ಬಿಎಂಎಸ್‌ಆರ್‌ಎ ಜಿಲ್ಲಾ ವಾರ್ಷಿಕ ಸಮ್ಮೇಳನ, ಪದಾಧಿಕಾರಿಗಳ ಆಯ್ಕೆ

ಕಾಸರಗೋಡು: ಬಿಎಂಎಸ್ ಆರ್‌ಎ ಜಿಲ್ಲಾ ವಾರ್ಷಿಕ ಸಮ್ಮೇಳನ ಇತ್ತೀಚೆಗೆ ಕಾಸರಗೋಡು ಹೊಸ ಬಸ್ ನಿಲ್ದಾಣದ ಸಮೀಪ ವಸತಿಗೃಹದಲ್ಲಿ ಜರಗಿತು. ಬಿಎಂಎಸ್‌ಆರ್‌ಎ ಜಿಲ್ಲಾ ಧ್ಯಕ್ಷ ಹರಿಪ್ರಸಾದ್ ಅಧ್ಯಕ್ಷತೆ ವಹಿಸಿ ದರು. ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಸುರೇಶ್ ಕುಮಾರ್ ಕೆ ದೀಪ ಬೆಳಗಿಸಿ ಉದ್ಘಾಟಿಸಿದರು.  ಬಿಎಂಎಸ್ ಜಿಲ್ಲಾ ಅಧ್ಯಕ್ಷ ಉಪೇಂದ್ರ ಕೋಟೆಕಣಿ, ಕಾಸರಗೋಡು ವಲಯ ಕಾರ್ಯದರ್ಶಿ ಬಾಬು ಮೋನ್, ಬಿಎಂಎಸ್‌ಆರ್‌ಎ ರಾಜ್ಯ ಕಾರ್ಯದರ್ಶಿ ಮನೀಶ್ ಬಿ ಶುಭ ಕೋರಿದರು. ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಅನಿಲ್ ಕುಮಾರ್ ವಾರ್ಷಿಕ ವರದಿ, ಕೋಶಾಧಿಕಾರಿ …

ವಿವಾಹ ಸಂಬಂಧ ಬೇರ್ಪಡಿಸಿದ ನ್ಯಾಯವಾದಿಯಿಂದ 7 ವರ್ಷದ ಪುತ್ರಿಗೆ ದೌರ್ಜನ್ಯ

ತೃಶೂರು: ಪೇರಮಂಗಳತ್ ಎಂಬಲ್ಲಿ ಪುತ್ರಿಯನ್ನು ದೌರ್ಜನ್ಯಗೈದ ದೂರಿನಂತೆ ನ್ಯಾಯವಾದಿ ಸೆರೆಯಾಗಿ ದ್ದಾನೆ. ಡಾಕ್ಟರಲ್ಲಿ ಮಗು ದೌರ್ಜನ್ಯದ ಬಗ್ಗೆ ತಿಳಿಸಿತ್ತು. 7 ವರ್ಷದ ಪುತ್ರಿಯನ್ನು ದೌರ್ಜನ್ಯಗೈದ ಪ್ರಕರಣದಲ್ಲಿ ನ್ಯಾಯ ವಾದಿಯನ್ನು ಸೆರೆ ಹಿಡಿಯಲಾಗಿದೆ. ತಂದೆ ತಾಯಿ ಎರಡು ವರ್ಷದ ಹಿಂದೆ ವಿವಾಹ ಸಂಬಂಧವನ್ನು ವಿಚ್ಛೇಧಿಸಿದ್ದರು. ನ್ಯಾಯಾಲಯದ ಆದೇಶ ದಂತೆ ಆದಿತ್ಯ ವಾರಗಳಂದು ತಂದೆಯ ಜೊತೆ ಮಗು ಇರಬೇಕೆಂದು ತೀರ್ಪು ನೀಡ ಲಾಗಿತ್ತು. ಈ ದಿನದಂದು ಮಗುವನ್ನು ದೌರ್ಜನ್ಯ ಗೈದಿರಬೇಕೆಂದು ಶಂಕಿಸಲಾ ಗಿದೆ.  ತೃಶೂರು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ …

ಕಾಡಾನೆ ದಾಳಿಯಿಂದ ವ್ಯಾಪಕ ಕೃಷಿ ನಾಶ

ಅಡೂರು: ದೇಲಂಪಾಡಿ ಪಂಚಾಯತ್‌ನ ಪರಪ್ಪೆ ಎಂಬಲ್ಲಿ ಕಾಡಾನೆ ಹಾವಳಿಯಿಂದಾಗಿ ವ್ಯಾಪಕ ಕೃಷಿ ನಾಶ ಸಂಭವಿಸಿದೆ. ಪರಪ್ಪೆ ಪೊಕ್ಲಮೂಲೆ ಎಂಬಲ್ಲಿನ ಸಮೀರ್‌ರ ತೋಟಕ್ಕೆ ನುಗ್ಗಿದ ಕಾಡಾನೆಗಳು 10ಕ್ಕೂ ಹೆಚ್ಚು ತೆಂಗಿನ ಮರಗಳು, 12 ಕಂಗುಗಳು ಹಾಗೂ ಹಲವಾರು ಬಾಳೆಗಳನ್ನು ನಾಶಪಡಿಸಿವೆ. ಸಮೀರ್‌ರ ಸಹೋದರ ಅಶ್ರಫ್‌ರ ತೋಟಕ್ಕೂ ಕಾಡಾನೆ ನುಗ್ಗಿ ವ್ಯಾಪಕ ನಾಶನಷ್ಟ ಸೃಸ್ಟಿಸಿದೆ. ವಿಷಯ ತಿಳಿದು ಅರಣ್ಯಾಧಿಕಾರಿಗಳು ತಲುಪಿ ಆನೆಗಳನ್ನು ಓಡಿಸಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ.

ಸಾಲದ ಹೊರೆ: ಬ್ಯಾಂಕ್‌ನವರ ಬೆದರಿಕೆಯಿಂದ ಕುಟುಂಬ ಆತ್ಮಹತ್ಯೆಗೆತ್ನ; ಗೃಹಿಣಿ ಮೃತ್ಯು

ಪತ್ತನಂತಿಟ್ಟ: ಸಾಲದ ಹೊರೆಯ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆತ್ನಿಸಿದ ಮೂರು ಮಂದಿಯ ಕುಟುಂಬದ ಗೃಹಿಣಿ ಮೃತಪಟ್ಟರು. ಪತ್ತನಂತಿಟ್ಟ ಕೊಡುಮನ್‌ವೇಟಕ್ಕೋಟೆ ನಿವಾಸಿ ಲೀಲಾ (50) ಮೃತಪಟ್ಟವರು. ಪತಿ ನೀಲಾಂಭರನ್, ಪುತ್ರ ದಿಪಿನ್ ಕುಮಾರ್ ಎಂಬಿವರನ್ನು ಗಂಭೀರ ಸ್ಥಿತಿಯಲ್ಲಿ ಕೋಟ್ಟಯಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ಬೆಳಿಗ್ಗೆ ಅಸ್ವಸ್ಥ ಸ್ಥಿತಿಯಲ್ಲಿದ್ದ ನೀಲಾಂಭರನ್ ಈ ವಿಷಯವನ್ನು ಸಂಬಂಧಿಕನಿಗೆ ತಿಳಿಸಿದ್ದಾರೆ. ಮಾಹಿತಿ ತಿಳಿದು ನೆರೆಮನೆಯವರು ತಲುಪಿ ಅಸ್ವಸ್ಥ ಸ್ಥಿತಿಯಲ್ಲಿದ್ದ ಇವರನ್ನು ಕೂಡಲೇ ಪತ್ತನಂತಿಟ್ಟ ಜನರಲ್ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ತಪಾಸಣೆಯಲ್ಲಿ ಲೀಲಾ ಮೃತಪಟ್ಟಿರುವುದು ಖಚಿತಪಡಿಸಲಾಗಿದೆ. ಉದ್ಯೋಗ …

ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ, ಸನ್ಮಾನ 26ರಂದು

ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ  ಈ ತಿಂಗಳ 26ರಂದು ಇಲ್ಲಿನ ಗಾಯತ್ರಿ ಮಂಟಪದಲ್ಲಿ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅಮರ್ ಜವಾನ್ ಜ್ಯೋತಿ ಬೆಳಗಿಸುವರು.  ಬಳಿಕ ಪುಷ್ಪಾರ್ಚನೆ, ವಿದ್ಯಾರ್ಥಿಗಳಿಂದ ನೃತ್ಯ ರೂಪಕ, ಸ್ವಾಮೀಜಿಯವರಿಂದ ಆಶೀರ್ವಚನ ನಡೆಯಲಿದೆ. ಸಭೆಯಲ್ಲಿ ಉದ್ಯಮಿ ಶಶಿಧರ ಶೆಟ್ಟಿ ಬರೋಡ ಅಧ್ಯಕ್ಷತೆ ವಹಿಸುವರು. ಅಜಿತ್ ಹನುಮಕ್ಕನವರ್  ಮಾತನಾಡುವರು. ಈ ಸಂದರ್ಭದಲ್ಲಿ ಹವಾಲ್ದಾರ್ ಜ್ಯೋನಿ ಮ್ಯಾಥ್ಯೂ ರಾಜಪುರಂ ಇವರನ್ನು ಸನ್ಮಾನಿಸಲಾಗುವುದು. ನಿವೃತ್ತ ಯೋಧ …

