ತೆಂಗಿನ ಮರವೇರುವ ಕಾರ್ಮಿಕ ನೇಣುಬಿಗಿದು ಸಾವು

ಕಾಸರಗೋಡು: ಯುವಕನೋರ್ವ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಚೌಕಿ ಪೆರಿಯಡ್ಕ ನಿವಾಸಿ ಚಂದ್ರಶೇಖರ (38) ಮೃತಪಟ್ಟ ವ್ಯಕ್ತಿ. ತೆಂಗಿನ ಮರವೇರುವ ಕಾರ್ಮಿಕನಾಗಿದ್ದ ಇವರು ನಿನ್ನೆ ಮಧ್ಯಾಹ್ನ ವೇಳೆ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ  ಪತ್ತೆಯಾಗಿದ್ದಾರೆನ್ನಲಾಗಿದೆ. ಮೃತದೇಹವನ್ನು  ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ  ಮರಣೋತ್ತರ ಪರೀಕ್ಷೆ ನಡೆಸಲಾಯಿತು. ದಿವಂಗತರಾದ ಚೋಮ-ಕಮಲ ದಂಪತಿಯ ಪುತ್ರನಾದ ಮೃತರು ಪತ್ನಿ ವನಜ, ಮಕ್ಕಳಾದ ಚರಣ್ಯ, ಚರಣ್‌ರಾಜ್, ಚೇತನ್ ಕುಮಾರ್, ವಿಷ್ಣು, ಸಹೋದರಿ ವನಜ ಹಾಗೂ ಅಪಾರ  ಬಂಧು-ಮಿತ್ರರನ್ನು ಅಗಲಿದ್ದಾರೆ.

ಸಂಸತ್ತಿನ ಮುಂಗಾರು ಅಧಿವೇಶನ ಆರಂಭ: ಆಪರೇಷನ್ ಸಿಂಧೂರ್ ಭಾರತದ ಶಕ್ತಿಯನ್ನು ವಿಶ್ವಕ್ಕೆ ಅನಾವರಣಗೊಳಿಸಿದೆ- ಪ್ರಧಾನಮಂತ್ರಿ

ನವದೆಹಲಿ: ಒಂದು ತಿಂಗಳ ತನಕ ಮುಂದುವರಿಯಲಿರುವ ಸಂಸತ್‌ನ ಮುಂಗಾರು ಅಧಿವೇಶನ ಇಂದು ಬೆಳಿಗ್ಗೆ ಆರಂಭಗೊಂಡಿದೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ನಡೆಸಿದ ಭಯೋತ್ಪಾದನೆ ಬಳಿಕ ಮೊದಲ ಅಧಿವೇಶನವೂ ಇದಾಗಿದೆ ಎಂಬ ವಿಶೇಷತೆಯೂ ಇದಕ್ಕಿದೆ. ಅಧಿವೇಶನ ಆರಂಭಗೊಳ್ಳುವ ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧ ನಡೆಸಲಾದ ಆಪರೇಶನ್ ಸಿಂಧೂರ್ ಕಾರ್ಯಾಚರಣೆ ಭಾರತದ ಶಕ್ತಿಯನ್ನು ಇಡೀ ವಿಶ್ವಕ್ಕೇ ಅನಾವರಣಗೊಳಿಸಿದೆ. ಆ ಮೂಲಕ  ಪಾಕಿಸ್ತಾನದ ಭಯೋತ್ಪಾದನೆಯ ಮೂಲವನ್ನೇ ನಿರ್ಮೂಲನೆ ಗೊಳಿಸಲಾಗಿದೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಶೇ. 100ರಷ್ಟು …

ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ರಾತ್ರಿ ಊಟಮಾಡಿ ನಿದ್ರಿಸಿದ್ದ ಯುವಕ ಬೆಳಿಗ್ಗೆ ನೋಡಿದಾಗ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪೆರಡಾಲ ಚುಳ್ಳಿಕ್ಕಾನ ನಿವಾಸಿ ಸಿ.ಎಚ್. ಬಾಲಕೃಷ್ಣ (33) ಮೃತಪಟ್ಟ ವ್ಯಕ್ತಿ.  ತಂದೆಯ ಸಹೋದರಿ ಸೀತು ಹಾಗೂ ಬಾಲಕೃಷ್ಣ ಮಾತ್ರವೇ ಮನೆಯಲ್ಲಿ ವಾಸಿಸುತ್ತಿದ್ದರು. ಶನಿವಾರ ರಾತ್ರಿ ಊಟ ಮಾಡಿ ಬಾಲಕೃಷ್ಣ ನಿದ್ರಿಸಿದ್ದರು. ನಿನ್ನೆ ಮುಂಜಾನೆ ಇವರು ಮನೆ ಸಮೀಪದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಕಂಡು ಬಂದಿದೆ. ಬದಿಯಡ್ಕ ಪೊಲೀಸರು ತಲುಪಿ ಮೃತದೇಹದ ಮಹಜರು ನಡೆಸಿದ ಬಳಿಕ ಕಾಸರಗೋಡು ಜನರಲ್ …

