ನಗರಸಭೆ ಮುಂಭಾಗ ಬಿಜೆಪಿ ಕೌನ್ಸಿಲರ್‌ಗಳಿಂದ ಪ್ರತಿಭಟನೆ

ಕಾಸರಗೋಡು: ನಗರಸಭೆಯ  ಕಾರ್ಯದರ್ಶಿಯನ್ನು ಬೆದರಿಸಿದ ಶಾಸಕ, ಮುಸ್ಲಿಂ ಲೀಗ್ ನಗರಸಭಾ ಆಡಳಿತಾಧಿಕಾರಿಗಳು ಕಾರ್ಯದರ್ಶಿ ಯವರಲ್ಲಿ ಕ್ಷಮೆ ಯಾಚಿಸಬೇಕೆಂದು ಬಿಜೆಪಿ ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ. ಈ ಬೇಡಿಕೆ ಮುಂದಿಟ್ಟು ನಗರಸಭೆ ಮುಂಭಾಗದಲ್ಲಿ ಪ್ಲೇಕಾರ್ಡ್ ಸಹಿತ ಅವರು ಪ್ರತಿಭಟಿಸಿದರು. ಕಾಸರಗೋಡು ನಗರಸಭೆಯಲ್ಲಿ ಕಾರ್ಯದರ್ಶಿಗಳನ್ನು ಹಲ್ಲೆಗೈದು ಬೆದರಿಸುತ್ತಿರುವುದು ಸಾಮಾನ್ಯವಾಗುತ್ತಿದೆ. ಆಡಳಿತ ನಡೆಸುವವರು ಈ ರೀತಿಯ ದುಷ್ಕೃತ್ಯಗಳಿಗೆ ಜೊತೆ ಸೇರುತ್ತಿರುವುದರಿಂದಾಗಿ ಇದು ಸಂಭವಿಸುತ್ತಿದೆ. ನಿಜವಾಗಿ ನಗರಸಭೆಯ ಅಭಿವೃದ್ಧಿಗೆ ಪ್ರಧಾನ ಸವಾಲಾಗಿ ಇದು ಪರಿಣಮಿಸಿದೆ  ಎಂದು ಬಿಜೆಪಿ ಜನಪ್ರತಿನಿಧಿಗಳು ಆರೋಪಿಸಿದ್ದಾರೆ. ಅಧಿಕಾರಿಗಳು ನಗರಸಭೆಯಲ್ಲಿ ಸೇವೆ ಗೈಯ್ಯಲು …

ಕುಂಬಳೆ ಕೆಳ ಸೇತುವೆಯಲ್ಲಿ  ನೀರು ತುಂಬಿಕೊಂಡು ಸಾರಿಗೆ ಅಡಚಣೆ: ನಾಗರಿಕರು, ಆಟೋ ಚಾಲಕರಿಂದ ಪಂಚಾಯತ್‌ಗೆ ದೂರು

ಕುಂಬಳೆ:  ಕುಂಬಳೆ ರೈಲ್ವೇ ನಿಲ್ದಾಣದ ಕೆಳ ಸೇತುವೆಯೊಳಗೆ ನೀರು ತುಂಬಿಕೊಂಡು ಆ ಮೂಲಕ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಇದರಿಂದ ಸಮಸ್ಯೆಗೀಡಾದ ನಾಗರಿಕರು ಹಾಗೂ ಆಟೋ ಚಾಲಕರು ದೂರಿನೊಂದಿಗೆ ಕುಂಬಳೆ ಗ್ರಾಮ ಪಂಚಾಯತ್ ಕಚೇರಿಗೆ ತಲುಪಿ ಅಧಿಕಾರಿಗಳಲ್ಲಿ ತಮ್ಮ ಅಹವಾಲು ಸಲ್ಲಿಸಿದರು. ಕುಂಬಳೆ ರೈಲ್ವೇ ನಿಲ್ದಾಣ ಲೆವೆಲ್ ಕ್ರಾಸ್ ಮುಚ್ಚುಗಡೆಗೊಳಿಸಿದ ಬಳಿಕ ವರ್ಷಗಳ ಹಿಂದೆ   ಕೆಳ ಸೇತುವೆ ಸೌಕರ್ಯ ಏರ್ಪಡಿಸಲಾಗಿತ್ತು. ಆದರೆ ಪ್ರತೀ ವರ್ಷ ಮಳೆಗಾಲದಲ್ಲಿ  ಅದರೊಳಗೆ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ಅಡಚಣೆ ಎದುರಾಗುತ್ತಿದೆ. ಕುಂಬಳೆ …

