ಶಾಲಾ ಪರಿಸರ ಮಾದಕವಸ್ತು ಮಾರಾಟ: ಪೈವಳಿಕೆಯಲ್ಲಿ ಓರ್ವ ಸೆರೆ

ಉಪ್ಪಳ: ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಲೆಂದು ಮಾದಕವಸ್ತುಗಳೊಂ ದಿಗೆ ನಿಂತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶದ  ಜೋಲಾಹರ ನಿವಾಸಿ ದೀಪಕ್ ಸೋಂಕಾರ್ (39) ಎಂಬಾತನನ್ನು  ಮಂಜೇಶ್ವರ ಎಸ್‌ಐ ಮನುಕೃಷ್ಣನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.  ಪೈವಳಿಕೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಸಮೀಪ ದಿಂದ ಈತನನ್ನು ಬಂಧಿಸಲಾಗಿದೆ. ಈತನ ಕೈಯಿಂದ 375 ಪ್ಯಾಕೆಟ್ ತಂಬಾಕು ಉತ್ಪನ್ನಗಳನ್ನು ವಶಪಡಿಸಲಾಗಿದೆ. ಶಾಲಾ ಪರಿಸರವನ್ನು ಕೇಂದ್ರೀಕರಿಸಿ ಮಾದಕವಸ್ತುಗಳ ಮಾರಾಟ ವ್ಯಾಪಕಗೊಂಡ ಬಗ್ಗೆ ಲಭಿಸಿದ ದೂರುಗಳ ಹಿನ್ನೆಲೆಯಲ್ಲಿ  ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ

ಮಂಜೇಶ್ವರ: ಮೀಂಜ ಬೇರಿಕೆ ತಲಕ್ಕಿ ಎಂಬಲ್ಲಿ ಕುಂಬಳೆ ಎಕ್ಸೈಸ್ ಕಚೇರಿಯ ಪ್ರಿವೆಂಟೀವ್ ಆಫೀಸರ್ ಮನಾಸ್ ಕೆ.ವಿ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆ ಯಲ್ಲಿ  5.4 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಪೈವಳಿಕೆ ಬಾಯಿಕಟ್ಟೆಯ ರಾಜ ಕೆ (39) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಅಖಿಲೇಶ್ ಎಂ.ಎಂ, ಜಿತಿನ್ ವಿ, ಸುರ್ಜಿತ್ ಕೆ ಮತ್ತು ಚಾಲಕ ಪ್ರವೀಣ್ ಎಂಬಿವರು ಒಳಗೊಂಡಿದ್ದರು.

ಪಂಜಾಬ್‌ನಲ್ಲಿ  ಎಎಪಿಯಲ್ಲಿ ಬಿಕ್ಕಟ್ಟು: 30 ಶಾಸಕರಿಂದ ರಾಜೀನಾಮೆ ಬೆದರಿಕೆ

ನವದೆಹಲಿ: ದೆಹಲಿ ವಿಧಾನಸ ಭೆಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ (ಎಎಪಿ) ಪರಾಭ ವಗೊಂ ಡು ಅಧಿಕಾರ ಕಳೆದುಕೊಂಡ ಬೆನ್ನಲ್ಲೇ ಎಎಪಿ ನೇತೃತ್ವದ ಪಂಜಾಬ್ ಸರಕಾರದಲ್ಲೂ ಭಾರೀ ಬಿಕ್ಕಟ್ಟು ತಲೆಯೆತ್ತಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ತಮ್ಮ ಸ್ಥಾನಕ್ಕೆ  ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಎಎಪಿಯ 30 ಶಾಸಕರು ಪ್ರತ್ಯಕ್ಷವಾಗಿ ರಂಗಕ್ಕಿಳಿದಿದ್ದಾರೆ.  ಆದರೆ ಇವರ ಬೇಡಿಕೆ ಯನ್ನು ಮುಖ್ಯಮಂತ್ರಿ ಹಾಗೂ ಅವರ ಬಣ ಸಾರಾಸಗಟಾಗಿ ತಿರಸ್ಕರಿಸಿದ್ದು,  ಇದು ಪಕ್ಷದೊಳಗೆ ಆಂತರಿಕ ಕಚ್ಚಾಟಕ್ಕೂ  ದಾರಿಮಾಡಿಕೊಟ್ಟಿದೆ. ಇದೇ ಸಂದರ್ಭದಲ್ಲಿ …

