ವಿದ್ಯುತ್ ದರ ಶೀಘ್ರ ಏರಿಕೆ

ತಿರುವನಂತಪುರ: ರಾಜ್ಯದಲ್ಲಿ ವಿದ್ಯುತ್ ದರದಲ್ಲಿ ಶೀಘ್ರ ಏರಿಕೆಯುಂಟಾಗಲಿದೆ.ವಿದ್ಯುತ್ ವಿತರಣಾ ಸಂಸ್ಥೆಗಳಿಗೆ ಉಂಟಾಗಿರುವ 1.6 ಲಕ್ಷ ಕೋಟಿ ರೂ. ನಷ್ಟವನ್ನು ಮುಂದಿನ ಎರಡೂವರೆ ವರ್ಷದೊಳಗೆ ಭರ್ತಿಗೊಳಿಸುವಂತೆ ರಾಜ್ಯ ವಿದ್ಯುತ್ ರೆಗ್ಯುಲೇಟರಿ ಆಯೋಗಕ್ಕೆ ಸುಪ್ರೀಂಕೋರ್ಟ್ ನಿನ್ನೆ ನಿರ್ದೇಶ ನೀಡಿದೆ. ಈ ನಷ್ಟದ ವತಿ ಯಿಂದ ರಾಜ್ಯ ವಿದ್ಯುನ್ಮಂಡಳಿ 6600 ಕೋಟಿ ರೂ.ವನ್ನು ವಿದ್ಯುತ್ ಉತ್ಪಾ ದನಾ ಸಂಸ್ಥೆಗಳಿಗೆ ನೀಡಬೇಕಾಗಿದೆ. ಈ ಮೊತ್ತವನ್ನು ವಸೂಲಿ ಮಾಡಲು ಮುಂದಿನ ಎರಡೂವರೆ ವರ್ಷದ ತನಕ ಪ್ರತೀ ಯೂನಿಟ್ ವಿದ್ಯುತ್ ದರದಲ್ಲಿ ತಲಾ 90 ಪೈಸೆಯಂತೆ …

9 ವರ್ಷ ಹಿಂದೆ ಮದುವೆ: ಈಗ ಪತ್ನಿಗೆ ಸೌಂದರ್ಯವಿಲ್ಲವೆಂದು ತಿಳಿಸಿ ಕಿರುಕುಳ; ಪತಿ ವಿರುದ್ಧ ಕೇಸು

ಕಾಸರಗೋಡು: ಒಂಭತ್ತು  ವರ್ಷಗಳ ಹಿಂದೆ ವಿವಾಹಿತೆ ಯಾದ ಯುವತಿಗೆ ಈಗ ಸೌಂದರ್ಯವಿಲ್ಲ ವೆಂದು ತಿಳಿಸಿ ಶಾರೀರಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡಿದ ಆರೋಪದಂತೆ ಪತಿಯ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. 28ರ ಹರೆಯದ ಯುವತಿಯ ದೂರಿನಂತೆ ಪತಿ ಕಡುಮೇನಿ ನಿವಾಸಿ ಪ್ರಿನ್ಸ್ ಜೋಸೆಫ್ ಎಂಬಾತನ ವಿರುದ್ಧ ಚಿಟ್ಟಾರಿಕಲ್   ಪೊಲೀಸರು ಕೇಸು ದಾಖಲಿಸಿದ್ದಾರೆ. ದೂರುದಾತೆ ಯುವತಿ ಹಾಗೂ ಪ್ರಿನ್ಸ್ ಜೋಸೆಫ್‌ರ ಮದುವೆ 2016 ಜೂನ್ 20ರಂದು ನಡೆದಿತ್ತು. ಬಳಿಕ ಯುವತಿ ಪತಿಯ ಮನೆಯಲ್ಲೂ ಹಾಗೂ ಗೋವಾದಲ್ಲೂ ವಾಸಿ …