ಪೆರಿಯ ಅವಳಿ ಕೊಲೆ ಪ್ರಕರಣ : ಓರ್ವ ಆರೋಪಿಗೆ ಪರೋಲ್ ಮಂಜೂರು ಮಾಡಿದ ಸರಕಾರ

ಕಾಸರಗೋಡು: ಪೆರಿಯ ಕಲ್ಯೋಟ್‌ನಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಶರತ್‌ಲಾಲ್ ಮತ್ತು ಕೃಪೇಶ್ ಎಂಬುರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಎರ್ನಾಕುಳಂ ಸಿಬಿಐ ವಿಶೇಷ ನ್ಯಾಯಾಲಯದಿಂದ ಅವಳಿ ಜೀವಾವಧಿ ಶಿಕ್ಷೆಗೊಳಗಾದ 10 ಮಂದಿ ಆರೋಪಿಗಳ ಪೈಕಿ ಎಂಟನೇ ಆರೋಪಿಗೆ ರಾಜ್ಯ ಸರಕಾರ ಪರೋಲ್ ಮಂಜೂರು ಮಾಡಿದೆ.  ಸುಭೀಶ್ ವೆಳುತ್ತೋಳಿ ಎಂಬಾತನಿಗೆ ಮಂಜೂರು ಮಾಡಲಾಗಿದೆ. ತನಗೆ ನೀಡಲಾದ ಶಿಕ್ಷೆಯನ್ನು ಅಮಾನತುಗೊಳಿಸಬೇಕೆಂದು ಕೋರಿ ಆರೋಪಿ ಸುಭೀಶ್ ಈ ಹಿಂದೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದನ. ಆ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಅದರ ಬೆನ್ನಲ್ಲೇ ಸರಕಾರ …

ಸಾರ್ವಜನಿಕ ಶಿಕ್ಷಣ ಅಧಃಪತನ ಆರೋಪ : ಎನ್‌ಟಿಯುನಿಂದ ಡಿಡಿಇ ಕಚೇರಿ ಮಾರ್ಚ್

ಕಾಸರಗೋಡು: ಸಾರ್ವಜನಿಕ ಶಿಕ್ಷಣವನ್ನು ಎಡರಂಗ ಸರಕಾರ ಅಧಃಪತನದತ್ತ ತಳ್ಳಿದೆ ಎಂದು ಆರೋಪಿಸಿ ದೇಶೀಯ ಅಧ್ಯಾಪಕ ಪರಿಷತ್ ಕಾಸರಗೋಡು ಡಿಡಿಇ ಕಚೇರಿಗೆ ಮಾರ್ಚ್ ನಡೆಸಿತು. ದೇಶೀಯ ಅಧ್ಯಾಪಕ ಪರಿಷತ್‌ನ ರಾಜ್ಯ ಸಮಿತಿ ಉಪಾದ್ಯಕ್ಷ ಕೆ.ಕೆ. ರಾಜೇಶ್ ಉದ್ಘಾಟಿಸಿ ಮಾತನಾಡಿದರು. ನ್ಯಾಯವಾಗಿ ಸಿಗಬೇಕಾದ ಸವಲತ್ತುಗಳನ್ನು ನೀಡದೆ ಶೋಷಿಸಿ ಸರಕಾರ ಅಧ್ಯಾಪಕ ವರ್ಗವನ್ನು ಕಡೆಗಣಿಸುತ್ತಿದೆ ಎಂದು ಅವರು ಆರೋಪಿಸಿದರು. ಸಾರ್ವಜನಿಕ ಶಿಕ್ಷಣ ರಂಗದ ಬೇಡಿಕೆಗಳಾದ 12ನೇ ವೇತನ ಪರಿಷ್ಕರಣೆ ಜ್ಯಾರಿಗೊಳಿಸದಿರುವುದು, ಪಿಎಂಶ್ರೀ ಯೋಜನೆಯನ್ನು ಜ್ಯಾರಿಗೊಳಿಸದಿರುವುದು, ತುಟ್ಟಿಭತ್ತೆ 117 ತಿಂಗಳು ಬಾಕಿ ಉಳಿಸಿರುವುದು, …