ಕಣ್ಣೂರಿನ ಸಹಪಾಠಿಯ ಮನೆಗೆ ಬಂದ ಸುಳ್ಯ ನಿವಾಸಿ ವಿದ್ಯಾರ್ಥಿ ಕೆರೆಯಲ್ಲಿ ಮುಳುಗಿಸಾವು

ಕಾಸರಗೋಡು: ಕಣ್ಣೂರಿನಲ್ಲಿ ರುವ ಸಹಪಾಠಿಯ ಮನೆಗೆ ಬಂದ ಸುಳ್ಯ ನಿವಾಸಿ ವಿದ್ಯಾರ್ಥಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಸುಳ್ಯ ನಿವಾಸಿಯೂ ಮಂಗಳೂರು ದೇರಳಕಟ್ಟೆ ಎ.ಬಿ. ಶೆಟ್ಟಿ ಕಾಲೇಜಿನ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿ ಅಸ್ತಿಕ್ ರಾಘವ್  (19) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಈತ ಕಣ್ಣೂರು ಬಳಿಯ ಕೊಟ್ಟೋಳಿ ಎಂಬಲ್ಲಿರುವ ಸಹಪಾಠಿಯ ಮನೆಗೆ  ಬಂದಿದ್ದನು. ಇಲ್ಲಿನ ಕೆರೆಯೊಂದರಲ್ಲಿ ಇತರರೊಂದಿಗೆ ಈಜಲು ಇಳಿದಿದ್ದು, ಈ ವೇಳೆ ಅಸ್ತಿಕ್ ನೀರಿನಲ್ಲಿ  ಮುಳುಗಿದ್ದಾನೆನ್ನಲಾಗಿದೆ. ವಿಷಯ ತಿಳಿದು ಅಗ್ನಿಶಾಮಕದಳ ಹಾಗೂ ಪೊಲೀಸರು  ಅಸ್ತಿಕ್‌ನನ್ನು ಕೆರೆಯಿಂದ …

ಒಮಾನ್‌ನಿಂದ ಬಂದ ಯುವತಿ ಒಂದು ಕಿಲೋ ಎಂಡಿಎಂಎ ಸಹಿತ ಸೆರೆ: ಮೂವರು ಯುವಕರು ಕಸ್ಟಡಿಗೆ

ಕಲ್ಲಿಕೋಟೆ: ಒಂದು ಕಿಲೋ ಎಂಡಿಎಂಎ ಸಹಿತ ಒಮಾನ್‌ನಿಂದ ಬಂದ ಯುವತಿಯನ್ನು ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.  ಪತ್ತನಂತಿಟ್ಟ ನಿವಾಸಿ ಸೂರ್ಯ ಎಂಬಾಕೆ ಸೆರೆಗೀಡಾಗಿದ್ದು ಎಂಡಿಎಂಎ ಪಡೆಯಲು ವಿಮಾನ ನಿಲ್ದಾಣಕ್ಕೆ ಬಂದ  ಮೂವರು ತಿರೂರಂಗಾಡಿ ನಿವಾಸಿಗಳನ್ನು ಕಸ್ಟಡಿಗೆ ತೆಗೆಯಲಾಗಿದೆ. ಸೂರ್ಯ ಕೆಲಸಕ್ಕೆಂದು ತಿಳಿಸಿ ಜುಲೈ 16ರಂದು ಒಮಾನ್‌ಗೆ ತೆರಳಿದ್ದಳು. ಆದರೆ ನಾಲ್ಕು ದಿನಗಳೊಳಗಾಗಿ ಈಕೆ ಮರಳಿ ಬಂದಿದ್ದಾಳೆ. ಈ ವೇಳೆ ಒಂದು ಕಿಲೋ ಎಂಡಿಎಂಎಯನ್ನು ತಂದಿದ್ದಾಳೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಬಂದ ಯುವತಿ ಚಾಕ್ಲೆಟ್ ಪ್ಯಾಕೆಟ್ ಹಾಗೂ ಆಹಾರ …

ಶಾಲಾ ಬಸ್ ಅಪಘಾತ: ತಪ್ಪಿದ ಭಾರೀ ದುರಂತ

ಕಾಸರಗೋಡು: ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಶಾಲಾ ಬಸ್ ಅಪಘಾತಕ್ಕೀಡಾದ ಘಟನೆ ಚಿತ್ತಾರಿಯಲ್ಲಿ  ಸಂಭವಿಸಿದೆ. ರಸ್ತೆ ಬದಿಯ ಹೊಂಡದತ್ತ ಬಸ್ ವಾಲಿದ್ದು ಅಲ್ಲಿದ್ದ ತೆಂಗಿನ ಮರವೊಂದಕ್ಕೆ ತಾಗಿ ನಿಂತಿದೆ. ಇದರಿಂದ ಭಾರೀ ಅಪಾಯ ತಪ್ಪಿದೆ. ಇಂದು ಬೆಳಿಗ್ಗೆ 8.30ರ ವೇಳೆ ಸೌತ್  ಚಿತ್ತಾರಿಯ ವಿದ್ಯುತ್ ಕಚೇರಿ ಸಮೀಪ ಅಫಘಾತವುಂಟಾಗಿದೆ. ಕೋಟಿಕುಳಂ ನರುಲ್ ಹುದಾ ಆಂಗ್ಲ ಮಾಧ್ಯಮ ಶಾಲೆಯ ಬಸ್ ಅಪಘಾತಕ್ಕೀಡಾಗಿದೆ. ಬಸ್‌ನಲ್ಲಿ 12 ಮಕ್ಕಳಿದ್ದರು. ಇವರನ್ನು ಅದಿಂಞಾಲ್‌ನ  ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ವಿಷಯ ತಿಳಿದು ಹೊಸದುರ್ಗ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಬಳಿಕ …

ಅಪ್ರಾಪ್ತರಿಂದ ಸ್ಕೂಟರ್ ಸವಾರಿ: ಆರ್‌ಸಿ ಮಾಲಕರ ವಿರುದ್ಧ ಕೇಸು

ಮಂಜೇಶ್ವರ: ಅಪ್ರಾಪ್ತರಿಬ್ಬರು ಸ್ಕೂಟರ್ ಚಲಾಯಿಸಿದ ಪ್ರಕರಣದಲ್ಲಿ ಆರ್‌ಸಿ ಮಾಲಕರ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ದ್ವಿಚಕ್ರ ವಾಹನ ಗಳನ್ನು ವಶಕ್ಕೆ ಪಡೆದಿದ್ದಾರೆ. ನಿನ್ನೆ ಬೆಳಿಗ್ಗೆ ಕುಂಜತ್ತೂರು ಸಣ್ಣಡ್ಕದಿಂದ ಒಂದು ಸ್ಕೂಟರನ್ನು ವಶಪಡಿ ಸಿದ್ದು, ಸಂಜೆ ಹೊಸಬೆಟ್ಟುವಿನಿಂದ ಇನ್ನೊಂದನ್ನು ವಶಪಡಿಸಿದ್ದಾರೆ. ಮಂಜೇಶ್ವರ ಠಾಣೆಯ ಎಸ್‌ಐ ಅಜಯ್ ಎಸ್. ಮೆನೋನ್, ತಂಡದ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಆ ದಾರಿಯಾಗಿ ಬಂದ ಸ್ಕೂಟರ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್ ಹೆದ್ದಾರಿಯ ಭದ್ರತಾ ಗೋಡೆಗೆ ಢಿಕ್ಕಿ

