ಮಾದಕ ಪದಾರ್ಥ ವಿತರಣೆಗೆ ವಾಟ್ಸಪ್ ಗ್ರೂಪ್ ರೂಪಿಸಿದ ಯುವಕ ಸೆರೆ

ಕಣ್ಣೂರು: ಎಂಡಿಎಂಎ ಸಹಿತದ ಮಾದಕ ಪದಾರ್ಥಗಳನ್ನು ವಿತರಣೆ ಮಾಡಲು ವಾಟ್ಸಪ್ ಗ್ರೂಪ್ ಸೃಷ್ಟಿಸಿದ ಯುವಕ ಸೆರೆಯಾಗಿದ್ದಾನೆ. ತಲಶ್ಶೇರಿ ಕಾಯೋತ್ ರಸ್ತೆ ನಿವಾಸಿ ರಿಯಾಸ್ ಅಂಬಾಲಿ (45)ನನ್ನು ಎಡಕ್ಕಾಡ್ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ವಿ. ಬಿಜುರವರ ನಿರ್ದೇಶ ಪ್ರಕಾರ ಎಸ್.ಐ. ಎನ್. ದಿಜೇಶ್ ಹಾಗೂ ತಂಡ ಸೆರೆ ಹಿಡಿದಿದೆ. ನಿನ್ನೆ ಬೆಳಿಗ್ಗೆ ಚಾಲದ ಖಾಸಗಿ ಆಸ್ಪತ್ರೆಯ ಕಾರು ಪಾರ್ಕಿಂಗ್ ಏರಿಯಾದಲ್ಲಿ ಈತನನ್ನು ಸೆರೆ ಹಿಡಿಯಲಾಗಿದೆ. ಕಾರು, ೮೨ ಮಿಲ್ಲಿಗ್ರಾಂ ಎಂಡಿಎಂಎಯನ್ನು ವಶಪಡಿಸಲಾಗಿದೆ. ಕಣ್ಣೂರು ಜಿಲ್ಲೆಯಲ್ಲಿ ಮಾದಕ ಪದಾರ್ಥ ವಿತರಿಸುವ ತಂಡದ …

ಪೆರ್ಣೆ ಕಳ ಶ್ರೀ ದೈವದ ಗದ್ದೆಯಲ್ಲಿ ಪಡ್ಡಯಿ ಧೂಮಾವತಿ ದೈವಕೋಲ

ಕುಂಬಳೆ: ಪೆರ್ಣೆ ಶ್ರೀ ಪಡ್ಡಯಿ ಧೂಮಾವತಿ ಹಾಗೂ ಪರಿವಾರ ದೈವಗಳ ನೇಮೋತ್ಸವ ಫೆ. 11,12 ರಂದು ಜರಗಲಿದೆ. 11ರಂದು ಸಂಜೆ 6.45ಕ್ಕೆ ಅನಂತಪುರ ತರವಾಡು ದೊಡ್ಡ ಮನೆಯಿಂದ ಶ್ರೀ ದೈವಗಳ ಭಂಡಾರ ವಾದ್ಯ ಘೋಷಗ ಳೊಂದಿಗೆ ಪೆರ್ಣೆ ಕಳ ಶ್ರೀ ದೈವದ ಗದ್ದೆಗೆ ಹೊರಡುವುದು. ರಾತ್ರಿ 8 ಗಂಟೆಗೆ ತೊಡಂಙಲ್, ಮೋಂದಿ ಕೋಲ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ.12ರಂದು ಬೆಳಗ್ಗೆ 8 ಗಂಟೆಗೆ ಶ್ರೀ ಬಬ್ಬರ್ಯ ದೈವದ ಕೋಲ, 10ಕ್ಕೆ ಶ್ರೀ ಸ್ಥಳ ಧೂಮಾವತಿ ದೈವದ ಕೋಲ …