ಮತ್ತೆ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ ಚಿನ್ನದ ದರ

ಕಾಸರಗೋಡು: ರಾಜ್ಯದಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೆ ಸಾರ್ವಕಾಲಿಕ ದಾಖ ಲೆ ಸೃಷ್ಟಿಯಾಗಿದೆ. ಇಂದು ಪವನ್ಗೆ 560 ರೂಪಾಯಿ ಹೆಚ್ಚಳಗೊಂಡು 75,760 ರೂಪಾಯಿಗೆ ತಲುಪಿದೆ. ಗ್ರಾಂಗೆ 70 ರೂ.ಹೆಚ್ಚಿ 9,470 ರೂ.ಗೇರಿದೆ.ಈ ತಿಂಗಳ ಅತೀ ಹೆಚ್ಚಿನ ಚಿನ್ನದ ದರ ಇಂದು ದಾಖಲಾಗಿದೆ. ಕಳೆದ ಮೂರು ದಿನಗಳಲ್ಲಾಗಿ ಪವನ್ಗೆ 800 ರೂಪಾಯಿಗಳ ಹೆಚ್ಚಳವಾಗಿದೆ. ಅಗೋಸ್ತ್ 1ರಂದು ಈ ತಿಂಗಳ ಅತೀ ಕಡಿಮೆ ದರ ದಾಖಲಾಗಿತ್ತು. ಅಂದು ಪವನ್ಗೆ 73,200 ರೂ. ಆಗಿತ್ತು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ತೆರಿಗೆ ನೀತಿಯೇ …

ಜಿಲ್ಲೆಯ ಮೂರು ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ವಿಜಿಲೆನ್ಸ್ ದಾಳಿ : ಬದಿಯಡ್ಕದಲ್ಲಿ ಲಂಚ ಸ್ವೀಕಾರ ಪತ್ತೆ

ಕಾಸರಗೋಡು: ಕಾಸರ ಗೋಡು, ಬದಿಯಡ್ಕ ಹಾಗೂ ನೀಲೇಶ್ವರ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ವಿಜಿಲೆನ್ಸ್ ಅಧಿ ಕಾರಿಗಳು ನಿನ್ನೆ ದಾಳಿ ನಡೆಸಿದ್ದಾರೆ. ಈ ಪೈಕಿ ಬದಿಯಡ್ಕ ಸಬ್ ರಿಜಿಸ್ಟ್ರೇಷನ್ ಕಚೇರಿಯಲ್ಲಿ ನಡೆಸಿದ ತಪಾಸಣೆ ವೇಳೆ ನಾಲ್ವರು ಸಿಬ್ಬಂದಿಗಳಿಗೆ ಕೆಲವು ದಸ್ತಾವೇಜು ಬರಹಗಾರರು ಗೂಗಲ್ ಪೇ ಮೂಲಕ 1.89 ಲಕ್ಷ ರೂ. ನೀಡಿರುವುದನ್ನು ಪತ್ತೆಹಚ್ಚಲಾಗಿದೆ ಎಂದು ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ರಾಜ್ಯ ವಿಜಿಲೆನ್ಸ್ ನಿರ್ದೇ ಶಕರಿಗೆ ವರದಿ ಸಲ್ಲಿಸಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಸರಗೋಡು …

ತಂಡಗಳ ಮಧ್ಯೆ ಘರ್ಷಣೆ: 17 ಮಂದಿ ವಿರುದ್ಧ ಕೇಸು; ಓರ್ವ ಕಸ್ಟಡಿಗೆ

ಉಪ್ಪಳ:  ಉದ್ಯಾವರ ಮಾಡದಲ್ಲಿ ನಿನ್ನೆ ಬೆಳಿಗ್ಗೆ ಎರಡು  ತಂಡಗಳ ಮಧ್ಯೆ ನಡೆದ ಘರ್ಷಣೆಗೆ ಸಂಬಂಧಿಸಿ 17 ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.  ಈ ಸಂಬಂಧ ಓರ್ವನನ್ನು ಕಸ್ಟಡಿಗೆ ತೆಗೆಯಲಾಗಿದೆ. ನಿನ್ನೆ ಬೆಳಿಗ್ಗೆ 11 ಗಂಟೆ ವೇಳೆ ಮಾಡ ಬಿ.ಎಸ್.ನಗರ ರಸ್ತೆಯಲ್ಲಿ ಎರಡು ತಂಡಗಳು ಪರಸ್ಪರ ಘರ್ಷಣೆ ನಡೆಸಿದ್ದು, ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಸೃಷ್ಟಿಯಾಗಿತ್ತು. ವಿಷಯ ತಿಳಿದು ಪೊಲೀಸರು ತಲುಪಿ ತಂಡಗಳನ್ನು ಚದುರಿಸಿದ್ದಾರೆ. ಈ ವೇಳೆ ಮಾಡ ಬಿ.ಎಸ್.ನಗರದ ಮೊಹಮ್ಮದ್ ಬಿಲಾಲ್ (27) ಎಂಬಾತನನ್ನು ಕಸ್ಟಡಿಗೆ …