ಕಾರು-ಮಿನಿ ಟಿಪ್ಪರ್ ಢಿಕ್ಕಿ: ಚಾಲಕ ಮೃತ್ಯು

ವಿಟ್ಲ: ಮಿನಿ ಟಿಪ್ಪರ್ ಹಾಗೂ ಕಾರು ಢಿಕ್ಕಿ ಹೊಡೆದು ಓರ್ವ ಮೃತಪಟ್ಟ ಘಟನೆ ಸಂಭವಿಸಿದೆ. ಕಾರು ಚಾಲಕ ಅನಂತಾಡಿ ನಿವಾಸಿ ಅನೀಶ್  34) ಮೃತಪಟ್ಟವರು. ಕಾರಿನಲ್ಲಿದ್ದ ಅನೀಶ್‌ರ ಸಹೋದರಿ ಹಾಗೂ ಮಗು ಗಂಭೀರಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.  ನಿನ್ನೆ ರಾತ್ರಿ ವೀರಕಂಬ ಕೆಲಿಂಜದಲ್ಲಿ ಘಟನೆ ನಡೆದಿದೆ.  ಕಲ್ಲಡ್ಕದಿಂದ ವಿಟ್ಲ ಭಾಗಕ್ಕೆ ಬರುತ್ತಿದ್ದ ಕಾರು ಹಾಗೂ ಎದುರು ಭಾಗದಿಂದಬರುತ್ತಿದ್ದ ಮಿನಿ ಟಿಪ್ಪರ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಜಿಲ್ಲಾ ಯೋಗ ಚಾಂಪ್ಯನ್‌ಶಿಪ್‌ನಲ್ಲಿ ಅಷ್ಟಾಂಗ ಯೋಗ ಕೇಂದ್ರಕ್ಕೆ ದ್ವಿತೀಯ ಸ್ಥಾನ

ಕಾಸರಗೋಡು: ಮೂನಾಡ್ ಪೀಪಲ್ಸ್ ಕಾಲೇಜಿನಲ್ಲಿ ಜರಗಿದ 10ನೇ ಜಿಲ್ಲಾ ಯೋಗ ಚಾಂಪ್ಯನ್‌ಶಿಪ್‌ನಲ್ಲಿ ಅಷ್ಟಾಂಗ ಯೋಗ ಕೇಂದ್ರ ಸಮಗ್ರ ಚಾಂಪ್ಯನ್‌ಶಿಪ್‌ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಈ ಕೇಂದ್ರದ ಮಕ್ಕಳಾದ ಅಮನ್ ಎಂ. ಹುಡುಗರ ವಿಭಾಗ (8-10)ದಲ್ಲಿ ಪ್ರಥಮ ಸ್ಥಾನ, ವೃಶಾಂಕ್ ಕೆ.ಜಿ ದ್ವಿತೀಯ ಸ್ಥಾನ, ಹುಡುಗಿಯರ ವಿಭಾಗದಲ್ಲಿ ಆಧ್ವಿ ಬಿ.ಎಸ್. ಪ್ರಥಮ ಸ್ಥಾನ, ದಿಲ್ಮಾ ತೃತೀಯ, ಹುಡುಗರ ವಿಭಾಗದಲ್ಲಿ (10-12) ಧನ್ವಿತ್ ಶೆಟ್ಟಿ ಎ. ಪ್ರಥಮ, ಧ್ಯಾನ್‌ಜಿ ದ್ವಿತೀಯ, ನಂದಿತ್ ಆರ್. ತೃತೀಯ, ಹುಡುಗಿಯರ ವಿಭಾಗದಲ್ಲಿ (12-14) ಪೂರ್ಣಪ್ರಭು …

