990 ಗ್ರಾಂ ಗಾಂಜಾ ಪತ್ತೆ: ಇಬ್ಬರ ಸೆರೆ 

ಕುಂಬಳೆ: ಚುಕ್ಕಿನಡ್ಕ ಬೈತಲ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 990 ಗ್ರಾಂ ಗಾಂಜಾವನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಮಂಗಳೂರು ಕೋಟೆಕಾರು ನಿವಾಸಿ ಅಬ್ಬಾಸ್ (47) ಮತ್ತು ಚುಕ್ಕಿನಡ್ಕದ ಅಬ್ದುಲ್ಲ (64) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಕುಂಬಳೆ  ಇನ್‌ಸ್ಪೆಕ್ಟರ್ ಕೆ. ವಿನೋದ್ ಕುಮಾರ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. 

ದೇವಿಪ್ರಸಾದ್ ಮಾವೆ ಆಸ್ಪತ್ರೆಯಲ್ಲಿ ಮೊಣಗಂಟಿನ ಮರುಜೋಡಣಾ ಶಸ್ತ್ರಚಿಕಿತ್ಸೆ ಯಶಸ್ವಿ

ಉಪ್ಪಳ: ಮಂಜೇಶ್ವರ ತಾಲೂಕಿನಲ್ಲಿ ಪ್ರಥಮ ಬಾರಿಗೆ  ಉಪ್ಪಳ ದೇವಿಪ್ರಸಾದ್ ಮಾವೆ ಆಸ್ಪತ್ರೆಯಲ್ಲಿ ಕಾಲಿನ ಮೊಣಗಂಟಿನ ಮರು ಜೋಡಣೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ| ಶ್ರೀಧರ ಭಟ್ ತಿಳಿಸಿದ್ದಾರೆ. ಆಸ್ಪತ್ರೆಯ ಎಲುಬು ತಜ್ಞರ ನೇತೃತ್ವದಲ್ಲಿ ನಡೆಸಿದ ಈ ಶಸ್ತ್ರಚಿಕಿತ್ಸೆಯಲ್ಲಿ ಮಹಿಳೆಯ ಮೊಣಗಂಟಿನ ಮರುಜೋಡಣೆ ನಡೆಸಲಾಗಿದೆ. ಎಲುಬಿಗೆ ಸಂಬಂಧಿಸಿದ ಹಾಗೂ ಮೂಳೆ ಶಸ್ತ್ರಚಿಕಿತ್ಸೆಗೆ ದೇವಿಪ್ರಸಾದ್ ಆಸ್ಪತ್ರೆಯಲ್ಲಿ ಎಲ್ಲಾ ಸೌಕರ್ಯ ಏರ್ಪಡಿಸಲಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ಕಾಸರಗೋಡು ಗಣೇಶೋತ್ಸವಕ್ಕೆ 71ನೇ ವಾರ್ಷಿಕ ಸಂಭ್ರಮ: 11 ದಿನ ವಿವಿಧ ಕಾರ್ಯಕ್ರಮಗಳು

ಕಾಸರಗೋಡು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಆಗಸ್ಟ್ 27ರಿಂದ ಸೆಪ್ಟಂಬರ್ 6ರ ತನಕ 11 ದಿನಗಳ ಕಾಲ ಶ್ರೀ ಗಣೇಶೋತ್ಸವವನ್ನು ನಡೆಸಲು ಇತ್ತೀಚೆಗೆ ಸೇರಿದ ಸಭೆಯಲ್ಲಿ ತೀರ್ಮಾನಿಸಲಾಗಿದೆ. 71ನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ವಿಜೃಂಭಣೆಯಿಂದ ಗಣೇಶೋತ್ಸವ ನಡೆಸಲು ಸಮಿತಿ ತೀರ್ಮಾನಿಸಿದೆ. ಪ್ರತೀ ದಿನ ೧೦೦೮ ನಾಳೀಕೇರ ಗಣಪತಿ ಯಾಗ ನಡೆದು 10ನೇ ದಿನ ಪೂರ್ಣಾಹುತಿ ಯಾಗಲಿದ್ದು, ಇದನ್ನು ಅಯ್ಯುತ ನಾಳೀಕೇರ ಮಹಾಗಣಪತಿ ಯಾಗ ಎಂದು ಕರೆಯಲಾಗುತ್ತದೆ.ಶ್ರೀಗಣೇಶೋತ್ಸವ ಸಂದರ್ಭ ದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ. …