ಆರ್ಥಿಕ ಸಂದಿಗ್ಧತೆಯಲ್ಲಿ ಸರಕಾರ: ಒಟ್ಟು ಸಾಲ 6 ಲಕ್ಷ ಕೋಟಿ ರೂ.

ತಿರುವನಂತಪುರ: ರಾಜ್ಯದಲ್ಲಿ ಹಣಕಾಸು ಸಂದಿಗ್ಧತೆ ತೀವ್ರಗೊಂಡಿದ್ದು ಈ ಹಿನ್ನೆಲೆಯಲ್ಲಿ ಈ ತಿಂಗಳು ಮತ್ತೆ 1000 ಕೋಟಿ ರೂಪಾಯಿ ಸಾಲ ತೆಗೆಯಲು ಸರಕಾರ ನಿರ್ಧರಿಸಿದೆ. ಇದರಿಂದ ಈ ಹಣಕಾಸು ವರ್ಷ ಮಾತ್ರ ಸರಕಾರ ಪಡೆಯುವ ಸಾಲದ ಮೊತ್ತ 14,೦೦೦ ಕೋಟಿಗೆ ತಲುಪಲಿದೆ. ಇದೇ ವೇಳೆ ರಾಜ್ಯದ ಒಟ್ಟು ಸಾಲಬಾಧ್ಯತೆ  6 ಲಕ್ಷ ಕೋಟಿಗೇರಲಿದೆ. ಎಪ್ರಿಲ್, ಮೇ ತಿಂಗಳಲ್ಲಿ 6000 ಕೋಟಿ ರೂ., ಜೂನ್‌ನಲ್ಲಿ ಎರಡು ಬಾರಿಯಾಗಿ 5೦೦೦ ಕೋಟಿ ರೂಪಾಯಿ ಸಾಲ ಪಡೆಯಲಾಗಿದೆ. ಇದರ ಹೊರತಾಗಿ ವಿವಿಧ ರೂಪದಲ್ಲಿ …

ಎಡನೀರು ಸ್ವಾಮೀಜಿ ಚಾತುರ್ಮಾಸ್ಯ: ಸ್ಥಳೀಯ ಭಕ್ತವೃಂದದಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

ಎಡನೀರು: ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಪಂಚಮ ಚಾತುರ್ಮಾಸ್ಯ ವ್ರತಾಚರಣೆಯಂಗವಾಗಿ ಸ್ಥಳೀಯ ಭಕ್ತವೃಂದದವರು ಮಠಕ್ಕೆ ಹಸಿರುವಾಣಿ ಹೊರೆಕಾಣಿಕೆ ಸಮರ್ಪಿಸಿ ದರು. ಚಾತುರ್ಮಾಸ್ಯದಂಗವಾಗಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುತ್ತಿದ್ದು, ಭಜನಾ ಕಾರ್ಯಕ್ರಮದಲ್ಲಿ ವಿವಿಧ ತಂಡಗಳು ಭಾಗವಹಿಸುತ್ತಿವೆ. ಡಾ. ಕಿಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ಇವರಿಂದ ಶುಕ್ರವಾರ ತಾಳಮದ್ದಳೆ ದಶಾಹ ಕಾರ್ಯಕ್ರಮಕ್ಕೆ ಚಾಲನೆ ದೊರಕಿದ್ದು, ಸ್ವಾಮೀಜಿ ದೀಪ ಬೆಳಗಿಸಿದರು.

