ಸುವರ್ಣಗಿರಿ ಹೊಳೆಗೆ ತ್ಯಾಜ್ಯ ಎಸೆಯುವ ಕೃತ್ಯ ಮುಂದುವರಿಕೆ: ದುರ್ವಾಸನೆಯಿಂದ ಸ್ಥಳೀಯರಿಗೆ ಸಮಸ್ಯೆ

ಮಂಗಲ್ಪಾಡಿ: ಕುಬಣೂರು ಸುವರ್ಣಗಿರಿ ಹೊಳೆಯಲ್ಲಿ ತ್ಯಾಜ್ಯ ಎಸೆಯುವ ಕೃತ್ಯ ಮುಂದುವರಿದಿದ್ದು, ಈ ಪರಿಸರದಲ್ಲಿ ದುರ್ವಾಸನೆ ಯಿಂದ ಸಮಸ್ಯೆ ಉಂಟಾಗಿದೆ. ಈ ಹಿಂದೆಯೂ ಇಲ್ಲಿ ತ್ಯಾಜ್ಯ ಎಸೆದು ನೀರು ಮಲಿನೀಕರಣಗೊಳಿಸ ಲಾಗುತ್ತಿತ್ತು. ಇದರಿಂದ ನಾಗರಿಕರು ಪ್ರತಿಭಟನೆ ನಡೆಸಿದ್ದರು. ಈಗ ಮತ್ತೆ ಹೊಳೆ ಸಹಿತ ಪರಿಸರದಲ್ಲಿ ತ್ಯಾಜ್ಯವನ್ನು ಎಸೆಯಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಈ ಭಾಗದಲ್ಲಿ ಕ್ಷೇತ್ರ, ಮಸೀದಿ, ಶಾಲೆ, ಹಲವಾರು ಮನೆಗಳಿದ್ದು, ನೂರಾರು ಮಂದಿ ಅತ್ತಿತ್ತ ಸಂಚರಿಸುವ ಸ್ಥಳವಾಗಿದೆ. ರಾತ್ರಿ ಕಾಲದಲ್ಲಿ ವಿವಿಧೆಡೆಗಳಿಂದ ತ್ಯಾಜ್ಯವನ್ನು ತಂದು ಇಲ್ಲಿ ಉಪೇಕ್ಷಿಸಲಾಗುತ್ತಿದೆ. …

ರೇಶನ್ ಅಂಗಡಿಗಳಲ್ಲಿ ಸಾಮಗ್ರಿ ಕೊರತೆ: ಕಾಂಗ್ರೆಸ್‌ನಿಂದ ನಾಳೆ ಸಪ್ಲೈ ಕಚೇರಿ ಧರಣಿ

ಉಪ್ಪಳ: ರೇಶನ್ ಅಂಗಡಿಗಳಲ್ಲಿ ಆಹಾರ ಸಾಮಗ್ರಿಗಳ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ಅದನ್ನು ಪ್ರತಿಭಟಿಸಿ ಮಂಜೇಶ್ವರ ಹಾಗೂ ಕುಂಬಳೆ ಬ್ಲೋಕ್ ಕಾಂಗ್ರೆಸ್ ಸಮಿತಿಗಳ ಜಂಟಿ ಆಶ್ರಯದಲ್ಲಿ ಬಂದ್ಯೋಡಿನಲ್ಲಿರುವ ಮಂಜೇಶ್ವರ ತಾಲೂಕು ಸಪ್ಲೈ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ನಾಳೆ ಬೆಳಿಗ್ಗೆ 10ಕ್ಕೆ ನಡೆಯಲಿದೆ. ಮಂಜೇಶ್ವರ ಬ್ಲೋಕ್ ಸಮಿತಿ ಅಧ್ಯಕ್ಷ ಮೊಹಮ್ಮದ್ ಡಿಎಂಕೆ, ಕುಂಬಳೆ ಬ್ಲೋಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುಂದರ ಆರಿಕ್ಕಾಡಿ, ಈ ಬಗ್ಗೆ ತಿಳಿಸಿದ್ದಾರೆ.

ವಂದೇ ಭಾರತ್ ರೈಲು ಢಿಕ್ಕಿಹೊಡೆದು ಅಪರಿಚಿತ ಸಾವು

 ಕಾಸರಗೋಡು: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಾಡಿ ಢಿಕ್ಕಿ ಹೊಡೆದು ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ. ಹೊಸದುರ್ಗ ರೈಲು ನಿಲ್ದಾಣ ಬಳಿ ನಿನ್ನೆ ಈ ಘಟನೆ ನಡೆದಿದೆ. ಮೃತವ್ಯಕ್ತಿ ಪುರುಷನಾಗಿದ್ದು, ಸುಮಾರು ೫೦ ವರ್ಷ ಪ್ರಾಯ ಅಂದಾಜಿಸಲಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಹೊಸದುರ್ಗ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಶಾಸಕರ ನಿಧಿ ಬಳಸಿ ದುರಸ್ತಿಗೊಳಿಸಿದ ರಸ್ತೆ ಉದ್ಘಾಟನೆ

ಬಂದ್ಯೋಡು: ಮಂಗಲ್ಪಾಡಿ ಪಂಚಾಯತ್‌ನ 12ನೇ ವಾರ್ಡ್ ನಲ್ಲಿ ಶೋಚನೀಯಾವಸ್ಥೆಯಲ್ಲಿದ್ದ ಇಚ್ಲಂಗೋಡು ಹುಬ್ಬಳ್ಳಿ ರಸ್ತೆಯನ್ನು ಶಾಸಕರ ಅಭಿವೃದ್ಧಿ ನಿಧಿಯಿಂದ 10 ಲಕ್ಷ ರೂ. ಬಳಸಿ ಪುನರುದ್ಧರಿಸಲಾ ಗಿದೆ. ಈ ರಸ್ತೆಯನ್ನು ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಪಂಚಾಯತ್ ಅಧ್ಯಕ್ಷೆ ರುಬೀನ, ಉಪಾಧ್ಯಕ್ಷ ಯೂಸಫ್ ಹೇರೂರು, ಅಸೀಸ್ ಮರಿಕೆ ಸಹಿತ ಹಲವರು ಭಾಗವಹಿಸಿದರು.

ಕೆಎಸ್‌ಟಿಎ ರಾಜ್ಯ ಸಮ್ಮೇಳನ ಉಪ್ಪಳದಲ್ಲಿ ಧ್ವಜ ದಿನಾಚರಣೆ

ಉಪ್ಪಳ: ಕೆಎಸ್‌ಟಿಎ ರಾಜ್ಯ ಸಮ್ಮೇಳನದ ಪೂರ್ವಭಾವಿಯಾಗಿ ಧ್ವಜದಿನ ಆಚರಿಸಲಾಯಿತು. ಉಪ್ಪಳಪೇಟೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ. ರಾಘವನ್ ಉದ್ಘಾಟಿಸಿದರು. ಉಪಜಿಲ್ಲಾ ಉಪಾಧ್ಯಕ್ಷ ಜಿಜೇಶ್ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಸಂತೋಷ್ ಕೆ.ವಿ. ಸ್ವಾಗತಿಸಿ, ಮೋಹನ ಬಿ, ರವೀಂದ್ರ ಎನ್, ವಿಜಯ ಸಿ.ಎಚ್, ಅಶ್ರಫ್, ಮಮತ ಇ.ಆರ್. ಮಾತನಾಡಿದರು. ಜಯಂತ ವಂದಿಸಿದರು.

ಪೈವಳಿಕೆ ಬಳಿ ಮನೆಯಿಂದ 7 ಪವನ್ ಚಿನ್ನಾಭರಣ, 1 ಲಕ್ಷ ರೂ. ಕಳವು; ಕಪಾಟಿನಲ್ಲಿ ನಕಲಿಚಿನ್ನವಿರಿಸಿ ಅಸಲಿ ಚಿನ್ನಾಭರಣ ದೋಚಿದ ಕಳ್ಳರು

ಉಪ್ಪಳ: ಮನೆಯ ಕಪಾಟಿನಲ್ಲಿ ನಕಲಿ ಚಿನ್ನಾಭರಣ ಇರಿಸಿ ೭ ಪವನ್ ಅಸಲಿ ಚಿನ್ನಾಭರಣಗಳನ್ನು  ಹಾಗೂ ೧ ಲಕ್ಷ ರೂಪಾಯಿಯನ್ನು ದೋಚಿದ ಘಟನೆ ವರದಿಯಾಗಿದೆ. ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಕಳಾಯಿ ಎಂಬಲ್ಲಿನ ಕೃಷಿಕರಾದ ಸಂಜೀವ ಶೆಟ್ಟಿಯವರ ಮನೆಯಿಂದ ನಗ-ನಗದು ಕಳವಿಗೀಡಾಗಿದೆ. ಮನೆಯಲ್ಲಿ ಸಂಜೀವ ಶೆಟ್ಟಿ ಹಾಗೂ ಮನೆ ಕೆಲಸದಾಳುವಾದ ಕರ್ನಾಟಕ ನಿವಾಸಿಯೋರ್ವ ಮಾತ್ರವೇ ಇದ್ದಾರೆ. ಸಂಜೀವ ಶೆಟ್ಟಿಯವರ ಪುತ್ರ ಅಶೋಕ್ ಕುಮಾರ್ ಶೆಟ್ಟಿ ಬೆಂಗಳೂರಿನಲ್ಲಿ  ಉದ್ಯೋಗದಲ್ಲಿದ್ದು, ಅವರು ಮೊನ್ನೆ ಮನೆಗೆ ಆಗಮಿಸಿದ್ದಾರೆಯ ಅವರು ಮನೆಯ ಕೊಠಡಿಯಲ್ಲಿರುವ ಕಪಾಟು ತೆರೆದು …

ಜ್ಯೋತಿಷಿಯ ಪತ್ನಿ ನಾಪತ್ತೆ

ಕಾಸರಗೋಡು: ಜ್ಯೋತಿಷಿ ಯೊಬ್ಬರ ಪತ್ನಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕುಂಡಂಕುಳಿ ಶ್ರೀ ನಿಲಯದ ಟಿ.ಕೆ. ರತ್ನಾಕರನ್ ಎಂಬವರ ಪತ್ನಿ ಶ್ರೀಕಲ (42) ನಾಪತ್ತೆಯಾಗಿರುವುದಾಗಿ ಬೇಡಗಂ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಕಳೆದ ಶನಿವಾರ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 10.45 ರ ಮಧ್ಯೆ ಶ್ರೀಕಲ ನಾಪತ್ತೆಯಾಗಿರುವುದಾಗಿ ರತ್ನಾಕರನ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ‘ನಾನು ಹೋಗುತ್ತೇನೆ’ ಎಂದು  ಪತ್ರ ಬದೆದಿಟ್ಟು ಶ್ರೀಕಲ ಮನೆಯಿಂದ ತೆರಳಿದ್ದಾರೆ. ಘಟನೆ ಬಗ್ಗೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಇದೇ ವೇಳೆ ಶ್ರೀಕಲ …

4 ಕಿಲೋ ನಕಲಿ ಚಿನ್ನದೊಂದಿಗೆ 3 ಮಂದಿ ಸೆರೆ: ನಿಧಿ ಎಂದು ತಿಳಿಸಿ ವಂಚಿಸಲು ಯತ್ನಿಸಿದ ಅನ್ಯರಾಜ್ಯ ಕಾರ್ಮಿಕರು

ಹೊಸದುರ್ಗ: ನಾಲ್ಕು ಕಿಲೋ ನಕಲಿ ಚಿನ್ನದೊಂದಿಗೆ ಯುವತಿ, ಯುವಕರನ್ನು ಸೆರೆ ಹಿಡಿಯಲಾಗಿದೆ. ಕರ್ನಾಟಕ ಮಂಡ್ಯ ಸಾಗರ್ ಶ್ರೀರಂಗಪಟ್ಟಣದ ನಿವಾಸಿಗಳಾದ ಧರ್ಮ (42), ಶ್ಯಾಮ್‌ಲಾಲ್ (42) ಎಂಬಿವರನ್ನು ಸೆರೆ ಹಿಡಿಯಲಾಗಿದೆ. ಶ್ಯಾಮ್‌ಲಾಲ್‌ನ ಪತ್ನಿ ಕೂಡಾ ಪೊಲೀಸ್ ಕಸ್ಟಡಿಯಲ್ಲಿದ್ದಾಳೆ.  ಹೂಮಾರಾಟಗಾರರಾಗಿದ್ದಾರೆ ಈ ಮೂವರು. ಚೆರ್ವತ್ತೂರಿನ ರೈಲು ನಿಲ್ದಾಣ ಸಮೀಪ ಬಾಡಿಗೆ ಕೊಠಡಿಯಲ್ಲಿ ಇವರು ವಾಸವಾಗಿದ್ದಾರೆ. ಮಾಲೆಗಳನ್ನು ಓರ್ವ ಸಿನಿಮಾ ಕಾರ್ಯಕರ್ತನಿಗೆ 15 ಲಕ್ಷ ರೂ.ಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಮಧ್ಯೆ ವಂಚನೆ ಬೆಳಕಿಗೆ ಬಂದಿದೆ. ಈ ಮಾಹಿತಿಯನ್ನು ಸಿನಿಮಾ ಕಾರ್ಯಕರ್ತ …

ದೌರ್ಜನ್ಯ ಯತ್ನದಿಂದ ಪಾರಾಗಲು ಹೊಟೇಲ್ ಮಹಡಿಯಿಂದ ಹಾರಿದ ಯುವತಿ ಗಂಭೀರ

ಕಲ್ಲಿಕೋಟೆ: ದೌರ್ಜನ್ಯ ಯತ್ನ ವನ್ನು ಹಿಮ್ಮೆಟ್ಟಿಸಲು ಹೊಟೇಲ್‌ನ ಮೇಲಿನ ಮಹಡಿಯಿಂದ ಹಾರಿದ ಪಯ್ಯನ್ನೂರು ನಿವಾಸಿಯಾದ ಯುವತಿ ಗಂಭೀರ ಗಾಯಗೊಂಡಿ ದ್ದಾರೆ. ಮುಕ್ಕಂ ಕಲ್ಲಿಕೋಟೆ ರಸ್ತೆಯ ಮಾಂಬಾಟದಲ್ಲಿ ಹೊಸದಾಗಿ ಆರಂಭಿಸಿದ ಹೊಟೇಲ್‌ನ ನೌಕರೆಯಾಗಿದ್ದಾರೆ ಈಕೆ. ಪಯ್ಯನ್ನೂರು ನಿವಾಸಿಯಾದ 29ರ ಹರೆಯದ ಯುವತಿ ದೌರ್ಜನ ಗೈಯ್ಯಲು ಬಂದಾಗ ಅದರಿಂದ ಪಾರಾಗಲು ಹೊಟೇಲ್ ಕಟ್ಟಡದಿಂದ ಕೆಳಗೆ ಹಾರಿದ್ದಾರೆನ್ನಲಾಗಿದೆ. ನಿನ್ನೆ ರಾತ್ರಿ 11 ಗಂಟೆಗೆ ಘಟನೆ ನಡೆದಿದೆ. ಹೊಟೇಲ್ ಮಾಲಕ ಉಪಟಳ ನೀಡಲು ಯತ್ನಿಸಿದಾಗ ಕೆಳಗೆ ಹಾರಿರುವು ದಾಗಿ ಯುವತಿ ಆಸ್ಪತ್ರೆಯಲ್ಲಿ ಪೊಲೀಸರಿಗೆ …

ಮನೆಯಿಂದ ನಗ-ನಗದು ಕಳವು: ಇಬ್ಬರ ಸೆರೆ

ಕಾಸರಗೋಡು: ಮನೆ ಬಾಗಿಲನ್ನು ಒಡೆದು ಒಳನುಗ್ಗಿ ೧೦ ಪವನ್ ಚಿನ್ನದ ಒಡವೆ ಮತ್ತು 1,60,000  ರೂ. ನಗದು ಕಳವುಗೈದ ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗ ನಿವಾಸಿ ಮನು (36) ಮತ್ತು ಕಣ್ಣೂರು ಪುದಿಯ ಪೆರು ನಿವಾಸಿ ಸಂತೋಷ್ (43) ಬಂಧಿತ ಆರೋಪಿಗಳು. ಕಳೆದ ಸೋಮವಾರ ಕಣ್ಣೂರು ಇರಿಟ್ಟಿ ಅಯಿಚ್ಚದ ಕೆ.ಎಂ. ವೇಣುಗೋಪಾಲ್‌ರ ಬೀಗ ಜಡಿದ ಮನೆಗೆ ಒಳನುಗ್ಗಿದ ಕಳ್ಳರು ನಗ-ನಗದು ಕಳವು ಗೈದಿದ್ದರು. ಈ ಬಗ್ಗೆ ಇರಿಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅದಕ್ಕೆ ಸಂಬಂಧಿಸಿ …