103 ಗ್ರಾಂ ಗಾಂಜಾ ವಶ: ರೆಸಾರ್ಟ್ ಮೆನೇಜರ್ ವಶ

 ಕುಂಬಳೆ:   ಮೊಗ್ರಾಲ್ ಕೊಪ್ಪಳದ ರೆಸಾರ್ಟ್‌ವೊಂದಕ್ಕೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು 103 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ರೆಸಾರ್ಟ್‌ನ ಮೆನೇಜರ್ ತ್ರಿಪುರರಾಜ್ಯದ ಪಾನಿಸಾಗರ್ ನಿವಾಸಿ ಕೈಸುದ್ದೀನ್ (23) ಎಂಬಾತನನ್ನು ಬಂಧಿಸಲಾಗಿದೆ. ಕುಂಬಳೆ ಅಬಕಾರಿ ರೇಂಜ್  ಇನ್‌ಸ್ಪೆಕ್ಟರ್ ಶ್ರಾವಣ್ ಕೆ.ವಿ ನೇತೃತ್ವದಲ್ಲಿ ನಡೆದ .ಕಾರ್ಯಾಚರಣೆಯಲ್ಲಿ ಅಸಿ. ಎಕ್ಸೈಸ್ ಇನ್‌ಸ್ಪೆಕ್ಟರ್ ಅನೀಶ್ ಕುಮಾರ್, ಮಹಿಳಾ ಸಿವಿಲ್ ಅಬಕಾರಿ ಅಧಿಕಾರಿ ಹರಿಶ್ರೀ, ಸಿಇಒಗಳಾದ ರಾಹುಲ್, ಅವಿ ನಾಶ್, ಚಾಲಕ ಪ್ರವೀಣ್ ಕುಮಾರ್.ಪಿ ಮೊದಲಾದವರು ಭಾಗವಹಿಸಿದರು.

ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ಗಾಂಜಾ ವಶ: ಓರ್ವ ಸೆರೆ

ಕುಂಬಳೆ: ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 140 ಗ್ರಾಂ ಗಾಂಜಾ ಸಹಿತ ಓರ್ವನನ್ನು ಕುಂಬಳೆ ಎಸ್‌ಐ ಪ್ರದೀಪ್ ಕುಮಾರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಸೀತಾಂಗೋಳಿ ದರ್ಬೆತ್ತಡ್ಕ ನಿವಾಸಿ ಮೊಹಮ್ಮದ್ ಹನೀಫ್ (40) ಬಂಧಿತ ಆರೋಪಿ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯವರ ಸ್ಪೆಷಲ್  ಸ್ಕ್ವಾಡ್‌ನ ಸಹಾಯ ದೊಂದಿಗೆ ಸೀತಾಂಗೋಳಿ ಕಿನ್ಫ್ರಾ -ಕಣ್ಣೂರು ರಸ್ತೆ ಬಳಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಮಾಲು ಸಹಿತ ಸೆರೆಹಿಡಿದು ಕೇಸು ದಾಖಲಿಸಲಾಗಿದೆ.

ಹೆಚ್ಚುತ್ತಿರುವ ಕಡಲ್ಕೊರೆತ: ತೀರ ಪ್ರದೇಶದ ಬಹುತೇಕ ಮನೆಗಳು ಸಮುದ್ರಪಾಲು ಭೀತಿಯಲ್ಲಿ

ಉಪ್ಪಳ: ತೀರ ನಿವಾಸಿಗಳಲ್ಲಿ ಕಡಲ್ಕೊರೆತ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಪಾಯ ಕಣ್ಮುಂದೆ ಕಾಣುವಂತೆ ಬದುಕುತ್ತಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮಂಜೇಶ್ವರ, ಮಂಗಲ್ಪಾಡಿ ಪಂಚಾಯತ್‌ನ ಸಮುದ್ರ ತೀರ ಪ್ರದೇಶದ ಜನರು ಆತಂಕದಲ್ಲಿದ್ದಾರೆ. ಇಲ್ಲಿನ ವಿವಿಧ ಕಡೆಗಳ ರಸ್ತೆ, ಹಲವಾರು ಮರಗಳು ಸಮುದ್ರಪಾಲಾಗಿದ್ದು, ಕೆಲವು ಮನೆಗಳು ಅಪಾಯದ ಅಂಚಿನಲ್ಲಿದೆ. ಪೆರಿಂಗಡಿ, ಐಲ ಕುದುಕುಳು, ಬಂಗ್ಲ, ಹನುಮಾನ್ ನಗರದಲ್ಲಿ ರಸ್ತೆ ಹಾಗೂ ಹಲವಾರು ಗಾಳಿ, ತೆಂಗಿನ ಮರಗಳು ಸಮುದ್ರಪಾಲಾಗಿದೆ. ಇಲ್ಲಿ ಹಲವು ಮನೆಗಳು ನೀರುಪಾಲಾಗುವ ಭೀತಿಯಲ್ಲಿದೆ. ಶಾರದಾನಗರ, ಮುಸೋಡಿ, ಕಣ್ವತೀರ್ಥ …

