ಹಾಡಹಗಲೇ ಮನೆ ಶೆಡ್‌ನಿಂದ ತೆಂಗಿನಕಾಯಿ ಕಳವು

ಮಂಜೇಶ್ವರ: ತೆಂಗಿನಕಾಯಿ ಬೆಲೆ ಗಗನಕ್ಕೇರುತ್ತಲೇ ಕಳವು ಕೂಡಾ ಹೆಚ್ಚತೊಡಗಿದೆ. ಕುಂಜತ್ತೂರಿನಲ್ಲಿ ಮನೆಯೊಂದರ ಶೆಡ್‌ನಲ್ಲಿರಿಸಿದ್ದ 200 ತೆಂಗಿನಕಾಯಿ ಕಳವಿಗೀಡಾದ  ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.  ಕುಂಜತ್ತೂರು ಕೊಳಕೆಯ ಹರೀಶ್ ಪಿ.ಕೆ. ಎಂಬವರ ಮನೆ ಬಳಿಯ ಶೆಡ್‌ನಿಂದ ತೆಂಗಿ ಕಾಯಿ ಕಳವಿಗೀಡಾದ ಬಗ್ಗೆ ದೂರಲಾ ಗಿದೆ. ಈ ತಿಂಗಳ 16ರಂದು ಬೆಳಿಗ್ಗೆ 9ರಿಂದ ಸಂಜೆ 5 ಗಂಟೆ ಮಧ್ಯೆ ಕಳವು ನಡೆದಿದೆ. ಅಂದು ಮನೆಯಲ್ಲಿ ಯಾರೂ ಇರಲಿಲ್ಲ. ಹೊರಗೆ ತೆರಳಿ ದವರು ಸಂಜೆ ಮರಳಿ ಬಂದಾಗಲೇ ಕಳವು ನಡೆದಿ …

ಯುವಕ ಮನೆಯೊಳಗೆ ನೇಣುಬಿಗಿದು ಸಾವು

ಮುಳ್ಳೇರಿಯ: ಅಡೂರು ಬಳಿಯ ಮಣಿಯೂರಿನಲ್ಲಿ ಯುವಕನೋರ್ವ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೊಪ್ಪಳಗುರಿ ನಿವಾಸಿ ದಿ| ನಾರಾಯಣ ಬೆಳ್ಚಪ್ಪಾಡರ ಪುತ್ರ ಸಂತೋಷ್ (38) ಸಾವಿಗೀಡಾದ ಯುವಕ. ಘಟನೆ ಬಗ್ಗೆ ಆದೂರು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ತಾಯಿ ದೇವಕಿ, ಸಹೋದರ ಶಶಿ ಕುಮಾರ್, ಸಹೋ ದರಿ ಬಿಂದು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮಹಿಳೆ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ಮಹಿಳೆಯೊಬ್ಬರು ತೋಟದ ಕೆರೆಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುಂಬ್ಡಾಜೆ ಕೆದುಮೂಲೆ ನಿವಾಸಿ ದಿ| ಕೃಷ್ಣನ್ ಎಂಬವರ ಪತ್ನಿ ವಿಶಾಲಾಕ್ಷಿ (73) ಮೃತ ಮಹಿಳೆ. ಇವರು ನಿನ್ನೆ ಬೆಳಿಗ್ಗೆ ಹುಲ್ಲು ಹೆರೆಯಲೆಂದು ತಿಳಿಸಿ ಮನೆಯಿಂದ ಹೊರಗೆ ತೆರಳಿದ್ದರೆನ್ನಲಾಗಿದೆ. ಆದರೆ ಮರಳಿ ಬಾರದ ಹಿನ್ನೆಲೆಯಲ್ಲಿ ಹುಡುಕಾಡುತ್ತಿದ್ದಾಗ ಮನೆ ಸಮೀಪದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತರು ಸಹೋದರ-ಸಹೋದರಿಯರಾದ ಕೃಷ್ಣ,ಶಾರದ, ಕುಂಞಾಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ವಸಂತ,ಸಹೋದರಿ ಕುಂಞಮ್ಮ ಈ ಹಿಂದೆ ನಿಧನಹೊಂದಿದ್ದಾರೆ.