ಪೊವ್ವಲ್‌ನಲ್ಲಿ ಬೈಕ್‌ಗಳು ಢಿಕ್ಕಿ: ಯುವಕ ಮೃತ್ಯು

ಕಾಸರಗೋಡು: ಪೊವ್ವಲ್‌ನಲ್ಲಿ ಬೈಕ್‌ಗಳು ಢಿಕ್ಕಿ ಹೊಡೆದು ಓರ್ವ ಮೃತಪಟ್ಟ ಘಟನೆ ಸಂಭವಿಸಿದೆ. ಮೂಲಡ್ಕ ನಿವಾಸಿ ದಿ| ಬಿ.ಕೆ. ಮುಹಮ್ಮದ್ ಕುಂಞಿ-ಖದೀಜ ದಂಪತಿಯ ಪುತ್ರ ಕಬೀರ್ (42) ಮೃತಪಟ್ಟ ವ್ಯಕ್ತಿ. ಇಂದು ಬೆಳಿಗ್ಗೆ 7ಗಂಟೆಗೆ  ಚೆರ್ಕಳ-ಜಾಲ್ಸೂರು ಅಂತಾರಾಜ್ಯ ರಸ್ತೆಯ ಪೊವ್ವಲ್‌ನಲ್ಲಿ ಅಪಘಾತವುಂಟಾಗಿದೆ. ಕಬೀರ್ ಪೊವ್ವಲ್ ಎಲ್‌ಬಿಎಸ್ ಇಂಜಿನಿಯರಿಂಗ್ ಕಾಲೇಜು ಸಮೀಪ ಹೊಸತಾಗಿ ನಿರ್ಮಿಸಿದ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ನಿನ್ನೆಯಷ್ಟೇ ನಡೆದಿದೆ. ಇಂದು ಬೆಳಿಗ್ಗೆ ಅಲ್ಲಿಂದ ಅವರು ಬೋವಿಕ್ಕಾನ ಪೇಟೆಗೆ ಬರುತ್ತಿದ್ದಾಗ ಘಟನೆ ಸಂಭವಿಸಿದೆ. ಮುಳ್ಳೇರಿಯ ನಿವಾಸಿ ಯುವಕ …

1440 ಲೀಟರ್ ಸ್ಪಿರಿಟ್ ಪತ್ತೆ: ಇನ್ನೋರ್ವ ಸೆರೆ

ಕಾಸರಗೋಡು: ಓಣಂ ಹಬ್ಬ ಸಮೀಪಿಸುತ್ತಿದ್ದಂತೆ ಹೊರ ರಾಜ್ಯಗಳಿಂದ ಕೇರಳಕ್ಕೆ ಅಕ್ರಮ ಸ್ಪಿರಿಟ್ ಮತ್ತು ಮದ್ಯದ ಹೊಳೆಯೇ ಹರಿದು ಬರತೊಡಗಿದೆ. ಇದನ್ನು ತಡೆಗಟ್ಟಲು ಪೊಲೀಸರು ಮತ್ತು ಅಬಕಾರಿ ತಂಡದವರು ಜಿಲ್ಲೆಯ ಎಲ್ಲೆಡೆಗಳಲ್ಲಿ ಪ್ರತ್ಯೇಕ ಕಾರ್ಯಾಚರಣೆ ಆರಂಭಿಸಿದ್ದಾರೆ. ಇದರಂತೆ ನಗರದ ಅಡ್ಕತ್ತಬೈಲಿನಲ್ಲಿ ಕಾಸರಗೋಡು ಪೊಲೀಸರು ಮೊನ್ನೆ ಸಂಜೆ ನಡೆಸಿದ ಕಾರ್ಯಾಚರಣೆಯಲ್ಲಿ ಮಿನಿ ಲಾರಿಯಲ್ಲಿ ಕರ್ನಾಟಕದಿಂದ ಕೇರಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 1440 ಲೀಟರ್ ಸ್ಪಿರಿಟ್ ವಶಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವನನ್ನು ಬಂಧಿಸಿದ್ದಾರೆ. ತಲಪ್ಪಾಡಿ ನಿವಾಸಿ ಮಣಿಕುಟ್ಟನ್ ಬಂಧಿತ ಆರೋಪಿ. ಅಡ್ಕತ್ತಬೈಲಿನ ಅನುಷ್ …

ಕೀಯೂರಿನಲ್ಲಿ ಕಡಲ್ಕೊರೆತ ತೀವ್ರ: ರಸ್ತೆ ಹಾನಿ

ಕಾಸರಗೋಡು: ಕೀಯೂರು ಕಡಪ್ಪುರದಲ್ಲಿ ಕಡಲ್ಕೊರೆತ ತೀವ್ರ ಗೊಂಡಿದ್ದು, ಇದರಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ಕರಾವಳಿ ರಸ್ತೆ ನಾಶದ ಹಂತಕ್ಕೆ ತಲುಪಿದೆ. ಒಂದೂ ವರೆ ಕಿಲೋ ಮೀಟರ್ ಕರಾವಳಿ ಪ್ರದೇಶ ಕಡಲ್ಕೊರೆತದ ಭೀತಿಯನ್ನು ಎದುರಿಸುತ್ತಿದೆಯೆಂದು ತಿಳಿಸಲಾಗಿದೆ. ಕಳೆದ ಒಂದು ವಾರದಿಂದ ಇಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ.ವರ್ಷಗಳ ಹಿಂದೆ ಕಗ್ಗಲ್ಲಿನಿಂದ ನಿರ್ಮಿಸಿದ ಗೋಡೆ ಹಲವೆಡೆ ಕುಸಿದಿದೆ.