ಪತಿಯೊಂದಿಗಿನ ವಿರಸ ಕೊನೆಗೊಳಿಸುವ ನೆಪದಲ್ಲಿ ಮಂತ್ರವಾದಿಯಿಂದ ಯುವತಿಗೆ ದೌರ್ಜನ್ಯ: 61 ಲಕ್ಷ ರೂ. ವಂಚನೆ ಆರೋಪ

ತೃಶೂರು: ಪತಿಯೊಂದಿಗಿನ ವೈಷಮ್ಯವನ್ನು ಕೊನೆಗೊಳಿಸುವುದಾಗಿ ನಂಬಿಸಿ ಮಾದಕಪದಾರ್ಥ ಮಾತ್ರೆ ನೀಡಿ ಹಲವು ಬಾರಿ ದೌರ್ಜನ್ಯಗೈದು 61 ಲಕ್ಷ ರೂ. ಅಪಹರಿಸಿರುವುದಾಗಿ ನೀಡಿದ ದೂರಿನಂತೆ ಮಂತ್ರವಾದಿ ಹಾಗೂ ಸಹಾಯಕ ಸೆರೆಯಾಗಿದ್ದಾರೆ. ಮಲಪ್ಪುರಂ ಮಾರಂಜೇರಿ ನಿವಾಸಿ ಮಂತ್ರವಾದಿ ತಾಜುದ್ದೀನ್ (46) ಹಾಗೂ ಈತನ ಸಹಾಯಕ ನಾಯರಂಙಾಡಿ ಶಕೀರ್ (27) ಎಂಬಿವರನ್ನು ಚಾವಕ್ಕಾಡಿ ಪೊಲೀಸ್ ಇನ್ಸ್‌ಪೆಕ್ಟರ್ ವಿ.ವಿ. ವಿಮಲ್‌ರ ನೇತೃತ್ವದಲ್ಲಿ ಸೆರೆ ಹಿಡಿಯಲಾಗಿದೆ. ಪತಿಯೊಂದಿಗೆ ವಿರಸಹೊಂದಿ ಯುವತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಈ ಮಧ್ಯೆ ಮಂತ್ರವಾದಿಯ ಶಿಷ್ಯನೆಂದು ನಂಬಿಸಿ ಶಕೀರ್ ಯುವತಿಯ ಮನೆಗೆ …

ಹಿರಿಯ ದೈವನರ್ತಕ ನಿಧನ

ಉಪ್ಪಳ: ಬಂದ್ಯೋಡು ಬಳಿಯ ಹೇರೂರು ನಿವಾಸಿ, ಹಿರಿಯ ದೈವನರ್ತಕ, ಪಂಚಾಯತ್ ಮಾಜಿ ಸದಸ್ಯ ಐತ್ತಪ್ಪ ನಲಿಕೆ (66) ನಿಧನರಾದರು. ಭಾನುವಾರ ಮುಂಜಾನೆ ಮನೆಯಲ್ಲಿ ಹೃದಯಘಾತ ಉಂಟಾಗಿದ್ದು, ಕೂಡಲೇ ಮಂಗಳೂರಿಗೆ ಸಾಗಿಸುವ ಮಧ್ಯೆ ನಿಧನರಾದರು. ಮಂಗಲ್ಪಾಡಿ ಪಂಚಾಯತ್‌ನ ಮಾಜಿ ಬಿಜೆಪಿ ಸದಸ್ಯರಾಗಿದ್ದರು. ಕೇರಳ ತುಳು ಅಕಾಡೆಮಿ ವತಿಯಿಂದ ಜನವರಿಯಲ್ಲಿ ಎಡನೀರು ಮಠದಲ್ಲಿ ನಡೆದ ಹಿರಿಯ ದೈವನರ್ತಕರಿಗೆ ಸನ್ಮಾನ ಸಮಾರಂಭದಲ್ಲಿ ಇವರನ್ನು ಸನ್ಮಾನಿಸಲಾಗಿತ್ತು. ÀÄÈತರು ಪತ್ನಿ ಲೀಲಾ, ಪುತ್ರ ಮಹೇಶ, ಸೊಸೆ ಶಶಿಕಲಾ, ಸಹೋದರ, ಸಹೋದರಿಯರಾದ ದೇವಕಿ, ಸುಮತಿ, ಪೂವಪ್ಪ …

