ಧಾರಾಕಾರ ಮಳೆಗೆ ರಸ್ತೆ, ಬಯಲು, ಹೊಳೆ ಒಂದಾದ ಬಂಬ್ರಾಣ

ಕುಂಬಳೆ: ತೀವ್ರ ಮಳೆ ಮುಂದುವರಿಯುತ್ತಿರುವಂತೆಯೇ ಬಂಬ್ರಾಣ ಬಯಲು ಜಲಾವೃತಗೊಂಡಿದೆ. ನಿನ್ನೆ ಸುರಿದ ಧಾರಾಕಾರ ಮಳೆಯಿಂದಾಗಿ ಈ ಪ್ರದೇಶದಲ್ಲಿ ಪೂರ್ಣವಾಗಿ ನೀರು ತುಂಬಿಕೊಂಡಿದೆ. ಶಿರಿಯ ಹೊಳೆಯಲ್ಲಿ ನೀರು ಉಕ್ಕಿ ಹರಿದ ಪರಿಣಾಮ ಬಂಬ್ರಾಣ ಬಯಲು ಹಾಗೂ ಆ ಪ್ರದೇಶದ ರಸ್ತೆ ನೀರಿನಿಂದಾವೃತಗೊಂಡಿದೆ. ಮನೆಯೊಳಗೂ ನೀರು ನುಗ್ಗಿದ್ದು, ಇದರಿಂದ ವಾಸಿಸಲು ಸಾಧ್ಯವಿಲ್ಲದಂತಾಗಿದೆ. ಅಗ್ನಿಶಾಮ ಕದಳದ ರೆಸ್ಕ್ಯೂ ಟೀಂ ತಲುಪಿ ನಾಗರಿಕರ ಸಹಾಯದೊಂದಿಗೆ  ರಕ್ಷಣಾ ಕಾರ್ಯಾಚರಣೆಗೆ  ನೇತೃತ್ವ ನೀಡಿದೆ.  ಈಗಾಗಲೇ 30 ಕುಟುಂಬ ಗಳನ್ನು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ. ಮಳೆ ಇನ್ನೂ …

ಗುಡ್ಡೆ ಕುಸಿದು ಮನೆ ಹಾನಿ: ಬಸ್ಚಾಲಕನ ಕುಟುಂಬ ಅಪಾಯದಿಂದ ಪಾರು

ವರ್ಕಾಡಿ: ಗುಡ್ಡೆ ಕುಸಿದು ಬಿದ್ದು ಕಾಂಕ್ರಿಟ್‌ಮನೆ ಹಾನಿಗೀಡಾಗಿ ಮನೆ ಮಂದಿ ಅದೃಷ್ಟವಶಾತ್ ಅಪಾಯದಿಂದ ಪಾರಾದ ಘಟನೆ ಸಂಭವಿಸಿದೆ. ವರ್ಕಾಡಿ ಪಂಚಾಯತ್ ವ್ಯಾಪ್ತಿಯ ಕೊಡ್ಲಮೊಗರು ಪತ್ತಾಯಿಲ್‌ತ್ತಾಡಿ ನಿವಾಸಿ, ಬಸ್ ಚಾಲಕ ಹರೀಶ ಭಂಡಾರಿಯವರ ಮನೆ ಹಾನಿಗೊಂಡಿದೆ. ಗುರುವಾರ ಮುಂಜಾನೆ ಸುಮಾರು 2ಗಂಟೆ ವೇಳೆ ಸುರಿದ ಧಾರಾಕಾರ ಮಳೆಗೆ ಮನೆಯ ಹಿಂಬದಿಯಲ್ಲಿರುವ ಬೃಹತ್ ಗುಡ್ಡೆ ಕುಸಿದು ಬಿದ್ದಿದೆ. ಇದರಿಂದ ಗೋಡೆ ಪೂರ್ತಿ ಕುಸಿದು ಬಿದ್ದು ಮಣ್ಣು ಒಳಗೆ ಸೇರಿದೆ. ಶಬ್ದ ಕೇಳಿ ಮನೆಯ ಸದಸ್ಯರು ಹೊರಗಡೆ ಓಡಿ ಹೋದುದರಿಂದ ಅಪಾಯದಿಂದ …