ರೈಲಿಗೆ ಕಲ್ಲು ತೂರಾಟ: ಮವ್ವಾರು ನಿವಾಸಿ ಸಹಿತ ಇಬ್ಬರ ಸೆರೆ

ಕಾಸರಗೋಡು: ಮಂಗಳೂರಿ ನಿಂದ ಚೆನ್ನೈಗೆ ಹೋಗುತ್ತಿದ್ದ ರೈಲಿಗೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂ ಬಂಧಿಸಿ ಇಬ್ಬರನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಲದ ರಾಣಿನಗರ ನಿವಾಸಿ ರೋಷನ್ ರಾಯ್ (19) ಮತ್ತು ಕುಂಬ್ಡಾಜೆ ಮವ್ವಾರ್ ಒಡಂಬಲ ನಿವಾಸಿ ವಿ. ಸುಂದರ(45) ಬಂಧಿತರಾದ ಆರೋಪಿಗಳು. ಬೇಕಲ ಕೋಟೆ ರೈಲು ನಿಲ್ದಾಣ (ಹಳೆ ಪಳ್ಳಿಕ್ಕೆರೆ)ದ ಎರಡನೇ ಪ್ಲಾಟ್ ಫಾಂನ ಉತ್ತರ ಭಾಗದಲ್ಲಿ ನಿನ್ನೆ ಅಪರಾಹ್ನ  2.55ರ ವೇಳೆ ಮಂಗಳೂರು-ಚೆನ್ನೈ ಮೈಲ್  ರೈಲಿಗೆ ಕಲ್ಲು ತೂರಾಟ ನಡೆಸಲಾಗಿದೆ. ವಿಷಯ ತಿಳಿದ …

ನಗ್ನ ಫೋಟೋ ಪ್ರಚಾರ ಮಾಡುವುದಾಗಿ ಬೆದರಿಸಿ 10,05,000 ರೂ. ಎಗರಿಸಿದ ಬಗ್ಗೆ ದೂರು

ಬದಿಯಡ್ಕ: ವಾಟ್ಸಪ್ನಲ್ಲಿ ನಗ್ನ ಫೋಟೋ ಹಾಗೂ ವೀಡಿಯೋ ಚಿತ್ರಗಳನ್ನು ಪ್ರಚಾರ ಮಾಡುವುದಾಗಿ ಬೆದರಿಸಿ ಯುವಕನೋರ್ವನಿಂದ 10,05,000 ರೂ. ಎಗರಿಸಿರುವುದಾಗಿ ಆರೋಪಿಸಿ ಯುವಕನೋರ್ವ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾನೆ. ಅದರಂತೆ ದಕ್ಷಿಣಕನ್ನಡ ಜಿಲ್ಲೆಯ ಗುರುಪುರದ ಅಶ್ವತ್ಥ್ ಆಚಾರ್ಯ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. 2024 ನವಂಬರ್ನಲ್ಲಿ ವಾಟ್ಸಪ್ ಮೂಲಕ ನಾನು ಆರೋಪಿಯನ್ನು ಪರಿಚಯಗೊಂಡಿದ್ದೆ ನೆಂದೂ ಆ ಸೌಹಾರ್ದದಲ್ಲಿ ಆತನಿಗೆ ನಾನು ಕೆಲವೊಂದು ನಗ್ನ ಫೋಟೋ ಕಳುಹಿಸಿಕೊಟ್ಟಿದ್ದೆ ಮಾತ್ರವಲ್ಲ ವೀಡಿಯೋ ಚಾಟಿಂಗ್ ಕೂಡಾ ನಡೆಸಿದ್ದೆ. ಅದನ್ನೆಲ್ಲಾ …