ಬಡ ಕುಟುಂಬದ ಹೆಂಚಿನ ಮನೆ ಛಾವಣಿ ಕುಸಿತ

ನೀರ್ಚಾಲು:  ಧಾರಾಕಾರ ಮಳೆ, ಗಾಳಿಗೆ ಹೆಂಚಿನ ಮನೆಯ ಮೇಲ್ಛಾವಣಿ ಕುಸಿದುಬಿದ್ದಿದ್ದು, ಅದೃಷ್ಟವಶಾತ್ ಕುಟುಂಬ ಅಪಾಯದಿಂದ ಪಾರಾದ ಘಟನೆ ನಡೆದಿದೆ. ಚೆನ್ನೆಗುಳಿ ನಿವಾಸಿ ಮಾಯಿಲ ಎಂಬವರ ಮನೆ ನಿನ್ನೆ ರಾತ್ರಿ ಕುಸಿದಿದೆ. ಈ ವೇಳೆ ಮನೆಯೊಳಗಿದ್ದವರು ಶಬ್ದ ಕೇಳಿ ಹೊರಗೆ ಓಡಿದ್ದು ಇದರಿಂದ ಭಾರೀ ಅಪಾ ಯದಿಂದ ಪಾರಾಗಿದ್ದಾರೆ. ಮೇಲ್ಛಾವಣಿಯ ಉಳಿದ ಭಾಗ ಯಾವುದೇ ಸಮಯದಲ್ಲಿ  ಕುಸಿಯುವ ಸಾಧ್ಯತೆ ಇದೆಯೆನ್ನಲಾಗಿದೆ. ಹದಿನೇಳು ವರ್ಷಗಳ ಹಿಂದೆ  ನಿರ್ಮಿಸಿದ ಮನೆ ಇದಾಗಿದೆ. ಈ ಮನೆ ಕುಸಿಯುವುದರೊಂದಿಗೆ ಕುಟುಂಬಕ್ಕೆ ವಾಸ ಸೌಕರ್ಯವಿಲ್ಲದಾಗಿದೆ. ಸರಕಾರದ …

ವೀರನಗರ ಹೆಸರು ಬದಲಾವಣೆಗೆ ಯತ್ನ: ಹಿಂದೂ ಐಕ್ಯವೇದಿ ಖಂಡನೆ

ಬಂದ್ಯೋಡು: ಸ್ಥಳೀಯರು ಸ್ಥಾಪಿಸಿದ ನಾಮಫಲಕವನ್ನು ಮುಸ್ಲಿಂ ಲೀಗ್‌ನ ವಾರ್ಡ್ ಪ್ರತಿನಿಧಿಯ ಪತಿ ಸುಳ್ಳು ದೂರು ನೀಡಿ, ಪೊಲೀಸ್ ಅಧಿ ಕಾರಿಗಳನ್ನು ಸ್ವಾಧೀನಪಡಿಸಿಕೊಂಡು ತೆರವುಗೊಳಿಸಿದ ಘಟನೆಯನ್ನು ಹಿಂದೂ ಐಕ್ಯವೇದಿ ವೀರನಗರ ಸಮಿತಿ ಖಂಡಿ ಸಿದೆ. ಸುಮಾರು ೫೦ ವರ್ಷಗಳ ಹಿಂದೆ ಸ್ಥಾಪಿಸಿದ್ದ ವೀರನಗರ ಎಂಬ ನಾಮ ಫಲಕ ಶಿಥಿಲಗೊಂಡ ಕಾರಣ ಹೊಸತಾಗಿ ನಾಮಫಲಕವನ್ನು ಸ್ಥಾಪಿಸಲಾಗಿತ್ತು. ಆದರೆ ಈ ಸ್ಥಳದ ಹೆಸರನ್ನು ವಳಯಂಪಳ್ಳಿ ಎಂದು ಬದಲಿಸಲು ಯತ್ನಿಸುತ್ತಿರುವ ಕೆಲವರು ನಾಮಫಲಕವನ್ನು ತೆರವುಗೊಳಿಸಲು ಮುಂದಾಗಿದ್ದಾರೆಂದು ಹಿಂದೂ ಐಕ್ಯವೇದಿ ದೂರಿದೆ. ವೀರನಗರ ಅಡ್ಕ …

ಕುಂಬಳೆ ಪಂಚಾಯತ್ ಅಧ್ಯಕ್ಷೆ ವಿರುದ್ಧ ಬಿಜೆಪಿ ಅವಿಶ್ವಾಸ ಗೊತ್ತುವಳಿ ಚುನಾವಣೆ ಲಕ್ಷ್ಯವಿರಿಸಿದ ರಾಜಕೀಯ ನಾಟಕ- ಆಡಳಿತ ಸಮಿತಿ

ಕುಂಬಳೆ: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗೆ ಇನ್ನು ಕೇವಲ ಕೆಲವೇ ತಿಂಗಳುಗಳು ಉಳಿದಿರುವಂತೆ ಕುಂಬಳೆ ಪಂಚಾಯತ್ ಅಧ್ಯಕ್ಷೆಯ ವಿರುದ್ಧ ಅವಿಶ್ವಾಸ ಗೊತ್ತುವಳಿಯೊಂದಿಗೆ ಬಿಜೆಪಿ ಸದಸ್ಯರು ರಂಗಕ್ಕಿಳಿದಿರುವುದು ರಾಜಕೀಯ ಗೂಢಾಲೋಚನೆಯಾಗಿದೆ ಎಂದು ಆಡಳಿತ ಸಮಿತಿ ಸದಸ್ಯರು ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಒಂದು ತಿಂಗಳ ಹಿಂದೆ ಇಲಾಖೆ ಮಟ್ಟದ ಶಿಸ್ತು ಕ್ರಮಕ್ಕೆ ಒಳಗಾಗಿ ಕುಂಬಳೆ ಪಂಚಾ ಯತ್‌ನಲ್ಲಿ ಹೊಣೆ ವಹಿಸಿಕೊಂಡ ಕಾರ್ಯದರ್ಶಿ ಹಾಗೂ ಬಿಜೆಪಿ ಮುಖಂಡರು ಒಟ್ಟುಗೂಡಿ ನಡೆಸಿದ ಗೂಢಾಲೋಚನೆಯಾಗಿದೆ ಇದು. ಪಂಚಾಯತ್‌ನ ಜನಪ್ರತಿನಿಧಿಗಳು, ಅಧಿಕಾರಿಗಳು ಭ್ರಷ್ಟಾಚಾರಿಗಳೆಂದು ಮುದ್ರೆ ಒತ್ತಲು ಯೋಜನೆ ಚಟುವಟಿಕೆ …

ಅಸೌಖ್ಯ: ಮಹಿಳೆ ಆಸ್ಪತ್ರೆಯಲ್ಲಿ ನಿಧನ

ಉಪ್ಪಳ: ಧರ್ಮತ್ತಡ್ಕ ಗುಂಪೆ ನಿವಾಸಿ ದಿ| ರಾಮನಾಯ್ಕ್‌ರ ಪತ್ನಿ ಕಾವೇರಿ (91) ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಇವರನ್ನು ನಿನ್ನೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮೃತರು ಮಕ್ಕಳಾದ ರತ್ನಾವತಿ, ಲಕ್ಷ್ಮಿ, ಶಾರದ, ಶಂಕರಿ, ಅಳಿಯ-ಸೊಸೆಯಂದಿರಾದ ರಾಮನಾಯ್ಕ್, ಈಶ್ವರ, ಸುಶೀಲ, ದೇವಕಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಕಾವೇರಿಯವರ ಇನ್ನೋರ್ವ ಪುತ್ರ ನಾರಾಯಣ ನಾಯ್ಕರ ಅಳಿಯಂದಿರಾದ ಐತ್ತಪ್ಪ, ನಾರಾಯಣ ಎಂಬಿವರು ಈ ಹಿಂದೆ ನಿಧನರಾಗಿದ್ದಾರೆ.