ಅಭಯನಿಕೇತನ್ ಆಶ್ರಯದಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ

ಕಾಸರಗೋಡು: ತಾಳಿಪಡ್ಪು ಭಗವಾನ್ ಸತ್ಯಸಾಯಿ ಅಭಯನಿಕೇ ತನದ ಆಶ್ರಯದಲ್ಲಿ ಸತ್ಯಸಾಯಿ ಬಾಬಾರ ಜನ್ಮ ಶತಾಬ್ದಿ ಆಚರಣೆಯಂಗವಾಗಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಲಾಯಿತು. ಮಾತಾ ಅಮೃತಾನಂದಮಯಿ ಮಠದ ವೇದ ವೇದ್ಯಾಮೃತ ಚೈತನ್ಯ ಸ್ವಾಮೀಜಿ ಉದ್ಘಾಟಿಸಿದರು. ಸತ್ಯಸಾಯಿ ಅಭಯನಿಕೇತನದ ಅಧ್ಯಕ್ಷ ಎಸ್.ಬಿ. ಖಂಡಿಗೆ ಅಧ್ಯಕ್ಷತೆ ವಹಿಸಿದರು. ವಾರ್ಡ್ ಕೌನ್ಸಿಲರ್ ಅಶ್ವಿನಿ ಜಿ. ನಾಕ್, ಉದ್ಯಮಿ ಕೆ. ಸುರೇಶ್, ಓಂ ಪ್ರಕಾಶ್ ಹೂಡೆ, ಸತಾ ಮಾತನಾಡಿ ದರು. ಐದು ಮಹಿಳೆಯರಿಗೆ ಹೊಲಿಗೆ ಯಂತ್ರ ಸ್ವಾಮೀಜಿ ವಿತರಿಸಿದರು. ಬಿಎಸ್‌ಎಸ್ ಅಭಯನಿಕೇತನ್ ಜೊತೆ …

ಅಬಕಾರಿ ಕಾರ್ಯಾಚರಣೆಯಲ್ಲಿ 350 ಗ್ರಾಂ ಗಾಂಜಾ ಪತ್ತೆ: ಮಾದಕವಸ್ತು ಮಾರಾಟ ತಂಡದ ಓರ್ವ ಸೆರೆ; ಇನ್ನೋರ್ವ ಪರಾರಿ

ಕುಂಬಳೆ: ಮಂಜೇಶ್ವರದ ವಿವಿಧೆಡೆಗಳಿಗೆ ಗಾಂಜಾ ಸಾಗಾಟ ನಡೆಸಿ ಮಾರಾಟಗೈಯ್ಯುವ ತಂಡದ ಓರ್ವನನ್ನು ಅಬಕಾರಿ ಅಧಿಕಾರಿಗಳು ಸೆರೆಹಿಡಿದಿದ್ದಾರೆ. ಈ ವೇಳೆ ಇನ್ನೋ ರ್ವ ಓಡಿ ಪರಾರಿಯಾಗಿದ್ದಾನೆ. ಬಂಧಿತನ ಕೈಯಿಂದ ೩೫೦ ಗ್ರಾಂ ಗಾಂಜಾ ವಶಪಡಿಸಲಾಗಿದೆ. ಕಡಂಬಾರು ವಿಲ್ಲೇಜ್ ನ ಪಜಿಂಗಾರು ನಿವಾಸಿ ಅರುಣ (21) ಎಂಬಾತ ಬಂಧಿತ ಆರೋಪಿಯಾಗಿ ದ್ದಾನೆ.  ಜೋಡುಕಲ್ಲು ಬಳಿಯ ಮೂಡಂದೂರು ನಿವಾಸಿ ಅಬ್ದುಲ್ ಗಫೂರ್ ಬಿ.ಎಂ (33) ಎಂಬಾತ ಓಡಿ ಪರಾರಿಯಾಗಿದ್ದಾನೆಂದು ಈತನಿಗಾಗಿ ಶೋಧ ನಡೆಸುತ್ತಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಅರುಣನನ್ನು …