ಕೃಷಿಕ ನಿಧನ

ಬದಿಯಡ್ಕ: ವಿದ್ಯಾಗಿರಿ ಬಳಿಯ ಮೇಗಿನ ಕಡಾರು ತರವಾಡು ಯಜ ಮಾನ, ಕೃಷಿಕ ಮಹಾಬಲ ರೈ(86) ನಿಧನರಾದರು. ಮೃತರು ಪತ್ನಿ ಸೀತಾ, ಮಕ್ಕಳಾದ ಪ್ರೇಮಲತಾ, ವಿಜಯಲಕ್ಷ್ಮಿ, ಚಂದ್ರಾವತಿ, ಸ್ವರ್ಣಲತಾ, ಹರಿಣಾಕ್ಷಿ, ಶೋಭ, ಅಳಿಯಂದಿರಾದ ಶೇಖರ, ನಾರಾಯಣ, ವಿಶ್ವನಾಥ, ಜಯರಾಜ, ಮೋಹನ, ಲೋಕೇಶ್, ಸಹೋದರ, ಸಹೋದರಿಯರಾದ ರಮನಾಥ ರೈ, ವಿಠಲ ರೈ, ವಿಶ್ವನಾಥ ರೈ, ರಾಧಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ : ಆರೋಪಿಗೆ ಜೀವಾವಧಿ ಸಜೆ, ಜುಲ್ಮಾನೆ

ಕಾಸರಗೋಡು: ಚಾಕ್ಲೆಟ್ ನೀಡುವ ಆಮಿಷವೊಡ್ಡಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯಾಗಿರುವ ಯುವಕನಿಗೆ ಹೊಸದುರ್ಗ ಕ್ಷಿಪ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಪಿ.ಎಂ. ಸುರೇಶ್ ಜೀವಾವಧಿ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಮುನ್ನಾಡ್ ವಟ್ಟಂತ್ತ್ತಡ್ಕ ನಿವಾಸಿ ಬಿ. ಆದರ್ಶ್ (28) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ.  ಎಸ್.ಸಿ ಮತ್ತು ಎಸ್‌ಟಿ ಪಿಒಎ ಸೆಕ್ಷನ್ ಪ್ರಕಾರ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ಪೋಕ್ಸೋ ಕಾನೂನು ಪ್ರಕಾರ 20 ವರ್ಷ ಸಜೆ  ಮತ್ತು 11,000 ರೂ. ಜುಲ್ಮಾನೆ ವಿಧಿಸಲಾಗಿದೆ. ಶಿಕ್ಷೆಯನ್ನು …

ಸಾರ್ವಜನಿಕ ವಿಷಯದ ಬಗ್ಗೆ ದೂರು ನೀಡಿದ ತನಗೆ ಪಂ.ಕಾರ್ಯದರ್ಶಿಯಿಂದ ಪೀಡನೆ: ಪಿಟಿಎ ಅಧ್ಯಕ್ಷೆ ಆರೋಪ

ಕುಂಬಳೆ: ಕುಂಬಳೆ ಪೇಟೆಯ ಹೃದಯ ಭಾಗದಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗುವ ರೀತಿಯಲ್ಲಿ ಬೀದಿ ಬದಿ ವ್ಯಾಪಾರ ನಡೆಸುತ್ತಿರುವುದು ಮಹಿಳೆಯರು ಸಹಿತವಿರುವ ಕಾಲ್ನಡೆ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ಸೂಚಿಸಿ ದೂರು ನೀಡಿರುವು ದಕ್ಕೆ ಕುಂಬಳೆ ಪಂಚಾಯತ್ ಕಾರ್ಯದರ್ಶಿ ದೈಹಿಕ ಹಾಗೂ ಮಾನಸಿಕವಾಗಿ ಪೀಡಿಸುತ್ತಿರುವುದಾಗಿ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಮದರ್ ಪಿಟಿಎ ಅಧ್ಯಕ್ಷೆ ವಿನೀಷ ಬಾಲಕೃಷ್ಣನ್ ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಜುಲೈ ೮ರಂದು ಈ ವಿಷಯ ಸಂಬಂಧಿಸಿ ಕುಂಬಳೆ ಪಂಚಾಯತ್ ಕಾರ್ಯದರ್ಶಿಗೆ ತಾನು ದೂರು ನೀಡಿದ್ದೆ. ನೂರಾರು …

