ಸರ್ವೀಸ್ ರಸ್ತೆಯ ಹಂಪ್‌ನಲ್ಲಿ ಚಾಲಕನ ಅಶ್ರದ್ಧೆ: ಪ್ರಯಾಣಿಕ ಬಿದ್ದು ಗಾಯ

ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಯ ಸರ್ವೀಸ್ ರಸ್ತೆಯಲ್ಲಿ ಹಂಪ್‌ನ ಮೇಲೆ ವೇಗ ಕಡಿಮೆಮಾಡದೆ ಸಂಚರಿಸಿದ ಬಸ್‌ನೊಳಗೆ ಪ್ರಯಾ ಣಿಕನೋರ್ವ ಬಿದ್ದು ಗಾಯಗೊಂಡ ಘಟನೆ ನಡೆದಿದೆ. ಕುಂಬಳೆ ಕೊಡ್ಯಮೆ ನಿವಾಸಿ ಕೆ.ಕೆ. ಮುಹಮ್ಮದ್ ಹನೀಫ್ (48) ಬಿದ್ದುಗಾಯಗೊಂಡಿದ್ದಾರೆ. ಅವರ ಒಂದು ಹಲ್ಲು ಕಿತ್ತುಹೋಗಿದ್ದು, ತುಟಿಗೆ ಗಾಯಗಳಾಗಿದೆ. ನಿನ್ನೆ ಮಧ್ಯಾಹ್ನ ಒಂದು ಗಂಟೆ ವೇಳೆ ಕಾಸರಗೋಡು ತಾಳಿಪಡ್ಪಿನಲ್ಲಿ ಅಪಘಾತವುಂಟಾಗಿದೆ. ಕಾಸರಗೋಡಿನಿಂದ  ಮಂಗಳೂರಿಗೆ ತೆರಳುತ್ತಿದ್ದ ಕರ್ನಾಟಕ  ಕೆಎಸ್‌ಆರ್ ಟಿಸಿ ಬಸ್‌ನಲ್ಲಿ ಮುಹಮ್ಮದ್  ಹನೀಫ್ ಪ್ರಯಾಣಿಸುತ್ತಿದ್ದರು. ಬಸ್ ತಾಳಿಪಡ್ಪುವಿಗೆ ತಲುಪಿದಾಗ ಹಂಪ್‌ನ ಮೇಲೆ …

ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವಾಹನಗಳು ಕುಂಬಳೆ ಠಾಣೆ ಪರಿಸರದಲ್ಲಿ ತುಕ್ಕು ಹಿಡಿದು ನಾಶದತ್ತ

ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ಸಮೀಪ ಹಾಗೂ ಶಾಲಾ ಮೈದಾನ ಸುತ್ತ ವಾಹನಗಳು ರಾಶಿ ಬಿದ್ದು ತುಕ್ಕು ಹಿಡಿದು ನಾಶದ ಹಂತಕ್ಕೆ ತಲುಪಿವೆ. ಕುಂಬಳೆ ಪೊಲೀಸರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ವಶಪಡಿಸಿಕೊಂಡ ವಾಹನಗಳು ಇದಾಗಿವೆ. ಪೊಲೀಸ್ ಠಾಣೆ ಆವರಣದೊಳಗೆ ಸೌಕರ್ಯ ವಿಲ್ಲದುದರಿಂದ ಶಾಲಾ ಮೈದಾನ ಸಮೀಪ ವಾಹನಗಳನ್ನು ನಿಲ್ಲಿಸಲಾಗಿದೆ. ಗುಜರಿ ವ್ಯಾಪಾರಿಗಳೂ ಖರೀದಿಸಲು ಹಿಂಜರಿಯುವ ರೀತಿಯಲ್ಲಿ ಈ ವಾಹನಗಳು ತುಕ್ಕು ಹಿಡಿದಿವೆ. ಈ ಹಿಂದೆ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ವಾಹನಗಳನ್ನು ಇಲ್ಲಿಂದ ತೆರವುಗೊಳಿಸಲು ಹರಾಜು ಕ್ರಮ ಕೈಗೊಂಡಿದ್ದರು. …