ಪುರಂದರದಾಸ ಸಂಗೀತ ಕಲಾಮಂದಿರದಿಂದ ಸಂಗೀತ ಆರಾಧನೋತ್ಸವ ನಾಳೆಯಿಂದ

ಕಾಸರಗೋಡು: ಶ್ರೀಪುರಂದರ ದಾಸ ಸಂಗೀತ ಕಲಾಮಂದಿರದ 21ನೇ ಸಂಕೀರ್ತನಾ ಆರಾಧನೋತ್ಸವ ನಾಳೆ ಹಾಗೂ 9ರಂದು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದ ವ್ಯಾಸಮಂಟಪದಲ್ಲಿ ನಡೆಯಲಿದೆ. ನಾಳೆ ಬೆಳಿಗ್ಗೆ ಉದ್ಘಾಟನೆ ಬಳಿಕ ಸರಸ್ವತಿ ಕೃಷ್ಣನ್ ಮತ್ತು ಬಳಗ, ಕೆರೆಮನೆ ಮನಮೋಹನ ಮತ್ತು ಬಳಗ, ಯೋಗೀಶ್ ಶರ್ಮ ಬಳ್ಳಪದವು ಮತ್ತು ಬಳಗ, ಉಷಾ ಈಶ್ವರ ಭಟ್ ಮತ್ತು ಬಳಗ, ರಮ್ಯಾ ನಂಬೂದಿರಿ ಇವರಿಂದ ಹಾಡುಗಾರಿಕೆ ನಡೆಯಲಿದೆ. ಅಪರಾಹ್ನ ಕೋಳಿಕ್ಕಜೆ ಬಾಲ ಸುಬ್ರಹ್ಮಣ್ಯ ಭಟ್, ಡಾ. ಹೇಮಶ್ರೀ, ಶ್ರೀವಾಣಿ, ರಾಧಾಮುರಳೀಧರ, ವೀಕ್ಷಣ್ ಉಡುಪಿ, …

ನಗ್ನ ಫೋಟೋ ಪ್ರಚಾರ ಮಾಡುವುದಾಗಿ ಬೆದರಿಸಿಯುವಕನಿಂದ 10 ಲಕ್ಷ ರೂ. ಎಗರಿಸಿದ ಆರೋಪಿ ಸೆರೆ

ಬದಿಯಡ್ಕ:  ಸಾಮಾಜಿಕ ಜಾಲತಾಣ ಮೂಲಕ ಪರಿಚಯಗೊಂಡ ಬದಿಯಡ್ಕ ಬಳಿಯ ನಿವಾಸಿಯಾಗಿರುವ ಯುವಕನಿಂದ ನಗ್ನ ಚಿತ್ರ ಹಾಗೂ  ವೀಡಿಯೋ ಕಾಲ್‌ಗಳನ್ನು  ಪಡೆದು ಬಳಿಕ ಅದನ್ನು ಆತನಿಗೆ ತಿಳಿಯದೆ ರೆಕಾರ್ಡ್ ಮಾಡಿ ಅದನ್ನು ವಾಟ್ಸಪ್ ಇತ್ಯಾದಿಗಳ ಮೂಲಕ ಪ್ರಚಾರ ಮಾಡುವುದಾಗಿ ಬೆದರಿಸಿ ಆತನಿಂದ ಹಲವು ಬಾರಿಯಾಗಿ 10,05,000 ರೂ.  ಎಗರಿಸಿದ  ಪ್ರಕರಣದ ಆರೋಪಿಯನ್ನು  ಪೊಲೀಸರು ಬಂಧಿಸಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಕೊಳಂಬೆ ತಿಮ್ಮಪ್ಪಶ್ರುತಿ ನಿವಾಸಿ ಅಶ್ವತ್ಥ್ ಆಚಾರ್ಯ (30) ಬಂಧಿತ ಆರೋಪಿ.   ಹಣ ಕಳೆದುಕೊಂಡ ಯುವಕ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು …

ಬಸ್‌ನಲ್ಲಿ ಮಹಿಳೆಯ ಬ್ಯಾಗ್ ಕಳವು ಮೂವರು ಮಹಿಳೆಯರು ಕಸ್ಟಡಿಗೆ

ಉಪ್ಪಳ: ಬಸ್ ಪ್ರಯಾಣ ಮಧ್ಯೆ ಮಹಿಳೆಯ ಮೊಬೈಲ್ ಫೋನ್ ಹಾಗೂ 8000 ರೂಪಾಯಿ ಇದ್ದ ಬ್ಯಾಗ್ ಕಳವು ಗೈದ ಪ್ರಕರಣದಲ್ಲಿ ತಮಿಳುನಾಡು ನಿವಾಸಿಗಳಾದ ಮೂವರು ಮಹಿಳೆಯರನ್ನು ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಕಾಸರ ಗೋಡು ಮಹಿಳಾ ಪೊಲೀಸ್ ಠಾಣೆಯಲ್ಲಿ ಹಾಜರುಪಡಿಸಿರುವ ಇವರನ್ನು ಸಮಗ್ರವಾಗಿ ತನಿಖೆಗೊಳಪಡಿಸಿದ ಬಳಿಕ ಇಂದು ಬಂಧನ ದಾಖಲಿಸುವ ಸಾಧ್ಯತೆ ಇದೆ. ಹಲವು ಕಳವು ಪ್ರಕರಣಗಳಲ್ಲಿ ಶಾಮೀಲಾದವರು ಇವರಾಗಿದ್ದಾ ರೆಂದು ಪೊಲೀಸರು ತಿಳಿಸಿದ್ದಾರೆ. ಮಂಜೇಶ್ವರ ಕುಂಜತ್ತೂರು ಮಾಡದ ಪ್ರಭಾಕರ ಎಂಬವರ ಪತ್ನಿ ತಾರಾಮಣಿ (59) ಮೊನ್ನೆ …

ಎರಡೆಡೆ ಅಬಕಾರಿ ದಾಳಿ: ಕರ್ನಾಟಕ ಮದ್ಯ ವಶ

ಕಾಸರಗೋಡು: ಅಬಕಾರಿ ತಂಡ ನಿನ್ನೆ ಎರಡುಕಡೆಗಳಲ್ಲಿ ನಡೆಸಿದ ದಾಳಿಯಲ್ಲಿ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ಇಬ್ಬರ ವಿರುದ್ಧ  ಕೇಸು ದಾಖಲಿಸಲಾಗಿದೆ. ಅಡೂರು ನಾಗತ್ತುಮೂಲೆಯಲ್ಲಿ ಸ್ಟ್ರೈಕಿಂಗ್ ಫೋರ್ಸ್ ಕರ್ತವ್ಯದ ಅಂಗವಾಗಿ ಬದಿಯಡ್ಕ ಎಕ್ಸೈಸ್ ಇನ್‌ಸ್ಪೆಕ್ಟರ್ ಸೈಯದ್ ಮುಹಮ್ಮದ್ ವೈ  ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲ್ಲಿ ೭.೫೬ ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿದೆ. ಇದಕ್ಕೆ ಸಂಬಂಧಿಸಿ ನಾಗತ್ತುಮೂಲೆ ನಿವಾಸಿ ಚಂದ್ರನ್ ಬಿ (38) ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಪ್ರಿವೆಂಟೀವ್ ಆಫೀಸರ್ ಮಂಜು ನಾಥ ಆಳ್ವ …

