ಕ್ರಿಕೆಟ್ ಇತಿಹಾಸ ಸುನಿಲ್ ಗವಾಸ್ಕರ್ ಫೆ. 21ರಂದು ಕಾಸರಗೋಡಿಗೆ

ಕಾಸರಗೋಡು: ಭಾರತೀಯ ಕ್ರಿಕೆಟ್ ಕ್ರೀಡಾ ಲೋಕದ ಇತಿಹಾಸ ಸುನಿಲ್ ಗವಾಸ್ಕರ್ ಈ ತಿಂಗಳ 21ರಂದು ಕಾಸರಗೋಡಿಗೆ ಆಗಮಿಸು ವರು.  ನಗರಸಭೆ ವಿದ್ಯಾನಗರದಲ್ಲಿರುವ ನಗರಸಭಾ ಕ್ರೀಡಾಂಗಣಕ್ಕೆ   ನೂತನ ವಾಗಿ ನಿರ್ಮಿಸಲಾಗಿರುವ ರಸ್ತೆಗೆ ಸುನಿಲ್ ಗವಾಸ್ಕರ್‌ರ ಹೆಸರು ಇರಿಸಲಾಗಿದೆ. ಅದರ ಉದ್ಘಾಟನೆ ಯನ್ನು ಸ್ವತಃ ಸುನಿಲ್ ಗವಾಸ್ಕರ್ ಅವರೇ ಈತಿಂಗಳ 21ರಂದು ನೆರವೇರಿಸುವರು. ಈ ರಸ್ತೆಗೆ ಗವಾಸ್ಕರ್‌ರ ಹೆಸರು  ಇರಿಸಲು ಜ. 30ರಂದು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂರ ಅಧ್ಯಕ್ಷತೆಯಲ್ಲಿ ನಡೆದ ನಗರಸಭಾ ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿ ಸಲಾಗಿತ್ತು. ಕ್ರೀಡಾ …

ಬಜೆಟ್‌ನಲ್ಲಿ  ಜಿಲ್ಲೆಗೆ ಲಭಿಸಿದ್ದು

ಕಾಸರಗೋಡು: ನಿನ್ನೆ ವಿಧಾನಸಭೆ ಯಲ್ಲಿ ವಿತ್ತ ಸಚಿವ ಬಾಲಗೋಪಾಲನ್ ಮಂಡಿಸಿದ ಮುಂಗಡಪತ್ರದಲ್ಲಿ ಜಿಲ್ಲೆಗೆ ಲಭಿಸಿದ್ದೇನು? ಎಂಬ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ. ಕೋವಳಂ ಬೇಕಲ ಒಳನಾಡು ಜಲರಸ್ತೆಗೆ 500 ಕೋಟಿ ರೂ. ಮೀಸಲಿರಿಸಲಾಗಿದ್ದು, 2026ರಲ್ಲಿ ಯೋಜನೆ ಪೂರ್ತಿಯಾಗಲಿದೆ. ಎಂಡೋಸಲ್ಫಾನ್ ಸಂತ್ರಸ್ತರಿಗೆ 17 ಕೋಟಿ ರೂ., ಎನರ್ಜಿ ಸ್ಟೋರೇಜ್ ಸಿಸ್ಟಂ  ಮೈಲಾಟಿಯಲ್ಲಿ ಸ್ಥಾಪಿಸಲು ೫ ಕೋಟಿ ರೂ., ಕಾಸರಗೋಡು ಬಂದರು ಸಹಿತ ವಿವಿಧ ಬಂದರುಗಳ ಅಭಿವೃದ್ಧಿಗೆ 65 ಕೋಟಿ ರೂ., ಪೆರಿಯ ಏರ್‌ಸ್ಟ್ರಿ ಪ್‌ಗೆ 50 ಲಕ್ಷ ರೂ., …

