ಎರಿಯಾಕೋಟ ಶ್ರೀ ಭಗವತೀ ಕ್ಷೇತ್ರ ಕಳಿಯಾಟ ಮಹೋತ್ಸವ:  ವ್ಯಾಪಾರಿ ವ್ಯವಸಾಯಿ ಸಮಿತಿಯಿಂದ ಹೊರೆಕಾಣಿಕೆ ಸಮರ್ಪಣೆ

ಮೊಗ್ರಾಲ್ ಪುತ್ತೂರು: ಕೇರಳ ರಾಜ್ಯ ವ್ಯಾಪಾರಿ ವ್ಯವಸಾಯಿ ಸಮಿತಿಯ ಮೊಗ್ರಾಲ್ ಪುತ್ತೂರು ಘಟಕ  ಸಮಿತಿಯ ವತಿಯಿಂದ ಎರಿಯಾಕೋಟ ಶ್ರೀ ಭಗವತೀ ಕ್ಷೇತ್ರದ ಕಳಿಯಾಟ ಮಹೋತ್ಸವದಂಗವಾಗಿ ಹೊರೆಕಾಣಿಕೆ ಸಮರ್ಪಿಸಲಾಯಿತು. ಸಮಿತಿ ಜಿಲ್ಲಾ ಕಾರ್ಯದರ್ಶಿ ಶೋಭಾ ಬಾಲನ್, ಅಧ್ಯಕ್ಷ ಪಿ.ಕೆ. ಗೋಪಾಲನ್, ಜಿಲ್ಲಾ ಸಮಿತಿ ಸದಸ್ಯರಾದ ರಿಯಾಸ್ ಚೌಕಿ, ಪ್ರಕಾಶನ್ ಎನ್.ಬಿ, ಗೋಪಿ ಕುಂಬಳೆ, ವಿಜಯಚಂದ್ರನ್ ಕೆ.ಪಿ, ಸುಕುಮಾರನ್, ಸುರೇಶ್ ಟಿ.ಕೆ, ಜಾನಕಿ ಡಿ, ನೌಷಾದ್, ಅಬ್ದುಲ್ಲ, ಅಬ್ದುಲ್ ಸಲಾಂ, ಹಕೀಂ ಕಂಬಾರ್, ಅಬ್ದು ಕಾವುಗೋಳಿ, ಅಬ್ದುಲ್, ಆಸಾದ್, ಜಶೀರ್ …

ಕಾಡುಪ್ರಾಣಿಗಳ ಉಪಟಳ : ಸಂಸದರ ಉಪವಾಸ ಸಮಾಪ್ತಿ

ಬೋವಿಕಾನ: ವನ್ಯಮೃಗ ಹಾವಳಿಯಿಂದ ಜನಸಾಮಾನ್ಯರು ಸಂಕಷ್ಟಪಡುತ್ತಿದ್ದು, ಸರಕಾರ ಸೂಕ್ತ ಕ್ರಮ ಕೂಡಲೇ ಕೈಗೊಳ್ಳಬೇಕೆಂದು ಆಗ್ರಹಿಸಿ 12 ಗಂಟೆಗಳ ಕಾಲ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ನಡೆಸಿದ ಉಪವಾಸ ಮುಷ್ಕರ ಸಮಾಪ್ತಿಯಾಯಿತು. ಉಪವಾಸದ ಸಮಾರೋಪವನ್ನು ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದರು. ಅವರು ಮಾತನಾಡಿ, ಕಾಡು ಪ್ರಾಣಿಗಳು ಕೃಷಿ ಬೆಳೆಗಳನ್ನು ನಾಶಪಡಿಸಿ ಮನುಷ್ಯ ಜೀವಕ್ಕೂ ಬೆದರಿಕೆ ಸೃಷ್ಟಿಸುತ್ತಿರುವ ಸನ್ನಿವೇಶದಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಮೌನ ನಿಲುವು ವಹಿಸಿದ್ದು, ಇದು ಅತ್ಯಂತ ಪ್ರತಿಭಟನಾರ್ಹವಾಗಿದೆ ಎಂದು ನುಡಿದರು. ಯುಡಿಎಫ್ …

ಕನ್ನಡ ಹೋರಾಟ ಸಮಿತಿ ಸಭೆ: ಕನ್ನಡ ಸಮಸ್ಯೆಗಳ ಬಗ್ಗೆ ಪ್ರಾದೇಶಿಕ ಮಟ್ಟದಲ್ಲಿ ಒಗ್ಗಟ್ಟಿಗೆ ತೀರ್ಮಾನ

ಕಾಸರಗೋಡು: ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಪ್ರಮುಖರ ಸಭೆ ಅಡ್ಕತ್ತಬೈಲು ಉಡುಪಿ ಗಾರ್ಡನ್ ಹೊಟೇಲ್‌ನ ಮಥುರಾ ಸಭಾಂಗಣದಲ್ಲಿ ಜರಗಿತು. ಹೋರಾಟ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಪರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪ್ರಾದೇಶಿಕ ಮಟ್ಟದಲ್ಲಿ ಕನ್ನಡಿಗರನ್ನು ಒಟ್ಟುಸೇರಿಸುವ ಕೆಲಸ ಮಾಡಲು ತೀರ್ಮಾನಿಸಲಾಯಿತು. ಪ್ರತೀ ಪಂಚಾಯತ್ ಮಟ್ಟದಲ್ಲೂ ಸಂಚಾಲಕರನ್ನು ನೇಮಕ ಮಾಡಲಾಯಿತು. ಸಮಿತಿಯ ಉಪಾಧ್ಯಕ್ಷ ಮಹಾಲಿಂಗೇಶ್ವರ ಭಟ್ ಪ್ರಸ್ತಾಪಿಸಿದರು. ರವೀಶ ತಂತ್ರಿ ಕುಂಟಾರು, ರಾಮ ಪ್ರಸಾದ್ …

ಪಜ್ಜ ಶ್ರೀ ಅಯ್ಯಪ್ಪ ಭಜನಾ ಮಂದಿರ ನಿಧಿ ಸಂಚಯನಕ್ಕೆ ಚಾಲನೆ

ಮಾನ್ಯ: ಭಜನಾ ಮಂದಿರಗಳು ಸಮಾಜವನ್ನು ಒಂದುಗೂಡಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಎಲ್ಲಾ ಸ್ತರದ ಜನರು ಭೇದ ಭಾವವಿಲ್ಲದೆ ಒಟ್ಟುಸೇರಿ ದೇವರನ್ನು ಭಜಿಸಿದಾಗ ಅಲ್ಲಿ ಸಕಾರಾತ್ಮಕ ಚಿಂತನೆಗಳು ಬೆಳೆಯುತ್ತವೆ. ಧಾರ್ಮಿಕ ಕ್ಷೇತ್ರಗಳ ಪುನರುದ್ಧಾರಕ್ಕೆ ನಾಡಿನ ಜನರು ಕೈಜೋಡಿಸಬೇಕು ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು. ಪಜ್ಜ ಕೊಲ್ಲಂಗಾನ ಶ್ರೀ ಅಯ್ಯಪ್ಪ ಭಜನಾ ಮಂದಿರ ಪುನರ್ ನಿರ್ಮಾಣ ಸಮಿತಿ ವತಿಯಿಂದ ನಡೆದ ಧಾರ್ಮಿಕ ಸಭೆಯಲ್ಲಿ ನಿಧಿ ಸಂಚಯನ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಮಂದಿರ …

27 ವರ್ಷಗಳ ನಂತರ ದಿಲ್ಲಿ ಗದ್ದುಗೆಗೆ ಬಿಜೆಪಿ

ನವದೆಹಲಿ: ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ಬೆಳಿಗ್ಗೆ ಆರಂಭಗೊAಡಿರುವAತೆಯೇ ದಿಲ್ಲಿ ಗದ್ದುಗೆಗೆ ಬಿಜೆಪಿ ಏರುವುದು ಪಕ್ಕಾಗೊಂಡಿದೆ. ಆ ಮೂಲಕ 27 ವರ್ಷಗಳ ಬಳಿಕ ಬಿಜೆಪಿಗೆ ಇದೇ ಮೊದಲ ಬಾರಿಗೆ ದಿಲ್ಲಿ ರಾಜ್ಯದ ಆಡಳಿತ ಚುಕ್ಕಾಣಿ ಲಭಿಸುವಂತಾಗಿದೆ.ದಿಲ್ಲಿ ವಿಧಾನಸಭೆಯ ಒಟ್ಟು 70 ಸ್ಥಾನಗಳಲ್ಲಿ ಬಿಜೆಪಿ 41, ಆಡಳಿತಾರೂಢ ಆಮ್ಆದ್ಮಿ ಪಾರ್ಟಿ (ಎಎಪಿ) 29 ಸ್ಥಾನದಲ್ಲಿ ಮುನ್ನಡೆಯಲ್ಲಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ಗೆ ಕನಿಷ್ಠ ಒಂದು ಕ್ಷೇತ್ರದಲ್ಲಾದರೂ ಮುನ್ನಡೆ ಸಾಧಿಸಲು ಸಾಧ್ಯವಾಗದೆ ತೀವ್ರ ಮುಖಭಂಗಕ್ಕೀಡಾಗಿದೆ. ಇಂದು ಬೆಳಿಗ್ಗೆ …

152 ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ರಸ್ತೆ ಚರಂಡಿಯ ಸ್ಲ್ಯಾಬ್ ಕುಸಿದು ಸಿಲುಕಿಕೊಂಡ ಸರಕುಲಾರಿ

ಕುಂಬಳೆ:  152 ಕೋಟಿ ರೂಪಾಯಿ ಖರ್ಚು ಮಾಡಿ ತಿಂಗಳುಗಳ ಹಿಂದೆಯಷ್ಟೇ ನವೀಕರಿಸಿದ ಕುಂಬಳೆ-ಬದಿಯಡ್ಕ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯ  ಕುಂಬಳೆಯಲ್ಲಿ ಚರಂಡಿಯ ಸ್ಲ್ಯಾಬ್ ಕುಸಿದು ಸರಕು ಲಾರಿ ಸಿಲುಕಿಕೊಂಡ ಘಟನೆ ನಡೆದಿದೆ. ನಿನ್ನೆ ಸಂಜೆ ಮಂಗಳೂರಿನಿಂದ ಕೊಚ್ಚಿಗೆ ಪಾಮ್ ಆಯಿಲ್ ಸಾಗಿಸುತ್ತಿದ್ದ ಲಾರಿ ಚರಂಡಿಯ ಸ್ಲ್ಯಾಬ್ ಕುಸಿದು ಸಿಲುಕಿಕೊಂಡಿದೆ. ಚಾಲಕ ಆಹಾರ ಸೇವಿಸಲು ಲಾರಿಯನ್ನು ರಾಷ್ಟ್ರೀಯ ಹೆದ್ದಾರಿ ಬದಿ ನಿಲ್ಲಿಸಲು ಸ್ಥಳವಿಲ್ಲದು ದರಿಂದ ಕುಂಬಳೆಯ ಬದಿಯಡ್ಕ ರಸ್ತೆ ಬದಿ ನಿಲುಗಡೆಗೊಳಿಸಲು  ಪ್ರಯತ್ನಿಸಿದ್ದನು. ಇತರ ವಾಹನಗಳಿಗೆ ಅಡಚಣೆ ಉಂಟಾಗದ ರೀತಿಯಲ್ಲಿ ಲಾರಿಯನ್ನು …