ಮನೆಯೊಳಗೆ ನುಗ್ಗಿದ ವ್ಯಕ್ತಿ ಯುವತಿಯ ಕುತ್ತಿಗೆಯಿಂದ ಮಾಲೆ ಅಪಹರಿಸಲೆತ್ನ

ಕಾಸರಗೋಡು: ಮನೆಯೊಳಗೆ ಆಹಾರ ತಯಾರಿಸುತ್ತಿದ್ದ ಯುವತಿಯ ಕುತ್ತಿಗೆಯಿಂದ ಚಿನ್ನದ ಸರ ಕಸಿದೆಳೆಯಲು ವ್ಯಕ್ತಿಯೋರ್ವ ಯತ್ನ ವಿಫಲಗೊಂಡಿದೆ.   ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಪರಪ್ಪ ಕ್ಲಾಯಿಕೋಡ್ ಮುಂಡಿಯಾನ ಎಂಬಲ್ಲಿ ಘಟನೆ ನಡೆದಿದೆ. ಪರಪ್ಪದಲ್ಲಿ ಕೋಳಿ ಅಂಗಡಿ ನಡೆಸುತ್ತಿರುವ ಅಬ್ದುಲ್ಲ ಎಂಬವರ ಮಗಳ ಕುತ್ತಿಗೆಯಿಂದ ಸರ ಅಪಹರಿಸಲು ಯತ್ನ ನಡೆದಿದೆ.  ನಿನ್ನೆ ರಾತ್ರಿ ೯ ಗಂಟೆ  ವೇಳೆ ಯುವತಿ ಅಡುಗೆ ಕೋಣೆಯಲ್ಲಿ ಆಹಾರ ತಯಾರಿಸುತ್ತಿದ್ದ ವೇಳೆ ಅಲ್ಲಿಗೆ ಅತಿಕ್ರಮಿಸಿ ನುಗ್ಗಿದ ವ್ಯಕ್ತಿ ಸರ ಅಪಹರಿಸಲು ಯತ್ನಿಸಿದ್ದನು. ಈ ವೇಳೆ ಯುವತಿ …

ಮೆಟ್ರೋ ರೈಲ್ವೇ ಸೇತುವೆಯಿಂದ ಜಿಗಿದು ಯುವಕ ಸಾವು

ಕೊಚ್ಚಿ: ಮೆಟ್ರೋ ರೈಲ್ವೇ ಸೇತುವೆ ಮೇಲಿಂದ ಜಿಗಿದು ಯುವಕ ಸಾವಿಗೀಡಾದ ಘಟನೆ ನಡೆದಿದೆ. ಮಲಪ್ಪುರಂ ಚುಳ್ಳಿಪ್ಪಾರ ವೀರಾಶೇರಿ ಕುಂಞುಮೊಯ್ದೀನ್ ಎಂಬವರ ಪುತ್ರ ನಿಸಾರ್ ಸಾವಿಗೀಡಾದ ಯುವಕನಾಗಿದ್ದಾನೆ. ತೃಪುಣಿತ್ತುರ ವಡಕ್ಕೇಕೋಟ- ಎಸ್.ಎನ್. ಜಂಕ್ಷನ್‌ನ ಮೆಟ್ರೋ ನಿಲ್ದಾಣದ ಮಧ್ಯೆ ಘಟನೆ ನಡೆದಿದೆ. ವಡಕ್ಕೇಕೋಟದಿಂದ ತೃಪುಣಿತ್ತುರಕ್ಕೆ ಟಿಕೆಟ್ ಪಡೆದ ಬಳಿಕ ನಿಸಾರ್ ಪ್ಲಾಟ್‌ಫಾಮ್‌ಗೆ ತಲುಪಿದ್ದನು. ಬಳಿಕ ಪ್ಲಾಟ್‌ಫಾಮ್ ದಾಟಿ ಹೊರಗೆ ಓಡಿದ್ದು, ಅದನ್ನು ಕಂಡ ಮೆಟ್ರೋ ಅಧಿಕಾರಿಗಳು ವಿದ್ಯುತ್ ಸಂಪರ್ಕ ವಿಚ್ಚೇಧಿಸಿ ರೈಲು ಸಂಚಾರಕ್ಕೆ ತಡೆಯೊಡ್ಡಿದರು. ಅನಂತರ ನಿಸಾರ್‌ನನ್ನು ಸಮಾಧಾನಪಡಿಸಿ ಕೆಳಕ್ಕಿಳಿಸಲು …

