ಮದವೇರಿದ ಆನೆಯಿಂದ ಮಾವುತ ಮೃತ್ಯು

ಪಾಲಕ್ಕಾಡ್: ಕುಟ್ಟನಾಡಿನಲ್ಲಿ ಆಚರಣೆ ವೇಳೆ ಮದವೇರಿದ ಆನೆ ಮಾವುತನನ್ನು ಕೊಂದಿದೆ. ಕೋಟಯಂ ನಿವಾಸಿ ಕುಂಞಿಮೋನ್ (50) ಮೃತಪಟ್ಟ ಮಾವುತ. ಕುಟ್ಟನಾಡಿನಲ್ಲಿ ಜರಗಿದ ಕಾರ್ಯಕ್ರಮವೊಂದಕ್ಕೆ ತರಲಾಗಿದ್ದ ವಳ್ಳಕುಳಂ ನಾರಾಯಣನ್ ಕುಟ್ಟಿ ಎಂಬ ಆನೆಗೆ ಮದವೇರಿದ್ದು, ನಿನ್ನೆ ರಾತ್ರಿ ಮಾವುತನನ್ನು ಕೊಂದಿದೆ. ಇನ್ನೋರ್ವನಿಗೂ ಗಾಯವುಂಟಾಗಿದೆ ಎಂದು ಮಾಹಿತಿ ಲಭಿಸಿದೆ. ಜೊತೆಗೆ ಸಮೀಪ ದಲ್ಲಿದ್ದ ವಾಹನಗಳನ್ನು ಕೂಡಾ ಆನೆ ನಾಶಪಡಿಸಿದೆ. 28 ಪ್ರದೇಶಗಳಿಂದಾಗಿ 47 ಆನೆಗಳನ್ನು ಇಲ್ಲಿಗೆ ತರಲಾಗಿತ್ತು. 10 ವರ್ಷಕ್ಕಿಂತಲೂ ಹೆಚ್ಚು ಕಾಲ ಇಲ್ಲಿ ಆನೆಗಳ ಮೆರವಣಿಗೆ ನಡೆಸಲಾಗುತ್ತಿದ್ದು, ಆನೆಗೆ …

ಕಾಸರಗೋಡಿನ ಎಟಿಎಂಗೆ ತುಂಬಿಸಲು ನೀಡಿದ 43.33 ಲಕ್ಷ ರೂ.ಲಪಟಾವಣೆ: ಬಳ್ಳೂರು, ಕಯ್ಯಾರು ನಿವಾಸಿಗಳಾದ ಇಬ್ಬರ ವಿರುದ್ದ ಕೇಸು

ಕಾಸರಗೋಡು: ಎಟಿಎಂಗೆ ತುಂಬಿಸಲು ನೀಡಿದ 43,33,000 ರೂಪಾಯಿಗಳನ್ನು ಲಪಟಾಯಿಸಿದ ಬಗ್ಗೆ ದೂರಲಾಗಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಇಬ್ಬರ ವಿರುದ್ಧ ಕಾಸರ ಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.ಸಿಎAಎಸ್ ಇನ್ಫೋಸಿಸ್ ಲಿಮಿಟೆಡ್ ಕಂಪೆನಿ ಆಪರೇಶನ್ ಬ್ರಾಂಡ್ ಮೆನೇಜರ್ ಕಲ್ಲಿಕೋಟೆ ಎರಿಂuಟಿಜeಜಿiಟಿeಜಪಾಲA ನಿವಾಸಿ ಶ್ರೀಜ್ಯೋತಿಷ್ ನೀಡಿದ ದೂರಿನಂತೆ ಮೊಗ್ರಾಲ್ ಪುತ್ತೂರು ಬಳ್ಳೂರು ಎಡಚ್ಚೇರಿ ನಿವಾಸಿ ಶರತ್ ಕುಮಾರ್ ಶೆಟ್ಟಿ (36), ಉಪ್ಪಳ ಕಯ್ಯಾರಿನ ಕೆ. ದಿವಾಕರನ್ (33) ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಇಬ್ಬರು ದೂರುದಾತ ಮೆನೇಜರ್ …

ಗಫೂರ್ ಹಾಜಿ ಕೊಲೆ ಪ್ರಕರಣ : ಇನ್ನೋರ್ವ ಸೆರೆ; ಏಳಕ್ಕೇರಿದ ಆರೋಪಿಗಳ ಸಂಖ್ಯೆ

ಕಾಸರಗೋಡು: ಪಳ್ಳಿಕ್ಕರೆ ಪೂಚಕ್ಕಾಡ್ ಫಾರೂಕಿ ಮಸೀದಿ ಬಳಿಯ ಬೈತುಲ್ ಮಂಜಿಲ್ನ ಗಲ್ಫ್ ಉದ್ಯೋಗಿ ಸಿ.ಎಂ. ಅಬ್ದುಲ್ ಗಫೂರ್ ಹಾಜಿ (55)ರನ್ನು ಕೊಲೆಗೈದ ಪ್ರಕರಣಕ್ಕೆ ಸಂಬAಧಿಸಿ ಇನ್ನೋರ್ವ ಆರೋಪಿ ಯನ್ನು ಈ ಪ್ರಕರಣದ ತನಿಖೆ ನಡೆಸುತ್ತಿರುವ ಕಾಸರಗೋಡು ಡಿಸಿಆರ್ಬಿ ಡಿವೈಎಸ್ಪಿ ಕೆ.ಜೆ. ಜೋನ್ಸನ್ ಬಂಧಿಸಿದ್ದಾರೆ.ಪಳ್ಳಿಕ್ಕೆರೆ ಪೂಚಕ್ಕಾಡ ಬಿಸ್ಮಿಲ್ಲಾ ರೋಡ್ನ ಅಲ್ ಬದರ್ ಮಂಜಿಲ್ ನಿವಾಸಿ ಈ ಹಿಂದೆ ಗಲ್ಫ್ನಲ್ಲಿದ್ದ ಪಿ.ಎಸ್. ಸೈಫುದ್ದೀನ್ ಬಾದ್ಷಾ (33) ಬಂಧಿತ ಆರೋಪಿ. ಈತನನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸ ಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.ಅಬ್ದುಲ್ ಗಫೂರ್ …

ಚಿರತೆ ಭೀತಿ ಮುಂದುವರಿಕೆ: ಇನ್ನೂ ಪತ್ತೆಯಾಗದ ತಪ್ಪಿಸಿಕೊಂಡ ಚಿರತೆ

ಕಾಸರಗೋಡು: ಕೊಳತ್ತೂರು ಮಡಂದಕ್ಕೋಡ್ ಗುಹೆಯಲ್ಲಿ ಕಂಡು ಬಂದ ಚಿರತೆ ಪರಾರಿಯಾದುದರೊಂದಿಗೆ ಸ್ಥಳೀಯರು ಭೀತಿಯಲ್ಲಿ ದಿನ ಕಳೆಯುತ್ತಿದ್ದಾರೆ. ಮೊನ್ನೆ ಸಂಜೆ ಕಂಡು ಬಂದ ಚಿರತೆ ನಿನ್ನೆ ಬೆಳಿಗ್ಗೆ ಅಲ್ಲಿಂದ ಪರಾರಿಯಾಗಿತ್ತು. ಚಿರತೆ ಇಲ್ಲಿಂದ ಓಡಿ ಹೋಗದಿರಲು ಸ್ಥಳೀಯರು ಗುಹೆಯ ಮುಂಭಾಗದಲ್ಲಿ ಕಲ್ಲುಗಳನ್ನಿರಿಸಿದ್ದರು. ಚಿರತೆಗೆ ಔಷಧಿ ಗುಂಡು ಹೊಡೆಯಲು ಬೇಕಾಗಿ ಗುಹೆಯ ಮುಂಭಾಗದಲ್ಲಿದ್ದ ಕಲ್ಲನ್ನು ತೆರವುಗೊಳಿಸಿದಾಗ ಅಲ್ಲಿಂದ ಚಿರತೆ ಪರಾರಿಯಾಗಿದೆ ಎಂದು ಸ್ಥಳೀ ಯರು ತಿಳಿಸಿದ್ದಾರೆ. ಈ ವೇಳೆ ಅದಕ್ಕೆ ಗುಂಡು ಹೊಡೆಯಲಾಯಿತಾದರೂ ಅದು ಚಿರತೆಗೆ ತಾಗಿಲ್ಲವೆನ್ನಲಾಗಿದೆ. ಚಿರತೆ ನಾಪತ್ತೆಯಾದ …