ವೈದ್ಯರನ್ನು ಬ್ಲಾಕ್‌ಮೇಲ್ ಗೊಳಿಸಿ 45 ಲಕ್ಷ ರೂ. ಎಗರಿಸಿದ ದೂರಿನಂತೆ ದಂಪತಿ ವಿರುದ್ಧ ಕೇಸು

ಕಾಸರಗೋಡು: ವೈದ್ಯರೋರ್ವರನ್ನು ಬ್ಲಾಕ್‌ಮೇಲ್‌ಗೊಳಿಸಿ ಅವರಿಂದ 45 ಲಕ್ಷ ರೂ. ಎಗರಿಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ನ್ಯಾಯಾಲಯದ ನಿರ್ದೇಶ ಪ್ರಕಾರ ದಂಪತಿ ವಿರುದ್ಧ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳನಾಡು ನಿವಾಸಿಗಳಾದ ಖದೀಜತ್ ರಿಶಾನಾ (35) ಮತ್ತು ಆಕೆಯ ಪತಿ ರೆಹ್ಮತ್ತುಲ್ಲ (41) ಎಂಬವರ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. 2023 ರಲ್ಲಿ ಮೇಲ್ಪರಂಬ ಕೈನೋತ್ತ್‌ನ ಹೊಟೇಲೊಂದರಲ್ಲಿ ಆರೋಪಿಗಳು ತನ್ನನ್ನು ಪರಿಚಯಗೊಂಡು ಸೆಲ್ಫಿ ತೆಗೆದು ನಂತರ ಬ್ಲಾಕ್‌ಮೇಲ್ ಗೊಳಿಸಲಾರಂಭಿಸಿದರೆಂದು ದೂರಿನಲ್ಲಿ ವೈದ್ಯರು ಆರೋಪಿಸಿದ್ದಾರೆ.

ಲಾರಿ ಢಿಕ್ಕಿ ಹೊಡೆದು ಬೈಕ್ ಪ್ರಯಾಣಿಕರಾದ ಇಬ್ಬರು ಯುವಕರು ಮೃತ್ಯು

ಕಾಸರಗೋಡು: ನಿಯಂತ್ರಣ ತಪ್ಪಿದ ಲಾರಿ ಬೈಕ್ ಹಾಗೂ ಬೇರೊಂದು ಲಾರಿಗೆ ಢಿಕ್ಕಿ ಹೊಡೆದು ಇಬ್ಬರು ಮೃತಪಟ್ಟ ದಾರುಣ ಘಟನೆ   ಸಂಭವಿಸಿದೆ.  ಬೈಕ್ ಪ್ರಯಾಣಿಕರಾದ ಕಾಞಂಗಾಡ್ ಹಳೆ ಕಡಪ್ಪುರ ನಿವಾಸಿ ಆಶಿಕ್ (20), ಮೀನಾಪೀಸ್ ಕೋಟ ಎಂಬಲ್ಲಿ ವಾಸಿಸುವ ಬೆಂಗಳೂರು ನಿವಾಸಿ ಬಾಬಾಪಕ್ರುದ್ದೀನ್‌ರ ಪುತ್ರ ತನ್ವೀರ್ (35) ಎಂಬಿವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಕಾಞಂಗಾಡ್ ಬಳಿಯ ಪಡನ್ನಕ್ಕಾಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೇತುವೆ ಸಮೀಪ ನಿನ್ನೆ ರಾತ್ರಿ 9 ಗಂಟೆ ವೇಳೆ ಈ ಭೀಕರ ಅಪಘಾತವುಂಟಾಗಿದೆ.     ನೀಲೇಶ್ವರ ಭಾಗದಿಂದ  ಬಂದ ಲಾರಿ  …

