಮಾನದಲ್ಲಿ ಬ್ಯಾಂಕಾಕ್‌ನಿಂದ ಅಬುದಾಬಿಯ ಮೂಲಕ ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾಳೆ. ಆಕೆಯನ್ನು ನಂತರ …

ಕೊಲೆ ಯತ್ನ ಸಹಿತ ಹಲವಾರು ಕೇಸುಗಳಲ್ಲಿ ಆರೋಪಿಯಾದ ವ್ಯಕ್ತಿ ಉದುಮದಿಂದ ಸೆರೆ

ಕಾಸರಗೋಡು: ಕೊಲೆ ಯತ್ನ ಸಹಿತ ಹಲವಾರು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊಲ್ಲಂ ಚಾತನ್ನೂರು ಪೊಲೀಸರು ಉದುಮದಿಂದ ಬಂಧಿಸಿದ್ದಾರೆ. ಉದುಮ ನಾಲಾವಾದುಕ್ಕಲ್‌ನಲ್ಲಿ ರಹಸ್ಯವಾಗಿ ವಾಸಿಸುತ್ತಿದ್ದ ಚಾತನ್ನೂರು ಕುಳಪ್ಪಾಡಂ ಪುತ್ತಂಗೋಡ್ ಜಾಬಿರ್ ಮಂಜಿಲ್‌ನ ಮುಹಮ್ಮದ್ ಅನ್ವರ್ ಅಲಿಯಾಸ್ ಅನುವನ್ನು ಸೆರೆ ಹಿಡಿಯಲಾಗಿದೆ. ಈತ ಉದುಮದಲ್ಲಿ ಇದ್ದಾನೆ ಎಂಬ ಬಗ್ಗೆ ರಹಸ್ಯ ಮಾಹಿತಿ ಲಭಿಸಿದ ಚಾತನ್ನೂರು ಪೊಲೀಸರು ಬೇಕಲ ಪೊಲೀಸರ ಸಹಾಯ ಆಗ್ರಹಿಸಿದ್ದರು. ಬೇಕಲ ಠಾಣೆ ಇನ್ಸ್ ಪೆಕ್ಟರ್ ಎಂ.ವಿ. ಶ್ರೀದಾಸ್, ಸಿವಿಲ್ ಪೊಲೀಸ್ ಆಫೀಸರ್ ಕೆ. ಪ್ರಸಾದ್ ಎಂಬಿವರ ಸಹಾಯದೊಂದಿಗೆ …