ಪೈವಳಿಕೆ: ತೆಂಕ ಮಾನಿಪ್ಪಾಡಿ ಸೇತುವೆ ಶಿಥಿಲಾವಸ್ಥೆಯಲ್ಲಿ ಹೊಸ ಸೇತುವೆ ನಿರ್ಮಿಸದಿದ್ದಲ್ಲಿ ಹೋರಾಟ-ಮುಸ್ಲಿಂಲೀಗ್

ಪೈವಳಿಕೆ: ಹಲವು ವರ್ಷಗಳ ಹಿಂದೆ ನಿರ್ಮಿಸಿದ ಕಿರು ಸೇತುವೆ ಯೊಂದು ಶಿಥಿಲಾವಸ್ಥೆಯಲ್ಲಿದ್ದು, ಜನರ ಸಂಚಾರಕ್ಕೆ ಭೀತಿ ಹುಟ್ಟಿಸುತ್ತಿದೆ. ಪೈವಳಿಕೆ ಪಂಚಾಯತ್‌ನ ನಾಲ್ಕು ಹಾಗೂ ಹನ್ನೊಂದನೇ ವಾರ್ಡ್‌ಗಳಾದ ಮಾನಿಪ್ಪಾಡಿ-ತೆಂಕಮಾನಿಪ್ಪಾಡಿ, ಆವಳ ಪ್ರದೇಶಗಳನ್ನು ಸಂಪರ್ಕಿಸುವ ಸೇತುವೆ ಇದಾಗಿದೆ. ಇದು ಅಗಲ ಕಿರದಾಗಿದೆ. ಅಲ್ಲದೆ ಹಲವು  ವರ್ಷಗಳ ಹಳಮೆ ಇರುವುದರಿಂದ ಇದೀಗ ಶಿಥಿಲಾವಸ್ಥೆಯಲ್ಲಿದೆ. ನೂರಾರು ಕುಟುಂಬಗಳು  ತಮ್ಮ  ಮನೆಗಳಿಗೆ ಈ ಸೇತುವೆ ಮೂಲಕ ನಡೆದು ಹೋಗಬೇಕಾಗಿದೆ. ಅಲ್ಲದೆ ಈ ಸೇತುವೆಯನ್ನು ದಾಟಿ ಮಕ್ಕಳು ಶಾಲೆಗೆ ತೆರಳಬೇಕು. ಆದರೆ ಅಗಲಕಿರಿದಾಗಿರುವ ಹಾಗೂ ಶೋಚನೀಯ …

ಅಧಿಕಾರಿಗಳ ಅನಾಸ್ಥೆ: ಮನವಿ ನೀಡಿದರೂ ಮೌನ ವಹಿಸಿದ ಆರೋಪ: ಬಂಡೆಕಲ್ಲು ಉರುಳಿಬಿದ್ದು ಮನೆಗೆ ಹಾನಿ ; ಅದೃಷ್ಟವಶಾತ್ ಕುಟುಂಬ ಪಾರು