ಡಯಾಲಿಸಿಸ್ ಸೆಂಟರ್‌ನಿಂದ ಮಲಿನ ಜಲ ಬಾವಿಗೆ: ಕ್ರಮಕ್ಕೆ ಜಿಲ್ಲಾಧಿಕಾರಿ ಆದೇಶ

ಮುಟ್ಟತ್ತೋಡಿ: ಇಲ್ಲಿನ ಬಾರಿ ಕ್ಕಾಡ್ ಡಯಾಲಿಸಿಸ್ ಸೆಂಟರ್‌ನ ಮಲಿನ ಜಲವನ್ನು ಸಮೀಪದ ಬಾವಿ ಗಳಿಗೆ, ಶುದ್ಧ ಜಲ ಮೂಲಗಳಿಗೆ ಹರಿಯ ಬಿಟ್ಟು ಶುದ್ಧಜಲ ಮಲಿನಗೊಳಿಸುತ್ತಿರು ವುದಾಗಿ ಸಮೀಪ ವಾಸಿಗಳು ನೀಡಿದ ದೂರಿನಂತೆ ದುರಂತ ನಿವಾ ರಣೆ ಕಾನೂನು ಪ್ರಕಾರ ಕ್ರಮ ಸ್ವೀಕರಿಸಲು ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಆದೇಶಿ ಸಿದ್ದಾರೆ. ಇಲ್ಲಿನ ಡಯಾಲಿಸಿಸ್ ಸೆಂಟರ್‌ನ ರೋಗಿಗಳನ್ನು ಹಂತಹಂತ ವಾಗಿ ಸರಕಾರಿ ಆಸ್ಪತ್ರೆಗಳಿಗೂ, ಉಚಿತವಾಗಿ ಡಯಾಲಿಸಿಸ್ ನಡೆಸಲು ಸಿದ್ಧರಿರುವ ಇತರ ಖಾಸಗಿ ಆಸ್ಪತ್ರೆಗಳಿಗೂ ಬದಲಿಸಲು ತೀರ್ಮಾ ನಿಸಲಾಗಿದೆ. ಅದುವರೆಗೆ ಡಯಾಲಿಸಿಸ್ …

2025-26ನೇ ಆರ್ಥಿಕ ವರ್ಷದ ರಾಜ್ಯ ಬಜೆಟ್: ಕೃಷಿ ವಲಯಕ್ಕೆ, ಲೈಫ್ ಯೋಜನೆಗೆ ಆದ್ಯತೆ

ತಿರುವನಂತಪುರ: 2025-26ನೇ ವಿತ್ತೀಯ ವರ್ಷದ ಬಜೆಟ್ ರಾಜ್ಯ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ವಿಧಾನಸಭೆಯ ಲ್ಲಿ ಇಂದು ಬೆಳಿಗ್ಗೆ ಮಂಡಿಸಿದರು.ಬಜೆಟ್ನಲ್ಲಿ ಕೃಷಿ ವಲಯಕ್ಕೆ 227.40 ಕೋಟಿ ರೂ., ಭತ್ತ ಕೃಷಿ ಅಭಿವೃದ್ಧಿಗೆ 150 ಕೋಟಿ ರೂ. ಮೀಸಲಿರಿಸಲಾಗಿದೆ. ವಿದ್ಯುತ್ ಉತ್ಪಾದನೆ ಹೆಚ್ಚಿಸಲು 100 ಕೋಟಿ ರೂ., ವನಸಂರಕ್ಷಣೆ ಕಾರ್ಯಚಟು ವಟಿಕೆಗಳನ್ನು ಇನ್ನಷ್ಟು ಸಮರ್ಪP ಗೊಳಿಸಲು 50.3 ಕೋಟಿ ರೂ., ಮಣ್ಣು ಸಂರಕ್ಷ ಣೆಗೆ 77.9 ಕೋಟಿ ರೂ., ಮೀನು ಕಾರ್ಮಿಕರಿಗೆ ಗ್ರೂಪ್ ಇನ್ಶೂರೆನ್ಸ್ಗೆ 10 ಕೋಟಿ ರೂ.ವನ್ನು …

ಒಂದು ವಾರ ಹಿಂದೆ ಹೃದಯ ಶಸ್ತ್ರ ಚಿಕತ್ಸೆ ನಡೆಸಿದ್ದ ವ್ಯಾಪಾರಿ ನಿಧನ

ಬದಿಯಡ್ಕ: ಒಂದು ವಾರ ಹಿಂದೆಯಷ್ಟೇ ಹೃದಯ ಶಸ್ತ್ರಚಿಕಿತ್ಸೆ ನಡೆಸಿ ಮನೆಯಲ್ಲಿ ವಿಶ್ರಾಂತಿ ಪಡೆ ಯುತ್ತಿದ್ದ ವ್ಯಾಪಾರಿ ಮೃತಪಟ್ಟರು.  ಕುಂಬಳೆ ಬಳಿಯ ಬಂಬ್ರಾಣ ನಿವಾಸಿ ಕೆ.ಬಿ. ಅಬ್ದುಲ್ ಲತೀಫ್ (49) ಎಂಬವರು ಮೃತಪಟ್ಟ ವ್ಯಕ್ತ್ತಿ. ಇವರು ಬದಿಯಡ್ಕ ಪೇಟೆಯಲ್ಲಿ  ಸೋನಾ ಇಲೆಕ್ಟ್ರಿಕಲ್ ಅಂಗಡಿಯ ಮಾಲಕರಾಗಿದ್ದಾರೆ. ಒಂದು ವಾರ ಹಿಂದೆ ಮಂಗಳೂರಿನ ಆಸ್ಪತ್ರೆಯಲ್ಲಿ ಇವರ ಹೃದಯ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಬಳಿಕ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿದ ಹಿನ್ನೆಲೆಯಲ್ಲಿ  ಎರಡು ದಿನಗಳಿಂದ ಚುಚ್ಚು ಮದ್ದು ನೀಡಲಾಗುತ್ತಿತ್ತು. …