ನಿಧನ

ಕಾಸರಗೋಡು: ಗುಡ್ಡೆ ಟೆಂಪಲ್ ರಸ್ತೆಯ ನಿವಾಸಿ ಪಿ.ಆರ್. ರಿನ್ಶಿನ್ (36) ನಿಧನ ಹೊಂದಿದರು. ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಕಾಸರಗೋಡು ಘಟಕ ಮಾಜಿ ಅಧ್ಯಕ್ಷ, ಕಾಸರಗೋಡು ಪಿ.ಆರ್. ಅಸೋಸಿ ಯೇಟ್ಸ್‌ನ ಮಾಲಕನಾಗಿರುವ ಪಿ. ರಾಘವನ್‌ರ ಪುತ್ರನಾಗಿದ್ದಾರೆ. ಮೃತರು ತಂದೆ, ತಾಯಿ ಆರ್.ಪಿ. ಪ್ರೇಮಲತ, ಪತ್ನಿ ಅಲಿಶ, ಸಹೋದರರಾದ ಪಿ.ಆರ್. ರಾಹುಲ್, ಪಿ.ಆರ್. ರಾಖಿನ್, ಪಿ.ಆರ್. ರೋಶಿನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಅರ್ಧ ಬೆಲೆಗೆ ವಾಹನ ಭರವಸೆಯೊಡ್ಡಿ ವಂಚನೆ: ಪ್ರಕರಣ ಕ್ರೈಂ ಬ್ರಾಂಚ್‌ಗೆ ಹಸ್ತಾಂತರಿಸಲು ಎಡಿಜಿಪಿ ಶಿಫಾರಸು

ತಿರುವನಂತಪುರ: ಅರ್ಧ ಬೆಲೆಗೆ ವಾಹನ ಸಹಿತ ವಿವಿಧ ಉಪಕರಣ ಗಳನ್ನು ಒದಗಿಸಿಕೊಡುವುದಾಗಿ  ನಂಬಿಸಿ ಸಾವಿರಾರು ಮಂದಿಯಿಂದ ಹಣ ಪಡೆದು  ವಂಚಿಸಿದ ಪ್ರಕರಣದ ತನಿಖೆ ಯನ್ನು ಕ್ರೈಂಬ್ರಾಂಚ್‌ಗೆ ಹಸ್ತಾಂತರಿಸಲು ಎಡಿಜಿಪಿ ಮನೋಜ್ ಅಬ್ರಹಾಂ ರಾಜ್ಯ ಪೊಲೀಸ್ ವರಿಷ್ಠಾಧಿಕಾರಿಗೆ ಶಿಫಾರಸು ಮಾಡಿದ್ದಾರೆ. ಈ ವಂಚನೆಯ ಸೂತ್ರಧಾರನಾದ ತೊಡುಪುಳ ನಿವಾಸಿ ಅನಂತುಕೃಷ್ಣ ಎಂಬಾತನನ್ನು ಈಗಾಗಲೇ  ಬಂಧಿಸಲಾಗಿದೆ.  ಇದುವರೆಗೆ 72 ಕೇಸು ಗಳನ್ನು ದಾಖಲಿಸಲಾಗಿದೆ. ರಾಜ್ಯದಾ ದ್ಯಂತ 3600  ಮಂದಿ ದೂರುಗಳೊಂ ದಿಗೆ ಪೊಲೀಸರನ್ನು  ಸಂಪರ್ಕಿಸಿದ್ದಾರೆ. ಇದೀಗ ಲಭಿಸಿದ ದೂರುಗಳ ಪ್ರಕಾರ  500 …

ರಿಪೋ ದರ 0.25 ಶೇಕಡಾ ಕಡಿತ

ದೆಹಲಿ: ಐದು ವರ್ಷದ ಬಳಿಕ ಇದೇ ಮೊದಲ ಬಾರಿಗೆ ರಿಸರ್ವ್ ಬ್ಯಾಂಕ್ ದರ ಕಡಿತ ಮಾಡಿದೆ. ಇದರೊಂದಿಗೆ ರಿಪೋ ದರ 6.25 ಶೇಕಡಾವಾಗಿದೆ. ಕೇಂದ್ರ ರೆವೆನ್ಯೂ ಕಾರ್ಯದರ್ಶಿಯಾಗಿದ್ದ ಸಂಜಯ್ ಮಲ್ಹೋತ್ರಾ ಆರ್‌ಬಿಐ ಗವರ್ನರ್ ಆಗಿ ಹೊಣೆ ವಹಿಸಿಕೊಂಡ ಬಳಿಕದ ಮೊದಲ ಹಣ ನೀತಿ ಸಭೆಯಲ್ಲಿ ದರ ಕಡಿಮೆ ಮಾಡಲು ತೀರ್ಮಾನಿಸಲಾ ಗಿದೆ. ಆರು ಮಂದಿಯ ಸಮಿತಿ ಸಭೆಯಲ್ಲಿ ಗವರ್ನರ್ ಸಹಿತ ಐದು ಮಂದಿಯೂ ಹೊಸ ಸದಸ್ಯರಾಗಿದ್ದಾರೆ.