ಎಂಡಿಎಂಎ ಸಹಿತ ಯುವಕ ಸೆರೆ

ಕಾಸರಗೋಡು: ಮಾದಕ ದ್ರವ್ಯವಾದ 1.040  ಗ್ರಾಂ ಎಂಡಿಎಂಎ ಸಹಿತ ಅಜಾನೂರು ಕುಳಬೈಲಿನ ಎಂ. ಶಂಶೀರಾ ರಹ್ಮಾನ್ (34) ಎಂಬಾತನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಪೊಲೀಸರನ್ನು ಕಂಡು ಹೆದರಿ ಪಲಾಯನಗೈಯ್ಯಲೆತ್ನಿಸಿದ ಈತನನ್ನು ಪೊಲೀಸರು ಬೆನ್ನಟ್ಟಿ ಸೆರೆಹಿಡಿದಿದ್ದಾರೆ. ತನ್ನ ಸ್ವಂತ ಉಪಯೋಗಕ್ಕಾಗಿ ಮಂಗಳೂರಿನಿಂದ ಈ ಮಾದಕದ್ರವ್ಯ ತರಿಸಿದ್ದೆನೆಂದು ಬಂಧಿತನು ಪೊಲೀಸರಲ್ಲಿ ತಿಳಿಸಿದ್ದಾನೆ.

ಯುವತಿ ನಾಪತ್ತೆ: ದೂರು

ಕಾಸರಗೋಡು: ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯ ಇರಿಯ ಎಂಬಲ್ಲಿನ 18ರ ಹರೆಯದ ಯುವತಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಇರಿಯ ಚೆರಿಪ್ಪೋಡಲ್ ಹೌಸ್‌ನ ಆರ್ಯ ಎಂಬಾಕೆ  ನಿನ್ನೆ ರಾತ್ರಿ 7 ಗಂಟೆಗೆ ಮನೆಯಿಂದ  ನಾಪತ್ತೆಯಾಗಿದ್ದಾಳೆ. ಮನೆಯವರು ನೀಡಿದ ದೂರಿನಂತೆ ಅಂಬಲತ್ತರ ಪೊಲೀಸರು ನಡೆಸಿದ ತನಿಖೆ ವೇಳೆ ಯುವತಿಯನ್ನು ಮಲಪ್ಪುರ ನಿವಾಸಿಯಾದ ಯುವಕನೊಂದಿಗೆ ಪತ್ತೆಹಚ್ಚಿರುವುದಾಗಿ ತಿಳಿದು ಬಂದಿದೆ. ಯುವತಿ ಎರ್ನಾಕುಳಂನಲ್ಲಿ ಕಲಿಯುತ್ತಿದ್ದ ವೇಳೆ ಟ್ಯಾಕ್ಸಿ ಚಾಲಕನಾಗಿದ್ದ ಯುವಕನೊಂದಿಗೆ ಸ್ನೇಹದಲ್ಲಿದ್ದಳೆನ್ನಲಾಗಿದೆ.

