ತೆಂಗಿನಮರದಿಂದ ಬಿದ್ದು ಕಾರ್ಮಿಕ ಸಾವು

 ಕಾಸರಗೋಡು: ತಮ್ಮ ಹಿತ್ತಿಲಿನ ತೆಂಗಿನ ಮರದಿಂದ ಕಾಯಿ ಕೊಯ್ಯುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದು ಕಾರ್ಮಿಕ ಸಾವನ್ನಪ್ಪಿದ ಘಟನೆ ನಡೆದಿದೆ. ನೀಲೇಶ್ವರ ಪೇರೋಲ್‌ನ ದಿ| ಕುಂಞಿರಾಮನ್‌ರ ಪುತ್ರ ಎನ್.ವಿ. ರಾಜನ್ (56) ಸಾವನ್ನಪ್ಪಿದ ವ್ಯಕ್ತಿ. ಮೃತರು ಪತ್ನಿ ಶ್ಯಾಮಲ, ಮಕ್ಕಳಾದ ಬಾಬುರಾಜ್, ಸುಚಿತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಚೆರ್ಕಳದಲ್ಲಿ ಯುವಕನಿಗೆ ಇರಿತ: ಮೂವರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲು

ಕಾಸರಗೋಡು: ಚೆರ್ಕಳದಲ್ಲಿ ನಿನ್ನೆ ರಾತ್ರಿ ಸುಮಾರು ೯ಗಂಟೆಯ ವೇಳೆ ಯುವಕರ ಮಧ್ಯೆ ಘರ್ಷಣೆ ಉಂಟಾಗಿ ಓರ್ವ ಇರಿತಕ್ಕೊಳಗಾ ಗಿದ್ದಾನೆ. ಚೆಂಗಳ ಕೋಳಿಕಟ್ಟ ಹೌಸ್‌ನ  ಅಬೂಬಕರ್ ಎಂಬವರ ಪುತ್ರ ಮೊಹಮ್ಮದ್ ನವಾಜ್ (32) ಇರಿತಕ್ಕೊಳಗಾಗಿದ್ದು ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇದಕ್ಕೆ ಸಂಬಂಧಿಸಿ ಅವರು ನೀಡಿದ ಹೇಳಿಕೆ ಪ್ರಕಾರ ಇರ್ಶಾದ್ ಸೇರಿದಂತೆ ಮೂವರ ವಿರುದ್ಧ ವಿದ್ಯಾನಗರ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿ ಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪೂರ್ವದ್ವೇಷವೇ ಇರಿತಕ್ಕೆ ಕಾರಣವೆನ್ನಲಾಗಿದೆ.

ರಂಬೂಟನ್ ಗಂಟಲಲ್ಲಿ ಸಿಲುಕಿ ಮಗು ಮೃತ್ಯು

ಕೊಚ್ಚಿ: ಪೆರುಂಬಾವೂರ್‌ನಲ್ಲಿ ರಂಬೂಟನ್ ಹಣ್ಣು ಗಂಟಲಲ್ಲಿ ಸಿಲುಕಿ ಒಂದು ವರ್ಷದ ಮಗು ದಾರುಣವಾಗಿ ಮೃತಪಟ್ಟಿದೆ. ಮರುದಕವಲದಲ್ಲಿ ಬಾಡಿಗೆಗೆ ವಾಸಿಸುವ ಇಡುಕ್ಕಿ ನಿವಾಸಿ ಆದಿರಾಳ ಪುತ್ರ ಅವ್ಯುಕ್ತ್ ಮೃತಪಟ್ಟ ಮಗು. ನಿನ್ನೆ ಸಂಜೆ 6 ಗಂಟೆಗೆ ಧಾರುಣ ಘಟನೆ ನಡೆದಿದೆ. ಅಜ್ಜಿಯ ಜೊತೆ ಆಟವಾಡಿಕೊಂಡಿದ್ದ ಮಗು ಸಿಕ್ಕಿದ ರಂಬೂಟನ್ ಹಣ್ಣನ್ನು ನುಂಗಿದೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಪೆರುಂಬಾವೂರಿನ ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್‌ನಿಂದ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟ: ವಿಜೇತರಿಗೆ ಬಹುಮಾನ ವಿತರಣೆ

ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿ ಯೇಶನ್, ಕಾಸರಗೋಡು ಜಿಲ್ಲಾ ಸ್ಪೋರ್ಟ್ಸ್ ಕ್ಲಬ್‌ನ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಿತು. ಚಾಲಿಂಗಾಲ್ ನಂಬ್ಯಾರಡ್ಕಂ ಇಂಡೋರ್ ಕೋರ್ಟ್‌ನಲ್ಲಿ ಜರಗಿದ ಸ್ಪರ್ಧೆಯಲ್ಲಿ ಜಿಲ್ಲೆಯ ೭ ತಂಡಗಳು ಭಾಗ ವಹಿಸಿತು. ಪಂದ್ಯಾಟದಲ್ಲಿ ರಾಜಪುರಂ ವಲಯದ ಮಹೇಶ್- ಸಲ್ವಿನ್ ತಂಡ ಪ್ರಥಮ ಸ್ಥಾನ ಹಾಗೂ ಕಾಞಂಗಾಡ್ ವಲಯದ ಸಜಿತ್- ವೈಶಾಖ್ ತಂಡ ದ್ವಿತೀಯ ಸ್ಥಾನ, ರಾಜಪುರಂ ವಲಯದ ಸಿಬಿ- ಬೆನ್ ಸೆಬಾಸ್ಟಿಯನ್ ತಂಡ ತೃತೀಯ ಸ್ಥಾನ ಪಡೆಯಿತು. ಸಂಘ ಟನೆಯ ಜಿಲ್ಲಾಧ್ಯಕ್ಷ …

ನಗರದ ರಸ್ತೆಯ ವಿವಿಧೆಡೆ ಹೊಂಡಗಳು: ಸಂಚಾರಕ್ಕೆ ತೊಡಕು

ಕಾಸರಗೋಡು: ನಗರದ  ಕರಂದಕ್ಕಾಡ್‌ನಿಂದ ರೈಲ್ವೇ ನಿಲ್ದಾಣಕ್ಕೆ ತೆರಳುವ ರಸ್ತೆಯ ವಿವಿಧೆಡೆ ಹೊಂಡಗಳು ಸೃಷ್ಟಿಯಾಗಿ ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆ ಎದುರಾಗಿದೆ. ಹೊಂಡಗಳಿಗೆ ಬಿದ್ದು ವಾಹನಗಳಿಗೆ ಹಾನಿ ಸಂಭವಿಸುವುದು ನಿತ್ಯ ಘಟನೆಯಾಗಿದೆ.  ದ್ವಿಚಕ್ರ ವಾಹನಗಳು ಈ ಹೊಂಡಕ್ಕೆ ಬಿದ್ದು ಸವಾರರು  ಗಾಯಗೊಳ್ಳುತ್ತಿದ್ದಾರೆ. ಈ ರಸ್ತೆಯಲ್ಲಿ ಬೀಚ್ ರೋಡ್ ಜಂಕ್ಷನ್, ಕೆಎಸ್‌ಆರ್‌ಟಿಸಿ ಮುಂಭಾಗ ಸಹಿತ ವಿವಿಧೆಡೆಗಳಲ್ಲಿ ಹೊಂಡಗಳು ಸೃಷ್ಟಿಯಾ ಗಿವೆ. ಮಳೆ ಸುರಿಯುವ ವೇಳೆ ರಸ್ತೆಯಲ್ಲಿ ನೀರು ತುಂಬಿಕೊಳ್ಳುತ್ತಿದ್ದು, ಈ ವೇಳೆ ಹೊಂಡಗಳು ಗಮನಕ್ಕೆ ಬಾರದೆ ವಾಹನಗಳು ಅದಕ್ಕೆ ಬೀಳುತ್ತಿರುವು …

ಜಗ್‌ದೀಪ್ ಧನ್ಕರ್ ರಾಜೀನಾಮೆ ಹಿನ್ನೆಲೆ: ಉಪರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆ ಆರಂಭಿಸಿದ ಚುನಾವಣಾ ಆಯೋಗ

ನವದೆಹಲಿ:  ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನ್ಕರ್ ರಾಜೀ ನಾಮೆ ನೀಡಿದ ಬೆನ್ನಲ್ಲೇ  ಕೇಂದ್ರ ಚುನಾವಣಾ ಆಯೋಗ    ಉಪ ರಾಷ್ಟ್ರಪತಿ  ಚುನಾವಣೆ ನಡೆಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಮೂಲಗಳ ಪ್ರಕಾರ ಕೇಂದ್ರ ಚುನಾವಣಾ ಆಯೋಗ ಮುಂದಿನ 48ರಿಂದ 72 ಗಂಟೆಗಳಲ್ಲಿ ಉಪರಾಷ್ಟ್ರಪತಿ  ಚುನಾವಣೆಯ ವೇಳಾಪಟ್ಟಿ ಪ್ರಕಟಿಸಲಿದೆ. ಅಗೋಸ್ತ್ ಕೊನೆಯ ವಾರದೊಳಗೆ ನೂತನ ಉಪರಾಷ್ಟ್ರಪತಿ ಆಯ್ಕೆಯಾಗುವ ನಿರೀಕ್ಷೆ ಇದೆ. ಜಗದೀಪ್ ಧನ್ಕರ್‌ರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿನ್ನೆ ಸಂಜೆ ಔಪಚಾರಿಕವಾಗಿ ಅಂಗೀಕರಿಸಿದ್ದಾರೆ. ಜಗದೀಪ್‌ರ ಅಧಿಕಾರಾವಧಿ ಮುಗಿಯಲು ಇನ್ನೂ ಎರಡು ವರ್ಷಬಾಕಿ …

ಅಡ್ಕತ್ತಬೈಲು ಶಾಲೆಗೆ ನುಗ್ಗಿದ ಕಳ್ಳರು ಹಣ, ಸಿಸಿ ಕ್ಯಾಮರಾ ಡಿವಿಆರ್ ಕಳವು

ಕಾಸರಗೋಡು: ಅಡ್ಕತ್ತಬೈಲು ಸರಕಾರಿ ಯುಪಿ ಶಾಲೆಯಿಂದ ಹಣ  ಸಹಿತ ವಿವಿಧ ಉಪಕರಣಗಳು ಕಳವಿಗೀಡಾದ ಬಗ್ಗೆ ದೂರಲಾಗಿದೆ. ಶಾಲಾ ಕಚೇರಿಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು  ಕಪಾಟಿನಲ್ಲಿದ್ದ 5೦೦೦ ರೂಪಾಯಿ, ಸಿಸಿಟಿವಿ ಕ್ಯಾಮರಾದ ಡಿವಿಆರ್ ಕಳವುಗೈದಿ ದ್ದಾರೆ. ಇದರಿಂದ ಸುಮಾರು 15೦೦೦ ರೂಪಾಯಿಗಳ ನಷ್ಟ ಅಂದಾಜಿ ಲಾಗಿದೆ. ಈ ತಿಂಗಳ 22 ಹಾಗೂ 23ರ ಮಧ್ಯೆ ಕಳವು ನಡೆದಿರಬಹುದೆಂದು ಸಂಶಯಿಸಲಾಗಿದೆ. ಮುಖ್ಯೋ ಪಾಧ್ಯಾಯಿನಿ ಸೀಮ ಸುವರ್ಣ ಈ ಬಗ್ಗೆ ನೀಡಿದ ದೂರಿನಂತೆ ನಗರ ಠಾಣೆ ಪೊಲೀಸರು ಕೇಸು …

ಮಗುವಿಗೆ ಜನ್ಮ ನೀಡಿದ ಹದಿನಾಲ್ಕರ ಬಾಲಕಿ

ಕಾಸರಗೋಡು: ಹೊಸ ದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  ವಾಸಿಸುವ 14ರ ಹರೆಯದ ಬಾಲಕಿ ಮಗುವಿಗೆ ಜನ್ಮ ನೀಡಿದ ಬಗ್ಗೆ ವರದಿ ಯಾಗಿದೆ. ರಕ್ತದೊತ್ತಡ ಉಂಟಾದ ಹಿನ್ನೆಲೆಯಲ್ಲಿ  ಬಾಲಕಿ ಹಾಗೂ ಮಗುವನ್ನು ಕಾಞಂಗಾಡ್‌ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿದೆ. ಆಸ್ಪತ್ರೆ ಅಧಿಕಾರಿಗಳು ನೀಡಿದ ಮಾಹಿತಿಯಂತೆ  ಹೊಸದುರ್ಗ ಪೊಲೀಸರು ಆಸ್ಪತ್ರೆಗೆ ತಲುಪಿ ತನಿಖೆ ಆರಂಭಿಸಿದ್ದಾರೆ.  ಮಗುವಿಗೆ ಜನ್ಮ ನೀಡಿದ ಬಾಲಕಿ ೧೦ನೇ ತರಗತಿ ವಿದ್ಯಾರ್ಥಿನಿಯಾಗಿ ದ್ದಾಳೆಂದು ಹೇಳಲಾಗುತ್ತಿದೆ.

ಮನೆಯಿಂದ ಹಾಡಹಗಲೇ ತಾಮ್ರದ ಪಾತ್ರೆಗಳು  ಕಳವು

ಮಂಜೇಶ್ವರ: ವರ್ಕಾಡಿಯಲ್ಲಿ ಮನೆಯೊಂದಕ್ಕೆ ಹಾಡಹಗಲೇ ಕಳ್ಳರು ನುಗ್ಗಿ ತಾಮ್ರದ ಪಾತ್ರೆಗಳನ್ನು ಕಳವುಗೈದ ಘಟನೆ ನಡೆದಿದೆ. ವರ್ಕಾಡಿ ನಾವಡ್ರಬೈಲು ಎಂಬಲ್ಲಿನ ಹರ್ಷವರ್ಧನ ಎಂಬವರ ಮನೆಯಿಂದ ಕಳವು ನಡೆದಿದೆ. ತಾಮ್ರದ ವಿವಿಧ ಪಾತ್ರೆಗಳ ಸಹಿತ ಸುಮಾರು   50 ಸಾವಿರ ರೂ.ಗಳ ಸಾಮಗ್ರಿಗಳನ್ನು ಕಳವುಗೈದಿರುವುದಾಗಿ ದೂರಲಾಗಿದೆ. ಹರ್ಷವರ್ಧನ ಮಂಗಳೂರಿನಲ್ಲಿ ನ್ಯಾಯವಾದಿಯಾ ಗಿದ್ದಾರೆ. ಅವರು ಕಳೆದ ಮಂಗಳವಾರ ಬೆಳಿಗ್ಗೆ 2 ಗಂಟೆಗೆ ಮನೆಯಿಂದ ತೆರಳಿ ರಾತ್ರಿ 8 ಗಂಟೆಗೆ ಮರಳಿದ್ದಾರೆ. ಈ ವೇಳೆ ಮನೆಯ ಹಿಂಭಾಗದ ಬಾಗಿಲು ಮುರಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ …

ಸ್ನೇಹಿತರೊಂದಿಗೆ ಸಮುದ್ರಕ್ಕಿಳಿದ  ವಲಸೆ ಕಾರ್ಮಿಕ ನಾಪತ್ತೆ

ಕಾಸರಗೋಡು: ಸ್ನೇಹಿತರೊಂದಿಗೆ ಸಮುದ್ರಕ್ಕಿಳಿದ ವಲಸೆ ಕಾರ್ಮಿಕ ಸಮುದ್ರದ  ಅಲೆಗೆ ಸಿಲುಕಿ ನಾಪತ್ತೆಯಾದ ಘಟನೆ ಕಾಸರ ಗೋಡು ನೆಲ್ಲಿಕುಂಜೆ ಬೀಚ್‌ನಲ್ಲಿ ನಡೆದಿದೆ. ಉತ್ತರಪ್ರದೇಶ ಬುಲ್ ಬುಳಿಯಾವೂರ್ ಕಾನೋಜ್‌ನ  ರಾಣು ಅಲಿಯಾಸ್ ಜೈವೀರ್ ಸಿಂಗ್ (23) ನಾಪತ್ತೆಯಾದ ಯುವಕ. ಈತ ನಿನ್ನೆ ಅಪರಾಹ್ನ ನಾಲ್ವರು ಸ್ನೇಹಿತರೊಂದಿಗೆ ನೆಲ್ಲಿಕುಂಜೆ   ಸಮುದ್ರಕ್ಕಿಳಿದಿದ್ದು ಬಲವಾದ ಅಲೆಗೆ ಸಿಲುಕಿ ನಾಪತ್ತೆಯಾಗಿದ್ದಾನೆ. ವಿಷಯ ತಿಳಿದ ಕರಾವಳಿ ಪೊಲೀಸರು, ಅಗ್ನಿಶಾಮಕದಳ, ಬೆಸ್ತರು ಸೇರಿ ವ್ಯಾಪಕ ಶೋಧ ನಡೆಸಿದರೂ ರಾಣುನನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.