ಕುಂಬಳೆ: ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಪದೇ ಪದೇ ಸಂಭವಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಮೊನ್ನೆ ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್ ರಸ್ತೆ ಬದಿಯ ಭದ್ರತಾಗೋಡೆಗೆ ಬಡಿದಿದೆ. ತಕ್ಷಣ ಬಸ್ ಅಲ್ಲೇ ನಿಂತಿರುವುದರಿಂದ ಭಾರೀ ದೊಡ್ಡ ದುರಂತ ಅದೃಷ್ಟವಶಾತ್ ತಪ್ಪಿದೆ. ಶನಿವಾರ ಸಂಜೆ ೩ ಗಂಟೆಗೆ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ಸಮೀಪದ ಸರ್ವೀಸ್ ರಸ್ತೆಯಲ್ಲಿ ಅಪಘಾತವುಂಟಾಗಿದೆ. ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಬಸ್ ಸರ್ವೀಸ್ ರಸ್ತೆ ಮೂಲಕ ಕುಂಬಳೆ ಪೇಟೆಗೆ ಪ್ರವೇಶಿಸುತ್ತಿದ್ದಂತೆ ಅಪಘಾತಕ್ಕೀಡಾಗಿದೆ. ಅಪರಿಮಿತ ವೇಗದಲ್ಲಿ …

ವಿವಿಧೆಡೆಗಳಲ್ಲಿ ಬಯಲು ಪ್ರದೇಶ ಜಲಾವೃತ: ಅಪಾರ ಕೃಷಿ ನಾಶ

ಪೈವಳಿಕೆ: ಎಡೆಬಿಡದೆ ಸುರಿದ ವ್ಯಾಪಕ ಮಳೆಗೆ ವಿವಿಧ ಕಡೆಗಳ ಕೃಷಿ ಸಂಪೂರ್ಣ ನಾಶಗೊಂಡಿದ್ದು, ಕೃಷಿಕರು ಸಂಕಷ್ಟಕ್ಕೀಡಾಗಿದ್ದಾರೆ. ಪೈವಳಿಕೆ ಬಯಲು ಭತ್ತದ ಕೃಷಿಯಲ್ಲಿ ನೀರು ತುಂಬಿಕೊಂಡು ಒಂದು ತಿಂಗಳ ಪ್ರಾಯದ ಪೈರು ನಾಶವಾಗಿದ್ದು, ಕೂಡಲುಮೇರ್ಕಳದ ಕೂಡಲುಬಯಲು ಜಲಾವೃತಗೊಂಡು, ಕಂಗು ಕೃಷಿಗೆ ಹಾನಿ ಉಂಟಾಗಿದೆ. ಇಲ್ಲಿನ ನಾಗನಕಟ್ಟೆಗೆ ನೀರು ನುಗ್ಗಿದೆ. ಪೈವಳಿಕೆ ಬಯಲಿನ ವಿನೋದ್ ಬಾಯಾರು ಹಾಗೂ ಅಬ್ದುಲ್ ಹಾಜಿ ಎಂಬವರ ಹಲವಾರು ಎಕ್ರೆ ಭತ್ತದ ಕೃಷಿ ನೀರು ತುಂಬಿ ನಾಶಗೊಂಡಿದೆ. ಇದೇ ರೀತಿ ಕೂಡಲುಮೇರ್ಕಳದಲ್ಲಿ ಕಂಗಿನ ತೋಟದಲ್ಲಿ ನೀರು …

ಹಿರಿಯ ಟೈಲರ್ ನಿಧನ

ಪೈವಳಿಕೆ : ಬಳ್ಳೂರು ಚಪ್ಪರ ಮನೆ ನಿವಾಸಿ ಹಿರಿಯ ಟೈಲರ್ ಉದಯ ಆಚಾರ್ಯ (58)ನಿಧನ ಹೊಂದಿ ದರು. ಅಲ್ಪ ಕಾಲದ ಅಸೌಖ್ಯದಿಂದ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಚಪ್ಪರಮನೆ ದಿ | ನಾರಾಯಣ ಆಚಾರ್ಯ ದಿ | ಲಕ್ಷ್ಮೀ ದಂಪತಿ ಪುತ್ರ ನಾಗಿದ್ದಾರೆ. ಮೃತರು ಪತ್ನಿ ಗಾಯತ್ರಿ. ಪುತ್ರಿ ಪೂಜಶ್ರೀ, ಸಹೋದರ ಭುವನೇಶ ಆಚಾರ್ಯ ಹೊಸಂಗಡಿ, ಸಹೋದರಿಯರಾದ ರೇವತಿ, ಜಲಜಾಕ್ಷಿ, ಚಂದ್ರಕಲಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಹೋದರರಾದ ಆನಂದ ಆಚಾರ್ಯ, ಹರಿಶ್ಚಂದ್ರ ಆಚಾರ್ಯ, …