25.92 ಲೀಟರ್ ಕರ್ನಾಟಕ ಮದ್ಯ ಪತ್ತೆ

ಕಾಸರಗೋಡು: ನಗರದ ಅಶೋಕನಗರದಲ್ಲಿ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆ ವೇಳೆ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 25.92 ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ನೆಲ್ಲಿಕುಂಜೆ ಬೀಚ್ ರಸ್ತೆಯ ಗಣೇಶ್ ಪಿ ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಆತ ಪರಾರಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಕಾಸ ರಗೋಡು ಅಬಕಾರಿ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಸಿಕೆವಿ ಸುರೇಶ್ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ  ಪ್ರಿವೆಂ ಟೀವ್ ಆಫೀಸರ್ (ಗೇರ್ಡ್) ನೌಶಾದ್ ಕೆ ಮತ್ತು ಅಜೀಶ್ ಸಿ ಎಂಬಿವರು …

ಕಟ್ಟಡದಿಂದ ದೂಡಿ ಹಾಕಿದ ಪರಿಣಾಮ ವ್ಯಾಪಾರಿ ಸಾವನ್ನಪ್ಪಿದ ಪ್ರಕರಣ: ಗುತ್ತಿಗೆದಾರನ ಬಂಧನ

ಕಾಸರಗೋಡು: ಹೊಸದುರ್ಗ ಮಾವುಂಗಾಲ್ ಮೂಲಕಂಡದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ  ಕಟ್ಟಡದಿಂದ ದೂಡಿ ಹಾಕಿದ ಪರಿಣಾಮ ಕೆಳಕ್ಕೆ ಬಿದ್ದು ವ್ಯಾಪಾರಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಕಟ್ಟಡ ಗುತ್ತಿಗೆದಾರನೂ ಪುಲ್ಲೂರು ನಿವಾಸಿಯಾದ ನರೇಂದ್ರನ್ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತನ ವಿರುದ್ಧ ಪೊಲೀಸರು ಮನಃಪೂರ್ವಕವಲ್ಲದ ನರಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೊಸದುರ್ಗ ಮಾವುಂಗಾಲ್ ಮೂಲಕಂಡದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಮೂರಂತಸ್ತಿನ ಕಟ್ಟಡದಿಂದ ದೂಡಿ ಹಾಕಿದ ಪರಿಣಾಮ ಕೆಳಕ್ಕೆ ಬಿದ್ದು ಹೊಸದುರ್ಗ ಮಡಿಯನ್‌ನಲ್ಲಿ ಅಲ್ಯುಮಿನಿಯಂ ಸಾಮಗ್ರಿಗಳ ವ್ಯಾಪಾರ ನಡೆಸುವ ಹೊಸದುರ್ಗ ವೆಳ್ಳಿಕೋತ್ …

ನಾಪತ್ತೆಯಾದ ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ನಾಪತ್ತೆ ಯಾಗಿದ್ದ ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪಾರಪ್ಪಳ್ಳಿ ಕಣ್ಣೋತ್ ನಿವಾಸಿ ಚಂದ್ರನ್ ಎಂಬವರ ಪುತ್ರ ರಿಜೇಶ್ (29) ಮೃತಪಟ್ಟ ಯುವಕನಾಗಿದ್ದಾನೆ. ಬುಧವಾರ ಮಧ್ಯಾಹ್ನದಿಂದ ಈತ ನಾಪತ್ತೆಯಾಗಿದ್ದನು. ಈ ಬಗ್ಗೆ ತಾಯಿ ಅಂಬಲತ್ತರ ಪೊಲೀಸರಿಗೆ ದೂರು ನೀಡಿದ್ದರು. ನಿನ್ನೆ ಬೆಳಿಗ್ಗೆ ನಾಗರಿಕರು ನಡೆಸಿದ ಹುಡುಕಾಟ ವೇಳೆ ಈತನನ್ನು ಮನೆಯಿಂದ 200 ಮೀಟರ್ ದೂರದ ಮರವೊಂದರಲ್ಲಿ  ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ.