ಪೈವಳಿಕೆ ಪಂ.ನಲ್ಲಿ ಎಡ-ಬಲ ರಾಜಕೀಯ ಒಪ್ಪಂದವೆಂಬ ಬಿಜೆಪಿ ಆರೋಪ ಸತ್ಯಕ್ಕೆ ದೂರ-ಸಿಪಿಎಂ

ಪೈವಳಿಕೆ: ಪಂಚಾಯತ್‌ನಲ್ಲಿ ಎಡರಂಗ ಹಾಗೂ ಐಕ್ಯರಂಗ ಮಧ್ಯೆ ಒಪ್ಪಂದ ರಾಜಕೀಯ ಆಡಳಿತ ನಡೆಯುತ್ತಿದೆ ಎಂದು ಬಿಜೆಪಿ ಆರೋಪ ಸತ್ಯಕ್ಕೆ ದೂರವೆಂದು ಸಿಪಿಎಂ ಪೈವಳಿಕೆ ಪಂಚಾಯತ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಪೈವಳಿಕೆ ಪಂಚಾಯತ್ ಆಡಳಿತ ಮಂಡಳಿ ತೀರ್ಮಾನಿಸಿದ ಎಲ್ಲಾ ಜನಪರ ಕಾರ್ಯಗಳು ಸರಕಾರ ನಿರ್ದೇಶಿಸಿದ ಎಲ್ಲಾ ಕಾರ್ಯಗಳು ಸಕಾಲದಲ್ಲಿ ನಡೆಯುತ್ತಿದೆ. ಹಸಿರುಕ್ರಿಯಾ ಸೇನೆಯ ಸದಸ್ಯೆಯರು ಸರಿಯಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ. ಪಂಚಾಯತ್ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಅಸತ್ಯ ಆರೋಪಗಳನ್ನು ಬಿಜೆಪಿ ಹೊರಿಸಿ ನಾಟಕವಾಡುತ್ತಿದೆಯೆಂದು …

ನಿವೃತ್ತ ಅಂಚೆ ಉದ್ಯೋಗಿ ನಿಧನ

ಕುಂಬಳೆ: ನಾಯ್ಕಾಪು ರಾಮೇಶ್ವರ ನಗರದ ಮಹಾಲಿಂಗ ಶೆಟ್ಟಿ (95) ನಿಧನ ಹೊಂದಿದರು.  ಇವರು  ಅಂಚೆ  ಇಲಾ ಖೆಯಲ್ಲಿ  ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.  ಅಲ್ಲದೆ ನಾಯ್ಕಾಪು ಶ್ರೀ ಗಣೇಶ ಭಜನಾ ಮಂದಿರದ ಸಕ್ರಿಯ ಕಾರ್ಯ ಕರ್ತನಾಗಿದ್ದರು. ಮೃತರು ಪತ್ನಿ ಕಮಲ, ಮಕ್ಕಳಾದ ಶಿವರಾಮ ಶೆಟ್ಟಿ, ನಾರಾಯಣ ಶೆಟ್ಟಿ, ಶ್ರೀಧರ ಶೆಟ್ಟಿ, ಶ್ರೀಕೃಷ್ಣ ಶೆಟ್ಟಿ, ಸೊಸೆಯಂದಿರಾದ ಸುಜಾತ, ಶೈಲ, ನಯನ, ವೃಂದ, ನಳಿನಾಕ್ಷಿ, ಸಹೋದರ ನಾರಾಯಣ ಶೆಟ್ಟಿ ನೀರ್ಚಾಲು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನಿವೃತ್ತ ಪೋಸ್ಟ್ ಮಿಸ್ಟ್ರಸ್ ನಿಧನ

ಪೆರ್ಲ: ಮಣಿಯಂಪಾರೆ ನೆಕ್ಕರೆಪದವಿನ ಪಿ. ಕುಂಞಿ ಕಣ್ಣ ಮಾಸ್ತ ರ್‌ರ ಪತ್ನಿ ಪಿ. ಲಕ್ಷ್ಮಿ ನಿಧನಹೊಂ ದಿದರು. ಇವರು ಕಾಸರಗೋಡು ಅಂಚೆ ಕಚೇರಿಯಲ್ಲಿ ಪೋಸ್ಟ್ ಮಿಸ್ಟ್ರಸ್ ಆಗಿ ನಿವೃತ್ತರಾಗಿದ್ದರು. ವಿದ್ಯಾನಗರ, ತಳಂಗರೆ, ಚೆರ್ಕಳ, ಕುಂಬಳೆ, ಬಂದ್ಯೋಡು, ಪೆರ್ಲ ಎಂಬಿಡೆಗಳ ಅಂಚೆ ಕಚೇರಿಗಳಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಮಕ್ಕಳಾದ ಆಶಾ ಕೆ.ಎಲ್ (ಉಪನ್ಯಾಸಕಿ), ಅಭಿಲಾಷ್ ಪಿ.ಕೆ (ಎನ್.ಜಿ), ಸೊಸೆ ದಿವ್ಯಶ್ರೀ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನಿಧನ

ಕಾಸರಗೋಡು: ಮಾಯಿಪ್ಪಾಡಿ  ಶಿರಿಬಾಗಿಲು ಶ್ರೀಕೃಷ್ಣ ನಿವಾಸ್‌ನ ಗೋಪಾಲಕೃಷ್ಣ ಆಚಾರ್ಯ (58) ನಿಧನ ಹೊಂದಿದರು. ದಿ| ಪುರೋಹಿತ ಜನಾರ್ದನ ಆಚಾರ್ಯರ ಪುತ್ರನಾದ ಮೃತರು ತಾಯಿ ಸರಸ್ವತಿ, ಪತ್ನಿ ಯಶೋಧ, ಮಕ್ಕಳಾದ ಮಧುರಾಜ್, ಪ್ರಶಾಂತಿ, ಸಿಂಧೂರ,  ಅಳಿಯಂದಿರಾದ ಹರಿಪ್ರಸಾದ್, ಮಿಥುನ್, ಸಹೋದರ-ಸಹೋದರಿಯರಾದ ಗಂಗಾಧರ, ಪಾಂಡುರಂಗ, ಅನಂತಪದ್ಮನಾಭ, ವಸಂತ, ಉದಯಶಂಕರ್, ಹರೀಶ್ ಕುಮಾರ್, ನವೀನ್‌ಚಂದ್ರ, ವೇದಾವತಿ, ಚಂದ್ರಕಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕಳೆದುಹೋದ ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿ ಹಿಂತಿರುಗಿಸಿದ ಸೈಬರ್ ಪೊಲೀಸ್

ಕಾಸರಗೋಡು: ವಿವಿಧ ಸನ್ನಿವೇಶಗಳಲ್ಲಿ ಕಳೆದುಹೋಗಿದ್ದ ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿ ಕಾಸರಗೋಡು ಸೈಬರ್ ಪೊಲೀಸರು ಹಿಂತಿರುಗಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಸುಪರಿಂಟೆಂಡೆಂಟ್ ಸಿ.ಎಂ. ದೇವದಾಸನ್, ಡಿವೈಎಸ್‌ಪಿ ಟಿ. ಉತ್ತಮ್‌ದಾಸ್ ಎಂಬಿವರ ಉಪಸ್ಥಿತಿಯಲ್ಲಿ ಕಳೆದು ಹೋಗಿದ್ದ ಆರು ಮೊಬೈಲ್ ಫೋನ್‌ಗಳನ್ನು ವಾಪಸು ನೀಡಲಾಗಿದೆ. ಕಳೆದು ಹೋದವುಗಳಲ್ಲಿ ಅನ್ಯರಾಜ್ಯದವರ ಮೊಬೈಲ್ ಫೋನ್‌ಗಳು  ಹೆಚ್ಚಾ ಗಿತ್ತು. ಸೆಕೆಂಡ್ ಹ್ಯಾಂಡ್ ಮೊಬೈಲ್‌ಗಳು ಇವುಗಳಲ್ಲಿ ಒಳಗೊಂಡಿತ್ತು. ಸೈಬರ್ ಪೊಲೀಸ್ ಠಾಣೆಯ ಎಸ್‌ಐ ಪಿ.ಕೆ. ಅಜಿತ್, ಸಿವಿಲ್ ಪೊಲೀಸ್ ಆಫೀಸರ್ ವಿ. ಸಜೇಶ್ ಎಂಬಿವರ ತಂಡ ಮೊಬೈಲ್‌ಗಳನ್ನು ಪತ್ತೆಹಚ್ಚಿದೆ.

ನಾರಂಪಾಡಿಯಲ್ಲಿ ಬಿಎಂಎಸ್ ಸ್ಥಾಪಕ ದಿನಾಚರಣೆ

ಬದಿಯಡ್ಕ: ಬಿಎಂಎಸ್ 7೦ನೇ ಸ್ಥಾಪನಾ ದಿನದ ಅಂಗವಾಗಿ ನಾರಂಪಾಡಿ ಯೂನಿಟ್ ನೇತೃತ್ವದಲ್ಲಿ ಇಂದು ಬೆಳಿಗ್ಗೆ ನಡೆದ ಕಾರ್ಯ ಕ್ರಮದಲ್ಲಿ ಹಿರಿಯ ಕಾರ್ಯಕರ್ತ ಮಹಾಲಿಂಗ ಪಾಟಾಳಿ ಧ್ವಜಾ ರೋಹಣ ನಡೆಸಿದರು. ಬಿಎಂಎಸ್ ಮುಳ್ಳೇರಿಯ ವಲಯ ಕಾರ್ಯದರ್ಶಿ ಸದಾಶಿವ ಮಾತನಾಡಿದರು. ಬಿಜೆಪಿ ಬದಿಯಡ್ಕ ಮಂಡಲ  ಅಧ್ಯಕ್ಷ ಗೋಪಾಲಕೃಷ್ಣ ಎಂ, ಹರೀಶ್ ನಾರಂಪಾಡಿ, ರವೀಂದ್ರ ಪಾವೂರು, ಗಿರೀಶ್ ಮುಂಡೋಳುಮೂಲೆ, ಸುರೇಶ್ ಮುಂಡೋಳುಮೂಲೆ, ಸತ್ಯನಾರಾಯಣ ಭಟ್, ಉದಯ ನೆಲ್ಯಡ್ಕ, ಗಿರೀಶ್ ರೈ ನಾರಂಪಾಡಿ ಉಪಸ್ಥಿತರಿದ್ದರು.

ವರ್ಕಾಡಿ ಬಿಲ್ಲವ ಸಮಾಜ ಸುಧಾರಕ ಸೇವಾ ಸಂಘ ಮಹಾಸಭೆ, ನೂತನ ಸಮಿತಿ ರಚನೆ

ವರ್ಕಾಡಿ: ಬಿಲ್ಲವ ಸಮಾಜ ಸುಧಾರಕ ಸೇವಾ ಸಂಘದ ಮಹಾಸಭೆ ವರ್ಕಾಡಿ ಶ್ರೀ ನಾರಾಯಣ ಗುರು ಮಂ ದಿರದಲ್ಲಿ ನಡೆಯಿತು. ಅಧ್ಯಕ್ಷ ಪ್ರಭಾಕರ ಪೂಜಾರಿ ಪಾವಳ ಅಧ್ಯಕ್ಷತೆ ವಹಿಸಿ ದ್ದರು. ಗೌರವಾಧ್ಯಕ್ಷರಾದ ಬಂಟಪ್ಪ ಪೂಜಾರಿ ಕಳಿಯೂರು, ರವೀಂದ್ರ ಪೂಜಾರಿ ಕಳಿಯೂರು, ಜನಾರ್ದನ ಪೂ ಜಾರಿ ಕಳಿಯೂರು ಉಪಸ್ಥಿತರಿದ್ದರು.ನೂತನ ಸಮಿತಿಯನ್ನು ರಚಿಸಲಾ ಯಿತು. ಅಧ್ಯಕ್ಷರಾಗಿ ಭುಜಂಗ ಪೂಜಾರಿ ಕಡಂಬಾರ್, ಕಾರ್ಯದರ್ಶಿ ಯಾಗಿ ಪೂರ್ಣಿಮÁ ಬೇರಿಂಜ, ಕೋಶಾಧಿಕಾರಿಯಾಗಿ ನವೀನ್ ಪೂಜಾರಿ ಮಡ್ವ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಬಂಟಪ್ಪ ಪೂಜಾರಿ ಕಳಿಯೂರು, ಉಪಾಧ್ಯಕ್ಷರಾಗಿ ಪದ್ಮ …

ಅಗಲಿದ ಸಮರ ನಾಯಕವಿ.ಎಸ್. ಅಚ್ಯುತಾನಂದನ್‌ರಿಗೆ ಅಶ್ರುತರ್ಪಣೆ

ತಿರುವನಂತಪುರ: ಅಗಲಿದ ಕೇರಳದ ಮಾಜಿ ಮುಖ್ಯಮಂತ್ರಿ, ಕಮ್ಯೂನಿಸ್ಟ್ ಪಕ್ಷದ ಭೀಷ್ಮಾಚಾ ರ್ಯರೆಂದೇ ಕರೆಯಲಾಗುತ್ತಿರುವ ಹಿರಿಯ ನೇತಾರ ವಿ.ಎಸ್. ಅಚ್ಯುತಾನಂದನ್ (102)ರ ನಿಧನಕ್ಕೆ ರಾಜ್ಯ ಕಂಬನಿ ಮಿಡಿಯುತ್ತಿದೆ. ಅಚ್ಯುತಾನಂದನ್‌ರ ನಿಧನದ ಹಿನ್ನೆಲೆಯಲ್ಲಿ  ರಾಜ್ಯ ಸರಕಾರ ಇಂದು  ಸಾರ್ವತ್ರಿಕ ರಜೆ ಘೋಷಿಸಿದೆ. ಮಾತ್ರ ವಲ್ಲ ಮೂರು ದಿನಗಳ ಶೋಕಾಚರಣೆ ಆಚರಿಸಲಾಗುತ್ತಿದೆ. ವಿ.ಎಸ್. ಅಚ್ಯುತಾನಂದನ್ ನಿನ್ನೆ ಅಪರಾಹ್ನ 3.30ಕ್ಕೆ ತಿರುವನಂತಪುರದ ಎಸ್‌ಯುಟಿ ಆಸ್ಪತ್ರೆಯಲ್ಲಿ ಹೃದಯಾ ಘಾತಕ್ಕೊಳಗಾಗಿ ಕೊನೆಯುಸಿರೆಳೆದರು.  ಉಸಿರಾಟ ತೊಂದರೆಯಿಂದಾಗಿ ಅವರನ್ನು ವಾರಗಳ ಹಿಂದೆಯೇ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ …

ಉಯ್ಯಾಲೆಯಾಟವಾಡುತ್ತಿದ್ದ ವೇಳೆ ಕುಣಿಕೆ ಕುತ್ತಿಗೆಗೆ ಸಿಲುಕಿ ಬಾಲಕ ಸಾವು

ಕಾಸರಗೋಡು: ಕ್ವಾರ್ಟರ್ಸ್ ನೊಳಗೆ ಉಯ್ಯಾಲೆಯಾಡುತ್ತಿದ್ದ ವೇಳೆ ಅದರ ಕುಣಿಕೆ ಅಕಸ್ಮಾತ್ ಕುತ್ತಿಗೆಗೆ ಸಿಲುಕಿ ಬಾಲಕ ಧಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಮೂಲತಃ ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯ ಪಾಕಲ ತಾಲೂಕಿನ ಧಮಲಚೆರುವು ಇಂದಿರಾನಗರ ನಿವಾಸಿ ಹಾಗೂ ಈಗ ಚೆಂಗಳಕ್ಕೆ ಸಮೀಪದ ನಾಲ್ಕನೇ ಮೈಲಿನ ಕ್ವಾರ್ಟರ್ಸ್‌ವೊಂದರಲ್ಲಿ ವಾಸಿಸುತ್ತಿರುವ ಸೈಯದ್ ಮಸ್ತಾನ್- ನಸ್ರೀನ್ ದಂಪತಿ ಪುತ್ರ ಉಮ್ಮರ್ ಫಾರೂಕ್ (12) ಸಾವನ್ನಪ್ಪಿದ ಬಾಲಕ. ಈತ ನಿನ್ನೆ ಮಧ್ಯಾಹ್ನ ಕ್ವಾರ್ಟ ರ್ಸ್‌ನ ಒಳಗೆ ಮೇಲಿನ ಅಡ್ಡಕ್ಕೆ ಸೀರೆ ಕಟ್ಟಿ ಉಯ್ಯಾಲೆ ಆಟವಾಡತೊಡಗಿ ದ್ದನು.  …

ರೈಲಿನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ: ಆರೋಪಿ ಸೆರೆ

ಕಾಸರಗೋಡು: ರೈಲಿನಲ್ಲಿ ಪ್ರಯಾ ಣಿಸುತ್ತಿದ್ದ ಎಂಬಿಎ ವಿದ್ಯಾರ್ಥಿನಿಯ ದೇಹ ಸ್ಪರ್ಶಿಸಿ ಕಿರುಕುಳ ನೀಡಿದ ಪ್ರಕರಣದ ಆರೋಪಿಯನ್ನು ಕಾಸರಗೋಡು ರೈಲ್ವೇ ಎಸ್‌ಐ ಸಿ.ಎಚ್. ಸನಿಲ್ ಕುಮಾರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ನೈವೇಲಿ ಶ್ರೀನಿವಾಸನ್ ನಿವಾಸಿ ವೆಂಕಟೇಶನ್ (35) ಎಂಬಾತ ಬಂಧಿತ ಆರೋಪಿ. ಕಿರುಕುಳಕ್ಕೊಳಗಾದ ವಿದ್ಯಾರ್ಥಿನಿ ರವಿವಾರದಂದು ರೈಲಿನಲ್ಲಿ ಸಂಚರಿಸುತ್ತಿದ್ದ ವೇಳೆ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿ ಆಕೆಯ ದೇಹ ಸ್ಪರ್ಶಿಸಿ ಕಿರುಕುಳ ನೀಡಲೆತ್ನಿಸಿದ್ದಾನೆ. ಆಗ ರೈಲಿನಲ್ಲಿದ್ದ ಇತರ ಪ್ರಯಾಣಿಕರು ಆರೋಪಿಯನ್ನು ತಡೆಹಿಡಿದು ಬಳಿಕ ರೈಲು ಕಾಸರಗೋಡು ನಿಲ್ದಾಣಕ್ಕೆ …