ಬಸ್‌ನಲ್ಲಿ ಕಳವು: ಸೆರೆಯಾದ ತಮಿಳುನಾಡು ನಿವಾಸಿಗಳಾದ ಮಹಿಳೆಯರು ಕಳವು ತಂಡದ ಪ್ರಧಾನ ಕೊಂಡಿಗಳು

ಮಂಜೇಶ್ವರ: ಕುಂಜತ್ತೂರಿನಲ್ಲಿ  ಬಸ್ ಪ್ರಯಾಣಿಕೆಯ ಬ್ಯಾಗ್‌ನಿಂದ ಚಿನ್ನಾಭರಣ, ಮೊಬೈಲ್ ಫೋನ್, 8000 ರೂ. ಕಳವುಗೈದ ತಮಿಳುನಾಡು ನಿವಾಸಿಗಳಾದ ಮೂರು ಮಂದಿಯನ್ನು ಉಪ್ಪಳದಿಂದ ಮಂಜೇಶ್ವರ ಪೊಲೀಸರು ಬಂಧಿಸಿದ್ದು, ಇವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತಮಿಳುನಾಡು ಮಧುರೈ ನಿವಾಸಿ ಸುಮತಿ (34),  ತೂತುಕುಡಿ ನಿವಾಸಿಗಳಾದ ರಂಜಿತ (32), ಪಾರ್ವತಿ (42) ಎಂಬಿವರನ್ನು ಮಂಜೇ ಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಹಲವಾರು ಕಳವು ಪ್ರಕರಣಗಳಲ್ಲಿ ಆರೋಪಿಗಳಾದ ಇವರು ತಮಿಳುನಾಡಿ ನಿಂದ ಕೇರಳಕ್ಕೆ ತಲುಪಿ ಕಳವು ನಡೆಸುವ ತಂಡದ ಪ್ರಧಾನ ಕೊಂಡಿಗಳೆಂದು ಪೊಲೀಸರು …

ಸಿಪಿಎಂ ಜಿಲ್ಲಾ ಸಮ್ಮೇಳನ ಇಂದು ಸಮಾಪ್ತಿ: ಸಂಜೆ ಬೃಹತ್ ರೆಡ್ ವಾಲೆಂಟಿಯರ್ ಮಾರ್ಚ್

ಹೊಸದುರ್ಗ: ಕಾಞಂಗಾಡ್ ನಲ್ಲಿ ನಡೆಯುತ್ತಿರುವ ಸಿಪಿಎಂ ಜಿಲ್ಲಾ ಸಮ್ಮೇಳನ ಇಂದು ಸಮಾಪ್ತಿ ಗೊಳ್ಳಲಿದೆ. ಸಮಾರೋಪ ಸಮ್ಮೇಳನವನ್ನು ಪಾಲಿಟ್ ಬ್ಯೂರೋ ಸದಸ್ಯ ಎ. ವಿಜಯ ರಾಘವನ್ ಉದ್ಘಾಟಿಸುವರು. ಸಮ್ಮೇಳನದ ಅಂಗವಾಗಿ ರೆಡ್ ವಾಲೆಂಟಿಯರ್ ಮಾರ್ಚ್ ಸಂಜೆ ೪ಕ್ಕೆ ಅಲಾಮಿಪಳ್ಳಿ ಹೊಸ ಬಸ್ ನಿಲ್ದಾಣ ಪರಿಸರದಿಂದ ಆರಂಭಗೊಳ್ಳಲಿದೆ. ಸಾರ್ವಜನಿಕ ಸಮ್ಮೇಳನ ನೋರ್ತ್ ಕೋಟಚ್ಚೇರಿ ಯಲ್ಲಿ ನಡೆಯಲಿದೆ. ಇದೇ ವೇಳೆ ಪಕ್ಷದ ನೂತನ ಜಿಲ್ಲಾ ಸೆಕ್ರೆಟರಿ ಯಾರಾಗಲಿದ್ದಾರೆಂಬ ಬಗ್ಗೆ  ಚರ್ಚೆಗಳು ನಡೆಯುತ್ತಿದೆ. ಪ್ರಸ್ತುತ ಸೆಕ್ರೆಟರಿಯಾಗಿ ರುವ ಎಂ.ವಿ. ಬಾಲಕೃಷ್ಣನ್ ಆ ಸ್ಥಾನ …