ವ್ಯಾಪಾರಿ ಇಬ್ರಾಹಿಂ ಮಂಜತ್ತಡ್ಕ ನಿಧನ

ಕಾಸರಗೋಡು: ಮಂಜತ್ತಡ್ಕ ಜಂಕ್ಷನ್ ನಿವಾಸಿ, ವ್ಯಾಪಾರಿ ಇಬ್ರಾಹಿಂ (59) ನಿಧನ ಹೊಂದಿದರು. ಸಿರಿಬಾಗಿಲು ಮುಹ್ ಯುದ್ದೀನ್ ಜಮಾಯತ್ ಸಮಿತಿ, ಮಂಜತ್ತಡ್ಕ ದರ್ಗ ಸಮಿತಿಯಲ್ಲಿ ಪದಾಧಿಕಾರಿಯಾಗಿದ್ದರು. ಮೃತರು ಪತ್ನಿ ಆಯಿಷಾ, ಮಕ್ಕಳಾದ ಲತೀಫ್, ರಶೀದ್, ರಾಸಿಕ್, ರಮೀಸ್, ಖಲೀಲ್, ರಾಹಿನ, ರಾಫಿದ, ರೈನಿಶ, ಅಳಿಯಂ ದಿರು- ಸೊಸೆಯಂದಿರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಅಚ್ಯುತಾನಂದನ್ ನಿಧನ : ಬಾಯಾರಿನಲ್ಲಿ ಸಂತಾಪ ಸೂಚಕ ಸಭೆ

ಪೈವಳಿಕೆ: ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್‌ರ ನಿಧನಕ್ಕೆ ಸಿಪಿಎಂ ಬಾಯಾರು ಲೋಕಲ್ ಸಮಿತಿ ನೇತೃತ್ವದಲ್ಲಿ ಸಂತಾಪ ಸೂಚಕ ಸಭೆ ನಡೆಯಿತು. ಸಿಪಿಎಂ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ಆರ್. ಜಯಾನಂದ, ಕಾಂಗ್ರೆಸ್ ಮುಖಂಡ ವಸಂತ, ಬಿಜೆಪಿಯ ಸುಬ್ರಹ್ಮಣ್ಯ ಭಟ್, ಮುಸ್ಲಿಂ ಲೀಗ್‌ನ ಇಬ್ರಾಹಿಂ ಬಾಯಾರು, ಮೋನಪ್ಪ ಶೆಟ್ಟಿ, ಅಬ್ದುಲ್ ಗಾಳಿಯಡ್ಕ, ರಾಮಚಂದ್ರ, ಅಬ್ದುಲ್ ಸತ್ತಾರ್ ಮಾತನಾಡಿದರು. ಏರಿಯಾ ಸಮಿತಿ ಸದಸ್ಯ ವಿನಯ ಕುಮಾರ್ ಅಧ್ಯಕ್ಷತೆ ವಹಿಸಿದರು. ಲೋಕಲ್ ಕಾರ್ಯದರ್ಶಿ ಪುರುಷೋತ್ತಮ ಬಳ್ಳೂರು ಸ್ವಾಗತಿಸಿದರು.

ಸಿಪಿಎಂ ಬ್ರಾಂಚ್ ಕಾರ್ಯದರ್ಶಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಣ್ಣೂರು: ಇಲ್ಲಿನ ಸಿಪಿಎಂ ಬ್ರಾಂಚ್ ಕಾರ್ಯದರ್ಶಿ ಮನೆಯ ಮಲಗುವ ಕೊಠಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಅಮ್ಮಾನಪ್ಪಾರ ನಿವಾಸಿ ರಾಜೇಶ್ ಓಮತ್ (47) ಮೃತಪಟ್ಟವರು. ನಿನ್ನೆ ಬೆಳಿಗ್ಗೆ ಮನೆಯ ಕೋಣೆಯೊಳಗೆ ಬಿದ್ದುಕೊಂಡ ಸ್ಥಿತಿಯಲ್ಲಿ ಪತ್ತೆಹಚ್ಚಲಾ ಗಿದೆ. ಕೂಡಲೇ ಕಣ್ಣೂರು ಸರಕಾರಿ ಮೆಡಿಕಲ್ ಕಾಲೇಜಿಗೆ ತಲುಪಿಸಿದರೂ ಆ ವೇಳೆ ಮೃತಪಟ್ಟಿದ್ದರು. ಸಿಪಿಎಂ ಅಮ್ಮಾನಪ್ಪಾರ ಸೆಂಟರ್ ಬ್ರಾಂಚ್ ಕಾರ್ಯದರ್ಶಿಯಾಗಿದ್ದಾರೆ. ಮೃತರು ಪತ್ನಿ ಟಿ. ಶಿಮ್ನ, ಮಕ್ಕಳಾದ ಆಶಿಶ್, ಅನ್ಶ್, ಸಹೋದರ ರಾಜು, ಸಹೋದರಿ ರತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.