ಕಳಾಯಿಯ ಕೃಷಿಕನ ಮನೆಯಿಂದ ನಗ-ನಗದು ಕಳವುಗೈದ ಕೆಲಸದಾಳು ಸೆರೆ

ಉಪ್ಪಳ: ಪೈವಳಿಕೆ ಬಳಿಯ ಕಳಾಯಿಯಲ್ಲಿ ಕೃಷಿಕನ ಮನೆಯಿಂದ ಏಳು ಪವನ್ ಚಿನ್ನಾಭರಣ ಹಾಗೂ ಒಂದು ಲಕ್ಷರೂಪಾಯಿ ಕಳವುಗೈದು ಪರಾರಿಯಾದ ಮನೆ ಕೆಲಸದಾಳು ಸೆರೆಯಾಗಿದ್ದಾನೆ. ಮೈಸೂರು ಎಲ್ವಾಳ ನಿವಾಸಿ ಯಶವಂತ್ ಕುಮಾರ್ (38) ಎಂಬಾ ತನನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಕಳಾಯಿಯ ಸಂಜೀವ ಶೆಟ್ಟಿಯವರ ಮನೆಯಿಂದ ಚಿನ್ನಾಭರಣ ಹಾಗೂ ಹಣ ಕಳವಿಗೀಡಾದ ಬಗ್ಗೆ ಬೆಂಗಳೂರಿನಲ್ಲಿರುವ ಪುತ್ರ  ಅಶೋಕ್ ಕುಮಾರ್ ಇತ್ತೀಚೆಗೆ ಮನೆಗೆ ಬಂದಾಗ ಗಮನಕ್ಕೆ ಬಂದಿತ್ತು. ಕಪಾಟಿನಲ್ಲಿರಿಸಿದ್ದ ನಾಲ್ಕು ಚಿನ್ನದ ಬಳೆಗಳನ್ನು ತೆಗೆದು ಅದೇ ರೀತಿಯ ನಕಲಿ …

ಯುವತಿಗೆ ದೌರ್ಜನ್ಯ ಯತ್ನ ಹೋಟೆಲ್ ಮಾಲಕ ಸೆರೆ

ಹೊಸದುರ್ಗ: ಕಲ್ಲಿಕೋಟೆ ಮುಕ್ಕತ್ತ್ ಎಂಬಲ್ಲಿನ ಹೋಟೆಲ್ ನೌಕರೆಯನ್ನು ದೌರ್ಜನ್ಯಗೈಯ್ಯಲು ಯತ್ನಿಸಿದ ಪ್ರಕರಣದಲ್ಲಿ ಪ್ರಧಾನ ಆರೋಪಿ ಹಾಗೂ ಹೋಟೆಲ್ ಮಾಲಕನಾದ ದೇವದಾಸ್ ಸೆರೆಯಾಗಿದ್ದಾನೆ. ತೃಶೂರು ಕುನ್ನಂಕುಳಂನಿಂದ ಈತನನ್ನು ಸೆರೆಹಿಡಿಯಲಾಗಿದೆ. ಇತರ ಇಬ್ಬರು ಆರೋಪಿಗಳು ಹಾಗೂ ಹೋಟೆಲ್ ನೌಕರರಾದ ರಿಯಾಸ್, ಸುರೇಶ್ ನಾಪತ್ತೆಯಾಗಿದ್ದಾರೆ. ಕಳೆದ ಫೆಬ್ರವರಿ ೧ರಂದು ರಾತ್ರಿ ಘಟನೆ ನಡೆದಿದೆ. ಪಯ್ಯನ್ನೂರು ನಿವಾಸಿಯಾದ ೨೪ರ ಹರೆಯದ ಯುವತಿಯನ್ನು ದೇವದಾಸ್ ಹಾಗೂ ಇಬ್ಬರು ನೌಕರರು ಸೇರಿ ದೌರ್ಜನ್ಯಗೈಯ್ಯಲು ಯತ್ನಿಸಿದ್ದರು. ದೇವದಾಸ್‌ನ ಮಾಲಕತ್ವದ ಸಂಕೇತಂ ಎಂಬ ಹೋಟೆಲ್‌ನ ನೌಕರೆಯಾಗಿದ್ದಾಳೆ ಯುವತಿ. ನೌಕರರು …