ಕಾಂಗ್ರೆಸ್‌ನಿಂದ ತಾಲೂಕು ಸಪ್ಲೈ ಕಚೇರಿ ಧರಣಿ

ಉಪ್ಪಳ: ಬೆಲೆಯೇರಿಕೆ, ಭ್ರಷ್ಟಾಚಾರ ದುರಾಡಳಿತೆಗಳಿಂದ  ಕಂಗೆಟ್ಟಿರುವ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ರೇಶನ್ ಅಂಗಡಿಗಳಲ್ಲಿ ಅಗತ್ಯ ಆಹಾರ ಧಾನ್ಯಗಳ ಕೊರತೆ  ಸೃಷ್ಟಿಯಾಗಿದ್ದು, ಎಡರಂಗ ಸರಕಾರ ಜನತೆಯ ಸಹನೆ ಪರೀಕ್ಷಿಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಕೀಂ ಕುನ್ನಿಲ್ ಆರೋಪಿಸಿದರು. ರೇಶನ್ ಅಂಗಡಿಗಳಲ್ಲಿ ಆಹಾರ ವಸ್ತುಗಳ ಅಲಭ್ಯತೆ ಪ್ರತಿಭಟಿಸಿ ಮಂಜೇಶ್ವರ, ಕುಂಬಳೆ ಬ್ಲೋಕ್ ಕಾಂಗ್ರೆಸ್ ಸಮಿತಿಗಳು ಜಂಟಿಯಾಗಿ ನಡೆಸಿದ  ಮಂಜೇಶ್ವರ ತಾಲೂಕು ಸಪ್ಲೈ ಕಚೇರಿ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ …

ಬದಿಯಡ್ಕ ಕೃಷ್ಣ ಪೈ ಸ್ಮರಣಾಂಜಲಿ 9ರಂದು

ಬದಿಯಡ್ಕ: ಕೇರಳ ರಾಜ್ಯ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ನೇತೃತ್ವದಲ್ಲಿ ದಿ| ಬದಿಯಡ್ಕ ಕೃಷ್ಣ ಪೈ ಅವರ ಸ್ಮರಣಾಂಜಲಿ ಕಾರ್ಯಕ್ರಮ ಈ ತಿಂಗಳ 9ರಂದು ಅಪರಾಹ್ನ ೨.೩೦ರಿಂದ ಬದಿಯಡ್ಕ ಗಣೇಶ್ ಪೈ ನಿವಾಸದಲ್ಲಿ ನಡೆಯಲಿದೆ. ನಿವೃತ್ತ ಪ್ರಾಂಶುಪಾಲ ಡಾ. ಬೇ.ಸಿ. ಗೋಪಾಲಕೃಷ್ಣ ಭಟ್ ಸಂಸ್ಮರಣಾ ಭಾಷಣ ಮಾಡುವರು. ಕ.ಸಾ.ಪ. ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಶಶಿಧರ ಶೆಟ್ಟಿ, ಡಾ| ಶ್ರೀನಿಧಿ ಸರಳಾಯ ಭಾಗವಹಿಸುವರು. ವಾಮನ್‌ರಾವ್ ಬೇಕಲ್, ಪ್ರೊ. ಎ. ಶ್ರೀನಾಥ್, ಉನ್ನತಿ ಪೈ, …

ಹೆಚ್ಚಿದ ತಾಪಮಾನ: ಜಾಗ್ರತೆ ಪಾಲಿಸಲು ಕರೆ

ತಿರುವನಂತಪುರ: ಕೇರಳದ   ಕೆಲವು ಕಡೆಗಳಲ್ಲಿ ಇಂದು ಸಾಧಾರಣಕ್ಕಿಂತಲೂ 2ರಿಂದ 3 ಡಿಗ್ರಿ ಸೆಲ್ಶಿಯಸ್ ವರೆಗೆ ತಾಪಮಾನ ಹೆಚ್ಚುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಹೆಚ್ಚಿದ ತಾಪಮಾನದಿಂದಾಗಿ ಬಿಸಿ ಉಂಟಾಗಿ ಅಸ್ವಸ್ಥತೆ ಸೃಷ್ಟಿಗೆ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಾಗ್ರತೆ ಪಾಲಿಸಬೇಕೆಂದು ರಾಜ್ಯ ವಿಕೋಪ ನಿವಾರಣಾ ಪ್ರಾಧಿಕಾರ ಮುನ್ನೆಚ್ಚರಿಕೆ ನೀಡಿದೆ. ಬೆಳಿಗ್ಗೆ 11ರಿಂದ ಸಂಜೆ 3 ಗಂಟೆವರೆಗಿರುವ ಸಮಯದಲ್ಲಿ ಸೂರ್ಯನ ಕಿರಣ ನೇರವಾಗಿ ದೇಹಕ್ಕೆ ಬೀಳದಂತೆ ಎಚ್ಚರ ವಹಿಸಬೇಕು, ಅಸ್ವಸ್ಥತೆ ಕಂಡುಬಂದರೆ …