ಹಲವೆಡೆ ಚಿರತೆ ಪ್ರತ್ಯಕ್ಷ

ಕಾಸರಗೋಡು: ಪುಲ್ಲೂರು ಪೆರಿಯ ಪಂಚಾಯತ್‌ನ ಅಂಬಲತ್ತರ, ಮೀಂಗೋತ್ ಸಹಿತ ವಿವಿಧೆಡೆ ಚಿರತೆ ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ. ಈ ಎರಡು ಕಡೆಗಳಲ್ಲಿ ಇಂದು ಮುಂಜಾನೆ ರಬ್ಬರ್ ತೋಟದಲ್ಲಿ ಚಿರತೆ ಕಾಣಿಸಿದೆಯೆಂದು ರಬ್ಬರ್ ಟ್ಯಾಪಿಂಗ್ ಕಾರ್ಮಿಕರು ತಿಳಿಸಿದ್ದಾರೆ. ಅದೇ ರೀತಿ ವಟ್ಟಂತಟ್ಟ, ಪೊಯಿನಾಚಿ ಪುಳಿನಾಕ್ಷಿ ಕಾವ್ ಸಮೀಪವೂ ಚಿರತೆ ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ.

ಕುಂಬ್ಡಾಜೆ ಪಂ. ಮಾಜಿ ಅಧ್ಯಕ್ಷೆ ನಿಧನ

ಕುಂಬ್ಡಾಜೆ: ಕುಂಬ್ಡಾಜೆ ಮಾಜಿ ಅಧ್ಯಕ್ಷೆ, ವನಿತಾ ಲೀಗ್ ಮುಖಂಡೆಯಾಗಿದ್ದ ಕರುವಲ್ತಡ್ಕ ನಿವಾಸಿ ಫಾತಿಮತ್ ಸುಹರ (60) ನಿಧನ ಹೊಂದಿದರು. ಅಸೌಖ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಶುಕ್ರವಾರ ರಾತ್ರಿ ಚೆರ್ಕಳದ ಆಸ್ಪತ್ರೆಯಲ್ಲಿ  ಸಂಭವಿಸಿದೆ. 2015ರ ಚುನಾವಣೆಯಲ್ಲಿ ಗೆಲುವು ಸಾಧಿಸಿ ಇವರು ಪಂಚಾಯತ್ ಅಧ್ಯಕ್ಷೆಯಾಗಿದ್ದರು. ಮುಹಮ್ಮದ್- ಆಯಿಷಾ ದಂಪತಿ ಪುತ್ರಿಯಾಗಿರುವ ಇವರು ಸಹೋದರ ರಫೀಕ್, ಸಹೋದರಿ ನಬೀಸ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನಿಧನ

ಬದಿಯಡ್ಕ: ದಿ| ಗೋ ಪಾಲ ಪ್ರಭು- ಗುಲಾಬಿ ಪ್ರಭು ದಂಪತಿ ಪುತ್ರಿ ಚಂದ್ರಕಲಾ ಸಿ. ರಾವ್ (75) ನಿಧನ ಹೊಂದಿದರು. ಮಂಗಳೂರು ಕರಂಗ ಲ್ಪಾಡಿಯಲ್ಲಿರುವ ಪುತ್ರನ ಮನೆಯಲ್ಲಿ ನಿಧನ ಸಂಭವಿಸಿದೆ. ಮೃತರು ಪತಿ ಚಂದ್ರಕಾಂತ್ ರಾವ್,  ಮಕ್ಕಳಾದ ಗುರುರಾಜ್ ಬೆಂಗಳೂರು, ಪ್ರೇಮಚಂದ್ರ ರಾಮ ಕರಂಗಲ್ಪಾಡಿ, ಪ್ರವೀಣ್‌ಚಂದ್ರ ರಾಮ, ಗುರುರಾಜ್ ಪ್ರಫುಲ್ಲ, ಸಹೋದರ ಸಹೋದರಿಯರಾದ ಚಂದ್ರಶೇಖರ ಪ್ರಭು, ಪ್ರಕಾಶ್ ಪ್ರಭು, ಮೀನಾಕ್ಷಿ ಪ್ರಭು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಹೋದರರಾದ ಸುಂದರ ಪ್ರಭು ಬದಿಯಡ್ಕ, ದಯಾನಂದ ಪ್ರಭು, ಸೋಮಶೇಖರ …