ಕಾಞಂಗಾಡ್‌ನಿಂದ ಬೈಕ್ ಕಳವು: ಉಳಿಯತ್ತಡ್ಕ ನಿವಾಸಿ ಸೆರೆ

ಕಾಸರಗೋಡು: ಕಾಞಂಗಾಡ್  ರೈಲ್ವೇ ನಿಲ್ದಾಣ ಬಳಿಯಿಂದ ಬೈಕ್ ಕಳವುಗೈದ ಯುವಕನನ್ನು ಸೆರೆಹಿಡಿಯಲಾಗಿದೆ. ಮಧೂರು ಉಳಿಯತ್ತಡ್ಕ ನಿವಾಸಿ ರಹೀಸ್ ಅಹಮ್ಮದ್ (19) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಕಾಸರಗೋಡಿನಲ್ಲಿ  ಪೊಲೀಸರು ನಡೆಸಿದ ವಾಹನ ತಪಾಸಣೆ ವೇಳೆ  ಈತ ಸೆರೆಗೀಡಾಗಿದ್ದಾನೆ. ತಪಾಸಣೆ ವೇಳೆ ನಂಬರ್ ಪ್ಲೇಟ್ ಇಲ್ಲದೆ ಬಂದ ಬೈಕ್‌ನ ಮೇಲೆ ಸಂಶಯಗೊಂಡು ನಿಲ್ಲಿಸಿ ತನಿಖೆಗೊಳಪಡಿಸಿದಾಗ ಆರೋಪಿ  ಬೈಕ್ ಕಳವುಗೈದ ಬಗ್ಗೆ ಒಪ್ಪಿಕೊಂಡಿದ್ದಾನೆ. ಕಳೆದ ತಿಂಗಳ ೨೮ರಂದು ಬೈಕ್ ಕಳವಿಗೀಡಾಗಿತ್ತು. ಈ ಬಗ್ಗೆ ಲಭಿಸಿದ ದೂರಿನಂತೆ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. …

ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ: ಜನರಿಗೆ ಸಂರಕ್ಷಣೆ ಒದಗಿಸಲು ಒತ್ತಾಯಿಸಿ ಸಂಸದರಿಂದ ಉಪವಾಸ ಸತ್ಯಾಗ್ರಹ

ಬೋವಿಕ್ಕಾನ: ಕಾಸರಗೋಡು ಜಿಲ್ಲೆಯ ಜನವಾಸ  ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ಉಪಟಳ ತೀವ್ರಗೊಂಡಿದ್ದರೂ ಜನರ ಜೀವ ಹಾಗೂ ಸೊತ್ತಿಗೆ ಸಂರಕ್ಷಣೆ ಒದಗಿಸುವಲ್ಲಿ ಸರಕಾರ ತೋರಿಸುವ ನಿರ್ಲಕ್ಷ್ಯವನ್ನು ಕೊನೆಗೊಳಿಸ ಬೇಕೆಂದು ಒತ್ತಾಯಿಸಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಇಂದು ಬೆಳಿಗ್ಗೆ ಬೋವಿಕ್ಕಾನದಲ್ಲಿ  ಉಪವಾಸ ಸತ್ಯಾಗ್ರಹ ಆರಂಭಿಸಿ ದರು.  12 ಗಂಟೆಗಳ ಕಾಲ ನಡೆಯು ವ ಉಪವಾಸ ಮುಷ್ಕರವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ  ದೀಪಾದಾಸ್ ಮುನ್ಶಿ ಉದ್ಘಾಟಿಸಿ ದರು.  ಕೆ. ನೀಲಕಂಠನ್ ಅಧ್ಯಕ್ಷತೆ ವಹಿಸಿದರು. ನೇತಾರರಾದ ಮನ್ಸೂರ್ ಅಲಿ, ಸೋನಿ ಸೆಬಾಸ್ಟಿಯನ್, ಪಿ.ಕೆ. ಫೈಸಲ್,  …