ಕಾಸರಗೋಡು: ಅಧಿಕಾರಿಗಳ ಅನಾಸ್ಥೆಯಿಂದಾಗಿ ಕುಟುಂಬವೊಂದು ಅದೃಷ್ಟವಶಾತ್ ದುರಂತದಿಂದ ಪಾರಾಗಿದೆ. ಚಂದ್ರಗಿರಿ ನಡಕ್ಕಾಲ್ ಎಂಬಲ್ಲಿ ಮನೆಯೊಂದರ ಹಿಂಬದಿಗೆ ಬೃಹತ್ ಬಂಡೆಕಲ್ಲು ಉರುಳಿ ಬಂದು ಬಿದ್ದು ಮನೆಗೆ ಹಾನಿ ಸಂಭವಿಸಿದೆ. ಆದರೆ ಅದೃಷ್ಟವಶಾತ್ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಈ ಬಂಡೆಕಲ್ಲು ಉರುಳಿ ಬೀಳಲು ಸಾಧ್ಯತೆ  ಇದೆಯೆಂದು ತಿಳಿಸಿ ಮನೆಯವರು  ಕಳನಾಡು ವಿಲ್ಲೇಜ್ ಆಫೀಸರ್‌ಗೆ ಈ ಹಿಂದೆಯೇ ದೂರು ನೀಡಿದ್ದರು. ಅವರು ಬಂದು ನೋಡಿ ಹೋಗಿ ಅದರಿಂದ ಅಪಾಯವುಂಟಾಗದೆಂದು ತಿಳಿಸಿರುವು ದಾಗಿ ಮನೆಯಲ್ಲಿ ವಾಸಿಸುತ್ತಿರುವ ಮಿಥೇಶ್ ತಿಳಿಸಿದ್ದಾರೆ. ಗಾಳಿ ಮಳೆಗೆ ಬಂಡೆಕಲ್ಲು …

ಆತ್ಮನಿರ್ಭರ ಭಾರತ ಯೋಜನೆ: ಕೃಷಿ ಅಧಿಕಾರಿಗಳ ನೇಮಕಾತಿಗೆ ಚಾಲನೆ

ಕಾಸರಗೋಡು: ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ ಕಾಸರಗೋಡು ಜಿಲ್ಲೆಯ ವಿವಿಧ ಭಾಗಗಳಲ್ಲಿ ಪ್ರಾದೇಶಿಕ ಕೃಷಿಕರಿಗೆ ಸಬ್ಸಿಡಿ ಯೋಜನೆಗಳು ಹಾಗೂ ಅಡಿಕೆ ಇಳುವರಿ ಸಮೀಕ್ಷೆ ವರದಿ ತಯಾರಿಸಲು ಹಾಗೂ ಕೃಷಿಕರನ್ನು ಭೇಟಿಯಾಗಿ ಮಾಹಿತಿ ನೀಡಲು ಕೃಷಿ ಅಧಿಕಾರಿಗಳನ್ನು ನೇಮಿಸಲಾಗು ವುದು. ಕರ್ನಾಟಕ ಸಾವಯವ ಕೃಷಿ ಯೋಜನೆ ಕೇಂದ್ರೀಯ ಕೃಷಿ ವಿಶ್ವ ವಿದ್ಯಾಲಯ ಹೊಸದಿಲ್ಲಿ, ಬೆಂ ಗಳೂರು, ಶಿವಮೊಗ್ಗ, ಉಡುಪಿ ಇವುಗಳ ಜಂಟಿ ಮಾರ್ಗದರ್ಶನ ದಲ್ಲಿ ಕೃಷಿ ಅಧಿಕಾರಿಗಳ ನೇಮಕಾತಿ ನಡೆಯಲಿದ್ದು, ಅರ್ಹತೆಯುಳ್ಳವರು ಸಂಬAಧಪಟ್ಟವರನ್ನು ಸಂಪರ್ಕಿಸುವAತೆ ತಿಳಿಸಲಾಗಿದೆ. ಗ್ರಾಮೀಣ ಪ್ರಾದೇಶಿಕ ಯುವಕ-ಯುವತಿಯರಿಗೆ …