ಹಿರಿಯ ಕೃಷಿಕ ನಿಧನ

ಪೈವಳಿಕೆ: ಚಿಪ್ಪಾರು ಅಮ್ಮೇರಿ ನಿವಾಸಿ ಹಿರಿಯ ಕೃಷಿಕ ನಾರಾಯಣಪೂಜಾರಿ (80) ನಿಧನ ಹೊಂದಿದರು. ಮೃತರು ಮಕ್ಕಳಾದ ಸತೀಶ್ಚಂದ್ರ, ರಾಘವೇಂದ್ರ, ಜಗದೀಶ, ಹೇಮಲತ, ಅಳಿಯ ಹರೀಶ್ ಬೇಕೂರು, ಸಹೋದರರಾದ ವೆಂಕಪ್ಪ ಪೂಜಾರಿ, ಸುದಾನಂದ, ಗಂಗಯ, ರಮೇಶ, ವಿಶ್ವನಾಥ, ಸಹೋದರಿ ಸುಶೀಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಪತ್ನಿ ಲಲಿತ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರ ಮನೆಗೆ ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರು, ಚಂದ್ರ ನಾಯ್ಕ್ ಮಾನಿಪ್ಪಾಡಿ, ಖಲೀಲ್ ಚಿಪ್ಪಾರು, ರಾಜೇಶ್ ಸಹಿತ …

ನಾರಂಪಾಡಿ ಕ್ಷೇತ್ರದಲ್ಲಿ ಸಹಸ್ರ ಬ್ರಹ್ಮಕಲಶಾಭಿಷೇಕದೊಂದಿಗೆಸಮಾಪ್ತಿ: ನಾಳೆಯಿಂದ ವಾರ್ಷಿಕೋತ್ಸವ

ಬದಿಯಡ್ಕ: ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಇಂದು ಸಹಸ್ರ ಬ್ರಹ್ಮಕಲಶಾಭಿಷೇಕದೊಂದಿಗೆ ಸಮಾಪ್ತಿಯಾಗಲಿದ್ದು, ನಾಳೆಯಿಂದ ವಾರ್ಷಿಕೋತ್ಸವ ಆರಂಭಗೊಳ್ಳಲಿದೆ. ಕ್ಷೇತ್ರದಲ್ಲಿ ನಿನ್ನೆ ಬೆಳಿಗ್ಗೆ ಗಣಪತಿ ಹೋಮ, ವಿವಿಧ ಹೋಮಗಳು, ಬ್ರಹ್ಮಕಲಶ ಪೂಜೆ ಜರಗಿತು. ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ವಾಗ್ಮಿ ಅಕ್ಷಯ ಗೋಖಲೆ ಕಾರ್ಕಳ ಧಾರ್ಮಿಕ ಉಪನ್ಯಾಸ ನೀಡಿದರು.  ಸುಮಶ್ರೀ ಇಡಿಯಡ್ಕ ಬಳಗದವರಿಂದ ಭಕ್ತಿ ರಸಮಂಜರಿ, ರಂಗಸಿರಿ ಸಾಂಸ್ಕೃತಿಕ ವೇದಿಕೆಯವರಿಂದ ಯಕ್ಷಗಾನ ಬಯಲಾಟ, ಯೋಗ ಫಾರ್ ಕಿಡ್ಸ್ ಕರಂದಕ್ಕಾಡು ಇವರಿಂದ ಯೋಗ …