ಸಿಪಿಎಂ ಜಿಲ್ಲಾ ಸಮ್ಮೇಳನಕ್ಕೆ ಅದ್ದೂರಿಯ ಚಾಲನೆ

ಹೊಸದುರ್ಗ: ಸಿಪಿಎಂ ಜಿಲ್ಲಾ ಸಮ್ಮೇಳನಕ್ಕೆ ಹೊಸದುರ್ಗದಲ್ಲಿ ನಿನ್ನೆ ಅದ್ದೂರಿಯ ಚಾಲನೆ ನೀಡಲಾಗಿದೆ. ಇದು ಇಡೀ ಹೊಸದುರ್ಗ ನಗರವನ್ನೇ ಕೆಂಪುಮಯಗೊಳಿಸಿದೆ. ಸಿಪಿಎಂ ಪೋಲಿಟ್ ಬ್ಯೂರೋ ಸದಸ್ಯ ಎ. ವಿಜಯರಾಘವನ್  ಪ್ರತಿ ನಿಧಿ ಸಮ್ಮೇಳನವನ್ನು ನಿನ್ನೆ ಉದ್ಘಾಟಿ ಸಿದರು. ಜನರಲ್ಲಿ ಕೋಮುಭಾವನೆ ಮೂಡಿಸಿ ಕೇರಳದ ಅಭಿವೃದ್ಧಿ ಬೆಳವಣಿಗೆಯನ್ನು ತಡೆಗಟ್ಟಲು ಕೆಲವರು ವ್ಯಾಪಕ ಯತ್ನ ನಡೆಸುತ್ತಿದ್ದಾರೆ. ಆದರೆ ಕೇರಳದಲ್ಲಿ ಕೆಂಪು ಧ್ವಜ ಹಾರಾಡುವ ತನಕ  ಅಂತಹ ಯತ್ನಗಳನ್ನು  ಎದುರಿಸಿ ಹಿಮ್ಮೆಟ್ಟಿಸಲಾಗುವುದೆಂದು ವಿಜಯರಾಘವನ್ ನುಡಿದರು. ಕಳೆದ ಸಂಸತ್ ಚುನಾವಣೆಯಲ್ಲಿ ಕೇರಳದಲ್ಲಿ  ಕೋಮು ಧ್ರುವೀಕರಣ …

ನಿಧನ

ಪೆರ್ಮುದೆ: ಧರ್ಮತ್ತಡ್ಕ ಶ್ರೀ ದು ರ್ಗಾಪರ ಮೇಶ್ವರಿ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕಿ ಶಾರದಾ ಅಮ್ಮ ಎನ್. (76) ನಿಧನ ಹೊಂದಿದರು. ದಿ| ನೇರೋಳು ನಿಡುವಜೆ ಸುಬ್ಬಣ್ಣ ಭಟ್‌ರ ಪತ್ನಿಯಾಗಿದ್ದಾರೆ. ಮೃತರು ಮಕ್ಕಳಾದ ಎನ್. ರಾಮಚಂದ್ರ ಭಟ್ (ಧರ್ಮತ್ತಡ್ಕ ಶಾಲೆಯ ಪ್ರಾಂಶುಪಾಲ), ಎನ್. ಮಹಾಲಿಂಗ ಭಟ್ (ಮುಖ್ಯೋ ಪಾಧ್ಯಾಯ), ಶಂಕರನಾರಾಯಣ ಭಟ್ (ಮೆನೇಜರ್), ರೇವತಿ, ಪರಮೇಶ್ವರಿ ಅಮ್ಮ, ಗಂಗಮ್ಮ, ಸೊಸೆಯಂದಿರಾದ ವಿದ್ಯಾಸರಸ್ವತಿ, ವಿಜಯಶ್ರೀ, ಉಷಾ ಪದ್ಮ, ಅಳಿಯಂದಿರಾದ ಶಂಕರ ರಾವ್, ಭಾಸ್ಕರ ಉಪಾಧ್ಯಾಯ, ರವಿಶಂಕರ, ಸಹೋದರ ಕೊಕ್ಕಡ ಈಶ್ವರ ಭಟ್ …