ಮದುವೆಗೆಂದು ತಿಳಿಸಿ ಹೋದ ಯುವತಿ ನಾಪತ್ತೆ

ಮಂಜೇಶ್ವರ: ಸ್ನೇಹಿತೆಯ ಮನೆಯಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ತೆರಳಿದ ಯುವತಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಪೈವಳಿಕೆ ಆಚೆಕೆರೆಯ ಖದೀಜತ್ ಅಸ್ರೀನ (21) ಎಂಬಾಕೆ ನಾಪತ್ತೆಯಾಗಿದ್ದಾಳೆ. ನಿನ್ನೆ ಮಧ್ಯಾಹ್ನ ಈಕೆ ಮನೆಯಿಂದ ತೆರಳಿದ್ದು, ಅನಂ ತರ ಮರಳಿ ಬಂದಿಲ್ಲವೆನ್ನ ಲಾಗಿದೆ. ಈ ಬಗ್ಗೆ ಸಹೋದರ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಬಾವಿಕ್ಕೆರೆಯಲ್ಲಿ ಮತ್ತೆ ಚಿರತೆ ಕಾಟ: ನಾಯಿ ಬಲಿ; ಕಾರಡ್ಕದಲ್ಲಿ ಮೂರು ಚಿರತೆಗಳನ್ನು ಕಂಡಿರುವುದಾಗಿ ಊರವರು

ಬೋವಿಕ್ಕಾನ: ಇಲ್ಲಿಗೆ ಸಮೀಪದ ಬಾವಿಕ್ಕೆರೆ ಅಮ್ಮಂಗಲ್ಲು ಎಂಬಲ್ಲಿ ಚಿರತೆ ಕಾಟ ತಲೆಯೆತ್ತಿದ್ದು, ಸಾಕುನಾಯಿಗಳನ್ನು ಕೊಂದು ಹಾಕಿದೆ. ಅಮ್ಮಂಕಲ್ಲಿನ ಸಿಂಧು ಎಂಬವರ ಮನೆಯ ಸಾಕು ನಾಯಿಯನ್ನು ಚಿರತೆ ಕಚ್ಚಿ ಕೊಂದಿದೆ. ನಾಯಿಯನ್ನು ಕೊಂದು ಅದರ ಕರುಳು ಹೊರ ಬಂದ ಸ್ಥಿತಿಯಲ್ಲಿ ಪತ್ತೆಯಾಗಿದೆ.  ನಾಯಿಯನ್ನು  ಮನೆಯ ಗೂಡಿನ ಹೊರಗೆ ಸಂಕೋಲೆಯಿಂದ ಕಟ್ಟಿ ಹಾಕಿರುವುದರಿಂದ ಅದನ್ನು ಕಚ್ಚಿ ಸಾಗಿಸಲು ಚಿರತೆಗೆ ಸಾಧ್ಯವಾಗಲಿಲ್ಲ. ರಾತ್ರಿ ಧಾರಾಕಾರ ಮಳೆ ಸುರಿಯುತ್ತಿದ್ದ ವೇಳೆ ನಾಯಿ ಬೊಳಗುವಿಕೆ ಮನೆಯವರಿಗೆ ಕೇಳಿಸಿರಲಿಲ್ಲ. ಮನೆಯವರು ಬೆಳಿಗ್ಗೆ ಎದ್ದು ಹೊರಬಂದಾಗಲಷ್ಟೇ ನಾಯಿ …