ಕೊಳತ್ತೂರು: ಗುಹೆಯೊಳಗೆ ಅವಿತಿದ್ದ ಚಿರತೆ ಪರಾರಿ; ವಿವಿಧೆಡೆ ಶೋಧ

ಕಾಸರಗೋಡು: ಕೊಳತ್ತೂರಿನಲ್ಲಿ ಗುಹೆಯೊಳಗೆ ಚಿರತೆಯೊಂದು ಕಾಣಿಸಿಕೊಂಡಿದ್ದು ಅರಣ್ಯಾಧಿಕಾರಿಗಳು ತಲುಪಿ ಶೋಧ ನಡೆಸುವಷ್ಟರಲ್ಲಿ ಅದು ಪರಾರಿಯಾಗಿದೆ. ಕೊಳತ್ತೂರು ಮಡಂದಕ್ಕೋಡ್ ಎಂಬಲ್ಲಿ ಚಿರತೆ ಕಂಡು ಬಂದ ಬಗ್ಗೆ ನಾಗರಿಕರು ನೀಡಿದ ದೂರಿನಂತೆ ವಯನಾಡ್‌ನಿಂದ ವೈದ್ಯರು ಒಳಗೊಂಡ ತಂಡ ತಲುಪಿ ಶೋಧ ಆರಂಭಿಸಿದೆ. ಇಂದು ಮುಂಜಾನೆ 3 ಗಂಟೆ ವೇಳೆ ಚಿರತೆ ಇರುವ ಸ್ಥಳವನ್ನು ಗುರುತಿಸಿ ತಂಡ ಮಾದಕಗುಂಡು ಹಾರಿಸಿತ್ತು. ಅಷ್ಟರಲ್ಲಿ ಚಿರತೆ ಅಲ್ಲಿಂದ ಓಡಿ ಹೋಗಿದೆ. ಗುಂಡು ಚಿರತೆಗೆ ತಾಗಿರಬಹುದೆಂದು ಅಂದಾ ಜಿಸಲಾಗಿದೆ. ನಿನ್ನೆ ಸಂಜೆ ಚಾಳಕ್ಕೋಡ್ ಮಡಂದಕ್ಕೋಡ್ ಎಂಬಲ್ಲಿನ …

ಕಾಂಗ್ರೆಸ್‌ನಿಂದ ತಾಲೂಕು ಕಚೇರಿ ಮುಂದೆ ಧರಣಿ ಮುಷ್ಕರ

ಕಾಸರಗೋಡು: ರೇಶನ್ ಅಂಗಡಿ ಗಳಲ್ಲಿ ಅವಶ್ಯಕ ಸಾಮಗ್ರಿಗಳು ಸರಿಯಾಗಿ ಪೂರೈಸದೇ ಇರುವ ರಾಜ್ಯ ಸರಕಾರದ ನಿಲುವನ್ನು ಪ್ರತಿಭಟಿಸಿ ಇಂದು ಬೆಳಿಗ್ಗೆ ಕಾಸರ ಗೋಡು, ಮಂಜೇಶ್ವರ, ಹೊಸದುರ್ಗ  ಮತ್ತು ವೆಳ್ಳರಿಕುಂಡ್ ತಾಲೂ ಕು ಸಪ್ಲೈ ಕಚೇರಿಗಳಿಗೆ ಕಾಂಗ್ರೆಸ್‌ನ ಆಯಾ ಬ್ಲೋಕ್ ಸಮಿತಿಗಳ ನೇತೃತ್ವ ದಲ್ಲಿ ಮಾರ್ಚ್ ಮತ್ತು ಧರಣಿ ಮುಷ್ಕರ ಹೂಡಲಾಯಿತು. ಇದರಂತೆ ಕಾಸರಗೋಡು ತಾಲೂಕು ಸಪ್ಲೈ ಕಚೇರಿ ಮುಂದೆ ನಡೆದ ಧರಣಿ ಮುಷ್ಕರವನ್ನು  ಕೆಪಿಸಿಸಿ ಕಾರ್ಯದರ್ಶಿ ಕೆ. ನೀಲಕಂಠನ್ ಉದ್ಘಾಟಿಸಿದರು.  ಮಂಜೇಶ್ವರದಲ್ಲಿ ಹಕೀಂ ಕುನ್ನಿಲ್, ಹೊಸದುರ್ಗದಲ್ಲಿ ಕಾಂಗ್ರೆಸ್ …