ವಿದ್ಯುತ್ ಶಾಕ್ ತಗಲಿ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ: ರಾಜ್ಯದ ಶಾಲೆಗಳ ಭದ್ರತೆಗೆ ಕಟ್ಟು ನಿಟ್ಟಿನ ಕ್ರಮ

ತಿರುವನಂತಪುರ: ಕೊಲ್ಲಂ ತೇವಲಕ್ಕರ  ಬೋಯ್ಸ್ ಹೈಸ್ಕೂಲ್‌ನ ಎಂಟನೇ ತರಗತಿ ವಿದ್ಯಾರ್ಥಿ ಕೊಲ್ಲಂ ಪಡಿಞ್ಞಾರೆ ಕಲ್ಲಡ ನಿವಾಸಿ ಮಿಥುನ್ ಮನು (13) ಶಾಲೆಯಲ್ಲಿ ವಿದ್ಯುತ್ ಸ್ಪರ್ಶಿಸಿ ದಾರುಣವಾಗಿ ಸಾವನ್ನಪ್ಪಿದ ಘಟನೆಯ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಶಾಲೆಗಳ ಭದ್ರತೆಗಾಗಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಅಧ್ಯಕ್ಷತೆಯಲ್ಲ್ಲಿ ನಡೆದ ಉನ್ನತ ಮಟ್ಟದ ಸಭೆ ತೀರ್ಮಾನಿಸಿದೆ. ಶಾಲೆಗಳಲ್ಲಿ ಅದೇನೇ ನಡೆದರೂ ನಮಗೆ ವೇತನ ಲಭಿಸಲಿದೆಯೆಂಬ ಅಧ್ಯಾಪಕರ ಹಾಗೂ ಇತರ ಸಿಬ್ಬಂದಿಗಳ ಮನೋ ಭಾವವನ್ನು ಅಂಗೀಕರಿಸುವಂತಿಲ್ಲ ವೆಂದು …

ಬ್ಯಾಂಕ್ ಖಾತೆಗಳನ್ನು ಉಪಯೋಗಿಸಿ ವಂಚನೆ: ವಿದೇಶಕ್ಕೆ ಪರಾರಿಯಾಗಿದ್ದ ಮಹಿಳೆ ವಿಮಾನ ನಿಲ್ದಾಣದಿಂದ ಸೆರೆ

ಕಾಸರಗೋಡು: ಇತರ ಬ್ಯಾಂಕ್ ಖಾತೆಗಳನ್ನು ಉಪಯೋಗಿಸಿ ಸೈಬರ್ ವಂಚನೆ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿ ಬಳಿಕ ವಿದೇಶಕ್ಕೆ ಪರಾರಿಯಾಗಿದ್ದ ಮಹಿಳೆಯನ್ನು ಮುಂಬೈ ವಿಮಾನ ನಿಲ್ದಾಣದಿಂದ ಕಾಸರಗೋಡು ಸೈಬರ್ ಪೊಲೀಸ್ ಕ್ರೈಮ್ ಇನ್ಸ್‌ಪೆಕ್ಟರ್ ಹೊಣೆಗಾರಿಕೆ ಹೊಂದಿರುವ ವಿದ್ಯಾನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಯು.ಪಿ. ವಿಪಿನ್‌ರ ಮೇಲ್ನೋಟದಲ್ಲಿ ಎಸ್‌ಐ ಪ್ರೇಮರಾಜನ್‌ರ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಕಾಸರಗೋಡು ತಳಂಗರೆ ನಿವಾಸಿ ಯು. ಸಾಜಿದಾ (34) ಬಂಧಿತಳಾದ ಮಹಿಳೆ. ೨೦೨೪ ಮಾರ್ಚ್ ತಿಂಗಳಿಂದ ಹಲವು ದಿನಗಳಲ್ಲಾಗಿ ಇತರ ಬ್ಯಾಂಕ್ ಖಾತೆ ಬಳಸಿ ಸೈಬರ್ …