ತಾಯಿಯನ್ನು ಉಸಿರುಗಟ್ಟಿಸಿ ಕೊಲೆಗೈಯ್ಯಲೆತ್ನ: ಪುತ್ರನ ವಿರುದ್ಧ ಕೇಸು

ಕಾಸರಗೋಡು: ತಾಯಿಗೆ ಹಲ್ಲೆಗೈದು ಉಸಿರುಗಟ್ಟಿಸಿ ಕೊಲೆಗೈ ಯ್ಯಲು ಯತ್ನಿಸಿದ ಆರೋಪದಂತೆ ಮಗನ ವಿರುದ್ಧ ಪೊಲೀಸರು ನರಹ ತ್ಯಾಯತ್ನ ಕೇಸು ದಾಖಲಿಸಿಕೊಂ ಡಿದ್ದಾರೆ. ಕೂಡ್ಲು ಪೆರ್ನಡ್ಕದ ಕೆ. ಮಾಲಿನಿ (47) ಎಂಬವರು ನೀಡಿದ ದೂರಿನಂತೆ ಪುತ್ರ ವಿನಾಯಕ (29)ನ ವಿರುದ್ದ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಕಳೆದ ಸೋಮವಾರ ರಾತ್ರಿ 10 ಗಂಟೆಗೆ ಘಟನೆ ನಡೆದಿದೆ. ಅಂದು ಮನೆಯಲ್ಲಿ ವಿನಾಯಕ ತಾಯಿಯೊಂ ದಿಗೆ ಹಣ ಕೇಳಿದ್ದಾನೆನ್ನಲಾಗಿದೆ. ಆದರೆ ತಾಯಿ ಹಣ ನೀಡದಿದ್ದಾಗ ಆಕೆಯನ್ನು ಅವಾಚ್ಯವಾಗಿ ನಿಂದಿಸಿ …

ಗಾಂಜಾ ಸಾಗಾಟ ಪ್ರಕರಣ: ಆರೋಪಿಗೆ 2 ವರ್ಷ ಸಜೆ, ಜುಲ್ಮಾನೆ

ಕಾಸರಗೋಡು: ಬೈಕಿನಲ್ಲಿ ಗಾಂಜಾ ಸಾಗಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾ ಧೀಶರಾದ ಕೆ. ಪ್ರಿಯಾ ಅವರು ಎರಡು ವರ್ಷ ಕಠಿಣ ಸಜೆ ಮತ್ತು 20,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಕುಂಜತ್ತೂರು ಪಾವೂರು ಶೀರ್ಕಟ್ಟೆ ನಿವಾಸಿ ರಾಜೇಶ್ ಅಲಿ ಯಾಸ್ ರಾಜು (42) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸ ಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. 2020 ಡಿಸೆಂಬರ್ …

ಕುಸಿದು ಬಿದ್ದ ರಸ್ತೆ ನಾದುರಸ್ತಿ: ಮಜಿಬೈಲ್‌ನಲ್ಲಿ ಸಂಚಾರ ಆತಂಕ

ಮಂಜೇಶ್ವರ: ಕಳೆದ ತಿಂಗಳು ಸುರಿದ ಭಾರೀ ಮಳೆಗೆ ರಸ್ತೆ ಕುಸಿದು ವಾಹನಗಳ ಸಂಚಾರಕ್ಕೆ ತಡೆ ಉಂಟಾಗುತ್ತಿದ್ದರೂ ಅಧಿಕಾರಿಗಳು ಇನ್ನೂ ದುರಸ್ತಿಗೆ ಕ್ರಮಕೈಗೊಳ್ಳದಿರುವುದು ವಾಹನ ಸವಾರರಲ್ಲಿ ಭೀತಿ ಹೆಚ್ಚಿಸಿದೆ. ಮೀಂಜ ಪಂಚಾಯತ್ ವ್ಯಾಪ್ತಿಗೊಳಪಟ್ಟ ಲೋಕೋಪಯೋಗಿ ಇಲಾಖೆಯ ಹೊಸಂಗಡಿ-ಮೀಯಪದವು ರಸ್ತೆಯ ಮಜಿಬೈಲ್ ತಿರುವಿನಲ್ಲಿ ರಸ್ತೆ ಕುಸಿದು ಆತಂಕದ ಸ್ಥಿತಿ ಉಂಟಾಗಿದೆ. ಕಳೆದ ತಿಂಗಳು ಸುರಿದ ಭಾರೀ ಮಳೆಗೆ ರಸ್ತೆಯ ಒಂದು ಬದಿ ಕುಸಿದು ಬಿದ್ದಿದ್ದು, ಬಳಿಕ ಅಡಿಭಾಗದ ಮಣ್ಣು ಕೊರೆದು ಈಗ ಅರ್ಧರಸ್ತೆ ಕುಸಿದು ಹೋಗಿ ಬಸ್ ಸಹಿತ ಇತರ …