ನಿಧನ

ಕಾಸರಗೋಡು: ಖಾಸಗಿ ವಿಮಾ ಕಂಪೆನಿಯ ಸೀನಿಯರ್ ಏರಿಯಾ ಮೆನೇಜರ್ ಆಗಿದ್ದ ಅಡ್ಕತ್ತಬೈಲು ಜಿ.ಟಿ ರಸ್ತೆ ಕೋಟೆವಳಪ್ ನಿವಾಸಿ ಎನ್. ಕೃಷ್ಣನ್ (52) ನಿಧನ ಹೊಂದಿದರು. ಅಸೌಖ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಯ ಲ್ಲಿದ್ದರು. ದಿವಂಗತರಾದ ನಾರಾ ಯಣನ್- ಸುಂದರಿ ದಂಪತಿ ಪುತ್ರನಾಗಿದ್ದಾರೆ. ಮೃತರು ಪತ್ನಿ ಲಲಿತ, ಮಕ್ಕಳಾದ ಶ್ರೀನಂದ್, ಕೃಷ್ಣವ್, ಸಹೋದರರಾದ ಗಣೇಶ, ಗಂಗಾಧರ, ಸಹೋದರಿಯರಾದ ಬೇಬಿ, ಜಯಂತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಖಾಸಗಿ ಕಟ್ಟಡದಿಂದ ಕಾಂಕ್ರೀಟ್ ತುಂಡುಗಳು ಬಿದ್ದು ಸ್ಕೂಟರ್ ಹಾನಿ: ಅಪಾಯದಿಂದ ಪಾರು

ಉಪ್ಪಳ: ಉಪ್ಪಳ ಬಸ್ ನಿಲ್ದಾಣದ ಬಳಿಯಲ್ಲಿ ವ್ಯಾಪಾರ ಸಂಸ್ಥೆಗಳು ಹೊಂದಿರುವ ಖಾಸಗಿ ಕಟ್ಟಡದ ಸನ್‌ಶೇಡ್‌ನ ಕಾಂಕ್ರೀಟ್ ತುಂಡುಗಳು ಕೆಳಭಾಗದಲ್ಲಿರುವ ವ್ಯಾಪಾರ ಸಂಸ್ಥೆಗಳ ಮುಂಭಾಗಕ್ಕೆ ಬಿದ್ದು ವ್ಯಾಪಾರಿ ಅಬ್ದುಲ್ ರಹಿಮಾನ್ ಎಂಬವರ ಸ್ಕೂಟರ್ ಹಾನಿಗೀಡಾಗಿದೆ. ನೌಕರ ಹಾಗೂ ಗ್ರಾಹಕರು ಕೂದಲೆಳೆ ಅಂತರದಿAದ ಪಾರಾಗಿದ್ದಾರೆ. ಇದರಿಂದ ಸಾವಿರಾರು ರೂ. ನಷ್ಟ ಉಂಟಾಗಿರುವುದಾಗಿ ದೂರಲಾಗಿದೆ. ಅಲ್ಲದೆ ಎರಡು ವಾರದ ಹಿಂದೆ ಇದೇ ಕಟ್ಟಡದ ಜ್ಯೂಸ್ ವ್ಯಾಪಾರಿಯಾದ ಅಬ್ದುಲ್ಲ ಎಂಬವರ ಅಂಗಡಿಯ ಶೀಟ್‌ನ ಮೇಲ್ಭಾಗಕ್ಕೆ ಬಿದ್ದು ಶೀಟ್ ಹಾನಿಗೊಂಡಿದೆ. ಪದೇ ಪದೇ ಕಾಂಕ್ರೀಟ್ …

ನಾರಂಪಾಡಿ ಕ್ಷೇತ್ರ ಬ್ರಹ್ಮಕಲಶೋತ್ಸವ:  ಶ್ರೀ ಉಮಾ ಮಹೇಶ್ವರ ಸಹಿತ ಪರಿವಾರ ದೇವರ ಪ್ರತಿಷ್ಠೆ ನಾಳೆ

ನಾರಂಪಾಡಿ: ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದ ನವೀಕರಣ ಅಷ್ಟಬಂಧ ಬ್ರಹ್ಮಕಲಶೋತ್ಸವದಲ್ಲಿ  ನಾಳೆ ಬೆಳಿಗ್ಗೆ 5ರಿಂದ 108 ಕಾಯಿ ಗಣಪತಿಹೋಮ, 9.55ರಿಂದ ಶ್ರೀ ಉಮಾಮಹೇಶ್ವರ ಮತ್ತು ಪರಿವಾರ ದೇವರ ಪ್ರತಿಷ್ಠೆ ನಡೆಯಲಿದೆ. ಇದರಂಗವಾಗಿ ಜೀವಕಲಶಾಭಿಷೇಕ, ನಿದ್ರಾಕಲಶಾಭಿಷೇಕ, ಪ್ರತಿಷ್ಠಾಬಲಿ, ಮಹಾಪೂಜೆ ಮೊದಲಾದ ಕಾರ್ಯ ಕ್ರಮಗಳು ನಡೆಯಲಿದೆ.  11ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು.  ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ತಲೇಕ ಅಧ್ಯಕ್ಷತೆ ವಹಿಸುವರು.  ಮಾಯಿಪ್ಪಾಡಿ ಅರಮನೆಯ ದಾನಮಾರ್ತಾಂಡ …

ಕಣ್ಣೂರು ನಿವಾಸಿ ನರ್ಸಿಂಗ್ ವಿದ್ಯಾರ್ಥಿನಿ ಬೆಂಗಳೂರಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ

ಬೆಂಗಳೂರು: ಕೇರಳೀಯ ಳಾದ ನರ್ಸಿಂಗ್ ವಿದ್ಯಾರ್ಥಿನಿ ಬೆಂಗಳೂರಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ರಾಮ್‌ನಗರದ ಡಾ| ಚಂದ್ರಮ್ಮ ದಯಾನಂದ ಸಾಗರ್ ಕಾಲೇಜಿನ ಪ್ರಥಮ ವರ್ಷ ಬಿಎಸ್‌ಸಿ ವಿದ್ಯಾರ್ಥಿನಿ ಅನಾಮಿಕ (19) ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚ ಲಾಗಿದೆ. ಕಣ್ಣೂರು ನಿವಾಸಿಯಾದ ಈಕೆ ಹಾಸ್ಟೆಲ್ ಕೊಠಡಿಯಲ್ಲಿ ಮಂಗಳವಾರ ರಾತ್ರಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ರಾತ್ರಿಯ ಊಟಕ್ಕೆ ತಲುಪದ ಹಿನ್ನೆಲೆಯಲ್ಲಿ ಸಹಪಾಠಿಗಳು ಕೊಠಡಿಗೆ ತೆರಳಿ ಬಾಗಿಲು ತಟ್ಟಿದರಾದರೂ ಪ್ರತಿಕ್ರಿಯೆ ಉಂಟಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಾಗಿಲು ತೆರೆದು ಒಳ ಪ್ರವೇಶಿಸಿದಾಗ ವಿದ್ಯಾರ್ಥಿನಿ ಮೃತಪಟ್ಟ ಸ್ಥಿತಿಯಲ್ಲಿ …

ಕೊಲ್ಲಂನಲ್ಲಿ ಸಿಪಿಎಂ-ಸಿಪಿಐ ಮಧ್ಯೆ ಭಿನ್ನಾಭಿಪ್ರಾಯ ತೀವ್ರ: ಕಾರ್ಪೊರೇಷನ್‌ನ ಡೆಪ್ಯುಟಿ ಮೇಯರ್, ಸ್ಥಾಯಿ ಸಮಿತಿಗೆ ಸಿಪಿಐ ರಾಜೀನಾಮೆ