ಇಷ್ಟ ಪ್ರಕಾರ ಜೀವಿಸಲು ಬಿಡದ ತಂದೆಯನ್ನು ಕಡಿದು ಕೊಲೆಗೈದ ಮಗ

ತಿರುವನಂತಪುರ: ಇಷ್ಟಪ್ರಕಾರ ಜೀವಿಸಲು ಬಿಡುತ್ತಿಲ್ಲವೆಂಬ ಕಾರಣ ದಿಂದ ತಂದೆಯನ್ನು ಪುತ್ರನೋರ್ವ ಕಡಿದು ಕೊಲೆಗೈದ ಘಟನೆ ತಿರುವನಂತಪುರ ವೆಳ್ಳರಡ ಎಂಬಲ್ಲಿ ನಡೆದಿದೆ.  ಕಿಳಿಯೂರು ನಿವಾಸಿ ಜೋಸ್ (70) ಎಂಬವರು ಕೊಲೆಗೀಡಾದ ವ್ಯಕ್ತಿ. ಕೊಲೆಕೃತ್ಯದ ಬಳಿಕ ಪುತ್ರ ಪ್ರಜಿಲ್ (28) ಪೊಲೀ ಸ್ ಠಾಣೆಗೆ ತಲುಪಿ ಶರಣಾಗಿದ್ದಾನೆ. ನಿನ್ನೆ ರಾತ್ರಿ 9.45ರ ವೇಳೆ ಈ ಭೀಕರ ಕೃತ್ಯ ನಡೆದಿದೆ. ಮಗನಿಂದ ಆಕ್ರಮಣಕ್ಕೀಡಾದ ಜೋಸ್‌ರ ಬೊಬ್ಬೆ ಕೇಳಿ ಪತ್ನಿ ಸುಶ್ಮ ತಲುಪಿ ನೋಡಿದಾಗ ಜೋಸ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ವಿಷಯ ತಿಳಿದು …

ಕ್ರಿಸ್ಮಸ್ ಬಂಪರ್: ದ್ವಿತೀಯ ಬಹುಮಾನ ಕುಂಬಳೆಗೆ

ಕುಂಬಳೆ: ನಿನ್ನೆ ಡ್ರಾ ನಡೆದ ಕೇರಳ ಸರಕಾರದ ಕ್ರಿಸ್ಮಸ್-ನ್ಯೂ ಇಯರ್ ಲಾಟರಿಯ ದ್ವಿತೀಯ ಬಹುಮಾನವಾದ ೧ ಕೋಟಿ ರೂಪಾಯಿ ಕುಂಬಳೆಯಲ್ಲಿ  ಮಾರಾಟವಾದ ಟಿಕೆಟ್‌ಗೆ ಲಭಿಸಿದೆ. ಕುಂಬಳೆ ಬಸ್ ನಿಲ್ದಾಣದಲ್ಲಿರುವ ಮಂಜುನಾಥ ಸ್ವಾಮಿ ಲಾಟರಿ ಏಜೆನ್ಸಿಯಿಂದ ಮಾರಾಟವಾದ x173582 ನಂಬ್ರದ ಟಿಕೆಟ್‌ಗೆ ಬಹುಮಾನ ಲಭಿಸಿದೆ. ಇತ್ತೀಚೆಗೆ ಕಣಿಪುರ ಕ್ಷೇತ್ರ ಜಾತ್ರೆ ಸಂದರ್ಭದಲ್ಲಿ ಈ ಟಿಕೆಟ್ ಮಾರಾಟವಾಗಿದ್ದು, ಆದರೆ ಬಹುಮಾನ ಲಭಿಸಿದ ವ್ಯಕ್ತಿ ಯಾರೆಂದು ತಿಳಿದುಬಂದಿಲ್ಲವೆಂದು ಲಾಟರಿ ಏಜೆಂಟ್ ರಾಮಚಂದ್ರ ಮಣಿಯಾಣಿ ತಿಳಿಸಿದ್ದಾರೆ.