ಅರ್ಧ ಬೆಲೆಗೆ ಸಾಮಗ್ರಿ ಮಾರಾಟ ಹೆಸರಲ್ಲಿ 1000 ಕೋಟಿ ರೂ.ಗಿಂತಲೂ ಹೆಚ್ಚು ಹಣ ಲಪಟಾವಣೆ

ಕಾಸರಗೋಡು: ತೆರೆದ ಮಾರುಕಟ್ಟೆಗಳಲ್ಲಿರುವ ಬೆಲೆಗಿಂತಲೂ ಶೇ. 50ರಷ್ಟು ದರ ಕಡಿತದಲ್ಲಿ ಸಾಮಗ್ರಿಗಳನ್ನು ಮಾರಾಟ ಮಾಡುವುದಾಗಿ  ಭರವಸೆ ನೀಡಿ ರಾಜ್ಯದಾದ್ಯಂತವಾಗಿ ಸಹಸ್ರಾರು ಮಂದಿಯಿಂದ  1000 ಕೋಟಿ ರೂ.ಗಿಂತಲೂ ಹೆಚ್ಚು  ಹಣ  ಎಗರಿಸಿದ ತಂಡವೊಂದು ರಾಜ್ಯದಲ್ಲಿ ಕಾರ್ಯವೆಸಗುತ್ತಿರುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಇದಕ್ಕೆ ಸಂಬಂಧಿಸಿ ವಂಚನಾ ಜಾಲದ ಪ್ರಧಾನ ಕೊಂಡಿ ಎಂದು ಆರೋಪಿಸಲಾಗುವ ತೊಡುಪುಳ ಕುಡಯತ್ತ್ತೂರು ಕೋಳಪ್ಪಚೂರಂ-ಕುಳಂಗಂ ಅನಂತುಕೃಷ್ಣನ್ (26) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನ ಬ್ಯಾಂಕ್ ಖಾತೆಗೆ 400 ಕೋಟಿ ರೂ. ಬಂದು ಸೇರಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದು, ಅದರಲ್ಲಿ ಮೂರು …

ಲಾರಿ ಢಿಕ್ಕಿ ಹೊಡೆಸಿಪೊಲೀಸರನ್ನು ಕೊಲೆಗೈಯ್ಯಲುಯತ್ನಿಸಿದ ಪ್ರಕರಣ: ಓರ್ವ ಸೆರೆ

ಕಾಸರಗೋಡು: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ತಂಡವನ್ನು ಸೆರೆಹಿಡಿಯಲು ಹೋದ ಎಸ್‌ಐ ಮತ್ತು ಪೊಲೀಸರು ಸಂಚರಿಸುತ್ತಿದ್ದ ಕಾರಿಗೆ ಟಿಪ್ಪರ್ ಲಾರಿ ಢಿಕ್ಕಿ ಹೊಡೆಸಿ ಪೊಲೀಸ್ ತಂಡವನ್ನು ಕೊಲೆಗೈಯ್ಯ ಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗ ಅನಂತಪಳ್ಳದ ಫಾಸಿಲ್ (26) ಬಂಧಿತ ಆರೋಪಿ. ಈತ   ತಲೆಮರೆಸಿ ಕೊಂಡು ಜೀವಿಸುತ್ತಿದ್ದನು. ಈ ಪ್ರಕರಣದಲ್ಲಿ ಇರ್ಫಾನ್ ಎಂಬ ಇನ್ನೋರ್ವ ಆರೋಪಿ ಒಳಗೊಂಡಿದ್ದು, ಆತ ಈಗಲೂ ತಲೆಮರೆಸಿಕೊಂಡಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಕ್ರಮ ಮರಳುಗಾರಿಕೆಯ ವರನ್ನು ಸೆರೆಹಿಡಿಯಲು ಹೊಸದುರ್ಗ ಪೊಲೀಸ್ ಠಾಣೆಯ …

ಹೆರಿಗೆ ಬಳಿಕ ತಾಯಿ, ನವಜಾತ ಶಿಶು ಸಾವು

ಕಾಸರಗೋಡು: ಹೆರಿಗೆ ಬಳಿಕ ತಾಯಿ ಮತ್ತು ನವಜಾತ ಶಿಶು ಸಾವನ್ನಪ್ಪಿದ ಘಟನೆ ನಡೆದಿದೆ. ಬೇಕಲ ಚೇಟುಕುಂಡು ಕೀಕಾನ ಕಾವಡಿ ನಿವಾಸದ ಗಲ್ಫ್ ಉದ್ಯೋಗಿ ಕೆ. ಸಾಗರ್ ಎಂಬವರ  ಪತ್ನಿ ದೀಪ (36) ಮತ್ತು ನವಜಾತ ಶಿಶು ಸಾವನ್ನಪ್ಪಿದೆ. ಹೆರಿಗೆಗಾಗಿ ದೀಪಾರನ್ನು ಹೊಸದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಸೋಮವಾರ ದಾಖಲಿಸಲಾಗಿತ್ತು. ಸಂಜೆ ಅವರಿಗೆ ಹೆರಿಗೆಯಾಗಿದೆ. ತಕ್ಷಣ ನವಜಾತ ಶಿಶು ಸಾವನ್ನಪ್ಪಿದ್ದು, ಬಳಿಕ ದೀಪರಿಗೆ ತೀವ್ರ ರಕ್ತಸ್ರಾವ ಉಂಟಾಗಿದೆ. ಇದರಿಂದ ಅವರನ್ನು ತಕ್ಷಣ ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ …