ಪಂಚಾಯತ್ ಚುನಾವಣೆ: ಒಂದೂವರೆ ವರ್ಷದಿಂದ ಮುಚ್ಚಿದ ಕಂಚಿಕಟ್ಟೆ- ಕೊಡ್ಯಮ್ಮೆ ಸೇತುವೆ ನಿರ್ಮಾಣಕ್ಕೆ ಮತ್ತೆ ಹೆಚ್ಚಿದ ಬೇಡಿಕೆ
ಕುಂಬಳೆ: ಜೀರ್ಣಗೊಂಡ ಹಿನ್ನೆಲೆಯಲ್ಲಿ ಸುರಕ್ಷಿತವಲ್ಲವೆಂದು ಒಂದೂವರೆ ವರ್ಷದ ಹಿಂದೆ ಮುಚ್ಚಿದ ಕುಂಬಳೆ ಕೊಡ್ಯಮ್ಮೆ- ಕಂಚಿಕಟ್ಟೆ ವಿಸಿಬಿ ಕಂ ಬ್ರಿಡ್ಜ್ ಸಂಪೂರ್ಣ ನಾಶದತ್ತ ಸಾಗುತ್ತಿದೆ. ಸ್ಥಳೀಯರು ಮನವಿ ನೀಡಿದರೂ ಸೇತುವೆ ನಿರ್ಮಾಣಕ್ಕೆ ಶಾಸಕರ ನೇತೃತ್ವದಲ್ಲಿ ಕ್ರಿಯಾ ಸಮಿತಿ ಪದಾಧಿಕಾರಿಗಳು, ತ್ರಿಸ್ತರ ಪಂಚಾಯತ್ ಪದಾಧಿಕಾರಿಗಳು ಈ ವರ್ಷವೇ ನಬಾರ್ಡ್ ಯೋಜನೆಯಲ್ಲಿ ಸೇರಿಸಬೇಕೆಂದು ಆಗ್ರಹಿಸಿದ್ದಾರೆ. ಈ ಬೇಡಿಕೆ ಮುಂದಿಟ್ಟು ಶಾಸಕರ ನೇತೃತ್ವದಲ್ಲಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಜಿಲ್ಲೆಯ ಜನಪ್ರತಿನಿಧಿಗಳು ಸೇರಿದ ತಂಡವೊಂದು ಸಚಿವ ಕೆ.ಎನ್. ಬಾಲಗೋಪಾಲ್, ಸಚಿವ ರೋಷಿ ಅಗಸ್ಟಿನ್ ಎಂಬಿವರನ್ನು …