ಅಸೌಖ್ಯ: ಒಂದೇ ದಿನ ಇಬ್ಬರು ಸಹೋದರರು ನಿಧನ

ಬೆಳ್ಳೂರು: ಸಹೋದರರಿಬ್ಬರ ಮರಣ ಸುಳ್ಯಪದವು ದೇವಸ್ಯ ಇಂದಾಜೆ ಪರಿಸರದಲ್ಲಿ ಶೋಕ ಸೃಷ್ಟಿಸಿದೆ. ಕೃಷಿಕರಾಗಿದ್ದ ಸುಬ್ರಹ್ಮಣ್ಯ ಭಟ್ (71) ನಿನ್ನೆ ಬೆಳಿಗ್ಗೆ ಸ್ವ-ಗೃಹದಲ್ಲಿ ನಿಧನ ಹೊಂದಿದ್ದರೆ, ರಾತ್ರಿ ವೇಳೆ ಇವರ ಸಹೋದರ ಶ್ರೀನಿವಾಸ ಭಟ್ (54)ರ ನಿಧನ ಸಂಭವಿಸಿದೆ. ಸುಬ್ರಹ್ಮಣ್ಯ ಭಟ್ ಅಲ್ಪ ಸಮಯದಿಂದ ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಇವರ ಸಹೋದರ ಶ್ರೀನಿವಾಸ ಭಟ್ ನ್ಯುಮೋನಿಯ ತಗಲಿ ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಕಳೆದ 15 ದಿನದ ಹಿಂದೆ ಕಾಸರಗೋಡು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಹಿಂತಿರುಗಿದ್ದರು. ಆದರೆ ನಾಲ್ಕು …

ಕುಂಬಳೆ ಪಂಚಾಯತ್ ಅಧ್ಯಕ್ಷೆ ವಿರುದ್ಧ ಬಿಜೆಪಿಯಿಂದ ಅವಿಶ್ವಾಸ ಗೊತ್ತುವಳಿ ನೋಟೀಸು

ಕುಂಬಳೆ: ಕುಂಬಳೆ ಪಂಚಾಯತ್ ಅಧ್ಯಕ್ಷೆ ವಿರುದ್ಧ ಆಡಳಿತ ಸಮಿತಿಯ ವಿಪಕ್ಷವಾದ ಬಿಜೆಪಿ ಸದಸ್ಯರು ಅವಿಶ್ವಾಸ ಗೊತ್ತುವಳಿಗೆ ನೋಟೀಸು ನೀಡಿದ್ದಾರೆ. ಕಳೆದ ನಾಲ್ಕೂವರೆ ವರ್ಷಗಳಿಂದ ಪಂಚಾಯತ್‌ನಲ್ಲಿ ನಡೆಯುವ ದುರಾಡಳಿತೆಯಿಂದ ಸಹನೆಗೆಟ್ಟು ಅವಿಶ್ವಾಸಕ್ಕೆ ನೋಟೀಸು ನೀಡಿರುವುದಾಗಿ ಬಿಜೆಪಿ ಸದಸ್ಯರು ತಿಳಿಸಿದ್ದಾರೆ. ರಾಜಕೀಯ ಹಾಗೂ ಹಣದ ಬಲದಿಂದ ನಾಲ್ಕೂವರೆ ವರ್ಷಗಳ ಕಾಲ ಪಂಚಾಯತ್‌ನಲ್ಲಿ ದುರಾಡಳಿತೆ ನಡೆಯುತ್ತಿದೆ ಎಂದೂ ಇದರಿಂದಾಗಿ ನೋಟೀಸು ನೀಡಬೇಕಾಗಿ ಬಂದಿದೆ ಎಂದು ಅವರು ತಿಳಿಸಿದ್ದಾರೆ. ಅವಿಶ್ವಾಸ ಗೊತ್ತುವಳಿ ನೋಟೀಸನ್ನು ನಿನ್ನೆ ಸಂಜೆ ಬಿಜೆಪಿ ಸದಸ್ಯರಾದ ಪ್ರೇಮಾವತಿ, ಪ್ರೇಮಲತಾ ಎಸ್, …