ಸೊಸೈಟಿಗೆ ಹಾಲು ನೀಡಿ ಮರಳುತ್ತಿದ್ದ ಹೈನುಗಾರಿಕಾ ಕೃಷಿಕೆ ಕಾರು ಢಿಕ್ಕಿ ಹೊಡೆದು ಮೃತ್ಯು

ಹೊಸದುರ್ಗ: ಸೊಸೈಟಿಯಲ್ಲಿ ಹಾಲು ನೀಡಿ ಪತಿಯೊಂದಿಗೆ ಮರಳುತ್ತಿದ್ದ ಹೈನುಗಾರಿಕಾ ಕೃಷಿಕೆ ಕಾರುಢಿಕ್ಕಿ ಹೊಡೆದು ಮೃತಪಟ್ಟರು. ಪಯ್ಯ ನ್ನೂರು ಬಳಿಯ ಎರಿಪುರ ನಿವಾಸಿ ವಿಶ್ವನಾಥನ್‌ರ ಪತ್ನಿ ಭಾನುಮತಿ (58) ಮೃತಪಟ್ಟ ದುರ್ದೈವಿ. ಇಂದು ಬೆಳಿಗ್ಗೆ ಸೊಸೈಟಿಯಲ್ಲಿ ಹಾಲು ನೀಡಿ ಸಮೀಪದ ಹೋಟೆಲ್‌ನಿಂದ ಹಸುಗಳಿಗೆ  ಆಹಾರ ಖರೀದಿಸಿ ರಸ್ತೆ ದಾಟುತ್ತಿದ್ದ ವೇಳೆ ಭಾನುಮತಿ ಯವರಿಗೆ ಕಾರು ಢಿಕ್ಕಿ ಹೊಡೆದಿದೆ. ಅಪರಿಮಿತ ವೇಗದಲ್ಲಿದ್ದ ಕಾರು ಭಾನುಮತಿಯವರನ್ನು 200 ಮೀಟ ರ್‌ನಷ್ಟು ದೂರಕ್ಕೆ ಎಳೆದೊಯ್ದಿದೆ.  ಮೃತರು ಮಕ್ಕಳಾದ ಲೇಜು ಲೇಖಾ, ಲತಿಕಾ, ಲಿಜೇಶ್, …

ಅನಧಿಕೃತ ಮದ್ಯ ಮಾರಾಟ: ಆಟೋ ಚಾಲಕಿ ಸೆರೆ

ಬಂದಡ್ಕ: ಕುಂಡಂಗುಳಿ ಪರಿಸರದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆಟೋ ಚಾಲಕಿಯನ್ನು ಸೆರೆ ಹಿಡಿಯಲಾಗಿದೆ. ಇಲ್ಲಿನ ಶ್ರೀಕಲಾ ಕೆ.(44) ಬಂಧಿತ ಆರೋಪಿಯಾಗಿದ್ದಾಳೆ. ಈಕೆಯ ಆಟೋರಿಕ್ಷಾದಿಂದ ಕೇರಳ ನಿರ್ಮಿತ ವಿದೇಶ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಬಂದಡ್ಕ ರೇಂಜ್ ಅಬಕಾರಿ ಇನ್ಸ್‌ಪೆಕ್ಟರ್ ಜಯರಾಜನ್ ಟಿ.ಯು. ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ವಿವಿಧ ಕಡೆಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟದ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ಸೆಂಟ್ರಿಂಗ್ ಕಾರ್ಮಿಕನಾದ ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ನೆಕ್ರಾಜೆ ಬಳಿಯ ಕೋಂಬ್ರಾಜೆ ನಿವಾಸಿ ಲೋರೆನ್ಸ್ ಕ್ರಾಸ್ತಾ (40) ಮೃತಪಟ್ಟ ವ್ಯಕ್ತಿ. ಇವರು ನಿನ್ನೆ ರಾತ್ರಿ ಬೆಡ್‌ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಮನೆಯವರು ಅವರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಜೋಕಿ ಕ್ರಾಸ್ತಾ- ಲೂಸಿ ಡಿಸೋಜಾ ದಂಪತಿಯ ಪುತ್ರನಾದ ಮೃತರು ಪತ್ನಿ ಸ್ಮಿತಾ ಡಿಸೋಜಾ, ಮಕ್ಕಳಾದ ನಿಶಾ ಕ್ರಾಸ್ತ, ಶೋನ್ ಕ್ರಾಸ್ತ, …