ಕೊಲ್ಲಂ: ಎಡರಂಗ ಆಡಳಿತ ದಲ್ಲಿರುವ ಕೊಲ್ಲಂ ಕಾರ್ಪೊರೇಷನ್‌ನ ಡೆಪ್ಯುಟಿ ಮೇಯರ್, ಸಿಪಿಐ ಪ್ರತಿನಿಧಿಯಾದ ಮಧು ಸಹಿತ ಸಿಪಿಐಯ ಇಬ್ಬರು ಸ್ಥಾಯಿ ಸಮಿತಿ ಅಧ್ಯಕ್ಷರು ರಾಜೀನಾಮೆ ನೀಡಿದರು. ಕಾರ್ಪೊರೇಷನ್ ಚುನಾವಣೆಯ ಹಿನ್ನೆಲೆಯಲ್ಲಿ ಮಾಡಿಕೊಂಡ ಒಪ್ಪಂದ ಪ್ರಕಾರ ಕಾರ್ಪೊರೇಷನ್ ಮೇಯರ್ ಸ್ಥಾನವನ್ನು ಎರಡೂ ಪಕ್ಷಗಳು ಹಂಚಿಕೊಳ್ಳಬೇ ಕೆಂದಾಗಿತ್ತು. ಮೊದಲಾರ್ಧದಲ್ಲಿ ಮೇಯರ್ ಆದ ಸಿಪಿಎಂನ ಪ್ರಸನ್ನ ಏನಸ್ ಈ ಒಪ್ಪಂದ ಪ್ರಕಾರ ನಿನ್ನೆ ರಾಜೀನಾಮೆ ನೀಡಬೇಕಾಗಿತ್ತು. ಆ ಬಳಿಕ ಸಿಪಿಐಗೆ ಮೇಯರ್ ಸ್ಥಾನವನ್ನು ನೀಡಬೇಕಾಗಿತ್ತು. ಆದರೆ ನಿನ್ನೆ 5 ಗಂಟೆವರೆಗೆ ಅವರು …

ವಿದ್ಯಾರ್ಥಿಗಳನ್ನು ಕನಸು ಕಾಣಲು ಪ್ರಾಪ್ತಗೊಳಿಸಬೇಕು- ಯು.ಟಿ. ಖಾದರ್

ಪುತ್ತಿಗೆ: ಅನುದಿನವೂ ಬದಲಾ ವಣೆಗಳಿಗೆ ವಿಧೇಯವಾಗುತ್ತಿರುವ  ನೂತನ ವಿಶ್ವದಲ್ಲಿ ಶಿಕ್ಷಣ ರಂಗದಲ್ಲಿ ಹೊಸ ಕನಸುಗಳನ್ನು ಕಾಣಲು ವಿದ್ಯಾರ್ಥಿಗಳನ್ನು ಪ್ರಾಪ್ತಗೊಳಿಸ ಬೇಕೆಂದು ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಅಭಿಪ್ರಾಯ ಪಟ್ಟರು. ಮುಹಿಮ್ಮಾತ್ ನಲ್ಲಿ ನಡೆದ ತ್ವಾಹಿರುಲ್ ಅಹ್ದಲ್ ತಂಙಳ್‌ರ ಉರೂಸ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಈ ಹಿಂದಿನ ಕಾಲದ ವಿದ್ಯಾರ್ಥಿಗಳು ಕಂಡ ಕನಸುಗಳಾಗಿವೆ ಇಂದಿನ ವಿಜ್ಞಾನ ಬೆಳವಣಿಗೆಗೆ ಆಧಾರವೆಂದು ಅವರು ನುಡಿದರು. ಮುಹಿಮ್ಮಾತ್‌ನಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗಾಗಿ ನಡೆಸುವ ಸೇವೆಗಳು ಅಭಿನಂದನಾರ್ಹವೆಂದು ಅವರು ನುಡಿದರು. ಅಬ್ದುಲ್ …